Friday, March 4, 2022

ಸವಿಜ್ಞಾನ ಮಾರ್ಚ್ 2022ರ ಲೇಖನಗಳು  

ಸಂಪಾದಕರ ಡೈರಿಯಿಂದ

  1. ಸದ್ದು ಕೇಳೀತು ಯಾಕೆ?. . . ಜೋಕೆ  - ರೋಹಿತ್ ವಿ ಸಾಗರ್
  2. ಡೀಸೆಲ್ ಇಂಜನ್ ಅನ್ವೇಷಣೆಯ ಹಿಂದಿನ ರೋಚಕ ಕಥೆ - ಕೆ. ಸುರೇಶ
  3. ಸಹಸ್ರಮಾನದ ವಿಜ್ಞಾನಿ, ಮಹಾನ್‌ ಮಾನವತಾವಾದಿ ಐನ್‌ಸ್ಟೀನ್‌ - ರಾಮಚಂದ್ರ ಭಟ್‌ ಬಿ.ಜಿ.
  4. ಕಾಡಿನ ಸಂರಕ್ಷಣೆ ಯಾರ ಕೈಯಲ್ಲಿದೆ? - ಡಿ. ಕೃಷ್ಣಚೈತನ್ಯ
  5. ಕಿರೀಟ ಗೊಂಬೆಗಳು - ಸಿದ್ದು ಬಿರಾದಾರ
  6. ಜ್ಞಾನದಾಸೋಹಿ, ಮಾದರಿ ಶಿಕ್ಷಕ ಡಾ. ಶಶಿಧರ ಬಸಪ್ಪ ಕುಂಬಾರ 

ಒಗಟುಗಳು - ಶ್ರೀಮತಿ ಬಿ.ಎನ್. ರೂಪ, ಶ್ರೀಮತಿ ಚಂದ್ರಿಕಾ ಆರ್ ಬಾಯರಿ

ಪದಬಂಧ - ವಿಜಯಕುಮಾರ್‌ ಹೆಚ್.ಜಿ

ವ್ಯಂಗ್ಯಚಿತ್ರಶ್ರೀಮತಿ ಜಯಶ್ರೀ ಬಿ ಶರ್ಮ

ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ

ಕಳೆದ ವಾರವಷ್ಟೇ ರಾಜ್ಯದ ಹಾಗೂ ರಾಷ್ಟ್ರದ ಎಲ್ಲೆಡೆ ‘ರಾಷ್ಟ್ರೀಯ ವಿಜ್ಞಾನ ದಿನ’ ದ ಆಚರಣೆಯ ಸಂಭ್ರಮವನ್ನು ಕಂಡಿದ್ದೇವೆ. ಅದರಲ್ಲಿಯೂ ಈ ವರ್ಷ ನಮ್ಮ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ವಿಜ್ಞಾನ ದಿನದ ಆಚರಣೆಗೆ ವಿಶೇಷ ಕಳೆ ಕಟ್ಟಿದ್ದನ್ನು ಗಮನಿಸಿದ್ದೇವೆ. ‘ವಿಜ್ಞಾನಮ್ ಸರ್ವತ್ರ ಪೂಜ್ಯತೆ” ಎಂಬ ಘೋಷ ವಾಕ್ಯದ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ ಗುರುತಿಸಲಾದ 75 ಕೇಂದ್ರಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ನಾನಾ ರೀತಿಯ ಸ್ಪರ್ಧೆಗಳು, ಪ್ರವಚನಗಳು, ಪ್ರದರ್ಶನಗಳು ಹಾಗೂ ಸಂವಾದಗಳನ್ನು ನಡೆಸಲಾಗಿತ್ತು. ಕಳೆದ ತಿಂಗಳ ಕೊನೆಯ ವಾರ ಪೂರ್ತಿ, ಇಡೀ ದೇಶದಲ್ಲಿ ವಿಜ್ಞಾನದ ಹಬ್ಬದ ವಾತಾವರಣವಿತ್ತು. ರಾಜ್ಯದ ಎಲ್ಲ ಶಾಲೆಗಳಲ್ಲಿ ಶಿಕ್ಷಕರು ‘ರಾಷ್ಟ್ರೀಯ ವಿಜ್ಞಾನ ದಿನ’ವನ್ನು ತಮ್ಮ, ತಮ್ಮ ನೆಲೆಯಲ್ಲಿ ಆಚರಿಸಿ, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವುದು ಅಭಿನಂದನೀಯ.

2022ರ ಮಾರ್ಚ್ ತಿಂಗಳ ‘ಸವಿಜ್ಞಾನ’ ಸಂಚಿಕೆ ಈ ಸಡಗರದ ಮಧ್ಯೆ ಪ್ರಕಟವಾಗುತ್ತಿದೆ. ನಿಮ್ಮ ಆಸಕ್ತಿ ಹಾಗೂ ಸಲಹೆಗಳನ್ನು ಗಮನದಲ್ಲಿರಿಸಿಕೊಂಡು ಸಾಂದರ್ಭಿಕ ಹಾಗೂ ವೈವಿಧ್ಯಮಯ ಲೇಖನಗಳನ್ನು ನಿಮಗಾಗಿ ಹೊತ್ತು ತಂದಿದೆ. ಖ್ಯಾತ ಭೌತ ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೈನ್ ಅವರ ಜನ್ಮದಿನದ ಸಂದರ್ಭದಲ್ಲಿ ಅವರ ಬಗ್ಗೆ ರಾಮಚಂದ್ರ ಭಟ್ ಬರೆದ ಲೇಖನವಿದೆ. ಹಾಗೆಯೇ ಇಂದು ಸಾರಿಗೆ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ಡೀಸಲ್ ಇಂಜಿನ್‍ಗಳ ಆವಿಷ್ಕಾರ ಮಾಡಿದ ವಿಜ್ಞಾನಿ ಡೀಸಲ್ ಅವರ ಜನ್ಮದಿನದ ಸ್ಮರಣೆಯಲ್ಲಿ ಅವರ ಬಗ್ಗೆ ನಿವೃತ್ತ ಮುಖ್ಯ ಶಿಕ್ಷಕ ಸುರೇಶ್ ಬರೆದಿರುವ ಲೇಖನವಿದೆ. ವಿಶ್ವ ಅರಣ್ಯ ದಿನದ ಸಂದರ್ಭಕ್ಕೆಂದು ಶಿಕ್ಷಕ ಹಾಗೂ ವನ್ಯ ಜೀವಿ ತಜ್ಞ ಕೃಷ್ಣ ಚೈತನ್ಯ ಬರೆದಿರುವ ‘ಕಾಡಿನ ಸಂರಕ್ಷಣೆಯ ಹೊಣೆ ಯಾರ ಕೈಯಲ್ಲಿದೆ?’ ಎಂಬ ವಿಚಾರ ಪ್ರಚೋದಕ ಲೇಖನವಿದೆ. ನಮ್ಮ ನಿತ್ಯ ಜೀವನದಲ್ಲಿ ಕೇಳುವ ಬಗೆ ಬಗೆಯ ಶಬ್ಧಗಳ ಹಿಂದಿರುವ ವಿಜ್ಞಾನವನ್ನು ಕುತೂಹಲಕಾರಿಯಾಗಿ ವಿವರಿಸುವ ಲೇಖನವೊಂದನ್ನು ಭೌತ ವಿಜ್ಞಾನ‌ ಉಪನ್ಯಾಸಕ ರೋಹಿತ್ ಬರೆದಿದ್ದಾರೆ. ಬೊಂಬೆಗಳನ್ನು ಬಳಸಿ ವಿಜ್ಞಾನ ಬೋಧಿಸುವ ಶಿಕ್ಷಕ ಸಿದ್ದು ಬಿರಾದಾರ್ ತಮ್ಮ ಸರಣಿ ಲೇಖನದಲ್ಲಿ ಈ ಬಾರಿ ಕಿರೀಟ ಗೊಂಬೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಮನೆ ಮಾತಾಗಿರುವ ವಿಜ್ಞಾನ ಶಿಕ್ಷಕ ಡಾ.ಶಶಿಧರ್ ಕುಂಬಾರ್ ಅವರನ್ನು ಈ ಬಾರಿಯ ‘ಸಾಧಕ ಶಿಕ್ಷಕ’ರನ್ನಾಗಿ ಪರಿಚಯಿಸಲಾಗಿದೆ. ಜೊತೆಗೆ, ನಮ್ಮ ಖಾಯಂ ಅಂಕಣಗಳಾದ ಒಗಟುಗಳು, ವ್ಯಂಗ್ಯ ಚಿತ್ರಗಳು ಹಾಗೂ ಪದಬಂಧ ನಿಮ್ಮ ಮಿದುಳಿಗೆ ಕಸರತ್ತು ನೀಡಲಿವೆ.

ಇನ್ನೇಕೆ ತಡ? ಸಂಚಿಕೆಯ ಲೇಖನಗಳನ್ನು ಓದಿ. ನಿಮ್ಮ ಅಭಿಪ್ರಾಯಗಳನ್ನು ದಾಖಲಿಸಿ. ಸಲಹೆಗಳೇನಾದರೂ ಇದ್ದರೆ, ನಮಗೆ ತಿಳಿಸಿ. ನಮ್ಮ ಪ್ರಯತ್ನ ನಿಮಗೆ ಮೆಚ್ಚುಗೆಯಾಗಿದ್ದರೆ, ನಿಮ್ಮ ಸಹೋದ್ಯೋಗಿಗಳಿಗೆ, ಹಿತೈಶಿಗಳಿಗೆ ‘ಸವಿಜ್ಞಾನ’ದ ಬಗ್ಗೆ ತಿಳಿಸಿ.

ಡಾ. ಟಿ. ಎ. ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು


ಸದ್ದು ಕೇಳೀತು ಯಾಕೆ?. . . ಜೋಕೆ

ಸದ್ದು ಕೇಳೀತು ಯಾಕೆ?. . . ಜೋಕೆ 


ಲೇಖನ: ರೋಹಿತ್ ವಿ ಸಾಗರ್
ಪ್ರಾಂಶುಪಾಲರು,
ಹೊಂಗಿರಣ ಸ್ವತಂತ್ರ ಪದವಿಪೂರ್ವ ಕಾಲೇಜು
ಸಾಗರ


ಖುಶಿ ಕೊಡುವ ಕೊನೆಯ ಬೆಲ್ ಇಂದ ಪ್ರಾರಂಭಿಸಿ ವಿವಿಧೆಡೆ, ವಿವಿಧ ಸಂದರ್ಭಗಳಲ್ಲಿ ನಮಗೆ ಕೇಳಿಸುವ ವಿವಿಧ ಬಗೆಯ ಶಬ್ದಗಳ ಹಿಂದಿರುವ ವಿಜ್ಞಾನವನ್ನು ಸರಳವಾಗಿ, ಸೊಗಸಾಗಿ ವಿವರಿಸುವ ಈ ಲೇಖನವನ್ನು ಬರೆದವರು 'ಸವಿಜ್ಞಾನ' ತಂಡದ ಸಂಪಾದಕರೂ, ವೃತ್ತಿಯಿಂದ ಭೌತಶಾಸ್ತ್ರದ ಉಪನ್ಯಾಸಕರೂ ಆದ ರೋಹಿತ್ ಸಾಗರ್  ಅವರು. 

ಡೀಸೆಲ್ ಇಂಜನ್ ಅನ್ವೇಷಣೆಯ ಹಿಂದಿನ ರೋಚಕ ಕಥೆ

ಡೀಸೆಲ್ ಇಂಜನ್ ಅನ್ವೇಷಣೆಯ ಹಿಂದಿನ ರೋಚಕ ಕಥೆ


ಲೇಖನ: ಕೆ. ಸುರೇಶ

ನಂದಾಶ್ರೀ ಬಳಿ

ಕಾಲೇಜು ರಸ್ತೆ

ಹೊಸಕೋಟೆ 


ಇಂದು ಸಾರಿಗೆ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ವಾಹನಗಳಲ್ಲಿ ಬಳಸುವ ಇಂಜಿನ್ನಿನ ಅನ್ವೇಷಣೆಯ ಹಿಂದೆ ಅಡಗಿರುವ ಡೀಸೆಲ್ ಎಂಬ ವಿಜ್ಞಾನಿಯ ಪರಿಶ್ರಮದ ಕಥೆಯನ್ನು ಈ ಲೇಕನದಲ್ಲಿ ನವಿರಾಗಿ ನಿರೂಪಿಸಿದ್ದಾರೆ, ನಿವೃತ್ತ ವಿಜ್ಞಾನ ಶಿಕ್ಷಕ ಸುರೇಶ್ ಅವರು.

ಸಹಸ್ರಮಾನದ ವಿಜ್ಞಾನಿ, ಮಹಾನ್‌ ಮಾನವತಾವಾದಿ ಐನ್‌ಸ್ಟೀನ್‌


ಸಹಸ್ರಮಾನದ ವಿಜ್ಞಾನಿ, ಮಹಾನ್‌ ಮಾನವತಾವಾದಿ ಐನ್‌ಸ್ಟೀನ್‌

ಲೇಖಕರು:    ರಾಮಚಂದ್ರ ಭಟ್ ಬಿ.ಜಿ. 

                ವಿಜ್ಞಾನ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆಬ್ಯಾಟರಾಯನಪುರ,

ಮೈಸೂರು  ರಸ್ತೆಬೆಂಗಳೂರು


ಜಗತ್ತು ಕಂಡ ಅತ್ಯಂತ ಮೇಧಾವಿ ವಿಜ್ಞಾನಿಗಳಲ್ಲಿ ಒಬ್ಬರು, ಸಾಪೇಕ್ಷ ಸಿದ್ಧಾಂತದ ರೂವಾರಿ, ಆಲ್ಬರ್ಟ್ ಐನ್ ಸ್ಟೀನ್. ಅವರ ಜನ್ಮದಿನದ ಸ್ಮರಣೆಯಲ್ಲಿ ಅವರ ವ್ಯಕ್ತಿತ್ವದ ಪರಿಚಯವನ್ನು ಸುಂದರವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ,  ಶಿಕ್ಷಕ ರಾಮಚಂದ್ರ ಭಟ್.

ಕಾಡಿನ ಸಂರಕ್ಷಣೆ ಯಾರ ಕೈಯಲ್ಲಿದೆ?

ಕಾಡಿನ ಸಂರಕ್ಷಣೆ ಯಾರ ಕೈಯಲ್ಲಿದೆ?                          ಲೇಖನ: ಡಿ. ಕೃಷ್ಣಚೈತನ್ಯ

ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

ವನ್ಯಜೀವಿ ತಜ್ಞರಾದ ಶಿಕ್ಷಕ ಕೃಷ್ಣ ಚೈತನ್ಯ ಅವರ ಸರಣಿ ಲೇಖನಗಳನ್ನು ‘ಸವಿಜ್ಞಾನ’ದಲ್ಲಿ ನೀವೆಲ್ಲರೂ ಓದಿ ಬಹುವಾಗಿ ಮೆಚ್ಚಿಕೊಂಡಿದ್ದೀರಿ. ಕಳೆದ ಬಾರಿ ಹುಲಿಗಳ ಜೀವನ ಕ್ರಮದ ಪರಿಚಯವನ್ನು ಸೊಗಸಾಗಿ ಮಾಡಿಕೊಟ್ಟಿದ್ದ ಕೃಷ್ಣ ಚೈತನ್ಯ ಅವರು, ಈ ಬಾರಿಯ ಮಾಹಿತಿಪೂರ್ಣ ಮತ್ತು ಚಿಂತನೆಗೆ ಒರೆ ಹಚ್ಚುವ ಲೇಖನದಲ್ಲಿ ಕಾಡಿನ ಸಂರಕ್ಷಣೆಯ ಅಗತ್ಯತೆ ಹಾಗೂ ಮಾರ್ಗಗಳ ಬಗ್ಗೆ  ಬೆಳಕು ಚೆಲ್ಲಿದ್ದಾರೆ. 

ಕಿರೀಟ ಗೊಂಬೆಗಳು

ಕಿರೀಟ ಗೊಂಬೆಗಳು

ಲೇಖನ: ಸಿದ್ದು ಬಿರಾದಾರ, 

ವಿಜ್ಞಾನ ಶಿಕ್ಷಕ

ಸರಕಾರಿ ಪ್ರೌಢ ಶಾಲೆ ಚಿಬ್ಬಲಗೇರಿ

ತಾ: ಹಳಿಯಾಳ, ಶಿರಸಿ ಶೈಕ್ಷಣಿಕ ಜಿಲ್ಲೆ, ಉತ್ತರ ಕನ್ನಡ 

ಗೊಂಬೆಗಳನ್ನು ವಿಜ್ಞಾನ ಬೋಧನೆಯಲ್ಲಿ ಪರಿಣಾಮಕಾರಿಯಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಮ್ಮ ಸರಣಿ ಲೇಖನಗಳ ಮೂಲಕ ನಿರೂಪಿಸುತ್ತಿರುವ ಶಿಕ್ಷಕ ಸಿದ್ದು ಬಿರಾದಾರ್ ಈ ಬಾರಿ ಕಿರೀಟ ಗೊಂಬೆಗಳನ್ನು ತಯಾರಿಸಿ ಬೋಧನೆಯಲ್ಲಿ ಬಳಸಿಕೊಳ್ಳುವ ಬಗ್ಗೆ ಪ್ರಸ್ತುತ ಪಡಿಸಿದ್ದಾರೆ. 

ಜ್ಞಾನದಾಸೋಹಿ, ಮಾದರಿ ಶಿಕ್ಷಕ ಡಾ. ಶಶಿಧರ ಬಸಪ್ಪ ಕುಂಬಾರ

ಜ್ಞಾನದಾಸೋಹಿ, ಮಾದರಿ ಶಿಕ್ಷಕ ಡಾ. ಶಶಿಧರ ಬಸಪ್ಪ ಕುಂಬಾರ



                                                                                                        ಲೇಖನ: ರಾಮಚಂದ್ರ ಭಟ್ ಬಿ.ಜಿ.

ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶಿಕ್ಷಕ ಡಾ.ಶಶಿಧರ ಕುಂಬಾರ ಅವರನ್ನು ಈ ತಿಂಗಳ ‘ಸಾಧಕ ಶಿಕ್ಷಕ’ರನ್ನಾಗಿ ನಮ್ಮ ಓದುಗರಿಗೆ ಪರಿಚಯ ಮಾಡಿಸಲು ‘ಸವಿಜ್ಞಾನ’ ತಂಡ ಹರ್ಷಿಸುತ್ತದೆ.

ಒಗಟುಗಳು - ಮಾರ್ಚ್ 2022

ಒಗಟುಗಳು -  ಮಾರ್ಚ್  2022

ನಾನು ಒಂದು ಸಾಧನ

ವಿವಿಧ ಮಂಡಲಗಳಲ್ಲಿ ಬಳಸಲ್ಪಡುತ್ತೇನೆ

ನಾನು ಒಂದು ಮಂಡಲದಲ್ಲಿ ವಿದ್ಯುತ್ ಪ್ರವಾಹದ ದಿಕ್ಕನ್ನು ಹಿಮ್ಮುಖಗೊಳಿಸುತ್ತೇನೆ.

ಹಾಗಿದ್ದಲ್ಲಿ ನಾನು ಯಾರು ?

 

ವಿದ್ಯುತ್ ಶಕ್ತಿ ನಿನ್ನ ಲೀಲೆ ಅಪಾರ,

ನಿನ್ನಿಂದ ನಮ್ಮ ಜೀವನ ಸುಲಲಿತ,

ಆಧುನಿಕ ಜೀವನದ ಒಂದು ಅವಿಭಾಜ್ಯ ಅಂಗ ನೀ

ಅತ್ಯಲ್ಪ ಪ್ರವಾಹದ ಉಪಸ್ಥಿತಿಯನ್ನು ಕಂಡುಹಿಡಿಯುವ ಸಾಧನದ ಹೆಸರನ್ನು ಹೇಳಬಲ್ಲಿರಾ ?

 

ಕತ್ತಲನ್ನು ಓಡಿಸುವ ಬೆಳಕು

ನಮ್ಮ ಜೀವನವನ್ನು ವರ್ಣರಂಜಿತವಾಗಿರುತ್ತದೆ.

ಬೆಳಕಿನ ವಿದ್ಯಮಾನಗಳು ಆಪಾರ

ಕೆರೆ ತಳಭಾಗದಲ್ಲಿ ಕಲ್ಲು ಮೇಲೆ ಬಂದಂತೆ

ಕಾಣುವ ನನ್ನ ವಿದ್ಯಮಾನದ ಹೆಸರೇನು ?

 

ಸುಮಂಗಲಿಯರ ದೈತಲೆಯಲ್ಲಿ ರಾರಾಜಿಸುವ ಕುಂಕುಮ ನಾನು

ಅಪಾಯದ ಸಂಕೇತವನ್ನು ಬಿಂಬಿಸುತ್ತೇನೆ

ನನ್ನನ್ನು ಆಂಬುಲೆನ್ಸ್ ಮೇಲೆ ಇಟ್ಟಿರುತ್ತಾರೆ.

ಸಂಚಾರಿ ನಿಯಂತ್ರಣ ದೀಪಗಳಲ್ಲಿ ನನ್ನದೇ ದರ್ಬಾರು

ನನ್ನ ಬಣ್ಣದ ಬಳಕೆಗೆ ಕಾರಣ ಹೇಳಬಲ್ಲಿರಾ ?

 

ಇಡೀ ಬ್ರಹ್ಮಾಂಡದಲ್ಲಿ ಸಕಲ ಜೀವರಾಶಿಯನ್ನು ಹೊಂದಿರುವ ನಾನು,

ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಅಗರ

ನನ್ನ ಒಡಲಿನಲ್ಲಿ ಒಂದು ವಿಶಿಷ್ಟ ಅಸಂಪ್ರದಾಯಕ ಶಕ್ತಿಯನ್ನು ಹೊಂದಿರುವ

ಹಾಗಾದರೆ ನನ್ನ ಹೆಸರೇನು?

ಶ್ರೀಮತಿ ಬಿ.ಎನ್. ರೂಪ

ಸಹಶಿಕ್ಷಕರು,

ಸರ್ಕಾರಿ ಉರ್ದು ಮತ್ತು ಆಂಗ್ಲ ಪ್ರೌಢ ಶಾಲೆ ಗೋರಿಪಾಳ್ಯ,

ಬೆಂಗಳೂರು ದಕ್ಷಿಣ ವಲಯ 2

ಗಿಡವಿದು ನೋಡಲು ಆಕರ್ಷಕ

ಅವರ ನಿಜವಾಗಲೂ ನಯವಂಚಕ

ಹತ್ತಿರ ಬರುವ ಹುಳಗಳ ನುಂಗುವುದು

ಹಾಗಾದರೆ ಯಾವ ಗಿಡ ಇದು ?

 

ನನ್ನ ಬಣ್ಣ ಕೆಂಪು.

ನಾನು ಮುಟ್ಟಿದ್ದೆಲ್ಲಾ ಕಪ್ಪು

 

ಗುಂಡಗಿರುವೆ ಚೆಂಡಲ್ಲ

ಮೇಲೆ ಹಾರುವ ಪಕ್ಷಿಯಲ್ಲ

ಅನಿಲವೇ ನನ್ನ ಆಹಾರ

ಹಾಗಾದರೇ ನಾನ್ಯಾರು?

 

ಹಿಮ ಪ್ರದೇಶಗಳಲ್ಲಿ ವಾಸಿಸುವೆ

ದಪ್ಪ ಚರ್ಮದ ಕರಡಿ ನಾನು

ಚಳಿಗಾಲದಲ್ಲಿ ನಿದ್ರೆ ಮಾಡುವೆ

ಹಾಗದರೆ ಯಾರು ನಾನು ?

 

ನಾನು ಕಣ್ಣಿಗೆ ಕಾಣಲಾರೆ

ನಾನಿಲ್ಲದೇ ನೀನು ಬದುಕಲಾರೆ

ನಾನು ಅನಿಲಗಳ ಮಿಶ್ರಣ

ಹಾಗಾದರೆ ನಾನು ಯಾರಣ್ಣ ?

 

ಪ್ರಪಂಚದಲ್ಲಿಯೇ ಅತ್ಯಂತ ಚಿಕ್ಕ ಪಕ್ಷಿ ನಾನು

ಹಿಮ್ಮುಖವಾಗಿ ಹಾರಬಲ್ಲೆನು

ಹಾಗಾದರೆ ನಾನು ಯಾರು ?

 

ಕೆಂಪಂಗಿ ರಾಮಣ್ಣ

ನೆಲದೊಳಗೆ ಇರ್ತಾನೆ

ಕಣ್ಣಿಗೆ ತಂಪ ನೀಡುವನು

ತಿನ್ನಲು ಬಲು ಸಿಹಿ ಇವನು

ಹಾಗಾದರೆ ಯಾರಿವನು ?

 

ಕಿರೀಟವಿದೆ ರಾಜನಲ್ಲ

ಮುಳ್ಳಿದೆ ಗುಲಾಬಿಯಲ್ಲ

ಹುಳಿಯಿದೆ ನಿಂಬೆಯಲ್ಲ

ಇದರ ರುಚಿ ತಿಂದವನೇ ಬಲ್ಲ

ಶ್ರೀಮತಿ ಚಂದ್ರಿಕಾ ಆರ್ ಬಾಯರಿ

ಸಹಶಿಕ್ಷಕರು

ಆನೇಕಲ್ ತಾಲ್ಲೂಕು

ಬೆಂಗಳೂರು


ಸವಿಜ್ಞಾನ : ಪದಬಂಧ- 3

 ಸವಿಜ್ಞಾನ-ಪದಬಂಧ- 3

ಈ ಪದಬಂಧ 10ನೇ ತರಗತಿಯ ಭೌತಶಾಸ್ತ್ರದ “ಬೆಳಕು, ಪ್ರತಿಫಲನ ಮತ್ತು ವಕ್ರೀಭವನ” ಘಟಕವನ್ನು ಆಧರಿಸಿದೆ.

 

 

 

1

 

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

5

 

 

 

 

 

 

 

 

 

 

2

 

 

 

 

4

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

3

 

 

 

 

 

 

 

 

 

 

 

 

 

 

 

 

 

 

 

 

 

4

 

 

 

 

 

 

 

 

 

 

 

 

 

5

 

 

 

 

 

 

 

 

 

 

 

 

 

 

 

 

 

 

 

 

 

 

 

 

6

 

 

 

9

 

 

7

 

6

 

 

 

 

 

 

 

 

 

 

 

 

 

 

 

 

 

 

 

 

 

7

 

 

 

 

 

 

8

 

 

 

 

 

 

 

 

 

 

 

 

 

 

 

 

 

 

 

 

 

 

 

 

9

 

 

10

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಸವಿಜ್ಞಾನ 

ಎಡದಿಂದ ಬಲಕ್ಕೆ

1. ಎರಡೂ ಬದಿಗೆ ಉಬ್ಬಿದ ಮಸೂರ (5)

2. ಮಸೂರ ಅಥವಾ ದರ್ಪಣಗಳಿಗೆ ಸಂಬಂಧಿಸಿದಂತೆ ಯಾವಾಗಲೂ ಬಲಕ್ಕಲ್ಲ ಎಡಕ್ಕೆ ಇಡುವ ರೂಢಿಯ ‘Uʼ (4)

3. ಪ್ರತಿಫಲನದ ನಿಯಮದ ಪ್ರಕಾರ ಪತನಕೋನವು ಫ್ರತಿಫಲನ ಕೋನಕ್ಕೆ______. (2)

4. ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಓರೆಯಾಗಿ ಹೋಗುವಾಗ ಪಥ ಬದಲಿಸುವ ಬೆಳಕಿನ ಕಿರಣ (8)

5. ಬೆಳಕು ಅದೇ ಮಾಧ್ಯಮಕ್ಕೆ ಮರಳುವ ವಿದ್ಯಮಾನ    (5)

6. ಗೋಳೀಯ ದರ್ಪಣದ ಕೇಂದ್ರಬಿಂದು  (5)

7. ಪರದೆಯ ಮೇಲೆ ಮೂಡದ ಪ್ರತಿಬಿಂಬ  (6)

8. ಗೋಳೀಯ ದರ್ಪಣಕ್ಕೆ ಸಂಬಂಧಿಸಿದಂತೆ ‘R’ (5)

9. ವಕ್ರತಾ ತ್ರಿಜ್ಯದ ಅರ್ಧದಷ್ಟು ಅದು ‘ f ’ (5)

 

ಮೇಲಿನಿಂದ ಕೆಳಕ್ಕೆ:

 1. ದೃಷ್ಟಿದೋಷ ನಿವಾರಿಸುವ ಪಾರದರ್ಶಕ ಸಾಧನ,        (3)

2. ಎರಡು ಬೇರೆ ಬೇರೆ ಮಾಧ್ಯಮಗಳಲ್ಲಿ ಬೆಳಕಿನ ವೇಗದ ಅನುಪಾತ (8)

3. ಎರಡು ಕಿರಣಗಳು ವಾಸ್ತವವಾಗಿ ಛೇದಿಸಿದಾಗ ಉಂಟಾಗುವ ಪ್ರತಿಬಿಂಬ  (6)

4. ಯಾವುದೇ ಮೇಲ್ಮೈ ಮೇಲೆ , ಬೀಳುವ ಕಿರಣ   (6) 

5. ಸೌರಕುಲುಮೆಗಳಲ್ಲಿ ಬಳಸುವ ದರ್ಪಣ  (5)

6. ಪ್ರಧಾನ ಅಕ್ಷದ ಮೇಲೆ ಬೆಳಕಿನ ಕಿರಣಗಳು ಏಕೀಭವಿಸುವ ಬಿಂದು (6)

7. ಮಸೂರದಿಂದ ಉಂಟಾದ ವರ್ಧನೆಯು ವಸ್ತು ಮತ್ತು ಅದರ ಪ್ರತಿಬಿಂಬಗಳ ಈ ಪರಿಮಾಣದ ಅನುಪಾತ   (3)

8. ಕಾಮನಬಿಲ್ಲು ಬೆಳಕಿನ ಈ ವಿದ್ಯಮಾನ  (6)

9. ಮಸೂರವು ಭಾಗವಾಗಿರುವ ಕಾಲ್ಪನಿಕ ಗೋಳವೊಂದರ ಕೇಂದ್ರ  (5)

10. ಸಮೀಪದ ವಸ್ತು ಸರಿಯಾಗಿ ಕಾಣದಿರುವಂತಹ ಕಣ್ಣಿನ ದೋಷ   (4)


ಈ ಪದಬಂಧದ ಪಿಡಿಎಫ಼್ ಆವೃತ್ತಿಗಾಗಿ ಇಲ್ಲಿ ಕ್ಲಿಕ್ ಮಾಡಿ --> ಸವಿಜ್ಞಾನ-ಪದಬಂಧ- 3

 

ವಿಜಯಕುಮಾರ್‌ ಹೆಚ್.ಜಿ

ಸಹಶಿಕ್ಷಕ

ಸ.ಪ್ರೌ.ಶಾಲೆ, ಕಾವಲ್‌ ಭೈರಸಂದ್ರ.

9739766840.