Thursday, March 4, 2021

ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ

ಇದು ‘ಸವಿಜ್ಞಾನ‘ದ ಮೂರನೆಯ ಸಂಚಿಕೆ. ಈ ಹಿಂದಿನ ಎರಡು ಸಂಚಿಕೆಗಳಿಗೆ ನೀವು ಸ್ಪಂದಿಸಿರುವ ರೀತಿ ನಿಜಕ್ಕೂ ಅನನ್ಯ. ವಿಜ್ಞಾನ ಶಿಕ್ಷಕರೇ ಅಲ್ಲದೆ ವಿಜ್ಞಾನಾಸಕ್ತರ ಗಮನವನ್ನೂ ಸೆಳೆಯುವುದರಲ್ಲಿ ‘ಸವಿಜ್ಞಾನ’ ಯಶಸ್ವಿಯಾಗಿರುವುದು ಹೆಮ್ಮೆಯ ವಿಷಯ. ನಿಮ್ಮೆಲ್ಲರ ಮೂಲಕ ‘ಸವಿಜ್ಞಾನ’ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಜ್ಞಾನಾಸಕ್ತರನ್ನು ತಲುಪಲಿ ಎಂಬುದು ನಮ್ಮ ಆಶಯ. ನಿಮ್ಮಿಂದ ಬಂದಿರುವ ಉತ್ತಮ ಸಲಹೆಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಜವಾಬ್ದಾರಿ ನಮ್ಮದು. ಅದರಂತೆ, ಪ್ರಕಟವಾಗುತ್ತಿರುವ ಲೇಖನಗಳು ಮತ್ತು ಮಾಹಿತಿ ನಿಮಗೆ ಉಪಯುಕ್ತ ಎನಿಸಿದರೆ ನಮ್ಮ ಶ್ರಮ ಸಾರ್ಥಕ. ನಮ್ಮ ಈ ಪ್ರಯತ್ನವನ್ನು ನೋಡಿ ರಾಜ್ಯದ ಜನಪ್ರಿಯ ಪ್ರೌಢ ಶಿಕ್ಷಣ ಸಚಿವರಾದ ಸನ್ಮಾನ್ಯ ಎಸ್. ಸುರೇಶ್ ಕುಮಾರ್ ಅವರು ಮೆಚ್ಚುಗೆ ಸೂಚಿಸಿರುವುದು ನಮ್ಮ ಉತ್ಸಾಹವನ್ನು ಇಮ್ಮಡಿಸಿದೆ.

ಮಾರ್ಚ್ ತಿಂಗಳಲ್ಲಿ ಪರಿಸರಕ್ಕೆ ಸಂಬಂಧಿಸಿದ ಎರಡು ಪ್ರಮುಖ ದಿನಾಚರಣೆಗಳಿವೆ. ಮಾರ್ಚ್ 3 ರೆಂದು’ವಿಶ್ವ ವನ್ಯಜಿವಿ ದಿನ” ಹಾಗೂ 22ರಂದು ‘ವಿಶ್ವ ಜಲದಿನ’. ಈ ಸಂಚಿಕೆಯಲ್ಲಿ ಈ ಎರಡು ಪ್ರಮುಖ ಸಂದರ್ಭಗಳಿಗೆ ಸಂಬಂಧಿಸಿದಂತೆ ಲೇಖನಗಳಿವೆ. ಜೊತೆಗೆ, ಬೆಳಕಿನ ಬಗ್ಗೆ ಒಂದು ವಿಶೇಷ ಲೇಖನವೂ ಇದೆ. ವಿಜ್ಞಾನ ಪಾಠಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯಗಳನ್ನು ಉದ್ದೀಪನಗೊಳಿಸುವ ಬಗ್ಗೆಯೂ ಒಂದು ಲೇಖನ ಇದೆ. ವಿಜ್ಞಾನ ಬೋಧನೆಯಲ್ಲಿ ತಂತ್ರಜ್ಞಾನದ ಬಳಕೆ ಬಗ್ಗೆ ಬೆಳಕು ಚೆಲ್ಲುವ ಲೇಖನವಿದೆ. ಈ ತಿಂಗಳ ವಿಶೇಷವೆಂದರೆ, ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು ವಿಜ್ಞಾನ ಮತ್ತು ಗಣಿತ ವಿಷಯಗಳ ಸಂಪನ್ಮೂಲ ವ್ಯಕ್ತಿಯಾಗಿ  ಅದ್ಭುತ ಸಾಧನೆ ಮಾಡಿರುವವರ ಪರಿಚಯವೂ ಇದೆ. ಇವೆಲ್ಲದರ ಜೊತೆಗೆ ನಿಮ್ಮ ಮನಸ್ಸನ್ನು ಹಗುರಾಗಿಸಲು ವ್ಯಂಗ್ಯ ಚಿತ್ರಗಳು ಹಾಗೂ ಮಿದುಳನ್ನು ಚುರುಕಾಗಿಸಲು ಒಗಟುಗಳೂ ಇವೆ.

1 comment:

  1. We welcome our e magazine with your valuable guidelines articles sir

    ReplyDelete