Sunday, June 5, 2022

ಸವಿಜ್ಞಾನ ಪದಬಂಧ-6

ಸವಿಜ್ಞಾನ ಪದಬಂಧ-6

ರಚನೆ: ವಿಜಯಕುಮಾರ್ ಹುತ್ತನಹಳ್ಳಿ 

“ಗುರುತ್ವ” ಪಾಠದಿಂದ ಆರಿಸಿದ ಪದಗಳು


ಸೂಚನೆಗಳು:

ಎಡದಿಂದ ಬಲಕ್ಕೆ;

1. ಪ್ರಯೋಗವಾಗುವ ಬಲದ ಪರಿಮಾಣ ಒಂದೇ ಇದ್ದರೂ ಪರಿಣಾಮ ಬೇರೆಯಾಗಲು ಇದು ಕಾರಣ (3)

2. ಕೇವಲ ಗುರುತ್ವ ವೇಗೋತ್ಕರ್ಷವನ್ನು ಅನುಭವಿಸುತ್ತಾ ಮೇಲಿನಿಂದ ಕೆಳಗೆ ಬೀಳುವುದು (6)

3. ರಾಶಿಯ ಮೇಲೆ ಗುರುತ್ವಾಕರ್ಷಣೆ (2)

4. g = 9.8 ms-2 ಈ ಬೆಲೆ ಇದರದ್ದು (8)

5. ಜವ ಕ್ಕೆ ಇಲ್ಲದ್ದು , ವೇಗಕ್ಕೆ ಇರುವುದು (2)

6. ಭೂಮಿಯ ಸುತ್ತಾ ಚಂದ್ರನ ಸುತ್ತುವಿಕೆಗೆ ಕಾರಣವಾದ ಬಲ (7)

7. ದ್ರವಗಳ ಸಾಂದ್ರತೆಯನ್ನು ಕಂಡುಹಿಡಿಯುವ ಸಾಧನ (5)

8. ಒಂದು ವಸ್ತುವಿನ ಮೇಲ್ಮೈಗೆ ಲಂಬವಾಗಿ ವರ್ತಿಸುವ ಬಲ (4)

ಮೇಲಿನಿಂದ ಕೆಳಕ್ಕೆ; 
1. ಎಲ್ಲೆಲ್ಲಿಯೂ ಕಂಡುಬರುವ ಗುರುತ್ವ ಬಲವನ್ನು ಹೀಗೆ ಹೇಳುವರು (4)

2. ಉಬ್ಬರಕ್ಕೊಳಗಾದ ಸಮುದ್ರ ನಂತರ ಇದಕ್ಕೆ ಒಳಗಾಗಲೇಬೇಕು (3)

3. ನ್ಯೂಟನ್‌ ವಿಜ್ಞಾನಿಯ ಹೆಸರೊಂದೇ ಅಲ್ಲ ಇದೂ ಹೌದು (4)

4. ಸಮುದ್ರದ ಉಬ್ಬರಗಳಿಗೆ ಕಾರಣವಾದ ಬಲ (8)

5. ತೂಕ, ವೇಗ, ಸಂವೇಗ, ವೇಗೋತ್ಕರ್ಷ ಈ ಭೌತಿಕ ಪರಿಮಾಣಗಳನ್ನು ಹೀಗೆನ್ನುವರು (7)

6. ವೃತ್ತಾಕಾರದ ಚಲನೆಯಲ್ಲಿ ಕೇಂದ್ರದಿಂದ ಹೊರಗೆ ವರ್ತಿಸುವ ಬಲ (7)

7. ಆರ್ಕಿಮಿಡೀಸನ ತತ್ವವನ್ನಾಧರಿಸಿ ಹಾಲಿನ ಸಾಂದ್ರತೆ ಕಂಡುಹಿಡಿಯುವ ಸಾಧನ (5)

ವಿಶೇಷ ಸೂಚನೆ: 
ಈ ಪದಬಂಧಕ್ಕೆ ಸರಿಯಾಗಿ ಉತ್ತರಿಸಿದ ಮೊದಲ 10 ಜನರ ಹೆಸರುಗಳನ್ನು ಭಾವಚಿತ್ರ ಸಹಿತ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಉತ್ತರಗಳನ್ನು ಕಮೆಂಟ್‌ ಮಾಡಿ ಅಥವಾ ಇ-ಮೇಲ್‌ ಮಾಡಿ.

ಮೇ ತಿಂಗಳ ಪದಬಂಧದ ಉತ್ತರಗಳು 



2 comments:

  1. interesting crossword....
    helpful to be used during revisions also..
    efforts are admirable sir.

    ReplyDelete