ವಿಜ್ಞಾನದ ಒಗಟುಗಳು - ಮೇ ೨೦೨೧
ಕಣ ಕಣದಲೂ
ನಾನಿರುವೆ
ಡೆಮಾಕ್ರೈಟಸ್
ಕಣಾದರಿಗೋ ನನ್ನದೇ ಕನವರಿಕೆ
ನಿರ್ಜೀವವೆಂದು ಹೇಳುವರು ನನ್ನ
ಆದರೆ
ನನ್ನೊಳಗೋ ಚೈತನ್ಯದಾ ರಾಶಿ
ಈಗ ಹತ್ತಿತೋ
ನನ್ನ ಗುರುತು?
ನಮ್ಮ
ನಡುವಿನೊಂದು ವಿಶಿಷ್ಟ ಬಲ
ಬಂಡೆಗಳ
ಸೀಳಿ ಪುಡಿಗಟ್ಟಬಲ್ಲುದು
ನಾನಿಲ್ಲದೆ
ತಿರೆ ಜೀವಗ್ರಹವಲ್ಲ
ಜೀವೋತ್ಪತ್ತಿಗೋ
ನಾನೇ ಮಹಾ ಮಾಧ್ಯಮ
ಸುಳಿವು
ಹಿಡಿದು ಹೇಳಿರಿ ಜಾಣ ಜಾಣೆಯರೇ ಈ ಬಲವ
ಪ್ರತಿ
ಧಾತುವಿನ ವಿಶಿಷ್ಟ ಬೆರಳಚ್ಚು ನಾ
ನನ್ನ ಮನೆಯೋ
ಅತಿ ಕಿರಿದು ನನ್ನೊಳಗಿನಾಟವೋ ಮಹಾಸ್ಪೋಟ
ನನ್ನ
ಲೆಕ್ಕವೇ ಆವರ್ತ ಕೋಷ್ಟಕಕೆ ಮಹಾಭಾಷ್ಯ
ವರ್ಣಮಾಲೆಯೊಂದರ
ಕೊನೆಯ ಅಕ್ಷರವೇ ನಾ
ಈಗ ಹೇಳು ನೀ
ನಾನ್ಯಾರೆಂಬುದನು ?
ಜೀವಿ ಎಂಬರೋ
ಜನರೆನ್ನ
ಜೀವಕೋಶದ
ಹಂಗೆನಗಿಲ್ಲ
ಉಸಿರಾಡದೆ
ಇರಬಲ್ಲೆ ನಾ ವರುಷ
ನನ್ನ
ಗೊಡವೆಗೆ ಬಂದಿರೋ ಸೋಂಕನ್ನುಂಟುಮಾಡುವೆ
ಬಲ್ಲಿದರು ಬಿಡಿಸೀ ಒಗಟ
- ರಾಮಚಂದ್ರ ಭಟ್ ಬಿ.ಜಿ.
ಡೆಮಾಕ್ರೈಟಸ್ ಕಣಾದರಿಗೋ ನನ್ನದೇ ಕನವರಿಕೆ
ನಿರ್ಜೀವವೆಂದು ಹೇಳುವರು ನನ್ನ
ಆದರೆ ನನ್ನೊಳಗೋ ಚೈತನ್ಯದಾ ರಾಶಿ
ಈಗ ಹತ್ತಿತೋ ನನ್ನ ಗುರುತು?
ಬಂಡೆಗಳ ಸೀಳಿ ಪುಡಿಗಟ್ಟಬಲ್ಲುದು
ನಾನಿಲ್ಲದೆ ತಿರೆ ಜೀವಗ್ರಹವಲ್ಲ
ಜೀವೋತ್ಪತ್ತಿಗೋ ನಾನೇ ಮಹಾ ಮಾಧ್ಯಮ
ಸುಳಿವು ಹಿಡಿದು ಹೇಳಿರಿ ಜಾಣ ಜಾಣೆಯರೇ ಈ ಬಲವ
ನನ್ನ ಮನೆಯೋ ಅತಿ ಕಿರಿದು ನನ್ನೊಳಗಿನಾಟವೋ ಮಹಾಸ್ಪೋಟ
ನನ್ನ ಲೆಕ್ಕವೇ ಆವರ್ತ ಕೋಷ್ಟಕಕೆ ಮಹಾಭಾಷ್ಯ
ವರ್ಣಮಾಲೆಯೊಂದರ ಕೊನೆಯ ಅಕ್ಷರವೇ ನಾ
ಈಗ ಹೇಳು ನೀ ನಾನ್ಯಾರೆಂಬುದನು ?
