Friday, November 4, 2022

ಕೈ ತೊಳೆ, ಅದೇ ಆರೋಗ್ಯ ಕಳೆ

 ಕೈ ತೊಳೆ, ಅದೇ ಆರೋಗ್ಯ ಕಳೆ

ಲೇಖಕರು : ರಮೇಶ, ವಿ,ಬಳ್ಳಾ 

ಅಧ್ಯಾಪಕರು

ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು            

 (ಪ್ರೌಢ) ಗುಳೇದಗುಡ್ಡ  ಜಿ: ಬಾಗಲಕೋಟ   

ಕೋವಿಡ್ ನಮಗೆ ಮರೆಯದಂತಹ ಬದುಕಿನ ಪಾಠವನ್ನು ಕಲಿಸಿಕೊಟ್ಟಿದೆ. ದೈನಂದಿನ ಬದುಕಿನಲ್ಲಿ ಶುಚಿತ್ವದ ಮಹತ್ವ ಈಗ ಎಲ್ಲರಿಗೂ ಅರಿವಾಗಿದೆ. ಕೈ ತೊಳೆಯುವುದರ ಮೂಲಕ ಸಾಕಷ್ಟು ರೋಗಗಳನ್ನು ದೂರವಿಡಬಹುದು ಎನ್ನುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಶಾಲೆಗಳಲ್ಲಿ ಆಚರಿಸುವ ಕೈ ತೊಳೆಯುವ ದಿನಾಚರಣೆಯ ಮಹತ್ವವನ್ನು ಐತಿಹಾಸಿಕ ಘಟನೆಗಳೊಂದಿಗೆ  ತಮ್ಮ ಮುಂದೆ ಇಟ್ಟಿದ್ದಾರೆ ಲೇಖಕರಾದ ಲೇಖಕರಾದ ರಮೇಶ್ ವಿ.ಬಳ್ಳಾ  ಅವರು.

       ಶಾಲೆಗಳಿಗೆ ದಸರಾ ರಜೆಯ ಸಮಯ. ಆ ಹೊತ್ತಲ್ಲಿ ಶಿಕ್ಷಣ ಇಲಾಖೆಯಿಂದ ಒಂದು ಆದೇಶವಾಗುತ್ತದೆ. ನಮ್ಮ ಮುಖ್ಯೋಪಾಧ್ಯಾಯರು ಯಥಾರೀತಿ ನಮ್ಮೆಲ್ಲ ಶಿಕ್ಷಕರಿಗೂ ಆ ಆದೇಶದ ಪ್ರತಿಯನ್ನು ರವಾನಿಸುತ್ತಾರೆ. ಇದೇನಿದು ರಜೆಯಲ್ಲೂ ಇದೆಂತಾ ಆದೇಶ ಅಂತಾ ನೋಡಿ ಕೆಲವರಾದರೂ ಗೊಣಗಿದರೆಮತ್ತೆ ಕೆಲವರು ಸುಮ್ಮನಿದ್ದು ಮನಸ್ಸಲ್ಲೇ ಯೋಚಿಸÀದೇ ಇರಲಾರರು. ಆ ಕ್ಷಣಕ್ಕೆ ಅದು ಹಾಗನ್ನಿಸಿದರೂ ಆದೇಶವನ್ನು ಪೂರ್ತಿ ಓದಿದಾಗ ನಿಜಕ್ಕೂ ಅದರ ಮಹತ್ವ ಅರ್ಥವಾಗಿ ಎಲ್ಲರೂ ಕೈ ಜೋಡಿಸಿದರು. ಹಾಗೇ ಕೈ ಜೋಡಿಸಿದ್ದು ಮತ್ತಾವುದಕ್ಕು ಅಲ್ಲಕೈತೊಳೆಯುವ ಮಹತ್ಕಾರ್ಯಕ್ಕೆ. ಏನು ಕೈ ತೊಳೆಯುವುದೆ ! ಇದರಲ್ಲೇನು ವಿಶೇಷ ಅಂತೀರಾ,,,? ಹೌದುಅದು ಅಕ್ಟೋಬರ್ ಎರಡನೇ ವಾರಆ ಆದೇಶದಲ್ಲಿದ್ದದ್ದು ವಿಶ್ವ ಕೈತೊಳೆಯುವ ದಿನಾಚರಣೆಯ ಕುರಿತಾಗಿದ್ದು. ಶಾಲೆಗಳಲ್ಲಿನ ಮಕ್ಕಳಿಗೆ ಕೈ ತೊಳೆಯುವದರ ಮಹತ್ವ ತಿಳಿಸಿ ಆರೋಗ್ಯದಿಂದಿರಲು ತಿಳಿಸುವ ಮೂಲಕ ಸ್ವಸ್ತ ಸಮಾಜದ ನಿರ್ಮಾಣಕ್ಕೆ ಎಲ್ಲ ಶಿಕ್ಷಕರು ಸಹಕರಿಸುವಂತೆ ಆದೇಶದಲ್ಲಿ ತಿಳಿಸಲಾಗಿತ್ತು.

