Tuesday, April 4, 2023

ಮನೆಯ ಬಳಿ ಗೂಬೆ ಬಂದರೆ ಅಪಶಕುನವೇ ?

 ಮನೆಯ ಬಳಿ ಗೂಬೆ ಬಂದರೆ ಅಪಶಕುನವೇ ?

                      

ಲೇಖಕರು : ಶ್ರೀ ಕೃಷ್ಣ ಚೈತನ್ಯ
ಶಿಕ್ಷಕರು ಹಾಗೂ ವನ್ಯ ಜೀವಿ ತಜ್ಞರು

ಗೂಬೆ ಎಂದ ಕೂಡಲೇ ಅದೊಂದು ಅಪಶಕುನದ ಪ್ರಾಣಿ, ಸೋಮಾರಿತನದ ಪ್ರತೀಕ ಎಂಬ ಭಾವನೆ ಬಹಳಷ್ಟು ಜನರಲ್ಲಿದೆ. ಆಹಾರ ಬೆಳೆಗಳಿಗೆ ಅಪಾರ ಹಾನಿ ಉಂಟುಮಾಡುವ ದಂಶಕ ಪ್ರಾಣಿಗಳಾದ ಇಲಿಗಳನ್ನು ನಾಶ ಮಾಡುವ ಮೂಲಕ ಪರಿಸರದಲ್ಲಿ ಗೂಬೆಗಳು ವಹಿಸುವ ಪಾತ್ರವನ್ನು ಈ ಲೇಖನದಲ್ಲಿ ವಿವರಿಸಿದ್ದಾರೆ, ಶ್ರೀ ಕೃಷ್ಣ ಚೈತನ್ಯ ಅವರು.

ʼಸವಿಜ್ಞಾನʼದ ಓದುಗರೇ, 

ಮನುಷ್ಯ ತನ್ನ ಸ್ವಾರ್ಥಕ್ಕೆ ಒಂದು ಜೀವಿಯನ್ನು ಬಳಸಿಕೊಂಡಾಗ ಅದರ ಅಸ್ತಿತ್ವ ಹೇಗೆ ಬದಲಾಗುತ್ತದೆ ಎನ್ನುವ ಅಂಶವನ್ನು ತಮಗೆ ಈ ಲೇಖನದ ಮೂಲಕ ಪರಿಚಯ ಮಾಡಿಕೊಡುವವನಿದ್ದೇನೆ. ಮನುಷ್ಯನ ಅದೃಷ್ಟ ಮತ್ತು ದುರಾದೃಷ್ಟ ಒಂದು ಜೀವಿಯನ್ನು ಅವಲಂಬಿಸಿದೆಯೋ ಆಥವಾ ಇಲ್ಲವೋ ಎಂದು ವಿಚಾರ ಮಾಡಿದಾಗ ಮನುಷ್ಯ ಮೂಢಾತ್ಮ ಎಂದು ‍ಅರ್ಥೈಸಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ಕೆಲವು ಬಾರಿ ಗೂಬೆಗಳು ರಾತ್ರಿಯ ವೇಳೆಯಲ್ಲಿ ಊರಿಗೆ ಬರುತ್ತಿದ್ದುದುಂಟು. ಅಂಥ ಗೂಬೆಗಳು ಕೂಗಿದಾ ಕ್ಷಣ,  ಅದು ಅಪಶಕುನದ ಸೂಚನೆ ಎಂಬಂತೆ ಅದಕ್ಕೆ ಶಪಿಸುತ್ತಿದ್ದರು. ಗೂಬೆ ಊರಿಗೆ ಬಂದರೆ ಯಾರಾದರೂ  ಸಾಯುತ್ತಾರೆ ಎಂಬ ನಂಬಿಕೆ ಇದ್ದುದೇಇದಕ್ಕೆಕಾರಣ.ಇನ್ನು, ಯಾರಾದರು ಕೆಲಸ ಮಾಡದೆ ಸೋಮಾರಿಯಂತೆ ಕುಳಿತಿದ್ದರೆ, ಏನೋ, ಒಳ್ಳೆ ಗೂಬೆಯಂತೆ ಕುಳಿತುಕೊಂಡಿದ್ದೀಯೆ ಎಂದು ಬಯ್ಯುವುದೂ ಉಂಟು. ಅಂದರೆ, ಅದು ಬೆಳಿಗ್ಗೆಯಿಂದ ಸಂಜೆಯವರೆಗೆ ಸುಮ್ಮನೆ ಕುಳಿತುಕೊಳ್ಳುವುದರಿಂದ ಅದು ಸೋಮಾರಿ ಎಂಬ ಅನ್ವರ್ಥನಾಮ ಸೇರಿಕೊಂಡಿದೆ. ಇತ್ತೀಚೆಗೆ, ಮತ್ತೊಂದು ಅದೃಷ್ಟದ ವಿಚಾರ ಮುನ್ನೆಲೆಗೆ ಬಂದಿದೆ. ಅದುವೆ, ಗೂಬೆಯನ್ನು ಮನೆಯಲ್ಲಿ ಸಾಕಿದರೆ ಝಣ ಝಣ ಅನುತ್ತಾ ಧನಲಕ್ಷ್ಮಿ ಬರುತ್ತಾಳೆ ಎಂಬುದು! ಆದರೆ ಇದೆಲ್ಲದರ ಹಿಂದೆ ಇರುವ ಸತ್ಯಗಳನ್ನು ತಿಳಿದಾಗ ಗೂಬೆ ಬರುತ್ತಿದ್ದ ಕಾರಣ, ಅದರ ಮಹತ್ವ ಮತ್ತು ಅದಕ್ಕೆ ಬಂದಿರುವ ದುರ್ಗತಿ ತಿಳಿಯುತ್ತದೆ.

ಗೂಬೆಗಳಲ್ಲಿ ಹಲವಾರು ವಿಧಗಳಿದ್ದು, ಭಾರತದಲ್ಲಿ ಸುಮಾರು 26 ಪ್ರಬೇಧಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ, ತುಂಬಾ ಚಿರಪರಿಚಿತವಾದವು ಕೆಲವೇ ಕೆಲವು ಪ್ರಭೇದಗಳು  ಸಾಮಾನ್ಯವಾಗಿ ಮನುಷ್ಯನ ಆವಾಸಗಳ ಬಳಿ ನಾಲ್ಕು ಬಗೆಯ ಗೂಬೆಗಳನ್ನು ನೋಡುತ್ತೇವೆ.ಅವುಗಳೆಂದರೆ,

ಹಾಲಕ್ಕಿ /ಚಿಟ್ಟುಗೂಬೆ (Spotted owlet)



  ಕಣಜ ಗೂಬೆ(Barn owl),


ಕೊಂಬಿನ ಗೂಬೆ(Eurasian Eagle owl),


 

 


ಮೀನು ಗೂಬೆ ,

 


(Brown Hawk Owl), (Short-eared Owl), (Indian Scops Owl), (Oriental Scops Owl) (Jungle owlet), (Motted Wood Owl) 

ಗೂಬೆಗಳು ವಿವಿಧ ಗಾತ್ರ ಹೊಂದಿದ್ದು, ಅವುಗಳ ಗರಿ ವಿನ್ಯಾಸವು ವಿಭಿನ್ನವಾಗಿದ್ದು, ಕೆಲವು ಗೂಬೆಗಳಿಗೆ ಕೋಡಿನಂತೆ ಗರಿಗಳಿದ್ದರೆ, ಮತ್ತೆ ಕೆಲವಕ್ಕೆ ಕಿವಿಗಳ ಬಳಿ ಗರಿಗಳು ಚಿಕ್ಕದಾಗಿ ಬೆಳೆದು, ಗೊರವಯ್ಯ ತಲೆಗೆ ಹೊದಿಸಿಕೊಂಡ ಕರಡಿಯ ತೊಗಲಿನಂತೆ ಆಕರ್ಷಕವಾಗಿ ಕಾಣುತ್ತವೆ. ಎಲ್ಲವೂ ನಿಶಾಚರಿಗಳಾಗಿದ್ದು,  ರಾತ್ರಿಯ ವೇಳೆ ಮಾತ್ರ ಸಂಚರಿಸುತ್ತವೆ. ಹಾಗಂತ, ಹಗಲಿನ ವೇಳೆಯಲ್ಲಿ ಹಾರಾಡುವುದಿಲ್ಲ ಅಂತಲ್ಲ. ನಾವೆಷ್ಟೋ ಸಲ ಅದರ ಛಾಯಾಗ್ರಹಣ ಮಾಡಲು ಅದರ ಸಮೀಪಕ್ಕೆ ಹೋದಂತೆಲ್ಲಾ ನಮ್ಮನ್ನು ದೂರದಿಂದಲೇ ಗಮನಿಸಿ ದೂರದೂರಕ್ಕೆ ಹಾರಿ ಹೋಗುತ್ತಿರುತ್ತವೆ. ಅಂದರೆ, ಹಗಲಿನಲ್ಲಿಯೂ ನಮ್ಮಷ್ಟೆ ಚನ್ನಾಗಿ ಗೂಬೆಗಳಿಗೆ ಕಣ್ಣು ಕಾಣಿಸುತ್ತದೆ ಎಂದಾಯಿತಲ್ಲವೇ?

