Monday, July 4, 2022

ಸಂಪಾದಕರ ಡೈರಿಯಿಂದ . . . . .

ಸಂಪಾದಕರ ಡೈರಿಯಿಂದ . . . . . . . . .

ಸವಿಜ್ಞಾನ ಇ-ಪತ್ರಿಕೆಯ ಜುಲೈ ತಿಂಗಳ ಸಂಚಿಕೆ ವೈವಿಧ್ಯಮಯ ಲೇಖನಗಳೊಂದಿಗೆ ಪ್ರಕಟವಾಗಿದೆ.  ನಮ್ಮಲ್ಲಿ ಬಹು ಮಂದಿ ತಮ್ಮ ದೈನಂದಿನ ಜೀವನ ಪ್ರಾರಂಭಿಸುವುದು ಒಂದು ಲೋಟ ಕಾಫಿಯ ಜೊತೆಗೆ. ಈ ಕಾಫಿ ಮಾನವನ ಜೀವನವನ್ನು ಪ್ರವೇಶಿಸಿದ ಸಂದರ್ಭವನ್ನು ವಿವರಿಸುವ ಲೇಖನವೊಂದನ್ನು ಎಂದಿನಂತೆ ತಮ್ಮ ನವಿರಾದ ಶೈಲಿಯಲ್ಲಿ ವಿವರಿಸಿದ್ದಾರೆ ಹಿರಿಯ ಲೇಖಕ ಡಾ. ಸುಂದರರಾಮ್. ಕೀಟಾಹಾರಿ ಸಸ್ಯಗಳ ಬಗ್ಗೆ ವಿವರಣಾತ್ಮಕವಾಗಿ ಬರೆದಿದ್ದಾರೆ, ಶ್ರೀ ಕೃಷ್ಣ ಚೈತನ್ಯ ಅವರು. ಖ್ಯಾತ ವಿಜ್ಞಾನಿ ಐನ್‌ಸ್ಸ್ಟೀನ್‌ರ ಮಿದುಳು ಅವರ ಮರಣಾನಂತರ ಕಳವಾಗಿತ್ತೆಂಬ ಕಥೆಯನ್ನು ಸೊಗಸಾಗಿ ವಿವರಿಸಿದ್ದಾರೆ ಸುರೇಶ್‌ ಸಂಕೃತಿ ಅವರು. ಜೇನುನೊಣಗಳು ಕಟ್ಟುವ ಗೂಡಿನ ರಚನೆಯ ಹಿಂದಿರುವ ಗಣಿತೀಯ ತತ್ವಗಳನ್ನು ವಿವರಿಸಿದ್ದಾರೆ ಗಣಿತ ಶಿಕ್ಷಕ ಅನಿಲ್‌ ಕುಮಾರ್.‌ ಈ ಬಾರಿಯ ನಮ್ಮ ಸಾಧಕ ಶಿಕ್ಷಕ ಶ್ರೀ ಬುರ್ಲಿ ಅವರ ಸಾಧನೆಗಳನ್ನು ಪರಿಚಯ ಮಾಡಿದ್ದಾರೆ ಶ್ರೀ ರಾಮಚಂದ್ರ ಭಟ್‌ ಅವರು. ಇವೆಲ್ಲದರ ಜೊತೆಗೆ, ಒಗಟುಗಳು ಪದಬಂಧ ಹಾಗೂ ವ್ಯಂಗಚಿತ್ರಗಳು, ಎಂದಿನಂತೆ ಈ ಬಾರಿಯೂ ಪ್ರಕಟವಾಗಿವೆ.

ಸಂಚಿಕೆಯ ಲೇಖನಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ದಾಖಲಿಸಿ. ನಿಮ್ಮ ಶಿಕ್ಷಕ ಸಹೋದ್ಯೋಗಿಗಳಿಗೆ ʼಸವಿಜ್ಞಾನʼ ವನ್ನು ಪರಿಚಯಿಸಿ. ಸಲಹೆಗಳಿದ್ದರೆ ಸ್ವಾಗತ.

                                                   ಪ್ರಧಾನ ಸಂಪಾದಕರು

No comments:

Post a Comment