Saturday, February 4, 2023

ಸಂಪಾದಕೀಯ ಫೆಬ್ರವರಿ

 ಸಂಪಾದಕರ ಡೈರಿಯಿಂದ ,

ನಾಡಿನ ವಿಜ್ಞಾನ ಶಿಕ್ಷಕರ ಹಾಗೂ ವಿಜ್ಞಾನಾಸಕ್ತರ ಗಮನ ಸೆಳೆದಿರುವ ‘ಸವಿಜ್ಷಾನ’ ಇ – ಮಾಸ ಪತ್ರಿಕೆ ಎರಡು ವರ್ಷ ಪೂರೈಸಿದೆ. ಮೂರನೆಯ ವರ್ಷದ ಎರಡನೆಯ ಸಂಚಿಕೆ ಈಗ ನಿಮ್ಮನ್ನು ತಲುಪಿದೆ.
ಈ ಸಂಚಿಕೆಯ ಪ್ರಮುಖ ಆಕರ್ಷಣೆಯಾಗಿ ಐದು ಲೇಖನಗಳಿವೆ. ಇಂಗ್ಲೆಂಡಿನ ಕುಖ್ಯಾತ ದೊರೆ 3ನೇ ರಿಚರ್ಡ್‍ನ ದುರಂತ   ಮರಣದ ಐದು ಶತಮಾನಗಳ ನಂತರ ಆತನ ಗೋರಿಯನ್ನು ಅಗೆದು, ಅಸ್ಥಿ ಪಂಜರವನ್ನು ಹೊರತೆಗೆದು ಡಿ.ಎನ್.ಎ. ಪರೀಕ್ಷೆ ನಡೆಸಿದ ಕುತೂಹಲಕಾರಿ ಸಂದರ್ಭವನ್ನು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ, ಶಿಕ್ಷಕ ಸುರೇಶ್ ಸಂಕೃತಿ ಅವರು. ‘ಬಡವರ ಬಾದಾಮಿ’  ಎಂದು ಹೆಸರಾಗಿರುವ ಕಡಲೇಕಾಯಿಯ ಸಸ್ಯದ ಸಂತಾನೋತ್ಪತ್ತಿ ವಿಧಾನದ ಬಗ್ಗೆ ತಮ್ಮ ಲೇಖನದಲ್ಲಿ ಬೆಳಕು ಚೆಲ್ಲಿದ್ದಾರೆ, ಶಿಕ್ಷಕ ಬಿ.ಎಸ್. ಶಶಿಕುಮಾರ್ ಅವರು. ಜೀವ ಪ್ರಪಂಚದೊಳಗಿನ ರಹಸ್ಯವನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ, ಶಿಕ್ಷಕ ರಾಮಚಂದ್ರ ಭಟ್ ಅವರು. ಭಾರತೀಯ ಮೂಲದ ಖ್ಯಾತ ಗಣಿತಜ್ಞೆ ಭಾಮಾ ಶ್ರೀನಿವಾಸ್ ಅವರನ್ನು ಪರಿಚಯಿಸುವ ಮೂಲಕ ‘ಸವಿಜ್ಞಾನ ಲೇಖಕರ ಬಳಗವನ್ನು ಸೇರುತ್ತಿದ್ದಾರೆ ಶ್ರೀಮತಿ ಚಂದ್ರಕಲಾ ಅವರು. ಶಿಕ್ಷಕ ಗಜಾನನ ಭಟ್ ಅವರು‌ ತಮ್ಮ ಲೇಖನದಲ್ಲಿ, ಸಮುದ್ರದ ಕುದುರೆ ಹಿಪ್ಪೋಕ್ಯಾಂಪಸ್ ಮೀನಿನಲ್ಲಿ ಗಂಡು ಗರ್ಭಧರಿಸುವ ವಿಶಿಷ್ಠ ವಿದ್ಯಮಾನವನ್ನು ವಿವರಿಸಿದ್ದಾರೆ, ಈ ಸಂಚಿಕೆಯ ಸಾಧಕ ಶಿಕ್ಷಕ ಶ್ರೀ ಧರಮಯ್ಯ ಅವರನ್ನು ಪರಿಚಯಿಸಿದ್ದಾರೆ ಶಿಕ್ಷಕ ಲಕ್ಷ್ಮೀ ಪ್ರಸಾದ್ ನಾಯಕ್.

ಇವೆಲ್ಲದರ ಜೊತೆಗೆ, ಎಂದಿನಂತೆ ಫೆಬ್ರವರಿ ತಿಂಗಳಿನ ಪ್ರಮುಖ ದಿನಾಚರಣೆಗಳ ಬಗ್ಗೆ ಮಾಹಿತಿ, ವಿಜ್ಞಾನಕ್ಕೆ ಸಂಬಂಧಿಸಿದ ನಮ್ಮ ಸ್ಥಿರ ಅಂಕಣಗಳಾದ, ‘ವಿಜ್ಞಾನ ವಿಶೇಷ’, ವಿಜಾÐನಕ್ಕೆ ಸಂಬಂಧಿಸಿದ ಪದಬಂಧ, ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳು ನಿಮ್ಮನ್ನು ರಂಜಿಸಲಿವೆ. ಸಂಚಿಕೆಯ ಎಲ್ಲ ಲೇಖನಗಳನ್ನು ಹಾಗೂ ಅಂಕಣಗಳನ್ನು ಓದಿ, ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿ. ನಿಮ್ಮ ಸಹೋದ್ಯೋಗಿ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ‘ಸವಿಜ್ಞಾನ’ ಓದುವಂತೆ ಪ್ರೇರೇಪಿಸಿ
                                                                                                                                                                                   ಪ್ರಧಾನ ಸಂಪಾದಕರು 

                                                 ಡಾ. ಬಾಲಕೃಷ್ಣ ಅಡಿಗ




1 comment:

  1. ನಿಮ್ಮ ಲೇಖನವಿಲ್ಲದಿರುವುದು ಏನೋ ಕಳೆದುಕೊಂಡಂತೆ ಭಾವವನ್ನು ಉಂಟು ಮಾಡುತ್ತಿದೆ

    ReplyDelete