ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, November 4, 2022

ಸಂಪಾದಕರ ಡೈರಿಯಿಂದ .....

 

ಸಂಪಾದಕರ ಡೈರಿಯಿಂದ .....

    ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಡಗರ ಮುಗಿಯುತ್ತಲೇ ಕನ್ನಡ ನಾಡು ನುಡಿಯ ಜಾಗೃತಿ ಮೂಡಿಸುವ ಕನ್ನಡದ ಹಬ್ಬದ ಸಡಗರವೋ ಸಡಗರ. ಕೋಟಿಕಂಠ ಗಾಯನದೊಡನೆ ರಾಜ್ಯೋತ್ಸವಕ್ಕೆ ಅಣಿಯಾಗಿದ್ದೇವೆ.  


ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು ||

ಕಾಮನ ಬಿಲ್ಲನು ಕಾಣುವ ಕವಿಯೊಳು ತೆಕ್ಕನೆ ಮನ ಮೈ ಮರೆಯುವುದು….” 

                                ರಸಋಷಿಯ ಅಮರಗೀತವು ಹೊಸ ಹುರುಪನ್ನು ತುಂಬುತ್ತಿರುವ ಈ ಸುಸಂದರ್ಭದಲ್ಲಿ ‘ಸವಿಜ್ಞಾನ’ ತಂಡದ ಎಲ್ಲ ಸದಸ್ಯರಿಗೆ, ಸಹೃದಯಿ ಲೇಖಕರಿಗೆ ‘ ಹಾಗೂ ಅಭಿಮಾನಿ ಓದುಗರಿಗೆ ನಮ್ಮ ಶುಭ ಹಾರೈಕೆಗಳು.  ನಮ್ಮನಾಡಹಬ್ಬದ ಸಂಭ್ರಮದ ವಾತಾವರಣದ ಮಧ್ಯೆ ನಿಮ್ಮ ಮಿದುಳಿಗೆ, ಮನಸ್ಸಿಗೆ ಕೊಂಚ ಮುದ ನೀಡಲು ‘ಸವಿಜ್ಞಾನ’ದ ನವಂಬರ್‌ ತಿಂಗಳ ಸಂಚಿಕೆ ನಿಮ್ಮ ಮುಂದಿದೆ.                                                                                                         

ಈ ಸಂಚಿಕೆಯ ಪ್ರಮುಖ ಆಕರ್ಷಣೆಯಾಗಿ,  ಭಾರತದ ಮೊದಲ ಪ್ರನಾಳ ಶಿಶುವಿನ ಸೃಷ್ಟಿಕರ್ತ ಡಾ. ಸುಭಾಶ್ ಮುಖ್ಯೋಪಾಧ್ಯಾಯ ನೊಬೆಲ್ ಪ್ರಶಸ್ತಿಯಿಂದ ವಂಚಿತರಾದ ದುರಂತ ಕಥೆಯ ಮುಂದುವರೆದ ಭಾಗದಲ್ಲಿ ಅವರಿಗಾದ ಅನ್ಯಾಯಕ್ಕೆ ಪ್ರಾಯಶ್ಚಿತ್ತ ಮಾಡಿದ ಮಾಹಿತಿಯನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ, ಡಾ.ಎಂ.ಜೆ.ಸುಂದರರಾಮ್ ಅವರು. " ಹೆತ್ತworryಗೆ ಹೆಗ್ಗಣ ಮುದ್ದು" ಶೀರ್ಷಿಕೆಯಲ್ಲಿ ಜೀವ ಪ್ರಪಂಚದ ಅಚ್ಚರಿಗಳನ್ನು ಅನಾವರಣಗೊಳಿಸಿದ್ದಾರೆ ಸವಿಜ್ಞಾನದ ಪ್ರಧಾನ ಸಂಪಾದಕರಾದ  ಡಾ. ಟಿ.ಎ. ಬಾಲಕೃಷ್ಣ ಅಡಿಗ ಅವರು, ಪರಮಾಣುಗಳ ಬಗ್ಗೆ ಪ್ರಾಚೀನ ಭಾರತದ ಚಿಂತನೆಯಾದ ವೈಶೇಷಿಕ ದರ್ಶನದ ಕುರಿತಂತೆ  ಮಾಹಿತಿಪೂರ್ಣ ಲೇಖನವನ್ನು  ಬರೆದಿದ್ದಾರೆ. ಶ್ರೀನಿವಾಸ್ ಎ. ಅವರು.  ಜೇಡ: ಅದರ ಸೋಜಿಗ ನೋಡ ! ಎನ್ನುವ ಲೇಖನದ ಮೂಲಕ ಜೇಡಗಳ ಜಗತ್ತನ್ನು ತೆರೆದಿಟ್ಟಿದ್ದಾರೆ, ಲೇಖಕ ಕೃಷ್ಣ ಚೈತನ್ಯರವರು. ಕೈತೊಳೆಯುವುದು ಅನೇಕ ರೋಗಗಳನ್ನು ದೂರವಿಡುತ್ತದೆ. ಶಾಲೆಗಳಲ್ಲಿ ನಡೆಸುತ್ತಿರುವ ಈ ಆಚರಣೆಗೆ ಸಂಬಂಧಿಸಿದಂತೆ.  ಕೈ ತೊಳೆಅದೇ ಆರೋಗ್ಯ ಕಳೆ  ಎಂಬ ಅನುಷ್ಠಾನಯೋಗ್ಯ ವಿಚಾರದ ಬಗ್ಗೆ ಲೇಖನವನ್ನು ಬರೆದಿದ್ದಾರೆ, ಮೇಶವಿ,ಬಳ್ಳಾ ಅವರು,   ಈ ತಿಂಗಳ ‘ಸಾಧಕ ಶಿಕ್ಷಕ’ರಾಗಿʼ ಈ ಬಾರಿಯ ಜಿಲ್ಲಾ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದವರಲ್ಲಿ ಒಬ್ಬರಾದ ಶ್ರೀಮತಿ ನಾಗವೇಣಿ ನಾಯಕ್‌ ಅವರನ್ನು.ಅವರ ಸಾಧನೆಯ ಹಾದಿಯನ್ನು  ಪರಿಚಯಿಸಿದ್ದಾರೆ, ಶ್ರೀಮತಿ ರೂಪ ಬಿ.ಎನ್‌ ಅವರು.

    ಇವೆಲ್ಲದರ ಜೊತೆಗೆ, ಎಂದಿನಂತೆ ಶಾಲೆಗಳಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಸಹಾಯಕವಾಗುವಂತೆ ನವಂಬರ್‌ ತಿಂಗಳಿನ ಪ್ರಮುಖ ದಿನಾಚರಣೆಗಳ ಬಗ್ಗೆ ಮಾಹಿತಿ ನೀಡಿದೆ. ವಿಜ್ಞಾನಕ್ಕೆ ಸಂಬಂಧಿಸಿದ ನಮ್ಮ ಸ್ಥಿರ ಅಂಕಣಗಳಾದ, ಪದಬಂಧ, ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳು ನಿಮ್ಮನ್ನು ರಂಜಿಸಲಿವೆ. ಸಂಚಿಕೆಯ ಎಲ್ಲ ಲೇಖನಗಳನ್ನು ಹಾಗೂ ಅಂಕಣಗಳನ್ನು ಓದಿ, ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ಬ್ಲಾಗ್‌ನಲ್ಲಿ ದಾಖಲಿಸಿ. ನಾಡು, ನುಡಿ, ವಿಜ್ಞಾನಗಳಿಗೆ ನಿಮ್ಮ ಲೇಖನಗಳ ಕಾಣಿಕೆಯ ಪುಷ್ಪಾಂಜಲಿ ಸಲ್ಲಿಲಿ ಎಂದು ಆಶಿಸುತ್ತೇನೆ.

 

ಪ್ರಧಾನ ಸಂಪಾದಕರ ಪರವಾಗಿ

ರಾಮಚಂದ್ರಭಟ್‌ ಬಿ.ಜಿ.

 

"ಹೆತ್ತworryಗೆ ಹೆಗ್ಗಣ ಮುದ್ದು"

"ಹೆತ್ತworryಗೆ ಹೆಗ್ಗಣ ಮುದ್ದು"

ಡಾ. ಟಿ.ಎ. ಬಾಲಕೃಷ್ಣ ಅಡಿಗ 





ಹೆತ್ತವರ worry ಮಾನವರಿಗಷ್ಟೇ ಅಲ್ಲ ಸರ್ವ ಜೀವಜಾತರಿಗೂ ಇದ್ದದ್ದೇ. ಪ್ರಾಣಿಗಳ ಬದುಕಿನ ಸಾರ್ಥಕತೆ ಇರುವುದೇ ಸಂತಾನ ವೃದ್ಧಿಯಲ್ಲಿ. ಅವುಗಳ ಶಕ್ತಿಯ ಬಳಕೆ ಸಂತಾನದ ರಕ್ಷಣೆಗೇ ಮೀಸಲು. ಪ್ರಾಣಿಗಳ ವರಿಯನ್ನು  ಸೋದಾಹರಣವಾಗಿ ವಿವರಿಸಿದ್ದಾರೆ. ಪ್ರಧಾನ ಸಂಪಾದಕರಾದ ಡಾ.ಟಿ.ಎ ಬಾಲಕೃಷ್ಣ ಅಡಿಗರು

ಭಾರತದ ನೊಬೆಲ್ ವಂಚಿತ, ಮೊದಲ ಪ್ರನಾಳಶಿಶುವಿನ ಸೃಷ್ಟಿಕರ್ತ ಡಾ|| ಸುಭಾಶ್‌ರವರ ದುರಂತ ಕತೆ (ಭಾಗ ೨)

ಭಾರತದ ನೊಬೆಲ್ ವಂಚಿತ, ಮೊದಲ ಪ್ರನಾಳಶಿಶುವಿನ ಸೃಷ್ಟಿಕರ್ತ ಡಾ|| ಸುಭಾಶ್‌ರವರ ದುರಂತ ಕತೆ (ಭಾಗ ೨)

ಡಾ|| ಎಂ.ಜೆ. ಸುಂದರ್ ರಾಮ್ 

ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು, ವಿಜ್ಞಾನ ಸಂವಹನಕಾರರು


ಹಿಂದಿನ ಸಂಚಿಕೆಯಲ್ಲಿ ಸುಭಾಷರು ತಮಗಾದ ತೇಜೋವಧೆಯಿಂದಾಗಿ  ಅಸಹಾಯಕರಾಗಿ ಪ್ರಾಣವನ್ನೇ ಕಳೆದುಕೊಂಡ ಘಟನಾವಳಿಗಳನ್ನು ಓದಿದ್ದೀರಿ. ತದನಂತರ ಹಲವು ಘಟನೆಗಳು ಇತಿಹಾಸದಲ್ಲಿ ದಾಖಲಾದವು.  ಅವರಿಗಾದ ಅನ್ಯಾಯವನ್ನು ಸರಿಪಡಿಸಲು ಪ್ರಯತ್ನಿಸಿದ ಘಟನಾವಳಿಗಳನ್ನು ಡಾ|| ಎಂ.ಜೆ. ಸುಂದರ್ ರಾಮ್ ಅವರು ಈ ಲೇಖನದ ಮೂಲಕ ವಿವರಿಸಿದ್ದಾರೆ. 

ಜೇಡ: ಅದರ ಸೋಜಿಗ ನೋಡ !


ಜೇಡ: ಅದರ ಸೋಜಿಗ ನೋಡ !

ಲೇಖಕರು : ಡಿ. ಕೃಷ್ಣಚೈತನ್ಯ

ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

ಜೇಡ ಎಲ್ಲರ ಗಮನವನ್ನು ಬಾಲ್ಯದಿಂದಲೇ ಸೆಳೆದಿರುತ್ತದೆ. ಜೇಡಗಳ ವೈವಿದ್ಯತೆ ಅವುಗಳ ಬಲೆಗಳಷ್ಟೇ ಸೋಜಿಗವನ್ನು ಉಂಟುಮಾಡುವಂತದ್ದು . ಜೀವಜಗತ್ತಿನ ಆಹಾರ ಜಾಲದಲ್ಲಿ ಜೇಡಗಳು ಪ್ರಮುಖ ಪಾತ್ರವಹಿಸುತ್ತವೆ. ರೈತನಿಗೂ ಜೈವಿಕನಿಯಂತ್ರಣದ ಮೂಲಕ ಸಹಾಯಕವಾಗಿವೆ ಎನ್ನುವುದನ್ನು ವಿವರಿಸಿದ್ದಾರೆ  ಡಿ. ಕೃಷ್ಣಚೈತನ್ಯ ಅವರು 

ಕೈ ತೊಳೆ, ಅದೇ ಆರೋಗ್ಯ ಕಳೆ

 ಕೈ ತೊಳೆ, ಅದೇ ಆರೋಗ್ಯ ಕಳೆ

ಲೇಖಕರು : ರಮೇಶ, ವಿ,ಬಳ್ಳಾ 

ಅಧ್ಯಾಪಕರು

ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು            

 (ಪ್ರೌಢ) ಗುಳೇದಗುಡ್ಡ  ಜಿ: ಬಾಗಲಕೋಟ   

ಕೋವಿಡ್ ನಮಗೆ ಮರೆಯದಂತಹ ಬದುಕಿನ ಪಾಠವನ್ನು ಕಲಿಸಿಕೊಟ್ಟಿದೆ. ದೈನಂದಿನ ಬದುಕಿನಲ್ಲಿ ಶುಚಿತ್ವದ ಮಹತ್ವ ಈಗ ಎಲ್ಲರಿಗೂ ಅರಿವಾಗಿದೆ. ಕೈ ತೊಳೆಯುವುದರ ಮೂಲಕ ಸಾಕಷ್ಟು ರೋಗಗಳನ್ನು ದೂರವಿಡಬಹುದು ಎನ್ನುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಶಾಲೆಗಳಲ್ಲಿ ಆಚರಿಸುವ ಕೈ ತೊಳೆಯುವ ದಿನಾಚರಣೆಯ ಮಹತ್ವವನ್ನು ಐತಿಹಾಸಿಕ ಘಟನೆಗಳೊಂದಿಗೆ  ತಮ್ಮ ಮುಂದೆ ಇಟ್ಟಿದ್ದಾರೆ ಲೇಖಕರಾದ ಲೇಖಕರಾದ ರಮೇಶ್ ವಿ.ಬಳ್ಳಾ  ಅವರು.

ಪರಮಾಣುಗಳ ಬಗ್ಗೆ ಪ್ರಾಚೀನ ಭಾರತದ ಚಿಂತನೆ

ಪರಮಾಣುಗಳ ಬಗ್ಗೆ ಪ್ರಾಚೀನ ಭಾರತದ ಚಿಂತನೆ

ಲೇಖಕರು : ಎ.ಶ್ರೀನಿವಾಸ್


ಪರಮಾಣುಗಳ ಬಗ್ಗೆ ಪ್ರಾಚೀನ ಭಾರತದ ಗ್ರಂಥಗಳಲ್ಲಿ ಸಾಕಷ್ಟು ಉಲ್ಲೇಖಗಳಿವೆ.  ಅದರಲ್ಲಿ ಪ್ರಮುಖವಾದುದು ಮಹರ್ಷಿ ಕಣಾದರು ರಚಿಸಿದ ʼವೈಶೇಷಿಕ ದರ್ಶನʼ ಎಂಬ ಮಹಾಗ್ರಂಥ. ಆ ಗ್ರಂಥದ ಪರಿಚಯದ ಜೊತೆಗೆ ಅದರಲ್ಲಿರುವ ವಿಷಯ ವೈವಿಧ್ಯವನ್ನು ಈ ಲೇಖನದಲ್ಲಿ ವಿವರಿಸಿದ್ದಾರೆ, ಶಿಕ್ಷಕ ಶ್ರೀನಿವಾಸ್‌ ಅವರು.

ಬಹುಮುಖ ಪ್ರತಿಭೆಯ ಸಾಧಕಿ ಶ್ರೀಮತಿ ನಾಗವೇಣಿ ನಾಯಕ್

ಬಹುಮುಖ ಪ್ರತಿಭೆಯ ಸಾಧಕಿ ಶ್ರೀಮತಿ ನಾಗವೇಣಿ ನಾಯಕ್

ಲೇಖಕರು: ಬಿ. ಎನ್ .ರೂಪ, ಸಹಶಿಕ್ಷಕರು
ತೆರೆ ಮರೆಯ ಸಾಧಕ ಶಿಕ್ಷಕರಾಗಿ ಶ್ರೀಮತಿ ನಾಗವೇಣಿ ನಾಯಕ್ ಅವರನ್ನು ಬಿ. ಎನ್‌.   ರೂಪ ಅವರು  ಪರಿಚಯಿಸಿದ್ದಾರೆ.  ಸಾಧಕ ಶಿಕ್ಷಕರ ಪರಿಚಯದ ಉದ್ದೇಶ  ವಿಜ್ಞಾನದಲ್ಲಿ  ಗುಣಾತ್ಮಕ ಶಿಕ್ಷಣಕ್ಕಾಗಿ ಶಿಕ್ಷಕರಲ್ಲಿ ಸಾಧನೆಯ ಹಸಿವನ್ನು ಹೆಚ್ಚಿಸಿ ಸ್ಪೂರ್ತಿ ತುಂಬುವುದು.

ಪ್ರಮುಖ ದಿನಾಚರಣೆಗಳು ನವೆಂಬರ್‌ 2022

 ಪ್ರಮುಖ ದಿನಾಚರಣೆಗಳು ನವೆಂಬರ್ 2022

ನವೆಂಬರ್ 1 - ವಿಶ್ವ ಸಸ್ಯಾಹಾರಿ ದಿನ ಹಾಗೂ ಕನ್ನಡ ರಾಜ್ಯೋತ್ಸವ

ಸಸ್ಯಾಹಾರಿ ಆಹಾರ ಮತ್ತು ಸಸ್ಯಾಹಾರ ಪ್ರಯೋಜನಗಳ ಬಗ್ಗೆ ಪ್ರತಿ ವರ್ಷ ನವೆಂಬರ್ 1 ಅನ್ನು ವಿಶ್ವ ಸಸ್ಯಾಹಾರಿ ದಿನವಾಗಿ ಆಚರಿಸಲಾಗುತ್ತದೆ. ಯುಕೆ ವೇಗನ್ ಸೊಸೈಟಿಯ 50 ನೇ ವಾರ್ಷಿಕೋತ್ಸವದ ನೆನಪಿಗಾಗಿ 1 ನೇ ನವೆಂಬರ್ 2021 ರಂದು ಮೊದಲ ಸಸ್ಯಾಹಾರಿ ದಿನವನ್ನು ಆಚರಿಸಲಾಯಿತು.

ನವೆಂಬರ್ 5 - ವಿಶ್ವ ಸುನಾಮಿ ಜಾಗೃತಿ ದಿನ

ನವೆಂಬರ್ 5 ರಂದು, ವಿಶ್ವ ಸುನಾಮಿ ದಿನವನ್ನು ಆಚರಿಸಲಾಗುತ್ತದೆ. ಇದು ಸುನಾಮಿಯ ಅಪಾಯಗಳ ಕುರಿತು ಅರಿವು ಮೂಡಿಸುತ್ತದೆ. ನೈಸರ್ಗಿಕ ಅಪಾಯಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಮುನ್ನೆಚ್ಚರಿಕೆ ವ್ಯವಸ್ಥೆಗಳ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ.

ನವೆಂಬರ್ 6 - ಯುದ್ಧ ಮತ್ತು ಸಶಸ್ತ್ರ ಸಂಘರ್ಷದಲ್ಲಿ ಪರಿಸರದ ಶೋಷಣೆಯನ್ನು ತಡೆಗಟ್ಟುವ ಅಂತರರಾಷ್ಟ್ರೀಯ ದಿನ : ನವೆಂಬರ್ 5, 2001 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಪ್ರತಿ ವರ್ಷ ನವೆಂಬರ್ 6 ರಂದು 'ಯುದ್ಧ ಮತ್ತು ಸಶಸ್ತ್ರ ಸಂಘರ್ಷದಲ್ಲಿ ಪರಿಸರದ ಶೋಷಣೆಯನ್ನು ತಡೆಗಟ್ಟುವ ಅಂತರರಾಷ್ಟ್ರೀಯ ದಿನ' ಎಂದು ಘೋಷಿಸಿತು.

ನವೆಂಬರ್ 7 - ಶಿಶು ಸಂರಕ್ಷಣಾ ದಿನ

ಪ್ರತಿ ವರ್ಷ ನವೆಂಬರ್ 7 ರಂದು, ಶಿಶುಗಳನ್ನು ರಕ್ಷಿಸುವ ಮತ್ತು ವಿವಿಧ ಯೋಜನೆಗಳನ್ನು ಅಭಿವೃದ್ಧಿಪಡಿಸುವುದನ್ನು  ಉತ್ತೇಜಿಸುವ ಉದ್ದೇಶದಿಂದ ಶಿಶು ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ. ಶಿಶುಗಳನ್ನು ರಕ್ಷಿಸಿದರೆ ಅವರು ನಾಳಿನ ಪ್ರಜೆಗಳಾಗಿ ಈ ಪ್ರಪಂಚದ ಭವಿಷ್ಯವಾಗುವುದರಲ್ಲಿ ಸಂದೇಹವಿಲ್ಲ. ಈ ಪ್ರಪಂಚದ ಭವಿಷ್ಯವನ್ನು ರಕ್ಷಿಸುವುದು ಮುಖ್ಯವಾಗಿದೆ.

ನವೆಂಬರ್ 7 - ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ

2014 ರಲ್ಲಿ, ಕ್ಯಾನ್ಸರ್‌ ರೋಗದ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಕೇಂದ್ರ ಆರೋಗ್ಯ ಸಚಿವರಾಗಿದ್ದ ಡಾ. ಹರ್ಷವರ್ಧನ್ವರು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಪ್ರಾರಂಭಿಸಿದರು..

 ನವೆಂಬರ್ 7 - ಚಂದ್ರಶೇಖರ ವೆಂಕಟ ರಾಮನ್ ಜನ್ಮದಿನ

ಸರ್‌ ಸಿ.ವಿ ರಾಮನ್ ಅವರು 1888 ರ ನವೆಂಬರ್ 7 ರಂದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಜನಿಸಿದರು. ಸಿ.ವಿ ರಾಮನ್ ಅವರು ರಾಮನ್ ಪರಿಣಾಮದ ಆವಿಷ್ಕಾರಕ್ಕಾಗಿ 1930 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಪಡೆದರು.

ನವೆಂಬರ್ 10 - ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನ

ಪ್ರತಿ ವರ್ಷ ನವೆಂಬರ್ 10 ರಂದು ಸಮಾಜದಲ್ಲಿ ವಿಜ್ಞಾನದ ಪ್ರಮುಖ ಪಾತ್ರವನ್ನು ಕೇಂದ್ರೀಕರಿಸಲು ಮತ್ತು ಉದಯೋನ್ಮುಖ ವೈಜ್ಞಾನಿಕ ವಿಷಯಗಳ ಕುರಿತು ಚರ್ಚೆಯಲ್ಲಿ ವ್ಯಾಪಕ ಸಾರ್ವಜನಿಕರನ್ನು ತೊಡಗಿಸಿಕೊಳ್ಳುವ ಅಗತ್ಯವನ್ನು ಆಚರಿಸಲಾಗುತ್ತದೆ. ಇಲ್ಲಿ ಮುಖ್ಯ ಮುಖ್ಯಾಂಶವೆಂದರೆ ಶಾಂತಿಯ ಪ್ರಾಮುಖ್ಯತೆ ಮತ್ತು ವೈಜ್ಞಾನಿಕ ಕೃತಿಗಳ ಅಭಿವೃದ್ಧಿ.

ನವೆಂಬರ್ 11 - ರಾಷ್ಟ್ರೀಯ ಶಿಕ್ಷಣ ದಿನ

ನವೆಂಬರ್ 11 ರಂದು, ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ನೆನಪಿಗಾಗಿ ಇದನ್ನು ಆಚರಿಸಲಾಗುತ್ತದೆ. ಸಚಿವರು 1947 ರಿಂದ 1958 ರವರೆಗೆ ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದಾರೆ.

ನವೆಂಬರ್ 12 - ವಿಶ್ವ ನ್ಯುಮೋನಿಯಾ ದಿನ

ನ್ಯುಮೋನಿಯಾ ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ನವೆಂಬರ್ 12 ಅನ್ನು ವಿಶ್ವ ನ್ಯುಮೋನಿಯಾ ದಿನವಾಗಿ ಆಚರಿಸಲಾಗುತ್ತದೆ. ಇದು ವಿಶ್ವದ ಪ್ರಮುಖ ಸಾಂಕ್ರಾಮಿಕ ರೋಗವೆಂದು ಪರಿಗಣಿಸಲಾಗಿದೆ ಮತ್ತು ಹೆಚ್ಚು ಪ್ರಭಾವಿತ ವಯಸ್ಸಿನ ಗುಂಪು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು.

ನವೆಂಬರ್ 14 - ಮಕ್ಕಳ ದಿನಾಚರಣೆ

ಪ್ರತಿ ವರ್ಷ ನವೆಂಬರ್ 14 ರಂದು ನಮ್ಮ  ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಮಕ್ಕಳ ಹಕ್ಕುಗಳು, ಕಾಳಜಿ ಮತ್ತು ಶಿಕ್ಷಣದ ಬಗ್ಗೆ ಜನರಿಗೆ ಅರಿವು ಮೂಡಿಸು ಉದ್ದೇಶದೊಂದಿಗೆ ದೇಶದ ಭವಿಷ್ಯದಲ್ಲಿ ವಿದ್ಯಾರ್ಥಿಗಳ ಕುರಿತು ಕಲಾಂವರ ಆಶಯಗಳನ್ನು ಈಡೇರಿಸುವ ಗುರಿಯನ್ನು ಹೊಂದಿದೆ.

ನವೆಂಬರ್ 14 - ವಿಶ್ವ ಮಧುಮೇಹ ದಿನ

ಪ್ರತಿ ನವೆಂಬರ್ 14 ರಂದು, ವಿಶ್ವದಾದ್ಯಂತ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ. ಮಧುಮೇಹ ಕಾಯಿಲೆಯ ಪರಿಣಾಮ, ಅದರ ತಡೆಗಟ್ಟುವಿಕೆ ಮತ್ತು ಮಧುಮೇಹದ ಮೇಲೆ ಜನರಲ್ಲಿ ಶಿಕ್ಷಣ, ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಗುರಿಯಾಗಿದೆ.

ನವೆಂಬರ್ 17 - ರಾಷ್ಟ್ರೀಯ ಅಪಸ್ಮಾರ ದಿನ

ರಾಷ್ಟ್ರೀಯ ಅಪಸ್ಮಾರ ದಿನವನ್ನು ನವೆಂಬರ್ 17 ರಂದು ಆಚರಿಸಲಾಗುತ್ತದೆ. ಅಪಸ್ಮಾರ ಕಾಯಿಲೆ, ಅದರ ಲಕ್ಷಣಗಳು ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶ. ಎಪಿಲೆಪ್ಸಿಯನ್ನು ಮೆದುಳಿನ ದೀರ್ಘಕಾಲದ ಅಸ್ವಸ್ಥತೆ ಎಂದು ಪರಿಗಣಿಸಲಾಗುತ್ತದೆ. ಇದು ಯಾವುದೇ ವಯಸ್ಸಿನ ಜನರ ಮೇಲೆ ಪರಿಣಾಮ ಬೀರಬಹುದು ಈ ಕುರಿತು ಜನಜಾಗೃತಿ ಅತ್ಯಂತ ಅವಶ್ಯಕ.

ನವೆಂಬರ್ 17 - ವಿಶ್ವ ದೀರ್ಘಕಾಲೀನ ವಿನಾಶಕಾರಿ ಶ್ವಾಸಕೋಶದ ಕಾಯಿಲೆ ದಿನ (World Chronic Obstructive Pulmonary Disease Day)

ನವೆಂಬರ್ 17 ಅನ್ನು ಪ್ರತಿ ವರ್ಷ ವಿಶ್ವ ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ದಿನ ಎಂದು ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಶ್ವಾಸಕೋಶದ ಕಾಯಿಲೆಗಳು ಹೆಚ್ಚುತ್ತಿರುವುದು ಹಾಗೂ ಈ ಕುರಿತು ಜನಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ.  

ನವೆಂಬರ್ 19 - ವಿಶ್ವ ಶೌಚಾಲಯ ದಿನ

ಪ್ರತಿ ವರ್ಷ ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಮುಖ್ಯವಾಗಿ ಜಾಗತಿಕ ನೈರ್ಮಲ್ಯ ಬಿಕ್ಕಟ್ಟಿನ ಸಮಸ್ಯೆಯನ್ನು ನಿಭಾಯಿಸುವ ಬಗ್ಗೆ ಜನರನ್ನು ಪ್ರೇರೇಪಿಸುತ್ತದೆ ಮತ್ತು 2030 ರ ವೇಳೆಗೆ ಎಲ್ಲರಿಗೂ ನೈರ್ಮಲ್ಯದ ಭರವಸೆ ನೀಡುವ ಸುಸ್ಥಿರ ಅಭಿವೃದ್ಧಿ ಗುರಿ (SDG) 6 ಅನ್ನು ಸಾಧಿಸುತ್ತದೆ. UNICEF ಮತ್ತು WHO ಪ್ರಕಾರ, ಜಾಗತಿಕ ಜನಸಂಖ್ಯೆಯ ಸುಮಾರು 60% ರಷ್ಟಿದೆ ಸರಿಸುಮಾರು 4.5 ಶತಕೋಟಿ ಜನರಿಗೆ ಸಮನಾಗಿರುತ್ತದೆ ಅಥವಾ ಮನೆಯಲ್ಲಿ ಶೌಚಾಲಯಗಳಿಲ್ಲ ಅಥವಾ ಶೌಚಾಲಯಗಳನ್ನು ಸರಿಯಾಗಿ ವಿಲೇವಾರಿ ಮಾಡಲು ಅವರು ಸುರಕ್ಷಿತವಾಗಿ ನಿರ್ವಹಿಸುವುದಿಲ್ಲ.

ನವೆಂಬರ್ 21 - ವಿಶ್ವ ದೂರದರ್ಶನ ದಿನ

ವಿಶ್ವ ದೂರದರ್ಶನ ದಿನವನ್ನು ಪ್ರತಿ ವರ್ಷ ನವೆಂಬರ್ 21 ರಂದು ಆಚರಿಸಲಾಗುತ್ತದೆ. ಜನರ ದೈನಂದಿನ ಬದುಕಿನ ಮೇಲೆ ದೂರದರ್ಶನ ಉಂಟು ಮಾಡಿದ ಪರಿಣಾಮ, ವ್ಯಾಪ್ತಿ  ಕುರಿತಂತೆ ಅರಿವು ಮೂಡಿಸುವುದು ಈ ದಿನಾಚರಣೆಯ ಉದ್ದೇಶ.

ನವೆಂಬರ್ 26 - ಭಾರತದ ಸಂವಿಧಾನ ದಿನ

ಭಾರತದ ಸಂವಿಧಾನ ದಿನವನ್ನು ಭಾರತದ ಕಾನೂನು ದಿನ ಅಥವಾ ಸಂವಿಧನ್ ದಿವಸ್ ಎಂದೂ ಕರೆಯಲಾಗುತ್ತದೆ ಮತ್ತು ಇದನ್ನು ಪ್ರತಿ ವರ್ಷ ನವೆಂಬರ್ 26 ರಂದು ಆಚರಿಸಲಾಗುತ್ತದೆ. ಭಾರತದ ಸಂವಿಧಾನ ಸಭೆಯು 26 ನವೆಂಬರ್ 1949 ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಿತು. ಇದು ಜನವರಿ 26, 1950 ರಂದು ಜಾರಿಗೆ ಬಂದಿತು. 

(ಸಂ) ರಾಮಚಂದ್ರಭಟ್‌ ಬಿ.ಜಿ.

ವ್ಯಂಗ್ಯ ಚಿತ್ರಗಳು - ನವೆಂಬರ್ 2022

ವ್ಯಂಗ್ಯ ಚಿತ್ರಗಳು - ನವೆಂಬರ್ 2022



ರಚನೆ : ಶ್ರೀಮತಿ ಜಯಶ್ರೀ ಬಿ ಶರ್ಮ



ವಿಜ್ಞಾನ ಒಗಟುಗಳು

  ನವಂಬರ್‌ ೨೦೨೨ ರ ವಿಜ್ಞಾನ ಒಗಟುಗಳು  


                        ೧: ಕಲ್ಲು ಬೆಂಚು ಮತ್ತು ಸ್ನೇಹಿತರ ಲೆಕ್ಕ ಬಿಡಿಸಿ

ಕೆಲವರು ಸ್ನೇಹಿತರು ಪಾರ್ಕಿನಲಿ ವಿಹರಿಸಿ

ಒಬ್ಬೊಬ್ಬರೊಂದೊಂದು ಕಲ್ಲು ಬೆಂಚಿನ ಮೇಲೆ ಕುಂತಾಗ

ಒಬ್ಬರಿಗೆ ಸಿಗಲಿಲ್ಲ ಕಲ್ಲು ಬೆಂಚು

ಬುದ್ಧಿವಂತರಿಬ್ಬಿಬ್ಬರು ಒಂದೊಂದು ಕಲ್ಲು ಬೆಂಚಿನ ಮೇಲೆ ಕುಂತಾಗ

ಉಳಿಯಿತಲ್ಲ ಒಂದು ಕಲ್ಲು ಬೆಂಚು ಖಾಲಿ.

ಸ್ನೇಹಿತರ ಮತ್ತು ಕಲ್ಲು ಬೆಂಚುಗಳ ಸಂಖ್ಯೆಯ ಹೇಳಬಲ್ಲಿರೇ

ಮಿದುಳಿಗೆ ಕಸರತ್ತು ನೀಡಿ?


                     ೨ : ಈವರು ಯಾರು ಬಲ್ಲಿರೇನು? 

ತಿರುಚಿನಾಪಳ್ಳಿಯ ಅಯ್ಯರ್ ಕುಟುಂಬದ ಕುಡಿ

 ನವಂಬರ್ ಏಳು ಈತನ ಜನುಮದಿನ

 ಸಮುದ್ರದ ನೀಲಿ ಬಣ್ಣಕ್ಕೆ ತಲೆಕೆಡಿಸಿಕೊಂಡ

ಫೆಬ್ರವರಿ28  ಈತನಿಗೇ ಸಮರ್ಪಿತ

ತಡವೇಕೆ ಜಾಣ ಜಾಣೆಯರೇ ?

ಸುಳಿವ ಹಿಡಿದು ಉತ್ತರಿಸಿ ಲಗುಬಗನೆ

 

        ೩ :  ಅಂಗ, ರಸದೂತ , ರೋಗ ..ಯಾರ್ಯಾರು?  

ಒಂದು ಸಕ್ಕರೆಯ ಅಡಗಿಸಿದರೆ  

ಮತ್ತೊಂದು ಸಕ್ಕರೆಯ ರಕ್ತಕ್ಕೆ ಸೇರಿಸುವ ರಸದೂತ

ಎರಡರ ಹುಟ್ಟು ಮಿಶ್ರಗ್ರಂಥಿಯಲ್ಲಿ

ಎಚ್ಚರ ತಪ್ಪಿದಿರೋ  ಹದಗೆಟ್ಟೀತು ಆರೋಗ್ಯ

ಈ ಕುರಿತು ಪ್ರತಿ ನವಂಬರ್ 14 ರಂದು ಮೂಡಿಸೋಣ ವಿಶ್ವದಿ ಜನಜಾಗೃತಿ

 ಈ ಸುಳಿವಿಂದ ಬಿಡಿಸಿ ಒಬ್ಬೊಬ್ಬರ ಕತೆಯ ಒಗಟ

 

                ೪ : ಅಲೋಹ ಯಾವುದು ? 

ನಾನೊಂದು ಅಲೋಹ ಬಹುರೂಪಿ ಕೆಂಪು, ಬಿಳಿ, ಕಪ್ಪು ಬಣ್ಣಗಳಲ್ಲಿರುವೆ

ಗಾಳಿ ಸೋಕಲು ಉರಿದು ಸ್ಫುರದೀಪ್ತಿ ತೋರುವೆ

ಮೂಳೆ, ಹಲ್ಲುಗಳಲ್ಲಿರುವೆ ಶಕ್ತಿಯ ಕಣಜವಾಗಿರುವೆ

ಡಿಎನ್ಎಯ ಪ್ರಮುಖ ಘಟಕವಾಗಿರುವೆ

ಬಾನಾಮತಿಗೂ ಬಳಸುವರು ನನ್ನ ನೀರಿನಲ್ಲಿ ನಿಷ್ಕ್ರಿಯ ಜಲಪಾಷಣ ನಾ

ಓ ಜಾಣ ಜಾಣೆಯರೆ  ಸುಳಿವಿಂದ ಈ ಒಗಟೊಡೆಯಬಲ್ಲಿರೇ ನೀವು?  

 

                ೫ : ಈ ವಿಕಿರಣ ಪಟು ಧಾತುವಿನ ಕಥೆಯ ಹೇಳಿ

ಪೋಲೆಂಡ್ ಕುವರಿಯಾ ದೇಶಪ್ರೇಮದೊಡಗೂಡಿದ ಆವಿಷ್ಕಾರ

 ಬಿಸ್ಮತ್ ನ್ಯೂಟ್ರಾನುಗಳ ತಾಡನ, ದ್ರವ್ಯಾಂತರಣವಾಗಿ ಉಗಮ ಕ್ರಿಯೆ

 ಸುಮಾರು 138 ದಿನಗಳ ಅರ್ಧಾಯುಷ್ಯ  ನ್ಯೂಕ್ಲಿಯ ಶಕ್ತಿಗಿದೊಂದು ಇಂಧನ.

ಸುಳಿವ ಬಳಸಿ ಒಗಟೊಡೆದು ತಿಳಿಸಿ  ಈ ವಿಕಿರಣ ಪಟು ಧಾತುವಿನ ಕಥೆಯ

  

ಲೇಖಕರು : ಬಿ.ಜಿ.ರಾಮಚಂದ್ರ ಭಟ್ 

ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆಬ್ಯಾಟರಾಯನಪುರ,
ಮೈಸೂರು ರಸ್ತೆಬೆಂಗಳೂರು