Saturday, April 3, 2021

ಮೆಗ್ನೀಸಿಯಂ ಮಹಾತ್ಮೆ

 ಮೆಗ್ನೀಸಿಯಂ ಮಹಾತ್ಮೆ

ಎ. ಶ್ರೀನಿವಾಸ್ 

ಸರ್ಕಾರಿ ಪ್ರೌಢಶಾಲೆ, ಮುತ್ತೂರು,

ಶಿಡ್ಲಘಟ್ಟ (ತಾ)ಚಿಕ್ಕಬಳ್ಳಾಪುರ (ಜಿ).


“ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ” ಡಿ.ವಿ.ಜಿ ವಾಣಿಯಂತೆ, ಚಿನ್ನದಾತುರಕ್ಕೆ ಬಿದ್ದ ರಸ ವಿಜ್ಞಾನಿಗಳು ವಿಶ್ವದಾದ್ಯಂತ ರಸಮಣಿಯ (philosopher’s stone) ಶೋಧದಲ್ಲಿ ತೊಡಗಿದ್ದಾಗ, ಈ ಶೋಧವು ಹಲವು ಆಯಾಮಗಳಲ್ಲಿ ಮುಂದುವರೆದು ವಿಸ್ಮಯ ಆವಿಷ್ಕಾರಗಳಿಗೆ ನಾಂದಿಯಾಯಿತು.

18ನೇ ಶತಮಾನದ ಕೊನೆಯ ಭಾಗದಲ್ಲಿ ಆಂಗ್ಲ ವಿಜ್ಞಾನಿ ಎಪ್ಸಮ್‌ ಪಟ್ಟಣದಲ್ಲಿ ಕೆಲವು ಲವಣಗಳನ್ನು ನೀರಿನ ಚಿಲುಮೆಯಿಂದ ಪಡೆದನು, ಆತನ ಶೋಧ ಸ್ಪರ್ಷಕ ಮಣಿ ಆದರೆ ದೊರೆತದ್ದು ಕಹಿರುಚಿ ಇರುವ ವಿರೇಚಕ ಉಂಟುಮಾಡುವ ಲವಣ!!!!  ಈ ಲವಣವು ಪೊಟ್ಯಾಶ್‌ ನೊಂದಿಗೆ ವರ್ತಿಸಿ ಶ್ವೇತವರ್ಣದ ದಹಿಸಲ್ಪಡುವ ಹಗುರ ಪುಡಿ ಉಂಟುಮಾಡುವುದನ್ನು ತಿಳಿದು, ಇದೇ ರೀತಿಯ ಖನಿಜವನ್ನು ಗ್ರೀಸ್‌ ದೇಶದ ಮೆಗ್ನೀಸಿಯಾನ್‌ ನಲ್ಲಿ ದೊರೆತ ಖನಿಜವನ್ನು ಹೋಲುತ್ತಿದ್ದುದರಿಂದ  ಎಪ್ಸಮ್‌ ಲವಣವನ್ನು  ಮೆಗ್ನೀಷಿಯ ಎಂದು ಹೆಸರಿಸಲಾಯಿತು.

1808ರಲ್ಲಿ  ಶುದ್ದ ಮೆಗ್ನೀಸಿಯಂ ಅನ್ನು ಬೇರ್ಪಡಿಸಿದ ಕೀರ್ತಿ ಸರ್‌ ಹಂಪ್ರಿ ಡೇವಿಯವರಿಗೆ ಸಲ್ಲುತ್ತದೆ. 

ಮೆಗ್ನೀಷಿಯಂ ಲೋಹವನ್ನು ಕಂಡು ಹಿಡಿದ ಸಂತೋಷವನ್ನು ಸುರುಸುರು ಬತ್ತಿ ಹೊತ್ತಿಸಿ ಹರ್ಷಿಸಲಿಲ್ಲವೆ ಎಂದು ಕೇಳಬೇಡಿ ಏಕೆಂದರೆ, ಆಗ ಅದರ ಚಿತಿ ಲಕ್ಷಣ (pyrotechnical property) ತಿಳಿದಿರಲಿಲ್ಲ.

