Saturday, January 4, 2025

ರಾಶಿಯ ಮೂಲ ದೇವಕಣ ಕಾಣೋ !!!

  ರಾಶಿಯ ಮೂಲ ದೇವಕಣ   ಕಾಣೋ !!!

           ಲೇಖಕರುಸುರೇಶ ಸಂ ಕೃಷ್ಣಮೂರ್ತಿ

   




     ಎರಡು ಕಾಯಗಳ ನಡುವಿನ ಗುರುತ್ವಾಕರ್ಷಣೆಯು ಆ ಕಾಯಗಳ ರಾಶಿಗಳ ಗುಣಲಬ್ದಕ್ಕೆ ನೇರಾನುಪಾತದಲ್ಲೂ , ಅವುಗಳ ನಡುವಣ ದೂರದ ವರ್ಗಕ್ಕೆ ವಿಲೋಮಾಪಾತದಲ್ಲಿರುತ್ತದೆ ಎಂದು  ಗುರುತ್ವಾಕರ್ಷಣೆಯನ್ನು  ನ್ಯೂಟನ್ ತನ್ನ ವಿಶ್ವ ಗುರುತ್ವಾಕರ್ಷಣ ನಿಯಮದ ಮೂಲಕ ವಿವರಿಸಿದನು. ಸೂರ್ಯನ ಸುತ್ತಲೂ ಸುತ್ತುತ್ತಿರುವ ಗ್ರಹಗಳು, ಆ ಗ್ರಹಗಳ ಉಪಗ್ರಹಗಳು ಪರಸ್ಪರ ಬಂಧಿಸಲ್ಪಟ್ಟಿರುವುದು ಈ ಗುರುತ್ವ ಬಲದಿಂದಲೇ. ಅಷ್ಠೇ ಅಲ್ಲದೇ ಬಿಲಿಯಾಂತರ ನಕ್ಷತ್ರಗಳನ್ನು ಒಳಗೊಂಡಿರುವ ತಾರ ಮಂಡಲಗಳಲ್ಲಿರುವ ನಕ್ಷತ್ರಗಳು, ನೀಹಾರಿಕೆಗಳು ಎಲ್ಲವೂ ವ್ಯವಸ್ಥಿತವಾಗಿ ಬಂಧಿಸಲ್ಪಟ್ಟಿರುವುದು ಈ ಗುರುತ್ವಾಕರ್ಷಣ ಬಲದಿಂದಲೇಹಾಗಿದ್ದರೆ ಗುರುತ್ವಾಕರ್ಷಣ ಬಲವೂ ನಿಜವಾಗಿಯೂ ವಿಶ್ವ ವ್ಯಾಪಿಯಾಗಿ ಅನ್ವಯವಾಗುತ್ತದೆಯೆ ಎಂಬ ಪ್ರಶ್ನೆ ಬಂದಾಗ ಅದಕ್ಕೆ ಉತ್ತರಿಸುವುದು ಸುಲಭವಲ್ಲ. ಏಕೆಂದರೆ ವಾಸ್ತವದಲ್ಲಿ ಗುರುತ್ವಾಕರ್ಷಣೆಯ ಬಲವನ್ನು ಅಳೆಯುವುದು ಕಷ್ಟ, ಮತ್ತು ಕಣಗಳ ನಡುವಿನ ಬಲವನ್ನು ಅಳೆಯುವಾಗ ಇದರ ನಿಖರತೆ ಅಸ್ಪಷ್ವಾಗಿರುತ್ತದೆಕಪ್ಪು ಕುಳಿಗಳಿಗಳಂತಹ ಬೃಹತ್‌ ಕಾಯಗಳಿಗೆ ಈ  ನಿಯಮ ಅನ್ವಯಿಸುವುದಿಲ್ಲ. ಕಾಯಗಳ ನಡುವಿನ ಅಂತರ 10 ಮೀಟರ್ ಗಳಿಗಿಂತ ಕಡಿಮೆ  ಇದ್ದಾಗ, ಕಾಯಗಳು ಬೆಳಕಿನ ವೇಗವನ್ನು  ಸಮೀಪಿಸಿದ  ಅತಿ ಗುರುತ್ವ ಇರುವೆಡೆ ನ್ಯೂಟನ್‌ನ ಗುರುತ್ವ ಸಿದ್ಧಾಂತವನ್ನು ಅನ್ವಯಿಸಲಾಗದು. ಹೀಗೆ  ಪಟ್ಟಿ ಬೆಳೆಯುತ್ತಾ ಹೋಗುತ್ತದೆಹೀಗೆ ನ್ಯೂಟನ್‌ ಗುರುತ್ವಾಕರ್ಷಣೆಯ ಸಿದ್ಧಾಂತ ಸೋಲುವೆಡೆ ಅಂತಹವುಗಳನ್ನು ಸಮರ್ಥವಾಗಿ ವಿವರಿಸುವಲ್ಲಿ ಯಶಸ್ವಿಯಾಗುವುದು ಐನಸ್ಟೈನರು ಪ್ರತಿಪಾದಿಸಿದ ಸಾಪೇಕ್ಷ ಸಿದ್ಧಾಂತ, ಸಾಮಾನ್ಯ ಸಾಪೇಕ್ಷ ಸಿದ್ಧಾಂತಐನಸ್ಟೈನರು ತಮ್ಮ  ಸಾಮಾನ್ಯ ಸಾಪೇಕ್ಷ ಸಿದ್ಧಾಂತದಲ್ಲಿ  ದ್ರವ್ಯದ ರಾಶಿಯ ಕಾರಣದಿಂದ ಅದರ ಸುತ್ತಲಿನ ಅವಕಾಶ ಮತ್ತು ಕಾಲಗಳ ಸಮತಲವು ವಕ್ರವಾಗುತ್ತದೆ.   ಈ ವಕ್ರತೆಯೇ ಗುರುತ್ವಕ್ಕೆ ಕಾರಣವೆಂದು ಗುರುತ್ವಾಕರ್ಷಣೆಗೆ ಕಾರಣವನ್ನು  ವಿವರಿಸಿದರು


