ಬಹುಮುಖ ಪ್ರತಿಭೆಯ ಸಾಧಕಿ ಶ್ರೀಮತಿ ನಾಗವೇಣಿ ನಾಯಕ್
ಲೇಖಕರು: ಬಿ. ಎನ್ .ರೂಪ, ಸಹಶಿಕ್ಷಕರುತೆರೆ ಮರೆಯ ಸಾಧಕ ಶಿಕ್ಷಕರಾಗಿ ಶ್ರೀಮತಿ ನಾಗವೇಣಿ ನಾಯಕ್ ಅವರನ್ನು ಬಿ. ಎನ್. ರೂಪ ಅವರು ಪರಿಚಯಿಸಿದ್ದಾರೆ. ಸಾಧಕ ಶಿಕ್ಷಕರ ಪರಿಚಯದ ಉದ್ದೇಶ ವಿಜ್ಞಾನದಲ್ಲಿ ಗುಣಾತ್ಮಕ ಶಿಕ್ಷಣಕ್ಕಾಗಿ ಶಿಕ್ಷಕರಲ್ಲಿ ಸಾಧನೆಯ ಹಸಿವನ್ನು ಹೆಚ್ಚಿಸಿ ಸ್ಪೂರ್ತಿ ತುಂಬುವುದು.
ನಾಗವೇಣಿಯವರು ತಮ್ಮ ವೃತ್ತಿಜೀವನವನ್ನು 01-06-1999 ರಲ್ಲಿ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಬೆಂಗಳೂರು ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ ವಿಜ್ಞಾನ ಶಿಕ್ಷಕಾಗಿ ಕರ್ತವ್ಯವನ್ನು ಶುರುಮಾಡಿದರು . ಎರಡು ದಶಕಕ್ಕೂ ಹೆಚ್ಚಿನ ಸೇವೆಯಲ್ಲಿ ಶಿಕ್ಷಕರಾಗಿಯೂ ಎರಡು ವರ್ಷಗಳಕಾಲ ಕ್ಷೇತ್ರಸಮನ್ವಯಾಧಿಕಾರಿಗಳ ಕಛೇರಿ. ಬೆಂಗಳೂರು ಉತ್ತರ ವಲಯ-01 ಇಲ್ಲಿ BRP ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಈ ನಡುವೆ ಸರ್ಕಾರಿ ಪ್ರೌಢಶಾಲೆ. ಚಿಕ್ಕಜಾಲ ಬೆಂಗಳೂರು ಉತ್ತರ ವಲಯ-04, ಸರ್ಕಾರಿ ಪ್ರೌಢಶಾಲೆ ಲಿಂಕ್ ರಸ್ತೆ, ಶೇಷಾದ್ರಿಪುರಂ. ಬೆಂಗಳೂರು ಉತ್ತರ ವಲಯ-02 ರಲ್ಲ್ಲಿಯೂ ಶಿಕ್ಷಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕರ್ನಾಟಕ ಪಬ್ಲಿಕ್ ಶಾಲೆ (KPS) ಬಸವನಗುಡಿ. ಬೆಂಗಳೂರು ದಕ್ಷಿಣ ವಲಯ- 1 ರಲ್ಲಿ ಕಳೆದ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಹಾಗೂ ವಿದ್ಯಾರ್ಥಿಗಳ ಅತ್ಯುತ್ತಮ ಭವಿಷ್ಯವನ್ನು ರೂಪಿಸಬೇಕು ಅನ್ನುವ ಅನನ್ಯವಾದ ಅದಮ್ಯ ಬಯಕೆಯನ್ನು ಹೊಂದಿರುವ ನಾಗವೇಣಿಯವರು ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ಸೇರಿದರು. 23 ವರ್ಷಗಳ ಸುಧೀರ್ಘ ಸೇವೆಯಲ್ಲಿ ಇವರ ಸಾಧನೆ ಶ್ಲಾಘನೀಯ.
