Monday, April 4, 2022

ಒಗಟುಗಳು

ಒಗಟುಗಳು 


1. ಮೂರು ಮತ್ತೊಂದರ ಮಧ್ಯೆ ಒಂದು ಬಿಂದು ಮತ್ತೆ

   ಮುಂದುವರೆದು ನಾಲ್ಕು,ಒಂದು,ಐದು,ಒಂಭತ್ತು

   ಅನಂತದವರೆಗೂ ಹರಡುವುದೇ ನನ್ನ ಗಮ್ಮತ್ತು

   ನನ್ನ ಹುಟ್ಟು ಪರಿಧಿ ಮತ್ತು ವ್ಯಾಸಗಳ ಅನುಪಾತದಲ್ಲಿತ್ತು.

 

2. ಬಾಣಲೆಯಾಕಾರದ ಅಪಾರರ‍್ಶಕ ವಸ್ತು ನಾನು,

   ಬಾಣದೊಲು ಬರುವ ಬೆಳಕಿನ ಕಿರಣಗಳ ಏಕೀಕರಿಸುವೆನು,

   ಬಾಯೊಳಗಿನ ಹಲ್ಲುಗಳ ವೈದ್ಯರಿಗೆ ನಾ ಹಿರಿದಾಗಿ ತೋರುವೆನು,

   ಬಾನಿಂದಿಳಿವ ಕಿರಣಗಳ ಕೇಂದ್ರೀಕರಿಸಿ ಕುಲುಮೆಯಾಗಿಸುವೆನು,


- ವಿಜಯಕುಮಾರ್ ಹುತ್ತನಹಳ್ಳಿ 

2 comments:

  1. ಮೊದಲನೆ ಒಗಟು ತಿಣುಕಿಸುತ್ತಿದೆ, ಎರಡನೆ ಒಗಟಿನ ಉತ್ತರ parabolic reflector ಅಂದುಕೊಂಡಿದ್ದೇನೆ. ಅಭಿನಂದನೆಗಳು, ಒಗಟುಗಳು ಚೆನ್ನಾಗಿವೆ

    ReplyDelete
  2. ಎರಡನೇ ಒಗಟಿನ ಉತ್ತರ ನಿಮ್ನ ದರ್ಪಣ

    ReplyDelete