Wednesday, January 4, 2023

ಸಂಪಾದಕರ ಡೈರಿಯಿಂದ .....

 

ಸಂಪಾದಕರ ಡೈರಿಯಿಂದ .....

  ಹೊಸ ವರ್ಷ ಮತ್ತೆ  ಹೊಸ ಹಿಗ್ಗು ತಂದಿದೆ. ನಿಮ್ಮ ಪ್ರೀತಿ ಅಭಿಮಾನಗಳೊಂದಿಗೆ ಮುನ್ನಡೆಯುತ್ತಿರುವ ಸವಿಜ್ಞಾನ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಅಂಬೆಗಾಲಿಡುತ್ತಾ ನಾಡಿನ ವಿಜ್ಞಾನಾಸಕ್ತರನ್ನು ಹೆಚ್ಚು ಹೆಚ್ಚು ತಲುಪುವ ಗುರಿಯೊಂದಿಗೆ ಮುಂದೆ ಸಾಗುತ್ತಿದ್ದೇವೆ.   ಈ ಸುಸಂದರ್ಭದಲ್ಲಿ ‘ಸವಿಜ್ಞಾನ’ ತಂಡದ ಎಲ್ಲ ಸದಸ್ಯರಿಗೆ, ಸಹೃದಯಿ ಲೇಖಕರಿಗೆ ‘ ಹಾಗೂ ಅಭಿಮಾನಿ ಓದುಗರಿಗೆ  ನನ್ನ ಅನಂತ ನಮನಗಳು ಹಾಗೂ 2023ನೇ ಕ್ಯಾಲೆಂಡರ್‌ ವರ್ಷದ ಹಾರ್ದಿಕ ಶುಭಾಶಯಗಳು.


ನಿಮ್ಮ ಮಿದುಳಿಗೆ, ಮನಸ್ಸಿಗೆ ಕೊಂಚ ಮುದ ನೀಡಲು ‘ಸವಿಜ್ಞಾನ’ದ ಜನವರಿ ತಿಂಗಳ ಸಂಚಿಕೆ ವೈವಿಧ್ಯಮಯ ಲೇಖನಗಳೊಂದಿಗೆ ನಿಮ್ಮ
 ಮುಂದಿದೆ.                                                                                           

ಈ ಸಂಚಿಕೆಯ ಪ್ರಮುಖ ಆಕರ್ಷಣೆಯಾಗಿ, “ನಶಿಸುವ ಹಾದಿಯಲ್ಲಿ ವೈ ವರ್ಣತಂತು…” ಎಂಬ ಲೇಖನವನ್ನು ಸವಿಜ್ಞಾನದ ಪ್ರಧಾನ ಸಂಪಾದಕರಾದ ಡಾ. ಟಿ.ಎ. ಬಾಲಕೃಷ್ಣ ಅಡಿಗರು ಬರೆದಿದ್ದಾರೆ. ಇತ್ತೀಚಿಗಿನ ಸಂಶೋಧನೆಗಳನ್ನಾಧರಿಸಿದ ಈ ಲೇಖನ ನಮ್ಮ ಭವಿಷ್ಯದ ಬಗ್ಗೆ ಆಲೋಚಿಸುವಂತೆ ಮಾಡುತ್ತದೆ. “DNA ಅಣುವಿನ ವಿಷ್ಕಾರದ ಹಿಂದಿನ ಸತ್ಯ”- ರೋಸಲಿಂಡಾ ಫ್ರಾಂಕ್ಲಿನ್‌ ರವರ ಪಾತ್ರದ ಕುರಿತ ಕಹಿ ಸತ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ ಲೇಖಕ ಶಶಿಕುಮಾರ್‌ ಅವರು. “ಎದ್ದು ಬಂದನೇ ಹಿಮಮಾನವ?” ಎಂಬ ಲೇಖನದಲ್ಲಿ ಪಳೆಯುಳಿಕೆಯಿಂದ ಎದ್ದು ಬಂದ ಹಿಮ ಮಾನವನ ರೋಚಕ ಇತಿಹಾಸ ಘಟನೆಯನ್ನು ಬಿಚ್ಚಿಟ್ಟಿದ್ದಾರೆ ಲೇಖಕ ಶ್ರೀ ಸುರೇಶ ಸಂಕೃತಿ ಅವರು.  “ಕೇದಗೆ ವನದಾಗ,,,,.” ಲೇಖನದಲ್ಲಿ ಬಾಲ್ಯದ ನೆನಪುಗಳನ್ನು ಮೊಗೆಯುತ್ತಾ  ಕೇದಗೆಯ ಸುಗಂಧವನ್ನು ಹಬ್ಬಿಸಿದ್ದಾರೆ ಲೇಖಕ ರಮೇಶ, ವಿ, ಬಳ್ಳಾ ಅವರು. ಮಂಗಟ್ಟೆ : ಬದುಕಿಗೊಂದು ದಾರಿದೀಪ” ಲೇಖನದ ಮೂಲಕ ಪಕ್ಷಿಗಳಿಂದ ನಾವು ಕಲಿಯಬಹುದಾದ ನೈತಿಕತೆಯ ಪಾಠವನ್ನು ಸೋದಾಹರಣವಾಗಿ ವಿವರಿಸಿದ್ದಾರೆ ಲೇಖಕ ಕೃಷ್ಣಚೈತನ್ಯ ಅವರು. ಈ ಬಾರಿ ೩ನೇ ವರ್ಷಾಚರಣೆಯ ಪ್ರಯುಕ್ತ ವಿಸ್ಮಯ ವಿಜ್ಞಾನ ಎಂಬ ಹೊಸ ಸ್ಥಿರಶೀರ್ಷಿಕೆಯೊಂದನ್ನು ಆರಂಭಿಸುತ್ತಿದ್ದು, ಸ್ನೇಹಿತರಾದ ಶ್ರೀನಿವಾಸ್‌.ಎ. ತುಮಕೂರು ಅವರು ನಿರ್ವಹಿಸಿಕೊಡಲಿದ್ದಾರೆ.    

    ಇವೆಲ್ಲದರ ಜೊತೆಗೆ, ಎಂದಿನಂತೆ ಶಾಲೆಗಳಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಸಹಾಯಕವಾಗುವಂತೆ ಜನವರಿ ತಿಂಗಳಿನ ಪ್ರಮುಖ ದಿನಾಚರಣೆಗಳ ಬಗ್ಗೆ ಮಾಹಿತಿ ನೀಡಿದೆ. ವಿಜ್ಞಾನಕ್ಕೆ ಸಂಬಂಧಿಸಿದ ನಮ್ಮ ಸ್ಥಿರ ಅಂಕಣರಚನೆಯಗಳಾದ, ಪದಬಂಧ, ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳು ಎಂದಿನಂತೆ ನಿಮ್ಮನ್ನು ರಂಜಿಸಲಿವೆ. ಸಂಚಿಕೆಯ ಎಲ್ಲ ಲೇಖನಗಳನ್ನು ಹಾಗೂ ಅಂಕಣಗಳನ್ನು ಓದಿ, ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ಬ್ಲಾಗ್‌ನಲ್ಲಿ ದಾಖಲಿಸಿ. ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಲು ಓದುಗರಾಗಿ, ಲೇಖಕರಾಗಿ ನಮ್ಮೊಂದಿಗೆ ಕೈ ಜೋಡಿಸುವ ನಿರೀಕ್ಷೆಯೊಂದಿಗೆ  ವಂದನೆಗಳೊಂದಿಗೆ  

ರಾಮಚಂದ್ರಭಟ್‌ ಬಿ.ಜಿ.

ಸಂಪಾದಕರು 

( ಪ್ರಧಾನ ಸಂಪಾದಕರ ಪರವಾಗಿ )

No comments:

Post a Comment