ಜೀವಕೋಶದ ಹಂಗೆನಗಿಲ್ಲ
ಉಸಿರಾಡದೆ ಇರಬಲ್ಲೆ ನಾ ವರುಷ
ನನ್ನ ಗೊಡವೆಗೆ ಬಂದಿರೋ ಸೋಂಕನ್ನುಂಟುಮಾಡುವೆ
ಬಲ್ಲಿದರು ಬಿಡಿಸೀ ಒಗಟ
ವಿಜ್ಞಾನದ ಒಗಟುಗಳು - ಏಪ್ರಿಲ್ ೨೦೨೧
1. ಭೌತಿಕವಾಗಿ ಅಳತೆಗೆ ಸಿಗುವ ನನಗೆ
ನಾಲ್ಕು ಅಕ್ಷರಗಳ
ಹೆಸರುಂಟು
ಮೊದಲನೆ ಅಕ್ಷರ ಪದಕದಲೂ
ಎರಡನೆ ಅಕ್ಷರ ಗುರಿಯಲ್ಲೂ
ಮೂರನೆ ಅಕ್ಷರ ಅನುಮಾನದಲೂ
ಹಾಗೂ ಕೊನೆ ಅಕ್ಷರ
ರಾಮಾಯಣದಲ್ಲೂ
ಇದ್ದರೆ ನೀವೇ ಹುಡುಕಿ
ಹೇಳುವಿರಲ್ಲಾ?
***********************************************
2.
ನಾನೇನೂ ಮಹಾಭಾರತ
ಬರೆದವನಲ್ಲ
ವೇದಗಳನು ಭಾಗಿಸಿದವನೂ
ಅಲ್ಲ
ಆದರೆ ಯಾವುದೇ ವರ್ತುಲಾಕಾರದ
ಉದ್ದವ ಭಾಗಿಸಿದೆನೆಂದರೆ
ಸದಾ ಸಿಹಿತಿಂಡಿಯೊಂದು
ಸಿಗುವುದು ಖಚಿತ ನೋಡಿ
ಈ ಕತೆಗೆ ಒಂದು ಸೂತ್ರ
ರೂಪ ಕೊಟ್ಟುಬಿಡಿ.
**********************************************
3.
ಮೊದಲನೆ ಮೆಟ್ಟಿಲಲಿ
ನಾವೆಲ್ಲಾ ಒಂದೇ
ಎರಡನೇ ಮೆಟ್ಟಿಲಲಿ
ನಮ್ಮ ಜಾತಿಯವರು
ಹೀಗೆ ಏಳು ಮೆಟ್ಟಿಲ
ನಂತರ ನಮ್ಮದೇ ಸಾಮ್ರಾಜ್ಯ
ಇಂಥ ಎಷ್ಟು ಸಾಮ್ರಾಜ್ಯಗಳಿವೆ?
ಯಾವವು ಹೇಳಿ.
**********************************************
4. 1. ಏರಿದ ಜ್ವರದ ಬಗ್ಗೆ ಹೇಳಲು ಬಲ್ಲೆ
ಗಾಳಿಯ ಒತ್ತಡ ಅಳೆಯಲು
ಬಲ್ಲೆ
ರಸಮಟ್ಟದಿ ಕುಳಿತು
ಸಮತಟ್ಟನು ತಿಳಿಸಲು ಬಲ್ಲೆ
ಬೆಳ್ಳಿಯ ಹೋಲುತ ಬೇಗನೆ
ಚಲಿಸಲು ಬಲ್ಲೆ
ವಿದ್ಯುತ್ ವಾಹಕವಾದರೂ
ನಾನು ಇತರರಂತಲ್ಲ
ನಾನ್ಯಾರೆಂದು ಹೇಳದೆ
ಕೈ ಚೆಲ್ಲಿದರೆ ಸಾವಿರ ಹೋಳಾಗಬಲ್ಲೆ.
- ವಿಜಯಕುಮಾರ್ ಹುತ್ತನಹಳ್ಳಿ
ನಾನು ಹೂನಂತೆ ಕಾಣುವೆ ಹೂ ಅಲ್ಲಾ
ಮರದ ತೊಗಟೆಯ ಮೇಲಷ್ಟೇ ಅಲ್ಲಾ ಬಂಡೆಯ ಮೇಲೂ ಬೆಳೆಯುವ
ಕಲ್ಲಿನಲ್ಲಿ ಅರಳಿ ಕಲ್ಲನ್ನೇ ಪುಡಿಮಾಡಬಲ್ಲೆ..
ನಗರದ ಮಾಲಿನ್ಯ ನನ್ನ ಉಸಿರು ಕಟ್ಟಿಸುತ್ತದೆ...
ಮರೆತಿದ್ದೆ....ನಾವಿಬ್ಬರೂ ಕೂಡಿ ಒಂದು ಹೂ ಆಗಿದ್ದೇವೆ
ನಾನು ಯಾರು? ಹಾಗೇ ನಾವು ಯಾರು....?
ನಾನು ನಿಮ್ಮ ಗಂಟಲಿನ ಬದಿಯಲ್ಲಿರುವೆ
ನಿಮ್ಮ ದೇಹದಲ್ಲಿ ನಡೆಯುವ
ಅನೇಕ ಕ್ರಿಯೆಗಳನ್ನು ನಿಯಂತ್ರಿಸುವೆ,
ನನ್ನ ಕೊರತೆಯಿಂದ ನಿಮಗೆ ಒಂದು ಕಾಯಿಲೆ ತರುವೆ ಆದರೆ ಮಂಗಳೂರಿನವರಿಗಲ್ಲ!
ನಾನು ಯಾರು ?
ನನ್ನ ಕೊರತೆಯಿಂದ ಬರುವ ಕಾಯಿಲೆ ಯಾವುದು ?
ನಾನು ಮತ್ತು ನನ್ನ ಸ್ನೇಹಿತ
ಇಬ್ಬರು ಇರುವೆವು. ನಾನು
2ರಷ್ಟು ಮತ್ತು ನನ್ನ ಸ್ನೇಹಿತ 1 ರಷ್ಟುಸೇರಿದರೆ ನಮ್ಮ ಗುಣಗಳಿಗೆ ವಿರುದ್ಧವಾದ
ವಸ್ತು ಉಂಟಾಗುತ್ತದೆ.
ನಾನು ನನ್ನ ಸ್ನೇಹಿತನನ್ನು ಹೆಸರಿಸಿ.
ನಾವಿಬ್ಬರು ಸೇರಿದಾಗ ಉಂಟಾಗುವ
ವಸ್ತು ಯಾವುದು ?
ನಾನು ಉದ್ದವಾದ ಕೊಳವೆ
ಮಧ್ಯದಲ್ಲಿ ಒಂದು ಕೋಣೆಯನ್ನು ಹೊಂದಿದ್ದೇನೆ. ನೀವು ತಿನ್ನುವ
ಆಹಾರವನ್ನು ಸಣ್ಣ ಕಣಗಳಾಗಿ
ತುಂಡರಿಸುತ್ತೇನೆ ಇದಕ್ಕೆ ಅನೇಕ
ರಸಗಳು ಸಹಾಯಮಾಡುತ್ತವೆ
ನಾನು ಯಾರು?
ನಾನು ಮೀನಲ್ಲದ ಮೀನು,
ನನಗೆ ಐದು ಪಾದಗಳಿವೆ
ಅದರ ಮೂಲಕವೇ ಉಸಿರಾಡುವೆ,ಚಲಿಸುವೆ,
ಪರಿಚಲನೆಯು ಸಹ ಇವುಗಳ ಮೂಲಕವೇ !
ನನ್ನ ಒಂದು ಪಾದ ತುಂಡಾದರೆ
ಪುನಃ ಅದು ಬೆಳೆಯುತ್ತದೆ.
ನಾನು ಯಾರು ?
ವಿ. ಶ್ರೀನಿವಾಸ್. ತುಮಕೂರು
ವಿಜ್ಞಾನದ ಒಗಟುಗಳು - ಮಾರ್ಚ್ ೨೦೨೧
1. ಬೆಳ್ಳಂಬೆಳಕಿನ ಒಲೆಯನು
ಹೂಡಿ
ಹಸಿರು ಬಣ್ಣದ ಪಾತ್ರೆಯ ಮಾಡಿ
ಒಂದಿಷ್ಟು ನೀರು ಮತ್ತು ಅನಿಲವ ಕೂಡಿ
ಸಿಹಿ ಅಡುಗೆ ಮಾಡುವ ಕ್ರಿಯೆ, ಹೇಳಿಬಿಡಿ.
2.
ನಾನೋ ! ನಿಂತಲ್ಲೇ
ನಿಂತಿರಬೇಕು.
ಇಲ್ಲಾ ಒಂದೇ ಸಮ ಚಲಿಸುತಿರಬೇಕು.
ಇದ ಬದಲಿಸಲು ಬಲ ಭೀಮನೆ ಬರಬೇಕು.
ರಾಶಿಗೆ ತಕ್ಕಷ್ಟು ಬಲ ಹಾಕದಿರೆ ಸೋಲಬೇಕು.
ಗೆಲಿಲಿಯೋ ಗೆಲಿಲಿ, ನ್ಯೂಟನ್ ರ ಸ್ಮರಿಸಿ,
ನನ್ನೀ ಸ್ಥಿತಿಯ ವೈಜ್ಞಾನಿಕ ಹೆಸರ ನೀವೇ ಹೇಳಬೇಕು.
3.
ಬನ್ನಿ ಬನ್ನಿ ಗೆಳೆಯರೆ
ಬೊಂಬೆಯಾಟವಾಡುವ.
ನನ್ನಯ ಬೊಂಬೆ, ನನ್ನ ಗೆಳೆಯನ ಬೊಂಬೆ
ಒಟ್ಟು ಸೇರಿದರೆ ಹದಿನಾರು ಆಯ್ತು ಎಂಬೆ.
ನನ್ನದರ ಮೂರು ಪಟ್ಟು ನನ್ನ ಗೆಳೆಯನವು
ಹಾಗಾದರೆ ನನ್ನವೆಷ್ಟು? ಅವನವೆಷ್ಟು?
- ವಿಜಯಕುಮಾರ್ ಹುತ್ತನಹಳ್ಳಿ
1) ನೀವು ಬಳಸುವ ವಾಹನಗಳು,
ಸ್ಥಾಪಿಸಿರುವ ಕೈಗಾರಿಕೆಗಳಿಂದ
ನಾನು ಬಿಡುಗಡೆಯಾಗುತ್ತೇನೆ
ವಾತಾವರಣದ ತಾಪ ಹೆಚ್ಚಿಸುತ್ತೇನೆ, ನಾನು ಯಾರು ?
ನಾನು ಉಂಟುಮಾಡುವ ಪರಿಣಾಮ ಯಾವುದು ?
2)
ನೀವು ನನ್ನನು ಖರೀದಿಸುವಾಗ
ಕಪ್ಪಗಿರುತ್ತೇನೆ,
ನನ್ನನ್ನು
ಬಳಸುವಾಗ ಕೆಂಪುಗುತ್ತೇನೆ
ಮತ್ತು ನನ್ನು
ಬಳಸಿ ಎಸೆಯುವಾಗ ಬೂದುಬಣ್ಣವಾಗುತ್ತೇನೆ
ನಾನು ಯಾರು?
3)
ಅನೇಕರು ನನ್ನನ್ನು ಕೇಳಿದ್ದಾರೆ,
ಆದರೆ ಯಾರೂ ನನ್ನನ್ನು ನೋಡಿಲ್ಲ.
ಯಾರಾದರೂ ಮಾತನಾಡುವ ತನಕ ನಾನು ಮತ್ತೆ
ಮಾತನಾಡುವುದಿಲ್ಲ.
ಹಾಗಾದರೆ ನಾನು ಯಾರು
ಗೊತ್ತೇ ?
4)
ನಾನೊಂದು ಕೊಡೆಯಂತೆ ಇರುವೆ
ನಿಮ್ಮನ್ನೆಲ್ಲ ಕಾಪಾಡುವೆ.
ನೀವು ನನ್ನ ಮೈಯನ್ನು ರಂಧ್ರಮಯ
ಮಾಡುತ್ತಿರುವಿರಿ,
ಇದರಿಂದ ನಿಮಗೇ ಅಪಾಯ.ಹಾಗಾದರೆ ನಾನು ಯಾರು ?
5)
ನನ್ನನ್ನು ಸೃಷ್ಟಿಸುವುದು ಅಸಾಧ್ಯ,
ಮತ್ತು ನಾನು ಎಂದಿಗೂ ನಾಶವಾಗುವುದಿಲ್ಲ,
ನಾನು ರೂಪವನ್ನು ಮಾತ್ರ ಬದಲಾಯಿಸಬಹುದು.
ನಾನು ಏನು?
6) 6) ನಾನೊಂದು ದ್ರಾವಣ.
ನೀಲಿ ಬಣ್ಣವನ್ನು
ಕೆಂಪು ಬಣ್ಣಕ್ಕೆ ತಿರುಗಿಸುತ್ತೇನೆ
ನನ್ನ ತಮ್ಮ ನನ್ನ ವಿರುದ್ಧ!
ಹಾಗಾದರೆ
ನಾವು ಯಾರು ?
7) 7) ನಾವಿಬ್ಬರು ಸ್ನೇಹಿತರು ಮೃದು
ಸ್ವಭಾವದವರು
ನಮ್ಮನ್ನು ಕೈಯಲ್ಲಿ ಹಿಡಿದುಕೊಂಡರೆ ಕರಗಿ ಬಿಡುತ್ತೇವೆ
ನಮ್ಮನ್ನು
ಹೆಸರಿಸುವಿರಾ ?
ಶ್ರೀನಿವಾಸ. ವಿ.ಸಹ ಶಿಕ್ಷಕರು.ಶ್ರೀ ಶಿವಾನಂದ ಪ್ರೌಢ ಶಾಲೆ.ಸತ್ಯಮಂಗಲ, ತುಮಕೂರು.9900395017
**ಉತ್ತರಗಳು ಮುಂದಿನ ಸಂಚಿಕೆಯಲ್ಲಿ...
1) ನೀವು ಬಳಸುವ ವಾಹನಗಳು,
ಸ್ಥಾಪಿಸಿರುವ ಕೈಗಾರಿಕೆಗಳಿಂದ
ನಾನು ಬಿಡುಗಡೆಯಾಗುತ್ತೇನೆ
ವಾತಾವರಣದ ತಾಪ ಹೆಚ್ಚಿಸುತ್ತೇನೆ, ನಾನು ಯಾರು ?
ನಾನು ಉಂಟುಮಾಡುವ ಪರಿಣಾಮ ಯಾವುದು ?
2)
ನೀವು ನನ್ನನು ಖರೀದಿಸುವಾಗ
ಕಪ್ಪಗಿರುತ್ತೇನೆ,
ನನ್ನನ್ನು
ಬಳಸುವಾಗ ಕೆಂಪುಗುತ್ತೇನೆ
ಮತ್ತು ನನ್ನು
ಬಳಸಿ ಎಸೆಯುವಾಗ ಬೂದುಬಣ್ಣವಾಗುತ್ತೇನೆ
ನಾನು ಯಾರು?
3)
ಅನೇಕರು ನನ್ನನ್ನು ಕೇಳಿದ್ದಾರೆ,
ಆದರೆ ಯಾರೂ ನನ್ನನ್ನು ನೋಡಿಲ್ಲ.
ಯಾರಾದರೂ ಮಾತನಾಡುವ ತನಕ ನಾನು ಮತ್ತೆ
ಮಾತನಾಡುವುದಿಲ್ಲ.
ಹಾಗಾದರೆ ನಾನು ಯಾರು
ಗೊತ್ತೇ ?
4)
ನಾನೊಂದು ಕೊಡೆಯಂತೆ ಇರುವೆ
ನಿಮ್ಮನ್ನೆಲ್ಲ ಕಾಪಾಡುವೆ.
ನೀವು ನನ್ನ ಮೈಯನ್ನು ರಂಧ್ರಮಯ
ಮಾಡುತ್ತಿರುವಿರಿ,
ಇದರಿಂದ ನಿಮಗೇ ಅಪಾಯ.ಹಾಗಾದರೆ ನಾನು ಯಾರು ?
5)
ನನ್ನನ್ನು ಸೃಷ್ಟಿಸುವುದು ಅಸಾಧ್ಯ,
ಮತ್ತು ನಾನು ಎಂದಿಗೂ ನಾಶವಾಗುವುದಿಲ್ಲ,
ನಾನು ರೂಪವನ್ನು ಮಾತ್ರ ಬದಲಾಯಿಸಬಹುದು.
ನಾನು ಏನು?
6) 6) ನಾನೊಂದು ದ್ರಾವಣ.
ನೀಲಿ ಬಣ್ಣವನ್ನು
ಕೆಂಪು ಬಣ್ಣಕ್ಕೆ ತಿರುಗಿಸುತ್ತೇನೆ
ನನ್ನ ತಮ್ಮ ನನ್ನ ವಿರುದ್ಧ!
ಹಾಗಾದರೆ
ನಾವು ಯಾರು ?
7) 7) ನಾವಿಬ್ಬರು ಸ್ನೇಹಿತರು ಮೃದು ಸ್ವಭಾವದವರು
ನಮ್ಮನ್ನು ಕೈಯಲ್ಲಿ ಹಿಡಿದುಕೊಂಡರೆ ಕರಗಿ ಬಿಡುತ್ತೇವೆ
ನಮ್ಮನ್ನು
ಹೆಸರಿಸುವಿರಾ ?
ವಿಜ್ಞಾನದ ಒಗಟುಗಳು - ಫೆಬ್ರವರಿ 20೨೧
ಚಾಟಿಯ ಬೀಸಿ ಚಲಿಸುವೆ ಕಾಲಿಲ್ಲ
ಹರಿತ್ತಿನಿಂದ ಆಹಾರ ತಯಾರಿಸುವೆ ಗಿಡವಲ್ಲ
ಪ್ರಾಣಿಯೋ,ಸಸ್ಯವೋ ತಿಳಿಯದೆ ತಿಣುಕಿದರೆಲ್ಲಾ
ಅದೆಲ್ಲಾ ಮುಗಿದ ಕತೆ ನಾನ್ಯಾರು ನೀವು ಹೇಳಬಹುದಲ್ಲ.
ರಾಶಿಯೊಂದು ತೂಕವಾಗುವುದು ನನ್ನಿಂದ
ನದಿ ಹರಿದು ಸಾಗರವ ಸೇರುವುದು ನನ್ನಿಂದ
ಏರಿದವ ಇಳಿಯಲೇಬೇಕು ನನ್ನಿಂದ
ನಡೆಯಲೂ ಆಗದು ನಾನಿಲ್ಲದೆ ನಾನ್ಯಾರು ಹೇಳು ಕಂದ.
ಇರುಳಲಿ ಕೋಟಿ ಕೋಟಿ ನೆಂಟರು
ಹಗಲಲಿ ಒಂಟಿ ಬಿಟ್ಟು ಎಲ್ಲಿ ಹೊಂಟರು?
ಭವಿಷ್ಯದ ಶಕ್ತಿಯ ಆಕರ ನಾನೇ ಎಂಬರು
ಹಾಗಾದರೆ ನೋಡೋಣ ಹೇಳಿ ನನ್ನ ಹೆಸರು.
ಪಾದವಿದೆ ಅದು ನನ್ನ ಕಾಲಲ್ಲ
ಎತ್ತರವಿದೆ ನಾನು ಭಾರಿ ಆಳಲ್ಲ!
ಪಾದದಿಂದ ಎತ್ತರವ ಗುಣಿಸಿ ಅರ್ಧಿಸಿ
ಸಿಕ್ಕೇ ಬಿಡುವೆ ನಿಮ್ಮ ಮಿತ್ರ ನಾನ್ಯಾರು?
- ವಿಜಯಕುಮಾರ್ ಹುತ್ತನಹಳ್ಳಿ
ಉತ್ತರಗಳು :
ವಿಜ್ಞಾನದ ಒಗಟುಗಳು ಜನವರಿ-20೨೧
1. ಕರಿಮುಸುಡಿ ಮಂಗಣ್ಣ
ಒಡವೆಗಳೊಳಗೂ ನಾನಣ್ಣ
ನೀ ಹಿಡಿದ ಸೀಸದ ಕಡ್ಡಿಯೂ ನಾನಣ್ಣ
ನಾನುರಿದರೆ ಜಗಮಗ ಬೆಳಕಣ್ಣ
ಹಾಗಾದರೆ ನಾನ್ಯಾರು ನೀ ಹೇಳಣ್ಣ.
2.
ಕಲ್ಲಾಗಿ ಕುಳಿತಿರಬಲ್ಲೆ
ಎಲ್ಲೆಲ್ಲೂ ಹರಿಯಲು ಬಲ್ಲೆ
ಎಲ್ಲೆ ಮೀರಿ ಮೇಲೇರಬಲ್ಲೆ
ಬಲ್ಲೆನೆಂಬುವರ ಬಾಯಿಗೆ
ಜೀವಾಮೃತವಾಗಲು ಬಲ್ಲೆ
ನಾನ್ಯಾರೆಂದು ನೀ ಹೇಳಬಲ್ಲೆ.
3.
ಬಿಳಿ ಅಂಗಿ ತೊಟ್ಟು
ಬರುವೆ
ಗಾಜಿನರಮನೆ ಹೊಕ್ಕು ಬರುವೆ
ಬಣ್ಣ ಬಣ್ಣ ಏಳು ಬಣ್ಣ ತಳೆವೆ
ನಾನಿಲ್ಲದೆ ನೀನೇನೂ ನೋಡಲಾರೆ.
4.
ಅಯ್ಯೋ ! ಒಂಟಿ ಜೀವಧಾತು ನಾನು
ನನ್ನಲ್ಲಿರುವುದೊಂದೇ ಪ್ರೋಟಾನು,
ಒಂದೇ ಇಲೆಕ್ಟ್ರಾನು,
ಬಲು ಹಗುರದವನು,
ಹಾಗಾದರೆ ನಾನ್ಯಾರು ನೀ ಹೇಳುವೆಯೇನು
?
5.
ನಾನೊಂದು ಬಲ, ನನ್ನಿಂದಲೇ ಕೆರ ಸವೆದೋಯ್ತಲ್ಲ
ನನ್ನಯ ಕಿರಿಕಿರಿ ತಪ್ಪಿಸಲು ಎಣ್ಣೆ ಬೆಣ್ಣೆ ಹಚ್ಚುವರೆಲ್ಲಾ
ನಾನಿದ್ದರೆ ನಿಮಗೆ ನಷ್ಟ, ನಾನಿಲ್ಲದಿದ್ದರೂ ಕಷ್ಟ
ನನ್ನನು ಅಗತ್ಯ ಕೆಡುಕೆನ್ನುವುದು ಸುಮ್ಮನೆ ಅಲ್ಲ
ನಾನ್ಯಾರೆಂದು ಹೇಳಿದವರ ಬಾಯಿಗೆ ಸವಿಬೆಲ್ಲ.
6.
ಬಸ್ಸೊಂದು ಭರ‍್ರನೆ ಹೋಗುವುದು
ಜುಳು ಜುಳು ನೀರು ಹರಿಯುವುದು
ನೀ ನಿನ್ನ ಗೆಳೆಯನ ಮನೆ ಕಡೆ ನಡೆಯುವುದು
ಭೂಮಿ ಗರಗರನೆ ತಿರುಗುವುದು
ಮರದಿಂದ ಧೊಪ್ಪನೆ ಕಾಯಿ ಬೀಳುವುದು
ಇವೆಲ್ಲಕೂ ಇರುವ ಒಂದೇ ಹೆಸರು ಏನದು ಹೇಳು.
- ವಿಜಯಕುಮಾರ್ ಹುತ್ತನಹಳ್ಳಿ
ಉತ್ತರಗಳು :
1.
ಕಾರ್ಬನ್.
2.
