Thursday, May 4, 2023

ಮೇ 02- ವಿಶ್ವ ಟ್ಯೂನ ದಿನ.

                         ಮೇ 02-ವಿಶ್ವ ಟ್ಯೂನ ದಿನ (World Tuna Fish Day)


  ಬಸವರಾಜ ಎಮ್ ಯರಗುಪ್ಪಿ 

ಬಿ ಆರ್ ಪಿ ಶಿರಹಟ್ಟಿ 

ಸಾ.ಪೊ ರಾಮಗೇರಿ. ತಾಲ್ಲೂಕು ಲಕ್ಷ್ಮೇಶ್ವರ.

ಜಿಲ್ಲಾ ಗದಗ. ದೂರವಾಣಿ 9742193758 

ಮಿಂಚಂಚೆ basu.ygp@gmail.com



    ಟ್ಯೂನ ಎನ್ನುವದು ಒಂದು ಜಾತಿಯ ದೊಡ್ಡ ಮೀನು. ಟ್ಯೂನ ಮೀನುಗಳು ಸ್ಕಾಂಬ್ರಿಡೇ ಕುಟುಂಬಕ್ಕೆ ಸೇರಿದ ಕಡಲ ನೀರಿನ ಮೀನುಗಳಾಗಿದ್ದು.ಇವು ಬಹುತೇಕವಾಗಿ ಥೂನಸ್ ಕುಲದಲ್ಲಿ ಕಂಡುಬರುತ್ತವೆ. ಟ್ಯೂನ ಮೀನುಗಳು ವೇಗದ ಈಜುಗಾರಿಕೆ ಅಳವಡಿಸಿಕೊಂಡಿವೆ. ಕೆಲವೊಂದು 70 km/h (43 mph)ನಷ್ಟು ವೇಗಗಳಲ್ಲಿ ಈಜುವಷ್ಟು ಸಮರ್ಥವಾಗಿವೆ. (Kingdom: Animalia ̧Class: Actinopterygii ̧Order: Scombriformes ̧   Family: Scombridae) .




#ವಿಶ್ವ ಟ್ಯೂನ ದಿನವನ್ನು ಏಕೆ ಆಚರಿಸಲಾಗುತ್ತದೆ? 

    ಟ್ಯೂನ ಮೀನುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮೇ 02 ರಂದು ಕರಾವಳಿ ವಲಯದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಆರಂಭಿಸುವ ಮೂಲಕ ಮೀನುಗಾರಿಕೆ ಸಮುದಾಯಗಳು, ವಿಜ್ಞಾನಿಗಳು ಮತ್ತು ಪರಿಸರವಾದಿಗಳ ಸಹಕಾರ ಎಂದೂ ಮರೆಯಲಾಗದು.ಅವರು ಪ್ರಪಂಚದಾದ್ಯಂತ ಟ್ಯೂನ  ರಕ್ಷಿಸಲು ಮತ್ತು ಮೀನುಗಾರಿಕೆಗೆ ಸಹಕಾರಿಯಾಯಿತು.

ಟ್ಯೂನ ಮೀನುಗಳು ಸಮುದ್ರಗಳಲ್ಲಿನ ಪ್ರಮುಖ ಮೀನುಗಳಲ್ಲಿ ಒಂದಾಗಿದೆ. ಗಾತ್ರ, ಶಕ್ತಿ, ಚುರುಕುತನ ಮತ್ತು ವೇಗಕ್ಕೆ ಬಂದಾಗ ಇದು ಖಂಡಿತವಾಗಿಯೂ ಅತ್ಯಂತ ಆಕರ್ಷಕವಾಗಿದೆ. ಇದರ ಜೊತೆಗೆ, ಇದು ಮಾನವ ಆರ್ಥಿಕತೆ ಮತ್ತು ಪೋಷಣೆಗೆ ಪ್ರಮುಖ ಪ್ರಾಣಿಗಳಲ್ಲಿ ಒಂದಾಗಿದೆ. ಟ್ಯೂನ ಪ್ರಭೇದಗಳು ಎಲ್ಲಾ ಸಮುದ್ರ ಮೀನುಗಾರಿಕೆಯ ಮೌಲ್ಯದ 20% ಅನ್ನು ಪ್ರತಿನಿಧಿಸುತ್ತವೆ ಮತ್ತು ಜಾಗತಿಕವಾಗಿ ವ್ಯಾಪಾರ ಮಾಡುವ ಎಲ್ಲಾ ಸಮುದ್ರಾಹಾರಗಳಲ್ಲಿ 8% ಕ್ಕಿಂತ ಹೆಚ್ಚು.ಪ್ರಪಂಚದಾದ್ಯಂತ ಕಂಡುಬರುವ ದೊಡ್ಡ ಪೌಷ್ಟಿಕಾಂಶವುಳ್ಳ ಮೀನು. ಲಕ್ಷಾಂತರ ಜನರ ಆಹಾರದಲ್ಲಿ ಟ್ಯೂನವು ತುಂಬಾ ಪ್ರಾಮುಖ್ಯತೆಯನ್ನು ಪಡೆದಿರುವುದು ಆಕಸ್ಮಿಕವಲ್ಲ.

#ಹಿನ್ನಲೆ:

2016 ರಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮೇ 2 ಅನ್ನು ವಿಶ್ವ ಟ್ಯೂನ ದಿನವನ್ನಾಗಿ ಆಚರಿಸಲು ಸೂಚಿಸಿತು. 2017 ರಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಯಿತು. ಸುಸ್ಥಿರ ಟ್ಯೂನ ಮೀನುಗಾರಿಕೆಯ ಕುರಿತು ಅರಿವು ಮೂಡಿಸುವುದು ಇದರ ಉದ್ದೇಶವಾಗಿತ್ತು.

ಗಾತ್ರ, ಶಕ್ತಿ ಮತ್ತು ವೇಗವು ಟ್ಯೂನ ಮೀನುಗಳ ಪ್ರಮುಖ ಗುಣಲಕ್ಷಣಗಳಾಗಿವೆ. ಏಕೆಂದರೆ ಅವು ನಿರಂತರವಾಗಿ ವಲಸೆ ಹೋಗುತ್ತವೆ. ಸಾಗರಗಳನ್ನು ದಾಟುತ್ತವೆ ಮತ್ತು ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ಹೋಗುತ್ತವೆ. ಅದಕ್ಕಾಗಿಯೇ ಅವು ಪ್ರಪಂಚದ ಪ್ರತಿಯೊಂದು ಸಾಗರದಲ್ಲೂ ಇವೆ. ಟ್ಯೂನವು ತನ್ನ ವಲಸೆಯ ಮಾರ್ಗಗಳಲ್ಲಿ ಹಿಮಾವೃತ ನೀರನ್ನು ಎದುರಿಸುವಾಗ ಅದು ತನ್ನ ದೇಹದ ಉಷ್ಣತೆಯನ್ನು ಹೆಚ್ಚಿಸಿಕೊಂಡು ಬದುಕುತ್ತವೆ. ಇದರಿಂದ ಟ್ಯೂನ ಮಾಂಸಕ್ಕೆ ಅದರ ವಿಶಿಷ್ಟವಾದ ಕೆಂಪು-ಗುಲಾಬಿ ಬಣ್ಣ ಮತ್ತು ಶಕ್ತಿಯುತ ಪೌಷ್ಟಿಕಾಂಶದ ಗುಣಗಳನ್ನು ನೀಡುತ್ತದೆ. 


#ಟ್ಯೂನ ಮೀನುಗಳಲ್ಲಿ 48ಕ್ಕೂ ಹೆಚ್ಚಿನ ವಿಭಿನ್ನ ಜಾತಿಗಳನ್ನು ಕಾಣಬಹುದು. ಅವುಗಳಲ್ಲಿ ಥೂನಸ್ ಕುಲವು 9 ಜಾತಿಗಳನ್ನು ಒಳಗೊಂಡಿದೆ. ಅವುಗಳೆಂದರೆ:

1) ಆಲ್ಬಾಕೋರ್, ಥೂನಸ್ ಅಲಾಲುಂಗಾ ಟ್ಯೂನ ಮೀನು. 

2)ಹಳದಿ ಈಜುರೆಕ್ಕೆಯ ಟ್ಯೂನ ಮೀನು. 

3)ಕಪ್ಪು ಈಜುರೆಕ್ಕೆಯ ಟ್ಯೂನ ಮೀನು. 

4)ದಕ್ಷಿಣದ ನೀಲಿ ಈಜುರೆಕ್ಕೆಯ ಟ್ಯೂನ ಮೀನು. 

5)ದೊಡ್ಡ ಕಣ್ಣಿನ ಟ್ಯೂನ ಮೀನು. 

6)ಪೆಸಿಫಿಕ್ ನೀಲಿ ಈಜುರೆಕ್ಕೆಯ ಟ್ಯೂನ ಮೀನು.

7)ಉತ್ತರದ ನೀಲಿ ಈಜುರೆಕ್ಕೆಯ ಟ್ಯೂನ ಮೀನು.

8)ಉದ್ದಬಾಲದ ಟ್ಯೂನ ಮೀನು.

9)ಕರಾಸಿಕ್ ಟ್ಯೂನ ಮೀನು.

 

#ಜೀವ ವಿಜ್ಞಾನದ ಹಿನ್ನೆಲೆಯಲ್ಲಿ ಟ್ಯೂನ ಮೀನುಗಳ ವೈಶಿಷ್ಟ್ಯತೆ:

ಸುತ್ತುವರಿದ ಕಡಲ ಜಲದಲ್ಲಿನ ತಾಪಮಾನಕ್ಕಿಂತ ಮೇಲಿರುವ ಶರೀರ ತಾಪಮಾನವನ್ನು ಕಾಯ್ದುಕೊಂಡು ಹೋಗುವಲ್ಲಿನ ಸಾಮರ್ಥ್ಯವು ಥೂನಸ್ ಕುಲದ ಜೀವಿಗಳ ಶರೀರ ವಿಜ್ಞಾನದ ಒಂದು ಅಸಾಧಾರಣವಾದ ಅಂಶವಾಗಿದೆ. ಉದಾಹರಣೆಗೆ, ನೀಲಿ ಈಜುರೆಕ್ಕೆಯ ಟ್ಯೂನ ಮೀನುಗಳು 43 °F (6 °C)ನಷ್ಟು ತಂಪಾಗಿರುವ ನೀರಿನಲ್ಲಿ 75–95 °F (24–35 °C)ನಷ್ಟಿರುವ ಒಂದು ಪ್ರಧಾನ ಶರೀರ ತಾಪಮಾನವನ್ನು ಕಾಯ್ದುಕೊಂಡುಹೋಗಬಲ್ಲವು. ಆದಾಗ್ಯೂ, ಸಸ್ತನಿಗಳು ಮತ್ತು ಹಕ್ಕಿಗಳಂಥ ವಿಶಿಷ್ಟ ಅಂತರುಷ್ಣಕ ಜೀವಿಗಳಿಗಿಂತ ಭಿನ್ನವಾಗಿ, ಟ್ಯೂನ ಮೀನುಗಳು ತುಲನಾತ್ಮಕವಾಗಿ ಕಿರಿದಾಗಿರುವ ಒಂದು ಶ್ರೇಣಿಯ ವ್ಯಾಪ್ತಿಯೊಳಗೆ ತಾಪಮಾನವನ್ನು ಕಾಯ್ದುಕೊಂಡುಹೋಗುವುದಿಲ್ಲ.

ಸಾಮಾನ್ಯ ಚಯಾಪಚಯಕ್ರಿಯೆಗಳಿಂದ ದೊರೆತ ಶಾಖವನ್ನು ಸಂರಕ್ಷಿಸಿಟ್ಟುಕೊಳ್ಳುವ ಮೂಲಕ ಟ್ಯೂನ ಮೀನುಗಳು ಉಷ್ಣತೆಯನ್ನು ಸಾಧಿಸುತ್ತವೆ. ರೀಟಿ ಮಿರಾಬೈಲ್ ("ಅದ್ಭುತ ಬಲೆ") ಎಂದು ಕರೆಯಲ್ಪಡುವ, ಶರೀರ ಅಂಚಿನಲ್ಲಿ ಕಂಡುಬರುವ ಅಭಿಧಮನಿಗಳು ಮತ್ತು ಅಪಧಮನಿಗಳ ಹೆಣೆದುಕೊಳ್ಳುವಿಕೆಯು ಅಭಿಧಮನಿಯ ರಕ್ತದಿಂದ ಅಪಧಮನಿಯ ರಕ್ತಕ್ಕೆ ಎದುರು ಪ್ರವಾಹ ವಿನಿಮಯದ ಒಂದು ವ್ಯವಸ್ಥೆಯ ಮೂಲಕ ಶಾಖವನ್ನು ವರ್ಗಾಯಿಸುತ್ತದೆ. ಮೇಲ್ಮೈ ತಂಪಾಗುವುದನ್ನು ಇದು ತಗ್ಗಿಸುವುದರಿಂದ, ಬೆಚ್ಚಗಿನ ಸ್ನಾಯುಗಳನ್ನು ಕಾಯ್ದುಕೊಂಡು ಹೋಗಲು ಸಾಧ್ಯವಾಗುತ್ತದೆ. ತಗ್ಗಿಸಿದ ಶಕ್ತಿವ್ಯಯದೊಂದಿಗೆ  ಈಜುವಿಕೆಯ ವೇಗವನ್ನು ನಿಯಂತ್ರಿಸುತ್ತದೆ. 



#ಪೋಷಣೆ ಮತ್ತು ಆರೋಗ್ಯಕ್ಕಾಗಿ ಟ್ಯೂನ ಮೀನುಗಳು:

ಡಬ್ಬಿಯಲ್ಲಿ ಸಂರಕ್ಷಿಸಿದ ಟ್ಯೂನ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನು ಅಂಶಗಳನ್ನು ಒಳಗೊಂಡಿರುವುದರಿಂದ ಆಹಾರ ತಯಾರಿಕೆಯಲ್ಲಿ ಸುಲಭವಾಗಿ ಬಳಸಿಕೊಳ್ಳಬಹುದಾಗಿವೆ. 

ಟ್ಯೂನ ಮೀನಿನಲ್ಲಿ   ತೈಲ‌ ಅಂಶವು ಹೇರಳವಾಗಿರುವುದರ ಜೊತೆಗೆ ಯಥೇಚ್ಛ ಪ್ರಮಾಣದ 'D' ಜೀವಸತ್ವವನ್ನೂ ಇದು ಒಳಗೊಂಡಿದೆ. ಟ್ಯೂನ ಮೀನುಗಳು, ಹಸುಗೂಸುಗಳು, ಮಕ್ಕಳು, ಪುರುಷರು,  19 ರಿಂದ 50ವರ್ಷದವರೆಗಿನ ಮಹಿಳೆಯರಿಗೆ ಬೇಕಾದ ಅಗತ್ಯವಾಗಿರುವ ಪ್ರಮಾಣವಾದ 200 IUನಷ್ಟು(International Unit) 'D' ಜೀವಸತ್ವವನ್ನು ಒಳಗೊಂಡಿರುತ್ತವೆ. 

(ಸಂಗ್ರಹ)


No comments:

Post a Comment