ಮೆಗ್ನೀಷಿಯ  ಅಲ್ಯೂಮಿನಿಯಂಗಿಂತ ಹಗುರ ಲೋಹವಾಗಿದ್ದು, ಅದರ ದ್ರವನ ಬಿಂದು 650 C, ಆದರೆ ಅದನ್ನು ದ್ರವಿಸುವುದು ಕಡು ಕಷ್ಟ ಏಕೆಂದರೆ 550C ತಾಪದಲ್ಲಿ ವಾತಾವರಣದಲ್ಲಿರುವ ಆಕ್ಸಿಜನ್‌ ನೊಂದಿಗೆ ಉರಿದು ಭಸ್ಮವಾಗುತ್ತದೆ. ಕ್ಲೋರಿನ್‌ ತುಂಬಿದ ಜಾಡಿಯಲ್ಲಿಕೊಠಡಿ ತಾಪದಲ್ಲೆ ಮೆಗ್ನೀಷಿಯಂ ಉರಿದು ಜ್ವಾಲೆ ಉಂಟುಮಾಡುತ್ತದೆ. ಮೆಗ್ನೀಷಿಯಂ ಉರಿಯುವಾಗ ಕಣ್ಣು ಕುಕ್ಕುವ ನೇರಳಾತೀತ ಕಿರಣಗಳನ್ನು ಹೊರಸೂಸುತ್ತದೆ. ಸಮುದ್ರದ ನೀರಿನಲ್ಲಿ ಮೆಗ್ನೀಷಿಯಂ ಸುಲಭವಾಗಿ ವಿಲೀನಗೊಳ್ಳುತ್ತದೆ. ತಣ್ಣನೆಯ ನೀರಿನಲ್ಲಿ ವರ್ತಿಸದಿದ್ದರು, ಬಿಸಿನೀರಿನಲ್ಲಿ ವರ್ತಿಸಿ ಹೈಡ್ರೋಜನ್‌ ಬಿಡುಗಡೆ ಮಾಡುತ್ತದೆ.

ವಸುಧೆಯ ಗರ್ಭದಲ್ಲಿ 2.3%ರಷ್ಟು ಇರುವ  ಮೆಗ್ನೀಷಿಯಂ, ಇನ್ನೂರಕ್ಕು ಹೆಚ್ಚು ಖನಿಜರೂಪದಲ್ಲಿ ದೊರೆಯುತ್ತದೆ. ಮೇಗ್ನಟೈಟ್‌, ಡೊಲೋಮೈಟ್‌ ಮತ್ತು ಕಾರ್ನಲೈಟ್‌ ಗಳು ಪ್ರಮುಖ ಕೈಗಾರಿಕ ಅದಿರುಗಳಾಗಿವೆ. ಸಾಮಾನ್ಯವಾಗಿ ವಿದ್ಯುದುಷ್ಣ(electrothermal) ಮತ್ತು ವಿದ್ಯುದ್ವಿಭಜನೆ (electrolytic)ವಿಧಾನಗಳಿಂದ ಶುದ್ಧ ಮೆಗ್ನೀಷಿಯಂ ಪಡೆಯುತ್ತಾರೆ.

ಸಮುದ್ರ ಸಾಗರಗಳೂ ಮೆಗ್ನೀಷಿಯಂನ ಬೃಹತ್‌ ಉಗ್ರಾಣವಾಗಿದೆ. ಒಂದು ಘನ ಮೀಟರ್‌ ಸಮುದ್ರದ ನೀರು ಸುಮಾರು 4ಕಿ.ಗ್ರಾಂ ಮೇಗ್ನೀಷಿಯಂ ಹೊಂದಿರುತ್ತದೆ.  ಈ ಅಂದಾಜಿನಲ್ಲಿ ಸಪ್ತಸಾಗರಗಳಲ್ಲಿ 6X ಟನ್‌ ಗಳಷ್ಷು ಮೆಗ್ನೀಷಿಯಂ ಹೊಂದಿರಬಹುದೆಂದು ಲೆಕ್ಕಿಸಬಹುದಾಗಿದೆ.   ಈ ಜಲರಾಶಿಯಲ್ಲಿರುವ ಮೆಗ್ನೀಷಿಯಂ ಬೆರ್ಪಡಿಸಬಹುದೆ ?  ಸಮುದ್ರ ಜೀವಿ ಕಪ್ಪೆ ಚಿಪ್ಪಿನಿಂದ ಪಡೆದ ಸುಣ್ಣದ ನೀರಿನಲ್ಲಿ ವಿಲೀನಗೊಳಿಸಿ ಮೇಗ್ನೀಷಿಯಂ ಕ್ಲೋರೈಡ್‌ ಆಗಿ ರೂಪಾಂತರಿಸಿ ನಂತರ ವಿದ್ಯುದ್ವಿಭಜನೆಗೊಳಪಡಿಸಿ ಶುದ್ಧ ಲೋಹವನ್ನು ಪಡೆಯಬಹುದು.

ಮೆಗ್ನೀಷಿಯಂ ಬಳಕೆಯೇನು?

ಹಗುರ ಲೋಹವಾದ ಮೆಗ್ನೀಷಿಯಂ ಶುದ್ಧ ರೂಪದಲ್ಲಿ ಮೃದು. ಆದುದರಿಂದ ಮಿಶ್ರಲೋಹದಲ್ಲಿ ಬಳಸುತ್ತಾರೆ. ಅಲ್ಯೂಮಿನಿಯಂ, ಸತು ಮತ್ತು ಮ್ಯಾಂಗನೀಸ್‌ ಗಳಲ್ಲಿ ಮಿಶ್ರಲೋಹವಾಗಿ ವ್ಯಾಪಕವಾಗಿ ಬಳಸುತ್ತಾರೆ. ಅಲ್ಯೂಮಿನಿಯಂ ಮತ್ತು ಸತು,  ಮೆಗ್ನಿಷಿಯಂ ಮಿಶ್ರಲೋಹವನ್ನು ದೃಡಗೊಳಿಸಿದರೆ, ಮ್ಯಾಂಗನೀಸ್‌ ತುಕ್ಕುಹಿಡಿಯದಂತೆ ರಕ್ಷಿಸುತ್ತದೆ. ಮೆಗ್ನೀಷಿಯಂ ಮಿಶ್ರಲೋಹವನ್ನು ಬಟ್ಟೆ ಕಾರ್ಖಾನೆ, ಮುದ್ರಣ ಮತ್ತು ಮೋಟಾರು ವಾಹನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ವಿಮಾನ ನಿರ್ಮಾಣದಲ್ಲೂ ವಿಫುಲವಾಗಿ ಬಳಸುತ್ತಾರೆ. ರಾಕೆಟ್ಗಳ ನಿರ್ಮಾಣದಲ್ಲಿ ಅಣು ವಿದ್ಯುತ್‌ ಉತ್ಪಾದನ ಘಟಕಗಳಲ್ಲಿ, ಯಂತ್ರಗಳ  ಬಿಡಿ ಭಾಗಗಳ ತಯಾರಿಕೆಯಲ್ಲಿ, ಪೆಟ್ರೋಲಿಯಂ ಶೇಖರಣ ಘಟಕಗಳಲ್ಲಿ, ರೈಲು ಬೋಗಿ ನಿರ್ಮಾಣ, ವಾಹನಗಳು, ಚಕ್ರಗಳು, ತೈಲ ಪಂಪುಗಳು, ಬೈನಾಕ್ಯುಲರ್‌, ವಾಯು ಒತ್ತಡ ಬೈರಿಗೆ ಯಂತ್ರ ಹೀಗೆ ಅದರ ಬಳಕೆ ಅಪರಿಮಿತ.

ವೆನೆಡಿಯಂ, ಕ್ರೋಮಿಯಂ, ಟೈಟಾನಿಯಂ ಮತ್ತು ಜಿರ್ಕೊನಿಯಂ ಲೋಹಗಳ ಉದ್ಧರಣೆಯಲ್ಲಿ ಮೆಗ್ನೀಷಿಯಂ ಅನ್ನು ಅಪರ್ಕಷಕವಾಗಿ ಬಳಸುತ್ತಾರೆ. ೮೦ರ ದಶಕದಲ್ಲಿ ಬಳಸುತ್ತಿದ್ದ ರೇಡಿಯೊ, ಟಿ,ವಿ ಯನ್ನು ಆನ್‌ ಮಾಡಿದಾಗ, ದ್ವನಿ ಮತ್ತು ಚಿತ್ರ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿತ್ತು, ಆಗ ಎಲೆಕ್ಟ್ರಾನ್‌ ಅನಿಲ ಬಲ್ಬ್‌ ಗಳನ್ನು ಬಳಸುತ್ತಿದ್ದ ಕಾಲ. ಈ ವಿಳಂಬವನ್ನು ತಡೆಯಲು ಮೆಗ್ನೀಷಿಯಂ ಆಕ್ಸೈಡ್‌ ನಿಂದ ಮಾಡಲ್ಪಟ್ಟ ಋಣಾಗ್ರಗಳನ್ನು ಬಳಸಿ ತತ್‌ ಕ್ಷಣ ಕಾರ್ಯನಿರ್ವಹಿಸುವಂತೆ ಮಾಡಲು ಬಳಸುತ್ತಿದ್ದರು. ಮೆಗ್ನೀಷಿಯಂ ದಹನಕ್ರಿಯೆಯಲ್ಲಿ ಕಣ್ಣು ಕುಕ್ಕುವ ಬೆಳಕನ್ನು ಹೊರಸೂಸುವ ಗುಣವನ್ನು ರಕ್ಷಣಾ ತಂತ್ರಜ್ಞಾನದಲ್ಲಿ ಬಳಸಲಾಗಿದೆ. ಇತ್ತೀಚಿನವರೆಗೂ ಛಾಯಚಿತ್ರಗ್ರಹಣದಲ್ಲಿ ಮೆಗ್ನೀಷಿಯಂ ಜ್ಯೋತಿ (flares) ಬಳಸಲಾಗುತ್ತಿತ್ತು

