Friday, February 4, 2022

ಕಡ್ಡಿ ಗೊಂಬೆಗಳು

ಕಡ್ಡಿ ಗೊಂಬೆಗಳು

ಸಿದ್ದು ಬಿರಾದಾರ, ವಿಜ್ಞಾನ ಶಿಕ್ಷಕ

ಸರಕಾರಿ ಪ್ರೌಢ ಶಾಲೆ ಚಿಬ್ಬಲಗೇರಿ

ತಾ: ಹಳಿಯಾಳ, ಶಿರಿಸಿ ಶೈಕ್ಷಣಿಕ ಜಿಲ್ಲೆ

ಉತ್ತರ ಕನ್ನಡ 

ವಿಜ್ಞಾನ ಬೋಧನೆಯಲ್ಲಿ ಬೊಂಬೆಗಳನ್ನು ಪರಿಣಾಮಕಾರಿಯಾಗಿ ಹೇಗೆ ಬಳಸಿಕೊಳ್ಳಬಹುದೆಂಬ ಬಗ್ಗೆ ತಮ್ಮ ಅನುಭವಗಳನ್ನು ಸರಣಿ ಲೇಖನಗಳಲ್ಲಿ ಹಂಚಿಕೊಳ್ಳುತ್ತಿರುವ ಸೃಜನಶೀಲ ಶಿಕ್ಷಕ ಸಿದ್ದು ಬಿರಾದಾರ್,  ಈ ಬಾರಿಯ ಲೇಖನದಲ್ಲಿ ಕಡ್ಡಿ ಗೊಂಬೆಗಳನ್ನು ತಯಾರಿಸುವ ವಿಧಾನವನ್ನು ಚಿತ್ರಗಳ ಸಹಿತ ವಿವರಿಸಿದ್ದಾರೆ.

ಗೊಂಬೆಯಾಟದಲ್ಲಿ ಕಡ್ಡಿ ಗೊಂಬೆಗಳು ವಿಶೇಷವಾದ ಪಾತ್ರವನ್ನು ವಹಿಸುತ್ತದೆ. ಇವು, ಪರಿಣಾಮಕಾರಿಯಾದ ಕಲಿಕೆಗೆ ಸಹಾಯ ಮಾಡುತ್ತವೆ. ಇಲ್ಲಿ ಕಡ್ಡಿಗಳನ್ನು ಬಳಸಿ ಗೊಂಬೆಯನ್ನು ಆಡಿಸುವ ಕಲೆ ಇದೆ. ಹಾಗಾಗಿ, ಇದಕ್ಕೆ ಸಲಾಕೆ ಗೊಂಬೆ ಎಂದೂ ಕೂಡಾ ಕರೆಯುತ್ತಾರೆ. ಈ ಗೊಂಬೆಗಳ ಮುಖವನ್ನು ಕೈಗೊಂಬೆಗಳನ್ನು ತಯಾರಿಸಿದ ಮಾದರಿಯಲ್ಲಿಯೇ ಸ್ವಲ್ಪ ದೊಡ್ಡದಾಗಿ ತಯಾರಿಸಬೇಕು.

ಗೊಂಬೆಗಳ ಮುಖವನ್ನು ತಯಾರಿಸುವುದು

ಬೇಕಾದ ಸಾವiಗ್ರಿಗಳುಃ ವೃತ್ತಪತ್ರಿಕೆಗಳು, ಹತ್ತಿ, ವೃತ್ತಾಕಾರದ ಚೆಂಡು, ಬಣ್ಣ,ಬಣ್ಣದ ಸ್ಪಂಜ್, ಪ್ಲಾಸ್ಟಿಕ್, ಥರ್ಮಾಕೋಲ್, ರಬ್ಬರ್ ಬ್ಯಾಂಡ್, ಅಂಟು, ಫೆವಿಬಾಂಡ್, ಉಲ್ಲನ್, ವೆಲ್ವೆಟ್ ಬಟ್ಟೆ ಇತ್ಯಾದಿ.

ಗೊಂಬೆ ತಯಾರಿಸುವ ವಿಧಾನಃ ಹತ್ತಿಯ ಉಂಡೆಯನ್ನು ಮಾಡಿ ಅದರ ಸುತ್ತಲೂ ಸ್ಪಂಜನ್ನು ಸುತ್ತಿ ಫೆವಿಬಾಂಡ್‌£Aದ ಅಂಟಿಸಬೇಕು. ತದನಂತರ, ಅದರ ತಲೆಯಭಾಗಕ್ಕೆ ಕಪ್ಪು ವೆಲ್ವೆöಟ್ ಬಟ್ಟೆಯನ್ನು ತಲೆಯ ಆಕೃತಿಯ ಹಾಗೆ ಫೆವಿಬಾಂಡನಿAದ ಅಂಟಿಸಬೇಕು. ಮುಖದ ಭಾಗದಲ್ಲಿ ಉಬ್ಬು ತಗ್ಗುಗಳನ್ನು ಹತ್ತಿಯಿಂದ ಮಾಡಬೇಕು. ಕೆನ್ನೆಯ ಭಾಗ, ಮೂಗಿನ ಭಾಗ, ಕಿವಿಯ ಭಾಗದಲ್ಲಿ ಆಕೃತಿಗೆ ತಕ್ಕಂತೆ ಉಬ್ಬು ತಗ್ಗುಗಳನ್ನು ಮಾಡಿ, ಆ ಆಕೃತಿಯ ಮೇಲೆ ಸ್ಪಂಜನಿಂದ ಮೂಗು, ಬಾಯಿ, ಕಿವಿ, ಕಣ್ಣು ಹಾಗೂ ಹುಬ್ಬುಗಳನ್ನು ಮಾಡಬೇಕು. ಅದರ ಬುಡದಲ್ಲಿ ೨ ಸೆ.ಮೀ ವ್ಯಾಸವಿರುವ ಉದ್ದ ಪಿ.ವಿ.ಸಿ. ಪೈಪನ್ನು ಹಾಕಬೇಕು. ಈಗ ಕಡ್ಡಿಗೊಂಬೆಯ ಮುಖ ಸಿದ್ಧವಾಗುತ್ತದೆ. 

ಕಡ್ಡಿಗೊಂಬೆಯ ದೇಹಕ್ಕಾಗಿ ತಯಾರಿಸಲು ಬೇಕಾದ ಸಾಮಾಗ್ರಿಗಳು

೨ ಅಡಿ ಉದ್ದದ, ೧ ಇಂಚ್ ವ್ಯಾಸವಿರುವ ಪೈಪು, ೨ ಅಡಿ ಉದ್ದದ ೧ ಇಂಚ್ ವ್ಯಾಸವಿರುವ ಪಿ.ವಿ.ಸಿ. ಪೈಪ್, ೨ ಸೆ.ಮೀ ಟಿ, ೧ ಇಂಚ್ ವ್ಯಾಸ ೧೦ ಸೆ.ಮೀ. ಉದ್ದದ ೬ ಪಿ.ವಿ.ಸಿ. ಪೈಪ್‌ಗಳು, ದಾರ, ಪಿನ್, ಅಲಂಕಾರಕ್ಕಾಗಿ ಬೇಕಾದ ಬಟ್ಟೆಗಳು, ಇತ್ಯಾದಿ. 

ವಿಧಾನ: ಪಿ.ವಿ.ಸಿ. ಪೈಪ್‌ಗಳನ್ನು ಚಿತ್ರದಲ್ಲಿರುವಂತೆ ಜೋಡಿಸಬೇಕು. ದಾರವು ಸಲೀಸಾಗಿರಲಿ. ಮಧ್ಯದಲ್ಲಿನ ಟಿ.ಗೆ ಒಂದು ರಂಧ್ರವನ್ನು ಮಾಡಿ ಚಿತ್ರದಲ್ಲಿರುವಂತೆ ಅದರ ಮಧ್ಯದಲ್ಲಿ ೨ ಸೆ.ಮೀ.ವ್ಯಾಸವಿರುವ ಪೈಪ್‌ನ್ನು ಹಾಕಬೇಕು. ಮಧ್ಯದಲ್ಲಿನ ಪೈಪ್ ತಿರುಗಿಸಲು ಅನುಕೂಲವಾಗುವಂತೆ ಮಾಡಿಕೊಳ್ಳಬೇಕು. ಮುಂದಿನ ತುದಿಗಳಿಗೆ ಸ್ಪಂಜಿನಿಂದ ಕೈಗಳನ್ನು ತಯಾರಿಸಬೇಕು. 

ಕೆಳಗಿನ ಚಿತ್ರದಲ್ಲಿರುವಂತೆ ಮೇಲೆ ಬಟ್ಟೆಯನ್ನು ಹಾಕಿ ಕೈಭಾಗದಿಂದ ಹಾಗೂ ಕಾಲಿನಿಂದ ಕಡ್ಡಿಯನ್ನು ದಾರದಿಂದ ಕಟ್ಟಬೇಕು. ನಂತರ ತುದಿಯ ಭಾಗದಲ್ಲಿ ಗೊಂಬೆಯ ಮುಖವನ್ನು ಜೋಡಿಸಬೇಕು. ಈಗ ಚಿತ್ರದಲ್ಲಿರುವಂತೆ ಕಡ್ಡಿಗೊಂಬೆ ಸಿದ್ಧವಾಗುತ್ತದೆ.

ಹೀಗೆ ಕಡ್ಡಿಗೊಂಬೆಗಳ ಮೂಲಕ ವಿಜ್ಞಾನದ ಪಠ್ಯಕ್ಕೆ ಸಂಬಂಧಿಸಿದ ಅನೇಕ ವಿಷಯಗಳಿಗೆ ಬೇರೆ ಬೇರೆ ವಿಧದ  ಗೊಂಬೆಗಳನ್ನು ತಯಾರಿಸಿ ಪಾಠಕ್ಕೆ ಬಳಸಬಹುದು. ವಿಶೇಷವಾಗಿ, ವಿಜ್ಞಾನಿಗಳ ಜೀವನ ಚರಿತ್ರಯನ್ನು ವಿವರಿಸಲು ಈ ಗೊಂಬೆಗಳು ಅತ್ಯಂತ ಸೂಕ್ತ.  ಇವುಗಳನ್ನು ನಿಂತುಕೊಂಡು ಆಡಿಸಬೇಕು. ನಿಂತಾಗ ಯಾರೂ ಕಾಣದಂತೆ ಕಪ್ಪು ಬಟ್ಟೆಯಿಂದ ವೇದಿಕೆ ಮಾಡಿಕೊಂಡರೆ ಉತ್ತಮ. 

















2 comments:

  1. ಗೊಂಬೆಗಳನ್ನು ಉಪಯೋಗಿಸಿ ಪಾಠ ಮಾಡುವುದರಿಂದ ಮಕ್ಕಳಿಗೆ ಕಲಿಸಿದ ಪಾಠಗಳ ನೇನಪು ಉಳಿಯುತ್ತದೆ. ಆದರಿಂದ ನಿಮ್ಮ ಅಭಿಪ್ರಾಯ ಸರೀಯಾಗೀದೆ.

    ReplyDelete
  2. Very beautiful work 😍👏🏼👏🏼👏🏼

    ReplyDelete