Saturday, April 3, 2021

ಸಿಗರೇಟು ಎದುರೇಟು

ಸಿಗರೇಟು ಎದುರೇಟು

ಶ್ರೀಧರ ಮಯ್ಯ ಎಂ.ಎನ್, M.Sc., B.Ed, 

ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಗುತ್ತೂರು, 

ಹರಿಹರ ತಾ|| ದಾವಣಗೆರೆ ಜಿ!


ಮಹೇಶ್ ನನ್ನ ಬಾಲ್ಯ ಸ್ನೇಹಿತ. ಇವನ ದುಶ್ಚಟವೆಂದರೆ ಸಿಗರೇಟು ಸೇವನೆ, ಕೆಮ್ಮು ಹೆಚ್ಚಾಗಿದೆ ಎಂದು ಡಾಕ್ಟರ್ ಬಳಿ ಹೋಗಿದ್ದಕ್ಕೆ ಡಾಕ್ಟರ್ ಹೇಳಿದ್ದು “ಅಸ್ತಮಾದ ಜೊತೆಗೆ ಕ್ಷಯ ಅಟ್ಯಾಕ್ ಆಗಿದೆ” ಅಂತ.


ಮಧು ಈತ ನನ್ನ ಇನ್ನೊಬ್ಬ ಸ್ನೇಹಿತ. ಇವನದೂ ಇದೇ ಕಥೆ-ವ್ಯಥೆ. ಶ್ವಾಸಕೋಶ ಪರೀಕ್ಷಿಸಿದಾಗ ಹೊಗೆ ಗೂಡು ಕಟ್ಟಿತ್ತು. ಅದರೊಳಗೆ ಕ್ಯಾನ್ಸರ್‌ ಅವಿತು ಕುಳಿತಿತ್ತು. ಏಕೋ ಇವರ ಪರಿಸ್ಥಿತಿ ನೋಡಿ ಕರುಳು ಹಿಂಡಿದಂಗಾಯ್ತು. ನಿಸ್ತೇಜ ಮುಖ, ಒಳಸೇರಿದ ಕೆನ್ನೆ, ಸೊರಗಿದ ದೇಹವೇ ಈ ಲೇಖನ ಬರೆಯಲು ಕಾರಣವಾಯಿತು. ಹೌದು ಕೊನೆಯ ಪಕ್ಷ ಇದನ್ನು ಓದಿದ ಕೆಲವರಾದರೂ ಇವರಂತಾಗದೇ ಸಿಗರೇಟು ಬಿಟ್ಟು ಬಿಟ್ಟರೆ ನನ್ನ ಬರವಣಿಗೆಗೆ ಸಾರ್ಥಕತೆ ಸಿಕ್ಕಂತೆ.

ಮಾನವನ ಸ್ವಚ್ಛಂದ ಜೀವನಶೈಲಿಯ ಪ್ರತೀಕವೇ ಈ ಬೀಡಿ, ಸಿಗರೇಟು ಸೇವನೆ. ಇದು ಸ್ಟೇಟಸ್ ಜೊತೆಗೆ ಫ್ಯಾಶನ್ ಕೂಡ ಆಗಿದೆ. ಇದರಿಂದ ಹವಾಗುಣದಲ್ಲಿ ಅನೇಕ ಬದಲಾವಣೆಗಳಾಗುತ್ತಿವೆ. ವಾಯುಮಂಡಲದ ಒತ್ತಡ, ಉಷ್ಣತೆ, ಆರ್ದ್ರತೆ ಮೋಡಗಳ ರಚನೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳೂ ಕಂಡು ಬರುತ್ತಿವೆ. ಇದರ ಜೊತೆಗೆ ಮಾನವನೂ

ಅನಾರೋಗ್ಯದ ಗೂಡಾಗುತ್ತಿದ್ದಾನೆ. ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಕಾಯಿಲೆಗಳು ಆವರಿಸಿಕೊಳ್ಳುತ್ತಿವೆ. ಸಿಗರೇಟು ಸೇದದವನೂ ಇವನು ಬಿಟ್ಟ ಹೊಗೆಯಿಂದ ಕ್ಯಾನ್ಸರ್ ಪೀಡಿತನಾಗುತ್ತಿದ್ದಾನೆ. ದೇಶದಲ್ಲಿ ಪ್ರತಿ ವರ್ಷ 300 ದಶಲಕ್ಷ ಜನರು ಶ್ವಾಸಕೋಶದ ಕ್ಯಾನ್ಸರ್‌, ಮೂತ್ರಕೋಶದ ಕ್ಯಾನ್ಸರ್‌ನಿಂದ ನರಳುತ್ತಿದ್ದಾರೆ.

