ತ್ರಿಶಂಕು ಲೋಕ ಸೃಜಿಸಿದ ವಿಜ್ಞಾನಿ

                        ತ್ರಿಶಂಕು ಲೋಕ ಸೃಜಿಸಿದ ವಿಜ್ಞಾನಿ

ಲೇ. ರಾಮಾಚಂದ್ರಭಟ್‌ ಬಿ.ಜಿ.

 ತೈಲಹನಿಗಳ ಮೇಲಿನ ತಮ್ಮ ವಿಶಿಷ್ಠ ಪ್ರಯೋಗದಿಂದ ಪರಮಾಣುಗಳ ವಿದ್ಯುದಾವೇಶವನ್ನು ಕಂಡುಹಿಡಿಯುವ ವಿಧಾನವನ್ನು ರೂಪಿಸಿದ ವಿಜ್ಞಾನಿ ಮಿಲಿಕನ್‌, ಗಂಭೀರ ಸಂಶೋದಕರಷ್ಟೇ ಅಲ್ಲ, ತಮ್ಮ ಹಾಸ್ಯ ಪ್ರವೃತ್ತಿ ಮತ್ತು ಸ್ನೇಹಪರತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ವಿಶಿಷ್ಟ ವ್ಯಕ್ತಿತ್ವ ಹಾಗೂ ಸಾಧನೆಗಳನ್ನು ಈ ಲೇಖನದಲ್ಲಿ ಶಿಕ್ಷಕ ರಾಮಚಂದ್ರ ಭಟ್‌ ಸೊಗಸಾಗಿ ವಿವರಿಸಿದ್ದಾರೆ . 

ಅದೊಂದು ಕಗ್ಗಂಟಾದ ಸಮಸ್ಯೆ. ಓಹ್‌!! ಇದು ಎಂತಹ ಸಮಸ್ಯೆ. ವರ್ಷಗಟ್ಟಲೆ ಕಾಡಿ ತಲೆನೋವು ತರುತ್ತಲೇ ಇದೆ!! ಕಣ್ಣಿಗೇ ಕಾಣದ ಈ ಯಕಃಶ್ಚಿತ್‌ ಕಣದ ವಿದ್ಯುದಾವೇಶವನ್ನು ಲೆಕ್ಕ ಹಾಕುವುದು ಹೇಗೆಎನ್ನುವುದು ಈ ವಿಜ್ಞಾನಿ ಮತ್ತವರ ತಂಡವನ್ನು ಕಾಡುತ್ತಲೇ ಇತ್ತು. ಅದೆಷ್ಟು ಯೋಚಿಸಿದರೂ ಪರಿಹಾರ ಹೊಳೆಯುತ್ತಿಲ್ಲ. ಆದರೂ, ಛಲಬಿಡದ ತ್ರಿವಿಕ್ರಮನಂತೆ ಸಮಸ್ಯೆಯ ಪರಿಹಾರಕ್ಕಾಗಿ ತಂಡ ಪ್ರಯತ್ನಿಸುತ್ತಲೇ ಇತ್ತು. ಸದಾ ಈ ಯೋಚನೆಯಲ್ಲೇ ಮುಳುಗೇಳುತ್ತಿದ್ದ ಅ ವಿಜ್ಞಾನಿ ಅದೊಂದು ದಿನ ತಮ್ಮ ತೋಟದಲ್ಲಿ ಅಡ್ಡಾಡುತ್ತಿದ್ದರು. ಆಗ ಕೆಲವೊಂದು ತೈಲ ಕಣಗಳು ಗಾಳಿಯಲ್ಲಿ ತೇಲುತ್ತಿದ್ದುದು ಆಕಸ್ಮಿಕವಾಗಿ ಅವರ ಸಂಶೋಧನಾ ಕಣ್ಣಿಗೆ ಬಿತ್ತು. ಅವರ ಒಳಗಣ್ಣು ವಿಶೇಷವೊಂದನ್ನು ಗ್ರಹಿಸಿತು!! .ಎಣ್ಣೆತುಂತುರು ಹನಿಗಳನ್ನು ವಿದ್ಯುತ್ ಕ್ಷೇತ್ರಕ್ಕೆ ಒಳಪಡಿಸಿದರೆ ತಮ್ಮ ಸಮಸ್ಯೆಗೆ ಪರಿಹಾರ ದೊರೆಯಬಹುದೇ ಎಂದು ಆಲೋಚಿಸಿದರು. ಈ ಆಕಸ್ಮಿಕ ದರ್ಶನವೊಂದು ಬಹುಕಾಲದಿಂದಲೂ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರವನ್ನು ಒದಗಿಸಿತ್ತು!!!. ಈ ಕಲ್ಪನೆಯು ಅವರಿಗೆ 1923ರ ನೋಬೆಲ್ ಪ್ರಶಸ್ತಿಯನ್ನೂ ದೊರಕಿಸಿತು. ಹಾಗಾದರೆ, ಈ ಸಂಶೋಧಕ ಯಾರು ಎಂದು ಊಹಿಸುತ್ತಿದ್ದೀರಾ? ಅವರೇ ಖ್ಯಾತ ಭೌತಶಾಸ್ತ್ರಜ್ಞ ರಾಬರ್ಟ್‌ ಆಂಡ್ರೂಸ್‌ ಮಿಲಿಕನ್.

ರಾಬರ್ಟ್ ಮಿಲಿಕನ್ ಮಾರ್ಚ್ 22, 1868 ರಂದು ಅಮೇರಿಕದ ಇಲಿನಾಯ್ಸ ಮಾರಿಸನ್‌ನಲ್ಲಿ ಜನಿಸಿದರು.ಬಾಲ್ಯದಿಂದಲೂ ಶಿಕ್ಷಣದಲ್ಲಿ ಆಸಕ್ತಿ ಹೊಂದಿದ್ದ ಮಿಲಿಕನ್‌ ೧೮೮೬ರಲ್ಲಿ ಒಬರ್ಲಿನ್‌ ಕಾಲೇಜಿನಲ್ಲಿ ಟ್ರಿಗ್ನೋಮೆಟ್ರಿ (ತ್ರಿಕೋನಮಿತಿ), ರೇಖಾಗಣಿತದೊಂದಿಗೆ ಗ್ರೀಕ್‌ ಭಾಷೆಯನ್ನು ಅಧ್ಯಯನ ಮಾಡಿದರು. ಬೆಳೆಯುವಪೈರುಮೊಳಕೆಯಲ್ಲಿಎನ್ನುವಂತೆಮಿಲಿಕನ್‌ ವಿದ್ಯಾರ್ಥಿ ದೆಸೆಯಿಂದಲೇ ಅವರು ತಮ್ಮ ಕಿರಿಯ ಸ್ನೇಹಿತರಿಗೆ ಭೌತಶಾಸ್ತ್ರವನ್ನು ಬೋಧಿಸುತ್ತಿದ್ದರು.

1893 ರಲ್ಲಿ, ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ, ಅವರನ್ನು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಫೆಲೋ ಆಗಿ ನೇಮಿಸಲಾಯಿತು. 1895ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ತಾಪದೀಪ್ತ ಮೇಲ್ಮೈಗಳಿಂದ ಹೊರಸೂಸಲ್ಪಟ್ಟ ಬೆಳಕಿನ ಧ್ರುವೀಕರಣಕ್ಕೆಸಂಬಂಧಿಸಿದ ಸಂಶೋಧನೆಗಾಗಿ  ಅವರು ತಮ್ಮ ಪಿಎಚ್‌ಡಿ ಪಡೆದರು. ಈ ಉದ್ದೇಶಕ್ಕಾಗಿ ಚಿನ್ನ ಮತ್ತು ಬೆಳ್ಳಿಗಳನ್ನು ಬಳಸಿದರು.

ತಮ್ಮ ಪ್ರಾಧ್ಯಾಪಕರ ಮಾರ್ಗದರ್ಶನದ ಮೇರೆಗೆ, ಮಿಲಿಕನ್ ಜರ್ಮನಿಯಲ್ಲಿ ಬರ್ಲಿನ್ ಮತ್ತು ಗೊಟ್ಟಿಂಗನ್ ವಿಶ್ವವಿದ್ಯಾಲಯಗಳಲ್ಲಿ ಒಂದು ವರ್ಷ (1895-1896) ಸಂಶೋಧನೆಯಲ್ಲಿ ಕಳೆದರು. ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ (1896) ಹೊಸದಾಗಿ ಸ್ಥಾಪಿಸಲಾದ ರೈರ್ಸನ್ ಪ್ರಯೋಗಾಲಯದಲ್ಲಿ ಸಹಾಯಕರಾಗಲು ಅವರು A. A. ಮೈಕೆಲ್ಸನ್ ಅವರ ಆಹ್ವಾನದ ಮೇರೆಗೆ ಹಿಂದಿರುಗಿದರು.ನಂತರ, ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಅಲ್ಲಿ ಮಿಲಿಕನ್ ದಿನಕ್ಕೆಹನ್ನೆರಡು ಗಂಟೆ ಕೆಲಸ ಮಾಡುತ್ತಿದ್ದರು. ಅದರಲ್ಲಿ ಆರು ಗಂಟೆಗಳ ಬೋಧನೆ ಮತ್ತು ಪಠ್ಯಪುಸ್ತಕ ರಚನೆ, ಬರಹಕ್ಕೆ ಮೀಸಲಿಟ್ಟರೆ ಉಳಿದ ಆರು ಗಂಟೆಗಳನ್ನು ಸಂಶೋಧನೆಯಲ್ಲಿ ಕಳೆಯುತ್ತಿದ್ದರು.ಅವರೊಬ್ಬ ಮಾದರಿ ಶಿಕ್ಷಕರಾಗಿದ್ದರು. ಸಾಂಪ್ರದಾಯಿಕ ಬೋಧನೆಗಿಂತ ವಿಭಿನ್ನವಾಗಿ ಬೋಧಿಸಬೇಕೆಂಬ ನಿಲುವನ್ನು ಹೊಂದಿದ್ದರು. ವಿದ್ಯಾರ್ಥಿಗಳ ಪಾಲಿಗೆ ಸ್ಫೂರ್ತಿಯ ಸೆಲೆಯಾಗಿದ್ದರು.   ಅವರನ್ನು ಯಾವಾಗಲೂ ಪ್ರೋತ್ಸಾಹಿಸುತ್ತಿದ್ದರು. ಅಮೇರಿಕದ ಖ್ಯಾತ ಲೇಖಕ ಮತ್ತು ಶಿಕ್ಷಣತಜ್ಞ ಹಾಗೂ ಸ್ಫೂರ್ತಿದಾಯಕ ವಾಗ್ಮಿ ವಿಲಿಯಂ ಆರ್ಥರ್ ವಾರ್ಡ್ಶಿ ಕ್ಷಕರವಿಧಗಳನ್ನು ಹೀಗೆ ವ್ಯಾಖ್ಯಾನಿಸುತ್ತಾರೆ.The mediocre teacher tells. The good teacher explains. The superior teacher demonstrates. The great teacher inspires. ಶ್ರೇಷ್ಠ ಶಿಕ್ಷಕರಾದ ಮಿಲಿಕನ್‌ ತಮ್ಮ ವಿದ್ಯಾರ್ಥಿಗಳಿಗೆ ಪ್ರೇರಕ ವ್ಯಕ್ತಿತ್ವವಾಗಿದ್ದಾರೆ. ಅವರ ಅನೇಕ ಶಿಷ್ಯರು ಅಪಾರ ಸಾಧನೆ ಮಾಡಲು ಕಾರಣರಾಗಿದ್ದಾರೆ. ಅವರ ಅನೇಕ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ರೂಪುಗೊಲ್ಲುವಲ್ಲಿ, ತಮ್ಮ ಸಾಧನೆಯ ಹಿಂದಿನ ಪ್ರೇರಕ ಶಕ್ತಿಯಾಗಿ ಅವರನ್ನು ಸ್ಮರಿಸಿಕೊಳ್ಳುತ್ತಾರೆ. ಶಿಕ್ಷಕನಿಗೆ ಇದಕ್ಕಿಂತ ಉತ್ಕೃಷ್ಟ ಪ್ರಶಸ್ತಿ ಯಾವುದಿದೆ?

ಅವರವಿದ್ಯಾರ್ಥಿಯಾಗಿದ್ದ ಹಾರ್ವರ್ಡ್ ವಿಶ್ವವಿದ್ಯಾಲಯದ ಭೌತಶಾಸ್ತ್ರದ ಪ್ರೊಫೆಸರ್ ಜಾನ್ ಹ್ಯಾಸ್ಬ್ರೂಕ್ ವ್ಯಾನ್ ವಿಲೆಕ್‌ ತಮ್ಮಗುರುಗಳಾದ ಮಿಲಿಕನ್‌ ರವರ ಬಗ್ಗೆ ಹೀಗೆನ್ನುತ್ತಾರೆ.

"ಮಿಲಿಕನ್ ಅವರು ಭೌತಶಾಸ್ತ್ರದ ಸಂಕೀರ್ಣ ಪರಿಕಲ್ಪನೆಗಳನ್ನು ಸರಳವಾಗಿ ಮತ್ತು ಸ್ಪಷ್ಟವಾಗಿ ವಿವರಿಸುತ್ತಿದ್ದರು. ಈ  ಮೂಲಕ ಭೌತಶಾಸ್ತ್ರದೆಡೆಗೆ ನನ್ನಆಸಕ್ತಿ ಮೂಡಿಸಿದ ಅದ್ಭುತಶಿಕ್ಷಕರಾಗಿದ್ದರು. ಅವರು ತಮ್ಮ ವಿದ್ಯಾರ್ಥಿಗಳ ಪ್ರಗತಿಯಲ್ಲಿ ಆಸಕ್ತಿ ತೋರುವುದಲ್ಲದೆ ಅವರ ಯಶಸ್ಸಿಗೂ ಬದ್ಧರಾಗಿದ್ದರು."

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಭೌತಶಾಸ್ತ್ರದ ಪ್ರೊಫೆಸರ್ ಆದ ಶಿಷ್ಯ ವಿಲಿಯಂ ಎ. ಫೌಲರ್ ಹೀಗೆನ್ನುತ್ತಾರೆ. "ಮಿಲಿಕನ್ ಅವರು ನನಗೆ ಒಬ್ಬ ಮಾದರಿ ಶಿಕ್ಷಕರಾಗಿದ್ದರು. ಅವರು ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವ ಮತ್ತು ಬೌದ್ಧಿಕ ಪ್ರಾಮಾಣಿಕತೆಯ ಮೌಲ್ಯಗಳನ್ನು ನನಗೆ ಕಲಿಸಿದರು…."

ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ ಆರ್ಥರ್ ಕಾಂಪ್ಟನ್ ಅವರ ಪ್ರಕಾರ "ಮಿಲಿಕನ್ಸದಾಸ್ಫೂರ್ತಿ, ಪ್ರೋತ್ಸಾಹಗಳನ್ನುನೀಡುವ ಪ್ರಾಧ್ಯಾಪಕರಾಗಿದ್ದರು. ಅವರು ನನಗೆ ನನ್ನ ಸಾಮರ್ಥ್ಯದಲ್ಲಿನಂಬಿಕೆಇಡಲು, ನನ್ನ ಗುರಿಗಳೆಡೆಗೆ ಸಾಗುವಲ್ಲಿ ಶ್ರಮಿಸಲು ಸಹಾಯ ಮಾಡಿದರು. ಅವರ ಮಾರ್ಗದರ್ಶನ ಮತ್ತು ಬೆಂಬಲವಿಲ್ಲದೆ ನಾನು ನನ್ನ ವೃತ್ತಿಜೀವನದಲ್ಲಿ ಸಾಧಿಸಿದ್ದನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ."

ಶಿಕ್ಷಕರಾಗಿ ಅವರು ಸ್ವತಂತ್ರವಾಗಿ ಹಾಗೂ ಸಹ ಲೇಖಕರಾಗಿ ಅನೇಕ ಪುಸ್ತಕಗಳನ್ನು ಬರೆದರು. ಎಸ್.ಡಬ್ಲ್ಯೂ. ಸ್ಟ್ರಾಟನ್ರವರೊಂದಿಗೆ 1898ರಲ್ಲಿ  ಎ ಕಾಲೇಜ್ ಕೋರ್ಸ್ ಇನ್ ಫಿಸಿಕ್ಸ್,; 1902ರಲ್ಲಿಯಂತ್ರಶಾಸ್ತ್ರ, ಆಣ್ವಿಕ ಭೌತಶಾಸ್ತ್ರ ಮತ್ತು ಶಾಖ; 1903ರಲ್ಲಿ ಸಿ.ಆರ್. ಮನ್ರವರೊಡನೆಸೇರಿ “ದ ಥಿಯರಿ ಆಫ್ ಆಪ್ಟಿಕ್ಸ್” ಕೃತಿಯನ್ನು ಜರ್ಮನ್ ಭಾಷೆಯಿಂದ ಅನುವಾದಿಸಿದರು.  1906 ರಲ್ಲಿ H.G.ಗೇಲ್ರವರೊಂದಿಗೆ ಭೌತಶಾಸ್ತ್ರದಲ್ಲಿ ಮೊದಲ ಕೋರ್ಸ್ (A First Course in Physics), ಹಾಗೂ 1907ರಲ್ಲಿ H.G. ಗೇಲ್ರವರೊಂದಿಗೆ ಸೆಕೆಂಡರಿ ಶಾಲೆಗಳಿಗೆ ಭೌತಶಾಸ್ತ್ರ ಪ್ರಯೋಗಾಲಯ ಕೋರ್ಸ್; J. ಮಿಲ್ಸ್‌ನೊಂದಿಗೆ 1908ರಲ್ಲಿ ವಿದ್ಯುತ್ಶಕ್ತಿ, ಶಬ್ದ ಮತ್ತು ಬೆಳಕು; 1920ರಲ್ಲಿ ಪ್ರಾಯೋಗಿಕ ಭೌತಶಾಸ್ತ್ರ - ಮೊದಲ ಕೋರ್ಸ್‌ನ್ನು ಪರಿಷ್ಕರಿಸಿದರು.  1917ರಲ್ಲಿ ದಿ ಎಲೆಕ್ಟ್ರಾನ್, ಹೀಗೆ ಅನೇಕ ಪಠ್ಯ ಮತ್ತು ಸಂಶೋಧನಾ ಕೃತಿಗಳನ್ನು ರಚಿಸಿದರು. ‌

1921 ರಲ್ಲಿ, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಸೇರಿದ ಮಿಲಿಕನ್‌ ಅದನ್ನು ವಿಶ್ವದ ಅಗ್ರಗಣ್ಯ ಭೌತಶಾಸ್ತ್ರ ಸಂಸ್ಥೆಯಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅತ್ಯದ್ಭುತ ಪ್ರಯೋಗ ಒಂದರಲ್ಲಿ ಅದಾಗಲೇ 1897 ರಲ್ಲಿಜೆ.ಜೆ. ಥಾಮ್ಸನ್‌ರವರು ಇಲೆಕ್ಟ್ರಾನ್‌ಗಳನ್ನು ಆವಿಷ್ಕರಿಸಿದ್ದರು. ಈ ಇಲೆಕ್ಟ್ರಾನ್‌ಗಳು ಋಣ ವಿದ್ಯದಾವೇಶ ಹೊಂದಿವೆ ಎಂದೂ ಕಂಡುಹಿಡಿಯಲಾಗಿತ್ತು. ಆದರೆ, ಇವುಗಳ ವಿದ್ಯುದಾವೇಶದ ಪರಿಮಾಣವನ್ನು ಕಂಡುಕೊಳ್ಳುವುದು ದೊಡ್ಡ ಸವಾಲಾಗಿತ್ತು. ಅನೇಕ ವಿಜ್ಞಾನಿಗಳು ಈ ಕುರಿತು ತಲೆಕೆಡಿಸಿಕೊಂಡರೂ ಪರಿಣಾಮ ಮಾತ್ರ ಶೂನ್ಯ ರಾಬರ್ಟ್ ಮಿಲಿಕನ್ ಕೂಡ ಈ ದಿಸೆಯಲ್ಲಿ ಸಂಶೋಧನಾ ನಿರತರಾಗಿದ್ದರು.

ಈ ಹಿಂದೆ ಹೇಳಿದಂತೆ 1909 ರಲ್ಲಿ ರಾಬರ್ಟ್ ಆಂಡ್ರ್ಯೂಸ್ ಮಿಲಿಕನ್ರ ಅವರು ಹಾರ್ವಿ ಫ್ಲೆಚರ್ರವರ ಜೊತೆಗೂಡಿ ಎಣ್ಣೆ ಹನಿಗಳ ಪ್ರಯೋಗವನ್ನು ಚಿಕಾಗೋ ವಿಶ್ವವಿದ್ಯಾಲಯದಲ್ಲಿರುವ ರೈರ್ಸನ್ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ನಡೆಸಿದರು.  1910 ರಲ್ಲಿ ರಾಬರ್ಟ್ ಮಿಲಿಕನ್ ಎಲೆಕ್ಟ್ರಾನ್ನ ವಿದ್ಯುದಾವೇಶವನ್ನು ನಿಖರವಾಗಿ ನಿರ್ಧರಿಸುವಲ್ಲಿ ಯಶಸ್ವಿಯಾದರು. ಮಿಲಿಕನ್ ಈ ವಿಧಾನದಲ್ಲಿ, ಎರಡು ಸಮತಲ ಲೋಹದ ತಟ್ಟೆಗಳನ್ನು ಪರಸ್ಪರ ಸಮಾನಾಂತರವಾಗಿರಿಸಿ ಮೇಲಿನ ತಟ್ಟೆಯನ್ನು ಧನಾಗ್ರಕ್ಕೂ ಕೆಳಗಿನ ತಟ್ಟೆಯನ್ನು ಋಣವಿದ್ಯುದ್ವಾರಕ್ಕೂ ಸಂಪರ್ಕಿಸಿದ್ದರು ಎಣ್ಣಿಯ ಸೂಕ್ಷ್ಮ ಹನಿಗಳನ್ನು ತಟ್ಟೆಗಳ ನಡುವೆ ಸಿಂಪಡಿಸಲಾಯಿತು. ಎಣ್ಣೆ ಹನಿಗಳು ಗುರುತ್ವಾಕರ್ಷಣೆಯಿಂದಾಗಿ ಕೆಳಕ್ಕೆ ಬೀಳಲು ಪ್ರಾರಂಭಿಸಿದವು .ತಟ್ಟೆಗಳ ನಡುವಿನ ಗಾಳಿಯ ಮೂಲಕ ಎಕ್ಸ್-ರೇ ಹಾಯಿಸಿ ಗಾಳಿಯ ಕಣಗಳನ್ನು ಅಯಾನೀಕರಿಸಲಾಯಿತು. ಅಯಾನೀಕರಿಸಲ್ಪಟ್ಟ ಕಣಗಳ ಸಂಪರ್ಕಕ್ಕೆ ಬಂದ ಎಣ್ಣೆ ಹನಿಗಳೂ ವಿದ್ಯುದಾವೇಶವನ್ನು ಗಳಿಸಿಕೊಂಡವು. ವಿದ್ಯುದಾವಿಷ್ಟ ತೈಲಹನಿಗಳು ವಿದ್ಯುತ್‌ ಕ್ಷೇತ್ರದೊಂದಿಗೆ ವರ್ತಿಸಿ ಮೇಲ್ಮುಖವಾಗಿ ಚಲಿಸಲಾರಂಭಿಸಿದವು. ಈ ಹನಿಗಳ ಚಲನೆಯನ್ನು ದೂರದರ್ಶಕದ ಮೂಲಕ ವೀಕ್ಷಿಸಲಾಯಿತು. ವಿದ್ಯುದಾವಿಷ್ಟ ಹನಿಗಳ ಚಲನೆಯ ವೇಗವು ಹನಿಗಳ ವಿದ್ಯುದಾವೇಶ, ರಾಶಿ, ವಿಭವಾಂತರಪರಿಮಾಣಗಳನ್ನು ಅವಲಂಬಿಸಿತ್ತು. ವಿಭವಾಂತರವನ್ನು ಬದಲಾವಣೆ ಮಾಡುವ ಮೂಲಕ ತೈಲಹನಿಗಳ ಚಲನೆಯನ್ನು ವೇಗೋತ್ಕರ್ಷ ಅಥವಾ ವೇಗಾಪಕರ್ಷಕ್ಕೆ ಒಳಪಡಿಸಬಹುದಾಗಿತ್ತು ಅಥವಾ ಮಧ್ಯದಲ್ಲಿ ತೇಲುವಂತೆ ಮಾಡಬಹುದಾಗಿತ್ತು. ವಿಶ್ವಾಮಿತ್ರರು ತಪೋಬಲದಿಂದ ತ್ರಿಶಂಕು ಸ್ವರ್ಗವನ್ನು ಸೃಜಿಸಿದಂತೆ ಜ್ಞಾನದೃಷ್ಟಾರ ಮಿಲಿಕನ್‌ ತಮ್ಮ ಜ್ಞಾನದೋಜಸ್ಸಿನಿಂದ ಎಣ್ಣೆ ಹನಿಗಳನ್ನು ವಿದ್ಯುದ್ವಾರಗಳ ನಡುವೆ ತೇಲುವಂತೆ ಮಾಡಿದರು.

ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸಿ ಅವುಗಳ ವೇಗವನ್ನು ಅಳೆದರು. ಹೀಗೆ, ತೈಲ ಹನಿಗಳ ಚಲನೆಯ ಮೇಲೆ ತಟ್ಟೆಯ ಮೇಲೆ ಆರೋಪಿತ ವಿದ್ಯುತ್ ಕ್ಷೇತ್ರದ ಸಾಮರ್ಥ್ಯದ ಪರಿಣಾಮಗಳನ್ನು ಎಚ್ಚರಿಕೆಯಿಂದ ಅಳೆಯುವ ಮೂಲಕ, ಮಿಲಿಕನ್ ದ್ರವ್ಯರಾಶಿಯನ್ನು ಕರಾರುವಕ್ಕಾಗಿ ಲೆಕ್ಕಾಚಾರ ಮಾಡಿದರು. ಮಿಲಿಕನ್ ಅವರು ಎಲೆಕ್ಟ್ರಾನಿನ ವಿದ್ಯುದಾವೇಶವು 1.೫೯೨ x 10-19ಕೂಲಂಬ್ಸ್ ಎಂದು ನಿರ್ಧರಿಸಿದರು. ಅಂತಿಮವಾಗಿ ೨೦೧೪ರಲ್ಲಿ ಈ ಮೌಲ್ಯವನ್ನು 1.60217662 x 10-19ಕೂಲಂಬ್ಸ್ಎಂದು ನಿರ್ಧರಿಸಲಾಯಿತು. ಇದೊಂದು ಅತ್ಯದ್ಭುತ ಯಕ್ಷಿಣಿಯಂತಹ ಪ್ರಯೋಗವೇ ಆಗಿತ್ತು.

ಮಿಲಿಕನ್ ಅವರ ತೈಲದ ಹನಿ ಪ್ರಯೋಗದ ಕುರಿತು ಮತ್ತೊಬ್ಬ ವಿಶ್ವಪ್ರಸಿದ್ಧ ನೋಬಲ್‌ ಪ್ರಶಸ್ತಿ ಪಡೆದ ಹಾಗೂ ಪರಮಾಣು ರಚನೆಯ ಬೋರ್ ಮಾದರಿಯನ್ನು ನೀಡಿದ ಭೌತಶಾಸ್ತ್ರಜ್ಞ ನೀಲ್ಸ್ ಬೋರ್ ಅವರು ಬಗ್ಗೆ ಹೀಗೆ ಹೇಳಿದ್ದಾರೆ: "ಮಿಲಿಕನ್ ಅವರ ಪ್ರಯೋಗವು ಎಲೆಕ್ಟ್ರಾನ್ವಿದ್ಯುದಾವೇಶವನ್ನು ಅತ್ಯಂತ ನಿಖರವಾಗಿ ಅಳೆಯಲು ಮೊದಲ ಬಾರಿಗೆ ಅವಕಾಶ ಮಾಡಿಕೊಟ್ಟಿತು. ಇದು ಭೌತಶಾಸ್ತ್ರದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಪ್ರಯೋಗಗಳಲ್ಲಿ  ಒಂದಾಗಿದೆ. ಏಕೆಂದರೆ ಇದು ಪರಮಾಣು ಮತ್ತು ಅಣುಗಳ ರಚನೆಯನ್ನು ಅರ್ಥಮಾಢಿಕೊಳ್ಳಲು ನಮಗೆ ಸಹಾಯ ಮಾಡುತ್ತದೆʼʼ.

ನಾವಿಂದು ಬಳಸುವ ಹಲವು ತಂತ್ರಜ್ಞಾನಗಳಿಗೆ ಈ ಸಂಶೋಧನೆಯು ಆಧಾರವಾಗಿದೆ.ಮಿಲಿಕನ್ ಅವರ ಪ್ರಯೋಗದಲ್ಲಿ ಬಳಸಿದ ತತ್ವಗಳನ್ನು CRT ಟ್ಯೂಬ್‌ಗಳು, LCD ಡಿಸ್ಪ್ಲೇಗಳು ಮತ್ತು ಲೇಸರ್‌ಗಳಂತಹ ಉಪಕರಣಗಳಲ್ಲಿ ಬಳಸಲಾಗುತ್ತದೆ.ಅಲ್ಲದೆ,ಇದು ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ತಂತ್ರಜ್ಞಾನದ ಬೆಳವಣಿಗೆಗೆ ಕಾರಣವಾಗಿದೆ.

ರಾಬರ್ಟ್ ಎ. ಮಿಲಿಕನ್ ಅವರು 1902 ರಲ್ಲಿ ಗ್ರೆಚೆನ್ ಬ್ಲ್ಯಾಂಚರ್ಡ್ ಅವರನ್ನು ವಿವಾಹವಾದರು.

ಅವರಿಗೆ ರಾಬರ್ಟ್ ಎ. ಮಿಲಿಕನ್ ಜೂನಿಯರ್, ಗ್ರೆಟಾ ಮಿಲಿಕನ್ ಮತ್ತು ಮ್ಯಾಕ್ಸ್ ಮಿಲಿಕನ್ ಎಂಬ ಮೂರು ಮಕ್ಕಳಿದ್ದರು.ಇವರಲ್ಲಿರಾಬರ್ಟ್‌ ತಂದೆಯ ತೈಲಹನಿ ಪ್ರಯೋಗದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಮಿಲಿಕನ್ ಅವರ ಪತ್ನಿ ಗ್ರೆಚೆನ್ ಅವರು ಶಿಕ್ಷಕಿಯಾಗಿದ್ದರು. ಸಂಶೋಧನೆಯ ಬಗ್ಗೆ ಆಸಕ್ತಿ ಹೊಂದಿದ್ದ ಅವರು ತಮ್ಮ ಪತಿಯ ವೃತ್ತಿ ಜೀವನದ ಉತ್ಕರ್ಷಕ್ಕೆ ಪೂರಕವಾಗಿದ್ದರು. ಮಿಲಿಕನ್ ಕೌಟುಂಬಿಕ ವ್ಯಕ್ತಿಯಾಗಿದ್ದರು. ಅವರು ಪತ್ನಿ ಮತ್ತು ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು. ಅವರೊಂದಿಗೆ ಸಮಯ ಕಳೆಯುವುದನ್ನುಇಷ್ಟಪಡುತ್ತಿದ್ದರು.

ಪ್ರಯೋಗಾಲಯದಲ್ಲಿ ತದೇಕಚಿತ್ತದಿಂದ ಗಂಭೀರವಾಗಿ ಕಾರ್ಯನಿರ್ವಹಿಸಬೇಕಾದ. ಸಂಶೋಧಕನಿಗೆ ಅತಿ ಎಚ್ಚರ ಅತ್ಯಗತ್ಯ.ಇಂತಹ ವಾತಾವರಣವನ್ನು ತಿಳಿಗೊಳಿಸುವುದೂ ಅವಶ್ಯಕ. ಮಿಲಿಕನ್ರವರ ವ್ಯಕ್ತಿತ್ವ ಹಾಸ್ಯಪ್ರಜ್ಞೆಯಿಂದ ಹದಗೊಂಡಿತ್ತು. ತೈಲಹನಿಗಳ ಪ್ರಯೋಗ ನಡೆಸುವಾಗ ಎಣ್ಣೆಯ ಹನಿಗಳುವಿದ್ಯುತ್‌ ಫಲಕಗಳ ನಡುವೆ ತೇಲಲಾರಂಭಿಸಿದವು. ಸಂತೋಷಗೊಂಡ ಮಿಲಿಕನ್‌ ತಕ್ಷಣವೇ "ಎಲ್ರೂನೋಡ್ರಪ್ಪ,ನಾನು ಎಣ್ಣೆ ಹನಿಗಳಿಗೆ ನೃತ್ಯ ಮಾಡಲು ಕಲಿಸಿದ್ದೇನೆ!"ಎಂದರು !

ಇನ್ನೊಮ್ಮೆ, ಮಿಲಿಕನ್ ಅವರು ತಮ್ಮ ವಿದ್ಯಾರ್ಥಿಗಳಿಗೆ ಎಣ್ಣೆ ಹನಿಗಳ ಪ್ರಯೋಗವನ್ನು ಪ್ರದರ್ಶಿಸುತ್ತಿದ್ದರು. ಆಗ ಎಣ್ಣೆ ಹನಿಯೊಂದು ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಮೇಲ್ಮುಖವಾಗಿ ಚಲಿಸಲು ಪ್ರಾರಂಭಿಸಿತು. ಮಿಲಿಕನ್ ಅವರು ತಕ್ಷಣವೇ "ಓಹ್, ನೋಡಿ, ಇದೊಂದು ದಂಗೆಕೋರ ಹನಿ! ದಾರಿತಪ್ಪಿದೆ" ಎನ್ನಲು ವಿದ್ಯಾರ್ಥಿಗಳು ಗೊಳ್ಳನೆ ನಗಲಾರಂಭಿಸಿದರು. ಮಿಲಿಕನ್ ಅವರ ಹಾಸ್ಯ ಮತ್ತು ವಿನೋದದ ಪ್ರಜ್ಞೆಯು ಅವರ ಸಂಶೋಧನಾ ಕಾರ್ಯದ ಒತ್ತಡವನ್ನು ಕಡಿಮೆ ಮಾಡಿ ಆಹ್ಲಾದಕರ ವಾತಾವರಣವನ್ನು ಉಂಟುಮಾಡುತ್ತಿತ್ತು. ಇದು ಅವರ ಸಂಶೋಧನೆಯ ಯಶಸ್ಸಿಗೆ ಕಾರಣವಾಯಿತು.ಸಂತೋಷದ ಮತ್ತು ಉತ್ಸಾಹಭರಿತ ವಾತಾವರಣವು ಸೃಜನಶೀಲತೆ ಮತ್ತು ನಾವೀನ್ಯತೆಗೆ ಕಾರಣವಾಗಿದೆ.



ಸೋಲೊಪ್ಪಿಕೊಳ್ಳದಿರುವುದು ಸಂಶೋಧಕನ ಮೂಲ ಪ್ರವೃತ್ತಿ. ಮತ್ತೊಂದು ಸಂದರ್ಭದಲ್ಲಿ, ಮಿಲಿಕನ್ ಅವರು ತಮ್ಮ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರದ ನಿಯಮಗಳನ್ನು ಮನವರಿಕೆ ಮಾಡಲು ಪ್ರಯೋಗವನ್ನು ನಡೆಸುತ್ತಿದ್ದರು. ನಮ್ಮತರಗತಿಗಳಲ್ಲಿ ನಡೆಯುವಂತೆ ಅವರ ಪ್ರಯೋಗವೂ ವಿಫಲವಾಯಿತು. ಅವರು ತಮ್ಮ ವಿದ್ಯಾರ್ಥಿಗಳಿಗೆ ಹೇಳಿದರು, "ನೀವು ನೋಡುವಂತೆ, ಭೌತಶಾಸ್ತ್ರದ ನಿಯಮಗಳು ಯಾವಾಗಲೂ ನಮ್ಮ ನಿರೀಕ್ಷೆಯಂತೆ ಕೆಲಸ ಮಾಡುವುದಿಲ್ಲ. ಆದರೆ ನಾವು ಅವುಗಳು ಕೆಲಸ ಮಾಡುವಂತೆ ಮಾಡಲು ಪ್ರಯತ್ನಿಸುವುದನ್ನು ನಿಲ್ಲಿಸುವುದಿಲ್ಲ!". ಸೋಲೇ ಗೆಲುವಿನ ಸೋಪಾನ ಎಂಬಂತೆ ಸಾಧಕನೊಬ್ಬ ತನ್ನಲ್ಲಿ ಬೆಳೆಸಿಕೊಳ್ಳಬೇಕಾದ ಗುಣವೇ ಸೋಲನ್ನು ಮೆಟ್ಟಿನಿಲ್ಲುವುದು.

ಮರಳಿಯತ್ನವಮಾಡು, ಮರಳಿಯತ್ನವಮಾಡು

ತೊರೆಯದಿರು ಮೊದಲು ಕೈಗೂಡದಿರಲು

ಭರದಿ ಧೈರ್ಯವ ತಾಳು…..

ನೆಲೆಗೆಡದೆ ಯತ್ನವನು ಮಾಡು ಮಗುವೇ

ಎಂಬ ಕವಿವಾಣಿಯಂತೆ ಯಾವುದೇ ಕಾರ್ಯವನ್ನು ಯಶ ಸಿಗುವವರೆಗೂ ಬಿಡದೆ ಮಾಡಬೇಕೆಂಬುದಕ್ಕೆ ಮಿಲಿಕನ್‌ಎಲ್ಲ ಕಾಲಕ್ಕೂ ಮಾದರಿಯಾಗಿದ್ದಾರೆ.


ಮಿಲಿಕನ್ ಅವರ ಎಣ್ಣೆಹನಿ ಪ್ರಯೋಗವು ವಿಜ್ಞಾನದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಪ್ರಯೋಗಗಳಲ್ಲಿ ಒಂದಾಗಿದೆ. ಇದು ಪರಮಾಣುವಿನ ರಚನೆಯ ಕುರಿತ ನಮ್ಮ ಅರಿವಿನ ಕ್ಷಿತಿಜವನ್ನು ಮತ್ತಷ್ಟು ಹಿಗ್ಗಿಸಿತು. ಆಧುನಿಕ ಪರಮಾಣು ವಿಜ್ಞಾನಕ್ಕೆ ಭದ್ರಬುನಾದಿಯನ್ನು ಹಾಕಿತು.

ಜಗದೀಶ್ ಚಂದ್ರ ಬೋಸ್ – ವಿಜ್ಞಾನ ಲೋಕದ ಅಸಾಧಾರಣ ಸಂಶೋಧಕ.


 ಜಗದೀಶ್ ಚಂದ್ರ ಬೋಸ್ – ವಿಜ್ಞಾನ  ಲೋಕದ ಅಸಾಧಾರಣ  ಸಂಶೋಧಕ.

ಲೇಖಕರು :-                                                        

ಬಿ. ಎನ್. ರೂಪ,   ಸಹ  ಶಿಕ್ಷಕರು,

 ಕೆಪಿಎಸ್ ಜೀವನ್ ಭೀಮ ನಗರ ,

 ಬೆಂಗಳೂರು ದಕ್ಷಿಣ ವಲಯ -4. 

ಭೌತವಿಜ್ಞಾನ ಕ್ಷೇತ್ರ ಮಾತ್ರವಲ್ಲ ಸಸ್ಯವಿಜ್ಞಾನ ಕ್ಷೇತ್ರದಲ್ಲಿಯೂ ಸಂಶೋಧನೆ ನಡೆಸಿ ವಿಶ್ವ ಖ್ಯಾತಿ ಗಳಿಸಿದ  ಜಗದೀಶ ಚಂದ್ರ ಬೋಸ್‌ ಅವರ ವಿಶಿಷ್ಟ ವ್ಯಕ್ತಿತ್ವವನ್ನು ಪರಿಚಯಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಶಿಕ್ಷಕಿ ರೂಪಾ ಮಾಡಿದ್ದಾರೆ.

    ನಾವು ಜಗತ್ ವಿಖ್ಯಾತ, ಸುಪ್ರಸಿದ್ಧ ವಿಜ್ಞಾನಿಗಳ ಪಟ್ಟಿ ಹುಡುಕುತ್ತಾ ಹೋದಾಗ ಅಲ್ಬರ್ಟ್ ಐನ್ಸ್ಟೀನ್, ಮೆರಿ ಕ್ಯೂರಿ, ನ್ಯೂಟನ್ ,ಗೆಲಿಲಿಯೋ….. ಹೀಗೆ ಅನೇಕ ಸುಪ್ರಸಿದ್ಧ ವಿಜ್ಞಾನಿಗಳ ಹೆಸರುಗಳನ್ನು ನೋಡುತ್ತೇವೆ.

ಈ ಪಟ್ಟಿಯಲ್ಲಿ ನಮ್ಮ ಭಾರತೀಯ ವಿಜ್ಞಾನಿಗಳ ಹೆಸರು ಸಿಗುವುದು ಅಪರೂಪ. ಆದರೆ ನಮ್ಮ ಭಾರತೀಯ ವಿಜ್ಞಾನಿಗಳ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆಪಡುವಂತಹ ವಿಷಯವಾಗಿದೆ. ಇತ್ತೀಚಿಗೆ ನಮ್ಮ ಇಸ್ರೋ ವಿಜ್ಞಾನಿಗಳು ಚಂದ್ರಯಾನ-3ರ ವಿಷಯದಲ್ಲಿ ತೋರಿಸಿದ ಸಾಧನೆ ಅದ್ವಿತೀಯ ಹಾಗೂ ಪ್ರಶಂಸನೀಯ.  ನಮ್ಮ ಭಾರತೀಯ ವಿಜ್ಞಾನಿಗಳ ಪಟ್ಟಿಯನ್ನು ಗಮನಿಸುತ್ತಾ ಹೋದಂತೆ ನಮ್ಮ ಭಾರತೀಯರಾದ ಜಗದೀಶ್ ಚಂದ್ರ ಬೋಸ್ ಇವರ ಹೆಸರು  ನನ್ನ ಗಮನ ಸೆಳೆದದ್ದು ದಿಟ.

ಬೋಸ್‌ ಅವರು ನವಂಬರ್ 30, 1858ರಲ್ಲಿ ಬಂಗಾಳದ ಪ್ರಾಂತ್ಯದಲ್ಲಿರುವ ಮೈಮನ್ ಸಿಂಗ್ ಎಂಬ ಈಗಿನ ಬಾಂಗ್ಲಾದೇಶಕ್ಕೆ ಸೇರಿದ ಪ್ರಾಂತ್ಯದಲ್ಲಿ ಜನಿಸಿದರು. ಇವರ ತಂದೆ ಭಗವಾನ್ ಚಂದ್ರರು ಫರೀದಪುರದಲ್ಲಿ ಉಪ ವಿಭಾಗಾಧಿಕಾರಿಗಳಾಗಿದ್ದರು, ತಾಯಿ ಭಾಮ ಸುಂದರಿ ಬೋಸ್ ಸಾಂಪ್ರದಾಯಿಕ  ಗೃಹಿಣಿ . ಸ್ವತಃ ಶಿಕ್ಷಣ ತಜ್ಞರಾಗಿದ್ದ ಬೋಸರ ತಂದೆ ತಮ್ಮ ಮಗನಿಗೆ ಭಾರತದ ಬಗ್ಗೆ ಹಾಗೂ ಇಲ್ಲಿನ ಸಂಪ್ರದಾಯ  ಆಚಾರ ವಿಚಾರ ಅರ್ಥೈಸಲು ಬೋಸರನ್ನು ಸನಾತನ ಮಾದರಿಯ ಪಾಠಶಾಲೆಗೆ ಸೇರಿಸಿದರು. ಇದರಿಂದ ಬೋಸರಲ್ಲಿ ರಾಷ್ಟ್ರ ಭಕ್ತಿ ಹಾಗೂ ನಿಸರ್ಗದ ಬಗ್ಗೆ ಆಸಕ್ತಿ ಬೆಳೆಯಲು ಸಾಧ್ಯವಾಯಿತು.


 
ಕೊಲ್ಕತ್ತಾದ ಸೇಂಟ್ ಜೇವಿಯರ್ ಕಾಲೇಜು ಹಾಗೂ ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಓದಿ ಪದವೀಧರರಾದರು .ಬೋಸರ ತಂದೆಯವರು ಮಗನ ಆಸಕ್ತಿಯನ್ನು ನೋಡಿ ವೈದ್ಯಕೀಯ ಅಥವಾ ವಿಜ್ಞಾನವೃತ್ತಿ ಆಯ್ಕೆ ಮಾಡಿಕೊಳ್ಳಲು ಸೂಚಿಸಿದರು .ಜಗದೀಶ್ ಚಂದ್ರರು 1880ರಲ್ಲಿ ಲಂಡನ್ ವೈದ್ಯಕೀಯ ವಿದ್ಯಾರ್ಥಿಯಾಗಿ ಸೇರಿಸಿದರು.ಮೊದಲ ವರ್ಷದ ನಂತರ ಕಾಲಾ ಅಜರ್ ಸೋಂಕಿ ನಿಂದಾಗಿ ವೈದ್ಯಕೀಯ ಶಿಕ್ಷಣವನ್ನು ಅನಿವಾರ್ಯವಾಗಿ ಬಿಟ್ಟು ಕೇಂಬ್ರಿಡ್ಜ್ ಗೆ ಹೋಗಿ ವಿಜ್ಞಾನದ ವಿದ್ಯಾರ್ಥಿಯಾದರು. 1884ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾನಿಲಯದಿಂದ ಬಿಎ ಹಾಗೂ ಮರು ವರ್ಷ ಲಂಡನ್ ವಿಶ್ವವಿದ್ಯಾನಿಲಯದಿಂದ ಬಿಎಸ್ಸಿ ಪದವಿ ಪಡೆದರು.

1884ರಲ್ಲಿ  ಕೊಲ್ಕತ್ತಾಗೆ ಮರಳಿ ಬಂದು ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಪ್ರೆಸಿಡೆನ್ಸಿ ಕಾಲೇಜನ್ನು ಸೇರಿಕೊಂಡರು. ಅಲ್ಲಿ ಬ್ರಿಟಿಷರ ಜನಾಂಗಭೇದ ಜಾರಿಯಲ್ಲಿತ್ತು. ಅದನ್ನು  ಪ್ರತಿಭಟಿಸಿ ಸಂಬಳ ತೆಗೆದುಕೊಳ್ಳದೆ ಮೂರು ವರ್ಷ ದುಡಿದರು. ಕಾಲೇಜಿನ ಪ್ರಾಂಶುಪಾಲರು ಮತ್ತು  ಇಲಾಖೆಯ ನಿರ್ದೇಶಕರು ಆಗಿದ್ದ ಬ್ರಿಟಿಷ್ ಅಧಿಕಾರಿ ಬೋಸರ ಪ್ರತಿಭೆ ಹಾಗೂ ವ್ಯಕ್ತಿತ್ವ ಗಮನಿಸಿ ಅವರ ಆತ್ಮೀಯ ಮಿತ್ರರಾದರು. ಅವಮಾನದ ವಿರುದ್ಧ ನೈತಿಕ ಜಯದ ಕುರುಹಾಗಿ ಬೋಸರಿಗೆ ಮೂರು ವರ್ಷದ ಸಂಪೂರ್ಣ ಪಗಾರದ ಬಾಕಿ ಪಾವತಿಯಾಯಿತು. ಈ ಅವಧಿಯಲ್ಲಿ ವಿಕ್ರಂಪುರದ ದುರ್ಗಾಮೋಹನ ದಾಸರ ಮಗಳಾದ  ಅಬಲಾ ಅವರೊಡನೆ ಬೋಸರ ವಿವಾಹವಾಯಿತು.  ಒಂದು ಶತಮಾನದಷ್ಟು ಹಿಂದೆಯೇ ಇವರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರಾಗಿದ್ದರು ಎಂಬ ಸಂಗತಿ ಅಚ್ಚರಿ ಮೂಡಿಸುತ್ತದೆ .

    ಬೋಸ್ ರವರಿಗೆ ಸಂಶೋಧನೆ ಮಾಡಲು ಆಸಕ್ತಿ ಇದ್ದರೂ ಸಲಕರಣೆ, ಪರಿಕರ,  ಹಣದ ಸಹಾಯ ಇಲ್ಲದೆ ಸಂಶೋಧನೆ ಮುಂದುವರಿಸಲು ಸಾಧ್ಯವಾಗಲಿಲ್ಲ. ಆದರೆ ಇವರ  ಸತತ ಪ್ರಯತ್ನದಿಂದಾಗಿ ಒಂದು ಸಣ್ಣ ಪ್ರಯೋಗಶಾಲಾ ಮಂಜೂರಾಗಿತ್ತು.

     ಸ್ಪಟಿಕಗಳಿಂದ ವಿದ್ಯುತ್ ತರಂಗಗಳ ಧ್ರುವೀಕರಣ ಎಂಬ ಪ್ರಥಮ ಸಂಶೋಧನಾ ಲೇಖನವನ್ನು 1895ರಲ್ಲಿ ‘ಜರ್ನಲ್ ಆಫ್ ದಿ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್’ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದರು.. ಅದೇ ವರ್ಷ ‘ವಿದ್ಯುತ್ ವಕ್ರೀಭವನ ಸೂಚ್ಯಂಕಗಳ ನಿರ್ಣಯ ‘ಎಂಬ ಅವರ ಎರಡನೇ ಸಂಶೋಧನಾ ಪ್ರಬಂಧ ‘ಎಲೆಕ್ಟ್ರಿಷಿಯನ್’ʼ ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಇವರ ಸಂಶೋಧನಾ ಬದುಕಿಗೆ ಈ ಪ್ರಕಟಣೆ ಮಹತ್ವದ ತಿರುವು  ನೀಡಿತು. ಲಂಡನ್ನಿನ ರಾಯಲ್ ಸೊಸೈಟಿ ಇವರ ಸಂಶೋಧನೆಗೆ ಮನ್ನಣೆ ಕೊಟ್ಟು ಈ ಪ್ರಬಂಧಗಳನ್ನು ಪ್ರಕಟಿಸಿತಲ್ಲದೆ ಸಂಶೋಧನೆ ಮುಂದುವರಿಸಲು ಧನಸಹಾಯ ಸಹ ಮಾಡಿತು.

    ಇಟಲಿಯ ಮಾರ್ಕೊನಿಯು ಸೇರಿದಂತೆ ಆ ಕಾಲಕ್ಕೆ ಹಲವು ವಿಜ್ಞಾನಿಗಳು ತಂತಿಯ ಸಹಾಯವಿಲ್ಲದೆ ಸಂದೇಶಗಳನ್ನು ರವಾನಿಸುವ ವಿಧಾನದ ಬಗ್ಗೆ ಸಂಶೋಧನೆ ನಡೆಸಿದರು. ಇದನ್ನು ಪ್ರಥಮವಾಗಿ ಮಾಡಿದ ಕೀರ್ತಿ ನಮ್ಮ ಭಾರತದ ವಿಜ್ಞಾನಿ ಬೋಸರಿಗೆ ಸಲ್ಲಬೇಕು. 1895ರಲ್ಲಿ ಅವರು ತಾವು ಸಂಶೋಧಿಸಿ ನಿರ್ಮಿಸಿದ ನಿಷ್ಠಂತು ಪ್ರೇಕ್ಷಕವನ್ನು ಕೊಲ್ಕತ್ತಾದ ಪುರಭವನದಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಿದರು .

 

    ಈ ಸಂಶೋಧನೆ ಬಗ್ಗೆ ರಾಯಲ್ ಸೊಸೈಟಿ   ಅವರನ್ನು ಉಪನ್ಯಾಸಕಕ್ಕೆ ಆಹ್ವಾನಿಸಿದ ನಂತರ ಡಾಕ್ಟರ್ ಆಫ್ ಸೈನ್ಸ್ ಪದವಿಯನ್ನು ಭೌತಶಾಸ್ತ್ರದಲ್ಲಿ ಕೊಟ್ಟು ಪುರಸ್ಕರಿಸಿತು. ತದನಂತರ ಬೋಸ್ ರವರು ವಿದ್ಯುತ್ ತರಂಗಗಳನ್ನು ಉತ್ಪಾದಿಸಿದರು. ಎಲೆಕ್ಟ್ರಿಕಲ್ ರೇಡಿಯೇಟಿವ್ ಎಂಬ ಉಪಕರಣವನ್ನು ನಿರ್ಮಿಸಿದರು.

 19ನೆಯ ಶತಮಾನದ ಕೊನೆಯ ವರ್ಷದಲ್ಲಿ  ಬೋಸರು ತಮ ಸಂಶೋಧನಾ ಕ್ಷೇತ್ರವನ್ನು ಭೌತವಿಜ್ಞಾನದಿಂದ ಜೀವವಿಜ್ಞಾನಕ್ಕೆ ಬದಲಾಯಿಸಿದರು. ಅನ್ಯ ಕ್ಷೇತ್ರದಲ್ಲಿ ಕಾಲಿಟ್ಟಾಗ  ಅವರಿಗೆ ಮುಕ್ತ ಹೃದಯದ ಸ್ವಾಗತ ಸಿಗಲಿಲ್ಲ. ಬೋಸರು ಸಸ್ಯಗಳ ಬಗ್ಗೆ ವಿವಿಧ ಪ್ರಯೋಗ ನಡೆಸಿ ಪ್ರಾಣಿಗಳಂತೆ ಸಸ್ಯಗಳು ಸಹ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ವ್ಯಕ್ತಪಡಿಸುತ್ತದೆ ಎಂದು ಪ್ರಯೋಗಗಳ ಮೂಲಕ ಸಾಧಿಸಿ ತೋರಿಸಿದರು. ಇಂಗ್ಲೆಂಡ್, ಅಮೇರಿಕಾ, ಪ್ರಪಂಚದ ಇತರ ರಾಷ್ಟ್ರ ,ವಿಜ್ಞಾನ ಸಂಸ್ಥೆ, ವಿಶ್ವವಿದ್ಯಾಲಯಗಳಿಗೆ ಭೇಟಿಕೊಟ್ಟು ಉಪನ್ಯಾಸವನ್ನು ಮಾಡಿದರು .ಸಸ್ಯದ ಬೆಳವಣಿಗೆಯನ್ನು ಸಾದರ ಪಡಿಸಲು ಕ್ರೆಸ್ಕೋಗ್ರಾಫ್ ಎಂಬ ಉಪಕರಣವನ್ನು ನಿರ್ಮಿಸಿದರು. ಈ ಉಪಕರಣವು ಸಸ್ಯದ ಬೆಳವಣಿಗೆಯನ್ನು ಅಳೆಯಲು ಇಂದಿಗೂ ಬಳಸುವ ಮಾಪನವಾಗಿದೆ.

ಬೋಸರಿಗೆ ಸಾಕಷ್ಟು ಪ್ರಶಸ್ತಿಗಳು ಈ ವೇಳೆಗೆ ಲಭಿಸಿದ್ದವು. ಕೊಲ್ಕತ್ತಾ ವಿಶ್ವವಿದ್ಯಾನಿಲಯ ಡಾಕ್ಟರ್ ಆಫ್ ಸೈನ್ಸ್ ಪದವಿ, ಆಗಿನ ಭಾರತ ಸರ್ಕಾರ 1903ರಲ್ಲಿ ಸಿ ಐ ಈ ಬಿರುದು 1911ರಲ್ಲಿ ಸಿ ಎಸ್ ಐ ಬಿರುದು, 1916 ರಲ್ಲಿ ಬ್ರಿಟಿಷ್ ಸರ್ಕಾರ ನೈಟ್ , 1920 ರಲ್ಲಿ ರಾಯಲ್ ಸೊಸೈಟಿಯ ಸದಸ್ಯರಾಗಿ ಚುನಾಯಿತರಾದರು. ಇವರ ಗೌರವಾರ್ಥವಾಗಿ ಚಂದ್ರನ  ಒಂದು ಕುಳಿಗೆ ಇವರ ಹೆಸರನ್ನು ನೀಡಲಾಗಿದೆ.

ಭಾರತದಲ್ಲಿ  ಹಿಂದೊಮ್ಮೆ  ನಳಂದ ಮತ್ತು ತಕ್ಷಶೀಲ ವಿಶ್ವವಿದ್ಯಾನಿಲಯಗಳಿದ್ದಂತೆ ವಿಜ್ಞಾನ ಸಂಶೋಧನೆಗೆ ಸಂಪೂರ್ಣವಾಗಿ ಮೀಸಲಾಗಿರುವ ಒಂದು ಸಂಸ್ಥೆ ಕಟ್ಟಬೇಕೆಂದು ಬೋಸರು ಕನಸು ಕಂಡರು.  1917ರ ನವಂಬರ್ 30ರಂದು ಕೋಲ್ಕತ್ತಾದಲ್ಲಿ ಬೋಸರ ಸಂಶೋಧನಾ ಸಂಸ್ಥೆಯ ಪ್ರಾರಂಭವಾಯಿತು ಹಾಗೂ ಅವರ ಕನಸು ನನಸಾಯ್ತು .ಬೋಸರು ಇದನ್ನು ದೇಶಕ್ಕಾಗಿ ಅರ್ಪಿಸಿ ಜಾತಿ ,ಭಾಷೆ, ಲಿಂಗಭೇದವಿಲ್ಲದೆ ಎಲ್ಲರೂ ಸಂಶೋಧನಾ ಕಾರ್ಯ ನಡೆಸಲೆಂದು ಹಾರೈಸಿದರು. ತಮ್ಮ ಸಂಸ್ಥೆಯಲ್ಲಿ ಪ್ರಬುದ್ಧವಾದ ಉಪನ್ಯಾಸಗಳನ್ನು ಮಾಡಿದರು . ನವೆಂಬರ್ 23 1937ರಲ್ಲಿ ಬೋಸರು ಡಾರ್ಜಿಲಿಂಗ್ ನಲ್ಲಿ ಅನಾರೋಗ್ಯದಿಂದ ತೀರಿಕೊಂಡರು.

ಅವರ ಧ್ಯೇಯ ಹಾಗೂ ಹೇಳಿಕೆಗಳು ಈಗಲೂ ಪ್ರಸ್ತುತ,

‘ ನಾನೇನು ಸೃಷ್ಟಿಕರ್ತನಲ್ಲ, ಈ ಜಗದಲ್ಲಿ ಅಂತರ್ಗತವಾಗಿರುವ ಕೆಲವೊಂದು  ವಸ್ತು ವಿಶೇಷಗಳು ನನ್ನ ಮೂಲಕ ಜಗತ್ತಿಗೆ ಕಾಣಿಸಿಕೊಂಡಿದೆ ಹಾಗಾಗಿ ಜ್ಞಾನ ಯಾರ ಸ್ವತ್ತು ಅಲ್ಲ ಅದನ್ನು ಎಲ್ಲರೂ ಮುಕ್ತವಾಗಿ ಹಂಚಿಕೊಳ್ಳಬೇಕು’  ಎಂಬ ಹೇಳಿಕೆ ಅವರ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ.

ಅನುಕೂಲಕರವಲ್ಲದ ವಾತಾವರಣದ ಹೊರತಾಗಿಯೂ, ಸುಸಜ್ಜಿತ ಪ್ರಯೋಗಾಲಯ ಉಪಕರಣಗಳ ಲಭ್ಯತೆಯಿಲ್ಲದಿರುವಿಕೆ, ಹಣಕಾಸಿನ ಸಹಾಯವಿಲ್ಲದಿರುವುದು, ಸಂಶೋಧನಾ ಪ್ರಬಂಧದ ಕೃತಿ ಚೌರ್ಯ,  ನಿರ್ಲಕ್ಷತೆ, ಭೌತಶಾಸ್ತ್ರದಿಂದ ಸಸ್ಯಶಾಸ್ತ್ರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದಾಗ ಸ್ವಾಗತಿಸದ ವಾತಾವರಣ. ಜಗದೀಶ್ ಚಂದ್ರ ಬೋಸ್ ಅವರು ತಮ್ಮ ನಿರಂತರ ಪರಿಶ್ರಮದಿಂದ ಈ ಎಲ್ಲಾ ಅಡೆತಡೆಗಳನ್ನು ದಾಟಿ, ಅಂದುಕೊಂಡಿದ್ದನ್ನು ಸಾಧಿಸಬೇಕು ಎಂದು ಬಿಟ್ಟುಕೊಡದ ಧೋರಣೆಯಿಂದಾಗಿ  ವೈಜ್ಞಾನಿಕ ಕ್ಷೇತ್ರಕ್ಕೆ ಅಪಾರ ಪ್ರಮಾಣದ ಕೊಡುಗೆಯನ್ನು ನೀಡಿದ್ದಾರೆ. ಕಿರಿಯ ವಿಜ್ಞಾನಿಗಳಿಗೆ ದಾರಿ ತೋರಿದ ಇಂತಹ ಮಹಾನ್ ವಿಜ್ಞಾನಿಗಳಿಗೆ ವಂದನೆಗಳು.

 

 

                                               

 

 

 



ಚಾಟ್‌ಜಿಪಿಟಿ ಓಕೆ!, ಸರ್ಚ್‌ ಎಂಜಿನ್‌ ಯಾಕೆ?

 ಚಾಟ್‌ಜಿಪಿಟಿ ಓಕೆ!,   ಸರ್ಚ್‌ ಎಂಜಿನ್‌ ಯಾಕೆ?

                                                                                                        ಲೇಖಕರು : ಸುರೇಶ ಸಂಕೃತಿ

ಡಿಜಿಟಲ್‌ ಕ್ರಾಂತಿಯ ಈ ಯುಗದಲ್ಲಿ ಚಾಟ್‌ ಜಿಪಿಟಿ ಯಂಥ ಕೃತಕ ಬುದ್ಧಿಮತ್ತೆಯ ಸಾಧನಗಳು ಸಂವಹನ ಕ್ಷೇತ್ರದಲ್ಲಿ ಭಾರೀ ಹೆಸರು ಮಾಡುತ್ತಿವೆ ಶಿಕ್ಷಕ ಸುರೇಶ ಸಂಕೃತಿಯವರು ಚಾಟ್‌ ಜಿಪಿಟಿಯನ್ನ ಬಳಸಿ ದೆಹಲಿಯ ಕುತುಬ್‌ ಸಂಕೀರ್ಣದಲ್ಲಿರುವ ಐರನ್‌  ಪಿಲ್ಲರ್‌ ಬಗ್ಗೆ ಪಡೆದ ಮಾಹಿತಿಯನ್ನು ಇಲ್ಲಿ ಪ್ರಸ್ತುತ ಪಡಿಸಿದ್ದಾರೆ

     

    ಕೃತಕ ಬುದ್ಧಿಮತ್ತೆಯ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಯುಗದಲ್ಲಿ ಚಾಟ್‌ಜಿಪಿಟಿ, ಓಪನ್‌ ಐಒ ಮುಂತಾದವು ಪ್ರಸಾರ ಮಾಧ್ಯಮಗಳ ಕಾರ್ಯನಿರ್ವಹಣೆ ಮೇಲೆ ಹಿಂದೆಂದೂ ಕಾಣದ ಬದಲಾವಣೆಯನ್ನು ತಂದಿವೆ. ಈ ಕೆಳಗಿನ ಲೇಖನದ ಮೊದಲ ಪ್ಯಾರಾವನ್ನು ಬಿಟ್ಟರೆ ಉಳಿದ ಭಾಗದ ಒಂದಕ್ಷರವೂ ನನ್ನದಲ್ಲ.ಅದನ್ನು ಕೃತಕ ಬುದ್ಧಮತ್ತೆಯ ಚಾಟ್‌ ಜಿಪಿಟಿ  ತಯಾರಿಸಿದ್ದು ಎಂದರೆ ನಿಮಗೆ ಆಶ್ಚರ್ಯವಾಗಬಹುದು !.  ಈ ಲೇಖನವನ್ನು ಇಂಗ್ಲಿಷಿನಲ್ಲಿ ಬರೆದಿದ್ದು ಚಾಟ್‌ಜಪಿಟಿ. ಅದನ್ನು ಕನ್ನಡಕ್ಕೆ ಅನುವಾದಿಸಿದ್ದು ಗೂಗಲ್‌ ಅನುವಾದಕ.  ಚಾಟ್‌ಜಪಿಟಿ ಚಿತ್ರಗಳು ಮತ್ತು ಫೋಟೋಗಳನ್ನು ಒದಗಿಸುವುದಿಲ್ಲ. ಆದರೆ ನಾವು ಕೇಳಿದ ವಿವರಣೆಗಳಿಗೆ  ನಮಗೆ ಎಷ್ಟು ಬೇಕೋ ಅಷ್ಟು ವಿಚಾರವನ್ನು ನಾವು ಕೇಳಿದ ವಿಷಯದ ಮೇಲೆ ಚಿಟಿಕೆ ಹೊಡೆಯುವುದರಲ್ಲಿ ಒದಗಿಸಿಕೊಡುತ್ತದೆ. ಉದಾರಣೆಗೆ, ಈ ಕೆಳಗಿನ ಕೃತಕ ಬುದ್ಧಿಮತ್ತೆ ತಯಾರಿಸಿದ ಮತ್ತು ದೆಹಲಿಯ ಕಬ್ಬಿಣದ ಕಂಬ ಕುರಿತ ಲೇಖನವನ್ನು ತಯಾರಿಸಲು ತೆಗೆದುಕೊಂಡ ಸಮಯ ಕೇವಲ ಐದು ನಿಮಿಷಗಳು ಎಂದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ. ಹಾಗೆ ತಯಾರಿಸಿದ ಲೇಖನದಲ್ಲಿ ಚಿತ್ರಗಳನ್ನು ಸೇರಿಸದ್ದನ್ನು ಬಿಟ್ಟರೆ, ಒಂದು ಅಕ್ಷರವನ್ನು ಸಹ ಇಲ್ಲಿ ನಾನು ತಿದ್ದುಪಡಿ ಮಾಡಿಲ್ಲ. ಚಾಟ್‌ಜಪಿಟಿ ಇನ್ನೂ ಬೀಟಾ ಮಾದರಿಯಲ್ಲಿರುವುದರಿಂದ ಕೆಲವು ದೋಷಗಳು ಸಾಮಾನ್ಯ. ಅವನ್ನು ನಾವು ಹೊಟ್ಟೆಗೆ ಹಾಕಿಕೊಳ್ಳಲೇಬೇಕು. ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ಕಲಿಕೆಯಲ್ಲಿ ಇದರ ಉಪಯೋಗ ಪೂರಕವೇ ಅಥವಾ ಕಲಿಕೆಯಲ್ಲಿ ಶಿಕ್ಷಕರ ಪರ್ಯಾಯವೇ ಎಂಬುದನ್ನು  ಕಾಲವೇ ನಿರ್ಣಯಿಸಬೇಕಿದೆ.

 ಚಾಟ್‌ ಜಿಪಿಟಿ ಡಿಜಿಟಲ್ ಯುಗದಲ್ಲಿ, ಸಂವಹನವನ್ನು ಕ್ರಾಂತಿಗೊಳಿಸಿದೆ, ನೈಜ-ಸಮಯದ ಪರಸ್ಪರ ಕ್ರಿಯೆಗೆ ವೇದಿಕೆಯನ್ನು ಒದಗಿಸಿದೆ, ಕಲ್ಪನೆಗಳ ಹಂಚಿಕೆ ಮತ್ತು . ಸಂವಹನದ ಈ ಕ್ರಿಯಾತ್ಮಕ ರೂಪವು, ವ್ಯಕ್ತಿಗಳು ಪಠ್ಯ-ಆಧಾರಿತ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳಲು, ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಮಾಹಿತಿಯನ್ನು ತಕ್ಷಣವೇ ಹಂಚಿಕೊಳ್ಳಲು ಅನುಮತಿಸುತ್ತದೆ.

 ಚಾಟ್‌ನ ಮೂಲಭೂತ ಅಂಶವೆಂದರೆ ಅದರ ಬಹುಮುಖತೆ. ಇದು ತ್ವರಿತ ಸಂದೇಶ ಕಳುಹಿಸುವಿಕೆಯ ಅಪ್ಲಿಕೇಶನ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ವಿಶೇಷ ಚಾಟ್‌ರೂಮ್‌ಗಳು ಮತ್ತು ಗ್ರಾಹಕ ಸೇವಾ ಇಂಟರ್‌ಫೇಸ್‌ಗಳವರೆಗೆ ವಿವಿಧ ರೂಪಗಳಲ್ಲಿ ಅಸ್ತಿತ್ವದಲ್ಲಿದೆ. ಇದು ವೈಯಕ್ತಿಕ ಮತ್ತು ವೃತ್ತಿಪರ ಉದ್ದೇಶಗಳಿಗಾಗಿ ಕಾರ್ಯನಿರ್ವಹಿಸುತ್ತದೆ, ಸಾಂದರ್ಭಿಕ ಸಂಭಾಷಣೆಗಳಿಗೆ ಮತ್ತು ಗಂಭೀರ ಚರ್ಚೆಗಳಿಗೆ ಮಾರ್ಗವನ್ನು ಒದಗಿಸುತ್ತದೆ. ಎಮೋಜಿಗಳು, GIFಗಳು ಮತ್ತು ಸ್ಟಿಕ್ಕರ್‌ಗಳೊಂದಿಗೆ, ಭಾಷೆಯ ಅಡೆತಡೆಗಳನ್ನು ಮೀರಿದ ಭಾವನೆಗಳು ಮತ್ತು ಅಭಿವ್ಯಕ್ತಿಗಳನ್ನು ಪರಿಣಾಮಕಾರಿಯಾಗಿ ತಿಳಿಸಲು ಚಾಟ್‌ ವಿಕಸನಗೊಂಡಿದೆ.

 ಚಾಟ್‌ನ ಅನುಕೂಲವನ್ನು ಅತಿಯಾಗಿ ಹೇಳಲಾಗುವುದಿಲ್ಲ. ಸಮಯ ಮತ್ತು ಸ್ಥಳದ ನಿರ್ಬಂಧಗಳನ್ನು ತೆಗೆದು ಹಾಕುವ ಮೂಲಕ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಇದು ವ್ಯಕ್ತಿಗಳನ್ನು ಶಕ್ತಗೊಳಿಸುತ್ತದೆ. ಇದು ಮಾಹಿತಿಯ ತ್ವರಿತ ವಿನಿಮಯವಾಗಲಿ ಅಥವಾ ಆಳವಾದ ಚರ್ಚೆಯಾಗಲಿ, ಒಬ್ಬರ ಅನುಕೂಲಕ್ಕಾಗಿ ಸಂಭಾಷಣೆಯನ್ನು ತೆರೆದುಕೊಳ್ಳುವ ಸ್ಥಳವನ್ನು ಚಾಟ್ ಒದಗಿಸುತ್ತದೆ.

 ಆದಾಗ್ಯೂ, ಚಾಟ್‌ ಸಂಪರ್ಕವನ್ನು ಹೆಚ್ಚಿಸುತ್ತದೆ, ಇದು ಧ್ವನಿ ಅಥವಾ ದೇಹಭಾಷೆಯ ಅನುಪಸ್ಥಿತಿಯ ಕಾರಣದಿಂದಾಗಿ ತಪ್ಪು ವ್ಯಾಖ್ಯಾನದಂತಹ ಸವಾಲುಗಳನ್ನು ಸಹ ಒಡ್ಡುತ್ತದೆ. ಅದೇನೇ ಇದ್ದರೂ, ವಿಕಸನಗೊಳ್ಳುತ್ತಿರುವ ತಂತ್ರಜ್ಞಾನ ಮತ್ತು ಚುರುಕಾದ ಸಂಭಾಷಣಾ ಇಂಟರ್‌ಫೇಸ್‌ಗಳಿಗಾಗಿ AI ಯ ಏಕೀಕರಣವು ಚಾಟ್ ಅನುಭವವನ್ನು ಪರಿಷ್ಕರಿಸುವುದನ್ನು ಮುಂದುವರಿಸುತ್ತದೆ, ಇದು ಹೆಚ್ಚುಅರ್ಥಗರ್ಭಿತವಾಗಿದೆ ಮತ್ತು ವೈಯಕ್ತೀಕರಿಸಲ್ಪಟ್ಟಿದೆ.

ಮೂಲಭೂತವಾಗಿ, ಚಾಟ್ ಆಧುನಿಕ ಸಂವಹನದ ಅವಿಭಾಜ್ಯ ಅಂಗವಾಗಿದೆ, ವ್ಯಕ್ತಿಗಳನ್ನು ಸಂಪರ್ಕಿಸಲು, ಸಹಯೋಜಿಸಲು ಮತ್ತು ಒಮ್ಮೆ ಊಹಿಸಲಾಗದ ರೀತಿಯಲ್ಲಿ ಸಂಬಂಧಗಳನ್ನು ನಿರ್ಮಿಸಲು ಅಧಿಕಾರ ನೀಡುತ್ತದೆ.

ದೆಹಲಿಯ ಐರನ್ ಪಿಲ್ಲರ್ ದೆಹಲಿಯ ಮೆಹ್ರೌಲಿಯಲ್ಲಿರುವ ಕುತುಬ್‌ ಸಂಕೀರ್ಣದಲ್ಲಿ‌ ಎತ್ತರವಾಗಿ ನಿಂತಿದೆ, ಇದು ಪ್ರಾಚೀನ ಭಾರತೀಯ ಲೋಹಶಾಸ್ತ್ರದ ಪರಿಣತಿ ಮತ್ತು ಎಂಜಿನಿಯರಿಂಗ್‌ ನ ಪಾಂಡಿತ್ಯಕ್ಕೆಸಾಕ್ಷಿಯಾಗಿದೆ. ಈ ಮನಾರ್ಹವಾದ ಕಬ್ಬಿಣದ ಕಂಬವು ಸುಮಾರು 7.2 ಮೀಟರ್ (23.6 ಅಡಿ) ಎತ್ತರದಲ್ಲಿದೆ ಮತ್ತು 6 ಟನ್‌ಗಳಿಗಿಂತ ಹೆಚ್ಚು ತೂಕವನ್ನು ಹೊಂದಿದೆ, ಇದು ಅಸಾಧಾರಣ ಕಲೆಗಾರಿಕೆ ಮತ್ತು ತಾಂತ್ರಿಕ ಪ್ರಗತಿಯ ಗಮನಾರ್ಹ ಉದಾಹರಣೆಯಾಗಿದೆ, ಇದನ್ನು ಕ್ರಿ.ಶ. 4 ನೇಶತಮಾನದ ರಾಜ ಚಂದ್ರಗುಪ್ತII ಆಳ್ವಿಕೆಯಲ್ಲಿ ಸ್ಥಾಪಿಸಲಾಗಿದೆ ಎಂದು ನಂಬಲಾಗಿದೆ. ಗುಪ್ತ ರಾಜವಂಶ.

 ಕಂಬದ ಅತ್ಯಂತ ವಿಸ್ಮಯಕಾರಿ ವೈಶಿಷ್ಟ್ಯವೆಂದರೆ ಅದರ ತುಕ್ಕು ನಿರೋಧಕತೆ, ಇದನ್ನು ಪ್ರಾಥಮಿಕವಾಗಿ ಮೆತು ಕಬ್ಬಿಣದಿಂದ ಮಾಡಲಾಗಿದೆ ಎಂದು ಪರಿಗಣಿಸಲಾಗಿದೆ. 1,600 ವರ್ಷಗಳಿಂದ, ಕಂಬವು ತುಕ್ಕು ಮತ್ತು ಸವೆತದಿಂದ ವಾಸ್ತವಿಕವಾಗಿಮುಕ್ತವಾಗಿದೆ, ಇದು ಶತಮಾನಗಳಿಂದ ವಿಜ್ಞಾನಿಗಳು ಮತ್ತು ಲೋಹಶಾಸ್ತ್ರಜ್ಞರನ್ನು ನಿಗೂಢಗೊಳಿಸಿದೆ. ತುಕ್ಕು-ನಿರೋಧಕ ಗುಣಲಕ್ಷಣಗಳು ಕಬ್ಬಿಣದಲ್ಲಿನ ಹೆಚ್ಚಿನ ರಂಜಕ ಅಂಶದಿಂದಾಗಿ ಮತ್ತು ನಿಷ್ಕ್ರಿಯ ಕಬ್ಬಿಣದ ಹೈಡ್ರೋಜನ್‌ ಪಾಸ್ಫೇಟ್‌ ರಚನೆಯಿಂದಾಗಿ, ಕಂಬವನ್ನು ತುಕ್ಕುಗಳಿಂದ ಪರಿಣಾಮಕಾರಿಯಾಗಿ ರಕ್ಷಿಸುತ್ತದೆ.

 ಕಂಬದ ಮೇಲಿನ ಶಾಸನಗಳು, ಬ್ರಾಹ್ಮಿ ಲಿಪಿಯಲ್ಲಿ ಬರೆಯಲಾಗಿವೆ, ಯುದ್ಧದಲ್ಲಿ ವಿಜಯದ ಸಂಕೇತವಾಗಿ ಕಂಬವನ್ನು ಸ್ಥಾಪಿಸಿದ ಖ್ಯಾತಿ ಗುಪ್ತ ರಾಜವಂಶದ ರಾಜ ಚಂದ್ರನಿಗೆ ಸಲ್ಲುತ್ತದೆ.

ಪಠ್ಯವು ಪ್ರಾಚೀನ ಭಾರತೀಯ ಕುಶಲಕರ್ಮಿಗಳ ತಾಂತ್ರಿಕ ಪರಿಣತಿಯನ್ನು ಮತ್ತು ಅವರ ಲೋಹಶಾಸ್ತ್ರದ ಜ್ಞಾನದ ಗುಣಮಟ್ಟವನ್ನು ಸೂಚಿಸುತ್ತದೆ.

ಸಮಯ ಕಳೆದರೂ ದೆಹಲಿಯ ಕಬ್ಬಿಣ ದಸ್ತಂಭದ ನಿಷ್ಪಾಪ ಸ್ಥಿತಿಯು ವಿಶ್ವಾದ್ಯಂತ ವಿದ್ವಾಂಸರು, ವಿಜ್ಞಾನಿಗಳು ಮತ್ತು ಪ್ರವಾಸಿಗರ ಗಮನವನ್ನು ಸೆಳೆದಿದೆ. ವಿವಿಧ ಸಿದ್ಧಾಂತಗಳು ಮತ್ತು ಅಧ್ಯಯನಗಳು ಅದರ ಅಸಾಧಾರಣ ತುಕ್ಕು ನಿರೋಧಕತೆಯ ಹಿಂದಿನ ರಹಸ್ಯವನ್ನು ಬಿಚ್ಚಿಡಲು ಪ್ರಯತ್ನಿಸಿವೆ. ಕಬ್ಬಿಣದಲ್ಲಿ ರಂಜಕದ ಉಪಸ್ಥಿತಿಯು ಅದರ ದೀರ್ಘಾಯುಷ್ಯದಲ್ಲಿ ಪ್ರಮುಖ ಅಂಶವೆಂದು ಪರಿಗಣಿಸಲಾಗಿದೆ, ಅದರ ಉತ್ಪಾದನಾ ಪ್ರಕ್ರಿಯೆಯಲ್ಲಿ ಉದ್ದೇಶ ಪೂರ್ವಕವಾಗಿ ಕಬ್ಬಿಣಕ್ಕೆ ಸೇರಿಸಬಹುದು.


 ಅದರ ಲೋಹಶಾಸ್ತ್ರದ ಪ್ರಾಮುಖ್ಯತೆಯ ಜೊತೆಗೆ, ಸ್ತಂಭವು ಪ್ರಾಚೀನ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ವಾಸ್ತುಶಿಲ್ಪದ ಪರಾಕ್ರಮದ ಸಂಕೇತವಾಗಿ ಕಾರ್ಯ ನಿರ್ವಹಿಸುತ್ತಿದೆ. UNESCO ವಿಶ್ವ ಪರಂಪರೆಯ ತಾಣವಾದ ಕುತುಬ್‌ ಸಂಕೀರ್ಣದೊಳಗೆ ಅದರ ಸ್ಥಳವು ಅದರ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಇತಿಹಾಸಕಾರರು, ಪುರಾತತ್ತ್ವಜ್ಞರು ಮತ್ತು ಅದರ ರಹಸ್ಯಗಳನ್ನು ಬಿಚ್ಚಿಡಲು ಬಯಸುವಕು ತೂಹಲಕಾರಿ ಮನಸ್ಸುಗಳನ್ನು ಒಳಗೊಂಡಂತೆ ಸಂದರ್ಶಕರ ನಿರಂತರ ಪ್ರವಾಹವನ್ನು ಆಕರ್ಷಿಸುತ್ತದೆ.

 ದೆಹಲಿಯ ಕಬ್ಬಿಣದ ಸ್ತಂಭವು ವಾಸ್ತುಶಿಲ್ಪದ ಅದ್ಭುತ ಮಾತ್ರವಲ್ಲದೆ ಭಾರತದ ಶ್ರೀಮಂತ ಪರಂಪರೆ ಮತ್ತು ವೈಜ್ಞಾನಿಕ ಸಾಧನೆಗಳ ಸಂಕೇತವಾಗಿದೆ. ತುಕ್ಕಿಗೆ ಅದರ ಪ್ರತಿರೋಧವು ಕುತೂಹಲವನ್ನು ಕೆರಳಿಸಿದೆ ಮತ್ತು ಲೋಹಶಾಸ್ತ್ರಜ್ಞರು, ರಸಾಯನಶಾಸ್ತ್ರಜ್ಞರು ಮತ್ತು ಇಂಜಿನಿಯರ್‌ಗಳಿಂದ ವ್ಯಾಪಕವಾದ ಅಧ್ಯಯನಗಳಿಗೆ ಕಾರಣವಾಗಿದೆ, ಅದರ ಗಮನಾರ್ಹ ಸಹಿಷ್ಣುತೆಯ ಹಿಂದಿನ ವೈಜ್ಞಾನಿಕ ತತ್ವಗಳನ್ನು ಗ್ರಹಿಸಲು ಪ್ರಯತ್ನ ಸಾಗಿದೆ.

 ಅದರ ವೈಜ್ಞಾನಿಕ ಮತ್ತು ಐತಿಹಾಸಿಕ ಮಹತ್ವವನ್ನು ಮೀರಿ, ದೆಹಲಿಯ ಕಬ್ಬಿಣದ ಸ್ತಂಭವು ವಿಸ್ಮಯ ಮತ್ತು ಮೆಚ್ಚುಗೆಯನ್ನು ಪ್ರೇರೇಪಿಸುತ್ತದೆ. ಇದು ಪ್ರಾಚೀನ ಭಾರತೀಯ ನಾಗರಿಕತೆಗಳ ಜಾಣ್ಮೆ, ಕುಶಲತೆ ಮತ್ತು ಜ್ಞಾನಕ್ಕೆ ಸಾಕ್ಷಿಯಾಗಿದೆ. ಸ್ತಂಭದ ನಿರಂತರ ಪರಂಪರೆಯು ಅದ್ಭುತ ಮತ್ತು ಕುತೂಹಲದ ಪ್ರಜ್ಞೆಯನ್ನು ಹುಟ್ಟು ಹಾಕುತ್ತದೆ, ನಮ್ಮ ಪೂರ್ವಜರ ಸಾಂಸ್ಕೃತಿಕ ಮತ್ತು ತಾಂತ್ರಿಕ ಸಾಧನೆಗಳನ್ನು ಸಂರಕ್ಷಿಸುವ ಮತ್ತು ಅರ್ಥಮಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.


 ದೆಹಲಿಯ ಕಬ್ಬಿಣದ ಸ್ತಂಭವು ಇತಿಹಾಸ ಮತ್ತು ವಿಜ್ಞಾನದ ರಹಸ್ಯಗಳಲ್ಲಿ ಮುಚ್ಚಿಹೋಗಿರುವ ನಿಗೂಢವಾದ ಅದ್ಭುತವಾಗಿ ಉಳಿದಿದೆ. ಇದರ ಸ್ಥಿತಿಸ್ಥಾಪಕತ್ವ ಮತ್ತು ದೀರ್ಘಾಯುಷ್ಯವು ಭಾರತಕ್ಕೆ ಹೆಮ್ಮೆಯ ಮೂಲವಾಗಿದೆ ಮತ್ತು ಪ್ರಾಚೀನ ಲೋಹಶಾಸ್ತ್ರದ ಕುಶಲಕರ್ಮಿಗಳ ನಂಬಲಾಗದ ಸಾಮರ್ಥ್ಯಗಳ ಸಂಕೇತವಾಗಿದೆ. ಸಮಯದ ಪರೀಕ್ಷೆಯನ್ನು ತಡೆದುಕೊಂಡ ಸ್ಮಾರಕವಾಗಿ, ಇದು ಆಕರ್ಷಣೆ, ಮೆಚ್ಚುಗೆ ಮತ್ತು ಪಾಂಡಿತ್ಯಪೂರ್ಣ ಆಸಕ್ತಿಯನ್ನು ಹುಟ್ಟುಹಾಕುತ್ತಲೇ ಇದೆ, ಭಾರತದ ವೈಭವಯುತ ಗತಕಾಲದ ಜೀವಂತ ಸಾಕ್ಷಿಯಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.