ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Monday, April 4, 2022

ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ  

೨೦೨೨ರ ಏಪ್ರಿಲ್ ತಿಂಗಳ ‘ಸವಿಜ್ಞಾನ’ ಸಂಚಿಕೆ ಹೊಸ ಸಂವತ್ಸರದ ಪ್ರಾರಂಭದಲ್ಲಿ ಬಿಡುಗಡೆಯಾಗುತ್ತಿದೆ. ನಮ್ಮ ಎಲ್ಲ ಓದುಗರಿಗೆ “ಶುಭಕೃತ್’ ಸಂವತ್ಸರದ ಹಾರ್ದಿಕ ಶುಭಾಶಯಗಳು. ಜೊತೆಗೆ, ಹತ್ತನೇ ತರಗತಿಯ ಅಂತಿಮ ಪರೀಕ್ಷೆಯನ್ನು ಬರೆಯುತ್ತಿರುವ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ‘ಸವಿಜ್ಞಾನ’ ತಂಡದ ಪರವಾಗಿ ಶುಭ ಹಾರೈಕೆಗಳು. 

ಎಂದಿನAತೆ, ನಿಮ್ಮ ಆಸಕ್ತಿ ಹಾಗೂ ಸಲಹೆಗಳನ್ನು ಗಮನದಲ್ಲಿರಿಸಿಕೊಂಡು ಸಾಂದರ್ಭಿಕ ಹಾಗೂ ವೈವಿಧ್ಯಮಯ ಲೇಖನಗಳನ್ನು ಈ ಸಂಚಿಕೆ ನಿಮಗಾಗಿ ಹೊತ್ತು ತಂದಿದೆ. ವಿಜ್ಞಾನದಲ್ಲಿ ‘ಸೆರೆಪಿಂಡಿಟ’ಯ ಬಗ್ಗೆ ಈ ಹಿಂದೆ ಲೇಖನ ಬರೆದಿದ್ದ ಡಾ.  ಸುಂದರರಾಮ್, ಅದರ ಮುಂದುವರೆದ ಭಾಗವಾಗಿ ಸ್ಪಲಾಂಜನಿ ಎಂಬ ವಿಜ್ಞಾನಿ ನಡೆಸಿದ ವಿಶಿಷ್ಟ ಪ್ರಯೋಗಗಳನ್ನು ಕುತೂಹಲಕಾರಿಯಾಗಿ ನಿರೂಪಿಸಿದ್ದಾರೆ. ಐಸಾಕ್ ನ್ಯೂಟನ್ ರೂಪಿಸಿದ ಚಲನೆಯ ನಿಯಮಗಳನ್ನು ಸರಳ ಉದಾಹರಣೆಗಳೊಂದಿಗೆ ಶಿಕ್ಷಕ ರೋಹಿತ್ ವಿವರಿಸಿರುವ ರೀತಿಯನ್ನು ಅವರ ಲೇಖನವನ್ನು ಓದಿಯೇ ಅನುಭವಿಸಬೇಕು. ಸುಡು ಬೇಸಿಗೆಯಲ್ಲೂ ನಿಸರ್ಗಕ್ಕೆ ತನ್ನ ಹಳದಿ ಹೂಗಳಿಂದ ಸಿಂಗರಿಸುವ ‘ಅಲ್ತಮಸ್’ ಮರವನ್ನು ಪರಿಚಯಿಸುವ ಮೂಲಕ ನಮ್ಮ ಲೇಖಕರ ಬಳಗವನ್ನು ಸೇರುತ್ತಿದ್ದಾರೆ,  ಶಿಕ್ಷಕ ಶ್ರೀ ರಮೇಶ್ ಬಳ್ಳಾ ಅವರು. ವನ್ಯ ಜೀವಿ ತಜ್ಞ ಹಾಗೂ ವಿಜ್ಞಾನ ಶಿಕ್ಷಕ ಕೃಷ್ಣ ಚೈತನ್ಯ ಅವರು ಈ ಬಾರಿಯ ಲೇಖನದಲ್ಲಿ ಮರಕುಟಿಗ ಹಕ್ಕಿಗಳನ್ನು ಪರಿಚಯಿಸಿದ್ದಾರೆ. ಅಡುಗೆ ಮನೆಯಲ್ಲಿ ಕಂಡು ಬರುವ ವಿಜ್ಞಾನ-ಪ್ರೇರಿತ ನಾವೀನ್ಯತೆಯನ್ನು ತಮ್ಮ ಲೇಖನದಲ್ಲಿ ಒಬ್ಬ ಗೃಹಿಣಿಯ ನೆಲೆಯಲ್ಲಿ ವಿವರಿಸಿದ್ದಾರೆ ಶಿಕ್ಷಕಿ ಶ್ರೀಮತಿ ಹೆಚ್.ಎಸ್.ಶಾರದಾ ಅವರು. ಶ್ರೀ ಡಿ.ಎಸ. ಬಸವಾನಂದ ಪ್ರಕಾಶ್ ಅವರನ್ನು ಈ ಬಾರಿಯ ‘ಸಾಧಕ ಶಿಕ್ಷಕ’ರನ್ನಾಗಿ ಪರಿಚಯಿಸಲಾಗಿದೆ. ಜೊತೆಗೆ, ನಮ್ಮ ಖಾಯಂ ಅಂಕಣಗಳಾದ ಒಗಟುಗಳು, ವ್ಯಂಗ್ಯ ಚಿತ್ರಗಳು ಹಾಗೂ ಪದಬಂಧ ನಿಮ್ಮ ಮಿದುಳಿಗೆ ಕಸರತ್ತು ನೀಡಲಿವೆ.

ಸಂಚಿಕೆಯ ಲೇಖನಗಳನ್ನು ಓದಿ. ನಿಮ್ಮ ಅಭಿಪ್ರಾಯಗಳನ್ನು ದಾಖಲಿಸಿ. ಸಲಹೆಗಳೇನಾದರೂ ಇದ್ದರೆ, ನಮಗೆ ತಿಳಿಸಿ. ನಮ್ಮ ಪ್ರಯತ್ನ ನಿಮಗೆ ಮೆಚ್ಚುಗೆಯಾಗಿದ್ದರೆ, ನಿಮ್ಮ ಸಹೋದ್ಯೋಗಿಗಳಿಗೆ, ಹಿತೈಶಿಗಳಿಗೆ ‘ಸವಿಜ್ಞಾನ’ದ ಬಗ್ಗೆ ತಿಳಿಸಿ.

ಡಾ. ಟಿ. ಎ. ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು


No comments:

Post a Comment