Thursday, March 4, 2021

ವಿಶ್ವ ಜಲ ದಿನ ಮತ್ತು ನಮ್ಮ ಸಂಕಲ್ಪ

ವಿಶ್ವ ಜಲ ದಿನ ಮತ್ತು ನಮ್ಮ ಸಂಕಲ್ಪ


ಲೇಖಕರು: ಗುರುದತ್ತ.A

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ 

ದೊಡ್ಡಕಲ್ಲಸಂದ್ರ

ಬೆಂಗಳೂರು ದಕ್ಷಿಣ ವಲಯ-1


ನೀರಿನ ಅಗತ್ಯತೆ ಮತ್ತು ಅದರ ಸಂರಕ್ಷಣೆ ಕುರಿತು ಜನತೆಯಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ಮಾರ್ಚ್ 22 ರಂದು ಪ್ರತಿವರ್ಷ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತಿದೆ.

 ದಿನಾಚರಣೆಯ ಈ ವರ್ಷದ ಘೋಷವಾಕ್ಯ: Valuing Water-21 ನೇ ಶತಮಾನದಲ್ಲಿ ನಾವು ಎದುರಿಸುವ ನೀರಿನ ಸವಾಲುಗಳಿಗೆ ಪ್ರಕೃತಿ ಆಧಾರಿತ ಪರಿಹಾರಗಳ ಅನ್ವೇಷಣೆ ಮತ್ತು ಮೌಲ್ಯೀಕರಣ ಎಂಬುದಾಗಿದೆ.


ಜೀವವೈವಿಧ್ಯ ವ್ಯವಸ್ಥೆಗೆ ಧಕ್ಕೆಯುಂಟುಮಾಡಿದರೆ ಮಾನವನ ಬಳಕೆಗೆ ಉಪಯೋಗವಾಗುವ ನೀರಿನ ಗುಣಮಟ್ಟ ಮತ್ತು ಪ್ರಮಾಣಕ್ಕೆ ಹಾನಿಯುಂಟಾಗುತ್ತದೆ. ಇಂದು ವಿಶ್ವದಲ್ಲಿ 2.1 ಶತಕೋಟಿ ಜನರಿಗೆ ಕುಡಿಯಲು ಸುರಕ್ಷಿತ ನೀರು ಸಿಗುತ್ತಿಲ್ಲ. ಇದರಿಂದ ಆರೋಗ್ಯ, ಜೀವನ ಮತ್ತು ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ.

ನೀರು ಜೀವಸಂಕುಲ ಬೆಳವಣಿಗೆಯಲ್ಲಿ ಅತಿ ಅಗತ್ಯ. ಮನುಷ್ಯನ ಬಾಯಾರಿಕೆ ಮತ್ತು ಆರೋಗ್ಯವನ್ನು ರಕ್ಷಿಸುವುದಲ್ಲದೆ ಅದಕ್ಕಿಂತಲೂ ಹೆಚ್ಚಿನ ಮಹತ್ವ ನೀರಿಗಿದೆ. ನಾವು ಪ್ರವಾಹ, ಬರಗಾಲ ಮತ್ತು ನೀರಿನ ಮಾಲಿನ್ಯವನ್ನು ಹೇಗೆ ಕಡಿಮೆ ಮಾಡಬಹುದು? ಎಂದು ವಿಶ್ವಸಂಸ್ಥೆ ಕೇಳಿದೆ. ಇದಕ್ಕೆ ಪ್ರಕೃತಿಯಲ್ಲಿ ಪರಿಹಾರವಿದೆ ಎನ್ನುತ್ತದೆ ವಿಶ್ವಸಂಸ್ಥೆ.

2005-2015 Water for Life ಎಂಬ ಘೋಷವಾಕ್ಯದಡಿಯಲ್ಲಿ ನೀರಿನ ಸಂರಕ್ಷಣೆಗಾಗಿ ಅಂತರಾಷ್ಟ್ರೀಯ ದಶಕವನ್ನಾಗಿ ಆಚರಿಸಲಾಯಿತು

ವಿಶ್ವ ಜಲ ದಿನವನ್ನು ಮೊದಲ ಬಾರಿಗೆ ಆಚರಣೆಯನ್ನು  1993ರ ಮಾರ್ಚ್ 22ರಂದು ಆರಂಭಿಸಲಾಯಿತು.

ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವಜಲದಿನವನ್ನು ಆಚರಿಸಲಾಗುತ್ತದೆ. ಅಂದು ಸಿಹಿ ನೀರಿನ ಪ್ರಾಮುಖ್ಯದ ಮೇಲೆ ಗಮನ ಕೇಂದ್ರೀಕರಿಸುವುದಕ್ಕಾಗಿ ಮತ್ತು ಸಿಹಿ ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ಆಚರಿಸಲಾಗುತ್ತದೆ. 1992ರಲ್ಲಿ ರಿಯೊ ಡಿ ಜನೈರೋದಲ್ಲಿ ನಡೆದ ವಿಶ್ವ ಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿಯ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಸಿಹಿ ನೀರಿನ ದಿನವನ್ನು ಆಚರಿಸಲು ಶಿಫಾರಸು ಮಾಡಲಾಯಿತು. ಅದೇ ವರ್ಷ ಡಿ. 22ರಂದು ವಿಶ್ವಸಂಸ್ಥೆ ಸಂಸತ್ತಿನಲ್ಲಿ ಈ ನಿರ್ಣಯವನ್ನು ಸ್ವೀಕರಿಸಿ 1993 ಮಾರ್ಚ್‌ 22ರಂದು ಮೊದಲ ವಿಶ್ವ ಜಲ ದಿನವೆಂದು ಘೋಷಿಸಲಾಯಿತು.

ನೀರಿದ್ದರೆ ಮಾತ್ರವೇ ನಮ್ಮೆಲ್ಲರ ಉಳಿವು. ನೀರಿಲ್ಲವಾದರೆ ನಮ್ಮೆಲ್ಲರ ಶಾಶ್ವತ ಅಳಿವು ಶತಸಿದ್ಧ ಎಂಬುದನ್ನು ಎಲ್ಲರೂ ನೆನಪಿಡಿ. ಅಮೃತ ಸಮಾನವಾದ ನೀರನ್ನು ನಾವು ಮಾತ್ರವಲ್ಲದೆ, ನಮ್ಮ ಮುಂದಿನ ಜನಾಂಗಕ್ಕೂ ಕೂಡ ಜತನದಿಂದ ಉಳಿಸೋಣ. ನೀರಿಗಾಗಿ ಪ್ರಪಂಚದ ಮೂರನೆ ಮಹಾಯುದ್ಧವಾಗುವುದು ಖಂಡಿತ ಬೇಡವೇ ಬೇಡ. ಹೌದಲ್ಲವೇ?

