Saturday, December 4, 2021

ಕ್ಯೂರಿಭ್ಯಾಂ ನಮಃ - ವಿಜ್ಞಾನ ನಾಟಕ

ಕ್ಯೂರಿಭ್ಯಾಂ ನಮಃ - ವಿಜ್ಞಾನ ನಾಟಕ

ವಿಜಯಕುಮಾರ್.‌ ಹೆಚ್‌.ಜಿ
ಸಹಶಿಕ್ಷಕರು
ಸ.ಪ್ರೌ.ಶಾಲೆ, ಕಾವಲ್‌ ಭೈರಸಂದ್ರ,
ಬೆಂಗಳೂರು ಉತ್ತರ ವಲಯ - 03


“ಕಾವ್ಯೇಷು ನಾಟಕಂ ರಮ್ಯಂ” , ಕಾವ್ಯಗಳಲ್ಲಿ ನಾಟಕವು ಅತ್ಯಂತ ರಮಣೀಯವಾದುದು ಎಂಬ ಮಾತು ತುಂಬಾ ಪ್ರಸಿದ್ಧ ಏಕೆಂದರೆ, “ ನಾಟಕಂ ಭಿನ್ನರುಚೇರ್ಜನಸ್ಯ ಬಹುದಾಪ್ಯೇಕಂ ಸಮಾರಾಧನಂ” ನಾಟಕ ಭಿನ್ನ ರುಚಿಯ ಜನರಿಗೆ ಒಂದೇ ಕಡೆ ವಿವಿಧ ಪ್ರಕಾರಗಳಲ್ಲಿ ರಂಜನೆ ಸಿಗುತ್ತದೆ. ಇಂತಹ ಬಲಿಷ್ಠವಾದ ಮಾಧ್ಯಮವನ್ನು ಬೋಧನೆಗೆ ಪರಿಣಾಮಕಾರಿಯಾಗಿ ಬಳಸಬಹುದು. NEP 2020 ಕೂಡ ಇದನ್ನೇ ಅನುಮೋದಿಸುತ್ತದೆ. ಅನೇಕ ನಾಟಕಗಳನ್ನು ರಚಿಸಿ ವಿಜ್ಞಾನ ವಿಷಯವನ್ನು ಬೋಧಿಸಬಹುದು. ವಿಜ್ಞಾನಿಗಳ ಜೀವನ ಸಾಧನೆ ಪ್ರಸ್ತುತ ಪಡಿಸಲು ಇದು ತುಂಬಾ ಸಹಕಾರಿ. ಈ ಎಲ್ಲಾ ಅಂಶಗಳನ್ನು ಮನಗಂಡ ಸಾರ್ವಜನಿಕ ಶಿಕ್ಷಣ ಇಲಾಖೆ, ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಮ್ಯೂಸಿಯಂ ಸಹಯೋಗದೊಂದಿಗೆ ವಿಜ್ಞಾನ ನಾಟಕ ಸ್ಪರ್ಧೆಗಳನ್ನು ಪ್ರತಿವರ್ಷ ಏರ್ಪಡಿಸುತ್ತದೆ. 

ವಿವಿಧ ಹಂತಗಳಲ್ಲಿ ನಡೆಯುವ ಈ ಸ್ಪರ್ಧೆ ರಾಷ್ಟ್ರಮಟ್ಟದವರೆಗೂ ತಲುಪಿ ಬಹುಮಾನ ನೀಡಲಾಗುತ್ತದೆ. ಆ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ತೃತೀಯ ಬಹುಮಾನ ಪಡೆದ ನಾಟಕ “ಕ್ಯೂರಿಭ್ಯಾಂ ನಮಃ” (ಮೇರಿ ಕ್ಯೂರಿಯ ಜೀವನ ಚರಿತ್ರೆ) ನಿಮಗಾಗಿ ನೀಡಲಾಗಿದೆ. ನಿಯಮಗಳಿಗೆ ಒಳಪಟ್ಟು ರಚಿಸಿದ ಈ ನಾಟಕವನ್ನು ಅರ್ಧ ಗಂಟೆಯ ಅವಧಿಯಲ್ಲಿ 8 ಜನ ವಿದ್ಯಾರ್ಥಿಗಳೊಂದಿಗೆ ಪ್ರದರ್ಶಿಸಬಹುದು. ವಿಷಯ ಬಹಳವಿದ್ದುದರಿಂದ ಹಾಡುಗಳ ಮೂಲಕ ಕೆಲ ವಿಷಯವನ್ನು ತಿಳಿಸಲಾಗಿದೆ. ಪ್ರದರ್ಶನಕಾರರು ತಿಳಿದಂತೆ ರಾಗ ಸಂಯೋಜಿಸಿ ಪ್ರದರ್ಶಿಸಿದರೆ ಉತ್ತಮ ನಾಟಕವಾಗಿ ಮೂಡಿಬರುತ್ತದೆ. ಶಿಕ್ಷಣವಾರ್ತೆಯಲ್ಲೂ ಈ ನಾಟಕದ ಬಗ್ಗೆ ಪ್ರಶಂಸಾ ನುಡಿಗಳು ಪ್ರಕಟವಾಗಿದ್ದವು. ಪ್ರಸ್ತುತ ನಾಟಕವನ್ನು ಲೇಖಕರ ಅನುಮತಿ ಪಡೆದು ಶಾಲಾ ಕಾರ್ಯಕ್ರಮಗಳಲ್ಲೂ ಪ್ರದರ್ಶಿಸಬಹುದು. ಅನುಮತಿ ಪಡೆಯಲು hgviji@gmail.com ಗೆ ಇಮೇಲ್ ಕಳಿಸಿ. 

ಜೊತೆಗೆ ವಿಜ್ಞಾನ ವಿಷಯಾಧಾರಿತ ನಾಟಕಗಳೂ ಬರಲಿವೆ. ನಿರೀಕ್ಷಿಸಿ

ನಾಟಕದ PDF ಫೈಲ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.


7 comments:

  1. ನಾಟಕವು ಅದ್ಭುತವಾಗಿ ಮೂಡಿ ಬಂದಿದೆ ಗುರುಗಳೇ..
    💐🙏🏻

    ReplyDelete
  2. ಸುಂದರ ವಿನೂತನ ಪ್ರಯೋಗ ವಿಜಯ 👏👏👏ಖುಷಿ ಆಯ್ತು ಓದಿ. ವಿಜ್ಞಾನ ಗಣಿತ ವನ್ನು ವಿಭಿನ್ನ ರೀತಿಯಲ್ಲಿ ಮಕ್ಕಳಿಗೆ ಸುಲಭವಾಗುವಂತೆ ಕಲಿಸುವ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ 💐🙏

    ReplyDelete
  3. ಸಂಸ್ಕೃತ ನಾಟಕಗಳ ರೀತಿಯಲ್ಲಿ ರಚಿಸಿರುವ ನಿಮ್ಮ ಈ ನಾಟಕ ತುಂಬಾ ಚೆನ್ನಾಗಿದೆ, ವಿಜಯ್

    ReplyDelete
  4. ವಿಜಯ್,ನೀವು ರಚಿಸಿದ ನಾಟಕದ ಪ್ರತಿ ಸಾಲನ್ನೂ ಓದಿದೆ, ನಿಮ್ಮ ಆ ಎಂಟು ವಿದ್ಯಾರ್ಥಿಗಳು ಹೇಗೆ ಅಭಿನಯಿಸಿರಬಹುದು ಎಂದು ಕಲ್ಪಿಸಿಕೊಂಡೆ! ಖುಷಿ ಆಯ್ತು... ನಿಮ್ಮಂತಹ ಶಿಕ್ಷಕರು ಶಾಲೆಗೆ ಹೆಮ್ಮೆ, ಮಕ್ಕಳ ಸೌಭಾಗ್ಯ!! & Yes.... Gone are those days of blackboard teaching alone! ಚಟುವಟಿಕೆ ಹಾಗೂ ಆವಿಷ್ಕಾರ ಆಧಾರಿತ ಕಲಿಕೆಯ ಅವಶ್ಯಕತೆ ತೀವ್ರವಾಗಿರುವ ಇಂದಿನ ದಿನಗಳಲ್ಲಿ ಮಕ್ಕಳು ನಗುತ್ತ, ನಲಿಯುತ್ತ ವೈಜ್ಞಾನಿಕ, ತಾರ್ಕಿಕ ಹಾಗೂ ಗಣಿತದ ಚಿಂತನೆ ಮಾಡುವ ಮನೋಭಾವ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸ್ವಾಗತಾರ್ಹ! ನಾಟಕ, ರೂಪಕ....ಇನ್ನೂ ಮುಂತಾದ ಬಲಿಷ್ಠ ಮಾಧ್ಯಮಗಳ ಮೂಲಕ ಮಕ್ಕಳಿಗೆ ಪಠ್ಯ ಪುಸ್ತಕಗಳಲ್ಲಿರುವ ವಿಷಯಗಳನ್ನು ಮನದಟ್ಟಾಗುವಂತೆ, ಮನಸ್ಸಿನ ಆಳಕ್ಕೆ ಇಳಿಯುವಂತೆ ಬೋಧನೆ ಮಾಡಬಹುದು ಎಂಬುದನ್ನ NEP 21 ಗ್ರಹಿಸಿದೆ. ಈ ದಿಸೆಯಲ್ಲಿ ನಿಮ್ಮ ಈ ಪ್ರಯತ್ನ ಅದ್ಭುತವಾಗಿದೆ, ನಿಮ್ಮ ರಚನೆಗೆ ಬಹುಮಾನ ಬಂದಿರುವುದು ಸಂತೋಷದ ಸಂಗತಿ, ಮನಃಪೂರ್ವಕವಾಗಿ ಅಭಿನಂದಿಸುವೆ ನಿಮಗೆ 👏🏻💐 ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹೊಸ, ವಿಭಿನ್ನವಾದ ಪ್ರಯೋಗಗಳು ನಿಮ್ಮಿಂದ ಹೊರಬರಲಿ 👍👍 ನಮ್ಮೆಲ್ಲರ ಅಪೇಕ್ಷೆ ಇದು!!😊

    ReplyDelete
    Replies
    1. ಧನ್ಯವಾದಗಳು ಮೇಡಂ ನಿಮ್ಮ ಸಹೃದಯತೆಗೆ. ಸುದೀರ್ಘವಾದ ಪ್ರತಿಕ್ರಿಯೆಗೆ

      Delete
  5. ಅಭಿನಂದನೆಗಳು its fine, good

    ReplyDelete
  6. ವಾವ್!‌ ತುಂಬಾ ಖುಷಿಯಾಯ್ತು ನಿಮ್ಮೆಲ್ಲರ ಪ್ರತಿಕ್ರಿಯೆಗಳನ್ನು ನೋಡಿ. ಧನ್ಯವಾದಗಳು

    ReplyDelete