Saturday, September 4, 2021

ಶಿಕ್ಷಣ ಕ್ಷೇತ್ರದ ಸೌಗಂಧಿಕಾ ಪುಷ್ಪ ಶಿಕ್ಷಣ ತಜ್ಞ ಡಾ. ಹೆಚ್.ಎಸ್‌.ಗಣೇಶಭಟ್ಟ

 ಶಿಕ್ಷಣ ಕ್ಷೇತ್ರದ ಸೌಗಂಧಿಕಾ ಪುಷ್ಪ ಶಿಕ್ಷಣ ತಜ್ಞ ಡಾ. ಹೆಚ್.ಎಸ್‌.ಗಣೇಶಭಟ್ಟ 


-   
ಶ್ರೀನಿವಾಸ್‌ ಎ

ಪ್ರಪಂಚದಲ್ಲಿ ಉಪಯೋಗಕ್ಕೆ ಬಾರದ ನಿರುಪಯುಕ್ತ ವಸ್ತು ಎನ್ನಬಹುದಾದ ವಸ್ತುವೇ ಇಲ್ಲ”, ಎನ್ನುವ ವಾಕ್ಯವನ್ನು ನಾವೆಲ್ಲರೂ ಕೇಳಿರುತ್ತೇವೆ. ಆದರೂ ವಿಶ್ವ ಎದುರಿಸುತ್ತಿರುವ ಸಮಸ್ಯೆ ಎಂದರೆ ತ್ಯಾಜ್ಯ ನಿರ್ವಹಣೆ, ತ್ಯಾಜ್ಯ ಎಂದರೆ ನಿರುಪಯುಕ್ತ ವಸ್ತು ಹಾಗಾದರೆ ಮೇಲೆ ಹೇಳಿದ ನಾವೆಲ್ಲಾ ಕೇಳಿರುವ ವಾಕ್ಯ ಸುಳ್ಳೆ?

ವಿಜ್ಙಾನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯೊಬ್ಬರು ಇಂತಹ ನಿರುಪರುಕ್ತ ವಸ್ತುಗಳನ್ನು ಬಳಸಿ ವಿಜ್ಙಾನದ ನಿಯಮಗಳನ್ನು, ತತ್ವಗಳನ್ನು ನಿರೂಪಿಸುತ್ತಿದ್ದಾಗ, ಮೇಲಿನ ವಾಕ್ಯದ ಸಾಕ್ಷಾತ್ಕಾರವಾಯಿತು. ವ್ಯಕ್ತಿ ಬೇರಾರು ಅಲ್ಲ. ನಮ್ಮ ನಿಮ್ಮೆಲ್ಲರಿಗೂ ಚಿರಪರಿಚಿತರಾದ ಶಿಕ್ಷಣ ಜ್ಞ ಡಾ. ಹೆಚ್.ಎಸ್. ಗಣೇಶಭಟ್ಟ ರವರು. ನಂದನವನದ ಹೂಗಳ ಸುಗಂಧ ಜೇನ್ನೊಣಗಳನ್ನು ಆಕರ್ಷಿಸುವಂತೆ ತಮ್ಮ ಜ್ಞಾನದ ಸುಗಂಧದಿಂದ ದೂರದೂರದಿಂದ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು ತನ್ನೆಡೆಗೆ ಆಕರ್ಷಿಸುತ್ತಿರುವ ಮಂದಸ್ಮಿತ ಗುರುಶ್ರೇಷ್ಠರಿವರು. 

