Thursday, January 4, 2024

ಮನುಕುಲಕ್ಕೆ ಆಧುನಿಕ ವಿಜ್ಞಾನದ ಕೊಡುಗೆ ಕ್ಷ-ಕಿರಣ ಮತ್ತು ರೇಡಿಯೋ ಥೆರಪಿ

 

ಮನುಕುಲಕ್ಕೆ ಆಧುನಿಕ ವಿಜ್ಞಾನದ ಕೊಡುಗೆ ಕ್ಷ-ಕಿರಣ  ಮತ್ತು ರೇಡಿಯೋ ಥೆರಪಿ 

ಲೇಖನ: ಸಿದ್ದಪ್ಪ ಟಿ ಕಾಟೀಹಳ್ಳಿ

J H PATEL ಬಡಾವಣೆ, ದಾವಣಗೆರೆ

 

            ಮಾನವ ದೇಹದಲ್ಲಿ ಕ್ಷಯ, ಅರ್ಬುದ, ಮೂಳೆಮುರಿತ, ಮತ್ತಿತರ ತೊಂದರೆಯನ್ನು ಪತ್ತೆ ಹಚ್ಚಲು ಕ್ಷಕಿರಣ ಹಾಯಿಸಿ ಪರೀಕ್ಷಿಸುವರು. ಏಕೆಂದರೆ ಕ್ಷ ಕಿರಣವು ಶಕ್ತಿಶಾಲಿಯಾಗಿದ್ದು ದೇಹದ ಮೂಳೆ ಮತ್ತು ಮಾಂಸಖಂಡಗಳಲ್ಲಿ ಸುಲಭವಾಗಿ ಹಾದು ಹೋಗುವಂತಹ ಗುಣ ಹೊಂದಿದೆ. ಆದರೆ ಕ್ಯಾಲ್ಸಿಯಂನಂತ ಹೆಚ್ಚು ಸಾಂದ್ರವಿರುವ ಪದಾರ್ಥಗಳ ಮೂಲಕ ಹಾದು ಹೋಗಲಾರದು. ಇದರಿಂದಾಗಿಯೇ ಮೂಳೆ ಮತ್ತು ಹಲ್ಲುಗಳ ಭಾಗವು ಯಾವ ಭಾಗದಲ್ಲಿ ಮುರಿದಿದೆ ಎಂಬುದನ್ನು ತಿಳಿಯಬಹುದು. ಅಷ್ಟೇ ಅಲ್ಲ ಭ್ರೂಣ ಬೆಳವಣಿಗೆ ಹಂತವನ್ನು ಸಹ ಇದರಿಂದ ತಿಳಿಯಬಹುದು.

ದೇಹದ ಮೇಲೆ ಕ್ಷ ಕಿರಣದ ಪರಿಣಾಮ

1.        ಗರ್ಭಾವಸ್ಥೆಯಲ್ಲಿ ಮಗು ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಲುಕೇಮಿಯಾ ಅಥವಾ ರಕ್ತದ ಕ್ಯಾನ್ಸರ್ ಕೂಡ ಬರಬಹುದು.

2.        ಎದೆಗೂಡು ಸ್ವಾಶಕೋಶದ ಮೇಲೆ ಕ್ಷ ಕಿರಣ ಅವಶೇಷ ಉಳಿದು ಗಾಸಿಗೊಳಿಸಬಹುದು.

3.        ಲುಕೇಮಿಯ, ಥೈರಾಯಿಡ್ ಗ್ರಂಥಿ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಮೂಳೆ ಕ್ಯಾನ್ಸರ್, ರಕ್ತ ಮತ್ತು ಚರ್ಮದ ಕ್ಯಾನ್ಸರ್ ಅಲ್ಲದೆ ಕಣ್ಣು ಕೂಡ ದೃಷ್ಟಿ ಹೀನ ಆಗಬಹುದು.

4.        12% ವೈದ್ಯಕೀಯ ಉಪಕರಣಗಳಿಂದ ಕ್ಷ ಕಿರಣ ಶೇಷ ಉಳಿದರೆ, ಅಣುಸ್ಥಾವರಗಳಿಂದ ಕೇವಲ 0.5% ಉಂಟಾಗುತ್ತದೆ.

5.        ಮೂಳೆಯಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚು ಇದ್ದರೆ ಕ್ಷ ಕಿರಣದ ಹೀರಿಕೆ ಪ್ರಮಾಣ ಹೆಚ್ಚು. ಇದನ್ನು ರೇಡಿಯೋಗ್ರಾಫ್ ನಿಂದ ತಿಳಿಯಬಹುದು.



ಕ್ಷ ಕಿರಣದ ವಿವಿಧ ಕ್ಷೇತ್ರಗಳು ಅಥವಾ ಆಯಾಮಗಳು

1.        ಕ್ಷ ಕಿರಣದ ಫ್ಲೂರೋಸ್ಕೋಪಿ: ಕರುಳಿನಲ್ಲಿ ಅನ್ನಸಾಗುವ ನಾಳದಲ್ಲಿ ಊತಗಳೇನಾದರೂ ಇದ್ದರೆ ತಡೆಯಾಗುತ್ತದೆ. ಇದನ್ನು ರೇಡಿಯೋಗ್ರಾಫ್ ನಿಂದ ಪತ್ತೆ ಹಚ್ಚಲು ಸಾಧ್ಯವಿಲ್ಲ.  ಇದನ್ನು ಡಬ್ಲ್ಯೂ ಬಿ ಕೆನಾನ್ ಎಂಬುವರು ಬೇರಿಯಂ ದ್ರಾವಕವನ್ನು ಕೊಟ್ಟು ಪರೀಕ್ಷಿಸಬಹುದೆಂದು ಮೊದಲು ತಿಳಿಸಿಕೊಟ್ಟರು. ಇದರಿಂದಾಗಿ ಫ್ಲೂರೋಸ್ಕೋಪಿ ಮಾಡುವಾಗ ಬೇರಿಯಂ ದ್ರಾವಕ ಮೊದಲು ಕೊಟ್ಟು ಅದು ದೇಹದಲ್ಲಿ ಸಂಚರಿಸಿದ ಭಾಗಗಳಲ್ಲಿ ರಕ್ತ ಸಂಚಾರ, ಹೃದಯದ ಕ್ರಿಯೆ, ಮೂತ್ರಕೋಶ ಸಮರ್ಪಕತೆ ಎಲ್ಲವನ್ನು ಪರೀಕ್ಷಿಸಿ ನಿರ್ದಿಷ್ಟವಾಗಿ ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ವೈದ್ಯರಿಗೆ ನೆರವಾಗಿದೆ.



2.        ಕಂಪ್ಯೂಟೆಡ್ ಆಕ್ಸಿಯಲ್ ಟೋಮೋಗ್ರಫಿ: (CAT) ಈ ಯಂತ್ರವು 360° ದೇಹದ ಸುತ್ತ ತಿರುಗಿ ಬೇಕಾದ ಪ್ರಮಾಣದಲ್ಲಿ ಅವಶ್ಯವಿರುವ ಭಾಗದ ಚಿತ್ರಣವನ್ನು ವೀಕ್ಷಿಸುವವರಿಗೆ ಟೆಲಿವಿಜನ್ ಗೆ ವರ್ಗಾಯಿಸುತ್ತದೆ. ಇದನ್ನು ೧೯೭೨ ರಲ್ಲಿ ಜೆಪಿ ಹೌಸ್ ಎಂಬುವರು ಆವಿಷ್ಕಾರ ಮಾಡಿದರು. ಈ ವಿಧಾನದಿಂದ ಅನೇಕ ಧೀರ್ಘ ಕಾಯಿಲೆಗಳಾದ ಕ್ಯಾನ್ಸರ್ ಕ್ಷಯ ಅಸ್ತಮಗಳಂತಹ ಕಾಯಿಲೆಯನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.


3.        ಕ್ಷಕಿರಣ ಸ್ಪೆಕ್ಟ್ರೋಸ್ಕೋಪಿ ದೇಹದಲ್ಲಿ ಅಷ್ಟೇ ಅಲ್ಲ ರಾಸಾಯನಿಕ ಅಣು ಪರಮಾಣು ಸ್ಥಾನವನ್ನು ಮತ್ತು ಅದರ ಪರಿಣಾಮವನ್ನು ತಿಳಿಯಬಹುದು.

4.        ಕ್ಷಕಿರಣ ಆಸ್ಟ್ರೋನಮಿ ಚಿನ್ನ, ಬೆಳ್ಳಿ, ಕ್ರೋಮಿಯಂ, ಕೋಬಾಲ್ಟ್ ನಂತ ಸಂಯುಕ್ತವಿರುವ ಔಷಧ ಪರಿಣಾಮ ತಿಳಿಯಲು, ಕಾರ್ಬನ್ ಡೇಟಿಂಗ್ ವಿಧಾನದಿಂದ ಮಾನವನ ಅವನತಿ ಸಂತತಿ ತಿಳಿಯಬಹುದು ಅಲ್ಲದೆ ನಿಖರ ಆಯಸ್ಸು ತಿಳಿಯಬಹುದು.

5.        ರೇಖೀಯ ಉತ್ಕರ್ಷಕ ಅಥವಾ ಲೀನಿಯರ್ ಆಕ್ಸಲರೇಟರ್ ಇದನ್ನು ಕ್ಯಾನ್ಸರ್ ಪತ್ತೆಗೆ ಬಳಸುತ್ತಾರೆ.

6.        ಸಿಂಕ್ರೋತಾನ್ ವಿಕಿರಣ ಅಯಸ್ಕಾಂತ ಪರೀಕ್ಷೆ (MRI) ಮೃದು ಅಂಗಾಂಶಗಳ ಪತ್ತೆಗಾಗಿ  ಕೈಗೊಳ್ಳುತ್ತಾರೆ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಮಹತ್ವ ಪಡೆದು ತನ್ನ ಕ್ಷೇತ್ರವನ್ನು ವ್ಯಾಪಿಸಿದೆ.


 ಕ್ಷ-ಕಿರಣದ ಉಪಯೋಗ

1.        ಕ್ಯಾನ್ಸರ್ ಗಡ್ಡೆಯ ಕೋಶವನ್ನು ಸರಿಪಡಿಸಲು ರೇಡಿಯೋ ವಿಕಿರಣ ಚಿಕಿತ್ಸೆಯಲ್ಲಿ ಬಳಸುತ್ತಾರೆ.

2.        ಮೂರು ಆಯಾಮದ ದೇಹದ ಭಾಗಗಳು ಔಷಧೀಯ ಪ್ರಭಾವ ತಿಳಿಯಲು.

3.        ಆ‌ಹಾರ ಹಣ್ಣು ತರಕಾರಿ ಮೇಲೆ ಕಿರಣ ಹಾಯಿಸುವ ಮೂಲಕ ರಫ್ತು ವಹಿವಾಟು ನಡೆಸುವ ಸಲುವಾಗಿ ಬಳಕೆ.

4.        ವೈದ್ಯಕೀಯ ಕ್ಷೇತ್ರದಲ್ಲಿ ನಾವೀನ್ಯತೆ ಪ್ರಯೋಗಕ್ಕೆ ಬಳಕೆ.

ಎಚ್ಚರಿಕೆ

ಅನಗತ್ಯ ಕ್ಷ-ಕಿರಣ ಬಳಕೆಯಿಂದ ಮಕ್ಕಳಿಗೆ ಅಂಗವೈಕಲ್ಯ ಉಂಟಾಗುತ್ತದೆ. ದೇಹ ಮನಸ್ಸು ಪರಿಸರದ ಮೇಲೆ ಪ್ರಭಾವ ಬೀರುತ್ತದೆ. ನೆಲ ಜಲ ಗಾಳಿಗೆ ವಿಕಿರಣ ಮಾಲಿನ್ಯ ಉಂಟಾಗುತ್ತದೆ.

No comments:

Post a Comment