ಗ್ರಾಮೀಣ ಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಮ ನೈರ್ಮಲ್ಯ ಮತ್ತು ಸ್ವಚ್ಛತೆ, ಪರಿಸರ ಕಾಳಜಿ, ನೀರಿನ ಮಿತವ್ಯಯ, ಕಲಿಕಾ ಸಾಮಗ್ರಿ ತಯಾರಿಕೆ, ವಿನೋದ ವಿಜ್ಞಾನ, ಮಳೆಕೊಯ್ಲು ಮುಂತಾದ ವಿನೂತನ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳು ಸಕ್ರಿಯವಾಗಿ ಕ್ರಿಯಾಶೀಲರಾಗಿ ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಅನೇಕ ಬಹುಮಾನ ಮತ್ತು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ನಮ್ಮ ವಿದ್ಯಾರ್ಥಿಗಳೇ ನಮ್ಮ ಹೆಮ್ಮೆ. ಇವರ ಅನೇಕ ವಿದ್ಯಾರ್ಥಿಗಳು ಇಂಜಿನಿಯರ್, ಡಾಕ್ಟರ್ ಆಗಿದ್ದಾರೆ. ಕೆಲವರು ದೊಡ್ಡ ದೊಡ್ಡ ಕಂಪನಿಗಳಲ್ಲಿ ಹುದ್ದೆಗಳನ್ನು ಅಲಂಕರಿಸಿರುತ್ತಾರೆ. ಇದಕ್ಕಿಂತ ಬೇರೊಂದು ಪ್ರಶಸ್ತಿ ಇದೆಯೇ? ನಮ್ಮ ಶಿಕ್ಷಕ ವೃತ್ತಿಯೇ ಹಾಗಲ್ಲವೇ ?
ಇಕೋಕ್ಲಬ್‌ನ ಸಂಚಾಲಕಿಯಾಗಿ ಪರಿಸರ ಸಂರಕ್ಷಣೆ, ಔಷಧೀ ಸಸ್ಯಗಳ ಮಹತ್ವ ಮತ್ತು ಉಪಯೋಗ ಕುರಿತು ಪ್ರಾತ್ಯಕ್ಷಿಕೆ , ಉಪನ್ಯಾಸ ನೀಡಿ ಶಾಲೆಯಲ್ಲಿಯೇ ಔಷಧೀಯ ಸಸ್ಯಗಳ ಕೈತೋಟ ನಿರ್ಮಿಸಿರುತ್ತಾರೆ. ಅಲ್ಲದೇ ವಿಜ್ಞಾನ ವಿಷಯದ ಅನೇಕ ಪ್ರಬಂಧ, ಚರ್ಚಾ ಸ್ಪರ್ಧೆ , ರಸಪ್ರಶ್ನೆ ಮೊದಲಾದ ಕಾರ್ಯಕ್ರಮಗಳನ್ನು ಏರ್ಪಡಿಸಿ ಬಹುಮಾನಗಳನ್ನು ಕೊಡುವುದರ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಿದ್ದಾರೆ.
ಕಂಪ್ಯೂಟರ್ ಮಾಸ್ಟರ್ ಟ್ರೇನರ್ ಆದ ಇವರು ಅನೇಕ ಶಿಕ್ಷಕರಿಗೆ ತರಬೇತಿಯನ್ನು ನೀಡಿದ್ದಾರೆ.
ಸದರಿಯವರು ತಮ್ಮ ಸೇವಾವಧಿಯಲ್ಲಿ ಅನೇಕ ತರಬೇತಿಗಳಲ್ಲಿ ಅವುಗಳನ್ನು ಪರಿಣಾಮಕಾರಿಯಾಗಿ ತಮ್ಮ ಬೋಧನೆಯಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡುವಂತೆ ಮಾಡಿತ್ತಲೇ ಬಂದಿದ್ದಾರೆ.
ವಿಜ್ಞಾನ ಸಂಘದಿಂದ ಕ್ವಿಜ್, ವಿಜ್ಞಾನ ರಂಗೋಲಿ, ಬಯೋ ರಂಗೋಲಿ, ನಾಟಕ, ನೃತ್ಯ ರೂಪಕಗಳು, ಪವಾಡ ರಹಸ್ಯ ಬಯಲು ಮುಂತಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈಗಲೂ ನಡೆಸುತ್ತಿರುವ ಇವರ ಪ್ರಯತ್ನ ಶ್ಲಾಘನೀಯವಾದದ್ದು . ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಲೇ ಬಂದಿದ್ದಾರೆ.
ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಉತ್ತರ ವಲಯ-೦೧ ರಲ್ಲಿ ಕಾರ್ಯ ನಿರ್ವಹಿಸಿದ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಕರುಗಳಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡಿ ಅವರ ಪ್ರಶಂಸೆಗಳಿಗೆ ಪಾತ್ರರಾಗಿದ್ದಾರೆ.
“Good is not good, when better is expected” ಎಂಬ ಧ್ಯೇಯೋದ್ದೇಶದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಮ್ಮ ಬಹುಮುಖ ಪ್ರತಿಭೆ, ಶೈಕ್ಷಣಿಕ ಹವ್ಯಾಸಗಳನ್ನು ಹಲವಾರು ಸ್ಪರ್ಧೆಗಳಲ್ಲಿ ಬಹುಮಾನ ಗೆಲ್ಲುವ ಮೂಲಕ ಪ್ರದರ್ಶಿಸಿದ್ದಾರೆ.
ಇಂಟೆಲ್ ನವರು ನಡೆಸಿದ ಶಿಕ್ಷಣದಲ್ಲಿ ತಂತ್ರಜ್ಞಾನ ಪ್ರಶಸ್ತಿಯ ಶಿಕ್ಷಕರ ವಿಭಾಗದ ಸ್ಪರ್ಧೆಯಲ್ಲಿ ನೀರಿನ ನಿರ್ವಹಣೆ ಎಂಬ ವಿಷಯದ ಪ್ರಾಜೆಕ್ಟ್ ಗೆ 2009-10 ರಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಚನ್ನಪಟ್ಟಣದಲ್ಲಿ ಅಂಚೆಚೀಟಿ ಪ್ರದರ್ಶನಕ್ಕಾಗಿ ಜಿಲ್ಲಾ ಮಟ್ಟದ ಪ್ರಶಸ್ತಿ ಗಳಿಸಿದ್ದಾರೆ.
‘ ನಮ್ಮ ಮಾಸ್ಟರ್ ‘ಸಿಂಚನಾ 2010 ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
ತಾಲೂಕು ಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿದ್ದಾರೆ. ಇವರ ಪ್ರಯತ್ನದಿಂದಾಗಿ ಶಾಲೆಗೆ ’ ಪರಿಸರ ಮಿತ್ರ ಹಳದಿ ಶಾಲೆ’ ಪ್ರಶಸ್ತಿ ಗಳಿಸಿದೆ.
ನಾಗವೇಣಿಯವರ ಶೈಕ್ಷಣಿಕ ಕೊಡುಗೆಗಳನ್ನು ಗಮನಿಸಿದ ನಮ್ಮಇಲಾಖೆ ಹಾಗೂ ಅನೇಕ ಸಂಘ ಸಂಸ್ಥೆಗಳು ಅವರಿಗೆ ಹಲವು ಪ್ರಶಸ್ತಿ ನೀಡಿ ಗೌರವಿಸಿವೆ.
ಸವಿಜ್ಞಾನದ ಓದುಗರಿಗೆ ತಮ್ಮ ಲೇಖನ, ಒಗಟುಗಳ ಮೂಲಕ ಪರಿಚಿತರಾದ ನಾಗವೇಣಿಯವರಿಗೆ ಪ್ರಸಕ್ತ ಸಾಲಿನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಭಾಜನರಾಗಿರುವ ಸಂದರ್ಭದಲ್ಲಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಭವಿಷ್ಯದಲ್ಲಿ ಇನ್ನಷ್ಟು ಪ್ರಶಸ್ತಿಗಳು ನಾಗವೇಣಿ ನಾಯಕ್ ರವರ ಮುಡಿಗೇರಲಿ ಎಂದು ಹಾರೈಸುತ್ತಾ ಅವರಿಗೆ ಅಭಿನಂದನೆಗಳನ್ನು ಸವಿಜ್ಞಾನ ತಂಡ ಸಲ್ಲಿಸುತ್ತದೆ.
****
ಲೇಖಕರು: ಬಿ. ಎನ್ .ರೂಪ, ಸಹಶಿಕ್ಷಕರು
ಸರ್ಕಾರಿ ಉರ್ದು ಮತ್ತು ಆಂಗ್ಲ ಪ್ರೌಢ ಶಾಲೆ
ಗೋರಿಪಾಳ್ಯ
ಬೆಂಗಳೂರು ದಕ್ಷಿಣ ವಲಯ-2
A very nice and true article on Nagaveni.
ReplyDelete🙏🙏🙏
DeleteNagaveni Mam being a women she has proved that women are multitasking multi-faceted dimensional awesome and I am inspired by her work culture. I am truly honoured to write about an such an wonderful women. I am very much happy to have her as my friend
ReplyDeleteThank you so much Roopa 🙏🙏
ReplyDeleteVery nice NB, very nice
ReplyDeleteThank you YBS🙏
ReplyDeleteNagaveni madam ",Nimagidu Hemmeya Chappale " Roopa madam done very good job
ReplyDelete