ನಿಜ ! ಆರೋಗ್ಯ ಎಂದರೆ ಬರೀ ಉತ್ತಮ ಆಹಾರ, ನೀರು, ನಿದ್ದೆ, ವಿಶ್ರಾಂತಿ ಮಾತ್ರವಲ್ಲ. ನಮ್ಮ ಬದುಕಿನ ದಿನನಿತ್ಯದ ಕೆಲ ಕಾರ್ಯಚಟುವಟಿಕೆಗಳು, ರೂಢಿಗತ ಅಭ್ಯಾಸಗಳು ಸಹ ಆಗಿವೆ. ಉತ್ತಮ ಆರೋಗ್ಯಕ್ಕಾಗಿಯೇ ಕೆಲವರು ದಿನ ನಿತ್ಯ ವ್ಯಾಯಾಮ, ಯೋಗ, ಧ್ಯಾನ, ಆಟೋಟ ಇತ್ಯಾದಿ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಅದರಂತೆಯೇ ಸರಿಯಾಗಿ ಹಲ್ಲುಜ್ಜುವುವದು, ನಿತ್ಯಸ್ನಾನ,  ಬೆಳೆದ ಉಗುರು ಕೂದಲು  ಕತ್ತರಿಸುವುದು, ಕೈ ತೊಳೆಯುವುದು ಇವೆಲ್ಲ ಕೂಡ ಉತ್ತಮ ಆರೋಗ್ಯಕರ ಅಭ್ಯಾಸಗಳು. ಅದರಲ್ಲಿ ಸ್ವಚ್ಛವಾಗಿ ಕೈತೊಳೆಯುವುದು ಒಂದು ಅತ್ಯಂತ ಮಹತ್ವದ ಅಭ್ಯಾಸವಾಗಿದ್ದರಿಂದಲೇ ಅದರ ಮಹತ್ವ ತಿಳಿಸುವುದಕ್ಕೊಸ್ಕರ, ಜನರನ್ನು ಪ್ರೇರೇಪಿಸುವುದಕ್ಕೊಸ್ಕರ ಪ್ರತಿ ವರ್ಷ ಅಕ್ಟೋಬರ್ ೧೫ ರಂದು ವಿಶ್ವ ಕೈತೊಳೆಯುವ ದಿನವನ್ನು ಆಚರಿಸಲಾಗುತ್ತದೆ.

೨೦೨೨ ರ ಜಾಗತಿಕ ಕೈತೊಳೆಯುವ ದಿನದ ಥೀಮ್ ‘ಸಾರ್ವತ್ರಿಕ ಕೈ ಸ್ವಚ್ಛತೆಗಾಗಿ ಒಗ್ಗೂಡಿ’ಎಂಬುದಾಗಿದೆ. ಈ ಕಾರ್ಯ ಅಭಿಯಾನವನ್ನು ಮೊತ್ತಮೊದಲ ಬಾರಿಗೆ ೨೦೦೮ರಲ್ಲಿ ಜಾಗತಿಕ ಕೈತೊಳೆಯುವ ಪಾಲುದಾರಿಕೆ ಒಕ್ಕೂಟ (GHP) ಪ್ರಾರಂಭಿಸಿತು. ಇದು ಜನರಲ್ಲಿ ಸಾಬೂನು ಹಾಗೂ ಸೂಕ್ತ ಹ್ಯಾಂಡ್‌ವಾಶ್ ಬಳಸಿ ಕೈತೊಳೆಯುವದನ್ನು ಉತ್ತೇಜಿಸಲು ಅಂತರಾಷ್ಟ್ರೀಯ  ಮಟ್ಟದಲ್ಲಿ ಮಧ್ಯಸ್ಥಿಕೆ ವಹಿಸುವ ಕಾರ್ಯಕೂಟವಾಗಿದ್ದು, ಪ್ರಪಂಚದಾದ್ಯಂತ ೭೦ಕ್ಕೂ ಹೆಚ್ಚು ದೇಶಗಳ ೧೨೦ ಮಿಲಿಯನ್ ಮಕ್ಕಳು ಅಂದು ಸಾಬೂನಿನಿಂದ ಕೈತೊಳೆಯುವ ಮೂಲಕ ಈ ಅಭಿಯಾನವನ್ನು ಯಶಸ್ವಿಗೊಳಿಸಿದರು. ಪ್ರಸ್ತುತ ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಸಮುದಾಯವೆಲ್ಲ ಒಗ್ಗೂಡಿ ಈ ದಿಶೆಯಲ್ಲಿ ಕೆಲಸ ಮಾಡಲು ಕರೆ ಕೊಟ್ಟಿದೆ. ಶಾಲಾ ಕಾಲೇಜು, ಆರೋಗ್ಯ ಸಂಘಟನೆಗಳು, ಸರ್ಕಾರ, ಸ್ವಯಂಸೇವಾ ಸಂಸ್ಥೆಗಳು ಮುಂಚೂಣಿಯಲ್ಲಿ ನಿಂತು ಈ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಕಾರ್ಯಗತಗೊಳಿಸುತ್ತಿವೆ.

ಕೈ ಯಾಕೆ ತೊಳೆಯಬೇಕೆಂಬುದನ್ನು ಸದ್ಯದ ದಿನಮಾನಗಳಲ್ಲಿ ಯಾರೂ ಪ್ರಶ್ನಿಸಲಾರರು. ಏಕೆಂದರೆ ಅದರ ಮಹತ್ವ ಏನು ಎಂಬುದನ್ನು ಇತ್ತೀಚಿನ ಕೊರೋ£ ಸಾಂಕ್ರಾಮಿಕ ಸ್ಪಷ್ಟವಾಗಿ ಜಗತ್ತಿನಾದ್ಯಂತ ಎಲ್ಲರಿಗೂ ಪಾಠ ಕಲಿಸಿದೆ. ಆದರೂ ನಮ್ಮ ದಿನನಿತ್ಯದ ಧಾವಂತದ ಬದುಕಿನಲ್ಲಿ ಕೈ ಯಾಕೆ ತೊಳೆಯಬೇಕು? ಕ್ರಮಬದ್ಧವಾಗಿ ಕೈತೊಳೆಯುವುದು ಹೇಗೆ ಎಂಬುದೇ ಬಹುತೇಕರಿಗೆ ತಿಳಿದಿರುವುದಿಲ್ಲ. ಕೇವಲ ಕೈ ತೊಳೆಯಬೇಕು ಅಷ್ಟೇ ತೊಳೆಯುತ್ತೇವೆ. ಆದರೆ ಅದು ಹಾಗಲ್ಲ. ಅದಕ್ಕೊಂದು ಉದ್ದೇಶ ಕ್ರಮಬದ್ಧತೆ ಇದೆ, ನಿರ್ಧಿಷ್ಟ ರೀತಿಯ ವಿಧಾನಗಳಿವೆ. ಅವುಗಳ ತಿಳುವಳಿಕೆ ಬರಬೇಕು. ಹಾಗೇ ಕೈ ತೊಳೆಯಬೇಕು. ಅಂದಾಗ ಅದು ಆರೋಗ್ಯಕರ ಕೈ ತೊಳೆಯುವ ಅಭ್ಯಾಸವಾಗುತ್ತದೆ.

ಕೈ ಯಾಕೆ ತೊಳೆಯಬೇಕು ?

ಈ ಪ್ರಶ್ನಗೆ ಉತ್ತರ ತಿಳಿಯುವ ಮುನ್ನ ‘ಟೈಪಾಯ್ಡ್ ಮೇರಿ’ಯನ್ನು ನೆನಪಿಸುತ್ತೇನೆ. ಇವಳು ವೈದ್ಯಕೀಯ ಜಗತ್ತಿನ ಇತಿಹಾಸದಲ್ಲಿ ದಾಖಲಾದವಳು. ಇವಳು ಮೂಲತಃ ಒಬ್ಬ ಅಡುಗೆಯವಳು, ೧೯೦೦ರ ಹೊತ್ತಿನಲ್ಲಿ ಕೆಲಸಕ್ಕೆ ಸೇರಿದ ಶ್ರೀಮಂತರ ಮನೆಯ ಸದಸ್ಯರಿಗೆ ವಿಷಮಶೀತ ಜ್ವರ (ಟೈಪಾಯ್ಡ್)ದ ಸೊಂಕು ಹರಡಿಸಿದವಳು. ಅವರಲ್ಲಿ ಕೆಲವರ ಸಾವಿಗೂ ಕಾರಣಳಾದವಳು. ಇದರ ಪರಿಣಾಮ ಅತ್ಯಂತ ದೀರ್ಘಕಾಲದ ಅಂದರೆ ೨೬ ವರ್ಷಗಳ ಕಾಲ ಬದುಕಿನಲ್ಲಿ ಏಕಾಂತ ಶಿಕ್ಷೆ ಅನುಭವಿಸದಳು. ಕಾರಣ ಅವಳು ಮಲ ವಿಸರ್ಜನೆಯ ನಂತರದಲ್ಲಿ ಸರಿಯಾಗಿ ಕೈ ತೊಳೆಯದೇ ಇದ್ದುದು. ಆ ಮೂಲಕ ರೋಗಕಾರಕ ಬ್ಯಾಕ್ಟೇರಿಯಾಗಳನ್ನು ಸಾಂಕ್ರಾಮಿಕವಾಗಿ ಬಹು ಜನರಿಗೆ ಹರಡಿದಳು ಎಂಬುದು ತಜ್ಞರಿಂದ ಸಾಬೀತಾಯಿತು. ಅರಿವಿಲ್ಲದ ಅಂತಹ ತಪ್ಪಿನಿಂದ ಮೇರಿ ಮ್ಯಾಲನ್, ಟೈಪಾಯ್ಡ್ ಮೇರಿಯಾದ ದುರಂತ ಕಥೆ ನಮ್ಮ ಮುಂದಿದೆ. ಇದನ್ನು ತಿಳಿಯುತ್ತಲೇ ಕೈ ಯಾಕೆ ತೊಳೆಯಬೇಕೆಂಬುದು ಹೊಳೆಯುತ್ತದೆ.

             ಹಾನಿಕಾರಕ ಸೂಕ್ಷ್ಮ ಜೀವಿಗಳಿಂದ ಸೊಂಕು ಹರಡದಿರಲು

             ಅತಿಸಾರ ಹಾಗೂ ಉಸಿರಾಟದ ಸೊಂಕುದತಹ ಕಾಯಿಲೆಗಳಿಂದ ಮುಕ್ತವಾಗಿರಲು

             ವೈದ್ಯರು, ಆರೋಗ್ಯ ಕಾರ್ಯಕರ್ತರು ಇತರರಿಗೆ ರೋಗ ಬರದಂತೆ ತಡೆಯಲು

             ಆಹಾರನೀರುತಿಂಡಿ ತಿನಿಸು ಸೊಂಕುಮುಕ್ತವಾಗಿರಲು

             ಕೊವಿಡ್-೧೯, ಸಾರ್ಸ್ನಂತಹ ಸಾಂಕ್ರಾಮಿಕದಿದ ಪಾರಾಗಲು ಹಾಗೂ ಜೀವ ಉಳಿಸಲು

             ವೈಯಕ್ತಿಕ ಆರೋಗ್ಯ ಮಾತ್ರವಲ್ಲದೇ, ಇನ್ನೋಬ್ಬರಿಗೆ ರೋಗ ಹರಡದಿರಲು

             ಶಾಲಾ ಮಕ್ಕಳ ದೇಹಾರೋಗ್ಯದ ಸದೃಢತೆ ಹಾಗೂ ಹಾಜರಾತಿ ಹೆಚ್ಚಳಕ್ಕಾಗಿ

             ಸ್ವಸ್ಥ ಆರೋಗ್ಯಯುತ ಸಮಾಜ,ಸಮುದಾಯ ನಿರ್ಮಾಣಕ್ಕಾಗಿ

         ಈ ಎಲ್ಲ ಕಾರಣಗಳಿಗಾಗಿ ನಾವು ನೀವೆಲ್ಲ ಸಾಬೂನಿನಿಂದ, ಹ್ಯಾಂಡ್‌ವಾಶ್‌ನಿAದ ಕೈಯನ್ನು ತೊಳೆಯಲೇಬೇಕು. ನರ‍್ದಿüðಷ್ಟ ಸಮಯಗಳಲ್ಲಿ ಆ ಬಗ್ಗೆ ನಾವು ಜಾಗೃತಿವಹಿಸಿ ಮುನ್ನಡೆಯಬೇಕು. ಈ ಅಭ್ಯಾಸವನ್ನು ಚಾಚು ತಪ್ಪದೇ ಪಾಲಿಸಿದಾಗ ಸಾಮುದಾಯಿಕ ಆರೋಗ್ಯ ವೃದ್ಧಿಸುತ್ತದೆ. ಹಾಗಾಗಿ ಚೆನ್ನಾಗಿ ಕೈ ತೊಳೆದುಕೊಳ್ಳುವ ಅಭ್ಯಾಸ ಕ್ರಮಬದ್ಧವಾಗಿ ಮಾಡಬೇಕಾಗುತ್ತದೆ.

ಕ್ರಮಬದ್ಧ ಕೈ ತೊಳೆಯುವುದು ಹೇಗೆ ?

ಕೈ ಸ್ವಚ್ಛಗೊಳಿಸಿಕೊಳ್ಳುವ ಬಗ್ಗೆ ರೋಗ ನಿಯಂತ್ರಣ ಹಾಗೂ ಮುಂಜಾಗೃತೆ ಕೇಂದ್ರ (center for disease control and prevention) ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಕೆಲ ನರ‍್ದಿüðಷ್ಟ ಹಂತಗಳಲ್ಲಿ ವಿಧಾನಗಳನ್ನು ತಿಳಿಸಿದೆ. ಅವುಗಳು ನರ‍್ದೇಶಿಸಿದಂತೆ ಮಕ್ಕಳಲ್ಲಿ, ನಾಗರಿಕರಲ್ಲಿ ಕೈ ತೊಳೆಯುವ ಕ್ರಮಗಳನ್ನು ಪಾಲಿಸಲು ಪ್ರೇರೇಪಿಸಬೇಕು.

             ನಲ್ಲಿಯಲ್ಲಿ ಬೀಳುವ ನೀರಿ (raising water) ನಿಂದ ಕೈಗಳನ್ನು ಮೊದಲು ತೋಯಿಸಿ ಒದ್ದೆ ಮಾಡಬೇಕು

             ಕೈನ ಎಲ್ಲಾ ಭಾಗಕ್ಕೂ ಅಂದರೆ ಮಣಿಕಟ್ಟಿನ(wrist)ವರೆಗೂ ಸಾಬೂನಿನ ನೊರೆಯನ್ನು ಅಂಟಿಸಬೇಕು.

             ಕೈಗಳನ್ನು ಸರಿಯಾಗಿ ಎಲ್ಲಾ ಭಾಗ ಒಳಗೊಂಡoತೆ ಅಂದರೆ ಉಗುರು, ಹಸ್ತ, ಬೆರಳ ತುದಿ, ಸಂದುಗಳನ್ನು ಚೆನ್ನಾಗಿ ಉಜ್ಜಬೇಕು.

             ಕೈಗಳನ್ನು  ಹಾಗೂ ಹಸ್ತಗಳನ್ನು ಕನಿಷ್ಠ ೨೦ ಸೆಕೆಂಡುಗಳ ಕಾಲ ಸರಿಯಾಗಿ ಉಜ್ಜಬೇಕು.

             ನಂತರ ಸಾಬೂನು ನೊರೆಯ ಕೈಗಳನ್ನು ಮತ್ತೇ ಬೀಳುವ ನೀರಿಂದ ಚೆನ್ನಾಗಿ ಎಲ್ಲ ಭಾಗಗಳನ್ನು ತೊಳೆಯಬೇಕು.

             ತೊಳೆದ ಕೈಗಳನ್ನು ಟವೆಲ್ ಅಥವಾ ಗಾಳಿ ಮೂಲಕ ಒಣಗಿಸಬೇಕು.

ಹೀಗೆ ಕ್ರಮಬದ್ಧವಾದ ಕೈ ಸ್ವಚ್ಛತಾ ಹಂತಗಳನ್ನು ಪಾಲಿಸಬೇಕು. ಅಂದಾಗ ಮಾತ್ರ ಎಲ್ಲರೂ ರೋಗಮುಕ್ತವಾಗಿರಲು ಸಾಧ್ಯ.

           ಈ ಸ್ವಚ್ಛತೆಯ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ನನಗೆ ನೆನಪಾಗುವುದು ಇದಕ್ಕೆ ಸಂಬoಧಿಸಿದ ಮತ್ತೊಂದು ಘಟನೆ ವೈದ್ಯರದ್ದು. ಈ ಡಾಕ್ಟರ್‌ರು ಎಂದರೆ ಸ್ವಚ್ಛತೆ, ಆರೋಗ್ಯ ಎಲ್ಲವೂ ಆಗಿರುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ೧೮ನೇ ಶತಮಾನದ ಪ್ರಾರಂಭದ ದಿನಮಾನಗಳಲ್ಲಿ ಶಸ್ತçವೈದ್ಯರು ಶಸ್ತç ಚಿಕಿತ್ಸೆ ನಂತರ ತಮ್ಮ ಕೈ ತೊಳೆದುಕೊಳ್ಳುವುದು ತಪ್ಪು ಎಂಬ ಭಾವನೆಯಲ್ಲಿದ್ದರಂತೆ. ಅಂದರೆ ಯಾವ ವೈದ್ಯರು ಹೆಚ್ಚು ಹೆಚ್ಚು ರಕ್ತಸಿಕ್ತ ಕೈಗಳನ್ನು ಹೊಂದಿರುತ್ತಿದ್ದರೋ ಅವರೇ ಶ್ರೇಷ್ಠ ವೈದ್ಯರೆಂಬುದು ಅಂದು ಪ್ರಚಲಿತದಲ್ಲಿತ್ತು. ಹಾಗಾಗಿ ಶಸ್ತç ಚಿಕಿತ್ಸೆ ನಂತರ ರಕ್ತವನ್ನು ಡಾಕ್ಟರರು ತಮ್ಮ ಬಟ್ಟೆ,ಕೋಟುಗಳಿಗೆ ಒರೆಸಿಕೊಳ್ಳುತ್ತಿದ್ದರಂತೆ. ಇದು ಹಲವು ಸಾವು ನೋವುಗಳ ಅವಾಂತರಕ್ಕೆ ಕಾರಣವಾಗುತ್ತಿದ್ದರೂ ಯಾರೂ ಆ ಬಗ್ಗೆ ಗಮನ ಹರಿಸಿದ್ದಿಲ್ಲ. ವೈದ್ಯರು ಕೈ ತೊಳೆಯದ ಕಾರಣದಿಂದಾಗುತ್ತಿದ್ದ ನಂಜು,ಸೊoಕು ಹರಡುವಿಕೆ ಈ ಬಗ್ಗೆ ಸತತ ಅಧ್ಯಯನ ಹಾಗೂ ಸಂಶೋಧನೆಯ ಮೂಲಕ ಅಂತ್ಯ ಹಾಡಿದ್ದು ಇಗ್ನಜ್ ಸೆಮ್ಮೆಲ್‌ವೀಸ್ ಎಂಬ ಜರ್ಮನಿಯ ವಿಯನ್ನ ಆಸ್ಪತ್ರೆಯ ವೈದ್ಯ. ಇತನನ್ನು ಮಾತೆಯರ ರಕ್ಷಕ ಎಂದು ಕರೆಯುವ ಮೂಲಕ ಕೈ ಸ್ವಚ್ಛತೆಯ ಮಂತ್ರ ಹೇಳಿದ ಮಹಾನುಭಾವನೆಂದು ಗುರುತಿಸಲಾಗುತ್ತದೆ.

ಕೈ ತೊಳೆಯುವ ದಿನದ ಅರ್ಥಪೂರ್ಣ ಆಚರಣೆ ನಿತ್ಯವೂ ಆಗಬೇಕು. ಅದು ಅಕ್ಟೋಬರ್ ೧೫ಕ್ಕೆ ಮಾತ್ರ ಸೀಮಿತವಾಗಬಾರದು. ಶಾಲಾ ಮಕ್ಕಳು ಎಲ್ಲರೂ ಸ್ವಸ್ಥ ಸಮಾಜಕ್ಕಾಗಿ ಕೈ ತೊಳೆಯುವುದರ ಮಹತ್ವ ಅರಿಯಬೇಕು. ಅದಕ್ಕಾಗಿ ನಾವೆಲ್ಲ ಒಗ್ಗೂಡಿ ಭವಿಷ್ಯದಲ್ಲಿ ಸಾಂಕ್ರಾಮಿಕಗಳಿoದ ದೂರ ಉಳಿಯಲು ಪಣ ತೊಡಬೇಕು. ಸ್ವಚ್ಚಕಾರಕಗಳನ್ನು ಬಳಸಿ ಕ್ರಮಬದ್ಧ ಅಭ್ಯಾಸಗಳ ಪಾಲನೆ ಮಾಡಬೇಕು. ಅಂದಾಗ ಆರೋಗ್ಯ ವೃದ್ಧಿಯಾಗುತ್ತದೆ. ಆ ಮೂಲಕ ನಾವೆಲ್ಲಾ ಕೈ ತೊಳೆದು ಆರೋಗ್ಯ ಕಳೆ ಹೊಂದಬೇಕು.

ಆಕರಗಳು: ದೈಹಿಕ ಸ್ವಚ್ಛತೆ – ಡಾ/ ನಾ ಸೋಮೇಶ್ವರ

ಮನುಕುಲ ಬೆಳಗಿದ  ೫೦ ವೈದ್ಯಕೀಯ ಸಂಶೋಧನೆಗಳು- ಡಾ/ ನಾ ಸೋಮೇಶ್ವರ

ಜಾಲತಾಣ 







1 comment:

  1. ಕೈ ಕಾಲು ತೊಳೆದುಕೊಳ್ಳುವುದು ಮತ್ತಿತರ ಸ್ವಚ್ಚತಾ ಕಾರ್ಯಕ್ರಮಗಳ ಬಗ್ಗೆ ಜಗತ್ತಿನ ಎಲ್ಲಾ ವರ್ಗದ ಜನರಿಗೆ ಪಾಠ ಕಲಿಸಿದ ಕೋವಿಡ್ ನ ಪಾತ್ರ ಮಹತ್ತರವಾದುದು. ಉತ್ತಮ ಲೇಖನ, ಧನ್ಯವಾದಗಳು ಸರ್.

    ReplyDelete