ರಾಜ್ಯ ಕಂಡ ಅತ್ಯುತ್ತಮ, ಆದರ್ಶನೀಯ, ಅನುಕರಣೀಯ ವ್ಯಕ್ತಿತ್ವ. ಸದಾ ಮುಖದಲ್ಲಿ ಆಕರ್ಷಕ ಮಂದಹಾಸ, ದಣಿವರಿಯದ ಚೈತನ್ಯ. 4 ದಶಕಗಳಲ್ಲಿ ಅವರು ಭಾಗವಹಿಸಿದ ಶೈಕ್ಷಣಿಕ ಕಾರ್ಯಾಗಾರಗಳೆಷ್ಟೋ!!, ಪ್ರಶಿಕ್ಷಣಾರ್ಥಿಗಳಿಗೆ ನೀಡಿದ ತರಬೇತಿಗಳನ್ನು ಲೆಕ್ಕವಿಡಲಾಗದು. ಸಹಸ್ರಾರು ಉಪನ್ಯಾಸಗಳ ಮೂಲಕ ಶಿಕ್ಷಕರನ್ನು ಸಶಕ್ತರಾಗಿಸುವ ಕಾಯಕವನ್ನೇ ಹವ್ಯಾಸವಾಗಿಸಿ, ಉಸಿರಾಗಿಸಿ ರಾಜ್ಯದಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಾ ದಣಿವರಿಯದೆ ಅನವರತ ಕಾರ್ಯಪ್ರವೃತ್ತರಾಗಿದ್ದಾರೆ. ಹಲವಾರು ಸಂಶೋಧನಾ ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ PhD ಪಡೆದು ವೈಕ್ತಿಕ ಸಾಧನೆ  ಜೊತೆಗೆ ಶಿಕ್ಷಣ ರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಒಮ್ಮೆ ಅವರ ಸಂಪರ್ಕಕ್ಕೆ ಬಂದರೆ ಅವರ ಪ್ರಭಾವದಿಂದ ಹೊರಬರುವುದು ಕಷ್ಟ, ಅಂತಹ ಚುಂಬಕ ವ್ಯಕ್ತಿತ್ವ ಅವರದ್ದು.  ಅನೇಕ ಶಿಕ್ಷಣ ಸಮಿತಿಗಳಲ್ಲಿ, ಪಠ್ಯಪುಸ್ತಕ ಸಮಿತಿಗಳಲ್ಲಿ, ಹಲವು ಹಂತಗಳಲ್ಲಿ ಕಾರ್ಯನಿರ್ವಹಿಸಿ ಶಿಕ್ಷಣ ವ್ಯವಸ್ಥೆಯ ಏಳ್ಗೆಗೆ ಶ್ರಮಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅವರ ಪ್ರಕಟಿತ ಲೇಖನಗಳು ಓದುಗರಿಗೆ ಜ್ಞಾನದ ರಸದೌತಣವನ್ನು ಉಣಬಡಿಸಿವೆ. ದೇಶದ ಹಲವು ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ನಡೆಸಿದ ಸಮ್ಮೇಳನದಲ್ಲಿ ಪ್ರೌಢ ಪ್ರಬಂಧಗಳನ್ನು ಮಂಡಿಸಿ ಎಲ್ಲರ ಮೆಚ್ಚುಗೆಗೆ ಒಳಗಾಗಿದ್ದಾರೆ. ಹಲವು ಗ್ರಂಥಗಳು ಮತ್ತು ಲೇಖನಗಳು ಪ್ರಕಟಗೊಂಡಿದ್ದು ನಮ್ಮೆಲ್ಲರ ಜ್ಞಾನವನ್ನು ಉದ್ದೀಪನಗೊಳಿಸಿದೆ. ರಾಷ್ರ್ಟಮಟ್ಟದ ಶೈಕ್ಷಣಿಕ ಸಮ್ಮೇಳನಗಳಲ್ಲಿ ಘನ ಪ್ರಬಂಧಗಳನ್ನು ಮಂಡಿಸಿ ರಾಜ್ಯದ ಕೀರ್ತಿ ಪತಾಕೆಯನ್ನು ಎತ್ತಿಹಿಡಿದಿದ್ದಾರೆ. ಅವರನ್ನು ರಸಿ ಬಂದ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳೆಷ್ಟೋ. ೧೩ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಸ್ವೀಕರಿಸಿ ಪ್ರಶಸ್ತಿಗಳಿಗೇ ಮೌಲ್ಯವನ್ನು ತಂದುಕೊಟ್ಟಿದ್ದಾರೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಸವಿಜ್ಞಾತಂಡವು ಶಿಕ್ಷಕರ ಡಾ. ಗಣೇಶ ಭಟ್ಟರವರೊಂದಿಗೆ ನಡೆಸಿರುವ ಸಂದರ್ಶನದ ಆಯ್ದ ಭಾಗ ನಿಮಗಾಗಿ.



ಸಂ : ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (೨೦೨೦) ನಮ್ಮ ಶೈಕ್ಷಣಿಕ ಕ್ಷೇತ್ರದ ಮೇಲೆ ಯಾವ ರೀತಿಯ ಬದಲಾವಣೆಗಳನ್ನು ಉಂಟುಮಾಡಬಹುದು?

ಡಾ : ಹೊಸ ಶಿಕ್ಷಣ ನೀತಿಯು, ಪ್ರಸ್ತುತ ಶಿಕ್ಷಣ ನೀತಿಯು ಬದಲಾದ ಸ್ಥಿತಿಗಳಿಗೆ ಅನುಸಾರವಾಗಿ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ. 1948 ಉನ್ನತ ಶಿಕ್ಷಣ ಸಮಿತಿಯು ಉದ್ದೇಶ ಯುವಕ ಯುವತಿಯರನ್ನು ಉತ್ತಮ ಪೌರನನ್ನಾಗಿ ಮಾಡುವುದಾಗಿತ್ತು, 1952 ಮುದಲಿಯಾರ್ಅಥವಾ ಪ್ರೌಢ ಶಿಕ್ಷಣ ಸಮಿತಿಯು ವೃತ್ತಿ ಶಿಕ್ಷಣಕ್ಕೆ ಒತ್ತು ನೀಡಿತು, ಈಗಿನ NEP ಸಹ ಅದನ್ನೆ ಹೇಳುತ್ತದೆ, ಕೌಶಲ್ಯ ಅಭಿವೃದ್ಧಿ ಮಾಡುವುದಾಗಿರುತ್ತದೆ, ಆನಂತರ 1964-66 ರಲ್ಲಿನ ಕೊಠಾರಿ ಆಯೋಗ, ಶಾಲಾ ಸಂಕೀರ್ಣ ರಚಿಸಲು ಸಲಹೆ ನೀಡಿತು. ಈಗ NEP ಸಹ ಅದಕ್ಕೇ ಒತ್ತು ನೀಡುತ್ತಿದೆ. 10+2+3 ವ್ಯವಸ್ಥೆಯನ್ನು ಅನುಸರಿಸಲು ಸಲಹೆ ನೀಡಿತು. ಇದು ಇಂಗ್ಲೇಂಡಿನಲ್ಲಿ ಜನಪ್ರಿಯವಾಗಿದ್ದ  ನಾಲ್ಕು ವರ್ಷದ ಆನರ್ಸ್ ಶಿಕ್ಷಣಕ್ಕೆ ಅವಕಾಶ ನೀಡಿತು. 1986 ಹೊಸ ಶಿಕ್ಷಣ ನೀತಿಯ ಆಶಯದಂತೆ ನವೋದಯ ವಿದ್ಯಾಲಯಗಳು ಸ್ಥಾಪನೆಗೊಂಡವು. ಅಂದು ಕೆಲವು ಶಿಕ್ಷಣ ತಜ್ಞರು ಇವುಗಳನ್ನು ಬಿಳಿಯಾನೆ ಎಂದು ಕರೆದಿದ್ದರು. ಹಾಗೆಯೇ ಇಸ್ರೋವನ್ನೂ ಕೂಡ. ಇದು ಹಂತ ಹಂತವಾಗಿ ಶಿಕ್ಷಕರ ತರಬೇತಿ ನಡೆಯಲು ಒತ್ತು ನೀಡಿತು. 2020 ಶಿಕ್ಷಣ ನೀತಿಯ ಆಶೋತ್ತರ, ಭಾರತೀಯ ಶಿಕ್ಷಣ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತದೆ. ಪೂರ್ವ ಪ್ರಾಥಮಿಕ ಶಿಕ್ಷಣವು (ಅಂಗನವಾಡಿ) ಬುನಾದಿ ಶಿಕ್ಷಣವೆನಿಸಿಕೊಳ್ಳುತ್ತದೆ.  ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ, ಪದವಿ ಶಿಕ್ಷಣವಾಗಿರುತ್ತದೆ. 5 ವರ್ಷಗಳ ಬುನಾದಿ ಶಿಕ್ಷಣವು ಬಹು ಭಾಷೆಯನ್ನು ಕಲಿಯಲು ಒತ್ತು ನೀಡುತ್ತದೆ ( ಕನ್ನಡ, ಆಂಗ್ಲ, ತಮಿಳು ಮುಂತಾದವು) ಇದು ಮಿದುಳಿನ ಬೆಳವಣಿಗೆಗೆ ಸಹಾಯಕ. ನಮ್ಮ ದೇಶವು ಬಹುಭಾಷಾ ಸಂಸ್ಕೃತಿಯುಳ್ಳದ್ದಾಗಿದೆ. ಆದುದರಿಂದ ಬಹು ಭಾಷೆಗೆ ಕಲಿಯಲು ಒತ್ತುನೀಡಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಶಿಕ್ಷಕರಿಗೆ ಸವಾಲುಗಳು ಬಹಳವಾಗಿದೆ. ಶಿಕ್ಷಕರು ತಮ್ಮ ವಿಷಯಗಳಲ್ಲಿ ಆಳವಾದ ಜ್ಞಾನವನ್ನು ಹೊಂದಿರಬೇಕಾಗುತ್ತದೆ, ಇದು ಅವರ ಬೋಧನೆಗೆ ಪೂರಕವಾಗಿದೆ. NEP emphasizes continuous professional development of the teacher. ಪ್ರತಿ ವರ್ಷ ಶಿಕ್ಷಕ 50 ಗಂಟೆಗಳ ತರಬೇತಿಗೆ ಒಳಪಡಬೇಕಾಗುತ್ತದೆ.  ಪ್ರತಿ 5 ವರ್ಷಕ್ಕೆ ಒಮ್ಮೆ ಖಾಸಗಿ, ಸರ್ಕಾರಿ ಹಾಗೂ ಅನುದಾನಿತ ವಲಯಗಳೇ ಅಗಿರಲಿ. ಯಾವುದೇ ಶಿಕ್ಷಕರನ್ನು ಮೌಲ್ಯಮಾಪನಕ್ಕೆ ಒಳಪಡಿಸಬೇಕಾಗುತ್ತದೆ. ಶಿಕ್ಷಕರು ಹೊಸ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಆಶಿಸುತ್ತದೆ. covid-19‌ ಸಂದರ್ಭದಲ್ಲಿ ಶಿಕ್ಷಕರು ಹೊಸ ಕಲಿಕೆಗೆ ತೊಡಗಿಸಿಕೊಂಡಿರುವುದನ್ನು ನೋಡಿದ್ದೇವೆ.

ಸಂ : ಸರ್‌ ವಿಜ್ಞಾನ ವಿಷಯದಲ್ಲಿ ಕಡಿಮೆ ಫಲಿತಾಂಶ ಬರಲು ಕಾರಣವೇನು?

ವಿಜ್ಞಾನ ವಿಷಯದ ಕಲಿಕೆ ಇತರ ವಿಷಯಗಳಿಗಿಂತ ಬೇರೆಯದಾಗಿದೆ, ಇಲ್ಲಿ ಶಿಕ್ಷಕನ ಪಾತ್ರ ಬಹಳ ಮುಖ್ಯ. ಶಿಕ್ಷಕನಾದವನು ವಿದ್ಯಾರ್ಥಿಯಲ್ಲಿ ವೀಕ್ಷಣಾ ಕೌಶಲ್ಯ ಅಭಿವೃದ್ಧಿಪಡಿಸುವತ್ತ ಗಮನ ಹರಿಸಬೇಕು. ವಿಜ್ಞಾ ವಿಶ್ಲೇಷಣಾತ್ಮಕ ವಿಷಯವಾಗಿದ್ದು, ಸುಲಭವಾಗಿ ಅಂಕಗಳನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಬೋಧನಾ ವಿಧಾನವನ್ನು ಶಿಕ್ಷಕರು ಬದಲಿಸಿಕೊಳ್ಳಬೇಕಾಗುತ್ತದೆ. ಚಟಿವಟಿಕೆ ಆಧಾರಿತ ತರಗತಿಗಳನ್ನು  ವಿಜ್ಞಾ ಬೋಧನೆ ಕಲಿಕೆ ಪರಿಣಾಮಕಾರಿಯಾಗಲು ಸಹಾಯಕ.

ಸಂ :  ಸರ್‌, ಸ್ಥಾನಿಕ ಪತ್ರ ಎಂದರೇನು? ಇದರ ಪ್ರಾಮುಖ್ಯತೆಯನ್ನು ತಿಳಿಸಿ.

ಡಾ : ೨೦೧೬ ರಿಂದ ಹೊಸ ಶಿಕ್ಷಣ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ವ್ಯಾಪಕ ಸಮೀಕ್ಷೆಯ ನಂತರ ಅನುಷ್ಟಾನಕ್ಕೆ ಬರುತ್ತಿದೆ. ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ.  ಸ್ಥಾನಿಕ ಪತ್ರವು ಶಿಕ್ಷಣ ನೀತಿಗಳ ಆಶಯಗಳ ಅನುಸಾರವಾಗಿ ಶೈಕ್ಷಣಿಕ ಮತ್ತು ಸಹಪಠ್ಯ ಚಟುವಟಿಕೆಗಳು ಪೂರಕವಾಗಿರಬೇಕು. ಶಿಕ್ಷಣದ ಈಗಿನ ಪರಿಸ್ಥಿತಿ , ಭವಿಷ್ಯದ ಅವಶ್ಯಕತೆಗಳನ್ನು  ಪೂರೈಸುವಂತೆ ಇರಬೇಕು. ಎಲ್ಲಾ ಅಂಶಗಳನ್ನು ಸ್ಥಾನಿಕ ಪತ್ರ ಒಳಗೊಂಡಿರಬೇಕು, blended learning, flip learning ಮುಂತಾದವುಗಳನ್ನು ಒಳಗೊಂಡಿರಬೇಕು. ವಿಷಯದ ಪರ ಮತ್ತು ವಿರೋಧ ಅಂಶಗಳನ್ನು ಒಳಗೊಂಡಿರಬೇಕು ಹಾಗೂ ಅಂತಿಮ ತೀರ್ಮಾನವು ತಾರ್ಕಿಕವಾಗಿರಬೇಕು.

