ಸಂಪಾದಕರ ಡೈರಿಯಿಂದ .....
ನಾಡಿನೆಲ್ಲೆಡೆ
ದೀಪಾವಳಿ ಹಬ್ಬದ ಸಡಗರ ಮುಗಿಯುತ್ತಲೇ ಕನ್ನಡ ನಾಡು ನುಡಿಯ ಜಾಗೃತಿ ಮೂಡಿಸುವ ಕನ್ನಡದ
ಹಬ್ಬದ ಸಡಗರವೋ ಸಡಗರ. ಕೋಟಿಕಂಠ ಗಾಯನದೊಡನೆ ರಾಜ್ಯೋತ್ಸವಕ್ಕೆ ಅಣಿಯಾಗಿದ್ದೇವೆ.
“ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು ||
ಕಾಮನ ಬಿಲ್ಲನು ಕಾಣುವ ಕವಿಯೊಳು ತೆಕ್ಕನೆ ಮನ ಮೈ ಮರೆಯುವುದು….”
ರಸಋಷಿಯ ಅಮರಗೀತವು
ಹೊಸ ಹುರುಪನ್ನು ತುಂಬುತ್ತಿರುವ ಈ ಸುಸಂದರ್ಭದಲ್ಲಿ ‘ಸವಿಜ್ಞಾನ’ ತಂಡದ ಎಲ್ಲ ಸದಸ್ಯರಿಗೆ, ಸಹೃದಯಿ ಲೇಖಕರಿಗೆ ‘ ಹಾಗೂ
ಅಭಿಮಾನಿ ಓದುಗರಿಗೆ ನಮ್ಮ ಶುಭ ಹಾರೈಕೆಗಳು. ನಮ್ಮನಾಡಹಬ್ಬದ ಸಂಭ್ರಮದ ವಾತಾವರಣದ ಮಧ್ಯೆ ನಿಮ್ಮ ಮಿದುಳಿಗೆ, ಮನಸ್ಸಿಗೆ ಕೊಂಚ ಮುದ
ನೀಡಲು ‘ಸವಿಜ್ಞಾನ’ದ ನವಂಬರ್ ತಿಂಗಳ ಸಂಚಿಕೆ ನಿಮ್ಮ ಮುಂದಿದೆ.
ಇವೆಲ್ಲದರ
ಜೊತೆಗೆ, ಎಂದಿನಂತೆ ಶಾಲೆಗಳಲ್ಲಿ ಮಕ್ಕಳಲ್ಲಿ ಜಾಗೃತಿ
ಮೂಡಿಸಲು ಸಹಾಯಕವಾಗುವಂತೆ ನವಂಬರ್ ತಿಂಗಳಿನ ಪ್ರಮುಖ ದಿನಾಚರಣೆಗಳ ಬಗ್ಗೆ
ಮಾಹಿತಿ ನೀಡಿದೆ. ವಿಜ್ಞಾನಕ್ಕೆ ಸಂಬಂಧಿಸಿದ ನಮ್ಮ ಸ್ಥಿರ ಅಂಕಣಗಳಾದ,
ಪದಬಂಧ, ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳು
ನಿಮ್ಮನ್ನು ರಂಜಿಸಲಿವೆ. ಸಂಚಿಕೆಯ ಎಲ್ಲ ಲೇಖನಗಳನ್ನು ಹಾಗೂ ಅಂಕಣಗಳನ್ನು ಓದಿ, ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ಬ್ಲಾಗ್‌ನಲ್ಲಿ ದಾಖಲಿಸಿ.
ನಾಡು, ನುಡಿ, ವಿಜ್ಞಾನಗಳಿಗೆ ನಿಮ್ಮ ಲೇಖನಗಳ ಕಾಣಿಕೆಯ ಪುಷ್ಪಾಂಜಲಿ ಸಲ್ಲಿಲಿ ಎಂದು
ಆಶಿಸುತ್ತೇನೆ.
ಪ್ರಧಾನ ಸಂಪಾದಕರ ಪರವಾಗಿ
ರಾಮಚಂದ್ರಭಟ್ ಬಿ.ಜಿ.
No comments:
Post a Comment