ಶ್ರೀಮಂತಿಕೆ, ಬಡತನ, ಮಾನಸಿಕ ಒತ್ತಡ, ದೈಹಿಕ ಶ್ರಮ, ಸ್ಟೇಟಸ್, ಶೋಕಿ ಇವೇ ಬೀಡಿ, ಸಿಗರೇಟು, ಮದ್ಯಪಾನದಂತಹ ದುಶ್ಚಟಗಳಿಗೆ ಕಾರಣ. ಒಮ್ಮೆ ಇದರ ದಾಸರಾದರೆ ಸಾಕು “ಬಿಟ್ಟೇನೆಂದರೂ ಬಿಡದೀ ಮಾಯೆ” ಎಂಬಂತೆ ನೇಣು ಕುಣಿಕೆಯಾಗಿ ಸುತ್ತುತ್ತಿರುತ್ತದೆ. ಇದರಲ್ಲಿನ ನಿಕೋಟಿನ್ ಅಂಶ ನೇರವಾಗಿ ನರಮಂಡಲಕ್ಕೆ ಹಾನಿ ಉಂಟು ಮಾಡುತ್ತದೆ. ಕೇವಲ ಒಂದು ಸಿಗರೇಟ್‌ನಿಂದ ಆಗುವ ಮಾಲಿನ್ಯ ಒಂದು ಲೀಟರ್ ಡೀಸೆಲ್‌ನಿಂದ ಆಗುವ ಮಾಲಿನ್ಯಕ್ಕಿಂತಲೂ ಹತ್ತುಪಟ್ಟು ಹೆಚ್ಚು!!

ಎರಡು ಲೀಟರ್ ಡೀಸೆಲ್ ಹಾಕಿ ಒಂದು ಕಾರನ್ನು ಕೋಣೆಯೊಂದರಲ್ಲಿ ನಾಲ್ಕು ಗಂಟೆಗಳ ಉರಿಸಿದರೆ ಸ್ವಲ್ಪ ಸಲ್ಪರ್ ಅನಿಲ ಬಿಡುಗಡೆಯಾಗುತ್ತದೆ. ಅದೆ ಕೇವಲ ಮೂರು ಸಿಗರೇಟುಗಳನ್ನು ಒಂದರ ನಂತರ ಒಂದರಂತೆ ಬರೀ ಮೂವತ್ತು ನಿಮಿಷಗಳ ಕಾಲ ಉರಿಸಿದರೆ ಬಿಡುಗಡೆಯಾಗುವ ನಿಕೋಟಿನ್ 1 ಮಿಲಿ ಗ್ರಾಂ ಮತ್ತು ಟಾರ್ 11.2 ಮಿಲಿ ಗ್ರಾಂ ಅಬ್ಬಾ! ನೀವೇ ಊಹಿಸಿ ಎಷ್ಟರ ಮಟ್ಟಿಗೆ ನಮ್ಮ ಹವಾಗುಣ ಹಾಗೂ ನಮ್ಮ ಆರೋಗ್ಯ ಕಲುಷಿತಗೊಳ್ಳುತ್ತಿದೆ. ಇಷ್ಟೇ ಅಲ್ಲ, ಕಾಡುಗಳು ನಾಶವಾಗುತ್ತಿವೆ. ಕಾರ್ಬನ್ ಡೈ ಆಕ್ಸೈಡ್‌,

ಕಾರ್ಬನ್ ಮೊನಾಕ್ಸೆಡ್, ಮಿಥೇನ್ ಅನಿಲಗಳ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿವೆ. ಸಿಗರೇಟು ತುಂಡುಗಳು ನದಿಗೆ ಸೇರಿ ಜಲಮಾಲಿನ್ಯವಾಗುತ್ತಿದೆ. ಮಾನವನು ಬಾಯಿ ಕ್ಯಾನ್ಸರ್‌, ಶ್ವಾಸಕೋಶದ ಕ್ಯಾನ್ಸರ್, ಪಾರ್ಶ್ವವಾಯು, ಹೃದಯ ತೊಂದರೆಗಳಿಂದ ನರಳುತ್ತಾನೆ. ನೀವು ನಂಬುತ್ತೀರೋ ಇಲ್ಲವೋ ಇದರಲ್ಲಿ ನಿಕೋಟಿನ್, ಸೀಸ, ಬೆಂಜೀನ್, ಅರ್ಸನಿಕ್‌ನಂತಹ ಸುಮಾರು 33 ಬಗೆಯ ಕ್ಯಾನ್ಸರ್ ಕಾರಕ ಅಂಶಗಳಿವೆ!!

