Saturday, September 4, 2021

ವಿಜ್ಞಾನದ ಒಗಟುಗಳು - ಸೆಪ್ಟೆಂಬರ್ 2021

 ವಿಜ್ಞಾನ ಒಗಟುಗಳು - ಸೆಪ್ಟೆಂಬರ್ 2021

1.    ಉರಿಯುವೆ ಬೆಂಕಿಯಲ್ಲ

ಬೆಳಗುವೆ ಸೂರ್ಯನಲ್ಲ

ವಿದ್ಯುತ್ ಶಕ್ತಿಯೇ ನನ್ನ ಆಹಾರ

ಟಂಗಸ್ಟನ್‌  ತಂತಿಯ ಒಡನಾಟ.                            ಉತ್ತರ : ವಿದ್ಯುತ್ ಬಲ್ಬ್


2.   ಹೊಳೆಯುವೆನು ಚಿನ್ನವಲ್ಲ.

ಬೆಲೆಬಾಳುವೆನು ಹಣವಲ್ಲ.

ಕಾರ್ಬನ್‌ ನ ಬಹುರೂಪ ನಾನು.

ಹಾಗಾದರೆ ನಾನ್ಯಾರು?                                    ಉತ್ತರ : ವಜ್ರ


3.   ನೀಲಿ ಬಣ್ಣದ ಬೃಹದಾಕಾರದ ಜೀವಿ ನಾನು.

ನೀರೊಳಗಿದ್ದರೂ ಉಸಿರಾಡಲು ಮೇಲೆ ಬರುವೆನು.

ಮನುಷ್ಯರಂತೆ ಮರಿಗಳಿಗೆ ಹಾಲುಣಿಸುವೆನು.                    ಉತ್ತರ : ನೀಲಿ ತಿಮಿಂಗಲ


4.   ನೀರಲ್ಲೆ ಹುಟ್ಟಿ ನೀರಲ್ಲೇ ಸಾಯುವೆ.

ಅಡುಗೆಗೆ ರುಚಿ ನೀಡುವೆ.

ಸೋಡಿಯಂ ಮತ್ತು ಕ್ಲೋರಿನ್ ಗಳ ಮಗುವಾಗಿರುವೆ.

ನಾನ್ಯಾರು ಹೇಳಬಲ್ಲಿರಾ?                                    ಉತ್ತರ : ಅಡುಗೆ ಉಪ್ಪು NaCl


5.   ಕೀಟವೇ ನನ್ನ ಆಹಾರ

ಹೂಜಿಯಂತೆ ಆಕಾರ.

ಜೌಗು ಪ್ರದೇಶದಿ ಬೆಳೆಯುವ

ಮಾಂಸಾಹಾರಿ ಸಸ್ಯ ನಾನ್ಯಾರು?                               ಉತ್ತರ : ಹೂಜಿ ಗಿಡ


6.   ಹಸಿರೆಲೆಯ ಮೇಲೆ

ಹೊಳೆಯುವ ಮುತ್ತೆ

ಬಿಸಿಲಿಗೆ ಹೆದರಿ ನಾಪತ್ತೆ

ಚಳಿಗಾಲದಲ್ಲಿ ಹೆಚ್ಚಾಗಿರುವೆ

ನಾನು ಯಾರು ಗೊತ್ತೆ?                                    ಉತ್ತರ : ಇಬ್ಬನಿ


7.   ನಾನು ಬಳುಕುವ ಬಳ್ಳಿ, ವೀಳ್ಯದೆಲೆಯಲ್ಲ

ರುಚಿಯಲ್ಲಿ ಕಹಿ, ಹಾಗಲಕಾಯಿಯಲ್ಲ

ಸರ್ವ ಕಾಯಿಲೆಗಳಿಗೂ ದಿವ್ಯೌಷಧಿ

ನಾನು ಯಾರು?                                        ಉತ್ತರ : ಅಮೃತಬಳ್ಳಿ


8.   ಮಿರಿಮಿರಿ ಮಲ್ಲಿಗೆ 

   ಕೊಯ್ಯುವವರಿಲ್ಲ,

ಮುಡಿಯುವವರಿಲ್ಲ.                                    ಉತ್ತರ : ನಕ್ಷತ್ರ


9.   ಬಿಳಿಯ ಬಣ್ಣದ ಪುಡಿ ನಾನು ಆದರೆ ಉಪ್ಪಲ್ಲ.

ಇಡ್ಲಿ, ದೋಸೆ, ಬಜ್ಜಿ, ಬೋಂಡಾ ತಯಾರಿಸಲು ನನ್ನನ್ನು ಬಳಸುವರು.

ನಾನೊಂದು ಸಂಯುಕ್ತವಸ್ತು.

ಹಾಗಾದರೆ ನಾನು ಯಾರು?                            ಉತ್ತರ : ಅಡುಗೆ ಸೋಡಾ / NaHCO3


10.  ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಗೆ ನಾನು ಬೇಕು.

ರಾಗಿ, ಹಾಲು, ಸುಣ್ಣದಲ್ಲಿ ನಾನು ಹೇರಳವಾಗಿರುವೆ.

ನಾನೊಂದು ಲೋಹ.

ಹಾಗಾದರೆ ನಾನ್ಯಾರು?                                ಉತ್ತರ : ಕ್ಯಾಲ್ಷಿಯಂ


11. ಶೀತ , ಕೆಮ್ಮು, ನೆಗಡಿ ನನ್ನ ಲಕ್ಷಣ

ನಾನು ಬಂದರೆ  ಜನ ಹೆದರಿ ತಲ್ಲಣ

ಮಾಸ್ಕ್ ಸಾನಿಟೈಸರ್ ಬಳಸುವರು ಅನುಕ್ಷಣ

ದೂರದ ಚೀನಾದ ಊಹಾನ್ ನಿಂದ ಆಗಮನ            ಉತ್ತರ : ಕೋವಿಡ್-೧೯


 ಚಂದ್ರಿಕಾ ಆರ್. ಬಾಯಿರಿ

ಶಿಕ್ಷಕರು

ಆನೇಕಲ್ ತಾಲ್ಲೂಕು

3 comments:

  1. 1.ಬಲ್ಬ್
    2.ವಜ್ರ
    3.ನೀಲಿ ತಿಮಿಂಗಿಲ
    4.ಉಪ್ಪು
    5.ಹೂಜಿ ಗಿಡ
    6.ಇಬ್ಬನಿ
    7.ಅಮೃತಬಳ್ಳಿ
    8.ನಕ್ಷತ್ರ
    9.ಅಡುಗೆ ಸೋಡಾ
    10.ಕ್ಯಾಲ್ಸಿಯಂ
    11.ಕೊರೊನಾ
    ಅತ್ತ್ಯುತ್ತಮವಾಗಿದೆ

    ReplyDelete