ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Saturday, January 2, 2021

ಉಗುಳಿನಲ್ಲಿ ಹೊರಳುವ ಜೀವ ! ! !

ಉಗುಳಿನಲ್ಲಿ ಹೊರಳುವ ಜೀವ ! ! !

ಲೇಖನ:        ಶಶಿಕುಮಾರ್ಬಿ.ಎಸ್.‌ 

.ಶಿ. ವಿಜ್ಞಾನ

ಸರ್ಕಾರಿ ಪ್ರೌಢಶಾಲೆಎಲೆಕ್ಯಾತನಹಳ್ಳಿ,

ನೆಲಮಂಗಲ ತಾಬೆಂಗಳೂರು ಗ್ರಾ,ಜಿಲ್ಲೆ


ನಾವಿನ್ನು ಚಿಕ್ಕ ಮಕ್ಕಳು ಬಹುಶಃ ನನಗೆ ಹತ್ತೋ-ಹನ್ನೆರಡೋ ವರ್ಷವಿರಬಹುದು. ದಸರಾ ರಜೆ ಬಂತೆಂದರೆ ಸಾಕು ಹೊಲದಲ್ಲಿ ಹೋಗಿ ಕೆಲಸ ಮಾಡಬೇಕಿತ್ತು. ದಿನಗಳಲ್ಲಿ ನಮ್ಮ ಹಳ್ಳಿಯ ಮನೆಯಲ್ಲಿ ದನಕರುಗಳನ್ನು ಸಾಕುತಿದ್ದೆವು. ಅವುಗಳ ರಾತ್ರಿ ಆಹಾರಕ್ಕೆ ಬೆಳಗ್ಗೆಯೇ ಬೇಗ ಎದ್ದು ಹುಲ್ಲು ಕೊಯ್ದು ಸಂಗ್ರಹ ಮಾಡಬೇಕಿತ್ತು.  ಅದಕ್ಕಾಗಿ ನಾವು ಹೊಲದ ಬದುಗಳಲ್ಲಿ ಹುಲ್ಲನ್ನು ಕೊಯ್ದು ಸಂಗ್ರಹಿಸುತ್ತಿದ್ದೆವು


ಸಾಮಾನ್ಯವಾಗಿ
ಅಕ್ಟೋಬರ್‌ - ನವೆಂಬರ್ತಿಂಗಳೆಂದರೆ ಹೆಚ್ಚು ಇಬ್ಬನಿ ಬೀಳುವ ತಿಂಗಳುಗಳು. ಬೆಳಗ್ಗೆ ಬೇಗ ಎದ್ದು ಹುಲ್ಲು ಕೊಯ್ಯಲು ಹೊಲದ ಬದುಗಳಲ್ಲಿ ನೋಡಿದಾಗ ಅಲ್ಲಲ್ಲೇ ಯಾರೋ ಉಗುಳಿದಂತಹ ಎಂಜಲಿನ (ಲಾಲಾರಸ) ತರಹದ ವಸ್ತು.  ನಾವದನ್ನು ಅಸಹ್ಯ ಪಟ್ಟುಕೊಂಡು ಕುಡುಗೋಲಿನಲ್ಲಿ ಪಕ್ಕಕ್ಕೆ ಸರಿಸಿ ತುಂಬಾ ಬೇಜಾರಾಗಿ ಹುಲ್ಲು ಕೊಯ್ದುಕೊಂಡು ಬರುತ್ತಿದ್ದೆವು
ಅದನ್ನು ನೋಡಿದ ಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುತ್ತಿದ್ದುದು ನಮಗಿಂತ ಮುಂಚೆ ಯಾರೋ ಬದುಗಳಲ್ಲಿ ನಡೆದು ಹೋಗುವಾಗ ಉಗುಳುವ ಕೆಲಸ ಮಾಡಿದ್ದಾರೆ ಎಂದು, ಕ್ಷಣದಲ್ಲಿ ಅವರನ್ನು ಮನಸ್ಸಿನಲ್ಲಿ ಬೈದು ಕೊಂಡಿದ್ದು ಉಂಟು. ಹೊಲಕ್ಕೆ ಭೇಟಿ ನೀಡಿದಾಗಲೆಲ್ಲ ಅದನ್ನು ನೋಡಿ ಅಸಹ್ಯ ಎನಿಸುತಿತ್ತು.  ಆದರೂ ಅದೇನೋ ನಮಗೆ ಅದರ ನಿಜ ಸಂಗತಿ ತಿಳಿಯಲಿಲ್ಲ. ಹಿರಿಯರನ್ನು ಕೇಳಿದಾಗ ಅವರೂ ಸಹ ಯಾರೋ ಉಗುಳಿರಬಹುದೆಂದೇ ಹೇಳುತ್ತಿದ್ದರು

ಆದರೇ ನಿಗೂಢ ರಹಸ್ಯವನ್ನು ಬಯಲು ಮಾಡಿದ್ದು ನಮ್ಮ ಸ್ನೇಹಿತರಾದ ಶ್ರೀಯುತ ಪ್ರಸನ್ನ ಸರ್ರವರು. ಕಳೆದ ಮೂರು ವರ್ಷಗಳ ಹಿಂದೆ. ದಿನ ನಾವು ಜೀವ ವೈವಿದ್ಯತೆಯನ್ನು ಮಕ್ಕಳಿಗೆ ಅರ್ಥೈಸಲು ಕಲಿಸಬಹುದಾದ ಕೆಲವು ಪ್ರಕ್ರಿಯೆಗಳನ್ನು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದ ಸಮಯ.
ಮೈಸೂರಿನ ಆರ್‌.ಟಿ.ಟಿ.ಸಿ. ಕೇಂದ್ರದಲ್ಲಿ ನಮ್ಮ ತಂಡ ಒಂದು ನಿರ್ದಿಷ್ಟ ಸ್ಥಳದಲ್ಲಿ ಕಂಡುಬರುವ ಜೀವ ವೈವಿಧ್ಯತೆಯನ್ನು ಪಟ್ಟಿಮಾಡುವಾಗ, ಒಂದು ಸಸ್ಯದ ಕಾಂಡದಲ್ಲಿ 

ಅಕಸ್ಮಾತಾಗಿ ಪನಃ ಉಗುಳು ನನ್ನ ಕಣ್ಣಿಗೆ ಬಿತ್ತು . ಅದನ್ನು ನೋಡಿ ಅಸಹ್ಯ ಪಟ್ಟುಕೊಳ್ಳುತ್ತಿದ್ದ ನನಗೆ, ಅದರ ಶಿಕ್ಷಣ ನೀಡಿದ್ದು ಪ್ರಸನ್ನ ಸರ್‌, ಅವರು ಮೊದಲು ಹೇಳಿದ್ದು ಶಶಿ ಸರ್ಒಂದು ಚಿಕ್ಕ ಕಡ್ಡಿ ತಗೊಂಡು ಉಗುಳನ್ನು ನಿಧಾನವಾಗಿ ಸರಿಸಿ ನೋಡಿ ಎಂದು. ಕೂಡಲೇ ಒಂದು ಚಿಕ್ಕ ಕಡ್ಡಿ ತೆಗೆದುಕೊಂಡು ಉಗುಳನ್ನು ಸರಿಸಿ ನೋಡಿದರೆ!!! ಉಗುಳಿನ ಕೋಟೆಯಲ್ಲಿ ಅವಿತು ಕುಳಿತಿದ್ದ ಕೀಟ. ಆಗ ಪ್ರಸನ್ನ ಸರ್ಗೆ ಧನ್ಯವಾದ ಹೇಳಿ, ಗೂಗಲ್ಮಾಡಿ ನೋಡಿದರೇ ಉಗುಳು ಕೀಟದ ಬಗ್ಗೆ ಪುಟಗಟ್ಟಲೆ ಸಾಹಿತ್ಯ.

ನನಗೆ ಚಿಕ್ಕಂದಿನಲ್ಲಿ ಮೂಡಿದ ಪ್ರಶ್ನೆಗೆ ಅಂದು ನನಗೆ ಉತ್ತರ ದೊರಕಿತು. ನಂತರದಲ್ಲಿ ನಮ್ಮ ತಂಡ ವಿಜ್ಞಾನದ ತರಬೇತಿ ನೀಡುವಾಗ ಜೀವವೈವಿಧ್ಯತೆ ಅಥವಾ ಪರಿಸರ ವಿಜ್ಞಾನ ಪರಿಕಲ್ಪನೆ ಸಂದರ್ಭದಲ್ಲಿ ಕೀಟದ ಪರಿಚಯವಂತೂ ಮಾಡಿಯೇ ತೀರುತ್ತೇವೆ.

ಉಗುಳು ಕೀಟಗಳು ಇತರೆ ಕೀಟಗಳಿಂದ ಅಥವಾ ಪಕ್ಷಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲೋ ಅಥವಾ ಆಹಾರ ಪಡೆಯಲು ಸಸ್ಯದ ಎಲೆಗಳನ್ನು ನಯವಾಗಿಸಲೋ ಅಥವಾ ಉಗುಳಿನೊಳಗೆ ಸಿಲುಕಿಕೊಂಡ ಇತರೆ ಕೀಟಗಳನ್ನು ಹಿಡಿದು ತಿನ್ನಲೆಂದೋ,  ತಮ್ಮ ದೇಹದಲ್ಲಿನ ದ್ರವವನ್ನು ಹೊರಗೆ ಸೂಸಿ, ಉಗುಳಿನ ಕೋಟೆ ಕಟ್ಟಿಕೊಂಡು ಎಲೆಗಳ ತುದಿಯಲ್ಲಿಯೋ ಅಥವಾ ಕಾಂಡದ ಬುಡದಲ್ಲಿಯೋ ಜೋತು ಬಿದ್ದಿರುತ್ತವೆ ಎಂದು ಭಾವಿಸೋಣ. ಆದರೆ ನಿಜ ಸಂಗತಿ ಕೀಟಕ್ಕೆ ಮಾತ್ರ ಗೊತ್ತು ತಾನೇಕೆ ಉಗುಳಿನ ಕೋಟೆ ಕಟ್ಟಿಕೊಂಡಿದ್ದೇನೆ ಎಂದು. ಅದರ ಪರಿಚಯವನ್ನೀಗ ಮಾಡಿಕೊಳ್ಳೋಣ.

ಉಗುಳು ಕೀಟ: ಆಂಗ್ಲ ಭಾಷೆಯಲ್ಲಿ ಇದನ್ನು Spittle bug ಎಂದು ಕರೆಯಲಾಗುತ್ತದೆ. ಇವುಗಳನ್ನು frog hoppers ಎಂದೂ ಕರೆಯುವುದುಂಟು.

ಉಗುಳು ಕೀಟಗಳು ಶೈಶವಾವಸ್ಥೆಯಿಂದ ಬೆಳೆದು ಪ್ರೌಢಕೀಟವಾಗುವ ಸಂದರ್ಭದಲ್ಲಿ ಉಗುಳನ್ನು ತನ್ನ ಗುದದ್ವಾರದ ಮೂಲಕ ಹೊರ ಸೂಸುತ್ತವೆ. ಉಗುಳಿನ ಕೋಟೆ ಕಟ್ಟಲು ಅದು ಸಸ್ಯದ ಕಾಂಡದ ಮೇಲಿರುವ ಇಬ್ಬನಿ ನೀರನ್ನು ಇಲ್ಲವೇ ಸಸ್ಯಕಾಂಡ ಕೊರೆದು ಕ್ಸೈಲಂ ಅಂಗಾಂಶದ ನಳಿಕೆಗಳಲ್ಲಿರುವ  ನೀರನ್ನು ಹೀರುತ್ತವೆ. ಗುದದ್ವಾರದಿಂದ ಬಂದ ಇದರ ಮೂತ್ರವು ವಾತಾವರಣದಲ್ಲಿನ ಗಾಳಿಯೊಂದಿಗೆ ಬೆರೆತು ಗುಳ್ಳೆಗಳಾಗಿ ಕೀಟದ ಸುತ್ತ ಉಗುಳಿನ ಕೋಟೆಯಾಗಿ ಆಕ್ರಮಿಸುತ್ತದೆ. ಬಿಸಿಲಿನ ತಾಪ ಹೆಚ್ಚಿದಂತೆ ನೀರಿನಂತಹ ವಸ್ತು ಗಿಡದಿಂದ ಕೆಳಗೆ ಸರಿಯುತ್ತದೆ. ಕಾರಣದಿಂದಾಗಿಯೇ ಕೀಟವನ್ನು ಉಗುಳು ಕೀಟ ಅಥವಾ Spittle bug ಎಂದು ಕರೆಯಲಾಗಿದೆ.

ಕೀಟವನ್ನು frog hoppers ಎಂದೂ ಕರೆಯಲಾಗಿದೆ. ಇದಕ್ಕೆ ಕಾರಣ ಸೂರ್ಯನ ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ಕೀಟದ ಸುತ್ತ ಇರುವ ನೀರಿಂತಹ ವಸ್ತುವೆಲ್ಲಾ ಆವಿಯಾಗಿ ಅಥವಾ ಕರಗಿ ಗಿಡದಿಂದ ಕೆಳಗೆ ಸರಿಯುತ್ತದೆ. ಸಂದರ್ಭದಲ್ಲಿ ಕೀಟಗಳು ಎಲೆಯ ಮರೆಯಲ್ಲಿಯೇ ಇದ್ದು ಪ್ರೌಢಾವಸ್ತೆಯನ್ನು ತಲುಪುತ್ತವೆ. ನಂತರ ಬೆಳೆದು ಪ್ರೌಢಹಂತ ತಲುಪಿದಾಗ ಇವು ಎಲೆಯಿಂದ ಎಲೆಗೆ ಅಥವಾ ಗಿಡದಿಂದ ಗಿಡಕ್ಕೆ ಕಪ್ಪೆಯಂತೆ ನೆಗೆಯುತ್ತವೆ. ಕಾರಣದಿಂದಲೇ ಇದನ್ನು frog hopper ಎಂದು ಕರೆಯಲಾಗಿದೆ.

ಕೀಟ ಉಗುಳುವ ಹಾಗೂ ಕಪ್ಪೆಯಂತೆ ನೆಗೆಯುವ ವಿಡಿಯೋದ QR-code ಕೊಡಲಾಗಿದೆ ವೀಕ್ಷಿಸಿ.

ಕೀಟದ ಬಗ್ಗೆ  ಇನ್ನೂ ಹೆಚ್ಚಿನ  ಮಾಹಿತಿ ಬೇಕೆಂದರೆ ಕೆಳಗಿನ ಲಿಂಕ್ಅನ್ನು ಕ್ಲಿಕ್ಮಾಡಿ. https://en.wikipedia.org/wiki/Froghopper

ರೀತಿಯ ವಿಶೇಷವಾದ ಕೀಟ ಅಥವಾ ಸಸ್ಯ , ಅಥವಾ ಇನ್ನಾವುದೇ ವೈಜ್ಷಾನಿಕ ಮಾಹಿತಿ ಇದ್ದರೆ ನಮ್ಮ ಬ್ಲಾಗ್ನಲ್ಲಿ ಹಂಚಿಕೊಳ್ಳಿ.

***

ಈ ಲೇಖನದ PDF ಆವೃತ್ತಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ


33 comments:

  1. ಅತ್ಯುತ್ತಮ ಬರಹ

    ReplyDelete
  2. ಇದೊಂದು ವಿಶೇಷವಾದ ಮಾಹಿತಿ ಇರುವ ಬರಹ.
    ಶಿವಪ್ರಕಾಶ್

    ReplyDelete
  3. super. very informative....
    i had also wondered about it as a kid.....

    ReplyDelete
  4. Very nice information and highly committed teacher hats off to u sir

    ReplyDelete
  5. ಉತ್ತಮ ಲೇಖನ ಸರ್

    ReplyDelete
  6. Opened the nature door for every one....good article...nice

    ReplyDelete
  7. ಉತ್ತಮ ಲೇಖನ ಸರ್

    ReplyDelete
  8. ವಿಶಿಷ್ಟವಾದ ಲೇಖನ ಸರ್

    ReplyDelete
  9. Very nice article sir. Thank you for sharing

    ReplyDelete
  10. Very nice informative article sir. Thank you for sharing

    ReplyDelete
  11. A really good article. Got to know a lot. Keep going. All the best!!!!

    ReplyDelete
  12. ನಮ್ಮ ಬಾಲ್ಯದ ಕೌತುಕಕ್ಕೆ ಉತ್ತರ ಸಿಕ ಒಳ್ಳೆಯ ಸಚಿತ್ರ ಲೇಖನ... ನಿಮ್ಮ ಮೊದಲ ಹೆಜ್ಜೆ ಚನ್ನಾಗಿದೆ.. ಜೀವವೈವಿಧ್ಯ ಮಾಲಿಕೆಯಲ್ಲಿ ನಮ್ಮ ನಡುವೆಯಲ್ಲಿ ಬದುಕುತ್ತಿರುವ ಜೇವಿಗಳ ಪರಿಚಯ ಪರಿಚಯ ಈ ಪತ್ರಿಕೆ ಮೂಲಕ ಮೂಡಲಿ..... ಭಾಷೆ ಬರಹಮೂಲಕ ನಿಮ್ಮ ಅಕ್ಷರ ಪ್ರೇಮ ವನ್ನು ಋಜುವತು ಮಾಡಿದ್ದೀರಾ... ಶಶಿ ಸರ್.... ಹೃದ್ಯ ನಮನ

    ReplyDelete
  13. You are doing excellent and innovative work sir, it will help to all science teachers and students to get more information.

    ReplyDelete
  14. Good article by experience.. Congratulations sir

    ReplyDelete
  15. Very nicely written sir, thanks.
    I had a curiosity ,can this blog be read in English language? Any provision ?

    ReplyDelete
  16. ಒಬ್ಬ ಶಿಕ್ಷಕ ಏನೆಲ್ಲ ಮಾಡಬಲ್ಲ ಎಂಬುದಕ್ಕೆ ಉತ್ತಮ ಉದಾಹರಣೆ ನಮ್ಮ ಶಶಿಕುಮಾರ್. ನಿಮ್ಮ ಕ್ರಿಯಾಶೀಲತೆ ಇತರರಿಗೆ ಮಾದರಿ. ‌ಇನ್ನಷ್ಟು, ಮತ್ತಷ್ಟು ಲೇಖನಗಳು ನಿಮ್ಮ ಲೇಖನಿಯಿಂದ ಮೂಡಿಬರಲಿ ಎಂದು ಹಾರೈಸುವೆ.

    ReplyDelete