Thursday, May 4, 2023

ಒರಿಗಮಿ – ಕಾಗದದಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಕೌಶಲ್ಯ

  ಒರಿಗಮಿ  ಕಾಗದದಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಕೌಶಲ್ಯ 



 ಲೇಖಕರು : ಬಿ.ಎನ್.ರೂಪ, ಸಹಶಿಕ್ಷಕರು,

 ಸರ್ಕಾರಿ ಉರ್ದು ಮತ್ತು ಆಂಗ್ಲ ಪ್ರೌಢಶಾಲೆ,

ಗೋರಿಪಾಳ್ಯ, ಬೆಂಗಳೂರು ದಕ್ಷಿಣವಲಯ - 2.


ಕಾಗದವನ್ನು ವಿಶಿಷ್ಟವಾಗಿ ಮಡಚಿ ಮಾದರಿಗಳನ್ನು ರಚಿಸುವ ಜಪಾನಿನ ಕಲಾಪ್ರಕಾರವಾದ ಒರಿಗಮಿಯನ್ನು ಪರಿಚಯಿಸುತ್ತಾ, ಇಂಥ ಕಲಾಪ್ರಕಾರಗಳನ್ನು ನಮ್ಮ ವಿದ್ಯಾರ್ಥಿಗಳಿಗೆ ಕಲಿಸುವ ಅವಶ್ಯಕತೆಯನ್ನು ಈ ಲೇಖನದಲ್ಲಿ ಒತ್ತಿ ಹೇಳಿದ್ದಾರೆ ಶಿಕ್ಷಕಿ ಬಿ.ಎನ್.ರೂಪ ಅವರು .

 

ಒರಿಗಮಿ ಎಂಬ ಪದವನ್ನುಇಂದು ನಾವುಸಾಕಷ್ಟು ಕೇಳಿದ್ದೇವೆ. ಹವ್ಯಾಸಿ ಓರಿಗಮಿ ಮಾಡುವವರನ್ನು ಕಂಡಾಗ ಕಣ್ಣುಗಳಿಗೆ ಆನಂದವನ್ನುಂಟಾಗುತ್ತದೆ.   ಸೋಜಿಗ ಹಾಗೂ ಮನಕ್ಕೆ ಆನಂದಕರ ಅನುಭವದ ಅನುಭೂತಿ ಉಂಟಾಗುತ್ತದೆ.

ಈ ಕಲೆಯಿಂದ ಕಾಗದಕ್ಕೆ ಕತ್ತರಿ ಹಾಕದೆ, ಅದನ್ನು ಮಡಚಿ ಹಲವಾರು ಬಗೆಯ ವಿನ್ಯಾಸಗಳನ್ನು ವಿಜ್ಞಾನದ ಆಟಿಕೆಗಳನ್ನು ಅನಾವರಣ ಮಾಡಬಹುದು. ಒರಿಗಮಿ ಎಂಬುದು ಹಾಳೆಗಳನ್ನು ವಿಶಿಷ್ಠ ರೀತಿಯಲ್ಲಿ ಮಡಚಿ, ಪಕ್ಷಿ, ಪ್ರಾಣಿಗಳನ್ನುಹಾಗೂಅಲಂಕಾರಿಕ ವಸ್ತುಗಳನ್ನು ಮಾಡುವ ಕಲೆಯಾಗಿದೆ.

ಒರಿಗಮಿ ಒಂದು ಪ್ರಾಚೀನ ಜಪಾನಿ ಕಲೆ. ಒರಿಗಮಿ ಪದವು ಎರಡು ಪದಗಳಿಂದ ನಿಷ್ಪತ್ತಿ ಆಗಿದೆ. ‘ಒರಿʼ‘ ಎಂದರೆ ಮಡಿಸಿದ ಮತ್ತು ’ಗಮಿ’ ಎಂದರೆ ಕಾಗದ. ಬಳಸುವ ಹಾಳೆಯನ್ನು ಕತ್ತರಿಸದೆ ಈ ಕಟ್ಟುನಿಟ್ಟಿನ ಮಿತಿಯ ಹೊರತಾಗಿಯೂ ಯಾವುದೇ ವಿಷಯವು ಓರಿಗಮಿ ಮಾದರಿಯನ್ನು ಮಾಡಲು ಸೂಕ್ತವಾಗಿದೆ. ಓರಿಗಮಿ ಮಾದರಿಗಳು ಎಲ್ಲಾ ಗಾತ್ರಗಳಲ್ಲಿ ಹಾಗೂ ವಿವಿಧ ಸಂಕೀರ್ಣತೆಯ ಮಟ್ಟಗಳಲ್ಲಿ ಕಂಡುಬರುತ್ತದೆ.



ಒರಿಗಾಮಿ ಎಂಬ ಕಲೆ,

ಕಾಗದ ಮಡಚುವ ಕಲೆ,

ಕಾಗದಕ್ಕೆಕತ್ತರಿ ಹಾಕದೆ,

ಮಾನವನ ಕೈಚಳಕದಿಂದ ರಚಿಸಲಾಗುವ ಕಲೆ.

 

ಕಾಗದದಿಂದ ವಿವಿಧ ಪ್ರಾಣಿ, ಪಕ್ಷಿ ವಿನ್ಯಾಸಗಳನ್ನು,

ರಚಿಸುವ ಕಲೆ,

ಮನಕ್ಕೆಮುದ ನೀಡುವ,

ಮಾನವನ ಕೈಚಳಕದಿಂದ ರಚಿಸಲಾಗುವ ಕಲೆ.

 

ಒರಿಗಮಿ ಎಂಬ ಮಾಯಾಲೋಕ,

ಹವ್ಯಾಸಿ ಕಲಾವಿದರ ರಸಪಾಕ,

ಸರಳತೆಯಿಂದ ಸಂಕೀರ್ಣ ರಚನೆ ಒಳಗೊಂಡ,

ಮಾನವನ ಕೈಚಳಕದಿಂದ ರಚಿಸಲಾಗುವ ಕಲೆ.

 

ಜಪಾನ್‌ ದೇಶದಲ್ಲಿ ಅರಳಿದ ಈಕಲೆ,

ಜಗದೆಲ್ಲೆಡೆ ಮಾನ್ಯತೆ ಪಡೆದ ಕರಕುಶಲತೆ,

ಕೇವಲ ಕಾಗದ ಮಡಿಕೆಯಿಂದ ಉಂಟಾಗುವ ಈ ಕಲೆ,

ಮಾನವನ ಕೈಚಳಕದಿಂದ ರಚಿಸಲಾಗುವ ಕಲೆ.

    ಒರಿಗಮಿ 17 ನೇ ಶತಮಾನದಲ್ಲಿ ಜಪಾನ್‌ನಲ್ಲಿ ಅರಳಿದ ಕಲೆ. 1900ರ ದಶಕದ ಮಧ್ಯಭಾಗದಲ್ಲಿ ಇದು ಪ್ರಪಂಚದಾದ್ಯಂತ ಜನಪ್ರಿಯ ಕಲಾ ಪ್ರಕಾರವಾಗಿ ಬೆಳೆಯಿತು. ಅಕಿರಾ ಯೋಶಿಜಾವಾ ಅವರನ್ನುಆಧುನಿಕ ಒರಿಗಮಿ ಕಲೆಯ ಪಿತಾಮಹ ಎಂದು ಪರಿಗಣಿಸಲಾಗುತ್ತದೆ.

ಒರಿಗಮಿ ಕಲಾವಿದರು ಪಕ್ಷಿಗಳನ್ನು 1/64 ಇಂಚು ಉದ್ದ ಮತ್ತು ಆನೆಗಳನ್ನು ಮೂರು ಗಜಗಳಷ್ಟು ಎತ್ತರಮಾಡಿದ್ದಾರೆ. ಒಂದು ಮಾದರಿಯಲ್ಲಿ ನಕ್ರೀಸ್‌ಗಳ ಸಂಖ್ಯೆಯು ಕೆಲವೇ ಕೆಲವುಗಳಿಂದ ನೂರಾರು ಇರಬಹುದು. ಆಧುನಿಕ ಯುಗದ ಕಲಾವಿದರು ಒರಿಗಮಿಯನ್ನು ವಾಸ್ತವಿಕತೆ ಮತ್ತು ಸಂಕೀರ್ಣತೆಯ ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಸಂಕೀರ್ಣವಾದ ಮಡಿಕೆಗಳಲ್ಲಿನ ವಿವರಗಳು ಬೆರಗುಗೊಳಿಸುತ್ತವೆ.

 

ಒಂದು ಸರಳವಾದ ಪಕ್ಷಿಯ ಪ್ರತಿರೂಪವನ್ನು ತಯಾರಿಸಲು ಒಂದು ನಿಮಿಷಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳಲಾಗುತ್ತದೆ, ಸಂಕೀರ್ಣವಾದ ಕೀಟದ ಮಾದರಿಯೊಂದನ್ನು  ತಯಾರಿಸಲು ಎರಡರಿಂದ ಮೂರು ಗಂಟೆಗಳನ್ನು ತೆಗೆದುಕೊಳ್ಳುವುದೂ ಅಸಾಮಾನ್ಯವೇನಲ್ಲ. ಒರಿಗಮಿಯಲ್ಲಿನ ಬಹಳಷ್ಟು ಪ್ರಗತಿ ಕಳೆದ ಐವತ್ತು ವರ್ಷಗಳಿಂದ ಹೆಚ್ಚಾಗಿದೆ  ಇದರ ಮೂಲವು ಕಾಗದದ ಆವಿಷ್ಕಾರದಷ್ಟೇ ಹಳೆಯದಾಗಿದೆ. ಕಾಗದ ತಯಾರಿಕೆಯ ತಂತ್ರಜ್ಞಾನ  ಚೀನಾದಲ್ಲಿ ಅಭಿವೃದ್ಧಿಗೊಂಡು, ಅಲ್ಲಿಂದ ಪ್ರಪಂಚದ ಇತರ ಭಾಗಗಳಿಗೆ ಪಸರಿಸಿದೆ.

ಅನೇಕ ಸಾಂಪ್ರದಾಯಿಕ ಮಡಿಕೆಗಳು ನಿರಂತರ ಸೌಂದರ್ಯವನ್ನು ಹೊಂದಿವೆ ಮತ್ತು ಅವುಗಳ ಸರಳತೆಯು ಆಕರ್ಷಕವಾಗಿದೆ. ಒರಿಗಾಮಿ ಕ್ರೇನ್ಸ್‌ ಸಾಂಪ್ರದಾಯಿಕ ಜಪಾನಿಗಳಿಗೆ ಅದೃಷ್ಟದ ಸಂಕೇತವಾಗಿದೆ. ಒರಿಗಾಮಿ ಕಲೆಯಲ್ಲಿ ಅರಳಿದ ಕರಕುಶಲತೆ ನಿರ್ಧಿಷ್ಟ ಅರ್ಥವನ್ನು ಒಳಗೊಂಡಿದೆ.

ಒರಿಗಮಿಯಲ್ಲಿ ಮೂರು ಮುಖ್ಯ ವಿಧದ ಕಾಗದದ ಮಡಿಕೆಗಳಿವೆ. ಅವುಗಳೆಂದರೆ, ಪರ್ವತದ ಮಡಿಕೆ, ಕಣಿವೆಯಮಡಿಕೆ ಮತ್ತು ಕುಂಬಳಕಾಯಿಯ ಪದರ. ಪರ್ವತದ ಮಡಿಕೆಯನ್ನು ಮೇಲ್ಭಾಗದ ಅಂಚನ್ನು ಮಡಿಸುವ ಮೂಲಕ ರಚಿಸಲಾಗುತ್ತದೆ, ಇದರಿಂದಾಗಿ ಕಾಗದವು ಪರ್ವತದ ಆಕಾರವನ್ನುತೆಳೆದುಕೊಳ್ಳುತ್ತದೆ, ಕಣಿವೆಯ ಮಡಿಕೆಯು ಕಾಗದದ ಕೆಳಗಿನ ಅಂಚನ್ನು ಮೇಲಕ್ಕೆತ್ತುವುದನ್ನು ಒಳಗೊಂಡಿದೆ.

ಇತ್ತೀಚಿನ ದಿನಗಳಲ್ಲಿ ಈಗ ತಾನೆ ಕಣ್ಣುಬಿಡುತ್ತಿರುವ ಪುಟ್ಟಪುಟ್ಟ ಕಂದಮ್ಮಗಳಿಂದ ಹಿಡಿದು ವಯಸ್ಸಿನಲ್ಲಿ ಹಿರಿಯರು ವಿವಿಧ ಸಾಮಾಜಿಕ ಜಾಲತಾಣಗಳ ದಾಸರಾಗಿದ್ದಾರೆ. ಇಂಥ ಚಟುವಟಿಕೆಗಳು ನಮ್ಮ ಮೆದುಳಿನ ಸಾಮರ್ಥ್ಯವನ್ನು ಕುಗ್ಗಿಸುವುದಲ್ಲದೆ, ಸಾಮಾಜಿಕ ನೆಲೆಗಟ್ಟಿನಲ್ಲಿ ಸಾಕಷ್ಟುಸಮಸ್ಯೆಗಳನ್ನು ಜಾಗತಿಕಮಟ್ಟದಲ್ಲಿ ಉಂಟುಮಾಡಿರುವುದನ್ನು ನಾವು ನೋಡುತ್ತಿದ್ದೇವೆ.

ಆದ್ದರಿಂದ ಇಂದಿನ ಯುವಜನತೆ ವಿವಿಧ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಯಾವುದಾದರೂ ಒಂದು ಕುಶಲಕಲಿಕೆಯನ್ನು ಕಡ್ಡಾಯಮಾಡುವುದರಿಂದ ಅವರು ಒರಿಗಲಿಯಂಥ ಕಲಾ ಪ್ರಕಾರಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಮಾಡಬಹುದು ನಿರ್ದಿಷ್ಟ ಸಮಯಾವಧಿಯಲ್ಲಿ ಸ್ವಯಂನಿರ್ಬಂಧ ಮಾಡಿಕೊಂಡು ಇಂಥ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಲ್ಲಿ, ಉತ್ತಮ ಸಂಸ್ಕಾರ, ಸಜ್ಜನಿಕೆ ಜೊತೆಗೆ, ಉತ್ತಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಪಡೆಯುವಲ್ಲಿಯಶಸ್ವಿಯಾಗಬಹುದು. . ಈ ನಿಟ್ಟಿನಲ್ಲಿ ಹೆಜ್ಜೆಯಿಡೋಣ. ನೀವೇನೆನ್ನುತ್ತೀರಿ ???

 


 

 

5 comments: