Thursday, August 4, 2022

ಮೈಕೊಡವಿಯೆದ್ದಳು ಕ್ಷಮಯಾ ಧರಿತ್ರಿ ಭೀಭತ್ಸ ರೌದ್ರ ಕಾಲ ರಾತ್ರಿ……

ಮೈಕೊಡವಿಯೆದ್ದಳು ಕ್ಷಮಯಾ ಧರಿತ್ರಿ ಭೀಭತ್ಸ ರೌದ್ರ ಕಾಲ ರಾತ್ರಿ……

ಡಾ. ಸಂಧ್ಯಾ ಡಿ.ಎನ್.

ಹಸಿರೇ ಹಸಿರಿತ್ತು ಒಂದೊಮ್ಮೆ
ವನಸಿರಿ, ಸವಿಝರಿ
ಪುಲಕಿತ, ಸಂತುಲಿತ
ವನ,
ಅಭಯದ ಸಂಕೇತ.

ಸುತ್ತೆಲ್ಲ ಜೀರುಂಡೆಗಳ ಝೇಂಕಾರ,
ಹಕ್ಕಿಗಳ ಕಲರವದ ಓಂಕಾರ
ಎಲೆ, ಹೂ, ಹಣ್ಣುಗಳ ಭಾರಕ್ಕೆ ಬಾಗಿದ ಮರ
ಕಣ್ಣೆರಡು ಸಾಲದು, ಎಲ್ಲವೂ ಸುಂದರ.

ಮನಕೆ ತಂಪಾಗಿತ್ತು, ಕಿವಿಗೆ ಇಂಪಾಗಿತ್ತು
ನಾಸಿಕಕೆ ಮಧುರ ಕಂಪು, ಹೃದಯವೇ ಮೇಳೈಸಿತ್ತು
ಕಣ್ಣಿಗೆ ಹಸಿರು, ಮೃಗ,ಖಗ, ಸೂಕ್ಷ್ಮಾಣು
ವಿಹಂಗಮ-ವಿಸ್ಮಯ ಪ್ರಕೃತಿಯ ಸೊಗಸು
ಸೊಬಗಿನಾಟ

ಆರಂಭವಾಯ್ತು ತೊಳಲಾಟ…………
ಓ ಮನುಜ
ನಿನ್ನ ಚೆಲ್ಲಾಟ, ನಿಸರ್ಗ ಮಾತೆಗೆ ಸಂಕಟ
ಬೂದಿಯನೆರಚುತ ಮಾಡಿಹೆ ಮಾಟ
ಜನ-ಜಂಗುಳಿ, ತಂತ್ರಜ್ಞಾನದ ಹೂಟ,
ದುಷ್ಟ, ದಾರ್ಷ್ಟ್ಯ ಮನ ಪಳಗಿದ ಕೂಟ
ಆಯಿತು ಪ್ರತಿ ಕ್ಷಣ, ಸಂಕಟದೂಟ
ಬಿರು ಬಿಸಿಲು-ಚಳಿ-ಅತಿ ಮಳೆ ಹೊಯ್ದಾಟ.

ಅವಗೆಂಪು, ಅತಿ ನೇರಳೆ ಪ್ರಸರಣ,
ಭುವಿಯನು ಸುಡುವ ಉರಿ ಕಿರಣ,
ಹೊತ್ತಿ ಉರಿಯಿತು ಭೂರಮೆ ಚರಣ
ಬರಡಾಯಿತು ಇಳೆ, ಮಣ ಮಣ, ಭಣ ಭಣ.

ಕಣ್ಣಿಗೆ ಕಾಣದ ಅಣು, ಪರಮಾಣು-ಸೂಕ್ಷ್ಮಾಣು ಕರೋನಾ
ಭುಗಿಲೆದ್ದ ಕ್ಷಣ
ರುದ್ರನ ರೌದ್ರ ತಾಂಡವ ಕಣಾ
ಗಿಡ ಮರಗಳ ತರಗೆಲೆಗಳ ಹಾಗೆ
ಉದುರುದುರುದುರಿದವು
ಇಳೆಯ ಮೇಲೆ ರಾಶಿ,ರಾಶಿ ಹೆಣ
ಎಂದುದಯಿಸುವುದೋ ಆಶಾ ಕಿರಣ ?

ಧರೆಯ ಮೇಲೆ ಇದೆಂತಹ ಛಾಯೆ?
ಬರಿಗಣ್ಣಿಗೆ ಕಾಣದ ಮಾಯೆ
ಉಳಿ-ಸುಳಿಯಾಗಿ ಶಸ್ತ್ರವ ಬೀಸಿ
ಸಂಕಟ ಸೂಸಿ,
ಗಾಳಿ, ನೀರು, ಮಣ್ಣಲೂ ಹಾಸಿ
ತನ್ನದೇ ನಿಜ ಬಣ್ಣವ ಮೆರೆಸಿ, ಮರೆಸಿ
ಜನರೆದೆ ನಡುಗಿಸಿ, ವಿಶ್ವವ ವ್ಯಾಪಿಸಿ……….

ಪ್ರಕೃತಿಯ ಮಡಿಲಲಿ ಸುಂದರ ಬದುಕು
ಧಿಕ್ಕರಿಸಿದೊಡೆ ನಿಲ್ಲದು ಬದುಕು
ಸೂಕ್ಷ್ಮಾತಿಸೂಕ್ಷ್ಮ ಜೀವದ ಬದುಕೂ
ಮನುಜನ ಬದುಕೂ
ಅದಕೂ ಇದಕೂ ಎಲ್ಲದಕೂ
ಒಂದಕ್ಕೊಂದು ಬೆಸೆದಿದೆ
ಕಾಣೋ.

10 comments:

  1. ತುಂಬಾ ಚೆನಾಗಿದೆ...
    ಸಾಲುಗಳು ಅದ್ಭುತವಾಗಿವೆ.

    ReplyDelete
  2. ಪ್ರಕೃತಿಯ ಮಡಿಲಲ್ಲಿ ವಿವರಣೆ ಬಹಳ ಸೊಗಸಾಗಿ ಮೂಡಿಬಂದಿದೆ...
    ಧನ್ಯವಾದಗಳು, Dr. ಸಂದ್ಯ

    ReplyDelete
  3. ಪ್ರಕೃತಿಯ ವಿಕೋಪ, ಮನುಕುಲಕ್ಕೆ ಎಚ್ಚರಿಕೆ ಕುರಿತು ವಿವರವಾಗಿ ತಿಳಿಸಿದ್ದೀರ ಮೇಡಂ. Very meaningful words.🙏🙏

    ReplyDelete
  4. All lines are more beautiful and meaningful Mam.best of luck and healthy life Mam

    ReplyDelete
  5. ಪ್ರಕೃತಿ ಮತ್ತು ಮಾನವನ ಬದುಕಿನ ಸಂಬಂಧವನ್ನು ಚೊಕ್ಕವಾಗಿ ಚಿತ್ರಿಸಿದ್ದೀರಿ , ಎಚ್ಚರಿಸಿದ್ದೀರಿ ,ಬಳಲಾಟ ತೊಳಲಾಟವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದೀರಿ.... ಚೆನ್ನಾಗಿದೆ ಕವಿತೆ ಪ್ರಾಸದ ತ್ರಾಸ್ ತಗೊಂಡಿರಿ.

    ReplyDelete
  6. Creating own words is most talented character and you made it awesome ma'am happy to read nature love never dies very all the best ma'am ✨️

    ReplyDelete
  7. ಪ್ರಕೃತಿಯ ವಿರುದ್ಧ ಹೋದಾಗ ಉಂಟಾಗುವ ಭೀಕರ ದುಷ್ಪರಿಣಾಮಗಳು ಎಚ್ಚರಿಕೆಯ ಗಂಟೆಯಂತೆ ಅದ್ಭುತವಾದ ಸಾಲುಗಳಲ್ಲಿ ಮೂಡಿಬಂದಿದೆ.👌🏼👌🏼

    ReplyDelete