ನೀರಿನ ಆಹಾಕಾರವನ್ನು ಮತ್ತು ನಮ್ಮ ಮುಂದಿನ ದಿನಗಳನ್ನು ಪ್ರತಿಬಿಂಬಿಸುವ ಚಿತ್ರ

ಹಾಗಾಗಿ ಭವಿಷ್ಯದ ಕರಾಳ ದಿನಗಳನ್ನು ಊಹಿಸಿಕೊಂಡು, ಈಗ ಅಲ್ಪಸ್ವಲ್ಪ ಉಳಿದಿರುವ ಶುದ್ಧ ಜಲಮೂಲಗಳ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ನಮ್ಮೆಲ್ಲರ ಮಹತ್ವದ ಹೊಣೆಗಾರಿಕೆಯಾಗಿದೆ.  ಶುದ್ಧ ನೀರು ಈ ಭೂಮಿಯಲ್ಲಿ ವಾಸಿಸುವ, ಜೀವಿಸುವ ಪ್ರತಿಯೊಬ್ಬರ ಮಾನವ ಹಕ್ಕು!!  ಅಷ್ಟೇ ಅಲ್ಲ... ಮಾನವ ಹಕ್ಕು ಅಂತ ಅಂದರೆ ನಾವು ಮನುಷ್ಯರು ತುಂಬಾ ಸ್ವಾರ್ಥಿಗಳೆನ್ನಿಸಿಕೊಂಡು  ಬಿಡುತ್ತೇವೆ!!  ಶುದ್ಧ ನೀರು ಎಲ್ಲಾ ಜೀವಿಗಳ ಹಕ್ಕು... ಅಂದರೆ ಮಾತು ಬಾರದ ಮೂಕ ಪಶು ಪಕ್ಷಿ  ಪ್ರಾಣಿಗಳಿಂದ ಹಿಡಿದು ಗಿಡಮರ ಬಳ್ಳಿಗಳ ವರೆಗೆ ಎಲ್ಲರಿಗೂ ಸಮಾನವಾದ ಹಕ್ಕು ಈ ಭೂಮಿಯ ಜಲ ಮೂಲಗಳ ಮೇಲಿದೆ!!  ಹಾಗಾಗಿ ನಾವು ಮನುಷ್ಯರು ಮಾತ್ರವಲ್ಲ, ಈ ಭೂಮಿಯ ಮೇಲಿರುವ ಸಮಸ್ತ ಜೀವರಾಶಿಯೂ ಶುದ್ಧ ನೀರಿನ ಮೇಲೆ ಹಕ್ಕು ಹೊಂದಿದೆ..!! ಮುಂದಿನ ದಿನಗಳಲ್ಲಿ ಜಲಕ್ಷಾಮ ಬರದಿರುವಂತೆ ತಡೆಯುವ ಪ್ರಯತ್ನದ ಜೊತೆಗೆ ಈ ಭೂಮಿ ಮೇಲಿನ ಸಕಲ ಜೀವರಾಶಿಗೂ ಕೂಡಾ ಅವುಗಳ ಹಕ್ಕಿನ ನೀರಿನ ಪಾಲು ಸಿಗುವಂತೆ ನೋಡಿಕೊಳ್ಳೋಣ; ಯಾರೂ ಕೂಡಾ ತಮ್ಮ ಹಕ್ಕಿನ ನೀರನ್ನು ಪಡೆಯುವಲ್ಲಿ ವಂಚಿತರಾಗದಿರುವಂತೆ ನೋಡಿಕೊಳ್ಳೋಣ..!!  ಎಲ್ಲರನ್ನು ನಮ್ಮೊಂದಿಗೆ ಕರೆದೊಯ್ಯೋಣ...! ಯಾರೂ ಕೂಡಾ ಹಿಂದುಳಿಯದಂತೆ ನೋಡಿಕೊಳ್ಳೋಣ...!! ಜೀವಜಲವನ್ನು ಎಲ್ಲರೂ ಸಮಾನವಾಗಿ ಹಂಚಿಕೊಂಡು ಉಪಯೋಗಿಸೋಣ....!! ಎಲ್ಲರಿಗೂ ಸಾಕಷ್ಟು ನೀರು ಲಭ್ಯವಾಗುವಂತೆ ಮಾಡಲು ನದೀಮೂಲಗಳಿಂದಾರಂಭಿಸಿ ಎಲ್ಲಾ ರೀತಿಯ ಜಲಮೂಲಗಳನ್ನು ರಕ್ಷಿಸೋಣ...!! ಸಂರಕ್ಷಿಸೋಣ...!! ಉಳಿಸೋಣ ....!!  ಬೆಳೆಸೋಣ...!! ಅಭಿವೃದ್ಧಿಪಡಿಸೋಣ...!! ಅವುಗಳನ್ನು ಸುಸ್ಥಿರವಾಗಿಸೋಣ...!!

ಬೇಸಿಗೆಯ ಬಿಸಿ ಏರುತ್ತಿರುವಂತೆ ನೀರಿನ ಸಮಸ್ಯೆಯ ತೀವ್ರತೆಯೂ ಹೆಚ್ಚಾಗುತ್ತಿದೆ. ರಾಜ್ಯದ ವಿವಿಧೆಡೆಗಳಲ್ಲಿ ನೀರಿಗಾಗಿ ಅನುಭವಿಸುತ್ತಿರುವ ಸಂಕಷ್ಟಗಳು ವರದಿಯಾಗುತ್ತಲೇ ಇವೆ.

ದೂರದಿಂದ ಕೊಡ ನೀರು ಹೊತ್ತುತರುವುದು, ತಳ್ಳುಗಾಡಿಗಳಲ್ಲಿ ನೀರನ್ನು ಒಯ್ಯುವುದು  ಅಥವಾ ನೀರಿಗಾಗಿ ಕೊಳವೆ ಬಾವಿ, ನೀರಿನ ಟ್ಯಾಂಕರ್ ಮುಂದೆ ಮಹಿಳೆಯರು ಸಾಲುಗಟ್ಟಿ ನಿಲ್ಲುವ ದೃಶ್ಯಗಳು  ಮಾಮೂಲಾಗಿವೆ. ಭಾರತದಲ್ಲಿ ಈಗಲೂ ಸುಮಾರು 7.6 ಕೋಟಿ ಜನರಿಗೆ ಸುರಕ್ಷಿತವಾದ ಕುಡಿಯುವ ನೀರಿನ ಲಭ್ಯತೆ ಇಲ್ಲ.

ಈ ಸ್ಥಿತಿ ಬರದಂತೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ನೀರಿನ ಮೂಲಗ್‍ಳನ್ನು ಉಳಿಸುವ ಪ್ರಕ್ರಿಯೆಯಲ್ಲಿ ಇಂದೇ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ

ಕಾರ್ಖಾನೆಗಳು  ಹೊರಬಿಡುವ ತ್ಯಾಜ್ಯ ಸೇರಿದಂತೆ ಹಲವು ಕಾರಣಗಳಿಗಾಗಿ ಮಲಿನಗೊಳ್ಳುತ್ತಿರುವ ನದಿಗಳಿಂದಾಗಿ ನೀರಿನ ಸಮಸ್ಯೆ  ಮತ್ತಷ್ಟು ದೊಡ್ಡದಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇಂದು ಈ ಬಾರಿಯ ವಿಶ್ವ ಜಲ ದಿನವನ್ನು ನಾವು ಆಚರಿಸುತ್ತಿದ್ದೇವೆ.

ನೀರನ್ನು ಏಕೆ ಪೋಲು ಮಾಡಬೇಕು’ ನಮ್ಮ ಮನೆ, ನಗರ, ಉದ್ಯಮ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಬಳಕೆಯಾಗಿ ಹರಿದು ಹೋಗುವ ತ್ಯಾಜ್ಯ ನೀರಿನ ಪ್ರಮಾಣ ದೊಡ್ಡದು.

ಈ ನೀರು ಸಂಸ್ಕರಣಗೊಂಡು ಮರುಬಳಕೆಯಾಗದೆ ವ್ಯರ್ಥವಾಗುತ್ತಿದೆ. ಜೊತೆಗೆ ಮಾಲಿನ್ಯವನ್ನೂ ಸೃಷ್ಟಿಸುತ್ತಿದೆ.  ಆದರೆ ತ್ಯಾಜ್ಯ ನೀರನ್ನು ಕಡಿಮೆ ಮಾಡುವುದಲ್ಲದೆ ಅದನ್ನು ಸುರಕ್ಷಿತವಾಗಿ ಸಂಸ್ಕರಿಸಿ ಮರುಬಳಕೆ ಮಾಡಲು ಅವಕಾಶವಿದೆ. ಈ ಬಗ್ಗೆ ಚಿಂತಿಸಲು ಇದು ಸಕಾಲ.

ಭಾರತದ  ಆರ್ಥಿಕತೆ ಕೃಷಿಯನ್ನೇ ದೊಡ್ಡದಾಗಿ ಅವಲಂಬಿಸಿದೆ. ಆದರೆ ನೀರಿನ ಕೊರತೆ ಹಾಗೂ ಪದೇಪದೇ ರಾಷ್ಟ್ರವನ್ನು ಕಾಡುತ್ತಿರುವ ಬರದಿಂದ ಆರ್ಥಿಕ ಪ್ರಗತಿ ಮೇಲಾಗುವ ಪರಿಣಾಮ ದೊಡ್ಡದು. ಇಂತಹ ಸಂದರ್ಭದಲ್ಲಿ ನೀರಿನ ಪೋಲು ತಡೆಯುವ ಬಗ್ಗೆ ವಿಶೇಷ ಗಮನ ಹರಿಸುವುದು ಅಗತ್ಯ.

ಅದರಲ್ಲೂ ನಗರಗಳಲ್ಲಿ ವಾಸಿಸುವ ಜನರ ಜೀವನಶೈಲಿಯಿಂದ  ಆಗುತ್ತಿರುವ ನೀರಿನ ಪೋಲು ಈಗಾಗಲೇ ನಮಗೆ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಜನಜಾಗೃತಿಯಾಗಬೇಕು. ಮುಂದೊದಗಬಹುದಾದ ನೀರಿನ ಸಮಸ್ಯೆಯ ಅಗಾಧತೆಯ ಬಗ್ಗೆ ಅರಿವು ಮೂಡಿಸುವುದು ಇಂದಿನ ತುರ್ತು.

ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ 18ರಷ್ಟು  ಮಂದಿ ಭಾರತದಲ್ಲಿದ್ದಾರೆ. ಆದರೆ ಜಗತ್ತಿನಲ್ಲಿ ಒಟ್ಟು ಲಭ್ಯವಿರುವ ಜಲ ಸಂಪನ್ಮೂಲಗಳಲ್ಲಿ ಭಾರತ ಹೊಂದಿರುವ ಪಾಲು ಕೇವಲ ಶೇ 4.  ಇದನ್ನು ನಾವು ಅರಿತುಕೊಳ್ಳಬೇಕು.

ಹೀಗಾಗಿ  ನೀರಿನ ಪ್ರತಿ  ಹನಿಯೂ ಎಷ್ಟು ಮುಖ್ಯ ಎಂಬುದು ಅರಿವಾಗಬೇಕು. ಭಾರತದ ಬಹು ಭಾಗಗಳಲ್ಲಿ  2040ರೊಳಗೆ ಕುಡಿಯುವ ನೀರಿನ ತೀವ್ರ ಕೊರತೆ ಎದುರಾಗಲಿದೆ ಎಂದು ಇತ್ತೀಚಿನ ಅಧ್ಯಯನ ಹೇಳಿದೆ.

2030 ಹಾಗೂ 2040ರ ನಡುವೆ ವಿಶ್ವದ ಅನೇಕ ಭಾಗಗಳು ನೀರಿನ ಅಭಾವ ಎದುರಿಸಲಿವೆ. ಈ ಪೈಕಿ ಭಾರತವೂ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ. ಇದನ್ನು ನಿರ್ವಹಿಸಲು ನಾವು ಸಜ್ಜುಗೊಳ್ಳಬೇಕಿದೆ.

ನೀರು  ಪೋಲಾಗದಂತೆ ಸಂಗ್ರಹಿಸಿಟ್ಟುಕೊಳ್ಳಲು ಮೂಲ ಸೌಕರ್ಯಗಳನ್ನು ಮೊದಲು ಅಭಿವೃದ್ಧಿಪಡಿಸಬೇಕು. ಇದಕ್ಕೆ ತಂತ್ರಜ್ಞಾನವನ್ನು, ಲಭ್ಯವಿರುವ ಸ್ಥಳೀಯ ಮಾದರಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಲು ಸಂಕಲ್ಪ ತೊಡೋಣ.

 “ಈಗ ನದಿಗಳನ್ನೆಲ್ಲ ಚರಂಡಿ ಮಾಡುತ್ತಿದ್ದಾರೆ. ನದಿಗೆ ಯಾವನಾದರೂ ಈ ಕೊಚ್ಚೆ ನೀರು ಬಿಟ್ಟರೆ ಆ ನದಿಯ ನೀರು ಕುಡಿಯುವಷ್ಟೂ ಜನ ಬಂದು, ‘ನೀನು ಬಿಡ್ತಾ ಇರುವ ನೀರು ಕುಡೀಬೇಕು ಎಂದು prescribe ಮಾಡ್ತಾ ಇದ್ದೀಯಾ ಅಲ್ವೇನಪ್ಪಾ, ನಮ್ಮೆದುರು ನೀನು ಒಂದೊಂದು ಲೀಟರ್ ಕುಡಿ’ ಅಂತ ಅವನನ್ನು ಕೇಳುವ ಹಕ್ಕು ಜನಕ್ಕೆ ಇದೆ ಅನ್ನುವ ಒಂದು ಕಾನೂನು ಮಾಡಲಿ.”

ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 735

(ಲಂಕೇಶ್ 60, ಭಾಷಣ)

ಈ ಹಿಂದೆ ನಡೆದ ವಿಶ್ವಜಲದಿನಗಳ ಮಾಹಿತಿ ಮತ್ತು ಘೋಷವಾಕ್ಯಗಳ ಪಟ್ಟಿ ಜೊತೆಯಲ್ಲಿ ಹೆಚ್ಚಿನ ಮಾಹಿತಿಗೆ ಲಿಂಕನ್ನು ಕ್ಲಿಕ್ ಮಾಡಿ.

Official themes and previous campaigns

2022: World Water Day –  Groundwater

2021: World Water Day –  Valuing water

2020: Launch of the SDG 6 Take Action campaign.

2020: World Water Day –  Climate Change – Coordinators: WMOUNECEUNESCO, Task Force:  FAOGWPIRCUNESCO IHPUNESCO WWAP,  UNICEF | World Toilet Day

2019: World Water Day –  Leaving No One Behind (Human Rights and Refugees) | World Toilet Day – Coordinators: OHCHRUNHCR, Task Force: AquafedUN Global CompactFAOILOSWAUCLGUNCCDUNDPUNESCOUN Habitat, UNICEFUNU, UN WomenWater LexWSSCC

2018: World Water Day – Nature for Water – Coordinators: CBDUN Environment, UNESCO | World Toilet Day – When nature calls – Coordinators: WSSCC,UNDP,UNICEF UNU, WHOILO | Water Action Decade

2018: Launch of the Water Action Decade 2018-2028

2017: World Water Day – Wastewater | World Toilet Day – Wastewater – Coordinators: UNEP, UN Habitat, UNU, WHO 

2016: World Water Day – Water and Jobs | World Toilet Day – Toilets and Jobs – Coordinator: ILO

2015: World Water Day –  Water and Sustainable Development – Coordinator: UNDP | World Toilet Day – Toilets and Nutrition –  Coordinator: UNICEF

2014: World Water Day –  Water and Energy – Coordinators: UNIDO, UNU | World Toilet Day – Equality and Dignity – Coordinators: UNU, UN Habitat

2013: World Water Day – Water Cooperation –  Coordinator: UNESCO

2012: World Water Day – Water and Food Security –  Coordinator: FAO

2011: World Water Day – Water for Cities –  Coordinator: UN Habitat

2010: World Water Day –  Water Quality

2009: World Water Day –  Transboundary Waters –  Coordinators: FAO, UNECE, UNESCO

2008: World Water Day –  International Year of Sanitation –  Coordinator: UNDESA

2007: World Water Day –  Water Scarcity –  Coordinator: FAO

2006: World Water Day –  Water and Culture –  Coordinator: UNESCO

2005: World Water Day –  Water for Life 2005-2015 

2004: World Water Day –  Water and Disasters –  Coordinators: UNISDRWMO

2003: World Water Day –  Water for the Future – Coordinator: UN Environment

2002: World Water Day – Water for Development –  Coordinator: IAEA

2001: World Water Day – Water for Health, Taking Charge –  Coordinator: WHO

2000: World Water Day – Water for the 21st Century

1999: World Water Day – Everyone lives downstream –  Coordinator: UN Environment

1998: World Water Day – Groundwater, the invisible resource –  Coordinators: UN DESAUNICEF

1997: World Water Day – The World’s Water, Is There Enough?

1996: World Water Day – Water for Thirsty Cities

1995: World Water Day – Women and Water      1994: World Water Day – Caring for Water Resources is Everybody’s Business

58 comments:

  1. ಲೇಖನ ಸೂಪರ್ ಸರ್

    ReplyDelete
    Replies
    1. ಅತ್ಯುತ್ತಮ ಸಮಯೋಚಿತ ಲೇಖನ

      Delete
  2. ಲೇಖನ ಅತ್ಯುತ್ತಮವಾಗಿದೆ ಸರ್🙏🙏🙏💐💐💐

    ReplyDelete
  3. Nice lines Guru dutt sir.. Keep going 👏👏👍👍👍👍🏼

    ReplyDelete
  4. Very good information sir. your professional writing skills inspiring us to read much more..

    ReplyDelete
  5. ತುಂಬಾ ಚೆನ್ನಾಗಿ ವಿಷಯವನ್ನು ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳುವ ರೀತಿಯಲ್ಲಿ ಲೇಖನ ಮೂಡಿಬಂದಿದೆ ಸರ್, ಪ್ರತಿಯೊಬ್ಬರೂ ಬಹಳ ಸೂಕ್ಷ್ಮವಾಗಿ ಯೋಚಿಸಬೇಕಾದ ಹಾಗೂ ತಮ್ಮ ಬಳಕೆಯಲ್ಲಿ ನೀರಿನ ಪ್ರಾಮುಖ್ಯತೆ ಯನ್ನು ಪ್ರತಿ ಸಲವೂ ನೆನಪಿನಲ್ಲಿ ಇರುವಂತೆ ನಿಮ್ಮ ಲೇಖನ ಮಾಡಿದೆ ಸರ್.

    ReplyDelete
  6. ಲೇಖನ ತುಂಬಾ ಉಪಯುಕ್ತವಾಗಿದೆ.

    ReplyDelete
  7. Article is very good sir,but in my view if we start thinking providing only good water facility , in turm it tempts general public in increasing population.Until population growth is checked, many environment related problems can not be solved effectively.And you have ability of providing practical way of solving such problems, hope let us all think about such solutions.Thanks for the article.
    Ramesh Mathad BRP Chittapur.

    ReplyDelete
  8. ಅತ್ಯುತ್ತಮವಾಗಿ ಬರೆದಿರುವ ಲೇಖನ ಇದಾಗಿದೆ ಪ್ರತಿಯೊಬ್ಬರೂ ಸಹಿತ ಈ ವಿಷಯಗಳನ್ನು 1ಸಾರಥಿ ಖಂಡಿತವಾಗಿಯೂ ಓದಬೇಕಾಗಿ ವಿನಂತಿಸುತ್ತೇನೆ 🙏🙏
    ಗುರುದತ್ತ ಅವರ ಭಾಷಾ ಪ್ರೌಢಿಮೆ ಹಾಗೂ ಅದನ್ನು ತಿಳಿಯಪಡಿಸುವ ವಿಧಾನ ಬಹಳ ಅತ್ಯುತ್ತಮವಾಗಿದೆ..One of the excellent article I've read in recent times..

    ReplyDelete
  9. Good concern script sir, as u expressed every must know value of a single 💧, together huge resource in between us as river , lake . . . . Thank u sir

    ReplyDelete
  10. ಜೀವಜಲದ ಸಂರಕ್ಷಣೆ ಅಗತ್ಯ.. ಉತ್ತಮವಾದ ಬರಹ

    ReplyDelete
  11. ಜೀವಜಲದ ಸಂರಕ್ಷಣೆ ಅಗತ್ಯ.. ಉತ್ತಮವಾದ ಬರಹ

    ReplyDelete
  12. very informative and inspirational article sir . thank you very much.

    ReplyDelete
  13. Thanks for bringing this pool of valuable information under single channel. Really appreciate your hardwork towards bringing this awareness to the mankind. 70% of human body is water and we should be very conscious about preserving clean water to save our future generations to come.

    Best Regards,
    Bharath Bharadwaj D
    Bdvt

    ReplyDelete
    Replies
    1. ಅತಿ ಅವಶ್ಯಕವೂ ಹಾಗೂ ಮಹತ್ವವು ಆದ ವಿಷಯವನ್ನು, ಪರಿಣಾಮಕಾರಿಯಾಗಿಯೂ ಹಾಗೂ ಅಚ್ಚುಕಟ್ಟಾಗಿಯೂ ಸಾದರಪಡಿಸಿದ ತಮಗೆ ತುಂಬು ಹೃದಯದ ಧನ್ಯವಾದಗಳು ಸರ್

      Delete
  14. ಲೇಖನ ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ.
    ಧನ್ಯವಾದಗಳು

    ReplyDelete
  15. ಅದ್ಭುತ ಲೇಖನ ಸರ್...... ಮಕ್ಕಳಿಗೆ ಮತ್ತು ಎಲ್ಲ ಓದುಗರಿಗೆ ಉಪಯುಕ್ಕ ಮಾಹಿತಿ.....ನಮಸ್ಕಾರ

    ReplyDelete
  16. ಸರ್ ನಮಸ್ತೆ ನಾಗರಾಜ್ ಸುಂಕದಕಟ್ಟೆ ಶಾಲೆ ಹೆಡ್ ಮಾಸ್ಟರ್ ನೀರಿನ ಪ್ರಾಮುಖ್ಯತೆ ಬಗ್ಗೆ ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ ನಿಮಗೆ ಧನ್ಯವಾದಗಳು

    ReplyDelete
  17. ತುಂಬಾ ಚೆನ್ನಾಗಿದೆ ಲೇಖನ. ಶ್ರೀ ಗುರುದತ್ ಅವರಿಗೆ ಅಭಿನಂದನೆಗಳು. ಎಲ್ಲರೂ ನೀರಿನ ಕೊರತೆ ನೀಗಿಸಲು ಪ್ರಯತ್ನ ಪಡಬೇಕು.

    ReplyDelete
  18. Very nice article. Really this water scarcity topic is to be taken seriously by the public and by the Govt.

    As studies have already revealed scarcity of water in india by 2040, it is high time now to start the saving of water for the use of our next generation.
    Thanks to Sri. A.Gurudath for nice article to remember our responsibility.

    ReplyDelete
  19. ತುಂಬಾ ಚೆನ್ನಾಗಿದೆ ಲೇಖನ. ಅದ್ಭುತ.

    ReplyDelete
  20. ,👌👌👌👌👌👌🙏🙏🙏🙏🙏🙏
    ನೀರಿನ ಬಳಕೆ ಮಾರ್ಮಿಕವಾಗಿ ವಿವರಿಸಿದ್ದೀರಿ.
    ಶರಣು ತಮಗೆ.

    ReplyDelete
  21. Very informative article sir... superb 👏👏👏👏👍👍👍👍

    ReplyDelete
  22. Super informative and useful post. Thanks for all the effort you put in bringing this Sir

    ReplyDelete
  23. Super informative and useful post. Thanks for all the effort you put in bringing this Sir

    ReplyDelete
  24. Wow wonderful article worth reading
    Many points are of awareness and the way it is written adds more value to it
    Gurudatta has the capacity of holding the reader by his words mark of a good writer
    Simply superb

    ReplyDelete
  25. Super informative article sir 👌👍

    ReplyDelete
  26. ಅತ್ಯುತ್ತಮ ಲೇಖನ, ಅತ್ಯುತ್ತಮ ಮಾಹಿತಿ ,ಎಲ್ಲವೂ ಅತ್ಯುತ್ತಮ, ಅತ್ಯುತ್ತಮ ,ಅತ್ಯುತ್ತಮ .ನಿಮಗೆ ನೀವೇ ಸಾಟಿ ಸರ್ .

