Sunday, June 4, 2023

ನಕ್ಷತ್ರಗಳ ರಾಜ - ಟೈಕೋ ಬ್ರಾಹೆ

                                             ನಕ್ಷತ್ರಗಳ ರಾಜ - ಟೈಕೋ ಬ್ರಾಹೆ

                                                  

ಲೇಖಕರು  ಸುರೇಶ ಸಂಕೃತಿ 

ದೂರದರ್ಶಕಗಳ ಬಳಕೆ ಪ್ರಾರಂಭವಾಗುವ ಮುಂಚೆಯೇ, ಹದಿನಾರನೆಯ ಶತಮಾನದಲ್ಲಿ ಆಕಾಶ ವೀಕ್ಷಣೆ ಮಾಡುತ್ತಿದ್ದ ಟೈಕೋ ಬ್ರಾಹೆ ಎಂಬ ಖಗೋಳಶಾಸ್ತ್ರಜ್ಞನ ಬಗ್ಗೆ  ಸವಿವರ ಮಾಹಿತಿ ನೀಡುವ ಈ ಲೇಖನವನ್ನು  ಶಿಕ್ಷಕ ಸುರೇಶ ಸಂಕೃತಿ ಬರೆದಿದ್ದಾರೆ.

                      

    ಟೈಕೋ  ಬ್ರಾಹೆಯನ್ನು ದೂರದರ್ಶಕವನ್ನು  ಕಂಡು ಹಿಡಿಯುವುದಕ್ಕೂ ಮುಂಚಿನ  ಅತ್ಯಂತ ಪ್ರಮುಖ ಖಗೋಳಶಾಸ್ತ್ರಜ್ಞ ಎಂದು ಗುರುತಿಸಲಾಗುತ್ತದೆ. ನಿರಂತರವಾಗಿ ಮತ್ತು ವಿಸ್ತಾರವಾಗಿ  ಆಕಾಶ ವೀಕ್ಷಣೆ ಮಾಡಿ  ಅತ್ಯಂತ ನಿಖರವಾದ ಮಾಹಿತಿಯನ್ನು ಮೊದಲ ಬಾರಿಗೆ ದಾಖಲಿಸಿದ ಕೀರ್ತಿ ಅವನಿಗೆ ಸಲ್ಲಬೇಕು. ಟೈಕೋನ ಕುರಿತು ಅನೇಕ ಕೌತುಕಗಳು ಹಾಗೂ ವಿವಾದಗಳು ಜನಜನಿತವಾಗಿವೆ. ಆಕಾಶ ವೀಕ್ಷಣೆಯನ್ನು ಕರಾರುವಕ್ಕಾಗಿ ಮಾಡಿವಿವಿಧ ಅಳತೆಗಳನ್ನು ನಿಖರವಾಗಿ ದಾಖಲೆ  ಮಾಡಿದ್ದು ಅಷ್ಟೇ ಅಲ್ಲ   ಅಳತೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಮಾಡಲು ಅಗತ್ಯವಾದ ಕಂಪಾಸು ಮುಂತಾದ ವೀಕ್ಷಣಾ ಸಾಮಗ್ರಿಗಳನ್ನು ನಿರ್ಮಿಸಿಕೊಂಡ ಕೀರ್ತಿಯೂ ಸಹ ಅವನಿಗೆ ಸಲ್ಲಬೇಕಾಗುತ್ತದೆ.   ಸಮುದ್ರದ ನಡುವೆ ತನ್ನದೇ ಸ್ವಂತ ದ್ವೀಪದಲ್ಲಿ ನಕ್ಷತ್ರ ವೀಕ್ಷಣಾಲಯವನ್ನು ನಿರ್ಮಿಸಿಕೊಂಡಿದ್ದ ಟೈಕೋನನ್ನು "ನಕ್ಷತ್ರಗಳ  ರಾಜ"    ಎ೦ದೂ  ಕರೆಯುವುದುಂಟು.

  ಟೈಕೋ ಬ್ರಾಹೆ ಜನಿಸಿದ್ದು  1546 ಡಿಸೆಂಬರ್ 14 ರಂದು ಡೇನ್ ದೇಶ ನುಟ್ ಸ್ಟಾರ್ಪ್ ಬೋರ್ಗ್  ನಗರದ ಒಂದು ಸಿರಿವಂತ ಅರಿಸ್ಟೋಕ್ರಾಟ್  ಕುಟು೦ಬದಲ್ಲಿತಂದೆ ಓಟೊ ಬ್ರಾಹೆ, ತಾಯಿ ಬಿಯಟ್ ಬಿಲ್ಲೆ. ತಂದೆ  ಮತ್ತು ತಾಯಿಯ ಎರಡೂ ಕುಟುಂಬದವರು ಡೇನಿಷ್ ರಾಜ ಪರಿವಾರದೊಂದಿಗೆ ನಿಕಟ ಸಂಬಂಧಿಗಳಾಗಿದ್ದರು. ಇವರಿಗೆ ಜನಿಸಿದ ಹನ್ನೆರಡು ಜನ ಮಕ್ಕಳಲ್ಲಿ ಟೈಕೋ ಕೊನೆಯವನು.    ಟೈಕೋ ಬ್ರಾಹೆಗೆ ಟೈಗೆ ಒಟೋಸನ್ ಬ್ರಾಹೆ ಎ೦ದು ನಾಮಕರಣ ಮಾಡಲಾಗುತ್ತದೆ. ಟೈಕೋನೊಂದಿಗೆ ಅವನಿಗೆ ಅವಳಿ ಸಹೋದರ ಒಬ್ಬನಿದ್ದನೆಂಬುದೊಂದು ವಿಶೇಷ,    ನಾಮಕರಣ ಸಮಾರಂಭಕ್ಕೆ ಮುನ್ನವೇ ಅವನ ಅವಳಿ ಸಹೋದರ ತೀರಿಹೋಗಿರುತ್ತಾನೆತದನಂತರ,  ಕೇವಲ ಎರಡು ವರ್ಷ ವಯಸ್ಸಾದ ಟೈಕೋನನ್ನು  ಸಂತಾನವಿಲ್ಲದ ಅವನ ಚಿಕ್ಕಪ್ಪ  ಜೊರ್ಜನ್ ಬ್ರಾಹೆ ಅಪಹರಿಸಿ ಹೊತ್ತೊಯ್ಯುತ್ತಾನೆ. ಹೀಗಾಗಿ ಟೈಕೋ ಬೆಳೆದದ್ದು  ಅವನ ಚಿಕ್ಕಪ್ಪನ ಮನೆಯ ಸುಖದ ಸುಪ್ಪತ್ತಿಗೆಯಲ್ಲಿ. ಅವನು ತನ್ನ  ಪ್ರಾಥಮಿಕ ಮತ್ತು ಪ್ರೌಢ  ಶಿಕ್ಷಣವನ್ನು  ನೈಖೋಪೆನ್ ನಡುಗಡ್ಡೆಯ ಲ್ಯಾಟಿನ್ ಶಾಲೆಯಲ್ಲಿ  ಮುಗಿಸಿದಶಿಕ್ಷಣಕ್ಕಾಗಿ ಕೊಪೆನ್ ಹೆಗೆನ್ ವಿಶ್ವವಿದ್ಯಾಲಯಕ್ಕೆ ದಾಖಲಾದ. ಅವನ ಚಿಕ್ಕಪ್ಪನ ಅಭಿಲಾಶೆಯಂತೆ ಅಧ್ಯಯನಕ್ಕೆ  ನ್ಯಾಯಶಾಸ್ರತ್ರವನ್ನು ಆರಿಸಿಕೊಂಡರೂ ಅವನು ಇತರ ವಿಷಯಗಳನ್ನು ಆಸಕ್ತಿಯಿಂದ ಅಭ್ಯಾಸ ಮಾಡಿದ. ಖಗೋಳಶಾಸ್ತ್ರ ಅವನ ನೆಚ್ಚಿನ ವಿಷಯವಾಗಿತ್ತು.    ಇದಕ್ಕೆ ಪ್ರೇರಣೆ ನೀಡುವ ಎರಡು ವಿದ್ಯಮಾನಗಳು ಅವನ ಪ್ರೌಢಾವಸ್ಥೆಯಲ್ಲಿ ಸಂಭವಿಸಿದ್ದವು.   1560 ಆಗಸ್ಟ್ 21ರಂದು ಸಂಭವಿಸಿದ ಸೂರ್ಯ ಗ್ರಹಣ.   ಅಂದಿನ ಖಗೋಳಶಾಸ್ತ್ರಜ್ಞರು   ಗ್ರಹಣದ ದಿನ ಮತ್ತು ಕಾಲವನ್ನು  ಅಂದಾಜು ಮಾಡಿದ್ದಕ್ಕಿಂತ  ಒಂದು ದಿನ ತಡವಾಗಿ ಗ್ರಹಣ ಸಂಭವಿಸಿದ್ದಿತು..   ಖಗೋಳ ವಿದ್ಯಮಾನಗಳ ವೀಕ್ಷಣೆ ಮತ್ತು  ಅಳತೆಗಳಲ್ಲಿ ಆಗಿದ್ದ ದೋಷವು  ತಪ್ಪು  ಲೆಕ್ಕಾಚಾರಕ್ಕೆ ಕಾರಣವಾಗಿದ್ದಿತುಶನಿ ಮತ್ತು ಗುರು ಗ್ರಹಗಳು  ಪ್ರತಿ ಇಪ್ಪತ್ತು ವರ್ಷಗಳಿಗೊಮ್ಮೆ   ಸಂಯೋಗ ಹೊಂದುವ ವಿದ್ಯಮಾನ ಜರುಗುತ್ತದೆ. ಆಕಾಶದಲ್ಲಿ ಕಾಣುವ ಎರಡು ಗ್ರಹಗಳು ದಿನ ಕಳೆದಂತೆ ಪರಸ್ಪರ ಹತ್ತಿರ, ಹತ್ತಿರ ಸರಿಯುತ್ತಾಹೋಗಿ ಒಂದು ನಿರ್ಧಿಷ್ಟವಾದ ದಿನ, ನಿರ್ಧಿಷ್ಟವಾದ   ಸಮಯದಲ್ಲಿ  ಒಂದರ ಹಿಂದೆ ಮತ್ತೊಂದು  ಸ್ವಲ್ಪಕಾಲ  ಮರೆಯಾದಂತೆ ಭೂಮಿಯಲ್ಲಿರುವ  ನಮಗೆ ಗೋಚರವಾಗುತ್ತವೆ. ಇದನ್ನು ಖಗೋಳ ಶಾಸ್ತ್ರದಲ್ಲಿ ಗ್ರಹ ಸಂಯೋಗ ಎಂದು ಹೇಳಲಾಗುತ್ತದೆಇತ್ತೀಚೆಗೆ, ಅಂದರೆ 2020 ಡಿಸೆಂಬರ್ 21ರಂದು ಶನಿ ಮತ್ತು ಗುರು ಗ್ರಹಗಳ ಸಂಯೋಗ ಸಂಭವಿಸಿತ್ತು.. 1563ರಲ್ಲಿ ಸಂಭವಿಸಿದ್ದ ಇದೇ ವಿದ್ಯಮಾನವನ್ನು ಟೈಕೋ   ವೀಕ್ಷಿಸಿದ್ದ ವಿದ್ಯಮಾನವನ್ನು ಊಹೆ ಮಾಡುವಲ್ಲಿಯೂ ಅಂದಿನ ಖಗೋಳ ಶಾಸ್ತ್ರಜ್ಞರು ಎಡವಿದ್ದರು. ಹೀಗಾಗಿ,  ಟೈಕೋ ನಿಖರವಾದ ಮತ್ತು ನಿರಂತರವಾದ  ಖಗೋಳ ವೀಕ್ಷಣೆ ,ಮಾಪನ  ಮತ್ತು ದತ್ತಾಂಶಗಳ ದಾಖಲೆಗೆ ಮಹತ್ವ ನೀಡಲು ಅಂದೇ ನಿರ್ಧರಿಸಿದ್ದನುರೋಸ್ಟಕ್ ವಿಶ್ವವಿದ್ಯಾಲಯದಲ್ಲಿ 1566ರಿಂದ ಒಂದು ವರ್ಷ ವೈದ್ಯ ವಿಜ್ಞಾನದ ಅಧ್ಯಯನದ ಅಡಿಯಲ್ಲಿ ರಸಾಯನಶಾಸ್ತ್ರ ಮತ್ತು  ಸಸ್ಯಔಷಧಿ ವಿಜ್ಞಾನವನ್ನೂ ಅಭ್ಯಾಸ ಮಾಡಿ ಆತ ತನ್ನ ತವರಿಗೆ ಹಿಂತಿರುಗುತ್ತಾನೆಬರುಬರುತ್ತಾ ಅವನಿಗೆ ಖಗೋಳಶಾಸ್ತ್ರದ ಕೆಡೆಗೆ  ಒಲವು ಹೆಚ್ಚಿದ ಕಾರಣ, ಅಂದು ಲಭ್ಯವಿದ್ದ ಖಗೋಳಶಾಸ್ತ್ರದ ಗ್ರಂಥಗಳ ಹಾಗೂ ನಿಯತಕಾಲಿಕಗಳ  ಆಳವಾದ ಅಧ್ಯಯನದ ಜೊತೆಜೊತೆಗೆ ಉತ್ತಮವಾಗಿ ಅಭಿವೃದ್ಧಿ ಪಡಿಸಿದ ಉಪಕರಣಗಳ ಸಹಾಯದಿಂದ ಖಗೋಳ ವೀಕ್ಷಣೆಗೆ ತೊಡಗಿಕೊಳ್ಳುತ್ತಾನೆ. ಯುದ್ದದಲ್ಲಿ ಚಿಕ್ಕಪ್ಪನ ಸಾವು, ತದನಂತರ  ವಾಸಿಯಾಗದ ರೋಗದಿಂದ ತಂದೆಯ ಮರಣ, ಇವುಗಳಿಂದಾದ ದುಃಖದ ನಡುವೆಯೂ ರಾಜಕೀಯವಾಗಿ ಪ್ರಭಾವಶಾಲಿಯಾಗಿದ್ದ ಸೋದರ ಮಾವನ ಸಹಾಯದಿಂದ ತನ್ನ ಮೊದಲ ಖಗೋಳ ವೀಕ್ಷಣಾಲಯವನ್ನು ಹೆರೆವಾಡ್ಅಬ್ಬೆ  ಎಂಬಲ್ಲಿ   ನಿರ್ಮಿಸುತ್ತಾನೆ.