 ಹಿಂದಿನ ಸಾಲಿನ ಹುಡುಗರು ನಾವು ನಮಗೇನೇನು ಭಯವಿಲ್ಲ, ನಮ್ಮಿಂದಾಗದು ಶಾಲೆಗೆ ತೊಂದರೆ ನಮಗೆಂದೆಂದು ಜಯವಿಲ್ಲ, ತರಗತಿಗೇನೊ ನಾವೆ ಹಿಂದು ಹಿಂದುಳಿದವರೆ ನಾವಿಲ್ಲಿ, ಆಟದ ಬಯಲಲ್ಲಿ ನೋಡಲಿ ಬಂದು ಆಂಜನೇಯರೆ ನಾವಲ್ಲಿ”. ಎಂಬಂತೆ ನಮ್ಮ ವಿದ್ಯಾರ್ಥಿಗಳಿಗೆ ಆಟೋಟಕ್ಕೂ ಪ್ರೋತ್ಸಾಹ ನೀಡಬೇಕು. ೨೦೨೦ ರಾಷ್ಟ್ರೀ ಶಿಕ್ಷಣ ನೀತಿ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುತ್ತದೆ. ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸದೃಗೊಳಿಸಬೇಕಾಗಿದೆ, ದೈಹಿಕವಾಗಿ ಸಬಲರಾಗಿಸಬೇಕಿದೆ. ಶಾಲೆಯ ಕಲಿಕೆ, ವಿದ್ಯಾರ್ಥಿಗಳನ್ನು ನಿತ್ಯ ಜೀವನಕ್ಕೆ ಹೊಂದಿಕೊಳ್ಳಲು ಸಹಾಯಕವಾಗಬೇಕು. ಜೀವನವು ಅನಿಶ್ಚಿತತೆಯಿಂದ ಕೂಡಿದೆ, ಇದನ್ನು ವಿದ್ಯಾರ್ಥಿ ಅರ್ಥೈಸಿಕೊಳ್ಳಲು ಶಾಲೆ ಸಹಾಯಕವಾಗಬೇಕು.

ಪುಸ್ತಕದಿದೊರೆತರಿವು ಮಸ್ತಕದಿ ತಳೆದ ಮಣಿ ವಸ್ತು ಸಾಕ್ಷಾತ್ಕಾರ ಅಂತರೀಕ್ಷಣೆಯಿಂದ ಶಾಸ್ತ್ರಿತನದಿಂದಲ್ಲ ಮಂಕುತಿಮ್ಮ”. ಮಂದಾಕ್ಷಿ ನಮಗಿಹುದು ಬಹುದೂರ ಸಾಗದಂತೆ. ಇಂದಿನ ಸನ್ನಿವೇಶದಲ್ಲಿ Reflective teaching  ಅಗತ್ಯವಿದೆ. ನಿಮ್ಮ ಬೋಧನೆ ಎಲ್ಲ ವಿದ್ಯಾರ್ಥಿಗಳಿಗೂ ತಲುಪಬೇಕಿದೆ. ಪೂರಕ ಚಟುವಟಿಕೆಗಳ ಮೂಲಕ  ಶಿಕ್ಷಕ ಬೋಧನೆಯನ್ನು ಪರಿಣಾಮಕಾರಿಯಾಗಿಸಬಹುದು.

ಧನ್ಯವಾದಗಳು ಸರ್‌

7 comments:

  1. ಮಾಹಿತಿ ಪೂರ್ಣವಾಗಿದೆ, ಸುಲಲಿತವಾಗಿದೆ, ಧನ್ಯವಾದಗಳು ಸರ್

    ReplyDelete
  2. ನಾನು ಕಂಡ ಅದ್ಭುತ ಮೇಷ್ಟ್ರು,,,,ಶುಭವಾಗಲಿ ಗುರುಗಳೆ

    ReplyDelete
  3. Iwas a student ofDr.GaneshBhatta sir.Ifeel so proud to be his student. He is an inspiration to all of us.Nice to see him here.

    ReplyDelete
  4. I was a single bench student next to the teachers platform. All my teachers supported me for my bright future. My special heartly concerns to my Ganesh Bhat sir. Thank u for an opportunity to serve u.

    ReplyDelete
  5. ಸ್ಫೂರ್ತಿಯ ಸೆಲೆ ಡಾ‌.ಹೆಚ್.ಎಸ್‌.ಗಣೇಶಭಟ್ಟ ಗುರುಗಳು.

    ReplyDelete
  6. GANESH BHAT sir is one of the best educationists I have seen. Thanks for the article.

    ReplyDelete