Thursday, August 4, 2022

ಸಂಪಾದಕರ ಡೈರಿಯಿಂದ . . . . . . . . .

 ಸಂಪಾದಕರ ಡೈರಿಯಿಂದ . . . . . . . . .

ಈ ತಿಂಗಳು ದೇಶದಾದ್ಯಂತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮ. ತಾಯಿ ಭಾರತಿಗೆ ಅಮೃತದಾರತಿಯ ಸಡಗರ ಎಲ್ಲೆಲ್ಲೂ ಕಾಣುತ್ತಿದೆ. ಜೊತೆಗೆ, ಹಬ್ಬಗಳ ಸಾಲು ಸಾಲು. ಈ ಸಡಗರದ ಮಧ್ಯೆ ‘ಸವಿಜ್ಞಾನ’ದ ಆಗಸ್ಟ್ ತಿಂಗಳ ಸಂಚಿಕೆ ಬಿಡುಗಡೆಯಾಗುತ್ತಿದೆ. ನಮ್ಮ ಎಲ್ಲ ಓದುಗರಿಗೆ ಈ ಸಂದರ್ಭದಲ್ಲಿ ‘ಸವಿಜ್ಞಾನ’ ತಂಡದ ಶುಭ ಹಾರೈಕೆಗಳು. 

ಈ ಬಾರಿಯ ಸಂಚಿಕೆಯಲ್ಲಿ ವೈಶಿಷ್ಟ್ಯದ ಹಲವು ಲೇಖನಗಳಿವೆ. ಭಾರತೀಯ ಗಣಿತಲೋಕಕ್ಕೆ ಗಣನೀಯ ಕೊಡುಗೆ ನೀಡಿಯೂ ಹೆಚ್ಚು ಪ್ರಸಿದ್ಧಿ ಪಡೆಯದ ಡಿ.ಆರ. ಕಾಪ್ರೆಕರ್ ಅವರ ಸಾಧನೆಯ ಬಗ್ಗೆ ಪರಿಚಯಾತ್ಮಕ ಲೇಖನವೊಂದನ್ನು ಬರೆದಿದ್ದಾರೆ, ಸುರೇಶ್ ಸಂಕೃತಿ ಅವರು. ವಿದ್ಯುತ್‌ನ ಉಪಯೋಗಗಳ ಹಾಗೂ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ  ಪ್ರಯತ್ನ ಮಾಡಿದ್ದಾರೆ, ರೋಹಿತ್ ಸಾಗರ್ ಅವರು. ವನ್ಯಜೀವಿ ತಜ್ಞ, ಕೃಷ್ಣ ಚೈತನ್ಯ ಅವರಿಂದ ಈ ಬಾರಿ ರಣಹದ್ದುಗಳ ಜೀವನ ಶೈಲಿಯನ್ನು ಪರಿಚಯಿಸುವ ಲೇಖನವಿದೆ. ನಾವು ಉಸಿರಾಡುತ್ತಿರುವ ಗಾಳಿ ಹೇಗೆ ವಿಷಪೂರಿತವಾಗುತ್ತಿದೆ ಎಂಬುದನ್ನು ವಿವರಿಸಿದ್ದಾರೆ ಗಜಾನನ ಭಟ್ ತಮ್ಮ ಲೇಖನದಲ್ಲಿ. ಸಾಧಕ ಶಿಕ್ಷಕರಾಗಿ ೨೦೨೧ರ ಸಾಲಿನ ಸಿ..ಎನ್ ಆರ್. ರಾವ್ ಪ್ರಶಸ್ತಿ ಪಡೆದ ಶ್ರೀ ಭೀಮಪ್ಪ ಬೆಲ್ಲದ್   ಅವರನ್ನು ಪರಿಚಯಿಸಿದ್ದಾರೆ, ರಾಮಚಂದ್ರ ಭಟ್ ಅವರು. ಈ ಬಾರಿಯ ವಿಶೇಷವೆಂದರೆ, ಕರೋನ ಭೂಮಿಗೆ ತಂದಿತ್ತ ಸಂಕಟವನ್ನು ಭಾವಪೂರ್ಣವಾಗಿ ತಮ್ಮ ಕವಿತೆಯಲ್ಲಿ ವಿವರಿಸಿದ್ದಾರೆ, ಶಿಕ್ಷಕಿ ಡಾ. ಡಿ.ಎನ್, ಸಂಧ್ಯಾ ಅವರು.

ಇವೆಲ್ಲದರ ಜೊತೆಗೆ, ವಿಜ್ಞಾನಕ್ಕೆ ಸಂಬಂಧಿಸಿದ ನಮ್ಮ ಸ್ಥಿರ ಅಂಕಣಗಳಾದ, ಪದಬಂಧ, ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳು ನಿಮ್ಮನ್ನು ರಂಜಿಸಲಿವೆ. ಸಂಚಿಕೆಯ ಎಲ್ಲ ಲೇಖನಗಳನ್ನು ಹಾಗೂ ಅಂಕಣಗಳನ್ನು ಓದಿ ನಿಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿ


                                                                                                                     ಪ್ರಧಾನ ಸಂಪಾದಕರು


1 comment: