Friday, November 3, 2023

ಒಗಟುಗಳು ನವಂಬರ್‌ ೨೦೨೩

ಒಗಟುಗಳು ನವಂಬರ್‌ ೨೦೨೩

೧. ಏಕ ಲಿಂಗ ಪುಷ್ಪ ಬಿಡುವ  ಸಸ್ಯ ನಾ 

 ಎಲೆಗಳು ಔಷಧೀಯ ರಾಸಾಯನಿಕಗಳ ಖಜಾನೆ

ಕಿರುತಟ್ಟೆಗಳ ಭಕ್ಷಿಸುವ  ರೋಗಕ್ಕಿದೆ ರಾಮಬಾಣ

ಹಣ್ಣುಗಳೋ ಸವಿರುಚಿಯೊಡನೆ ನೀಡುತ್ತವೆ ಆರೋಗ್ಯ 

ಸುಳಿವರಿತು ಹೇಳಬಲ್ಲಿರೇ ನೀವು?


೨.  ಎರಡು ದ್ರಾವಕಗಳ ಪ್ರಬಲ ಮಿಶ್ರಣ

ಪ್ರಬಲ ಆಮ್ಲಗಳ ಮಿಶ್ರಣವೆ ಇದು.  ‌

ಕ್ರಿಯಾಶೀಲತೆಯ ಸರಣಿಯಲ್ಲಿನ ಕೆಳಗಿನ ಲೋಹಗಳ 

ವಿಲೀನಗೊಳಿಸಲೆಂದೇ ತಯಾರಿಸಿದ ದ್ರಾವಣ 

ಸುಳಿವರಿತು ಹೇಳಿ ಮಿಶ್ರಣದೊಳಗಿನ ದ್ರಾವ್ಯ ದ್ರಾವಕಗಳ


 ೩.  ವಿಜ್ಞಾನಿಯ ಹೆಸರಿದ್ದರೂ  ವಿಜ್ಞಾನಿಯಲ್ಲ!!!

 ಬಲದೊಳಗೆ ಅಡಗಿದ್ದರೂ 

ಉದ್ದ ಅಗಲಗಳ ಗುಣಿಸುತ್ತಲೇ ಒತ್ತಡದ ಏಕಮಾನವಾಗುವೆ 

ಸುಳಿವ ಬಳಸಿ ಒಗಟೊಡೆಯಬಲ್ಲಿರೇ ನೀವು?‌


೪.  ಸೆಲ್ಸಿಯಸ್ ಅಳತೆಯಲ್ಲೂ ಅಷ್ಟೇ

 ಫ್ಯಾರನ್ ಹೀಟ್ ನಲ್ಲೂ ಅದೇ ಮೌಲ್ಯ 

ಉಷ್ಣತೆ ಬದಲಾಗದು 

ಕೆಲ್ವಿನ್ ಅಳತೆ ಮಾನದಲ್ಲಿ ಫ್ಯಾರನ್ ಹೀಟಿನಲ್ಲೂ ಅದೇ ಮೌಲ್ಯ 

ಉಷ್ಣತೆ ಬದಲಾಗದು ಕೆಲ್ವಿನ್ ಅಳತೆ ಮಾನದಲ್ಲಿಲ್ಲ ಈ ಮೌಲ್ಯ  

ಸುಳಿವು ಸಿಕ್ಕಿತೇ ನಿಮಗೆ   


No comments:

Post a Comment