ಗೂಬೆಗಳು ಹಗಲಿನಲ್ಲಿ ಸುಮ್ಮನೇ ಕೂರಲು ಕಾರಣವೇನೆಂದರೆ ಅವುಗಳಿಗೆ ದೊರೆಯಬೇಕಾದ ಆಹಾರ ಹಗಲಿನಲ್ಲಿ ಸಿಗುವುದಿಲ್ಲ ಎಂದು! ಯಾವುದು ಅವುಗಳ ಆಹಾರವೆಂದಿರಾ? ಅದೇ ರಾತ್ರಿಯ ವೇಳೆ ಓಡಾಡುವ ಇಲಿಗಳು! ಆಯಾ ಪ್ರದೇಶಗಳಿಗೆ ಸಂಬಂಧಿಸಿದಂತೆ ಅವುಗಳ ಆಹಾರ ʼಇಲಿʼಯೇ ಆಗಿರಬೇಕೆಂದಿಲ್ಲ. ನೀರಿನ ಆವಾಸಗಳ ಬಳಿ ಮೀನುಗಳನ್ನು ಬೇಟೆಯಾಡುವ ಗೂಬೆಗಳು ಇರುತ್ತವೆ. ಇಲಿಗಳ ವೈವಿಧ್ಯ ಕೇಳಬೇಕೆಂದರೆ, ನಮ್ಮ ನಾಡಿನ ಪ್ರಸಿದ್ದ ಕವಿ, ಕಾದಂಬರಿಕಾರ, ಕಥೆಗಾರ, ನಾಟಕಕಾರರಾದ ‍ಕರ್ನಾಟಕ ರತ್ನ ಕುವೆಂಪುರವರ ʼಕಿಂದರಿಜೋಗಿʼಯನ್ನು ಒಮ್ಮೆ ಓದಲೇಬೇಕು !  ಮನೆಗಳಲ್ಲಾದರೆ ಸುಂಡಿಲಿ, ಸಾಮಾನ್ಯ ಗಾತ್ರದ ಅದು ಪಕ್ಕದ ಜಮೀನಿನಿಂದ ಬಂದು ಸೇರಿಕೊಳ್ಳುವ ಕಾಡಿನ ಇಲಿಗಳು ಕಂಡುಬರುತ್ತವೆ. ಇವುಗಳ ಸಂಖ್ಯೆ ಹೆಚ್ಚಾದರೆ, ಅವುಗಳ ಕಿಚ-ಪಚಶಬ್ಧ, ಎಷ್ಟೋ ಬಾರಿ ಮಲಗಿರುವವರ ನಿದ್ದೆಯನ್ನು ಕೆಡಿಸಿರುವುದುಂಟು. ಇವುಗಳ ಸಂಖ್ಯೆ ಮಿತಿಮೀರಿದಾಗ ಮನೆಯ ಸುತ್ತಮುತ್ತ ಮತ್ತು ಮನೆಯ ಮೇಲೆ ಓಡಾಡುತ್ತವೆ. ಇಂಥ ಸಂರ‍್ಭದಲ್ಲಿಯೇ ಅವುಗಳನ್ನು ಹಿಡಿಯಲು ಗೂಬೆಗಳು ಹಾರಿಬಂದು ಮನೆಯ ಮೇಲೆ ಬಂದು ಕೂರುವುದುಂಟು.

 ಗೂಬೆಗಳು ಭಕ್ಷಕ (ಮಾಂಸಹಾರಿ) ಹಕ್ಕಿಗಳಾಗಿದ್ದು ಇಲಿಗಳೇ ಇದರ ಪ್ರಮುಖ ಆಹಾರವಾಗಿದೆ. ಅವುಗಳ ಕಣ್ಣುಗಳಲ್ಲಿರುವ ರಾಡ್ (ಕಂಬಿ) ಎಂಬ ಗ್ರಾಹಕ ಕೋಶಗಳು ಮಂದ ಬೇಳಕಿನಲ್ಲಿಯೂ ಚೆನ್ನಾಗಿ, ಸ್ಪಷ್ಟವಾಗಿ ನೋಡಬಲ್ಲ ಸಾಮರ್ಥ್ಯ ಹೊಂದಿವೆ. ರಾತ್ರಿಯ ವೇಳೆ ರೈತರು ಬೆವರು ಸುರಿಸಿ ಬೆಳೆದ ಬೆಳೆಗಳಿಗೆ ಕಣ್ಣಿಟ್ಟು ಅದನ್ನು ಕದಿಯಲು ಬರುವ ತೋಡಿಲಿಗಳನ್ನು ನಿಯಂತ್ರಿಸುವವರು ಬೇಕಲ್ಲವೇ? ಇಲಿಗಳು ಅದೆಷ್ಟು ಚನ್ನಾಗಿ ರಾಗಿ, ಭತ್ತದ ತೆನೆಗಳನ್ನು ಕತ್ತರಿಸಿ ಹೊತ್ತೊಯ್ಯುತ್ತವೆ ಎಂದರೆ, ಕ್ಷಣಾರ್ಧದಲ್ಲಿ ಸಸ್ಯವನ್ನು ಹತ್ತಿ ಅದರ ಭಾರಕ್ಕೆ ಕೆಳಗೆ ಬೀಳಿಸಿ ತನ್ನ ಹರಿತವಾದ ಹಲ್ಲುಗಳಿಂದ ತುಂಡರಿಸಿಬಿಡುತ್ತವೆ. ಇನ್ನು ಕಾಳಗಳ ಬೆಳೆಯಾದರು ಅಷ್ಟೆ, .ಒಂದು ಇಲಿ ದಿನವೊಂದಕ್ಕೆ೫-೬ಗ್ರಾಂ (೬೦ ಕ್ಯಾಲರಿ) ಆಹಾರ ಸೇವಿಸುತ್ತದೆ ಎಂಬುದು ಒಂದು ಅಂದಾಜು. ಒಂದು ಇಲಿ ವರ್ಷ ಪೂರ್ತಿ ಆಹಾರ ಸಂಗ್ರಹಿಸಿಕೊಳ್ಳುವುದರಿಂದ ಸುಮಾರು ಒಂದುವರೆ ಕೆ.ಜಿಯಷ್ಟು ಆಹಾರ ಅದಕ್ಕೆ ಬೇಕಾಗಿರುತ್ತದೆ. ಇಂಥ ಇಲಿಗಳನ್ನು ನಿಯಂತ್ರಣ ಮಾಡುವವರು ಬೇಕಲ್ಲವೇ.? ಅಲ್ಲದೇ, ಇಲಿಗಳ ಸಂತಾನ ತುAಬಾ ವೇಗವಾಗಿ ವೃದ್ಧಿಯಾಗುವಂಥದ್ದು. ಒಂದು ಜೋಡಿ ಇಲಿಗಳನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕಿ ಅವುಗಳಿಗೆ ಸಾಕಾಗುವಷ್ಟು ಆಹಾರ, ನೀರು ಇಟ್ಟರೆ ಎಷ್ಟು ಇಲಿಗಳಾಗಿರುತ್ತವೆ ಎಂದು ಕೇಳಿದರೆ ತಲೆಸುತ್ತು ಬಂದು ಬೀಳುವುದು ಉಂಟು. ಇಲಿಗಳು ಸಾಮಾನ್ಯವಾಗಿ ೧೫- ೨೦ ದಿನಗಳಿಗೊಮ್ಮೆ ಮರಿಹಾಕುತ್ತವೆ. ಒಮ್ಮೆಗೆ ಸರಾಸರಿ ೭ ರಂತೆ ಮರಿಹಾಕಿದರೂ ಅವುಗಳ ಸಂಖ್ಯೆ ವರ್ಷಕ್ಕೆ ಸುಮಾರು ಕೋಟಿ ಲಕ್ಷ ಇಲಿಗಳಾಗಿರುತ್ತವೆ. ಒಂದು ಜೊತೆಗೆ ಇಷ್ಟಾದರೆ ಇನ್ನು ಒಂದು ಎಕರೆಯಲ್ಲಿ ಐದಾರು ಜೊತೆ ಇದ್ದರೂ ಸಾಕು, ರೈತ ಬೆಳೆದ ಆಹಾರ ಪದಾರ್ಥಗಳು ಮನೆಗೆ ಸೇರುವುದುಂಟಾ? ಬದಲಿಗೆ ರೈತನೆ ಜಮೀನಿಗೆ ಮತ್ತಷ್ಟು ಆಹಾರ ಪದಾರ್ಥಗಳನ್ನು ಇಡಬೇಕಾದೀತು !! ಇಂಥ ದಂಶಕಗಳನ್ನು ನಿಯಂತ್ರಿಸುವುದಕ್ಕೆಂದೇ ಗೂಬೆಗಳನ್ನು ಸೃಷ್ಟಿಸಿರುವ ಪ್ರಕೃತಿಗೆ ವಂದಿಸಲೇಬೇಕು ಅಲ್ಲವೇ? ಇಲಿಗಳನ್ನುನಿಯಂತ್ರಸಲು ಮತ್ತೊಂದು ಪ್ರಾಣಿಗಳೆಂದರೆ, ಹಾವುಗಳು. ಒಂದು ಗೂಬೆ ದಿನವೊಂದಕ್ಕೆ ೪-೫ ಇಲಿಗಳನ್ನು ಹಿಡಿದು ತಿನ್ನುವುದರಿಂದ ಅವುಗಳ ನಿಯಂತ್ರಣ ಸಾದ್ಯವಾಗಿದೆ.ಇಷ್ಟಾದರೂ, ರೈತರು ಬೆಳೆಯುವ ಆಹಾರ ಪದಾರ್ಥಗಳಲ್ಲಿ ೩೦-೪೦ರಷ್ಟು ಜಮೀನು ಮತ್ತು ಮನೆಗಳಲ್ಲಿ ಈ ದಂಶಕಗಳ ಪಾಲಾಗುತ್ತವೆ. ಇಲ್ಲದಿದ್ದಲ್ಲಿ ರೈತರು ಬೆಳೆಯುವ ಕಾಳು, ಧಾನ್ಯ ಮನೆಗೆ ಬರುತ್ತಿತ್ತೆ? ನಮಗೆ ಆಹಾರ ಪದಾರ್ಥಗಳು ಸಿಗುತ್ತಿತ್ತೆ? ನಾವು ಯಾರಿಗೆ ಋಣಿಯಾಗಿರಬೇಕು? ಮನೆಗಳ ಬಳಿ ಗೂಬೆ ಬರುತ್ತಿದೆ ಎಂದರೆ ಅಲ್ಲಿ ಇಲಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಅರ್ಥವೇ ಹೊರತು ನಮಗೆ ಅಪಶಕುನ ಕಾದಿದೆ, ಅಥವಾ ಸಾವು ಸಂಭವಿಸುತ್ತದೆ ಎಂದಲ್ಲ.

