ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Wednesday, January 27, 2021

ಸಂಪಾದಕರ ಡೈರಿಯಿಂದ

 ವಿಜ್ಞಾನ ಶಿಕ್ಷಣ ಇಂದು ಸಂಕ್ರಮಣ ಸ್ಥಿತಿಯಲ್ಲಿದೆ. ಅದರಲ್ಲಿಯೂ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕಲಿಕೆಯನ್ನು ಆಸಕ್ತಿದಾಯಕವಾಗಿಸುವಲ್ಲಿ ಶಿಕ್ಷಕರ ಜವಾಬ್ದಾರಿ ಮಹತ್ತರವಾದುದು. ವಿದ್ಯಾರ್ಥಿಗಳ ಮನಸ್ಸನ್ನು ಅವಿಷ್ಕಾರಗಳ ಕಡೆಗೆ ಆಕರ್ಷಿಸುವ ರೀತಿಯ ಬೋಧನೆ ಅವಶ್ಯವಿದೆ. ವಿಜ್ಞಾನದ ಪರಿಕಲ್ಪನೆಗಳನ್ನು ಸರಳವಾಗಿ ಮತ್ತು ಸುಲಲಿತವಾಗಿ ಅವರಿಗೆ ತಲುಪಿಸಬೇಕಿದೆ. ಇದಕ್ಕೆ ಪೂರಕವಾಗಿ ವಿಜ್ಞಾನ ಶಿಕ್ಷಕರಾಗಿ ನಾವು ತಯಾರಾಗಬೇಕಿದೆ. ನಮ್ಮ ಜ್ಞಾನವನ್ನು ಪಠ್ಯಪುಸ್ತಕಗಳಿಗೇ ಸೀಮಿತಗೊಳಿಸಿಕೊಳ್ಳದೆ, ವಿಸ್ತರಿಸಿಕೊಳ್ಳಬೇಕಿದೆ. ಇಂದು ಅಂತರಜಾಲದ ಕೃಪೆಯಿಂದಾಗಿ ಮಾಹಿತಿಗಳಿಗೆ ಕೊರತೆಯಿಲ್ಲ. ಆದರೆ ಅದನ್ನು ಸೂಕ್ತವಾಗಿ ನಾವು ಬಳಸಿಕೊಳ್ಳಬೇಕಿದೆ. ತಂತ್ರಜ್ಞಾನವು ನೀಡಿರುವ ಸಾಧನಗಳನ್ನು ಬಳಸಿಕೊಂಡು ಈ ನಿಟ್ಟಿನಲ್ಲಿ ನೀವುಗಳು ಮಾಡುತ್ತಿರುವ ಪ್ರಯತ್ನಗಳಿಗೆ ಪೂರಕವಾದ ಒಂದು ಪ್ರಯತ್ನವೇ ಈ ‘ವಿಜ್ಞಾ’.

ಶಿಕ್ಷಣ ಕ್ಷೇತ್ರದಲ್ಲಿನ ನನ್ನ ಸೇವೆಯ 50ನೇ ವರ್ಷಕ್ಕೆ 2021ರಲ್ಲಿ ಕಾಲಿಡುತ್ತಿರುವ ಸಂದರ್ಭದಲ್ಲಿ ಪ್ರೌಢಶಾಲಾ ಹಂತದವರೆಗಿನ ವಿಜ್ಞಾನ ಶಿಕ್ಷಕರಿಗೆ, ಮತ್ತು ತನ್ಮೂಲಕ ವಿಜ್ಙಾನದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂಥ ಕೊಡುಗೆಯನ್ನೇನಾದರೂ ನೀಡಬೇಕೆಂಬ ವಿಚಾರ ನನ್ನಲ್ಲಿ ಮಡುಗಟ್ಟಿತ್ತು. ವಿಜ್ಞಾನ ವಿಷಯಗಳ ಮಂಥನಕ್ಕೆ ಸಂಬಂಧಿಸಿದಂತೆ ಇ-ಪತ್ರಿಕೆಯೊಂದನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಿದ್ದೆ. ನನ್ನ ಜೊತೆ ನಿರಂತರ ಸಂಪರ್ಕದಲ್ಲಿರುವ ಕೆಲವು ಉತ್ಸಾಹಿ ವಿಜ್ಞಾನ ಶಿಕ್ಷಕರ ಜೊತೆಗೆ ಸಮಾಲೋಚಿಸಿದಾಗ ಅವರಿಂದ ದೊರೆತ ಸಕಾರಾತ್ಮಕ ಪ್ರತಿಕ್ರಿಯೆ ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಕೂಡಲೇ ಕಾರ್ಯಪ್ರವೃತ್ತವಾದ ಆ ಶಿಕ್ಷಕರ ತಂಡ ಕೆಲವೇ ದಿನಗಳಲ್ಲಿ ನನ್ನ ಕನಸಿಗೆ ಒಂದು ಮೂರ್ತರೂಪ ಕೊಡುವಲ್ಲಿ ಯಶಸ್ವಿಯಾಯಿತು. ಅದರ ಫಲವೇ ಈಗ ನಿಮ್ಮ ಮುಂದಿರುವ ‘ಸವಿಜ್ಞಾನ’ ಎಂಬ ಬ್ಲಾಗ್.