  ಇಡೀ ವಿಶ್ವವನ್ನು ಒಟ್ಟಿಗೆ ಹಿಡಿದಿಟ್ಟಿರುವ ಗುರುತ್ವಾಕರ್ಷಣೆಗೆ ಕಾರಣವಾಗುವ ರಾಶಿ ಎಲ್ಲಿಂದ ಬಂದಿತು ಎಂಬ ಪ್ರಶ್ನೆಗೆ ಆಧುನಿಕ ಕಾಸ್ಮಾಲಜಿಯ ವಿವರಣೆ ಈ ರೀತಿ ಇದೆ. ಸುಮಾರು ಹದಿನಾಲ್ಕು ಬಿಲಿಯನ್ ವರ್ಷಗಳ ಹಿಂದೆ ಇಡೀ ವಿಶ್ವ ಒಂದು ಸೂಜಿ ಮೊನೆಯ ಗಾತ್ರದ ಅತಿ ಸಾಂಧ್ರತೆಯ ಉಚ್ಚ ತಾಪದ ಗೋಲವಾಗಿದ್ದಿತು.  ಇದ್ದಕ್ಕಿದ್ದಂತೆ ಒಮ್ಮೆಗೆ ಅದು ಭೀಷಣವಾಗಿ ಸ್ಪೋಟಿಸಿತುಈ ಸ್ಪೋಟದ ಕಾರಣದಿಂದ ವಿಕಿರಣಗಳುಅವಕಾಶ ಮತ್ತು ಕಾಲಗಳು ವಿಸ್ತಾರವಾಗುತ್ತಾ ಹೋಗಿ ಮೂಲಭೂತ ಕಣಗಳುದ್ರವ್ಯವೂಅದಕ್ಕೆ ರಾಶಿಯೂ ದೊರೆತುಅದರಿಂದ ನಕ್ಷತ್ರಗಳು ಗ್ರಹಗಳು ಮುಂತಾದವು ಸೃಷ್ಟಿಯಾದವುಈ ಸಿದ್ಧಾಂತವನ್ನು ಮಹಾ ಸ್ಪೋಟ ಸಿದ್ಧಾಂತ ಎಂದು ಕರೆಯಲಾಗಿದೆ.