ಮತ್ತೊಂದು ವಿಚಾರವನ್ನು ಇಲ್ಲಿ ರ‍್ಚಿಸಲೇಬೇಕಿದೆ. ಅದು, ಗೂಬೆಗಳನ್ನು ಮನೆಯಲ್ಲಿ ಸಾಕುವುದರಿಂದ ಮನೆಯಲ್ಲಿ ಹಣ ತುಂಬಿ ತುಳುಕುತ್ತದೆ ಎಂದು. ಆದರೆ, ಇದು ಸತ್ಯವೇ?  ಇಲ್ಲ. ಖಂಡಿತವಾಗಿ ಇಲ್ಲ. ಹಣವನ್ನು ಸಂಪಾದನೆ ಮಾಡಲು ಎರಡು ಮರ‍್ಗಗಳಿವೆ. ಒಂದು ನ್ಯಾಯಮರ‍್ಗ. ಅಂದರೆ. ತಾನು ಕಷ್ಟಪಟ್ಟು ದುಡಿದು ಸಂಪಾದನೆ ಮಾಡುವುದು ಮತ್ತು ಅದನ್ನು ಮಿತವಾಗಿ ರ‍್ಚು ಮಾಡಿ ಉಳಿದುದನ್ನು ಕೂಡಿಟ್ಟು ಸದ್ಬಳಕೆ ಮಾಡಿ ತಕ್ಕಮಟ್ಟಿಗೆ ಅಭಿವೃದ್ಧಿ ಹೊಂದುವುದು. ಅವರಿಗೆ ದೇವರ ಬಗೆಗ ನಂಬಿಕೆಯಿದ್ದು ಏನಾದರು ಅನ್ಯಾಯ ಮಾಡಿದರೆ ದೇವರು ಒಳ್ಳಯದನ್ನು ಮಾಡುವುದಿಲ್ಲ, ಹಾಗೇನಾದರೂ ಮಾಡಿದರೆ ನಮಗೆ ಕೆಡಕಾಗುತ್ತದೆ ಎಂದು ನಂಬಿರುವವರು. ಎರಡನೆಯ ರೀತಿ ಅನ್ಯಾಯದ ಮರ‍್ಗ. ಅಂದರೆ ಮೋಸ, ದುರಾಸೆ, ಭ್ರಷ್ಟಾಚಾರ ಇತ್ಯಾದಿ, ಇದರಿಂದ ಬರುವ ಆದಾಯಕ್ಕೂ ದೇವರನ್ನೆ ಹೊಣೆ ಮಾಡುವುದರಲ್ಲಿ ಹಿಂದೆ ಬೀಳುವುದಿಲ್ಲ..

