Monday, March 4, 2024

ಪ್ಲಾಸ್ಟಿಕ್ ಎಂಬ ಅಸುರ

ಪ್ಲಾಸ್ಟಿಕ್ ಎಂಬ ಅಸುರ   

                                                          ಲೇಖಕರು :

                                                   ಬಿ ಎನ್ ರೂಪ,   ಸಹ  ಶಿಕ್ಷಕರು,

                                                   ಕೆಪಿಎಸ್ ಜೀವನ್ ಭೀಮ ನಗರ ,

                                                   ಬೆಂಗಳೂರು ದಕ್ಷಿಣ ವಲಯ -4.     


ಪ್ಲಾಸ್ಟಿಕ್ ಪದ ನಮಗೆ ಬಹು ಚಿರಪರಿಚಿತ  ಪದ . ಪದವನ್ನುಹಾಗೂ ಇದರಿಂದ ಆಗುವ ಅನಾಹುತಗಳನ್ನು ನಾವು ಎಲ್ಲೆಡೆಯೂ ಕೇಳುತ್ತಿದ್ದೇವೆ, ರಾಷ್ಟ್ರೀಯ ಅಂತರಾಷ್ಟ್ರೀಯ ವೇದಿಕೆಗಳ ಮೇಲು ಇದರ ಬಗ್ಗೆ ಚರ್ಚೆ ಆಗುತ್ತಿದೆ. ಪ್ಲಾಸ್ಟಿಕ್ ಈ ಪದ ಕೇಳಿದರೆನೇ ಭೂಮಾತೆಯ ಎದೆ  ಗಡಗಡ ನಡುಗುತ್ತಿದೆ .ಭೂಮಾತೆಯ ಒಡಿಲನ್ನು ನಾವು ಹಸಿರು ಮಡಿಲಿನಿಂದ, ಹಸಿರಿನಿಂದ ಕಂಗೊಳಿಸುವ ಬದಲಿಗೆ ಪ್ಲಾಸ್ಟಿಕ್ ಎನ್ನುವ ಅಸುರನನ್ನು ಸೇವಿಸಿದ್ದೇವೆ.

 ಪ್ಲಾಸ್ಟಿಕ್ ಇತ್ತೀಚಿನ ಕೆಲವು ದಶಕಗಳ  ಹೊಸ ವೈಜ್ಞಾನಿಕ ಅನ್ವೇಷಣೆಯಾಗಿದ್ದರು, ಇದರ ಉಪಯೋಗಕ್ಕಿಂತ ಅನಾನುಕೂಲಗಳು ಹೆಚ್ಚಾದವು ,ಏಕೆಂದರೆ ಪ್ಲಾಸ್ಟಿಕ್ ಜೈವಿಕ ವಿಘಟನೆಯವಲ್ಲ, ಜೈವಿಕ ಶಿಥಿಲವಲ್ಲ. ಇತ್ತೀಚೆಗೆ ಪ್ಲಾಸ್ಟಿಕ್ ನ  ವಿಧವಾದ  ಮೈಕ್ರೋ ಪ್ಲಾಸ್ಟಿಕ ಹೆಚ್ಚು ಪ್ರಚಲಿತದಲ್ಲಿರುವ ಪದ.   ಪರಿಸರದ  ವಿವಿಧ ಪರಿಸರ ವ್ಯವಸ್ಥೆಯಲ್ಲಿರುವ ಎಲ್ಲಾ ಜೀವಿಗಳು ಮಾನವನ ಒಳಗೊಂಡಂತೆ ಎಲ್ಲಾ ಜೀವಿಗಳ ಮೇಲೆ ದುಷ್ಪರಿಣಾಮವನ್ನು ಇದು ಬೀರಿರುವುದು  ನಿಜ.

ಎಲ್ಲಾ ನೈಸರ್ಗಿಕ ವಸ್ತುಗಳ ಬದಲಿಗೆ ಪರ್ಯಾಯವಾಗಿ ನಾವು ಪ್ಲಾಸ್ಟಿಕ್ ಗೆ ಮೊರೆ ಹೋಗಿದ್ದೇವೆ ಕಾರಣ ನೈಸರ್ಗಿಕ ಸಂಪನ್ಮೂಲ ಗಳ ಅಲಭ್ಯತೆ ಜನಸಂಖ್ಯೆಯಲ್ಲಿ ಹೆಚ್ಚಳ, ಇತ್ಯಾದಿ ಹಲವಾರು ಕಾರಣಗಳನ್ನು ಇದು ಒಳಗೊಂಡಿದೆ.

ಪ್ಲಾಸ್ಟಿಕ್ ಸಂಶ್ಲೇಷಿತ ಪಾಲಿಮರ್ ವಸ್ತುವಾಗಿದೆ .ಪ್ರಪಂಚದ ಮೊದಲ ಸಂಪೂರ್ಣ ಸಂಶ್ಲೇಷಿತ ಪ್ಲಾಸ್ಟಿಕ್,  ಬೇಕಲೈಟ್ ಆಗಿದೆ.

1907 ನ್ಯೂ ಯಾಕ್ನಲ್ಲಿ ಲಿಯೋ ಬೇಕಲ್ಯಾಂಡ್   ಪ್ಲಾಸ್ಟಿಕ್ ಪದವನ್ನು ಬಳಕೆಗೆ  ತಂದರು. ಪ್ಲಾಸ್ಟಿಕ್ ಪದವು ಗ್ರೀಕ್ ಭಾಷೆಯಿಂದ ನಿಷ್ಪತ್ತಿಯಾಗಿದೆ .

‘ಪ್ಲಾಸ್ಟಿ ಕೋಸ್’ ಎಂಬ ಪದದಿಂದ ಬಂದಿದೆ. ಇದರ ಅರ್ಥ ಯಾವುದೇ ಆಕಾರ ಅಥವಾ ಅಚ್ಚು ಮಾಡುವ ಸಾಮರ್ಥ್ಯವನ್ನು ಇದು ಒಳಗೊಂಡಿದೆ.

ಇತ್ತೀಚಿನ ದಿನಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಇದು ಹೆಚ್ಚು ಚರ್ಚೆಯಲ್ಲಿರುವ ಹಾಗೂ ಪ್ರಚಲಿತದಲ್ಲಿರುವ ಮಾಲಿನ್ಯಕಾರಕ  ಎಂದು ವ್ಯಾಖ್ಯಾನಿಸಲಾಗಿದೆ .

 ಹೆಸರೇ ಸೂಚಿಸುವಂತೆ ಇವು ಸಣ್ಣ ಪ್ಲಾಸ್ಟಿಕ್ ಕಣಗಳು. ಇವುಗಳು ಐದು ಮಿಲಿಮೀಟರ್ ಗಳಿಗಿಂತ ಕಡಿಮೆ (0.2ಇಂಚು) ವ್ಯಾಸದ   ಪ್ಲಾಸ್ಟಿಕ್ ಗಳು ಎಂದು ವ್ಯಾಖ್ಯಾನಿಸಲಾಗಿದೆ. ಮೈಕ್ರೋ ಪ್ಲಾಸ್ಟಿಕಗಳಲ್ಲಿ ಎರಡು ವಿಧಗಳಿವೆ ಪ್ರಾಥಮಿಕ ಮತ್ತು ಮಾಧ್ಯಮಿಕ.

ಪ್ರಾಥಮಿಕ ಮೈಕ್ರೋಪ್ಲಾಸಿಗಳು ವಾಣಿಜ್ಯ ಬಳಕೆಯಿಂದ ,ಬಟ್ಟೆ  ಮೀನುಗಾರಿಕೆಯ ಬಲೆ  ,ಸೌಂದರ್ಯವರ್ಧಕಗಗಳಿಂದ , ಜವಳಿ ಇಂದ ಬರುವ ಮೈಕ್ರೋಫೈಬರ್ ಇತ್ಯಾದಿಗಳಲ್ಲಿ ಕಂಡು ಬರುತ್ತದೆ .ಮಾಧ್ಯಮಿಕ ಮೈಕ್ರೋ ಪ್ಲಾಸ್ಟಿಕ ಗಳು ನೀರಿನ ಬಾಟಲಿಗಳಂತಹ ದೊಡ್ಡ ವಸ್ತುಗಳು ಒಂದೇ ಸ್ಥಳದಲ್ಲಿ  ಸ್ಥಗಿತದಿಂದ ಉಂಟಾಗುವ ಪ್ಲಾಸ್ಟಿಕ್ . ಈ ಕಣಗಳು ಸುಲಭವಾಗಿ ಒಡೆಯುವುದಿಲ್ಲ ,   ವಿಘಟಿಸಲು ನೂರಾರು ಅಥವಾ ಸಾವಿರಾರು ವರ್ಷಗಳೆ ಬೇಕು .

ದೊಡ್ಡ ಪ್ಲಾಸ್ಟಿಕ್ ತಯಾರಿಕೆ ಇಂದ ಬಳಸುವ ರಾಳದ ಉಂಡೆಗಳು ಸೌಂದರ್ಯವರ್ಧಕಗಳಿಂದ, ಬಟ್ಟೆಗಳಿಂದ, ಆಹಾರ ಪ್ಯಾಕೇಜಿಂಗ್ ಕೈಗಾರಿಕಾ ಪ್ರಕ್ರಿಯೆಗಳು ಸೇರಿದಂತೆ ವಿವಿಧ ಮೂಲಗಳಿಂದ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ಸೇರುತ್ತದೆ.

ಪರಿಣಾಮ:-

1) ಸಾಗರ ಸಮುದ್ರದ ಪರಿಸರ ವ್ಯವಸ್ಥೆಯಲ್ಲಿ ಮೈಕ್ರೋ ಪ್ಲಾಸ್ಟಿಕ್ ಗಳ  ಪ್ರಮಾಣ ಹೆಚ್ಚಳ.

2) ಸಮುದ್ರದಲ್ಲಿ ಕಂಡುಬರುವಂತಹ ಜಲಚರ ಜೀವಿಗಳ ದೇಹದಲ್ಲಿ ಇವುಗಳ ಸಾಂದ್ರತೆಯಲ್ಲಿ ಹೆಚ್ಚಳ .

3) ಜೀವಿಗಳ ದೇಹದಲ್ಲಿ ಸಂಗ್ರಹಣೆ ಹಾಗೂ ಆಹಾರ ಸರಪಳಿಯಿಂದ ಒಂದು ಪೋಷಣ ಸ್ಥರದಿಂದ ಮತ್ತೊಂದು ಪೋಷಣ ಸ್ತರಕ್ಕೆ ವರ್ಗಾವಣೆ ಹಾಗೂ ಇದರ ಹೆಚ್ಚಳ ಜೀವಿಗಳ ಸಾವು ವಿವಿಧ ರೋಗಗಳಿಗೆ ಎಡೆಮಾಡಿಕೊಡುತ್ತಿದೆ 4) ಸಾಗರ ಹಾಗೂ ಸಮುದ್ರ ನೀರಿನ ಮಾಲಿನ್ಯ ಹಾಗೂ ಆ ಪರಿಸರ ವ್ಯವಸ್ಥೆಯ ಅಸಮತೋಲನ.

5)ಮೈಕ್ರೋ ಪ್ಲಾಸ್ಟಿಕ ಮಾಲಿನ್ಯದಿಂದ ವಿವಿಧ ಜೀವಿಗಳನ್ನು, ಮಾನವನನ್ನು ಒಳಗೊಂಡಂತೆ ಉಸಿರಾಟದ ತೊಂದರೆ ಹಾಗೂ  ಉರಿಯೂತ ಉಂಟುಮಾಡುತ್ತದೆ.

6) ಮಣ್ಣಿನ ಮಾಲಿನ್ಯ ಮಣ್ಣಿನ ಫಲವತ್ತತೆ ನಿಧಾನಗತಿಯಲ್ಲಿ ಕುಂಠಿತಗೊಳ್ಳುತ್ತಿರುವುದು, ಮಣ್ಣಿನಲ್ಲಿ ವಾಸಿಸುತ್ತಿರುವ ಜೀವಿಗಳ  ಪ್ರಮಾಣದಲ್ಲಿ ಗಣನೀಯ ಕುಂಠಿತವಾಗಿರುವುದು.

7) ವಾತಾವರಣದ ಮಾಲಿನ್ಯ ,ಕುಡಿಯುವ ನೀರಿನಲ್ಲಿ ಇದರ ಸೇರ್ಪಡೆಯಿಂದ ನೀರಿನ ಮಾಲಿನ್ಯ.

ಒಟ್ಟಾರೆಯಾಗಿ ಪ್ಲಾಸ್ಟಿಕ್ ಮುಕ್ತ ಭೂಮಿಯನ್ನಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮುಂದಿನ ಪೀಳಿಗೆಯವರನ್ನು ಇದರ ಪರಿಣಾಮದಿಂದ ರಕ್ಷಿಸಬೇಕು. ಪ್ಲಾಸ್ಟಿಕ್ ನ ವಿವಿಧ  ಸ್ತರಕಣಗಳಿಂದ ಎಲ್ಲಾ ಜೀವಿಗಳ ಮೇಲೆ ಪರಿಸರದ ಮೇಲೆ ಋಣಾತ್ಮಕ ಪರಿಣಾಮಗಳು ಉಂಟಾಗುತ್ತಿರುವುದನ್ನು  ತಗ್ಗಿಸಲು ಎಲ್ಲರೂ ಕೈಜೋಡಿಸಬೇಕು .ಜಾಗತಿಕವಾಗಿ ಪರಿಸರ ತಜ್ಞರು, ಜನಸಾಮಾನ್ಯರು, ವಿಜ್ಞಾನಿಗಳು ,ಸರ್ಕಾರ ,ಸರ್ಕಾರೇತರ ಸಂಸ್ಥೆಗಳು ಎಲ್ಲರೂ ಸೇರಿ ಈ ನಿಟ್ಟಿನಲ್ಲಿ ಕ್ರಮಬದ್ಧವಾದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು.

ಪ್ರಥಮ ಆದ್ಯತೆ ಪ್ಲಾಸ್ಟಿಕ್ ಮುಕ್ತ ಭೂಮಿಯನ್ನಾಗಿಸುವುದು,

 ಪ್ಲಾಸ್ಟಿಕ್ ಪರ್ಯಾಯ ಜೈವಿಕ ಶಿಥಿಲ ವಸ್ತುಗಳ ಬಳಕೆ ,ಇಂತಹ ವಸ್ತುಗಳ ಬಗ್ಗೆ ಸಂಶೋಧನೆ ಹಾಗೂ ಅಭಿವೃದ್ಧಿಪಡಿಸುವುದು .

ನಿಧಾನವಾಗಿ ಪ್ಲಾಸ್ಟಿಕ್ ಬಳಕೆಯನ್ನು ಕುಂಠಿತಗೊಳಿಸುವುದು.

 ಸಾಗರ ಹಾಗೂ ಸಮುದ್ರಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯವನ್ನು ತಗ್ಗಿಸುವುದು.

ಪ್ಲಾಸ್ಟಿಕ್ ಬಳಕೆಯನ್ನು ನಿರಾಕರಿಸಲು ಆಂದೋಲನವನ್ನು ಕೈಗೊಳ್ಳಬೇಕು.

ಜೈವಿಕ ವಿಘಟನೆಯ ಪ್ಲಾಸ್ಟಿಕ್ ಗಳ ಬಳಕೆಗೆ ಹೆಚ್ಚು ಒತ್ತು ಕೊಡುವುದು, ಈ ರೀತಿಯ ಪ್ಲಾಸ್ಟಿಕ್ ನ ಸಂಶೋಧನೆ ಹಾಗೂ ಅಭಿವೃದ್ಧಿಪಡಿಸುವುದು.

ಜೈವಿಕ ವಿಘಟನೆಯ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಶಿಫಾರಸ್ಸು ಮಾಡುವುದು ಇತ್ಯಾದಿ.

ಸುಪ್ರಸಿದ್ಧ ವಿಜ್ಞಾನಿಗಳಾದ ಅಲ್ಬರ್ಟ್ ಐನ್ಸ್ಟೀನ್ ಅವರು ಒಂದು ಹೇಳಿಕೆಯನ್ನು ನೀಡಿದ್ದಾರೆ .  ಪ್ರಪಂಚದಲ್ಲಿರುವ ಯಾವುದೇ ಇಲಿಯು ಇಲಿಯ ಬೋನ್   ಅಥವಾ ಅದರ ಅಧಿಪತನಕ್ಕೆ ಯಾವುದೇ ಒಂದು ಸಂಶೋಧನೆಯನ್ನು ಮಾಡುವುದಿಲ್ಲ ಆದರೆ ಮಾನವನು ಇದನ್ನು ಮಾಡಿದ್ದಾನೆ.

ಹೊಸ ಮನ್ವಂತರ, ಹೊಸದಿಗಂತ ,ಹೊಸ ಪ್ಲಾಸ್ಟಿಕ್ ರಹಿತ ದಿನಗಳನ್ನು ನಾವು ಬರಮಾಡಿಕೊಳ್ಳಬೇಕು ಇಲ್ಲದಿದ್ದರೆ ಮಾನವನ ಜನಾಂಗವು ಅಧಿಪತನಕ್ಕೆ ಹೋಗುವುದು ನಿಶ್ಚಿತ.

 

                                                        

No comments:

Post a Comment