Wednesday, December 4, 2024

ಮರವನೇರುವ ನೀರು.

                                            ಮರವನೇರುವ ನೀರು


ಕವಿಜ್ಞಾನಿ

                       (ಶಿವಶಂಕರಾಚಾರಿ.ಕೆ)

                       ಸಹ ಶಿಕ್ಷಕರು-ವಿಜ್ಞಾನ

        ಸರ್ಕಾರಿ ಪ್ರೌಢಶಾಲೆ-ಕಲ್ಲನಕುಪ್ಪೆ

                           ರಾಮನಗರ ಜಿಲ್ಲೆ

 


ಮೋಡದಿಂದ ಧರೆಗೆ ಸುರಿದು |

ಗುಡ್ಡದಿಂದ ಕೆಳಗೆ ಹರಿದು |

ಹಳ್ಳ ಕೊಳ್ಳ ತುಂಬಿ ನಡೆದು|

ಸಾಗರವನೆ ಸೇರಿದೆ |

ಮಹಾ ಸಾಗರವನೆ ಸೇರಿದೆ ||

 

ಮಂಗನಂತೆ ಬಾಲವಿಲ್ಲ|

ಹಕ್ಕಿಯಂತೆ ರೆಕ್ಕೆಯಿಲ್ಲ |

ಸರಿದು ಹರಿದ ಹಾದಿಯಲ್ಲಿ ಮರವ ಹೇಗೆ ಸೇರಿದೆ? |

ಬೇರಿನಿಂದ ಎಲೆಯವರಗೆ ಮರವ ಹೇಗೆ ಏರಿದೆ? |

ಎಲೆಯ ಪತ್ರ ರಂದ್ರದಿಂದ ಹೊರಗೆ ಹೇಗೆ ಹಾರಿದೆ? ||

 

ತೆವಳಿ ಹರಿವ ಹಾದಿಯಲ್ಲಿ ಮೊದಲು ಮಣ್ಣ ಸೇರಿದೆ |

ಮಣ್ಣಿನಲ್ಲಿ ಖನಿಜ ಲವಣ ನನ್ನ ಮಡಿಲು ತುಂಬಿದೆ |



ಮಣ್ಣಿನೊಳಗೆ ಇಂಗುವಾಗ ರೋಮ ಬೇರ ನೋಡಿದೆ
|  

 ಬೇರ ಒಳಗೆ ನನ್ನ ಸಾರ ಕಡಿಮೆ ಯಾಗಿ ಹೋಗಿದೆ |

ಅಭಿಸರಣೆಯು ನನ್ನ ಹಿಡಿದು ಬೇರಿನೊಳಗೆ ದೂಡಿದೆ ||

 

ಮರದ ಒಳಗೆ ಕಂತೆ ಯಂತೆ ಸಾಲು ಕೊಳವೆ ನಿಂತಿವೆ |

ರಂದ್ರ ವೃತ್ತ ಸುರುಳಿ ಜಾಲ ಭಿತ್ತಿ ಕೊಳವೆ ಕಂಡಿವೆ |

ಒಂದಕೊಂದು ಅಂಟಿಕೊಂಡು ಎಲೆಯವರಗೆ ಸೇರಿವೆ |

ಅಣುಗಳೆಲ್ಲ ಮಣಿಗಳಂತೆ ಸರದಿಯಲ್ಲಿ ನಿಂತಿವೆ |

ಒಂದನೊಂದು ಬಿಗಿದು ಹಿಡಿದು ಸಮಯಕಾಗಿ ಕಾದಿವೆ ||

 

ಬಿಸಿಲ ಝಳಕೆ ಗಾಳಿ ಕಾದು ತಾಪ ಏರಿಯಾಗಿದೆ |

ಎಲೆಯ ನೀರು ಆವಿಯಾಗಿ ಗಾಳಿ ಸೇರಿಯಾಗಿದೆ |

ಚೋಷಣವು ಜಲ ಸ್ತಂಭವ ಮೇಲೆ ಮೇಲೆ ಸೆಳೆದಿದೆ |

ಹೀಗೆ ನಾನು ಮರವ ಏರಿ ಎಲೆಯ ಸೇರಿಯಾಗಿದೆ |

ಎಲೆಯ ಪತ್ರ ರಂದ್ರದಿಂದ ಹೊರಗೆ ಜಿಗಿದು ಹಾರಿದೆ|

No comments:

Post a Comment