Wednesday, August 4, 2021

ವಿಜ್ಞಾನದ ಒಗಟುಗಳು - ಆಗಸ್ಟ್ 2021

 ವಿಜ್ಞಾನದ ಒಗಟುಗಳು - ಆಗಸ್ಟ್ 2021

ಸದಾ ಒಟ್ಟಿಗೆ ಇರುವ, ಮೂವರು ಗೆಳೆಯರು ನಾವು,

ನಿಮ್ಮಯ ಮನೆ ಬೆಳಗಲು ಶ್ರಮಿಸುವೆವು.

ಒಬ್ಬನ ಹೆಸರು ವಿದ್ಯುತ್‌ ನನ್ನನೇ ನೇರ ಅವಲಂಬಿಸಿಹ.

ಇನ್ನೊಬ್ಬ ಅವನ ಚಲನೆಯ ಸತತ ತಡೆಯುತಿಹ.

ನನ್ನ, ಮತ್ತವನ ಹೆಸರುಗಳ ಹೇಳಿ ಎಂಬುದೇ ಬಿನ್ನಹ.            ಉತ್ತರ :

 *********************************

 ನೀರಿಗೆ ಅಂಟದ ತಾವರೆ ಎಲೆಯಂತೆ

ರಾಸಾಯನಿಕ ಕ್ರಿಯೆಯಲಿ ನಾ ಇರುವೆ.

ಕ್ರಿಯೆ ಬೇಗನೆ ಆಗುವ ಹಾಗೆ ನಾ ದುಡಿವೆ.

ಆದರೂ ಬದಲಾಗದೆ ನನ್ನಂತೇ ನಾ ಉಳಿವೆ,

ವೇಗದಿ ಹೇಳಿರಿ ನನ್ನಯ ಹೆಸರ ಭೇಷ್‌ ಎನುವೆ.                ಉತ್ತರ :

***********************************

ನಾನು ನನ್ನಯ ಆರು ಕುರಿ ಅದರ ಮೂರು ಮರಿ

ಕಾವಲು ನಾಯಿ, ನಾಯಿ ಮರಿ, ನಿನ್ನವೂ ಸೇರಿ

ಒಟ್ಟು ಎಷ್ಟು ಕಾಲುಗಳು ಬೇಗನೆ ಹೇಳು ಜಾಣಮರಿ.            ಉತ್ತರ :

_______________________________________________________

ರಚನೆ: ವಿಜಯಕುಮಾರ್‌ ಹುತ್ತನಹಳ್ಳಿ

……ನಿಮ್ಮ ಮಕ್ಕಳಿಗೆ ಶೇರ್‌ ಮಾಡಿ,

ಕಮೆಂಟ್‌ ಬಾಕ್ಸ್‌‌ನಲ್ಲಿ ನೀವೂ ಉತ್ತರಿಸಿ.

ಸರಿ ಉತ್ತರಗಳಿಗೆ ಮುಂದಿನ ಸಂಚಿಕೆ ತಪ್ಪದೆ ನೋಡಿ.

 

                      

16 comments:

  1. ಕನ್ನಡದಲ್ಲಿ ವಿಜ್ಞಾನದ‌‌ ಒಗಟುಗಳು,
    "ಕವಿ-ಜ್ಞಾನ"ದ ಜೊತೆಗೆ
    "ಸವಿ-ಜ್ಞಾನ"ದ‌ ಚಾಕಲೇಟುಗಳು.

    ಮೋಹಕ ರೀತಿಯಲ್ಲಿ ಮೆದುಳಿಗೆ ಕಸರತ್ತು. ಚೆನ್ನಾಗಿ ಮೂಡಿ ಬಂದಿದೆ

    ReplyDelete
  2. ಸುಂದರ ಮನಮೋಹಕ. ನಿಮ್ಮ ಪ್ರಯತ್ನ ಅಧ್ಬುತ. ನಿಮ್ಮ ಶ್ರಮ ಕ್ಕೆ ನನ್ನದೊಂದು ಸಲಾಂ

    ReplyDelete
  3. ತುಂಬಾ ಚೆನ್ನಾಗಿದೆ!!
    ಯಶ್

    ReplyDelete
  4. ಪ್ರತಿಕ್ರಿಯೆಯೂ ಸೊಗಸಾಗಿದೆ. ಧನ್ಯವಾದಗಳು.

    ReplyDelete
  5. 👌👌 ಸವಿಜ್ಞಾನದ ಸಹವಾಸ
    ಚಿಣ್ಣರ ಕಲಿಕೆಗೆ ಒಳ್ಳೆಯ ಅವಕಾಶ
    ಆಗದೇ ಇದ್ದೀತೆ ಬುದ್ಧಿ ವಿಕಾಸ !??

    ReplyDelete
  6. ವಿಜಯ ಕುಮಾರ್: ನಾನು ಹಿಂದೊಮ್ಮೆ ಹೇಳಿದಂತೆ ನೀವು ಮಾಡುತ್ತಿರುವ ಕೆಲಸ ಬಹು ಪ್ರಮುಖ ಮತ್ತು ಅತ್ಯುತ್ತಮ ಗುಣಮಟ್ಟದ್ದು. ವಿಜ್ಞಾನ, ಭಾಷೆ, ಸಾಹಿತ್ಯಗಳೆಲ್ಲವನ್ನೂ ಬಲ್ಲ ನಿಮ್ಮಂಥ ಶಿಕ್ಷಕರಿಂದ ಕಲಿಯುವ ನಿಮ್ಮ ಚಿಣ್ಣರು, ದೊಡ್ಡವರೆಲ್ಲರೂ ಧನ್ಯರು! ನಿಮ್ಮ ಈ ಘನಕಾರ್ಯ ಹೀಗೆಯೇ ಸಾಗಲಿ👏ಶುಭಾಶಯಗಶು🙏

    ನನ್ನ ಉತ್ತರಗಳು:
    (ಕೊಟ್ಟಿದ್ದು: ವಿದ್ಯುತ್ or electricity, ವಿದ್ಯುತ್ಪ್ರವಾಹ or current)
    Voltage = Potential Difference = ಪ್ರಚ್ಛನ್ನಾಂತರ
    Resistance = ಪ್ರತಿರೋಧ/ನಿರೋಧ/ತಡೆ
    48 = 2 + (6*4) + (3*4) + 4 + 4 + 2

    ReplyDelete
  7. ವಿದ್ಯುತ್/ವಿದ್ಯುತ್ಛಕ್ತಿ, ಶುಭಾಶಯಗಳು ಎಂದು ತಿದ್ದಿಕೊಳ್ಳಿ.

    ReplyDelete
  8. ಬಿಟ್ಟುಹೋಗಿದ್ದು catalyst = ವೇಗವರ್ಧಕ !

    ReplyDelete