Saturday, March 4, 2023

ಒಗಟು ಮಾರ್ಚ್‌ 2023

ಒಗಟು ಮಾರ್ಚ್‌ 2023

ಒಬ್ಬರಿದ್ದರೆ ನಾವು ಬಣ್ಣ ತೆಗೆಯಬಲ್ಲೆವು

ಇಬ್ಬರಿದ್ದರೆ ಜೀವಿಗಳ ಉಸಿರಾಗಬಲ್ಲೆವು

 ಮೂವರಿದ್ದರೆ  ನೀರ ನಿಷ್ಕ್ರಿಮೀಕರಣಗೊಳಿಸಬಲ್ಲೆವು

 ಪ್ರಬಲ ಉತ್ಕರ್ಷಣ ಕಾರಿಯು ಹೌದು 

ಸ್ತರಗೋಲದಲೆ ನಮ್ಮ ಹಾರಾಟ 

 ಮಾನವ ಚಟುವಟಿಕೆಗಳಿಂದ ಉಡುಗೀತು ನಮ್ಮಸುವು

ತಿರೆಯ ಜೀವಿಗಳ ಕಸುವು ಕಳೆದೀತು.

 ಸುಳಿವ ಹಿಡಿದು ಗುರುತಿಸ ಬಲಿರೆ ನೀವು?

A : O, O2, Ozone 


 ಕನ್ನಡದ ಹೆಮ್ಮೆಯ ಶ್ರೇಷ್ಠ ಕೃಷಿ ವಿಜ್ಞಾನಿ 

 ಖ್ಯಾತ ಕನ್ನಡದ ಸಾಹಿತಿಯು ಹೌದು

 ಸಸ್ಯಗಳ ದಾಯಾದಿ ಮತ್ಸರವ ಜಗಕೆ ತಿಳಿಸಿದವರು!!

 ATREE ಯ ಸಂಸ್ಥಾಪಕ ಟ್ರಸ್ಟಿ ಇವರು

 ಈಗಾಗಲೇ ಇರುವೆಗಳ ಎರಡು ಪ್ರಭೇದಕ್ಕೆ ಇವರ ಹೆಸರಿದೆ!!!

 ನೆಮಸ್ಟಿಸ್ ಹಲ್ಲಿ ಪ್ರಭೇದಕ್ಕೂ ಇವರ ಹೆಸರಿನ ಗೌರವವಿದೆ.

ನಿಮ್ಮ ಸವಿಜ್ಞಾನಕ್ಕೂ ಇವರ ನಂಟಿದೆ

ಸುಳಿವರಿತು ಹೇಳಬಲ್ಲಿರಿ ಈ ಮಹಾಮಹಿಮನ ಹೆಸರ?

Dr. K.N.Ganeshaiah 



 ಹಗುರ ಲೋಹವಿದು ದೇಶದ ಭವಿಷ್ಯದ ಶಕ್ತಿಯ ಆಕರವಿದು  

ಸಲಾಲ್ ಪ್ರದೇಶದಲ್ಲಿ ಹುದುಗಿರುವ ಬಿಳಿ ಚಿನ್ನ

 ಅತ್ಯುತ್ತಮ ಅಪಕರ್ಷಣಕಾರಿ ಆರ್ಫೆಡ್ಸನ್ ಅದುರಿಂದ ಪಡೆದ 

ಆರ್ಫೆಡ್ಸನ್ ನ ಶೋಧವಿದು!!! ಸುಳಿವರಿತು  ಈ ಒಗಟ ಒಡೆಯ ಬಲ್ಲಿರೇ ನೀವು?

A : Lithium 

 ಫ್ಯಾರಡೆಯ ಶೋಧವಿದು ಕೆಕುಲೆಯ ಕನಸಿನ ದರ್ಶನವಿದು !!!

 ಕಚ್ಚಾ ತೈಲದಿಂದ ಉದಿಸಿದ ದ್ರಾವಕವಿದು

ಕರಿಯುಂಗುರದ  ತೂಕ ಎಪ್ಪತೆಂಟು 

 ಆರೀನು ಸಾಮ್ರಾಜ್ಯದ ಮೂಲಪುರುಷ

ಪೈ ಎಲೆಕ್ಟ್ರಾನ್ ಗಳ ಅನುರಣನವಿದೆ.

 ಪದ ಜಾಲದಲಿ ಸಿಲುಕಿದ ಇದನು ಹೊರಗೆಡಹಬಲ್ಲಿರೆ?

A : Benzene 



 ಅತ್ಯುಚ್ಛ   ಶಕ್ತಿಯ ಆಕರವಿದು

 ದಹಿಸಿದರೆ ದೊರೆವ ಉತ್ಪನ್ನಗಳು ಜೀವಿಗಾಸರೆ!!!

 ಕ್ಯಾವೆಂಡಿಶನ ಶೋಧವಿದು ಸೂರ್ಯ ಶಕ್ತಿಯ ರಹಸ್ಯವಿದು 

 ಪ್ರಬಲ ಅಪಕರ್ಷಣಕಾರಿಯೂ ಹೌದು

 ಕ್ರಿಯಾಶೀಲತೆಯಲ್ಲಿ ತಾಮ್ರಕ್ಕೂ ಮಿಗಿಲಾದ  ಧಾತು

 ಸುಳಿವು ಬಳಸಿ ಪತ್ತೆ ಹಚ್ಚಿಬಿಡಿ 

A : Hydrogen 

ರಚನೆ : 

ರಾಮಚಂದ್ರ ಭಟ್‌ ಬಿ.ಜಿ. 

ವಿಜ್ಞಾನ ಶಿಕ್ಷಕರು


No comments:

Post a Comment