    ReplyDelete
  27. Superb article on the eve of word waterday, gurudatta sir has brought the essence by his words... true bringing awareness is the right way of celebrating it.... i honestly acknowledge and appriciate the writter effort

    ReplyDelete
  28. ಶ್ರೀ ಗುರುದತ್ತ್ ಅವರ ಲೇಖನ ಸರಾಗ, ಸುಲಲಿತ, ಸಕಾಲಿಕ ಅತ್ಯುತ್ತಮ ಲೇಖನ ಕೊಟ್ಟ ಗುರುದತ್ತ್ ಅವರಿಗೆ ಧನ್ಯವಾದಗಳು.

    ReplyDelete
  29. ಒಳ್ಳೆಯ ಲೇಖನ ಸರ್. ನೀರಿನ ಮಹತ್ವ ಪ್ರತಿಯೊಬ್ಬರೂ ಅರಿಯಬೇಕಿದೆ. ಅರಿತು ಬಾಳಬೇಕಿದೆ. ನೀರು, ಪ್ರಪಂಚದ ಪ್ರತಿ ಜೀವಿಯ ಹಕ್ಕು.

    ReplyDelete
  30. ಸಮಯೋಚಿತ ಲೇಖನ ಸರ್

    ReplyDelete
    Replies
    1. ಮನುಷ್ಯ ನೀರಿನಗುಣವನ್ನ್ಉ ತನ್ನದಾಗಿಸಿಕೊಂಡು, ಮಹತ್ವವನ್ನು ಅರಿಯಬೇಕಿದೆ, ಸಂದರ್ಭೋಚಿತ ಲೇಖನ. ಬಸವರಾಜ ಎಚ್.ಎಸ್. ಮುಖ್ಯೋಪಾಧ್ಯಾಯರು,ಸ.ಪ್ರೌ.ಶಾಲೆ.ಗಂಜಲಗೂಡು.

      Delete
  31. This comment has been removed by the author.

    ReplyDelete
  32. ಒಂದು ಮಾದರಿ ಲೇಖನ,ಅದ್ಭುತ ಪದಸಂಪತ್ತು,ಕನ್ನಡದಲ್ಲಿ ಇಂತಹ ಲೇಖನ ಅಪರೂಪ,ಸಂಕೀರ್ಣ ವಿಷಯವನ್ನು ಸರಳವಾಗಿ ತಿಳಿಸಿ,ಮನೋಭಾವವನ್ನು ಬದಲಿಸಲಿಚ್ಚಿಸುವ ನಿಮ್ಮ ಪರಿಅಮೋಘ.
    comment from vikas from Germany

    ReplyDelete
  33. ನೀರು ಅತ್ಯಮೂಲ್ಯವಾದಂತಹ ಒಂದು ಸಂಪನ್ಮೂಲ.ಅದರ ಬಗ್ಗೆ ಬರೆದಿರುವ ಲೇಖನ ಬಹಳ ಅದ್ಭುತವಾಗಿ ಮೂಡಿಬಂದಿದೆ ಗುರುದತ್ ಸರ್.ನಾವೆಲ್ಲರೂ ಮುಂದಿನ ಪೀಳಿಗೆಗೆ ನೀರಿನ ಉಳಿವಿಗಾಗಿ ಕೈ ಜೋಡಿಸೋಣ. ಲೇಖನ ತುಂಬಾ ಚೆನ್ನಾಗಿದೆ.

    ReplyDelete
  34. ನೀರು ಅತ್ಯಮೂಲ್ಯವಾದಂತಹ ಒಂದು ಸಂಪನ್ಮೂಲ.ಅದರ ಬಗ್ಗೆ ಬರೆದಿರುವ ಲೇಖನ ಬಹಳ ಅದ್ಭುತವಾಗಿ ಮೂಡಿಬಂದಿದೆ ಗುರುದತ್ ಸರ್.ನಾವೆಲ್ಲರೂ ಮುಂದಿನ ಪೀಳಿಗೆಗೆ ನೀರಿನ ಉಳಿವಿಗಾಗಿ ಕೈ ಜೋಡಿಸೋಣ. ಲೇಖನ ತುಂಬಾ ಚೆನ್ನಾಗಿದೆ.

    ReplyDelete
  35. ಉತ್ತಮ ಲೇಖನ ಸರ್, ಕುಡಿಯುವ ನೀರಿನ ಪ್ರಮಾಣ ಹೆಚ್ಚಿಸಲು ಪ್ರವಾಹ ಸಂಧರ್ಭದಲ್ಲಿ ಸಿಗುವ ಹೇರಳ ನೀರನ್ನು ತಂತ್ರಜ್ಞಾನ ದಿಂದ ತಡೆದು ಮರುಬಳಕೆ ಮಾಡಲು ಸಾಧ್ಯ ವಿಲ್ಲವೇ . . .

    ReplyDelete