ನೀರು.
3.
ಬಿಳಿಬೆಳಕು.
4.
ಹೈಡ್ರೋಜನ್.
5.
ಘರ್ಷಣಾ ಬಲ.
೬. ಚಲನೆ.
1 ಇಂಗಾಲ
ReplyDelete2 ನೀರು
3 ಸೂರ್ಯ ರಶ್ಮಿ
4 ಜಲಜನಕ
5 ಘರ್ಷಣೆ
6 ಬಲ
Good contribution
ReplyDeleteThanks for sharing sir
ReplyDeleteVery informative..good work👏👏👏..looking forward more in this space..
ReplyDeleteVery nice and interesting column
ReplyDeleteVery thought provoking.which is a must for both students and teachers.thanjd a lot sir
DeleteNice sir
ReplyDeletemind blowing...
ReplyDeletevery nice.
thought provoking and entertaining...
ReplyDeletecongratulations for the good efforts.
1 ಯೂಗ್ಲೀನಾ 2 ಗುರುತ್ವಾಕರ್ಷಣೆ 3 ಸೂರ್ಯ 4 ತ್ರಿಭುಜ
ReplyDeleteಚಿತ್ರ ಬಿಡಿಸುವುದರಲಿ ರವಿವರ್ಮ ಒಗಟುಗಳ ರಚನೆಯಲ್ಲಿ ಕವಿವರ್ಮ ಏನು ಈ ಎಲ್ಲದರ ಮರ್ಮ ತಿಳಿಸುವರಾಗಿ ನಮ್ಮ ನೆಚ್ಚಿನ ವಿಜಯವರ್ಮ ( ವಿಜಯ್ ಸರ್ ) ಚನ್ನಕೇಶವಮೂರ್ತಿ tgt ಕತ್ತರಗುಪ್ಪೆ .
ನಿಮ್ಮ ಪ್ರೀತಿ, ಅಭಿಮಾನ ಅಷ್ಟೇ🙏
Deleteಚೆನ್ನಾಗಿದೆ.ಸರ್
ReplyDeleteNice sir
ReplyDeleteSuper sir
ReplyDelete1.ಕಾರ್ಬನ್
ReplyDelete2.ನೀರು
3.ಬಿಳಿ ಬೆಳಕು
4.ಹೈಡ್ರೋಜನ್
5.ಘರ್ಷಣೆ
6.ಚಲನೆ
Super good work
ReplyDeleteವಿಷಯಗಳು ತಿಳುವಳಿಕೆಗೆ ಪೂರಕ.
ReplyDeleteತಲೆಗೆ ಚನ್ನಾಗಿ ಆಲೋಚಿಸುವ ಹುಳಬಿಟ್ಟಿದ್ದೀರಿ. ಮಕ್ಕಳು ಇಷ್ಟಪಡುತ್ತಾರೆ.
ReplyDeleteChannagide sir
ReplyDeleteಮಾರ್ಚ್ ತಿಂಗಳ ಒಗಟುಗಳಿಗೆ ಉತ್ತರಗಳು
ReplyDelete1. ದ್ಯುತಿಸಂಶ್ಲೇಷಣೆ 2. ಜಡತ್ವ 3. ನನ್ನ ಬೊಂಬೆಗಳು ನಾಲ್ಕು ನನ್ನ ಗೆಳೆಯನವು ಹನ್ನೆರಡು.
ಮಾರ್ಚ್ ತಿಂಗಳ ಒಗಟುಗಳಿಗೆ ಉತ್ತರಗಳು ( ರಚನೆ : ಶ್ರೀನಿವಾಸ್.ವಿ )
ReplyDelete1 ಕಾರ್ಬನ್ ಡೈ ಆಕ್ಸೈಡ್ 2 ಕಲ್ಲಿದ್ದಲು 3.ಪ್ರತಿಧ್ವನಿ 4 ಓಜೋನ್ ಪದರ 5 ಶಕ್ತಿ 6 ಆಮ್ಲ ಮತ್ತು ಪ್ರತ್ಯಾಮ್ಲ 7 ಗ್ಯಾಲಿಯಂ ಮತ್ತು ಸೀಸಿಯಂ.
Meghana
ReplyDelete