 

 ಹೆರೆವಾಡ್ಅಬ್ಬೆ  ವೀಕ್ಷಣಾಲಯದಲ್ಲಿ ಕುಳಿತು 1572 ನವೆಂಬರ್ 11ರಂದು ಕ್ಯಾಸಿಯೋಪಿಯಾ ನಕ್ಷತ್ರ ಮಂಡಲದಲ್ಲಿ  ಒಂದು ಹೊಸ ನಕ್ಷತ್ರವನ್ನು ಟೈಕೋ ಕಂಡು ಹಿಡಿಯುತ್ತಾನೆ.. ಅದನ್ನು ಸ್ಟೆಲ್ಲಾ ನೋವಾ ಎ೦ದು ಹೆಸರಿಸುತ್ತಾನೆತಾನೇ ನಿರ್ಮಿಸಿದ್ದ ಸೆಕ್ಸ್ಟೆಂಟ್ ಎ೦ಬ ವೀಕ್ಷಣಾ ಸಾಧನದಿಂದ ನಕ್ಷತ್ರವನ್ನು ತುಂಬಾ ಆಳವಾಗಿ ಅಧ್ಯಯನ ಮಾಡಿ 173ರಲ್ಲಿ De nova et nullius aevi memoria prius visa stella( ವರೆಗೆ ಯಾರೂ ಕಂಡಿರದ ಕೇಳಿರದ ಒಂದು ಹೊಸ ನಕ್ಷತ್ರದ ಕುರಿತು) ಎ೦ಬ ಒಂದು ವರದಿಯನ್ನು ಸಿದ್ಧಪಡಿಸುತ್ತಾನೆ. ವಿಶ್ವದಾದ್ಯಂತ ಅನೇಕ ಖಗೋಳ ಶಾಸ್ತ್ರಜ್ಞರು ವಿದ್ಯಮಾನವನ್ನು ವೀಕ್ಷಿಸಿ ವರದಿ ಮಾಡಿದರಾದರೂ ಟೈಕೋನ ವರದಿಯಲ್ಲಿದ್ದ ವಿವರಗಳು, ಮತ್ತು ಮಾಹಿತಿಯ ನಿಖರತೆ ಅವನನ್ನು  ವಿಶ್ವವಿಖ್ಯಾತನನ್ನಾಗಿ ಮಾಡುತ್ತದೆ. 1573 ಡಿಸೆಂಬರ್ 8 ರಂದು ಸಂಭವಿಸಲಿದ್ದ ಚಂದ್ರ ಗ್ರಹಣವನ್ನು ಮುಂಚಿತವಾಗಿ ಅವನು  ಅತ್ಯಂತ ನಿಖರವಾಗಿ ಊಹೆ ಮಾಡಿದನುಟೈಕೋನ  ಸಂಶೋಧನೆಗಳಿಗೆಲ್ಲ  ಅವನ ಸಹೋದರಿ ಸೋಫಿಯ  ಸಹಾಯಕಿಯಾಗಿರುತ್ತಾಳೆ.

 


ಕ್ಯಾಸಿಯೋಪಿಯ ನಕ್ಷತ್ರ ಪುಂಜದಲ್ಲಿನ ಟೈಕೋ ಮಹಾನವ್ಯ  (ಚಿತ್ರ ಕೃಪೆ : ನಾಸಾ ಎಚ್ ಎಸ್ ಟಿ                                                               ಟೈಕೋ ಅಂದು ವೀಕ್ಷಿಸಿದ ಹೊಸ ನಕ್ಷತ್ರ  ವಾಸ್ತವದಲ್ಲಿ  ನಕ್ಷತ್ರವು ಸಿಡಿದು ಸಂಭವಿಸಿದ  ಮಹಾನವ್ಯವಾಗಿದ್ದಿತುಇಂದು ಇದನ್ನು SN 1572 ಅಥವಾ ಟೈಕೋ ಸೂಪರ್ ನೋವಾ ಎ೦ದು ಕರೆಯಲಾಗುತ್ತದೆ  ಇಂದಿಗೂ ಇದು ಖಗೋಳ ಶಾಸ್ತ್ರಜ್ಞರ ಸಂಶೋಧನೆಗೆ ಅತ್ಯಂತ ಆಸಕ್ತ  ಕ್ಷೇತ್ರವಾಗಿದೆ..  ರೇಡಿಯೋ ಮತ್ತು ಕ್ಷ-ಕಿರಣಗಳನ್ನು ಹೊರಸೂಸುತ್ತಿರುವ ಮಹಾನವ್ಯವು ಜೋಡಿ ನಕ್ಷತ್ರಗಳಿಂದ ಉಂಟಾದ  1A ಮಾದರಿಯದು. ಇದರಲ್ಲಿ ಒಂದು ಸಾಧಾರಣ  ನಕ್ಷತ್ರ ಮತ್ತು ಒಂದು ಶ್ವೇತಕುಬ್ಜಹೀಗೆ ಎರಡು ನಕ್ಷತ್ರಗಳು  ಒಂದರ ಸುತ್ತ ಮತ್ತೊಂದು ಗಿರಕಿ ಹೊಡೆಯುತ್ತಿರುತ್ತವೆ. ಚಂದ್ರಶೇಖರ ಮಿತಿಯನ್ನು ಮೀರಿದ ಶ್ವೇತಕುಬ್ಜವು ಜೊತೆಗಾರ ನಕ್ಷತ್ರದ ರಾಶಿಯನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ, ಇಲ್ಲವೇ ತಾನೇ ಸಿಡಿದು ದ್ರವ್ಯವನ್ನು ಹೊರಚೆಲ್ಲಿ  ಮಹಾನವ್ಯಕ್ಕೆ ಕಾರಣವಾಗತ್ತದೆ.

 ಟೈಕೋನ ಸಾಧನೆಯನ್ನು ಗಮನಿಸಿದ ದೆನ್ಮಾರ್ಕನ ದೊರೆ ಎರಡನೆಯ ಫೆಡ್ರಿಕ್ ಒಂದು ಉತ್ತಮವಾದ ಖಗೋಳ ವೀಕ್ಷಣಾಲಯವನ್ನು ನಿರ್ಮಿಸಿಕೊಡಲು ಮುಂದೆ ಬರುತ್ತಾನೆಇದರ ನಿರ್ಮಾಣಕ್ಕೆ  ಡೆನ್ಮಾರ್ಕ್ ಮತ್ತು ಸ್ವೀಡನ್ ಎರಡೂ ರಾಷ್ಟ್ರಗಳಿಗೆ ಮಧ್ಯದಲ್ಲಿ ಕೊಪೆನ್ ಹೆಗೆನ್ ಸಮೀಪದ ಆಯಕಟ್ಟಿನ ಸ್ಥಳದ  ವೆನ್ ಎ೦ಬ ಒಂದು  ದ್ವೀಪವನ್ನು ಆಯ್ಕೆ ಮಾಡಲಾಗುತ್ತದೆ. ಟೈಕೋ 1577ರಲ್ಲಿ ಕಾಲಕ್ಕೆ ಅತ್ಯಾಧುನಿಕವಾದ ಖಗೋಳ ವೀಕ್ಷಣಾಲಯವನ್ನು  ಅಲ್ಲಿ ನಿರ್ಮಿಸಲು ಆರಂಭಿಸುತ್ತಾನೆ. ಯುರಾನಿಬೋರ್ಗ್ ವೀಕ್ಷಣಾಲಯ ಎ೦ದು ಇದಕ್ಕೆ ನಾಮಕರಣ ಮಾಡಲಾಗುತ್ತದೆಎರಡೂ ದೇಶಗಳ ರಾಜ ಮನೆತನಗಳು ಹಾಗೂ  ಪ್ರತಿಷ್ಟಿತ ಕುಟುಂಬಗಳಿಂದ ಸಹಾಯ ಧನ ಹರಿದು ಬರುತ್ತದೆತನ್ನ ಕುಟುಂಬ ಮತ್ತು ಆಳುಕಾಳುಗಳ ಜೊತೆ ಸರ್ವ ಸ್ವತಂತ್ರವಾಗಿ ದೊರೆಯಂತೆ ದ್ವೀಪವನ್ನು ಆಳುತ್ತಾ,, ತನ್ನ ಪಾಡಿಗೆ ತಾನು ಖಗೋಳ ವೀಕ್ಷಣೆ, ರಸವಿದ್ಯೆ ಮುಂತಾದವುಗಳ ಕುರಿತ ಸಂಶೋಧನೆಯಲ್ಲಿ ನಿರಾತಂಕವಾಗಿ ಟೈಕೋ ನಿರತನಾಗಿರುತ್ತಾನೆ. ಇಲ್ಲಿ ಜೀವಿಸಿದ್ದ ಇಪ್ಪತ್ತೊಂದು ವರ್ಷಗಳ ಅವಧಿಯಲ್ಲಿ ಆಕಾಶದಲ್ಲಿ  ಬರಿಗಣ್ಣಿಗೆ ಕಾಣುವ ನಕ್ಷತ್ರಗಳು ಮುಂತಾದ ಆಕಾಶ ಕಾಯಗಳ  ಸ್ಥಾನಗಳನ್ನು  ನಿಖರವಾಗಿ ಸೂಚಿಸುವ ನಕ್ಷತ್ರ ಪಟಗಳನ್ನು ರಚಿಸುತ್ತಾನೆ..  ದೊರೆ ಎರಡನೆಯ ಫೆಡ್ರಿಕನ ನಿಧನದ ನಂತರ ಪಟ್ಟವೇರಿದ ದೊರೆ ನಾಲ್ಕನೇ ಕ್ರಿಶ್ಚಿಯನ್ ಮತ್ತು ಅವನ ಸಚಿವ ಸಂಪುಟದವರೊಂದಿಗಿನ ಭಿನ್ನಾಭಿಪ್ರಾಯದ ಕಾರಣದಿಂದ  ಯುರಾನಿಬೋರ್ಗ್ ವೀಕ್ಷಣಾಲಯದಿಂದ 1597ರಲ್ಲಿ ಟೈಕೋ  ನಿರ್ಗಮನಿಸಬೇಕಾಗುತ್ತದೆರೋಮಿನ ದೊರೆ ಎರಡನೆಯ ರುಡಾಲ್ಫ್ ತನ್ನ ಆಸ್ಥಾನಕ್ಕೆ ಟೈಕೋನನ್ನು ಆಹ್ವಾನಿಸುತ್ತಾನೆ. ಆಹ್ವಾನದ ಮೇರೆಗೆ ಟೈಕೋ ಸಕುಟುಂಬ ಸಮೇತನಾಗಿ ಪ್ರಾಗಿಗೆ  ತಲುಪುತ್ತಾನೆರೋಮ್ ದೊರೆಯ ಸಹಾಯದಿಂದ ಪ್ರಾಗ್‌ ನ ಬಳಿ ಒಂದು ಖಗೋಳ ವೀಕ್ಷಣಾಲಯವನ್ನು 1599ರಲ್ಲಿ ನಿರ್ಮಿಸಿ ತನ್ನ ಸಂಶೋಧನೆಯನ್ನು ಮುಂದುವರೆಸುತ್ತಾನೆ. ಇಲ್ಲಿ ಟೈಕೋ ಬ್ರಾಹೆಗೆ ಸಹಾಯಕನಾಗಿ  ಯೋಹಾನಸ್ ಕೆಪ್ಲರ್ ಬಂದು ಸೇರುತ್ತಾನೆ. ಜೋಡಿಯು ಅತ್ಯಂತ ನಿಖರವಾದ ನಕ್ಷತ್ರ ಪಟಗಳನ್ನು ರಚಿಸಿ ಬಿಡುಗಡೆ ಮಾಡುತ್ತಾರೆ. ಮುಂದೆ ಟೈಕೋನ ನಿಧನದ ನಂತರ ಕೆಪ್ಲರ್ ಗ್ರಹಗಳ ಚಲನೆಗೆ ಸಂಬಂಧಿಸಿದಂತೆ ಪ್ರಖ್ಯಾತವಾದ ತನ್ನ ಮೂರು ನಿಯಮಗಳನ್ನು ಪ್ರಕಟಿಸುತ್ತಾನೆ..   ಕಾಕತಾಳೀಯವೆಂದರೆ  1577 ಕಾಣಿಸಿಕೊಂಡ  ಬೃಹತ್ ಧೂಮಕೇತುವನ್ನು ಯುರಾನಿಬೋರ್ಗ್ ವೀಕ್ಷಣಾಲಯದಿಂದ  ಟೈಕೋ ಆಳವಾಗಿ ಅಧ್ಯಯನ ಮಾಡುತ್ತಿದ್ದಾಗ ಕೆಪ್ಲರನಿಗೆ ಕೇವಲ ಏಳು ವರ್ಷ ವಯಸ್ಸು. ಆಗ ಬಾಲಕ ಕೆಪ್ಲರನನ್ನು ಅವನ ತಾಯಿ ಮನೆಯಿಂದ ಹೊರಗೆ  ಬಲವಂತದಿಂದ ಕರೆದು ತಂದು, ಧೂಮಕೇತುವನ್ನು ತೋರಿಸುತ್ತಿದ್ದಳಂತೆ!!

 ಟೈಕೋ 1571ರಲ್ಲಿ ಕಿರಿಸ್ಟೆನ್ ಎ೦ಬ ಯುವತಿಯನ್ನು ಪ್ರೀತಿಸುತ್ತಾನೆಆಕೆ ಸಾಮಾನ್ಯ ಮನೆತನದವಳಾದ್ದರಿಂದ  ಟೈಕೋನ ಕುಟುಂಬದವರು  ಮತ್ತು ಚರ್ಚ್ ಅವರ ಮದುವೆಗೆ ಸಮ್ಮತಿ  ನೀಡುವುದಿಲ್ಲ.   ಹೀಗಿದ್ದರೂ  ಕಿರಿಸ್ಟೆನ್ ಟೈಕೋ  ಬದುಕಿರುವವರೆಗೂ ಅವನ  ಜೊತೆಯಾಗಿಯೇ ಮುವತ್ತು ವರ್ಷಗಳಷ್ಟು ಸುಧೀರ್ಘ ಕಾಲ  ಕಷ್ಟ ಸುಖಗಳಲ್ಲಿ ಪಾಲುಗೊಳ್ಳತ್ತಾ ಒಟ್ಟಿಗೇ ಜೀವನವನ್ನು ಸವೆಸುತ್ತಾರೆ. ಟೈಕೋನ ಮುಂಗೋಪ  ಅವನ ಮೂಗಿಗೂ ಕುತ್ತು ತಂದಿದ್ದು ಒಂದು ರೋಚಕ ಘಟನೆ. ಟೈಕೋಗೆ ಇಪ್ಪತ್ತು ವರ್ಷವಿದ್ದಾಗ ನಡೆದ ವಿಲಕ್ಷಣ ಘಟನೆಯಿಂದ ಟೈಕೋ ಶಾಶ್ವತವಾಗಿ ತನ್ನ ಮೂಗನ್ನು ಕಳೆದುಕೊಳ್ಳಬೇಕಾಯಿತು. ಯಾರು ಶ್ರೇಷ್ಟ ಗಣಿತಜ್ಞರು ಎ೦ಬ ವಿಚಾರಕ್ಕೆ ಸಂಬಂಧಿಸಿದಂತೆ ಅವನಿಗೂ ಅವನ ದಾಯಾದಿಯೊಬ್ಬನಿಗೂ ನಡುವೆ ಆರಂಭವಾದ  ವಾಗ್ವಾದ ಇಬ್ಬರೂ  ಕತ್ತಿ ಹಿಡಿದು ಕಾದಾಡುವ ಮಟ್ಟಕ್ಕೆ ತಲುಪಿತು. ಆಗ ಎದುರಾಳಿ ಬೀಸಿದ ಕತ್ತಿಯು ಟೈಕೋನ ಮೂಗನ್ನು ಕೊಚ್ಚಿ ಹಾರಿಸಿ ಬಿಟ್ಟಿತು. ಅದಾದ ನಂತರದ ದಿನಗಳಲ್ಲಿ  ಅಂಗವೈಕಲ್ಯವನ್ನು ಮರೆ ಮಾಡಲು ಟೈಕೋ ಲೋಹದಿಂದ ತಯಾರಿಸಿದ ಮೂಗನ್ನು ಧರಿಸುತ್ತಿದ್ದನಿತ್ಯ ಬಳಕೆಗೆ ಇತ್ತಾಳೆಯ ಮೂಗು, ವಿಶೇಷ ಸಂದರ್ಭದಲ್ಲಿ ಬಳಸಲು ಚಿನ್ನ ಲೇಪಿತ ಬೆಳ್ಳಿಯ ಮೂಗು!! 

  ಯುರಾನಿಬೋರ್ಗ್ ವೀಕ್ಷಣಾಲಯವಿದ್ದ ವೆನ್ ದ್ವೀಪವನ್ನು ಡೆನ್ಮಾರ್ಕಿನ ದೊರೆ ಎರಡನೆಯ ಫೆಡ್ರಿಕ್ ಉಂಬಳಿಯಾಗಿ ಟೈಕೋಗೆ ನೀಡಿರುತ್ತಾನೆ. ಅಲ್ಲಿ ಬರುವ ಕಂದಾಯವನ್ನು ಬಳಸಿಕೊಂಡು ಅವನಿಗೆ ಇಷ್ಟವಾದಂತೆ ಖಗೋಳ ವೀಕ್ಷಣೆ ಮಾಡಲು ವ್ಯವಸ್ಥೆಯಾಗಿರುತ್ತದೆ. ಅಲ್ಲಿನ ರೈತರು, ಕೂಲಿ ಕಾರ್ಮಿಕರ ಮೇಲೆ ಟೈಕೋ ದೌರ್ಜನ್ಯ ನಡೆಸುತ್ತಿದ್ದನೆಂದೂ, ಅವನು ದುಬಾರಿ ಕರ ವಿಧಿಸುತ್ತಿದ್ದನೆಂದು ಅವನ ಅತಿರೇಕಗಳನ್ನು ಕುರಿತು  ಹಲವಾರು ಬಾರಿ ಡೆನ್ಮಾರ್ಕಿನ  ದೊರೆಗೆ   ದೂರು ಹೋಗಿರುತ್ತದೆ. ಅವನ  ಸರ್ವಾಧಿಕಾರಿ ಧೋರಣೆಯೇ ಅವನು ವೆನ್ ದ್ವೀಪವನ್ನೂ, ಯುರಾನಿಬೊರ್ಗ್ ವೀಕ್ಷಣಾಲವನ್ನು ತೊರೆಯಬೇಕಾಗಿ ಬಂದದ್ದಕ್ಕೆ ಕಾರಣವೆಂದು ಹೇಳಲಾಗುತ್ತದೆಟೈಕೋ ಮತ್ತು ಕೆಪ್ಲರನ  ನಡುವಿನ ಬಾಂಧವ್ಯವೂ  ಸುಮಧುರವಾಗಿರಲಿಲ್ಲ. ತಾತ್ವಿಕವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಅನೇಕ ಇದ್ದವು. ಟೈಕೋಗೆ ಕೆಪ್ಲರನಂತಹ ಪ್ರತಿಭಾನ್ವಿತ ಸಹಾಯಕನ ಅಗತ್ಯವಿತ್ತು. ಕೆಪ್ಲರನಿಗೆ ಜೀವನ ನಿರ್ವಹಣೆಗೆ ಆಶ್ರಯ ಮತ್ತು ಸಂಶೋಧನೆಗೆ ವೀಕ್ಷಣಾಲಯದ ಅವಶ್ಯಕತೆ ಇದ್ದಿತುಹೀಗೆ  ಅನಿವಾರ್ಯಗಳು ಇಬ್ಬರನ್ನು ಒಟ್ಟಿಗಿರಿಸಿದ್ದವು.       ಟೈಕೋನ ಸಾವಿನಲ್ಲಿ  ಕೆಪ್ಲರನ ಕೈವಾಡವಿತ್ತೆಂದು  ಮತ್ತು ಕೆಪ್ಲರನ ನಿಯಮಗಳನ್ನು ಟೈಕೋನ ಸಂಶೋಧನೆಗಳ ಕೃತಿ ಚೌರ್ಯವೆಂದು ಕೆಲವರು ಅನುಮಾನಿಸಲು ಇದೇ ಕಾರಣ  ಇದ್ದರೂ ಇರಬಹುದು. ಟೈಕೋಗೆ ಔತಣಕೂಟದಲ್ಲಿ ಪಾನಕೂಟಗಳಲ್ಲಿ ಭಾಗವಹಿಸುವುದುಚೆನ್ನಾಗಿ ತಿನ್ನುವುದು. ಕುಡಿಯುವುದು ಅತ್ಯಂತ ಇಷ್ಟದ ಹವ್ಯಾಸ. ಹೀಗೆ ಒಂದು ಔತಣಕೂಟದಲ್ಲಿ ಕುಳಿತು  ಅತಿಯಾಗಿ  ತಿಂದು, ಕುಡಿದು  ಕುಳಿತ ಜಾಗದಿಂದ ಅವನಿಗೆ  ಮೇಲಕ್ಕೆ ಎದ್ದೇಳಲು  ಆಗಲೇ ಇಲ್ಲಮೂತ್ರಕೋಶ ಒಡೆದು ಹಾನಿಯಾದ  ಸಮಸ್ಯೆಯಿಂದ ಹಾಸಿಗೆ ಹಿಡಿಯುತ್ತಾನೆ. ಇದಾದ ಎರಡುವಾರಗಳಲ್ಲಿ  ತನ್ನ 58ನೇ ವಯಸ್ಸಿನಲ್ಲಿ 1601 ಅಕ್ಟೋಬರ್  24 ರಂದು ತನ್ನ ಕೊನೆಯುಸಿರೆಳೆಯುತ್ತಾನೆ. ಅವನ ದೇಹವನ್ನು ಪ್ರಾಗ್ ಚರ್ಚವೊಂದರಲ್ಲಿ ಸಮಾದಿ ಮಾಡಲಾಗಿದೆ.  

 ಟೈಕೋ  ಬ್ರಾಹೆಯ ಪ್ರಮುಖ ಕೊಡುಗೆ ಎ೦ದರೆ, ನಕ್ಷತ್ರಗಳನ್ನು ಗ್ರಹಗಳನ್ನು  ನಿಯಮಿತವಾಗಿ ವೀಕ್ಷಣೆ ಮಾಡಿ  ನಿಖರವಾಗಿ ಅವುಗಳ ಸ್ಥಾನಗಳನ್ನು ಗುರ್ತಿಸಿದ್ದು. ಅರಿಸ್ಟಾಟಲ್ ಪ್ರತಿಪಾದಿಸಿದ ಭೂಕೇಂದ್ರ ಸಿದ್ಧಾಂತದಂತೆ  ಭೂಮಿ ಕೇಂದ್ರವಾಗಿರುವ  ಆಕಾಶಗೋಳದಲ್ಲಿ  ಎರಡು ಮುಖ್ಯ ಗೋಳಗಳಿವೆ. ಚಂದ್ರ ಭೂಮಿಯನ್ನು ಸುತ್ತುತ್ತಿರುವ ಪಥಕ್ಕಿಂತ ಕೆಳಗಿರುವ ಸುಬ್ಲೂನಾರ್  ಗೋಳ ಮೊದಲನೆಯದು. ಇದರಲ್ಲಿ  ಬದಲಾವಣೆಗೆ ಒಳಗಾಗುವ ಗಾಳಿ, ಬೆಂಕಿ, ನೀರು ಮತ್ತು ನೆಲ  ಇವೆ. ಇದರ ಮೇಲಿನದು ಸೂಪರ್ ಲೂನಾರ್ ಗೋಳ ಇದರಲ್ಲಿ ಗ್ರಹಗಳು, ನಕ್ಷತ್ರಗಳು ಮುಂತಾದ ಆಕಾಶ ಕಾಯಗಳು ಬದಲಾವಣೆಗೆ ಒಳಗಾಗದೆ ಶಾಶ್ವತವಾಗಿರುತ್ತವೆ. ಮತ್ತು ಇವೆಲ್ಲವೂ ಭೂಮಿಯನ್ನು ಸುತ್ತುತ್ತಿವೆ ಎ೦ದು ಆಗಿದ್ದಿತು1572ರಲ್ಲಿ ಸಂಭವಿಸಿದದಿನದಿಂದ ದಿನಕ್ಕೆ ಬದಲಾಗುತ್ತಿದ್ದ ಮಹಾನವ್ಯವನ್ನು ಟೈಕೋ  ಗುರುತಿಸಿ ಅದರ ಅಧ್ಯಯನ ಮಾಡಿದ್ದುಅದು ಭೂಮಿಗೆ  ಚಂದ್ರನಿಗಿಂತ ಅತಿ ದೂರದಲ್ಲಿದೆಯೆಂದು ನಿರೂಪಿಸಿದ್ದುಅಂದಿನ ಖಗೋಳ ಶಾಸ್ತ್ರಜ್ಞರು ನಂಬಿದ್ದ ಸೂಪರ್ ಲೂನಾರ್ ಮತ್ತು ಸಬ್ ಲೂನಾರ್ ಸಿದ್ಧಾಂತಕ್ಕೆ ಬಿದ್ದ ಹೊಡೆತವಾಗಿತ್ತು. 1577 ಕಾಣಿಸಕೊಂಡ ಒಂದು ಬೃಹತ್ ಧೂಮಕೇತುವನ್ನು ವರ್ಷ  ನವೆಂಬರ್ 13ರಿಂದ ಆರಂಭಿಸಿ   ಟೈಕೋ 74ದಿನಗಳ  ಕಾಲ ನಿರಂತರವಾಗಿ ಅಧ್ಯಯನ ಮಾಡಿದನು. ಧೂಮಕೇತುವಿನ ಬಾಲ ಸೂರ್ಯನಿಗೆ ವಿರುದ್ಧ ದಿಕ್ಕಿನಲ್ಲಿ ಇದ್ದಿದ್ದು ಮತ್ತು ಧೂಮಕೇತು ಚಂದ್ರನ ಪಥಕ್ಕಿಂತ ಹೊರಗೆ  ಭೂಮಿಯಿಂದ ತುಂಬಾ ದೂರದಲ್ಲಿ ಇದ್ದದ್ದನ್ನು  ನಿಖರವಾಗಿ ಗುರ್ತಿಸಿದ್ದನು. ಧೂಮಕೇತುವು ಭೂವಲಯದಲ್ಲಿ ಉಂಟಾಗುವ ವಿದ್ಯಮಾನವೆಂದೂ ಅದು  ಸಮಾಜದಲ್ಲಿ ಮುಂದೆ ಆಗಲಿರುವ  ಅನಾಹುತಕ್ಕೆ ಕಾರಣ, ಎಂಬ ನಂಬಿಕೆಗೆ ಇದು ವಿರುದ್ಧವಾಗಿದ್ದಿತು. ಟೈಕೋ ನಡೆಸಿದ ಸಂಶೋಧನೆಯ ಟಿಪ್ಪಣಿಗಳು ಆಧಾರದ ಮೇಲೆಯೇ ಮುಂದೆ   ಕೆಪ್ಲರ್ ಗ್ರಹಗಳ ಚಲನೆಯ   ನಿಯಮಗಳನ್ನು ನಿರೂಪಿಸಲು ಸಾಧ್ಯವಾದದ್ದು.     ಎಲ್ಲಾ ಸಂಶೋಧನೆಗಳ  ಪರಿಣಾಮವಾಗಿ ಕೊಪರ್ನಿಕಸನ ಸೂರ್ಯ ಕೇಂದ್ರ ವ್ಯವಸ್ಥೆ ಸಿದ್ಧಾಂತದ ಗಟ್ಟಿತನ ಸ್ವತಃ ಟೈಕೋಗೆ ಮನವರಿಕೆಯಾಗಿದ್ದಿತುಆದರೆ,  ಭೂಕೇಂದ್ರ ವ್ಯವಸ್ಥೆ ಸಿದ್ಧಾಂತವನ್ನು ಪ್ರಬಲವಾಗಿ ಪ್ರತಿಪಾದಿಸುವ ದೊರೆ ಮತ್ತು ಚರ್ಚಿನ ದಾಕ್ಷಿಣ್ಯದಲ್ಲಿ  ಅವನಿದ್ದನುಟೈಕೋ ಪ್ರೀತಿಸಿದ್ದ ಕ್ರಿಸ್ಟಿನಾಗೆ ಮಡದಿಯ ಸ್ಥಾನಮಾನಗಳನ್ನು ಆಗಲಿ ಆಕೆಯಿಂದ ಜನಿಸಿದ  ಅವನ  ಎ೦ಟು ಜನ  ಮಕ್ಕಳಿಗೆ ಸಾಮಾಜಿಕ  ಮನ್ನಣೆಯನ್ನಾಗಲಿ    ಡೆನ್ಮಾರ್ಕಿನಲ್ಲಿ ನೀಡಿರಲಿಲ್ಲ.   ಆದರೆ, ಪ್ರಾಗ್ನಲ್ಲಿ ಉತ್ತಮ  ಜೀವನದ ಜೊತೆ ಜೊತೆಗೆ  ಡೆನ್ಮಾರ್ಕಿನಲ್ಲಿ   ದೊರೆಯದೇ ಇದ್ದಂತಹ ಸಾಮಾಜಿಕ ಸ್ಥಾನಮಾನಗಳನ್ನು ಟೈಕೋನ ಕುಟುಂಬಕ್ಕೆ  ರೋಮಿನ ದೊರೆ ನೀಡಿದ್ದ .    ಹೀಗಾಗಿ ಟೈಕೋ ಮಂಡಿಸಿದ ಸಿದ್ಧಾಂತವು ಸೂರ್ಯ ಕೇಂದ್ರ ವ್ಯವಸ್ಥೆ ಮತ್ತು ಭೂಕೇಂದ್ರ ವ್ಯವಸ್ಥೆಗಳ ಸಮನ್ವಯದಂತೆ ಇದ್ದಿತುಅವನ ಪ್ರಕಾರ ಎಲ್ಲಾ ಗ್ರಹಗಳು ಸೂರ್ಯನ ಸುತ್ತಲೂ ಸುತ್ತುತ್ತವೆವಿಶ್ವದ ಕೇಂದ್ರವಾಗಿರುವ ಭೂಮಿಯ ಸುತ್ತಲೂ ಇತರೆ ಗ್ರಹಗಳೊಂದಿಗೆ  ಸೂರ್ಯ ಮತ್ತು ಚಂದ್ರ ಸುತ್ತುತ್ತವೆ ಎ೦ಬುದಾಗಿದ್ದಿತು. ಇದು ಭೂ-ಸೂರ್ಯ ಕೇಂದ್ರ ವ್ಯವಸ್ಥೆಯ ಸಿದ್ಧಾಂತ. ಸುಮಾರು ವರ್ಷಗಳವರೆಗೆ ಚರ್ಚೆಯಲ್ಲಿದ್ದು ಇದು  ಕ್ರಮೇಣ ಬಿದ್ದು ಹೋಯಿತಾದರೂ  ವೀಕ್ಷಣಾ ಖಗೋಳಶಾಸ್ತ್ರದಲ್ಲಿ ಟೈಕೋ ಬ್ರಾಹಿಯ ಕೊಡುಗೆಯ ಮಹತ್ವವೇನು  ಕಡಿಮೆಯಾಗಲಿಲ್ಲ.



ಚಂದ್ರನ ದಕ್ಷಿಣ ಭಾಗದಲ್ಲಿ ಟೈಕೋ ಕುಳಿ (ಚಿತ್ರ ಕೃಪೆ : ನಾಸಾ ಎಚ್ ಎಸ್ ಟಿ )

  ಟೈಕೋ ಬ್ರಾಹೆಯ ಕೊಡುಗೆಗಳ ನೆನಪಿನಲ್ಲಿ ಚಂದ್ರನ ದಕ್ಷಿಣ ಭಾಗದಲ್ಲಿರುವ 85 ಕಿ.ಮೀ ವ್ಯಾಸವಿರುವ   ಒಂದು ದೊಡ್ಡ ಕುಳಿಗೆ ಟೈಕೋ ಎ೦ದು  ಹೆಸರಿಸಲಾಗಿದೆ. ಮಂಗಳದ ಮೇಲಿರುವ ಒಂದು ಕುಳಿಗೆ ಟೈಕೋ ಬ್ರಾಹೆ ಎ೦ದು ಹೆಸರಿಡಲಾಗಿದೆ. ಕ್ಷುದ್ರಗ್ರಗಳ ವಲಯದಲ್ಲಿರುವ ಕ್ಷುದ್ರಗ್ರಹ ಒಂದಕ್ಕೆ ಟೈಕೋ ಎ೦ದು ನಾಮಕರಣ ಮಾಡಲಾಗಿದೆ1572 ನಕ್ಷತ್ರ ಸ್ಪೋಟವನ್ನು  ಟೈಕೋ ಮಹಾನವ್ಯವೆಂದು  ಕರೆಯಲಾಗಿದೆ.

  

No comments:

Post a Comment