DNA ಅಣುವಿನ ರಚನೆಯ ಆವಿಷ್ಕಾರದ ಹಿಂದಿರುವ ಸತ್ಯ
ಡಾ.ಫ್ರಾಂಕ್ಲಿನ್ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ನ್ಯೂನ್ಹ್ಯಾಮ್ ಮಹಿಳಾ ಕಾಲೇಜಿನಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರವನ್ನು ಅಧ್ಯಯನ ಮಾಡುವ ಮೂಲಕ ತಮ್ಮ ಪ್ರಭಾವಶಾಲಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕಾರ್ಬನ್ ಮತ್ತು ಗ್ರ್ಯಾಫೈಟ್ ಮೈಕ್ರೋಸ್ಟ್ರಕ್ಚರ್ಗಳನ್ನು ವಿಶ್ಲೇಷಿಸುವ ಬ್ರಿಟಿಷ್ ಕೋಲ್ ಯುಟಿಲೈಸೇಶನ್ ರಿಸರ್ಚ್ ಅಸೋಸಿಯೇಷನ್ (BCURA) ಗಾಗಿ ಅವರು ಕೆಲಸ ಮಾಡಿದರು.
ಹಲವಾರು ವರ್ಷಗಳ ನಂತರ, ಡಾ. ಫ್ರಾಂಕ್ಲಿನ್ ಅವರು ಟರ್ನರ್ ಮತ್ತು ನೆವಾಲ್ ಫೆಲೋಶಿಪ್ ಪಡೆದರು
ಸಂಶೋಧನಾ ಸಂಸ್ಥೆಯ ಸಹಾಯಕ ಮುಖ್ಯಸ್ಥರಾಗಿದ್ದಂತಹ ವಿಲ್ಕಿನ್ಸ್ ರವರಿಗೆ ಫ್ರಾಂಕ್ಲಿನ್ರವರು ಸಂಶೋಧಿಸಿದ ಡಿಎನ್ಎ ದ್ವಿಸುರುಳಿ ಮಾದರಿಯ ಮಾಹಿತಿ ಬಗ್ಗೆ ತಿಳಿಯಿತು. ವಿಲ್ಕಿನ್ಸ್ ರವರು ಪ್ರಾರಂಭದಲ್ಲಿ ಫ್ರಾಂಕ್ಲಿನ್ರವರನ್ನು ತಮ್ಮ ಜೊತೆ ಡಿಎನ್ಎ ಸಂಶೋಧನೆಯ ಬಗ್ಗೆ ಕಾರ್ಯನಿರ್ವಹಿಸಲು ಕೇಳಿಕೊಂಡರು. ಆದರೆ ಸಂಸ್ಥೆಯ ಮುಖ್ಯಸ್ಥರ ಆದೇಶದ ಮೇರೆಗೆ ಅವರು ಇವರ ಜೊತೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ.
1958ರಲ್ಲಿ ರೋಸಾಲಿಂಡ್ ಫ್ರಾಂಕ್ಲಿನ್ರವರು ಅನಾರೋಗ್ಯ ಹೊಂದಿ ಅಂಡಾಶಯದ ಕ್ಯಾನ್ಸರ್ನಿಂದ ಮೃತರಾಗುತ್ತಾರೆ. ಅವರ ಮರಣಾನಂತರ ಡಿಎನ್ಎ ರಚನೆಯ ಮೇಲಿನ ಸಂಶೋಧನೆಯನ್ನು ಈ ಮೂರು ಸ್ನೇಹಿತರು ಮುಂದುವರಿಸುತ್ತಾರೆ. ಜೀವಿಗಳ ಪ್ರತಿಯೊಂದು ಲಕ್ಷಣಗಳು ಡಿಎನ್ಎ ರಚನೆಯ ಮೇಲೆಯೇ ಅವಲಂಬಿತವಾಗಿದೆ ಎನ್ನುವುದನ್ನು ಇವರ ಸಂಶೋಧನೆಯು ಸಾಬೀತುಪಡಿಸುತ್ತದೆ.ಡಾ. ಫ್ರಾಂಕ್ಲಿನ್ರ ಡಿಎನ್ಎ ಸಂಶೋಧನೆಯು ನೊಬೆಲ್ಗೆ
ಅರ್ಹವಾಗಿದೆ ಎಂದು ವ್ಯಾಪಕವಾಗಿ ಭಾವಿಸಲಾಗಿದ್ದರೂ, ಅವರು ಹೆಚ್ಚಾಗಿ ಕಡೆಗಣಿಸಲ್ಪಟ್ಟರು, ಆಕೆಯ ಜೀವನಚರಿತ್ರೆ
ರಚಿಸಿದ ಬ್ರೆಂಡಾ ಮ್ಯಾಡಾಕ್ಸ್ ರವರು ಅವರನ್ನು "ದಿ ಡಾರ್ಕ್ ಲೇಡಿ ಆಫ್ ಡಿಎನ್ಎ"
ಎಂದು ಕರೆದರು. ಸಹೋದ್ಯೋಗಿಯಾದ ವಿಲ್ಕಿನ್ಸ್ರವರ ಅವಹೇಳನಕಾರಿ ಉಲ್ಲೇಖವು ಫ್ರಾಂಕ್ಲಿನ್ರವರ ಕೊಡುಗೆಯನ್ನು
ಕತ್ತಲೆಯಲ್ಲಿ ಇರಿಸಿತು. ಸಂಶೋಧನಾ ಕ್ಷಿತಿಜದ ಉತ್ಕ್ರಾಂತಿ ಎನಿಸಿದ ದ್ವಿಸುರುಳಿ ರಚನೆಯ ಹಿಂದಿನ
ಫ್ರಾಂಕ್ಲಿನ್ರವರ ಸಂಶೋಧನಾ ಶ್ರಮವನ್ನು ಪುರುಷ ಪ್ರಧಾನ ಸಮಾಜವು ಮನ್ನಿಸಲಿಲ್ಲ. ಧುವತಾರೆಯಂತೆ
ಮಿನುಗಬೇಕಿದ್ದ ಡಾ. ಫ್ರಾಂಕ್ಲಿನ್ರವರಿಗೆ ಯಾವುದೇ ಗೌರವ ನೀಡಲಿಲ್ಲ- ಆದರೆ ನಂತರ ಒಬ್ಬರು ಫ್ರಾಂಕ್ಲಿನ್ರವರು
ರಸಾಯನಶಾಸ್ತ್ರಕ್ಕಾಗಿ ನೊಬೆಲ್ಗೆ ಅರ್ಹರು ಎಂದು ಸೂಚಿಸಿದರೂ, ಮರಣೋತ್ತರ ನಾಮನಿರ್ದೇಶನಗಳೂ ಆಗಲಿಲ್ಲ.
ಫ್ರಾಂಕ್ಲಿನ್ ಅವರ ಜೀವನವನ್ನು ಅನಾರೋಗ್ಯ ತಿಂದು ಹಾಕದೇ ಇದ್ದಿದ್ದರೆ, ಬಹುಷಃ ಅವರ ಸಂಶೋಧನೆಗಳು ಔಷಧ-ವಿಜ್ಞಾನದಲ್ಲಿ ಮಹಾಕಾಂತಿಯನ್ನೇ ಉಂಟುಮಾಡುತ್ತಿದ್ದವು ಎಂಬುದರಲ್ಲಿ ಸಂದೇಹವಿಲ್ಲ. ಅವರ ಅದ್ಭುತ ವೃತ್ತಿಜೀವನವು ಇನ್ನೂ ಸಂಪೂರ್ಣವಾಗಿ ಅನಾವರಣಗೊಳ್ಳದಿದ್ದರೂ ಲಂಡನ್ನ ವಿಲ್ಲೆಸ್ಡೆನ್ ಯಹೂದಿ ಸ್ಮಶಾನದಲ್ಲಿರುವ ಡಾ. ಫ್ರಾಂಕ್ಲಿನ್ ಅವರ ಸಮಾಧಿಯ ಮೇಲಿನ ಫಲಕದಲ್ಲಿ ಡಿ ಎನ್ ಎ ಅಣುವಿನ ರಚನೆಯ ಸಂಶೋಧನೆಯಲ್ಲಿ ಅವರ ಪಾತ್ರವನ್ನು ಸ್ಮರಿಸಲಾಗಿದೆ.
ಕೃಪೆ: ಆಟೋಬಯೋಗ್ರಫಿ ಆಫ್ ಬ್ರೆಂಡನ್
ಮೆಡಾಕ್ಸ್.
ಸಂಗ್ರಹ ಮತ್ತು ಅನುವಾದ:
ಶಶಿಕುಮಾರ್ ಬಿ.ಎಸ್.
ವಿಜ್ಞಾನ ಶಿಕ್ಷಕರು.
ಸರ್ಕಾರಿ ಪ್ರೌಢಶಾಲೆ, ಎಲೆಕ್ಯಾತನಹಳ್ಳಿ,
ನೆಲಮಂಗಲ ತಾ. ಬೆಂಗಳೂರು ಗ್ರಾ,ಜಿಲ್ಲೆ.- 562111.
ದೂ: 9900276979










ಫ್ರಾಂಕ್ಲಿನ್ ನಡೆದ ದ್ರೋಹ ಅಕ್ಷಮ್ಯ ಅಪರಾದ, ವಿಜ್ಞಾನ ಕ್ಷೇತ್ರದಲ್ಲಿ ನಡೆದ ಈ ಕೃತ್ಯಕ್ಕೆ ದಿಕ್ಕಾರವಿರಲಿ. ನಿಮ್ಮ ಲೇಖನ ಮೂಲಕ ಮತ್ತೊಮ್ಮೆ ಅವರ ಕೊಡುಗೆಯನ್ನು ಸ್ಮರಿಸಿದ್ದೀರಿ, ಧನ್ಯವಾದಗಳು.
ReplyDeleteThank you sr
ReplyDeleteGood information sir
ReplyDeleteಸಂಶೋಧನಾ ಕ್ಷೇತ್ರದಲ್ಲಿ ಒಬ್ಬರ ಶ್ರಮದ ಫಲ ಮತ್ತೊಬ್ಬರು ಪಡೆದಿರುವ ಹಲವಾರು ಇತಿಹಾಸ ಸಿಗುತ್ತದೆ. ಫ್ರಾಂಕ್ಲಿನ್ ಅವರಿಗೆ ಆಗಿರುವ ಅನ್ಯಾಯ ಅಕ್ಷಮ್ಯ. ಅವರ ಸಂಶೋಧನಾ ಕೊಡುಗೆಯನ್ನು ನೆನಪು ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
ReplyDeleteThank you for the comments sir .
ReplyDelete