ಸೌರಶಕ್ತಿಯ ಸಂಗ್ರಹದಲ್ಲಿ ಮೆಗ್ನೀಷಿಯಂ ಅತ್ಯಗತ್ಯ. ಆಶ್ಚರ್ಯವಾಗುತ್ತಿದೆಯೆ!?! ಇದು ಕ್ಲೋರೋಫಿಲ್‌ ನ ಘಟಕವಾಗಿದೆ. ಕ್ಲೋರೋಫಿಲ್‌ ಸೌರಶಕ್ತಿಯನ್ನು ಹೀರಿಕೊಂಡು, ನೀರು ಮತ್ತು ಕಾರ್ಬನ್‌ ಡೈ ಆಕ್ಸೈಡ್‌ ನಿಂದ ಸಾವಯವ ಸಂಯುಕ್ತಗಳಾದ ಪಿಸ್ಟ, ಶರ್ಕರಗಳನ್ನು ಉತ್ಪಾದಿಸಿ ವಸುಧೆಯ ಜೀವಿರಾಶಿಗೆ ಪೋಷಣೆ ಒದಿಸುತ್ತಿರುವುದು ನಮಗೆ ತಿಳಿದಿದೆ. ಕ್ಲೋರೋಫಿಲ್‌ ಇಲ್ಲದೆ ದ್ಯುತಿಸಂಶ್ಲೇಷಣೆ ಕ್ರಿಯೆ ಇಲ್ಲ, ಮೆಗ್ನೀಷಿಯಂ ಇಲ್ಲದೆ ಕ್ಲೋರೀಫಿಲ್‌ ಇಲ್ಲ. ಇಂತಹ ಮೆಗ್ನೀಷಿಯಂ ಕ್ಲೋರೀಫಿಲ್‌ ಅಣುವಿನಲ್ಲಿ3% ರಷ್ಟಿರುತ್ತದೆ ಅಷ್ಟೇನೆ ಎನ್ನಬೇಡಿ, ಭೂಮಂಡಲದ ಸಸ್ಯರಾಶಿಯಲ್ಲಿ ಸರಿಸುಮಾರು ೧ ಲಕ್ಷ ಮಿಲಿಯನ್‌ ಟನ್‌ ಮೆಗ್ನೀಷಿಯಂ ಇರಬಹುದೆಂದು ಅಂದಾಜಿಸಲಾಗಿದೆ. ಸಸ್ಯಗಳಷ್ಟೇ ಅಲ್ಲದೆ ಎಲ್ಲಾ ಜೀವ ರಾಶಿಯಲ್ಲೂ ಮೆಗ್ನೀಷಿಯಂ ಸರ್ವಾಂತರಯಾಮಿಯಾಗಿದೆ. ಮಾನವನಲ್ಲೂ ಸಹ, ಉದಾಹರಣೆಗೆ 60 ಕೆಜಿ ಇರುವ ವ್ಯಕ್ತಿಯಲ್ಲಿ25ಗ್ರಾಂ ನಷ್ಟು ಮೆಗ್ನೀಷಿಯಂ ಇರುತ್ತದೆ.

ಶುದ್ಧ ಮೆಗ್ನೀಷಿಯಂ ಆಕ್ಸೈಡ್ ಅನ್ನು ‌ ಉದರಾಮ್ಲ ಚಿಕಿತ್ಸೆಯಲ್ಲಿ ಬಳಸುತ್ತಾರೆ.ರಕ್ತನಾಳಗಳ ಸೆಳೆತವನ್ನು ಮೆಗ್ನೀಷಿಯಂ ಲವಣ ಪರಿಣಾಮಕಾರಿಯಾಗಿ ಉಪಶಮನಗೊಳಿಸುತ್ತದೆ. ಅಪ್ರಿಕಾಟ್‌, ಕಿತ್ತಳೆ, ಕೋಸು ಮುಂತಾದ ಹಣ್ಣು ತರಕಾರಿಗಳಲ್ಲಿ ಮೆಗ್ನೀಷಿಯಂ ಅಂಶವಿದೆ. ಹೃದ್ರೋಗ ಸಂಬಂಧಿ ಕಾಯಿಲೆಗಳನ್ನು ಮೆಗ್ನೀಷಿಯಂ ಯುಕ್ತ ಹಣ್ಣು ತರಕಾರಿಗಳನ್ನು ಸೇವಿಸುವುದರಿಂದ ನಿಯಂತ್ರಿಸಬಹುದಾಗಿದೆ. ನೀವು ಹೆಚ್ಚು ಉದ್ವೇಗಕ್ಕೆ ಒಳಗಾಗುತ್ತೀರ, ಎಚ್ಚರಿಕೆ ಉದ್ವೇಗಕ್ಕೆ ಒಳಗಾಗುವವರಲ್ಲಿ ಮೆಗ್ನೀಷಿಯಂ ಪ್ರಮಾಣ ಕ್ಷೀಣಿಸುತ್ತದೆ, ತತ್ಕಾರಣ ಹೃದ್ರೋಗ ಸಮಸ್ಯೆ ಉಂಟಾಗುತ್ತದೆ. ನೀವು ಪದೆ ಪದೆ ಸುಸ್ತು, ಆಯಾಸಗೊಳ್ಳುತ್ತೀರ ಮೇಗ್ನೀಷಿಯಂಯುಕ್ತ ಆಹಾರ ಈ ಸಮಸ್ಯೆಯನ್ನು ಉಪಶಮನಗೊಳಿಸುತ್ತದೆ.

ರಬ್ಬರ್‌ ಕಾರ್ಖಾನೆ ಮತ್ತು ಸಿಮೆಂಟ್‌ ಉತ್ಪಾದನೆಯಲ್ಲಿ ಮೆಗ್ನೀಷಿಯಂ ಬಳಕೆಯಲ್ಲಿದೆ. ಮೆಗ್ನೀಷಿಯಂ ಕಾರ್ಬೋನೇಟ್‌ ಅನ್ನು ಉಷ್ಣ ನಿಯಂತ್ರಕವಾಗಿ (heat-insulating) ಬಳಸುತ್ತಾರೆ. ಸಾವಯವ ಸಂಯುಕ್ತಗಳ (ಆಲ್ಕೋಹಾಲ್‌, ಅನುಲಿನ್) ನಿರ್ಜಲೀಕರಣದಲ್ಲಿ ಮೆಗ್ನೀಷಿಯಂ ಚೂರ್ಣ ಬಳಸುತ್ತಾರೆ.‌ ಸಂಶ್ಲೇಷಣ ರಸಾಯನ ವಿಜ್ಞಾನದಲ್ಲಿ ಆಲ್ಕೈಲ್ ಮೆಗ್ನೀಷಿಯಂ ಹೆಲೈಡ್ (Grignard reagent) ಬಳಸುತ್ತಾರೆ. ಈ ಸಂಯುಕ್ತಗಳ ಪ್ರಾಮುಖ್ಯತೆಯನ್ನು ಸಾಬೀತುಪಡಿಸಿದ ಫ್ರಂಚ್‌ ಎಸಾಯನ ವಿಜ್ಞಾನಿ ವಿಕ್ಟರಿ ಗ್ರಿಗ್‌ ನಾರ್ಡ್‌ 1912 ರಲ್ಲಿ ನೊಬೆಲ್‌ ಮನ್ನಣೆಗೆ ಭಾಜನರಾದರು.

ಬಾಹ್ಯಾಕಾಶ ಶೋಧಗಳಲ್ಲಿ ಮೆಗ್ನೀಷಿಯಂ-ಟೈಟಾನಿಯಂ ಮಿಶ್ರಲೋಹದಿಂದ ಮಾಡಲ್ಪಟ್ಟ ಬೈರಿಗೆಯಂತ್ರಗಳನ್ನು ಬಸುವುದರೊಂದಿಗೆ, ಅದರ ಬಳಕೆ ಬಾಹ್ಯಾಕಾಶಕ್ಕೂ ವಿಸ್ತರಿಸಿದೆ. ಇಷ್ಟೆಲ್ಲಾ ಉಪಯೋಗ ಪಡೆದಿರುವ ಮೆಗ್ನೀಷಿಯಂ ಮಹತ್ವ ತಿಳಿದ ನಂತರ ಸುರುಸುರು ಬತ್ತಿ ಹೊತ್ತಿಸಿ ಸಂಭ್ರಮಿಸಿಬೇಕೆಂಬ ಅಭಿಲಾಷೆಯೆ, ಮೆಗ್ನೀಷಿಯಂ ದಹನದಿಂದ ಉಂಟಾಗುವ ದೂಳಿನಿಂದ ಲೋಹಿಯ ಭಸ್ಮ ಜ್ವರ ಉಂಟಾಗುತ್ತದೆ ಅದರಿಂದ ಚಳಿ ಮತ್ತು ಮಾಂಸಖಂಡಗಳ ದುರ್ಬಲತೆಗೆ ಬಲಿಯಾಗಬೇಕಾಗುತ್ತದೆ ಬದಲಿಗೆ ಮನಸ್ಸಲ್ಲೆ ಮೆಗ್ನೀಷಿಯಂ ಮಹತ್ವವನ್ನು ಸವಿಯೋಣ. 

54 comments:

  1. ಧನ್ಯವಾದಗಳು ಸರ್

    ReplyDelete
  2. ಉಪಯುಕ್ತ ಮಾಹಿತಿ ನೀಡಿದ್ದೀರಿ.ಧನ್ಯವಾದ.

    ReplyDelete
  3. Very nice and resourceful information sir

    ReplyDelete
  4. Very informative and interesting

    ReplyDelete
  5. ಉತ್ತಮವಾದ ಲೇಖನ ಸರ್
    ಧನ್ಯವಾದಗಳು ��������

    ReplyDelete
  6. ಉತ್ತಮವಾದ ಲೇಖನ

    ReplyDelete
  7. Very informative. Pls in English Sir. From One of the English SRP Sir.

    ReplyDelete
  8. Very informative. Pls in English Sir. From One of the English SRP Sir.

    ReplyDelete
    Replies
    1. ಮೆಗ್ನೀಷಿಯಂ ಕುರಿತು ಆಳವಾದ ಮಾಹಿತಿ ನೀಡಿರುವಿರಿ

      Delete
    2. ಧನ್ಯವಾದಗಳು ಸರ್

      Delete
    3. ಮೆಗ್ನಿಷಿಯಂ ಬಗ್ಗೆ ಇಷ್ಟೆಲ್ಲಾ ಮಾಹಿತಿ ತಿಳಿದಿರಲಿಲ್ಲ. ಧನ್ಯವಾದಗಳು ಸಾರ್

      Delete
    4. ಧನ್ಯವಾದಗಳು ಸರ್

      Delete
  9. ಮುತ್ತುರು ಶಾಲೆಯ ನಿಮ್ಮ ವಿದ್ಯಾರ್ಥಿನಿ ಆಗಿದ್ದಕ್ಕೆ ಹೆಮ್ಮೆ ಅನಿಸುತ್ತಿದೆ ಸರ್
    ಧನ್ಯವಾದಗಳು ಸರ್

    ReplyDelete
    Replies
    1. ನಿನ್ನ ಓದುವ ಹವ್ಯಾಸಕ್ಕೆ ಅಭಿನಂದನೆಗಳು

      Delete
  10. ಮುತ್ತುರು ಶಾಲೆಯ ನಿಮ್ಮ ವಿದ್ಯಾರ್ಥಿನಿ ಆಗಿದ್ದಕ್ಕೆ ಹೆಮ್ಮೆ ಅನಿಸುತ್ತಿದೆ ಸರ್
    ಧನ್ಯವಾದಗಳು ಸರ್

    ReplyDelete
  11. Super sir congratulations 👏

    ReplyDelete
  12. super attractive information aboit Mg sir.....👼

    ReplyDelete
  13. So much of information sr?? Very nice

    ReplyDelete
  14. ಮೆಗ್ನಿಶಿಯಂ ಗೂ ಇಷ್ಟು ರೋಚಕ ಇತಿಹಾಸವಿರುವುದು ಖುಷಿಯಾಯಿತು ಚೆನ್ನಾಗಿ ಮೂಡಿ ಬಂದಿದೆ ಸರ್

    ReplyDelete
  15. ಧನ್ಯವಾದಗಳು ಸರ್

    ReplyDelete
  16. Very informative article sir.tq so much

    ReplyDelete