ಸಾಮಾನ್ಯ ಸಾಪೇಕ್ಷ ಸಿದ್ಧಾಂತರಾಶಿಯ ಕಾರಣದಿಂದ ವಕ್ರವಾಗುವ ಕಾಲ ಮತ್ತು ಅವಕಾಶ 

    ದ್ರವ್ಯದ ಪರಮಾಣುಗಳಲ್ಲಿರುವ ಮೂಲಭೂತ ಕಣಗಳೆಂದರೆ ಎಲೆಕ್ಟ್ರಾನು, ಪ್ರೋಟಾನು ಮತ್ತು ನ್ಯೂಟ್ರ್ರಾನುಗಳು ಎಂದು ಸರ್ವೇಸಾಮಾನ್ಯವಾಗಿ  ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಅದರೆ ಪರಮಾಣುವಿನ ಬೀಜಕೇಂದ್ರದಲ್ಲಿ ಪ್ರೋಟಾನು ಮತ್ತು ನ್ಯೂಟ್ರ್ರಾನುಗಳು ಅಲ್ಲದೇ ಇನ್ನೂರಕ್ಕೂ ಮೀರಿದ ಸಂಖ್ಯೆಯ ವಿವಿಧ ರೀತಿಯ ಉಪಪರಮಾಣು ಕಣಗಳನ್ನು ಈವರೆಗೆ ಪತ್ತೆ ಹಚ್ಚಲಾಗಿದೆ. ಎರಡು ಅಥವಾ ಹೆಚ್ಚು  ಕ್ವಾರ್ಕ್‌ ಗಳೆಂಬ ಪರಮಾಣು ಮೂಲಭೂತ ಕಣಗಳಿಂದಾಗಿರುವ ಭಾರವಾದ ಪರಮಾಣು ಉಪಕಣಗಳನ್ನು ಹ್ಯಾಡ್ರಾನುಗಳೆಂದು ಕರೆಯಲಾಗುತ್ತದೆಪರಮಾಣು ಕಣಗಳನ್ನು ಲೆಪ್ಟಾನು ಮತ್ತು ಬ್ಯಾರಿಯಾನುಗಳು ಎಂದೂ  ವರ್ಗೀಕರಿಸಲಾಗುತ್ತದೆ. ಲೆಪ್ಟಾನುಗಳು ಹಗುರ ಕಣಗಳು, ಎಲೆಕ್ಟ್ರಾನುಗಳು, ಮ್ಯೂಯಾನುಗಳು, ನ್ಯೂಟ್ರೀನೋಗಳು ಮುಂತಾದವು ಲೆಪ್ಟಾನುಗಳಿಗೆ ಉದಾಹರಣೆಗಳಾದರೆ, ಬ್ಯಾರಿಯಾನುಗಳು ಹೆಚ್ಚು ಭಾರವಿರುವ ಕಣಗಳು. ಪ್ರೋಟಾನು, ನ್ಯೂಟ್ರಾನುಗಳು ಇವುಗಳಿಗೆ ಉದಾಹರಣೆಗಳಾಗಿವೆ. ಇದಲ್ಲದೇ ಉಪಪರಮಾಣೀಯ ಕಣಗಳನ್ನು ಫರ್ಮಿಯಾನುಗಳು ಮತ್ತು ಬೋಸಾನುಗಳೆಂತಲೂ ವರ್ಗೀಕರಿಸಲಾಗಿದೆ.

      ಬೋಸಾನುಗಳ ಸ್ಪಿನ್‌ ಕ್ವಾಂಟಂ ಸಂಖ್ಯೆಯೂ ಯಾವಾಗಲೂ 1,2,3,... ಇತ್ಯಾದಿಯಾಗಿ ಪೂರ್ಣಾಂಕವಾಗಿರುತ್ತದೆ. ಬೋಸಾನುಗಳಿಗೆ ಉದಾಹರಣೆಗಳೆಂದರೆ,ಫೋಟಾನು(ಬೆಳಕಿನಕಣ)ಗಳುಗ್ಲುಆನುಗಳು (ಪರಮಾಣುವಿನ ನ್ಯೂಕ್ಲಿಯಸ್‌ನಲ್ಲಿನ ಕಣಗಳನ್ನು  ಬಂಧಿಸುವ ಬಲದಂತೆ ವರ್ತಿಸುವ ಕಣಹಿಗ್ಸ್‌ ಬೋಸಾನ್‌, W-ಬೋಸಾನ್‌ ಮತ್ತು Z-ಬೋಸಾನುಗಳು. ಬೋಸಾನುಗಳು ಸಮಮಿತಿಯ ಅಲೆಯ ಗುಣ ಹೊಂದಿವೆ. ಬೋಸಾನುಗಳು ಐನಸ್ಟೀನ್‌- ಬೋಸ್‌ ಅಂಕಿ-ಅಂಶಗಳಿಗೆ ಅನುಗುಣವಾಗಿ ವರ್ತಿಸುತ್ತವೆಫರ್ಮಿಯಾನುಗಳ ಕ್ವಾಂಟಂ ಸಂಖ್ಯೆಯು  ಭಿನ್ನರಾಶಿಗಳಾಗಿದ್ದು, 1/2, 3/2, 5/2,... ಮುಂತಾಗಿ ಬೆಸಸಂಖ್ಯೆಗಳ ಎರಡರ ಭಾಗಲಬ್ದಗಳಾಗಿರುತ್ತವೆ. ಫರ್ಮಿಯಾನುಗಳು ಅಸಮಮಿತಿಯ ಅಲೆಯ ಗುಣ ಹೊಂದಿವೆಪ್ರೋಟಾನುಗಳು, ನ್ಯೂಟ್ರಾನುಗಳು, ಎಲೆಕ್ಟ್ರಾನುಗಳು, ನ್ಯೂಟ್ರಿನೋಗಳು ಮತ್ತು ಕ್ವಾರ್ಕ್‌ಗಳು ಫರ್ಮಿಯಾನುಗಳಿಗೆಉದಾಹರಣೆಗಳುಫರ್ಮಿಯಾನುಗಳು ಫರ್ಮಿ-ಡಿರಾಕ್‌ ಅಂಕಿ-?ಅಂಶಗಳಿಗೆ ಅನುಗುಣವಾಗಿ ವರ್ತಿಸುತ್ತವೆಪೌಲಿಯ ಬಹಿಷ್ಕರಣ ತತ್ವಕ್ಕೆ ಅನುಗುಣವಾಗಿ ಯಾವುದೆ ಎರಡು ಫರ್ಮಿಯಾನುಗಳು ಒಂದೇ ಕ್ವಾಂಟಂ ಸ್ಥಿತಿಯನ್ನು ಹೊಂದಿರುವುದಿಲ್ಲ. ಅಂದರೆ ಒಂದೆ ಬಗೆಯ ಸ್ಪಿನ್‌ ಇರುವ ಎರಡು ಫರ್ಮಿಯಾನುಗಳು ಒಂದೇ ಸ್ಥಳದಲ್ಲಿರಲು ಸಾಧ್ಯವಿಲ್ಲಆದರೆ ಬೋಸಾನುಗಳಿಗೆ ಈ ನಿಯಮದಿಂದ ವಿನಾಯಿತಿ ಇದೆ. ಒಂದೇ ರೀತಿಯ ಸ್ಪಿನ್‌ ಇರುವ ಎರಡು ಅಥವಾ ಹೆಚ್ಚು ಬೋಸಾನುಗಳು ಒಟ್ಟಿಗೆ ಇರಬಲ್ಲವು. ಇದನ್ನು ಐನಸ್ಟೀನ್-ಬೋಸಾನ್‌ ಕಂಡಂಸೇಟ್ ಎಂದು ಕರೆಯಲಾಗುತ್ತದೆ.‌

  ಬೋಸಾನುಗಳ ಕಂಡೆಂಸೇಟು ಸ್ನಿಗ್ದತೆಯೇ ಇಲ್ಲದ ಒಂದು ಒಂದು ಸೂಪರ್‌ ದ್ರವದಂತೆ ವರ್ತಿಸುತ್ತದೆಸೂಪರ್‌ ದ್ರವ ಹೀಲಿಯಂ ಮತ್ತು ನ್ಯೂಟ್ರಾನ್‌ ನಕ್ಷತ್ರಗಳಲ್ಲಿ ಐನಸ್ಟೀನ್-ಬೋಸಾನ್‌ ಕಂಡಂಸೇಟ್‌ಗಳು ಇರುತ್ತವೆ ಎಂದು ವಿಜ್ಞಾನಿಗಳ ಅಭಿಮತವಿದೆಇಂತಿರುವ ಹಿಗ್ಸ್‌ ಬೋಸಾನ್‌ ಮತ್ತಿತರ ಪರಮಾಣುಕಣ, ಉಪಕಣಗಳು ಹಿಗ್ಸ್‌ ಫೀಲ್ಡಿನೊಂದಿಗೆ ಅನುವರ್ತಿಸುವುದರ ಮೂಲಕ ರಾಶಿಯನ್ನು ಪಡೆಯುತ್ತವೆ. ಒಟ್ಟಾರೆ ಹೇಳುವುದಾದರೆ ದ್ರವ್ಯಕ್ಕೆ ರಾಶಿಯಿರಬೇಕಾದರೆ  ಅದರಲ್ಲಿ ಹಿಗ್ಸ್‌ ಫೀಲ್ಡ್‌ ಇರಬೇಕು ಮತ್ತು ಅದರೊಂದಿಗೆ ಬೋಸಾನುಗಳಂತಹ ಕಣಗಳು ವರ್ತಿಸುತ್ತಿರಬೇಕು. ಪೀಟರ್‌ ಹಿಗ್ಸ್‌ 1964ರಲ್ಲಿ  ಮುಂದಿರಿಸಿದ ಈ ಸಿದ್ಧಾಂತವು ದ್ರವ್ಯದ ಮೂಲಭೂತ ಗುಣವಾದ ರಾಶಿಗೆ ಕಾರಣವನ್ನು ವಿವರಿಸಲು ಪ್ರಯತ್ನಿಸಿತುಪೀಟರ್‌ ಹಿಗ್ಸ್‌ ಪ್ರಕಾರ ದ್ರವ್ಯವು ಹೊಂದುವ ರಾಶಿಗೆ ಮೂಲಭೂತವಾಗಿ ಅವುಗಳಲ್ಲಿರುವ ಹಿಗ್ಸ್‌ ಬೋಸಾನ್‌ಗಳುಹಿಗ್ಸ್‌ ವಲಯವೆಂಬುದು ಇದ್ದು ಅದು ಮೂಲಭೂತ ಕಣಗಳು ಕೆಲವಕ್ಕೆ ವಿಶ್ವವ್ಯಾಪಿ ಅಸ್ತಿತ್ವ ಮತ್ತು ರಾಶಿಯನ್ನು ಒದಗಿಸುವ ಕ್ವಾಂಟಂ ವಲಯವಾಗಿದೆ. ಈ ವಲಯದಲ್ಲಿ ತರಂಗ ರೂಪದಲ್ಲಿನ ಹಿಗ್ಸ್ ಬೋಸಾನುಗಳ ಕಂಪನವು ಕಣಗಳಿಗೆ ರಾಶಿಯನ್ನು ಒದಗಿಸುತ್ತವೆ. ಹೀಗೆ ವಿವರಿಸಿದ ಸಿದ್ಧಾಂತಕ್ಕೆ ಪುಷ್ಟಿ ಸಿಗಬೇಕಾದರೆ ಅದನ್ನು ಪ್ರಯೋಗದ ಮೂಲಕ ಸಾಧಿಸಿ ತೋರಿಸಬೇಕು. ಇದಕ್ಕಾಗಿ ವಿಜ್ಞಾನಿಗಳು ಸುಮಾರು ಅರ್ಧ ಶತಮಾನ ಕಾಯಬೇಕಾಯಿತು. ಕೊನೆಗೆ  ಜಿನೇವಾದ ಬಳಿ ಇರುವ CERN ಸಂಶೋಧನಾ  ಸಂಸ್ಥೆಯ ಕಣ ವೇಗೋತ್ಕರ್ಷಕ ಪ್ರಯೋಗಶಾಲೆಯಲ್ಲಿ ನಡೆಸಲಾದ ಪ್ರಯೋಗದಿಂದ ಹಿಗ್ಸ್‌ ಬೋಸಾನಿನ ಅಸ್ತಿತ್ವವು ಪತ್ತೆಯಾಯಿತು. ಈ ವಿಚಾರವನ್ನು 4 ಜುಲೈ 2012 ರಂದು CERN ಸಂಶೋಧನಾ  ಸಂಸ್ಥೆಯ ವಿಜ್ಞಾನಿಗಳು ಘೋಷಿಸಿದರು. ಈ ಪ್ರಯೋಗದಲ್ಲಿ ಅತಿ ವೇಗದಿಂದ ಚಲಿಸುತ್ತಿರುವ ಎರಡು ಪ್ರೋಟಾನುಗಳನ್ನು ಪರಸ್ಪರ ಡಿಕ್ಕಿ ಹೊಡೆಸಿದಾಗ ಅವು ಒಂದೊಂದು W-ಬೋಸಾನುಗಳನ್ನು ಬಿಡುಗಡೆಗೊಳಿಸಿದವು. ನಂತರ ಎರಡು W-ಬೋಸಾನುಗಳನ್ನು ಪರಸ್ಪರ ಡಿಕ್ಕಿ ಹೊಡೆಸಿದಾಗ ಹಿಗ್ಸ್‌ ಬೋಸಾನುಗಳು ಬಿಡುಗಡೆಯಾದವು. ಹಿಗ್ಸ್‌ ಬೋಸಾನುಗಳು ತುಂಬಾ ಅಸ್ತಿರವಾಗಿದ್ದು, ಅವುಗಳ ಅಸ್ತಿತ್ವ ಕೇವಲ                    1.610 -22   ಸೆಕೆಂಡುಗಳು. ಹೀಗಾಗಿ ಹಿಗ್ಸ್‌ ಬೋಸಾನುಗಳು ಮುಂದಕೆ ಕ್ಷಯಿಸುವುದರ ಮೂಲಕ Z ಬೋಸಾನುಗಳನ್ನು ಉಂಟುಮಾಡುತ್ತವ. ಆ Z-ಬೋಸಾನುಗಳು ಕ್ಷಯಿಸಿ ಎಲೆಕ್ಟ್ರಾನ್‌ ಮತ್ತು ಪಾಸಿಟ್ರಾನ್‌ ಇಲ್ಲವೇ ಮ್ಯೂಯಾನ್‌ ಮತ್ತು ಆಂಟಿ ಮ್ಯೂಯಾನ್‌ ಗಳಾಗುತ್ತವೆಹೀಗೆ ಮೂಲಕಣಗಳು ರಾಶಿಯನ್ನು ಗಳಿಸುವ ಸಿದ್ಧಾಂತ ಮಂಡಿಸಿದ್ದಕ್ಕಾಗಿ ಫ್ರಾಂಕೊಯಿಸ್‌ ಇಂಗ್ಲೆರ್ಟ್‌ ಮತ್ತು ಫೀಟರ್‌ W. ಹಿಗ್ಸ್‌ ಎಂಬ ಇಬ್ಬರು ವಿಜ್ಞಾನಿಗಳಿಗೆ  ಭೌತಶಾಸ್ತ್ರಕ್ಕೆ ನೀಡುವ ನೋಬೆಲ್‌ ಬಹುಮಾನವನ್ನು2013 ರಲ್ಲಿ ನೀಡಿ ಗೌರವಿಸಲಾಯಿತು.


CERN ಪ್ರಯೋಗಶಾಲೆಯಲ್ಲಿ ಹಿಗ್ಸ್‌ ಬೋಸಾನಿನ ಬಿಡುಗಡೆ ( ಚಿತ್ರ ಕೃಪೆ: CERN ಪ್ರಯೋಗಶಾಲೆ)

   

ಪರಮಾಣುವಿನ ಕೆಲವು  ಉಪಕಣಗಳು ( ಚಿತ್ರ ಕೃಪೆ: CERN ಪ್ರಯೋಗಶಾಲೆ)

       ನಾವು ಮತ್ತು ನಮ್ಮ ಸುತ್ತಲಿರುವ ಎಲ್ಲವೂ ಕಣಗಳಿಂದ ಮಾಡಲ್ಪಟ್ಟಿವೆ. ಬ್ರಹ್ಮಾಂಡದ ಉಗಮವಾದಾಗ ಈ ಕಣಗಳಿಗೆ ರಾಶಿಯೆಂಬುದು ಇರಲಿಲ್ಲ. ಈ ಕಣಗಳು ಬೆಳಕಿನ ವೇಗದಲ್ಲಿ ಸುತ್ತಲೂ ಚದುರಿಹೋದವು. ಆಗ ಅವುಗಳಿಗೆ ರಾಶಿಯು ಪ್ರಾಪ್ತವಾಯಿತು. ಈ ರಾಶಿಯ ಕಾರಣದಿಂದ ನಕ್ಷತ್ರಗಳು ಗ್ರಹಗಳು ನಿರ್ಮಾಣವಾಗಲು ಸಾಧ್ಯವಾಯಿತುಹೀಗೆ ನಿರ್ಮಾಣವಾದ ಗ್ರಹಗಳಲ್ಲಿ ಪರಿಸ್ಥತಿ ಅನುಕೂಲವಿದ್ದೆಡೆ ಜೀವರಾಶಿಯ ಉಗಮ ಮತ್ತು ಸಂವರ್ಧನೆ ಸಾಧ್ಯವಾಯಿತು. ಹಿಗ್ಸ್‌ ಬೋಸಾನ್‌ ಸಂಶೋಧನೆ ನಮ್ಮ ಊಹೆಗೆ ನಿಲುಕದ ಪ್ರಮಾಣದಲ್ಲಿ ನಮ್ಮ ನಿತ್ಯ ಜೀವನದ ಮೇಲೆ ಪ್ರಭಾವ ಬೀರಲಿದೆ. ನಾವು ನಮ್ಮ ಸುತ್ತಲಿರುವ ವಸ್ತುಗಳು ಏಕೆ ಹೇಗೆ ರಾಶಿಯನ್ನು ಪಡೆದವು ಎಂಬ ಮಾನವ ಸಹಜ ಕುತೂಹಲ ತಣಿಸುವುದು ಅಲ್ಲದೇ ನಾವು ನಮ್ಮ ಗ್ರಹೀಯ ವ್ಯವಸ್ಥೆ, ನಕ್ಷತ್ರ ಮಂಡಲ ಮತ್ತು ಇಡೀ ಬ್ರಹ್ಮಾಂಡದ ವಿಕಸನದ ಕುರಿತು ಹೆಚ್ಚಿನ ಬೆಳಕನ್ನು ಇದು ಚೆಲ್ಲಬಲ್ಲದು. ಈ ಕಣದ ಹುಡುಕಾಟಕ್ಕಾಗಿ ಬಳಸಲಾದ ಡಿಟೆಕ್ಟರಗಳ ನಿರ್ಮಾಣದಲ್ಲಿ ರೂಪಿಸಲಾದ ತಂತ್ರಜ್ಞಾನವು ನಮ್ಮ ನಿತ್ಯಜೀವನದಲ್ಲಿ ಅನ್ವಯವಾಗುತ್ತಾ ಬಂದು ಆರೋಗ್ಯ ಮತ್ತು ಏರೋಸ್ಪೇಸ್‌ ಮುಂತಾದ ಕ್ಷೇತ್ರಗಳ ಒಂದು ಹೊಸ ಕ್ರಾಂತಿಯನ್ನು ಸೃಷ್ಟಿಸಲು ಸಿದ್ಧವಾಗಿವೆ. ವಿಶ್ವದಲ್ಲಿ ಎಲ್ಲಡೆ ಹರಡಿರುವ ದ್ರವ್ಯದಲ್ಲಿ ಸಿಂಹಪಾಲು ಹೊಂದಿರುವ ಮತ್ತು ಬೆಳಕು ಕಾಣದ ಮತ್ತು ಕೇವಲ ಗುರುತ್ವಾಕರ್ಷಣೆಗೆ ಮಾತ್ರ ನಿಲುಕುವ  ಕೃಷ್ಣ ದ್ರವ್ಯ(Black Matter)ವಿದೆ. ವಿಶ್ವದಲ್ಲಿನ ದ್ರವ್ಯ, ನಕ್ಷತ್ರಗಳು, ಗ್ರಹಗಳು ಮತ್ತಿತರ ಕಾಯಗಳು ಪರಸ್ಪರ ದೂರ ಸರಿಯುವಂತೆ ಪ್ರಭಾವ ಬೀರುವ ಮತ್ತು ವಿಶ್ವದಲ್ಲಿ 68% ಪಾಲು ಹೊಂದಿರುವ ಕೃಷ್ಣ ಚೈತನ್ಯವೂ(Black Energy) ಸಹ ಇದೆಯಂತೆ. ಇವುಗಳನ್ನು ಕುರಿತು ಮತ್ತಷ್ಟು ಬೆಳಕನ್ನು ಚೆಲ್ಲಲು ಈ ಹಿಗ್ಸ್‌ ಬೋಸಾನ್‌ ಸಂಶೋಧನೆಯ ಮೂಲ ಸೌಕರ್ಯಗಳು ಉಪಯುಕ್ತವಾಗಬಲ್ಲದು.

       ಋಗ್ವೇದದ ಹತ್ತನೆಯ ಮಂಡಲದ  129ನೇ ಶ್ಲೋಕವನ್ನು ನಾಸದೀಯ ಸೂಕ್ತವೆಂದು ಕರೆಯಲಾಗುತ್ತದೆ. ನಾಸದೀಯ ಸೂಕ್ತವು ದ್ರವ್ಯದ ಉಗಮದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾ ಉತ್ತರಗಳನ್ನು ಹುಡಕಲು ಪ್ರಯತ್ನಿಸುತ್ತದೆಭಾರತೀಯರು ನಾವು 3500 ವರ್ಷಗಳಿಂದ ಈ ಶ್ಲೋಕವನ್ನು ಪಠಿಸುತ್ತಲೇ ಬಂದಿದ್ದೇವೆಈ ಕೆಳಗಿನ ಲಿಂಕಿನಲ್ಲಿ ನಾಸದೀಯ ಸೂಕ್ತವನ್ನು  ವೀಕ್ಷಿಸಿ.

https://youtu.be/SYlP7DXtyQ8?si=w6qikDI7n5royl8B 

ಆಧುನಿಕ ಕಾಸ್ಮಾಲಜಿ ಏನನ್ನು ಸಂಶೋಧನೆಗಳ ಮೂಲಕ ಪತ್ತೆ ಮಾಡಿ ವಿವರಿಸಲು ಪ್ರಯತ್ನಿಸುತ್ತಿದೆಯೋ ಅದರ ಕುರಿತು ಪ್ರಶ್ನೆಗಳನ್ನು ಹಾಕುತ್ತಾ ಉತ್ತರಗಳನ್ನು ಹುಡುಕಲು ಭಾರತೀಯ ಋಷಿಗಳು ಮೂರೂವರೆ ಸಾವಿರ ವರ್ಷಗಳ ಹಿಂದೆಯೆ ಪ್ರಯತ್ನಿಸಿದ್ದಾರೆಂದರೆ ಆಶ್ಚರ್ಯವಲ್ಲವೇ? ನಾಸದೀಯ ಸೂಕ್ತದ ಪೂರ್ಣ ಪಾಠವನ್ನು ಒಮ್ಮೆ ಗಮನಿಸೋಣ.

      ಸೃಷ್ಟಿಗೆ ಮುಂಚೆ ಸತ್‌ (ಸ್ಥಿತಿ, ಲಯ) ಎಂಬುದೂ ಇರಲಿಲ್ಲ, ಅಸತ್ ಎಂಬುದೂ ಇರಲಿಲ್ಲ; ಲೋಕ, ನೀಲಿ ಆಕಾಶ, ಅವುಗಳಾಚಿನದೂ ಇರಲಿಲ್ಲ. ಅದನ್ನು ಯಾರು ಬಲ್ಲರು? ಯಾವ ಆಶ್ರಯದಲ್ಲಿ ಏನನ್ನು ಆಧರಿಸಿತ್ತು ಏನು ಅಲ್ಲಿ ಜಲಧಿಯು ಇತ್ತೆ? ಇಲ್ಲ. ಮೃತ್ಯುವು ಸಹ ಇರಲಿಲ್ಲ, ಅಮರತ್ವ ಸಹ ಇರಲಿಲ್ಲ, ರಾತ್ರಿ-ಹಗಲುಗಳ ಭೇದವು ಇರಲಿಲ್ಲ. ರಾತ್ರಿ-ಹಗಲುಗಳು ಇನ್ನೂ ಹುಟ್ಟಿರಲೇ ಇಲ್ಲದಿರಲು ಅವು ಹೇಗೆ ಇರಲು ಸಾಧ್ಯ? ಆದಿಮೂಲವದೊಂದು ಉಸಿರಾಡುತಿತ್ತುಗಾಳಿಯೂ ಇಲ್ಲದೆ ಉಸಿರನ್ನು ಹೊರಸೂಸುತ್ತಿತ್ತುಅದರ ಹೊರತು ಬೇರೆ ಏನೂ ಇರಲಿಲ್ಲ. ಈ ವಿಶ್ವದಲ್ಲಿ, ಎಲ್ಲವೂ ಕತ್ತಲೆಯ ಕಾಳಗರ್ಭದಲ್ಲಿ ಅಡಗಿತ್ತು. ಎಲ್ಲವೂ ಅವ್ಯಕ್ತ, ಕಾಣದ ಸಾಗರವಾಗಿತ್ತು. ಮನಸ್ಸು ಮತ್ತು ಅದರಿಂದ ಉಂಟಾಗುವ ಇಚ್ಛೆ ಎಲ್ಲಿಯದು, ಈ ಕಾಮವು- ಬಯಕೆ ಎಲ್ಲಿ ಇತ್ತುಅದರ ಎದೆಯಲ್ಲಿ ಆಡಗಿತ್ತು ಮೊಳೆತ ಬೀಜ; ನಶಿತ-ಕಾಣದ ಲೋಕದ ಬೀಜ, ಅದು ಕಾಲಚಕ್ರದ ಬೀಜ; ಋಷಿಯ ಹೃದಯದಲ್ಲಿ ಹೊಳೆದ ಮೊದಲ ಬೀಜಏನು ಯೋಚನೆ ಎಂಬುದು ಇತ್ತೇ ? ನಿಶಬ್ಧವಿಲ್ಲ, ಶಬ್ದ- ಸದ್ದೂ ಇಲ್ಲ, ಮೇಲೆಂಬುದಿಲ್ಲ, ಕೆಳಗೆ ಎಂಬುದು ಇರಲಿಲ್ಲ. ಯಾರು ಬಲ್ಲರು ಲೋಕ ಕಾರಣವು ಏನು ಎಂದು? ಭೋಕ್ತ ಪರವಾಗಿರಲುಭಿನ್ನವಾಗಿರಲು, ಭೋಗ್ಯವೂ  ಪರವಾಗಿತ್ತು, ಭಿನ್ನವಾಗಿದ್ದಿತು; ಅದೇ ಗರ್ಭಬೀಜವ ಕಟ್ಟಿಸಿತು, ಅದೆ ಗರ್ಭವನ್ನು ತಾಳಿತ್ತು.

      ಈ ಸೂಕ್ತಕ್ಕೆ ಹಲವಾರು ವಿವರಣೆಗಳು ವ್ಯಾಖ್ಯಾನಗಳು ಇವೆ. ಏನೇ ಆದರೂ ಅದು ಹೇಳುವ ವಿಚಾರವು ಕುತೂಹಲಕರವೂ ಮತ್ತು ನಿಗೂಡವೂ ಆಗಿದೆ.  ಅಲ್ಲವೇಶ್ಯಾಮ್‌ ಬೆನಗಲ್‌ ನಿರ್ಮಿಸಿದ ಹಿಂದಿ ಧಾರವಾಹಿ ಭಾರತ್‌ ಏಕ್‌ ಖೋಜ್‌ ಎನ್ನುವ ದೂರದರ್ಶನ ಸರಣಿಯಲ್ಲಿ ಟೈಟಲ್‌ ಕಾರ್ಡಿಗೆ ಇದೇ ಸೂಕ್ತವನ್ನು ಬಳಸಲಾಗಿದೆ.

https://youtu.be/wM8Sm-_OAhs?si=qGxldYh6olWpxRSm

      ಮತ್ತೊಂದು ವಿಶೇಷವೆಂದರೆ    ಬೋಸ್‌- ಐನಸ್ಟೈನ್ ಕಂಡನ್ಸೇಟ್‌ ಕುರಿತ ಭಾರತೀಯ ವಿಜ್ಞಾನಿ ಸತ್ಯೇಂದ್ರನಾಥ ಬೋಸ್‌ರವರು ಐನಸ್ಟೈನ್‌ ಜೊತೆಗೆ ಪ್ರತಿಪಾದಿಸಿದ ಸಿದ್ಧಾಂತವು ಅದರ ಗುಣವನ್ನು ವಿವರಿಸಿತು. ಹೀಗಾಗಿ ‌ಈ ಕಣಕ್ಕೆ  ಬೋಸಾನ್‌ ಎಂಬ ಪದವನ್ನು ಮೊದಲಿಗೆ ಪ್ರಖ್ಯಾತ ವಿಜ್ಞಾನಿ ಪೌಲ್‌ ಡಿರಾಕ್ ಬಳಸಿದರು.‌ ಹೀಗೆ ಹಿಗ್ಸ್‌ ಪ್ರತಿಪಾದಿಸಿದ  ಬೋಸಾನುಗಳ ಹೆಸರು ಹಿಗ್ಸ್‌ ಬೋಸಾನ್‌ ಆಗಿದೆ. ಹಿಗ್ಸ್‌ ಬೋಸಾನುಗಳನ್ನು ಮತ್ತೊಬ್ಬ ನೊಬೆಲ್‌ ಬಹುಮಾನಿತ ವಿಜ್ಞಾನಿ ಲಿಯಾನ್‌ ಲೆಡೆರ್ ಮ್ಯಾನ್‌ ದೇವಕಣಗಳು ಎಂದು ಕರೆದನಾದರೂ ಸ್ವತಃ ಫೀಟರ್‌ W ಹಿಗ್ಸ್‌  ಆ ಹೆಸರನ್ನು ಒಪ್ಪಿಕೊಳ್ಳಲಿಲ್ಲ. ಆದರೂ ಹಿಗ್ಸ್‌ ಬೋಸಾನ್‌ ಸಾಮಾನ್ಯ ಜನರಲ್ಲಿ ಬಾಯಲ್ಲಿ  ದೇವಕಣವೆಂದು ಪ್ರಖ್ಯಾತವಾಗಿದೆ!

 

 

No comments:

Post a Comment