ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, November 4, 2022

ಪರಮಾಣುಗಳ ಬಗ್ಗೆ ಪ್ರಾಚೀನ ಭಾರತದ ಚಿಂತನೆ

ಪರಮಾಣುಗಳ ಬಗ್ಗೆ ಪ್ರಾಚೀನ ಭಾರತದ ಚಿಂತನೆ

ಲೇಖಕರು : ಎ.ಶ್ರೀನಿವಾಸ್


ಪರಮಾಣುಗಳ ಬಗ್ಗೆ ಪ್ರಾಚೀನ ಭಾರತದ ಗ್ರಂಥಗಳಲ್ಲಿ ಸಾಕಷ್ಟು ಉಲ್ಲೇಖಗಳಿವೆ.  ಅದರಲ್ಲಿ ಪ್ರಮುಖವಾದುದು ಮಹರ್ಷಿ ಕಣಾದರು ರಚಿಸಿದ ʼವೈಶೇಷಿಕ ದರ್ಶನʼ ಎಂಬ ಮಹಾಗ್ರಂಥ. ಆ ಗ್ರಂಥದ ಪರಿಚಯದ ಜೊತೆಗೆ ಅದರಲ್ಲಿರುವ ವಿಷಯ ವೈವಿಧ್ಯವನ್ನು ಈ ಲೇಖನದಲ್ಲಿ ವಿವರಿಸಿದ್ದಾರೆ, ಶಿಕ್ಷಕ ಶ್ರೀನಿವಾಸ್‌ ಅವರು.


ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪರಮಾಣು ರಚನೆ ಕುರಿತು ಚರ್ಚೆಮಾಡುವಾಗ, ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದ ಡೆಮೊಕ್ರೇಟಸ್‌, ಡಾಲ್ಟನ್‌, ಥಾಮ್ಸನ್‌, ಛಾಡ್ವಿಕ್‌, ರುದರ್‌ಫೋರ್ಢ್ ಮುಂತಾದ ವಿಜ್ಞಾನಿಗಳ ಬಗ್ಗೆ ವಿವರಿಸಲು ವಿಫುಲವಾದ ಮಾಹಿತಿ ಹಲವಾರು ಪುಸ್ತಕಗಳಲ್ಲಿ, ಹಾಗೂ ಜಾಲತಾಣಗಳಲ್ಲಿ ಲಭ್ಯವಿದೆ. ಆದರೆ, ಇವರೆಲ್ಲರಿಗಿಂತ ಸಾಕಷ್ಟು ಮೊದಲೆ,ಪರಮಾಣುವಿನ ಬಗ್ಗೆ ವಿಷದವಾಗಿ ತಿಳಿಸಿದ ನಮ್ಮ ದೇಶದ ತತ್ವಜ್ಞಾನಿ ಕಣಾದ ಅವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲವೋ ಅಥವಾ ನನಗೆ ದೊರೆಯಲಿಲ್ಲವೋ ತಿಳಿಯಲಿಲ್ಲ.  ಸಹಜವಾಗಿ ಕಣಾದ ಮಹರ್ಷಿಗಳ ಬಗ್ಗೆ ತಿಳಿಯುವ ಕುತೂಹಲ ನನಗೆ ಉಂಟಾಯಿತು. ಹಲವು ಕಡೆಗಳಿಂದ ಮಾಹಿತಿ ಸಂಗ್ರಹಿಸಿದ ನಂತರ ತಿಳಿದು ಬಂದಿದ್ದು ಏನೆಂದರೆ, ಮಹರ್ಷಿ ಕಣಾದರು ʼವೈಶೇಷಿಕದರ್ಶನʼ ಎಂಬ ಕೃತಿ ರಚಿಸಿದ ಪಿತಾಮಹ. ಕಣಾದರು ಸುಮಾರು ಕ್ರಿಸ್ತ ಪೂರ್ವ ೬ನೇ ಶತಮಾನದಲ್ಲಿ ಈ ಕೃತಿಯನ್ನು ರಚಿಸಿರಬಹುದು ಎಂದು ತಿಳಿದುಬಂದಿದೆ. ವೈಶೇಷಿಕದರ್ಶನ ಅನುಭವ ಆಧಾರಿತ ತತ್ವಶಾಸ್ರ್ತವಾಗಿದೆ. ಹಾಗಾದರೆ, ವೈಶೇಷಿಕದರ್ಶನವು ವಿಜ್ಞಾನವಲ್ಲವೆ? ಅದನ್ನು ಈ ಲೇಖನ ಸಂಪೂರ್ಣ ಓದಿದ ನಂತರ ನೀವೇ ನಿರ್ಧರಿಸುವಿರಂತೆ ಈ ದರ್ಶನದ ಮೂಲ ನಮ್ಮನ್ನು ವೇದಗಳೆಡೆಗೆ ಕೊಂಡೊಯ್ಯುತ್ತದೆ. ಭಾರತ ದೇಶವು ಭವ್ಯ ಪುರಾತನ ಪರಂಪರೆಗೆ ಪ್ರಸಿದ್ಧ. ವೇದಗಳ ಸುತ್ತಲು ಹಲವು ತತ್ವಶಾಸ್ರ್ತಗಳು ಕವಲೊಡೆದಿವೆ.

ಜ್ಞಾನಕೇಂದ್ರಿತ ತತ್ವಶಾಸ್ತ್ರ:- ೧. ಸಾಂಖ್ಯ, ೨.ನ್ಯಾಯ, ೩. ವೈಶೇಷಿಕ

ದೈವಕೇಂದ್ರಿತತತ್ವಶಾಸ್ತ್ರ- ೧. ಯೋಗ, ೨.ಮೀಮಾಂಸ, ೩.ವೇದಾಂತ

ಇದರಲ್ಲಿ, ಜ್ಞಾನಕೇಂದ್ರಿತ ತತ್ವಶಾಸ್ರಗಳು ದೇವರು ಅಥವಾ ಸೃಷ್ಟಿಕರ್ತನನ್ನು ಒಪ್ಪುವುದಿಲ್ಲ. ವೇದಗಳಾಧಾರಿತವಾಗಿದ್ದರೂ,  ಕೆಲವು ತತ್ವಶಾಸ್ತ್ರಗಳು ದೇವರನ್ನು ಒಪ್ಪುವುದಿಲ್ಲ ಎಂದರೆ ಆಶ್ಚರ್ಯವೇ!  ನನ್ನದೂ ಅದೇ ಪರಿಸ್ಥಿತಿ. ವೈಶೇಷಿಕ ದರ್ಶನದ ಪ್ರಕಾರ ಇಡೀ ವಿಶ್ವವು ಮೂಲಭೂತವಾಗಿ ಪರಮಾಣುಗಳಿಂದ ಮಾಡಲ್ಪಟ್ಟಿದೆ, ಹಾಗೂ ಇದು ನಿತ್ಯವಾದದ್ದು ಅಂದರೆ, ಅವಿನಾಶಿ (ಸೃಷ್ಟಿಸಲೂ ಸಾಧ್ಯವಿಲ್ಲ, ನಾಶಗೊಳಿಸಲೂ ಸಾಧ್ಯವಿಲ್ಲ). ಈ ಪರಮಾಣು ವಿಶ್ವದಲ್ಲಿ ಅಸ್ಥಿತ್ವದಲ್ಲಿರುವ ಎಲ್ಲಾ ಗ್ರಹ, ನಕ್ಷತ್ರಗಳಲ್ಲಿ ಮತ್ತು ಜೀವಿಗಳಲ್ಲಿ, ವಿವಿಧ ರೂಪಗಳಲ್ಲಿ ವ್ಯಕ್ತಗೊಳ್ಳುತ್ತದೆ. ಅಂದರೆ, ಜೀವಿಗಳು ನಿರ್ಜೀವಿಗಳಿಂದ ಉಂಟಾಗಿವೆ  ಎಂಬ ಅಂಶ ಕಣಾದರಿಗೆ ತಿಳಿದಿತ್ತೆ? ಎಂಬ ಅನುಮಾನ ಮೂಡುತ್ತದೆ. ನನ್ನದೂ ಅದೇ ಗುಮಾನಿ. ಅನುಭವ ವೇಧ್ಯವಾಗಿ ಅದನ್ನು ತಿಳಿಯಬಹುದಾಗಿದೆ. ಇದನ್ನು ಕಣಾದ ಮರ್ಹಷಿಗಳು ರಚಿಸಿದ್ದು, ಬಹುಶಃ ಪ್ರಪಂಚದಲ್ಲಿ ಪರಮಾಣುವನ್ನು ಕುರಿತು ಇದಕ್ಕಿಂತಲೂ ಪುರಾತನವಾದ ಸಾಹಿತ್ಯ ಇರುವ ದಾಖಲೆಗಳು ದೊರೆತಿಲ್ಲ. ಇದು ಹಲವು ಸೂತ್ರಗಳನ್ನು ಹೊಂದಿದೆ.

 ಹಾಗಾದರೆ, ಸೂತ್ರ ಎಂದರೇನು? ಸೂತ್ರವು ಗಹನವಾದ ಮತ್ತು ವಿಸ್ತಾರವಾದ ವಿಷಯ ಜ್ಞಾನವನ್ನು ಅತಿ ಕಡಿಮೆ ಪದಗಳಲ್ಲಿ ಹೇಳುವ ಒಂದು ತಂತ್ರವಾಗಿದೆ. ವೈಶೇಶೀಕ ದರ್ಶನವು ೧೦ ಅಧ್ಯಾಯಗಳನ್ನುಹೊಂದಿದ್ದು, ಅದರಲ್ಲಿ ೩೭೩ ಸೂತ್ರಗಳಿವೆ.

ಮೊದಲನೆ ಅಧ್ಯಾಯ ೪೮ ಸೂತ್ರಗಳನ್ನು ಒಳಗೊಂಡಿದ್ದು, ದ್ರವ್ಯ ಮತ್ತು ಧಾತುಗಳ ವಿಧಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ಅಧ್ಯಾಯದಲ್ಲಿ ಪರಮಾಣು ವಸ್ತುಗಳಾಗಿ ಜಲ, ಅಗ್ನಿ, ಭೂಮಿ, ವಾಯುಗಳನ್ನು ಪರಿಗಣಿಸಲಾಗಿದೆ. ಈ ಕೆಳಗಿನ ಅಂಶಗಳ ಬಗ್ಗೆ ವಿವರಣೆಯಿದೆ

* ಗುಣ:-  ಧಾತುಗಳ ಗುಣಲಕ್ಷಣಗಳು

*ಕರ್ಮ:- ಕ್ರಿಯೆಯ ವಿಧಗಳು

*ಕಾರ್ಯಕಾರಣಕ್ಕೆ ಸಂಬಂದಿಸಿದಂತೆ ನಿರ್ದಿಷ್ಟತೆ ಮತ್ತು ಸಾಮಾನ್ಯತೆ

ಎರಡನೆಅಧ್ಯಾಯ ೪೭ ಸೂತ್ರಗಳನ್ನು ಒಳಗೊಂಡಿದೆ. ಈ ಕೆಳಗಿನ ಅಂಶಗಳ ಬಗ್ಗೆ ವಿವರಣೆಯಿದೆ

·        ದ್ರವ್ಯದ ಗುಣಗಳು

·        ಮಾನವನ ಸಂವೇದನಾ ಸಾಮರ್ಥ್ಯ

·        ನಿತ್ಯ ಮತ್ತು ಅನಿತ್ಯ

·        ಅವಕಾಶ, ಸಮಯ ಮತ್ತು ಮನಸ್ಸು

ಮೂರನೆಯ ಅಧ್ಯಾಯ ೪೧ ಸೂತ್ರಗಳನ್ನು ಒಳಗೊಂಡಿದೆ. ಈ ಕೆಳಗಿನ ಅಂಶಗಳ ಬಗ್ಗೆ ವಿವರಣೆಯಿದೆ.

·        ಪ್ರಕೃತಿಯ ಅನ್ವೇಷಣೆ

·        ಪ್ರಯೋಗ ಮತ್ತು ಆಧಾರ ಸಹಿತವಾಗಿ ಕಲಿಕೆ

·        ಕಾರ್ಯಕಾರಣ ಸಂಬಂದಗಳ ವಿಶ್ಲೇಷಣೆ

·        ಆತ್ಮದ ಅರ್ಥ

ನಾಲ್ಕನೆಯ ಅಧ್ಯಾಯ ೨೫ ಸೂತ್ರಗಳನ್ನು ಒಳಗೊಂಡಿದೆ. ಈ ಕೆಳಗಿನ ಅಂಶಗಳ ಬಗ್ಗೆ ವಿವರಣೆಯಿದೆ

·        ಸತ್ಯ ಮತ್ತು ನಿತ್ಯ

·        ಪರಮಾಣು ಪರಿಕಲ್ಪನೆ

·        ಧಾತುಗಳ ಪರಿಮಾಣ

·        ಯೋನಿಜ ಮತ್ತು ಅಯೋನಿಜ

·        ಧಾತುಗಳ ಜ್ಞಾನ ಮತ್ತು ತಿಳುವಳಿಕೆ

ಐದನೆಯ ಅಧ್ಯಾಯ ೪೪ಸೂತ್ರಗಳನ್ನು ಒಳಗೊಂಡಿದೆ. ಈ ಕೆಳಗಿನ ಅಂಶಗಳ ಬಗ್ಗೆ ವಿವರಣೆಯಿದೆ.

·        ಕರ್ಮದ (ಕ್ರಿಯೆ)ವಿಸ್ತೃತ ಜ್ಞಾನ ಉದಾಹರಣೆಗಳೊಂದಿಗೆ

·        ಗುರುತ್ವ ಬಲದ ಪರಿಕಲ್ಪನೆ

·        ಪ್ರಕೃತಿಯಲ್ಲಿ ಚಲನೆಯ ನಿಯಮಗಳು

·        ಕರ್ಮ(ಕ್ರಿಯೆ) ಮತ್ತು ಆತ್ಮದ ಸಂಬಂಧ

·        ಅದೃಷ್ಟ( ಪ್ರಕೃತಿಯಲ್ಲಿನ ಅಗೋಚರ ಬಲಗಳು)

ಆರನೆಯ ಅಧ್ಯಾಯ ೩೩ ಸೂತ್ರಗಳನ್ನು ಒಳಗೊಂಡಿದೆ. ಈ ಕೆಳಗಿನ ಅಂಶಗಳ ಬಗ್ಗೆ ವಿವರಣೆಯಿದೆ.

·        ಮಾನವನ ಮೇಲೆ ಅದೃಷ್ಟದ ಪ್ರಭಾವ

·        ದಾನದ ಪರಿಕಲ್ಪನೆ

·        ಪ್ರತಿಗ್ರಾಹ (ಸ್ವೀಕರಿಸುವುದು) ಪರಿಕಲ್ಪನೆ

·        ಕರ್ಮ(ಕ್ರಿಯೆ)ದ ಅನುಕೂಲ ಮತ್ತು ಅನನುಕೂಲಗಳು

 

ಏಳನೆಯ ಅಧ್ಯಾಯ ೫೩ ಸೂತ್ರಗಳನ್ನು ಒಳಗೊಂಡಿದೆ. ಈ ಕೆಳಗಿನ ಅಂಶಗಳ ಬಗ್ಗೆ ವಿವರಣೆಯಿದೆ

·        ನಿತ್ಯಮತ್ತು ಅನಿತ್ಯ

·        ಪರಮಾಣುವಿನ ರಚನೆ

·        ಅಣುತ್ವ ಮತ್ತು ಮಹತ್ವ

·        ಆಕಾಶ, ಕಾಲ ಮತ್ತು ಆತ್ಮ

ಎಂಟನೆಯ ಅಧ್ಯಾಯ  ೧೭ ಸೂತ್ರಗಳನ್ನು ಒಳಗೊಂಡಿದೆ. ಈ ಕೆಳಗಿನ ಅಂಶಗಳ ಬಗ್ಗೆ ವಿವರಣೆಯಿದೆ

·        ಜ್ಞಾನ ಮತ್ತು ಸ್ವಾನುಭವದ ಪರಿಕಲ್ಪನೆ

·        ಜ್ಞಾನದ ವಿಧಗಳ ಪರಿಕಲ್ಪನೆ

·        ಧಾತುಗಳ ಇಂದ್ರಿಯ ಸಂವೇದನೆ

ಒಂಬತ್ತನೆಯ ಅಧ್ಯಾಯ  ೧೭ಸೂತ್ರಗಳನ್ನು ಒಳಗೊಂಡಿದೆ. ಈ ಕೆಳಗಿನ ಅಂಶಗಳ ಬಗ್ಗೆ ವಿವರಣೆಯಿದೆ

·        ಸತ್ಯದ ಸಂವೇದನೆ ಹಾಗೂ ಅಸತ್ಯದ ಗ್ರಹಿಕೆ

·        ಅಸ್ತಿತ್ವವಿಲ್ಲವುಗಳ ಪರಿಕಲ್ಪನೆ

·        ಅನುಮಾನದ ಪರಿಕಲ್ಪನೆ

·        ಅವಿಧ್ಯೆಯನ್ನು ಅರ್ಥೈಸುವಿಕೆ

ಹತ್ತನೆಯ ಅಧ್ಯಾಯ  ೧೬ಸೂತ್ರಗಳನ್ನು ಒಳಗೊಂಡಿದೆ. ಈ ಕೆಳಗಿನ ಅಂಶಗಳ ಬಗ್ಗೆ ವಿವರಣೆಯಿದೆ

·        ಸುಖ ಮತ್ತು ದುಃಖದ ಅರ್ಥ

·        ಸುಖ ಮತ್ತು ದುಃಖದ ಕಾರಣಗಳ ವಿಶ್ಲೇಷಣೆ

·        ಅನುಭವದ ಮೂಲಕ ಆತ್ಮ ಸಾಕ್ಷಾತ್ಕಾರ

ಕಣಾದರ ವೈಶೇಷಿಕ ದರ್ಶನವು ಮುಖ್ಯವಾಗಿ ಪ್ರಕೃತಿ, ವಿಶ್ವ ಮತ್ತು ಆತ್ಮವನ್ನು ಸ್ವಾನುಭವದಿಂದ ಅರ್ಥೈಸಿಕೊಳ್ಳುವುದಾಗಿದೆ ಆ ಮೂಲಕ ದರ್ಮ, ಅರ್ಥ, ಕಾಮ ಮತ್ತು ಮೋಕ್ಷವನ್ನು ಹೊಂದುವುದಾಗಿದೆ. ಕಣಾದರ ಪ್ರಕಾರ ಇಡೀ ವಿಶ್ವವು ಈ  ಆರು ಪದಾರ್ಥಗಳಿಂದ ಮಾಡಲ್ಪಟ್ಟಿದೆ; ದ್ರವ್ಯ, ಗುಣ, ಕರ್ಮ, ಸಾಮಾನ್ಯ, ವಿಶೇಷ ಮತ್ತು ಸಮವ್ಯ

ದ್ರವ್ಯಗಳು ೯:- ಪೃಥ್ವಿ, ಭೂಮಿ, ಅಗ್ನಿ, ವಾಯು, ಆಕಾಶ, ಕಾಲ, ದಿಕ್ಕು, ಆತ್ಮ, ಮನಸ್ಸು

ಗುಣಗಳು :- ಬಣ್ಣ, ರುಚಿ, ವಾಸನೆ, ಸ್ಪರ್ಶ, ಸಾಂಖ್ಯ, ಪರಿಮಾಣ, ಸಂಯೋಗ, ವಿಭಾಗ, ಆಧ್ಯತೆ, ಬುದ್ಧಿ, ಸುಖ, ದುಃಖ, ಇಚ್ಛೆ, ಪ್ರಯತ್ನ, ದೃಢತೆ

ಕರ್ಮಗಳು :-ಉತ್ಕೇಷಪಣ, ಅವಕ್ಷೇಪಣ, ಅಕುಂಚನ, ಗಮನ, ಪ್ರಸಾರಣ

ವೈಜ್ಞಾನಿ ಕಅಂಶಗಳು:

ಗುರುತ್ವಮತ್ತುಚಲನೆಯನಿಯಮಗಳು

“ಸಂಯೋಗ ಅಭಾವೆ ಗುರುತ್ವಾತ್ಪತನಂ”

ದ್ರವ್ಯವು ತನ್ನ ರಾಶಿ ಮತ್ತು ಗುರುತ್ವ ಆಕರ್ಷಣೆಯಿಂದ ಕೆಳಗೆ (ಭೂಮಿಯಕಡೆಗೆ) ಬೀಳುತ್ತದೆ.

“ಗುರುತ್ವ ಪ್ರಯತ್ನ ಸಂಯೋಗಣಾಂ ಉಕ್ಷೇಪಣಾಂ”

ವಸ್ತು ಮೇಲ್ಮುಖವಾಗಿ ಚಲಿಸಲು ಕಾರಣ, ವಸ್ತುವಿನ ಮೇಲೆ ಉಂಟಾಗುವ ಗುರುತ್ವ ಆಕರ್ಷಣೆ ಮತ್ತು ಮೇಲ್ಮುಖ ಬಲಗಳ ಸಂಯೋಗದಿಂದ.

ದ್ರವ್ಯದ ವ್ಯಾಖ್ಯಾನ:-

“ಪೃಥಿವ್‌ ಆಪಸ್‌ ತೇಜೋ ವಾಯು ಆಕಾಶಂ ಕಾಲೋದಿಗಾತ್ಮ ಮನ ಇತಿ ದ್ರವ್ಯಾಣಿ”

ದ್ರವ್ಯ, ಭೂಮಿ ಜಲ ಅಗ್ನಿ ಆಕಾಶ, ಅಲ್ಲದೆ ಸಮಯ ಅವಕಾಶ ಮನಸ್ಸು ಹಾಗೂ ಆತ್ಮ ಎಂಬ ಮೂಲಭೂತ ದಾತುಗಳಿಂದಾಗಿದೆ

ಪರಮಾಣುವಿನ ವ್ಯಾಖ್ಯಾನ:-

“ಸದಕಾರಣ ಅನಿತ್ಯಂತಸ್ಯ ಕಾರ್ಯಂ ಲಿಂಗಂ”

ವಿಶ್ವ ಯಾವುದೇ ಕಾರಣವಿಲ್ಲದೆ ಅಸ್ತಿತ್ವದಲ್ಲಿದೆ ಹಾಗೂ ಅದು ಅನಾದಿಯಾಗಿದೆ (ಆದಿ ಅಂತ್ಯವಿಲ್ಲದ್ದು) ಅದಕ್ಕೆ ಸಾಕ್ಷಿಯೇ ಪರಮಾಣು

“ನಿತ್ಯಂ ಪರಿಮಂಡಲಂ”

ಪರಮಾಣು ಅನಾದಿಯಾಗಿದೆ ಹಾಗೂ ವೃತ್ತಾಕಾರದಲ್ಲಿದೆ.

ಅಣುವೋ ಮಹಾ ತ್ಸಚ್ಚೋಫಲಾಧ್ಯಾಯಾನುಪಲಿಬ್ದಿ ನಿತ್ಯೆ ವ್ಯಾಖ್ಯಾಯತೆ”

ಯಾವುದು ಅನಾದಿಯಾಗಿದೆಯೋ, ಅವಿನಾಶಿಯಾಗಿದೆಯೋ ಅದು ಸೂಕ್ಷ್ಮವಾಗಿರುತ್ತದೆ.

“ದೃಷ್ಟಾನಾಂ ದೃಷ್ಟ ಪ್ರಯೋಜನನಾಂ ದೃಷ್ಟ ಭಾವೆ ಪ್ರಯೋಗಾಭ್ಯುದಯಾಯೆ”

ಪ್ರಯೋಗ ಮತ್ತು ಅನುಭವದ ಮೂಲಕ ಮಾತ್ರವೇ ವಿಶ್ವವನ್ನು ಮತ್ತು ಜೇವನವನ್ನು ಅರಿತುಕೊಳ್ಳಲು ಸಾಧ್ಯ.

“ತದ್ವಚನಾದಾಂನಾಯಸ್ಯ ಪ್ರಮಾಣಮಿತಿ”

ಇದೆಲ್ಲದಕ್ಕೂ ವೇದಗಳು ಪ್ರಮಾಣವಾಗಿ ನಿಲ್ಲುತ್ತದೆ.

 

 

33 comments:

  1. Replies
    1. ಕಣಾದರನ್ನು ತತ್ತ್ವಜ್ಞಾನಿ ಎನ್ನುವುದರೊಂದಿಗೆ ಪರಮಾಣು ವಿಜ್ಞಾನಿ ಎಂದರೂ ತಪ್ಪಾಗದು.

      "ಕಣಾದ" ಪರಮಾಣು ಜಗತ್ತಿಗೆ "ಕಣ್ಣಾದ"

      Delete
  2. ವಿಜ್ಞಾನ ದ ಇತಿಹಾಸ ಚೆನ್ನಾಗಿ ಮೂಡಿ ಬಂದಿದೆ sir

    ReplyDelete
  3. 🙏🙏🙏ಕಣಾದ ರ ಕುರಿತು ತಾವು ಅನ್ವೇಷಣೆ ನಡೆಸಿ... ಅವರ ಜ್ಞಾನದ ರಸ ಸಾರವನ್ನು ಉಣಬಡಿಸಿದ ತಮಗೆ ಅನಂತ ವಂದನೆಗಳು 👏.. ಹಾಗೂ ಅ ಪುಸ್ತಕ ವನ್ನು ನಾವೂ ಹೆಚ್ಚಿನ ಜ್ಞಾನದ ಆನಂದ ಕ್ಕೆ ಓದಬೇಕು ಎಂಬ ಇಚ್ಛೆ ಉಂಟಾಗುತ್ತಿದೆ... ಆ ಪುಸ್ತಕ ಲಭ್ಯ ಮಾಹಿತಿ ನೀಡಿ 📚

    ReplyDelete
    Replies
    1. ಧನ್ಯವಾದಗಳು ಸರ್, ಷಡ್ ದರ್ಶನಗಳಲ್ಲಿ ವೈಶೇಷಿಕ ದರ್ಶನ ಸಹ ಒಂದು. ಕಣಾದರ ಈ ಗ್ರಂಥ ಸಂಸ್ಕೃತ ಮತ್ತು ಆಂಗ್ಲ ಭಾಷೆಯಲ್ಲಿ ದೊರೆಯುತ್ತದೆ. ವಿವಿಧ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿವೆ.

      Delete
  4. ನಿಜವಾಗಿಯೂ ವೈಷೇಶಿಕ ಕೃತಿ ಒಂವಿಸ್ದುಹಾಯ ವಿಶೇಷ ಜ್ಞಾನದ ಸಂಪನ್ಮೂಲ .
    ಪರಮಾಣುವಿನ ಪರಿಕಲ್ಪನೆ ಪರಿ ಪರಿಯಾಗಿ ಪ್ರಪಂಚಕ್ಕೆ ಸಾದರಪಡಿಸಿದ ಮಹಾನ್ ಕೃತಿ .
    ಈ ಕೃತಿಯಲ್ಲಿನ ಮಹತ್ತರ ವಿಚಾರಧಾರೆಯನ್ನು ಪರಿಚಯಿಸಿದ ತಮಗೆ ಹೃತ್ಪೂರ್ವಕ ಅಭಿನಂದೆಗಳು ಸಾರ್.
    ನಿಜಕ್ಕೂ ಭಾರತ ವಿಶ್ವಗುರು ಎಂಬ ಅತ್ಯಂತ ಹೆಮ್ಮೆಯ ವಿಷಯ.
    ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್.
    ಧನ್ಯವಾದಗಳು ಸಾರ್.

    ReplyDelete
    Replies
    1. ನಿಮ್ಮ ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು ಸರ್

      Delete
  5. ಒಂದು ವಿಸ್ಮಯ ಕೃತಿ .
    Just kannada typing mistake.
    Pls. Correctly read as above sir.
    Sorry.

    ReplyDelete
    Replies
    1. ಧನ್ಯವಾದಗಳು, ದೋಷಗಳನ್ನು ಸರಿಪಡಿಸೋಣ ಸರ್

      Delete
  6. ವಿಸ್ಮಯ ಹಾಗು ಆಸಕ್ತಿ ಹೆಚ್ಚಿಸುವ ಲೇಖನ . ಈ ಲೇಖನದ ಮೂಲಕ ಕಣಾದರ ವಿಚಾರಧಾರೆ ಪರಿಚಯಿಸಿದ ನಿಮಗೆ ಧನ್ಯವಾದಗಳು ಸರ್.
    ಈ ಪುಸ್ತಕ ಎಲ್ಲಿ ಲಭ್ಯವಿದೆ .

    ReplyDelete
    Replies
    1. ಧನ್ಯವಾದಗಳು ಸರ್, ಕಣಾದರ ವೈಶೇಷಿಕ ದರ್ಶನ ಆಂಗ್ಲ ಭಾಷೆಯಲ್ಲಿ ಹಲವು ಪ್ರಕಟಣೆಗಳಿವೆ

      Delete
  7. Very nice eye opener by maharshi kanada sir

    ReplyDelete
  8. Superb sir.
    The way of Narrating is awesome,the explanation is wonderful and nyc way to glorify the greatness of our great Rishis

    ReplyDelete
  9. Wonderful Sir.
    Hats off to your work and thanks for the detailed information

    ReplyDelete
  10. ಬಹಳ ಸೊಗಸಾದ ಮಾಹಿತಿಯನ್ನು ಒಳಗೊಂಡ ಲೇಖನ.... ನಾವು ನಿಮ್ಮ ವಿದ್ಯಾರ್ಥಿಗಳು ಎನ್ನುವುದೇ ನಮಗೆ ಹೆಮ್ಮೆ....ಅಭಿನಂದನೆಗಳು ಸರ್.....

    ReplyDelete
  11. ಪರಮಾಣು ವಿಜ್ನಾನದ ಬಗ್ಗೆ ಭಾರತದ ಪ್ರಾಚೀನ ಗ್ರಂಥಗಳಲ್ಲಿನ ಮಾಹಿತಿ ಹಾಗೂ ಮಹರ್ಷಿ ಕಣಾದರರ ಬಗ್ಗೆ ಸಾಕಷ್ಟು ಉಪಯುಕ್ತ ಹಾಗೂ ಹೊಸ ವೈಜ್ಞಾನಿಕ ಮಾಹಿತಿಯನ್ನು ಪರಿಚಯಿಸಿದ್ದೀರಿ. ಧನ್ಯವಾದಗಳು ಸರ್

    ReplyDelete
  12. ಸರ್, ಶ್ರೀ ಕೃಷ್ಣ ಬಾಯಲ್ಲಿ ಬ್ರಹ್ಮಾಂಡ ತೋರಿಸಿದಂತೆ ತಾವುಗಳು ತಮ್ಮ ಲೇಖನದಲ್ಲಿ ಪರಮಾಣುವಿನ ದರ್ಶನವನ್ನು ಅದ್ಭುತವಾಗಿ ಮಾಡಿಸಿದ್ದೀರಿ. ತಮ್ಮಿಂದ ಇನ್ನಷ್ಟು ಲೇಖನಗಳು ಗಹನವಾದ ವಿಚಾರಗಳು ಲೇಖನದ ರೂಪದಲ್ಲಿ ಎಲ್ಲರಿಗೂ ಸಹ ತಲುಪಲಿ ಸರ್.

    ReplyDelete
  13. ಧನ್ಯವಾದಗಳು ರವಿ ಸರ್

    ReplyDelete
  14. ವೈಶೇಷಿಕ ತತ್ವಶಾಸ್ತ್ರ ಕುತೂಹಲ, ವಿಸ್ಮಯ, ಕೌತುಕ, ಅಚ್ಚರಿ, ಅನಂತವೆನಿಸುವಷ್ಟಿದೆ. ಸೂತ್ರಗಳ ಕ್ರಮ, ಅಳವಡಿಕೆ, ಅದ್ಭುತ!!!!! ವೈಶೇಷಿಕ ಸಾರ ಉಣಬಡಿಸಿದ ತಮಗೆ ಧನ್ಯವಾದಗಳು

    ReplyDelete