ಸಿಗರೇಟಿನ ಬಗ್ಗೆ ಇನ್ನಷ್ಟು ಕುತೂಹಲಗಳು :

  1. ಈಗ ಆಗುತ್ತಿರುವ ಮಾಲಿನ್ಯಗಳಲ್ಲಿ 1/8 ಭಾಗ ಬರೀ ಬೀಡಿ, ಸಿಗರೇಟಿನ ಹೊಗೆಯಿಂದಲೇ ಆಗುತ್ತಿದೆ.
  2. ಸಿಗರೇಟಿಗೆ ಬೇಕಾಗುವ ತಂಬಾಕನ್ನು ಬಿಸಿ ಮಾಡಿ ಒಣಗಿಸಲು ವರ್ಷಕ್ಕೆ ಕಡಿಯುತ್ತಿರುವ ಮರಗಳ ಸಂಖ್ಯೆ ಸುಮಾರು 500 ಮಿಲಿಯನ್.
  3. ಪ್ರತಿವರ್ಷ 35 ಶತಕೋಟಿಗಿಂತಲೂ ಹೆಚ್ಚು ಸಿಗರೇಟುಗಳು ಭಾರತದಲ್ಲಿ ಸುಟ್ಟು ಬೂದಿಯಾಗುತ್ತಿದೆ. ಇದರ ತುಂಡುಗಳನ್ನು ನೀವೇನಾದರೂ ಒಂದರ ನಂತರ ಒಂದರಂತೆ ಜೋಡಿಸಿದರೆ ಈ ಭೂಮಿಯನ್ನು 16 ಸಲ ಸುತ್ತಬಹುದು.
  4. ಜಾಗತಿಕ ತಾಪಮಾನದಲ್ಲಿ ಏರಿಕೆಯಾಗುತ್ತಿದೆ.
  5. ಸಿಗರೇಟಿನ ಬೂದಿ, ತುಂಡುಗಳು ಮಳೆಯಿಂದ ನದಿಗೆ ಸೇರಿ ಸಮುದ್ರ ಆಮೆಯಂತಹ ಅಪೂರ್ವ ಜೀವಿಗಳು ನಾಶವಾಗುತ್ತಿವೆ.
  6. ತಂಬಾಕು ಬೆಳೆಗೆ ಹೆಚ್ಚಿನ ಪೋಷಕಾಂಶಗಳು ಬೇಕಾಗುವುದರಿಂದ ಮಣ್ಣಿನ ಸಾರ ಕಡಿಮೆಯಾಗುತ್ತಿದೆ.
  7. ಹಕ್ಕಿಗಳ ಹೊಟ್ಟೆಗಳಲ್ಲಿ ಸಿಗರೇಟಿನ ತುಂಡುಗಳು ಸೇರಿ ಸಂತಾನೋತ್ಪತ್ತಿಗೆ ತೊಂದರೆಯಾಗುತ್ತಿದೆ.
  8. ಮಣ್ಣಿನ PH ಮೌಲ್ಯದಲ್ಲಿ ವ್ಯತ್ಯಾಸವಾಗುತ್ತಿದೆ.
  9. ಇನ್ನೊಂದು ಇಂಟರೆಸ್ಟಿಂಗ್ ಎಂದರೆ ಕಾಗದದ ನಾಶ!.... ಸಿಗರೇಟಿನ ಸುತ್ತಲು ಬಳಸುವ ಕಾಗದದಿಂದ ಅರಣ್ಯನಾಶವಾಗುತ್ತಿದೆ. ಸಿಗರೇಟ್‌ಗೆ ಈಗಿರುವ ಪೇಪರ್ ಸುತ್ತುವ ಯಂತ್ರ ಗಂಟೆಗೆ 6ಕಿ.ಮೀ ಉದ್ದದಷ್ಟು ಪೇಪರನ್ನು ಉಪಯೋಗಿಸುತ್ತಿದೆ. ಅಂದರೆ ವರ್ಷಕ್ಕೆ 52,560 ಕಿ.ಮೀ ಉದ್ದದಷ್ಟು ಪೇಪರ್ ನಷ್ಟು ಇದಕ್ಕೆ. ಬಳಕೆಯಾದ ಮರಗಳ ಲೆಕ್ಕ ನಿಮಗೇ ಬಿಟ್ಟಿದ್ದು!!

ಇದು ಪರಿಸರದ ಮೇಲಾಯಿತು. ಇನ್ನು ಆರೋಗ್ಯದ ಮೇಲೆ

  1. ಪ್ರತಿ ವರ್ಷ ವಿಶ್ವದಲ್ಲಿ 30% ಸಾವು ಸಿಗರೇಟಿನಿಂದ ಬರುವ ಹಲವು ಕ್ಯಾನ್ಸರ್‌ಗಳಿಂದ ಉಂಟಾಗುತ್ತಿದೆ.
  2. ಮೂತ್ರಪಿಂಡಗಳು ಕ್ರಿಯಾಹೀನಗೊಳ್ಳುತ್ತಿವೆ.
  3. ಮಧುಮೇಹ ಬರಸೆಳೆದು ಅಪ್ಪಿಕೊಳ್ಳುತ್ತಿವೆ.
  4. ರಕ್ತದೊತ್ತಡ ನಾನೂ ಬರುತ್ತೇನೆಂದು ಜೊತೆಯಾಗುತ್ತಿದೆ.
ವಯಸ್ಕರಷ್ಟೇ ಅಲ್ಲ 2012ರ ಅಂಕಿ ಅಂಶದ ಪ್ರಕಾರ 10ರಿಂದ 15% ಬಾಲಕರೂ ಧೂಮಪಾನದ ದಾಸರಾಗುತ್ತಿದ್ದಾರೆ. ಇಷ್ಟೆಲ್ಲಾ ತೊಂದರೆಗಳು ಇದರಿಂದ ಬರುತ್ತಿದ್ದರೂ ರಾಜಾರೋಷವಾಗಿ ಸೇದುವವರೂ ಸೇದುತ್ತಲೇ ಇದ್ದಾರೆ ಸಿಗರೇಟು ಸೇದಿದವನು ಬಿಟ್ಟ ಹೊಗೆಯನ್ನು ಸೇವಿಸಿದವರೂ ಕಾಯಿಲೆಗಳಿಗೆ ತುತ್ತಾಗುತ್ತಾರೆಂದರೆ ಇದರ ದುಷ್ಪರಿಣಾಮ ಎಷ್ಟಿರಬಹುದು. ಹಾಗಾಗಿ ಎಲ್ಲರೂ ಧೂಮಪಾನ ಮುಕ್ತರಾಗಿ ಸದೃಢ ಆರೋಗ್ಯದೊಂದಿಗೆ ಸ್ವಚ್ಛ ಪರಿಸರದ ಕನಸನ್ನು ನನಸು ಮಾಡೋಣ ಏನಂತೀರಾ........?

23 comments:

  1. Good article sir... May this article serve your healthy intention

    ReplyDelete
  2. Article was good and interesting to read

    ReplyDelete
  3. Manjula np pe teacher gutturu fine sir

    ReplyDelete
  4. ಲೇಖನ ಚನ್ನಾಗಿದೆ ಗೆಳೆಯಾ

    ReplyDelete
  5. ತುಂಬಾ ಚೆನ್ನಾಗಿದೆ ಸರ್

    ReplyDelete
  6. ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ

    ReplyDelete
  7. Good information shridhar sr. Realy 🙋

    ReplyDelete
  8. Highly informative message and this will surely helpful to prevent T.B and Cancer.

    ReplyDelete
  9. ಆಲೋಚಿಸಬೇಕಾದ ಉತ್ತಮ ವಿಚಾರ ಧನ್ಯವಾದಗಳು ಸರ್

    ReplyDelete
  10. ತಮ್ಮ ಅನಿಸಿಕೆಗಳ‌ ಮೂಲಕ ಪ್ರೋತ್ಸಾಹಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು

    ReplyDelete
  11. ಲೇಖನ ಮಾಹಿತಿ ಪೂರ್ಣವಾಗಿದೆ, ವಿಷಯ ಪ್ರಸ್ತುತಿ ಅದ್ಭುತವಾಗಿದೆ. ಅಭಿನಂದನೆಗಳು ಸರ್

    ReplyDelete
  12. ಯುವಜನತೆ ಇದರಿಂದ ಎಚ್ಚತ್ತು ಕೊಳ್ಳದಿದ್ದರೆ/ ಎಚ್ಚರಿಕೆ
    ತೆಗೆದುಕೊಳ್ಳದೆ ಹೋದರೆ ಅಪಾಯವನ್ನು ಬೇಕೆಂದೇ ಮೈಮೇಲೆ ಎಳೆದು ಕೊಂಡಂತೆಯೇ ಸರಿ

    ReplyDelete
  13. ನಿಮ್ಮ ಕ್ರಿಯಾಶೀಲ ಪ್ರಯತ್ನಕ್ಕೆ ಧನ್ಯವಾದಗಳು ಸರ್

    ReplyDelete
  14. If the health of its citizens is adversely affected by cigarettes, why does nt the government ban its sales? We know it is a huge revenue earning business, but a healthy population itself is a huge asset... Why pinch the child and then console???

    ReplyDelete