ಮೇಲಿನ ಎರಡು ರೀತಿಗಳಿಂದ ಮಾಡಲಾಗದವರು ಮೂಢನಂಬಿಕೆಯ ಮೊರೆ ಹೋಗುತ್ತಾರೆ. ಯಾವ ಪುಣ್ಯಾತ್ಮ ಗೂಬೆಯನ್ನು ಮನೆಯಲ್ಲಿ ಸಾಕಿಕೊಂಡರೆ ಧನಲಕ್ಷ್ಮಿ ವೃದ್ಧಿಯಾಗುತ್ತದೆ ಎಂದು ಹೇಳಿದನೋ ನನಗೆ ಗೊತ್ತಿಲ್ಲ. ಆದರೆ, ಇದರಿಂದ ಎಷ್ಟ ಜನ ಗೂಬೆ ಸಾಕಲು ದುಂಬಾಲು ಬಿದ್ದುದಂತು ಸತ್ಯ. ಇದರಿಂದ ಕೆಲವರು ಗೂಬೆ ಹಿಡಿಯುವ ಕೆಲಸಕ್ಕೆ ನಿಯೋಜಿತರಾದರು, ಇದರಿಂದ ಅದರ ಸಂತತಿಗೆ ಸಂಚಕಾರ ಬಂದಿದ್ದಂತು ಸತ್ಯ. ಒಂದು ವೇಳೆ ಇದನ್ನು ನಂಬಿ ಗೂಬೆಗಳನ್ನು ಹಿಡಿದು ಸಾಕಿದರೆ ಇಲಿಗಳನ್ನು ಹಿಡಿಯಲು ಕೆಲಸಗಾರರನ್ನು ನೇಮಿಸಿಕೊಳ್ಳಬೇಕಾದೀತು! ಕೊನೆಗೆ, ಅದು ಸಾದ್ಯವಾಗದೇ ಇದ್ದರೆ ಅವುಗಳ ಸಾವು ನಿಶ್ಚಿತ. ಈ ರೀತಿ ಆದುದ್ದೇ ಆದರೆ ಆಹಾರಕ್ಷಾಮ ಮುಂದೆ ಬರುವುದುಖಚಿತ. ಈಗ ತಿಳಿಯಿತಲ್ಲವೇ ? ಯಾರಿಂದ ನಮಗೆ ಆಹಾರ ಪದರ‍್ಥಗಳು ಮನೆಗೆ ಬರುತ್ತಿವೆ, ಸಿಗುತ್ತಿವೆ ಎಂದು!

 

3 comments: