ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ  

೨೦೨೨ರ ಏಪ್ರಿಲ್ ತಿಂಗಳ ‘ಸವಿಜ್ಞಾನ’ ಸಂಚಿಕೆ ಹೊಸ ಸಂವತ್ಸರದ ಪ್ರಾರಂಭದಲ್ಲಿ ಬಿಡುಗಡೆಯಾಗುತ್ತಿದೆ. ನಮ್ಮ ಎಲ್ಲ ಓದುಗರಿಗೆ “ಶುಭಕೃತ್’ ಸಂವತ್ಸರದ ಹಾರ್ದಿಕ ಶುಭಾಶಯಗಳು. ಜೊತೆಗೆ, ಹತ್ತನೇ ತರಗತಿಯ ಅಂತಿಮ ಪರೀಕ್ಷೆಯನ್ನು ಬರೆಯುತ್ತಿರುವ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ‘ಸವಿಜ್ಞಾನ’ ತಂಡದ ಪರವಾಗಿ ಶುಭ ಹಾರೈಕೆಗಳು. 

ಎಂದಿನAತೆ, ನಿಮ್ಮ ಆಸಕ್ತಿ ಹಾಗೂ ಸಲಹೆಗಳನ್ನು ಗಮನದಲ್ಲಿರಿಸಿಕೊಂಡು ಸಾಂದರ್ಭಿಕ ಹಾಗೂ ವೈವಿಧ್ಯಮಯ ಲೇಖನಗಳನ್ನು ಈ ಸಂಚಿಕೆ ನಿಮಗಾಗಿ ಹೊತ್ತು ತಂದಿದೆ. ವಿಜ್ಞಾನದಲ್ಲಿ ‘ಸೆರೆಪಿಂಡಿಟ’ಯ ಬಗ್ಗೆ ಈ ಹಿಂದೆ ಲೇಖನ ಬರೆದಿದ್ದ ಡಾ.  ಸುಂದರರಾಮ್, ಅದರ ಮುಂದುವರೆದ ಭಾಗವಾಗಿ ಸ್ಪಲಾಂಜನಿ ಎಂಬ ವಿಜ್ಞಾನಿ ನಡೆಸಿದ ವಿಶಿಷ್ಟ ಪ್ರಯೋಗಗಳನ್ನು ಕುತೂಹಲಕಾರಿಯಾಗಿ ನಿರೂಪಿಸಿದ್ದಾರೆ. ಐಸಾಕ್ ನ್ಯೂಟನ್ ರೂಪಿಸಿದ ಚಲನೆಯ ನಿಯಮಗಳನ್ನು ಸರಳ ಉದಾಹರಣೆಗಳೊಂದಿಗೆ ಶಿಕ್ಷಕ ರೋಹಿತ್ ವಿವರಿಸಿರುವ ರೀತಿಯನ್ನು ಅವರ ಲೇಖನವನ್ನು ಓದಿಯೇ ಅನುಭವಿಸಬೇಕು. ಸುಡು ಬೇಸಿಗೆಯಲ್ಲೂ ನಿಸರ್ಗಕ್ಕೆ ತನ್ನ ಹಳದಿ ಹೂಗಳಿಂದ ಸಿಂಗರಿಸುವ ‘ಅಲ್ತಮಸ್’ ಮರವನ್ನು ಪರಿಚಯಿಸುವ ಮೂಲಕ ನಮ್ಮ ಲೇಖಕರ ಬಳಗವನ್ನು ಸೇರುತ್ತಿದ್ದಾರೆ,  ಶಿಕ್ಷಕ ಶ್ರೀ ರಮೇಶ್ ಬಳ್ಳಾ ಅವರು. ವನ್ಯ ಜೀವಿ ತಜ್ಞ ಹಾಗೂ ವಿಜ್ಞಾನ ಶಿಕ್ಷಕ ಕೃಷ್ಣ ಚೈತನ್ಯ ಅವರು ಈ ಬಾರಿಯ ಲೇಖನದಲ್ಲಿ ಮರಕುಟಿಗ ಹಕ್ಕಿಗಳನ್ನು ಪರಿಚಯಿಸಿದ್ದಾರೆ. ಅಡುಗೆ ಮನೆಯಲ್ಲಿ ಕಂಡು ಬರುವ ವಿಜ್ಞಾನ-ಪ್ರೇರಿತ ನಾವೀನ್ಯತೆಯನ್ನು ತಮ್ಮ ಲೇಖನದಲ್ಲಿ ಒಬ್ಬ ಗೃಹಿಣಿಯ ನೆಲೆಯಲ್ಲಿ ವಿವರಿಸಿದ್ದಾರೆ ಶಿಕ್ಷಕಿ ಶ್ರೀಮತಿ ಹೆಚ್.ಎಸ್.ಶಾರದಾ ಅವರು. ಶ್ರೀ ಡಿ.ಎಸ. ಬಸವಾನಂದ ಪ್ರಕಾಶ್ ಅವರನ್ನು ಈ ಬಾರಿಯ ‘ಸಾಧಕ ಶಿಕ್ಷಕ’ರನ್ನಾಗಿ ಪರಿಚಯಿಸಲಾಗಿದೆ. ಜೊತೆಗೆ, ನಮ್ಮ ಖಾಯಂ ಅಂಕಣಗಳಾದ ಒಗಟುಗಳು, ವ್ಯಂಗ್ಯ ಚಿತ್ರಗಳು ಹಾಗೂ ಪದಬಂಧ ನಿಮ್ಮ ಮಿದುಳಿಗೆ ಕಸರತ್ತು ನೀಡಲಿವೆ.

ಸಂಚಿಕೆಯ ಲೇಖನಗಳನ್ನು ಓದಿ. ನಿಮ್ಮ ಅಭಿಪ್ರಾಯಗಳನ್ನು ದಾಖಲಿಸಿ. ಸಲಹೆಗಳೇನಾದರೂ ಇದ್ದರೆ, ನಮಗೆ ತಿಳಿಸಿ. ನಮ್ಮ ಪ್ರಯತ್ನ ನಿಮಗೆ ಮೆಚ್ಚುಗೆಯಾಗಿದ್ದರೆ, ನಿಮ್ಮ ಸಹೋದ್ಯೋಗಿಗಳಿಗೆ, ಹಿತೈಶಿಗಳಿಗೆ ‘ಸವಿಜ್ಞಾನ’ದ ಬಗ್ಗೆ ತಿಳಿಸಿ.

ಡಾ. ಟಿ. ಎ. ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು


ಸೂಕ್ಷ್ಮಜೀವಿಗಳ ವೃದ್ಧಿಯ ಮರ್ಮ

ಸೂಕ್ಷ್ಮಜೀವಿಗಳ ವೃದ್ಧಿಯ ಮರ್ಮ

ಡಾ.ಎಂ. ಜೆ. ಸುಂದರರಾಮ್

ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು ಹಾಗೂ ವಿಜ್ಞಾನ ಸಂವಹನಕಾರರು


ವಿಜ್ಞಾನದಲ್ಲಿ ‘ಸೆರೆಪಿಂಡಿಟಿ’ ಯ ಮಹತ್ವವನ್ನು ತಿಳಿಸುವ ಡಾ. ಸುಂದರರಾಮ್ ಅವರ ಲೇಖನವೊಂದನ್ನು ‘ಸವಿಜ್ಞಾನ’ದ ಹಿಂದಿನ ಸಂಚಿಕೆಯೊಂದರಲ್ಲಿ ಓದಿದ್ದು ನಿಮಗೆ ನೆನಪಿರಬಹುದು. ಅದರ ಮುಂದುವರೆದ ಭಾಗವಾಗಿ, ಈ ಲೇಖನದಲ್ಲಿ ಸುಂದರರಾಮ್ ಅವರು ಸ್ಪಲಾಂಜನಿ ಎಂಬ ವಿಜ್ಞಾನಿ ಸೂಕ್ಷ್ಮಜೀವಿಗಳಲ್ಲಿ ನಡೆಸಿದ ಕುತೂಲಕರ ಪ್ರಯೋಗವೊಂದನ್ನು ಆಕರ್ಷಣೀಯವಾಗಿ ವಿವರಿಸಿದ್ದಾರೆ.

ಬಲ ಎಂದರೆ ಎಮ್ಮೆ - ನ್ಯೂಟನ್ನನ ಹೆಮ್ಮೆ

ಬಲ ಎಂದರೆ ಎಮ್ಮೆ - ನ್ಯೂಟನ್ನನ ಹೆಮ್ಮೆ

ರೋಹಿತ್ ವಿ ಸಾಗರ್

ಪ್ರಾಂಶುಪಾಲರು,

ಹೊಂಗಿರಣ ಸ್ವತಂತ್ರ ಪದವಿಪೂರ್ವ ಕಾಲೇಜು

ಸಾಗರ 

ಖ್ಯಾತ ವಿಜ್ಞಾನಿ ಐಸಾಕ್ ನ್ಯೂಟನ್ ರೂಪಿಸಿದ, ಭೌತಶಾಸ್ತ್ರದ ಪ್ರಮುಖ ಪರಿಕಲ್ಪನೆಗಳಲ್ಲಿ ಒಂದಾದ ಚಲನೆಯ ನಿಯಮಗಳನ್ನು  ಸರಳವಾದ ಉದಾಹರಣೆಗಳೊಂದಿಗೆ ಅತ್ಯಂತ ಸೊಗಾಸಾಗಿ ಈ ಲೇಖನದಲ್ಲಿ ವಿವರಿಸಿದ್ದಾರೆ, ಸವಿಜ್ಞಾನ ತಂಡದ ಲೇಖಕರಾದ ರೋಹಿತ್ ಅವರು.

ನಾವೀನ್ಯತೆಗಳ ಆಗರ – ಅಡುಗೆಮನೆ !

ನಾವೀನ್ಯತೆಗಳ ಆಗರ – ಅಡುಗೆಮನೆ !

ಶ್ರೀಮತಿ ಹೆಚ್.ಎಸ್.ಶಾರದ

ಶಿಕ್ಷಕಿಸರ್ಕಾರಿ ಪ್ರೌಢಶಾಲೆ, 

ಎಂ.ಸಿ. ತಳಲು, 

ಸರಗೂರು ತಾಲ್ಲೂಕು, 

ಮೈಸೂರು

ನಮ್ಮ ನಿತ್ಯ ಜೀವನದ ಪ್ರತಿಯೊಂದು ಅಂಶದಲ್ಲಿ ವಿಜ್ಞಾನದ ಪ್ರಭಾವ ಎದ್ದು ಕಾಣುತ್ತದೆ. ವಿಜ್ಞಾನದ ವಿವಿಧ ಶಾಖೆಗಳಲ್ಲಿ ಆಗುತ್ತಿರುವ ಹೊಸ ಅನ್ವೇಷಣೆಗಳು ಹಾಗೂ ಸಂಶೋಧನೆಗಳು ಅನ್ವಯಗೊಂಡು ನಮ್ಮ ಜೀವನ ಶೈಲಿಯ ಅವಿಭಾಜ್ಯ ಅಂಗಳಾಗಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಗೃಹಿಣಿಯೊಬ್ಬಳ ದಿನ ನಿತ್ಯದ ಚಟುವಟಿಕೆಯಲ್ಲಿ ಎಷ್ಟೊಂದು ಹೊಸ ಆಲೋಚನೆಗಳು ಮೂಡಿ, ಕಾರ್ಯರೂಪಕ್ಕೆ ಇಳಿದು, ‘ನಾವೀನ್ಯತೆ’ಗೆ ಎಡೆಮಾಡಿಕೊಡುತ್ತವೆ ಎಂಬುದನ್ನು ನವಿರಾಗಿ ನಿರೂಪಿಸಿದ್ದಾರೆ ಒಬ್ಬ ಕ್ರಿಯಾಶೀಲ ಶಿಕ್ಷಕಿಯಾಗಿ ಈ ಹಿಂದೆ ‘ಸವಿಜ್ಞಾನ’ದಲ್ಲಿ ಪರಿಚಯಗೊಂಡಿದ್ದ ಶ್ರೀಮತಿ ಹೆಚ್,ಎಸ್.ಶಾರದ ಅವರು.

ಮರಕುಟಿಗ ಹಕ್ಕಿಗಳು

ಮರಕುಟಿಗ ಹಕ್ಕಿಗಳು

ಡಿ. ಕೃಷ್ಣಚೈತನ್ಯ
ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

ವನ್ಯಜೀವಿ ತಜ್ಞರೂ, ಶಿಕ್ಷಕರೂ ಆಗಿರುವ ಕೃಷ್ಣ ಚೈತನ್ಯ ಅವರು ಈ ಬಾರಿಯ ಲೇಖನದಲ್ಲಿ ನಮ್ಮ ದೇಶದಲ್ಲಿ ಕಂಡುಬರುವ ಮರಕುಟಿಗ ಹಕ್ಕಿಗಳ ವಿವಿಧ ಬಗೆಗಳನ್ನು ಹಾಗೂ ಅವುಗಳ ಜೀವನ ಶೈಲಿಯನ್ನು ಸೊಗಸಾಗಿ ನಿರೂಪಿಸಿದ್ದಾರೆ.

ಬಿಸಿಲ ಬೇಗೆಯ ಧರೆಗೆ ಹಳದಿ ಬಣ್ಣದ ಶೃಂಗಾರ

ಬಿಸಿಲ ಬೇಗೆಯ ಧರೆಗೆ ಹಳದಿ ಬಣ್ಣದ ಶೃಂಗಾರ

ರಮೇಶ.ವಿ.ಬಳ್ಳಾ  

ಅಧ್ಯಾಪಕರು.

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು                     

ಗುಳೇದಗುಡ್ಡ. ಬಾಗಲಕೋಟ ಜಿಲ್ಲೆ

 

ಸುಡು ಬೇಸಗೆಯಲ್ಲೂ ತಮ್ಮ ಹಳದಿ ಬಣ್ಣದ ಹೂಗಳಿಂದ ನಮ್ಮ ಗಮನ ಸೆಳೆಯುವ 'ಅಮಲ್ತಾಸ್’ ಮರಗಳು ಔಷದೀಯ ಗುಣಗಳಿಂದಾಗಿ ನಮಗೆ ಉಪಯುಕ್ತವಾಗಿವೆ. ಈ ಮರದ ಹೂವಿನ ಬಗ್ಗೆ ಒಂದು ಪರಿಚಯಾತ್ಮಕ ಲೇಖನವನ್ನು ಬರೆದವರು ‘ಸವಿಜ್ಞಾನ’ ಲೇಖಕರ ಬಳಗಕ್ಕೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಶಿಕ್ಷಕ ರಮೇಶ್.ವಿ ಬಳ್ಳಾ ಅವರು.

ಜ್ಞಾನ ದಾಸೋಹಿ ಡಿ.ಎಸ್.ಬಸವಾನಂದ ಪ್ರಕಾಶ್

ಜ್ಞಾನ ದಾಸೋಹಿ ಡಿ.ಎಸ್.ಬಸವಾನಂದ ಪ್ರಕಾಶ್

ಲಕ್ಷ್ಮಿಪ್ರಸಾದ್ ನಾಯಕ್

ಬೆಂಗಳೂರಿನ ಪ್ರತಿಷ್ಟಿತ  ಬಿ.ಹೆಚ್.ಎಸ. ಶಾಲೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ವಿಜ್ಞಾನ ಮತ್ತು ಗಣಿತ ವಿಷಯಗಳ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಕೊನೆಯಲ್ಲಿ ಮುಖ್ಯ ಶಿಕ್ಷಕರಾಗಿ ಇತ್ತೀಚೆಗಷ್ಟೇ ನಿವೃತ್ತರಾದ ಶ್ರೀ ಡಿ.ಎಸ.ಬಸವಾನಂದ ಪ್ರಕಾಶ್, ನಮ್ಮ ‘ಸವಿಜ್ಞಾನದ ಈ ತಿಂಗಳ ಸಂಚಿಕೆಯಲ್ಲಿ ನಿಮಗೆ ಪರಿಚಯಿಸಲಾಗುತ್ತಿರುವ ‘ತೆರೆ ಮರೆಯ ಸಾಧಕರು’. ಬೋಧನೆಯ ಜೊತೆಗೆ ಮಕ್ಕಳನ್ನು ಸಹಪಠ್ಯ ವಿಷಯಗಳಲ್ಲಿಯೂ ಸಿದ್ಧ ಪಡಿಸುವುದರಲ್ಲಿ ನಿಷ್ಣಾತರು. ‘ರಾಜ್ಯ ಪ್ರಶಸ್ತಿ ವಿಜೇತ’ ಶಿಕ್ಷಕರಾದ ಶ್ರೀಯುತರು, ರಾಜ್ಯ ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರು.

ಒಗಟುಗಳು

ಒಗಟುಗಳು 


1. ಮೂರು ಮತ್ತೊಂದರ ಮಧ್ಯೆ ಒಂದು ಬಿಂದು ಮತ್ತೆ

   ಮುಂದುವರೆದು ನಾಲ್ಕು,ಒಂದು,ಐದು,ಒಂಭತ್ತು

   ಅನಂತದವರೆಗೂ ಹರಡುವುದೇ ನನ್ನ ಗಮ್ಮತ್ತು

   ನನ್ನ ಹುಟ್ಟು ಪರಿಧಿ ಮತ್ತು ವ್ಯಾಸಗಳ ಅನುಪಾತದಲ್ಲಿತ್ತು.

 

2. ಬಾಣಲೆಯಾಕಾರದ ಅಪಾರರ‍್ಶಕ ವಸ್ತು ನಾನು,

   ಬಾಣದೊಲು ಬರುವ ಬೆಳಕಿನ ಕಿರಣಗಳ ಏಕೀಕರಿಸುವೆನು,

   ಬಾಯೊಳಗಿನ ಹಲ್ಲುಗಳ ವೈದ್ಯರಿಗೆ ನಾ ಹಿರಿದಾಗಿ ತೋರುವೆನು,

   ಬಾನಿಂದಿಳಿವ ಕಿರಣಗಳ ಕೇಂದ್ರೀಕರಿಸಿ ಕುಲುಮೆಯಾಗಿಸುವೆನು,


- ವಿಜಯಕುಮಾರ್ ಹುತ್ತನಹಳ್ಳಿ 

ಸವಿಜ್ಞಾನ ಪದಬಂಧ-೪

ಸವಿಜ್ಞಾನ ಪದಬಂಧ-೪

(೧೦ ನೇ ತರಗತಿಯ ವಿದ್ಯುಚ್ಛಕ್ತಿ ಮತ್ತು ವಿದ್ಯುತ್ಪ್ರವಾಹದ ಕಾಂತೀಯ ಪರಿಣಾಮಗಳು ಘಟಕಗಳಿಂದ ಆಯ್ದ ಪದಗಳು)




ಸುಳಿವುಗಳು:

ಎಡದಿಂದ ಬಲಕ್ಕೆ,

೧. ವಿದ್ಯುನ್ಮಂಡಲದಲ್ಲಿ ಅಮ್ಮೀಟರ್‌ ಅನ್ನು ಜೋಡಿಸಿಬೇಕಾದ ಕ್ರಮ. (೫)

೨. ಓಮ್‌ ನ ನಿಯಮದ ಪ್ರಕಾರ ವಿದ್ಯುನ್ಮಂಡಲದಲ್ಲಿ ಹರಿಯುವ ವಿದ್ಯುತ್‌ ಪ್ರವಾಹವು ಇದಕ್ಕೆ ನೇರ ಅನುಪಾತ. ( ೫)

೩. ಸಜಾತಿ ವಿದ್ಯುದಾವೇಶಗಳ ನಡುವೆ ಉಂಟಾಗುವುದು (೪)

೪. ವಾಹಕದಲ್ಲಿ ಆವೇಶಗಳ ಹರಿಯುವಿಕೆಯ ಕಾಲದ ದರ I = Q/t ( ೬)

೫. ಕಾಣದ ಕಾಂತೀಯ ಬಲರೇಖೆಗಳು ಕಾಣುವಂತೆ ಮಾಡುವ ಲೋಹವೊಂದರ ಸಣ್ಣ ಚೂರುಗಳು (೬)

೬. ವಿದ್ಯುದಾವೇಶಗಳ  SI ಏಕಮಾನ (೩)


ಮೇಲಿನಿಂದ ಕೆಳಕ್ಕೆ,


೧. ಗೃಹಬಳಕೆಯ ವಿದ್ಯುನ್ಮಂಡಲದಲ್ಲಿ ವಿದ್ಯುದುಪಕರಣಗಳನ್ನು ಜೋಡಿಸುವ ಕ್ರಮ ( ೪)

೨. ವಿದ್ಯುದಾವೇಶಗಳು ಹರಿಯುವ ಆವೃತ ಪಥ (೬)

೩. ಯಾಂತ್ರಿಕ ಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿರ‍್ತಿಸುವ ಸಾಧನ (೬)

೪. ವಿದ್ಯುದಾವೇಶಗಳನ್ನು ಹರಿಯಲು ಬಿಡುವ ವಸ್ತು (೩)

೫. ಸ್ವತಂತ್ರವಾಗಿ ತೂಗಿಬಿಟ್ಟ ಕಾಂತವು ಸದಾ ನಿಲ್ಲುವ ದಿಕ್ಕು (೬)

೬. ಉಸಿರನ್ನು ಕೆಳಗಿನಿಂದ ಮೇಲಕ್ಕೆ ತೆಗೆದುಕೊಂಡು ಪ್ರಣವ ಹೇಳಿದರೆ ಸಿಗುವುದು ರೋಧದ SI ಏಕಮಾನ (೨)


ರಚನೆ:

ವಿಜಯಕುಮಾರ್‌ ಹೆಚ್. ಜಿ

ಸಹಶಿಕ್ಷಕರು

ಸ.ಪ್ರೌ.ಶಾಲೆ,

ಕಾವಲ್‌ಭೈರಸಂದ್ರ,

ಬೆಂಗಳೂರು ಉತ್ತರ ವಲಯ-೦೩.

೯೭೩೯೭೬೬೮೪೦.


****

ಮಾರ್ಚ್ 2022 ಪದಬಂಧ ಸಂಚಿಕೆಯ ಉತ್ತರಗಳು 






ವ್ಯಂಗ್ಯ ಚಿತ್ರಗಳು - ಏಪ್ರಿಲ್ 2022

 ವ್ಯಂಗ್ಯ ಚಿತ್ರಗಳು - ಏಪ್ರಿಲ್ 2022 





ರಚನೆ: ಶ್ರೀಮತಿ ಬಿ. ಜಯಶ್ರೀ ಶರ್ಮ