ಕನ್ನಡ ಸಾಹಿತ್ಯದ ದಿಗ್ಗಜರಲ್ಲೊಬ್ಬರಾದ ಡಾ.ಡಿ.ವಿ.ಗುಂಡಪ್ಪ ತಮ್ಮ ‘ಮಂಕುತಿಮ್ಮನ ಕಗ್ಗ’ ಕೃತಿಯಲ್ಲಿ ಹೇಳಿರುವಂತೆ,
ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು |
ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮ |
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ |
ಜಸವು ಜನ ಜೀವನಕೆ ಮಂಕುತಿಮ್ಮ |

ಈ ಮೊದಲ ಸಂಚಿಕೆ ಒಂದು ರೀತಿಯಲ್ಲಿ ಪ್ರಾಯೋಗಿಕ ಸಂಚಿಕೆ. ಈ ಬಾರಿಯ ಸಂಚಿಕೆಯಲ್ಲಿ ಹಲವು ವಿಶಿಷ್ಟ ವಿಷಯಗಳ ಬಗ್ಗೆ ಲೇಖನಗಳಿವೆ. ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ಇಷ್ಟವಾದಲ್ಲಿ ಬೇರೆಯವರಿಗೂ ತಿಳಿಸಿ.

ಸವಿಜ್ಞಾನದ ಮುಂದಿನ ಸಂಚಿಕೆಗಳಲ್ಲಿ ವಿಜ್ಞಾನದ ಕುತೂಹಲಕಾರಿ ಅಂಶಗಳ ಜೊತೆಗೆ, ವಿವಿಧ ವಿಷಯಗಳ ಬಗ್ಗೆ ವಿಚಾರಪೂರಿತ ಲೇಖನಗಳು, ಭಾರತೀಯ ಮತ್ತು ವಿದೇಶಿ ವಿಜ್ಞಾನಿಗಳ ಪರಿಚಯ, ಅವರ ಜೀವನದಲ್ಲಿ ನಡೆದ ಪ್ರೇರಣಾದಾಯಕ ಘಟನೆಗಳು, ಮುಂತಾದ ಹಲವು ಆಯಾಮಗಳ ವೈವಿಧ್ಯಮಯ ಹೂರಣ ಇರಬೇಕೆಂಬುದು ನಮ್ಮ ಆಶಯ. ಸವಿಜ್ಙಾನದ ಮೂಲಕ ಸವಿಯಾದ ಜ್ಞಾನವನ್ನು ಪಸರಿಸುವ ನಮ್ಮ ಈ ವಿಜ್ಞಾನ ಪರಿಚಾರಿಕೆಯ ಕೆಲಸದಲ್ಲಿ ನೀವೂ ಸಹ ಭಾಗವಹಿಸಬಹುದು. ನಿಮ್ಮಲ್ಲಿರುವ ಕ್ರಿಯಾಶೀಲತೆಯನ್ನು ಪ್ರೇರೇಪಿಸುವಲ್ಲಿ ‘ಸವಿಜ್ಞಾನ’ ಯಶಸ್ವಿಯಾದರೆ, ನಮ್ಮ ಶ್ರಮ ಸಾರ್ಥಕ.

ಡಾ.ಟಿ.ಎ.ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು

Saturday, January 2, 2021

 ಸವಿಜ್ಞಾನ ಇ-ಪತ್ರಿಕೆಯ ಜನವರಿ - 2021ರ ಲೇಖನಗಳು

  1.  ಹೀಗೊಂದು ಯುದ್ಧ !!! - ಡಾ. ಟಿ.ಎ. ಬಾಲಕೃಷ್ಣ ಅಡಿಗ
  2.  ಉಗುಳಿನಲ್ಲಿ ಹೊರಳುವ ಜೀವ  !!! - ಶಶಿಕುಮಾರ್ ಬಿ.ಎಸ್.
  3.  ಸಮಸ್ತವನ್ನೂ ಅಲ್ಲಾಡಿಸಿಬಿಟ್ಟ ಗುಮಾಸ್ತ !!! - ರೋಹಿತ್ ವಿ ಸಾಗರ್
  4.  ಅಗೋಚರ ಅಡುಗೆ ಭಟ್ಟರು - ಲಕ್ಷ್ಮೀ ಪ್ರಸಾದ್ ನಾಯಕ್
  5.  ವಿಜ್ಞಾನಿಗಳ ಬದುಕಿನ ರಸನಿಮಿಷಗಳು - ರಾಮಚಂದ್ರ ಭಟ್ ಬಿ.ಜಿ.
  6. ಕಲಬುರ್ಗಿಯ ಸ್ಫೂರ್ತಿಯ ಬುರುಜು : ಸುರೇಖಾ ಜಗನ್ನಾಥ್ - ರಾಜೇಶ್ ಎಸ್ ನಾಗೂರೆ 
  7.  ವಿಜ್ಞಾನದ ಒಗಟುಗಳು - ವಿಜಯ್ ಕುಮಾರ್ ಹುತ್ತನಹಳ್ಳಿ 
  8.  ವ್ಯಂಗ್ಯಚಿತ್ರಗಳು : ವಿಜಯಕುಮಾರ್ ಮತ್ತು ಶ್ರೀಮತಿ ಬಿ. ಜಯಶ್ರೀ ಶರ್ಮ

ಹೀಗೊಂದು ಯುದ್ಧ !

ಹೀಗೊಂದು ಯುದ್ಧ !

ಲೇಖನ: ಡಾ.ಟಿ.ಎ.ಬಾಲಕೃಷ್ಣ ಅಡಿಗ

       ನಿವೃತ್ತ ಪ್ರಾಂಶುಪಾಲರು ಮತ್ತು ಜೀವಶಾಸ್ತ್ರ ಉಪನ್ಯಾಸಕರು

ಶತ್ರು ಪಡೆ ಆಗಮಿಸುತ್ತಿದೆ. ಮುಂದೆ ಇರುವ ಅದರ ಕಾವಲು ಪಡೆ ಒಂದೊಂದೇ ಹೆಜ್ಜೆ ಮುಂದಿಡುತ್ತಿದೆ. ವಿಶ್ವಾಸ ದ್ರೋಹ ಮತ್ತು ಮೋಸವೇ ಶತ್ರು ಪಡೆಯ ಮುಖ್ಯ ಗುರಿ. ಎದುರು ಕಡೆಯಿಂದ ಯಾವುದೇ ವಿರೋಧ ಕಾಣಿಸುತ್ತಿಲ್ಲ. ಇದರ ಪ್ರಯೋಜನ ಪಡೆದು ಗಡಿಯಲ್ಲಿ ಮುನ್ನುಗ್ಗುವ ಪ್ರಯತ್ನ ಶತ್ರು ಪಡೆಯಿಂದ ಪ್ರಾರಂಭವಾಗಿದೆ. ಅದು ದಾಳಿ ಮಾಡಬೇಕೆಂದಿರುವ ನೆಲದಲ್ಲಿ ಬಲವಾಗಿ ಬೇರೂರಿ, ಅಲ್ಲಿಂದ ವಿವಿಧ ತಾಣಗಳಿಗೆ ಹರಡಿ ಹೋಗುವ ಉದ್ದೇಶ ಕಂಡು ಬರುತ್ತಿದೆ.

ಉಗುಳಿನಲ್ಲಿ ಹೊರಳುವ ಜೀವ ! ! !

ಉಗುಳಿನಲ್ಲಿ ಹೊರಳುವ ಜೀವ ! ! !

ಲೇಖನ:        ಶಶಿಕುಮಾರ್ಬಿ.ಎಸ್.‌ 

.ಶಿ. ವಿಜ್ಞಾನ

ಸರ್ಕಾರಿ ಪ್ರೌಢಶಾಲೆಎಲೆಕ್ಯಾತನಹಳ್ಳಿ,

ನೆಲಮಂಗಲ ತಾಬೆಂಗಳೂರು ಗ್ರಾ,ಜಿಲ್ಲೆ


ನಾವಿನ್ನು ಚಿಕ್ಕ ಮಕ್ಕಳು ಬಹುಶಃ ನನಗೆ ಹತ್ತೋ-ಹನ್ನೆರಡೋ ವರ್ಷವಿರಬಹುದು. ದಸರಾ ರಜೆ ಬಂತೆಂದರೆ ಸಾಕು ಹೊಲದಲ್ಲಿ ಹೋಗಿ ಕೆಲಸ ಮಾಡಬೇಕಿತ್ತು. ದಿನಗಳಲ್ಲಿ ನಮ್ಮ ಹಳ್ಳಿಯ ಮನೆಯಲ್ಲಿ ದನಕರುಗಳನ್ನು ಸಾಕುತಿದ್ದೆವು. ಅವುಗಳ ರಾತ್ರಿ ಆಹಾರಕ್ಕೆ ಬೆಳಗ್ಗೆಯೇ ಬೇಗ ಎದ್ದು ಹುಲ್ಲು ಕೊಯ್ದು ಸಂಗ್ರಹ ಮಾಡಬೇಕಿತ್ತು.  ಅದಕ್ಕಾಗಿ ನಾವು ಹೊಲದ ಬದುಗಳಲ್ಲಿ ಹುಲ್ಲನ್ನು ಕೊಯ್ದು ಸಂಗ್ರಹಿಸುತ್ತಿದ್ದೆವು

ಸಮಸ್ತವನ್ನೂ ಅಲ್ಲಾಡಿಸಿಬಿಟ್ಟ ಗುಮಾಸ್ತ !!!

 ಸಮಸ್ತವನ್ನೂ ಅಲ್ಲಾಡಿಸಿಬಿಟ್ಟ ಗುಮಾಸ್ತ !!!

ಲೇಖನ:    ರೋಹಿತ್ ವಿ ಸಾಗರ್

ಪ್ರಾಂಶುಪಾಲರು, 

ಹೊಂಗಿರಣ ಸ್ವತಂತ್ರ ಪದವಿಪೂರ್ವ ಕಾಲೇಜು 

ಸಾಗರ 


ಇಪ್ಪತ್ತನೇ ಶತಮಾನದ ಆರಂಭದ ದಿನಗಳವು. ಸ್ವಿಟ್ಜರ್ಲ್ಯಾಂಡಿನ ಬರ್ನ್ ಎಂಬ ನಗರದಲ್ಲಿದ್ದ ಪೇಟೆಂಟ್ ಕಛೇರಿಯಲ್ಲಿ 23ರ ಹರಯದ ಸ್ಪುರದ್ರೂಪಿ ತರುಣನೊಬ್ಬ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿದ್ದ. ಆತನ ಕೆಲಸ ಪೇಟೆಂಟ್ಗೆಂದು ಬಂದಿದ್ದ ಅರ್ಜಿಗಳನ್ನು ಪರಿಶೀಲಿಸುವುದು. ಮೂಲತ: ಜರ್ಮನಿಯವನಾದ ಈತ ಜನಿಸಿದ್ದು 1879ರ ಮಾರ್ಚ್ 14ರಂದು. ಹೇಮನ್ ಮತ್ತು ಪೌಲಿನ್ ಎಂಬ ಯಹೂದಿ ದಂಪತಿಗಳಿಗೆ ಚಿಕ್ಕಂದಿನಿಂದಲೂ ಮಂದಮತಿಯಂತೆಯೇ ಇರುತ್ತಿದ್ದ ಈತ ಮಾತನಾಡಲು ಶುರುಮಾಡಿದ್ದೇ ಮೂರು ವರ್ಷಗಳ ನಂತರ. ವಯಸ್ಸು ಐದು ದಾಟಿದಾಗ ಆತ ತಾಯಿಯಿಂದ ವಯೋಲಿನ್ ಬಾರಿಸುವುದನ್ನು ಚೆನ್ನಾಗಿ ಕಲಿತುಕೊಂಡ. ಆ ಸದ್ದು ಮಲಗಿದ ಆತನ ಬುದ್ಧಿಮತ್ತೆಯನ್ನು ಬಡಿದೆಬ್ಬಿಸಿತೋ ಏನೋ, ಅಲ್ಲಿಂದ ಮುಂದೆ ಆತ ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಗಳ ಸಾಲಿನಲ್ಲಿ ಗುರುತಿಸಲ್ಪಟ್ಟ. ರೇಖಾಗಣಿತ ಮತ್ತು ಭೌತಶಾಸ್ತ್ರಗಳು ಅವನ ನೆಚ್ಚಿನ ಆಯ್ಕೆಯ ವಿಷಯಗಳಾದವು. ಆ ಚಿಕ್ಕ ವಯಸ್ಸಿನಲ್ಲೇ ಹಲವು ಕ್ಲಿಷ್ಟ ವಿಷಯಗಳ ಪುಸ್ತಕಗಳನ್ನು ಓದಿ ಜೀರ್ಣಿಸಿಕೊಂಡ. ಈತ, ಮುಂದೆ ಜಗತ್ತಿಗೇ ಅಜೀರ್ಣವಾಗುವಷ್ಟು ಸಂಶೋಧನೆಗಳನ್ನು ಸಾಲು ಸಾಲಾಗಿ ನಿಲ್ಲಿಸಿಬಿಟ್ಟ. ಸಮಸ್ತ ವಿಶ್ವದ ಎಲ್ಲಾ ವೈಜ್ಞಾನಿಕ ಚಿಂತನೆಗಳನ್ನೇ ಅಲುಗಾಡಿಸಿದ ಆ ಗುಮಾಸ್ತನೇ 1921ರ ನೋಬೆಲ್ ಪ್ರಶಸ್ತಿ ಪುರಸ್ಕ್ರತ ಆಲ್ಬರ್ಟ್ ಐನ್ಸ್ಟೈನ್.

Friday, January 1, 2021

ಅಗೋಚರ ಅಡುಗೆ ಭಟ್ಟರು

ಅಗೋಚರ ಅಡುಗೆ ಭಟ್ಟರು

ಲೇಖನ :     ಲಕ್ಷ್ಮೀ ಪ್ರಸಾದ್ ನಾಯಕ್

ಸಹ ಶಿಕ್ಷಕರು (ವಿಜ್ಞಾನ)

ಸರ್ಕಾರಿ ಪ್ರೌಢಶಾಲೆ (ಆರ್.ಎಂ.ಎಸ್.ಕನ್ನಡ)

ಕೆಂಗೇರಿ

ಬೆಂಗಳೂರು.



ಬಿಡದಿಗೆ ಹೋದರೆ ತಟ್ಟೆ ಇಡ್ಲಿ ತಿನ್ನುವುದು ಮರೀಬೇಡಿ. ಮದ್ದೂರಿನ ಟಿ.ಬಿ ಸರ್ಕಲ್ ನಲ್ಲಿ ಇರುವ ದೋಸೆ ರಾಮಣ್ಣನ ಹೋಟೆಲಿನ ದೋಸೆ ತಿಂದೆ ನಾವು ಮೈಸೂರಿಗೆ ಹೋಗೋದು ಎಂದೆಲ್ಲ ಹೇಳುವುದನ್ನು ನೀವು ಕೇಳಿಯೇ ಇದ್ದೀರಿ. ನಮ್ಮೂರಿನ ಜಗನ್ಮೋಹನ್ ಹೋಟೆಲ್‌ನ ಗೋಳಿಬಜೆ, ಬನ್ಸ್ ರುಚಿ ಇನ್ನೂ ನನ್ನ ನಾಲಿಗೆಯ ಮೇಲೆ ಇದೆ.  ಈ ತಿಂಡಿಗಳೇ ಹಾಗೆ ಅದು ಇಡ್ಲಿ ಆಗಿರಬಹುದು, ದೋಸೆಯಾಗಿರಬಹುದು, ಗೋಳಿಬಜೆ, ಬನ್ಸ್ ಆಗಿರಬಹುದು, ತಮ್ಮ ವಿಶಿಷ್ಟ ಸ್ವಾದದಿಂದ ಮೈಮನವನ್ನೆಲ್ಲ ಆವರಿಸಿಬಿಡುತ್ತವೆ. ಇವುಗಳನ್ನು ತಯಾರಿಸುವ ಸರಿಯಾದ ಹದ ಸಿಕ್ಕರಂತೂ ಅವುಗಳ ಸ್ವಾದ ನೂರ್ಮಡಿಸುತ್ತದೆ. ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದ ನಾನು ಪದೇ ಪದೇ ನೆನಪು ಮಾಡಿಕೊಳ್ಳುತ್ತಿದ್ದದ್ದು ಇಂತಹ ತಿಂಡಿಗಳನ್ನೇ. ನಮ್ಮೂರಿನ ಯಾವುದೇ ಹೋಟೆಲ್‌ಗೆ ಕಾಲಿಟ್ಟರೂ ಇಡ್ಲಿ ದೋಸೆ ಹಿಟ್ಟುಗಳ ಘಮ ನಮ್ಮನ್ನಾವರಿಸುತ್ತದೆ.  ಈ ಘಮ ನಮ್ಮನಾಸಿಕವನ್ನರಳಿಸಿ  ನಾಲಿಗೆಯ ರುಚಿ ಮೊಗ್ಗುಗಳನ್ನು ಕೆರಳಿಸುತ್ತವೆ. ನಮಗೆ ಉಪ್ಪಿನಕಾಯಿ, ಮೊಸರು ಮುಂತಾದವುಗಳು ಪ್ರಿಯವಾಗಲು ಇಂಥ ವಿಶಿಷ್ಟ ಸುವಾಸನೆಯೇ ಕಾರಣ. ಇದೇಕೆ ಹೀಗೆ ಎಂದು ಎಂದಾದರೂ ಯೋಚಿಸಿದ್ದೀರಾ? ಅಪರೂಪಕ್ಕೆ ಊರಿಗೆ ಬರುತ್ತಿದ್ದ ಮಾವ ಅಮ್ಮ ಮನೆಯಲ್ಲಿ ಮಾಡುತ್ತಿದ್ದ ಗೋಳಿಬಜೆ, ಬನ್ಸ್ ಗಳನ್ನು ತಿಂದು ಮನುಷ್ಯ ಮಾತ್ರರಿಂದ ಇಂಥ ರುಚಿ ಸಾಧ್ಯವಿಲ್ಲ ಎಂದು ಶಭಾಷ್ ಗಿರಿ ಕೊಡುತ್ತಿದ್ದರ ಹಿಂದೆ ಏನಾದರೂ ನಿಗೂಡವಿದೆಯೇ ಎಂದು ಚಿಕ್ಕಂದಿನಲ್ಲಿ ಕಣ್ಣರಳಿಸಿದ ನನ್ನ ಕುತೂಹಲ ತಣಿದ್ದಿದ್ದು ನಾನು ಪ್ರೌಢಶಾಲೆಗೆ ಕಾಲಿರಿಸಿದಾಗ. ಮನುಷ್ಯ ಮಾತ್ರರಿಂದ ಇಂಥ ರುಚಿ ಸಾಧ್ಯವಿಲ್ಲ ಎಂದ ನಮ್ಮ ಮಾವನ ಮಾತು ನೂರಕ್ಕೆ ನೂರರಷ್ಟು ಸತ್ಯ . ಈ ತಿಂಡಿಗಳ ವಿಶಿಷ್ಟ ಸ್ವಾದದ ಹಿಂದೆ ಬರಿಗಣ್ಣಿಗೆ ಕಾಣದ ಜೀವಿಗಳ ಕೈವಾಡವಿದೆ ಅವುಗಳನ್ನು ನಾವು ಸೂಕ್ಷ್ಮಜೀವಿಗಳು (Microorganisms) ಎನ್ನುತ್ತೇವೆ. ಇವುಗಳೇ ಮೇಲೆ ಹೇಳಿದ ತಿಂಡಿಗಳ ರುಚಿವರ್ಧಕಗಳು. ಅವುಗಳನ್ನು ಅಗೋಚರ ಅಡುಗೆ ಭಟ್ಟರು ಎಂದಿದ್ದೇನೆ. ಬನ್ನಿ ಕೊಂಚ ವಿಸ್ತಾರವಾಗಿ ತಿಳಿದುಕೊಳ್ಳೋಣ .



ಚಿತ್ರ 1. ನಮ್ಮೂರಿನ ರುಚಿಕರ ತಿಂಡಿಗಳು

ವಿಜ್ಞಾನಿಗಳ ಬದುಕಿನ ರಸನಿಮಿಷಗಳು

 ವಿಜ್ಞಾನಿಗಳ ಬದುಕಿನ ರಸನಿಮಿಷಗಳು


ಲೇಖಕರು:    ರಾಮಚಂದ್ರ ಭಟ್ ಬಿ.ಜಿ.
ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ, ಬ್ಯಾಟರಾಯನಪುರ,
ಮೈಸೂರು  ರಸ್ತೆ, ಬೆಂಗಳೂರು

 



ಆಚೆ ಮನೆಯ ಸುಬ್ಬಮ್ಮನಿಗೆ
ಏಕಾದಶಿ ಉಪವಾಸ |
ಎಲ್ಲೊ ಸ್ವಲ್ಪ ತಿಂತಾರಷ್ಟೇ
ಉಪ್ಪಿಟ್ಟು ಅವಲಕ್ಕಿ ಪಾಯಸ ||

.

ವಿಜ್ಞಾನಿಗಳ ಬದುಕಿನ ಬಗ್ಗೆ ಹೇಳ ಹೊರಟವನು ಹೀಗೆ ದಾರಿ ತಪ್ಪಿದೆ ಎಂದು ಅಂದುಕೊಂಡಿರಾ?  ಬಾಲ್ಯದ  ನೆನಪಾಯ್ತೇ ?  ವಿಜ್ಞಾನಕ್ಕೂ, ವಿಜ್ಞಾನಿಗಳ ಬದುಕಿಗೂ ಬಾಲ್ಯದಲ್ಲಿ ಹಾಡುತ್ತಾ ಕುಣಿದ ಈ ಹಾಡಿಗೂ ಏನು ಸಂಬಂಧ? ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ? ಅಂತ ಯೋಚಿಸುತ್ತಿದ್ದೀರಾ?

ಕಲಬುರಗಿಯ ಸ್ಫೂರ್ತಿಯ ಬುರುಜು - ರಾಷ್ಟ್ರಪ್ರಶಸ್ತಿ ವಿಜೇತೆ-ಸುರೇಖಾ ಜಗನ್ನಾಥ್

ಕಲಬುರಗಿಯ ಸ್ಫೂರ್ತಿಯ ಬುರುಜು - ರಾಷ್ಟ್ರಪ್ರಶಸ್ತಿ ವಿಜೇತೆ-ಸುರೇಖಾ ಜಗನ್ನಾಥ್

ಮಾಹಿತಿ : ರಾಜೇಶ್ ಎಸ್. ನಾಗೂರೆ

        ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕಲಗುರ್ತಿ, 

        ಚಿತ್ತಾಪುರ ತಾಲ್ಲೂಕು ಕಲಬುರಗಿ ಜಿಲ್ಲೆ.


ಕೇಂದ್ರ ಸರ್ಕಾರದಿಂದ ಶಿಕ್ಷಕರ ದಿನಾಚರಣೆಯಂದು ನೀಡಲಾಗುವ    ಬಾರಿಯ ಅತ್ಯುತ್ತಮ ಶಿಕ್ಷಕ   ರಾಷ್ಟ್ರ   ಪ್ರಶಸ್ತಿಗೆ  (2020)  ಪಾತ್ರರಾದ ಕರ್ನಾಟಕದ ಇಬ್ಬರು ಶಿಕ್ಷಕರಲ್ಲಿ ವಿಜ್ಞಾನ ಶಿಕ್ಷಕಿ ಸುರೇಖಾ ಜಗನ್ನಾಥ್ ಒಬ್ಬರು. ಪ್ರಸ್ತುತ ಅವರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಎಂಬ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.