ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, March 4, 2022

ಜ್ಞಾನದಾಸೋಹಿ, ಮಾದರಿ ಶಿಕ್ಷಕ ಡಾ. ಶಶಿಧರ ಬಸಪ್ಪ ಕುಂಬಾರ

ಜ್ಞಾನದಾಸೋಹಿ, ಮಾದರಿ ಶಿಕ್ಷಕ ಡಾ. ಶಶಿಧರ ಬಸಪ್ಪ ಕುಂಬಾರ



                                                                                                        ಲೇಖನ: ರಾಮಚಂದ್ರ ಭಟ್ ಬಿ.ಜಿ.

ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶಿಕ್ಷಕ ಡಾ.ಶಶಿಧರ ಕುಂಬಾರ ಅವರನ್ನು ಈ ತಿಂಗಳ ‘ಸಾಧಕ ಶಿಕ್ಷಕ’ರನ್ನಾಗಿ ನಮ್ಮ ಓದುಗರಿಗೆ ಪರಿಚಯ ಮಾಡಿಸಲು ‘ಸವಿಜ್ಞಾನ’ ತಂಡ ಹರ್ಷಿಸುತ್ತದೆ.

ಉತ್ತರ ಕರ್ನಾಟಕ, ಅನ್ನ ದಾಸೋಹದೊಂದಿಗೆ ಜ್ಞಾನ ದಾಸೋಹಕ್ಕೂ ಹೆಸರಾದ ಪ್ರಾಂತ್ಯ. ಈ ಪ್ರಾಂತ್ಯದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹಿರೇಪಡಸಲಗಿಯ ಸರಕಾರಿ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ಕೈಂಕರ್ಯ ನಡೆಸುತ್ತಿರುವ ಜ್ಞಾನ ದಾಸೋಹಿ ಡಾ.ಶಶಿಧರ ಬಸಪ್ಪ ಕುಂಬಾರ ಅವರನ್ನು ನಮ್ಮ ಈ ತಿಂಗಳ ‘ಸಾಧಕ ಶಿಕ್ಷಕ’ರಾಗಿ ಪರಿಚಯಿಸುವುದು ನಮಗೆ ಹೆಮ್ಮೆಯ ವಿಷಯ. ಬಾಗಲಕೋಟೆಯ ಬೀಳಗಿ ಜಿಲ್ಲೆಯಲ್ಲಿ ಜನಿಸಿದ ಇವರ ತಂದೆ, ದಿ.ಶ್ರೀ ಬಸಪ್ಪ ಬಿ.ಕುಂಬಾರ ಹಾಗೂ ತಾಯಿ ಶ್ರೀಮತಿ ನೀಲಮ್ಮ ಬಸಪ್ಪ ಕುಂಬಾರ. 

ಪ್ರಾಣಿಶಾಸ್ತ್ರ ವಿಷಯದಲ್ಲಿ ಎಂ.ಎಸ್‍ಸಿ., ಎಂ.ಫಿಲ್., ಹಾಗೂ ಪಿಹೆಚ್.ಡಿ., ಹಾಗೂ ಬಯೋಸೈನ್ಸ್ ವಿಷಯದಲ್ಲಿ ಎಂ.ಎಡ್ ಸ್ನಾತಕೋತ್ತರ ಪದವಿಗಳೊಂದಿಗೆ ಉನ್ನತ ವಿದ್ಯಾಭ್ಯಾಸ ಪೂರೈಸಿ, ಬೆಳಗಾವಿ ಜಿಲ್ಲೆಯ, ಚಿಕ್ಕೋಡಿಯಲ್ಲಿರುವ KLE ಸಂಸ್ಥೆಯ ಬಿ. ಕೆ. ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಶ್ರೀಯುತರು, ಅಲ್ಲಿ ಏಳು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ನಂತರ, ಸರ್ಕಾರಿ ಸೇವೆಗೆ ಪಾದಾರ್ಪಣೆ ಮಾಡಿದ ಕುಂಬಾರರು ಕಳೆದ ಹದಿನೈದು ವರ್ಷಗಳಿಂದ, ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿ, ಸಮುದಾಯದ ಗೌರವಾದರಗಳಿಗೆ ಪಾತ್ರರಾಗಿ ಸಾರ್ಥಕ ಸೇವೆ ಸಲ್ಲಿಸುತ್ತಿದ್ದಾರೆ. ಈ ಮಧ್ಯೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿರುವ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ (ಸಿ.ಟಿ.ಇ.) ಇಲ್ಲಿ, ವಿಜ್ಞಾನ ವಿಷಯದ ಉಪನ್ಯಾಸಕರಾಗಿ ಒಂದು ವರ್ಷ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸಿದ್ದಾರೆ. ಕಳೆದೊಂದು ದಶಕದಿಂದ ಜಿಲ್ಲಾಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಪ್ರಶಂಸನೀಯ ಸೇವೆ  ಸಲ್ಲಿಸುತ್ತಿದ್ದಾರೆ.




ಸಾಧನೆಗಳು:

* ಶ್ರೀಯುತರ ಮಾರ್ಗದರ್ಶನದಲ್ಲಿ ಕಳೆದ 12 ವರ್ಷಗಳಿಂದ ಪ್ರೌಢಶಾಲಾ ವಿದ್ಯಾರ್ಥಿಗಳು ಇಲಾಖೆಯ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಮೂರು ಬಾರಿ ರಾಷ್ಟ್ರಮಟ್ಟಕ್ಕೆ, ಏಳು ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ ಸ್ಪರ್ಧೆಗಳಲ್ಲಿ ಬಾಗವಹಿಸಿದ ವಿದ್ಯಾರ್ಥಿಗಳು ಎರಡು ಬಾರಿ ಪ್ರಥಮ, ನಾಲ್ಕು ಬಾರಿ ದ್ವಿತೀಯ, ಹಾಗೂ ಒಮ್ಮೆ ತೃತೀಯ ಸ್ಥಾನ ಪಡೆದು ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುವುದು ಹೆಮ್ಮೆ ಪಡುವ ವಿಷಯ.  ಇದು ಪ್ರತಿಯೊಬ್ಬ ವಿದ್ಯಾರ್ಥಿಗೂ ಅನುಕರಣೀಯ ಮಾದರಿಯಾಗಿದೆ. ಇದಲ್ಲದೆ, ಪ್ರಶ್ನೆಪತ್ರಿಕೆ ರಚನಾ ಕಾರ್ಯಾಗಾರಗಳು, ಶಿಕ್ಷಕ ತರಬೇತಿ ಕಮ್ಮಟಗಳಲ್ಲಿಯೂ ಭಾಗವಹಿಸಿದ್ದಾರೆ. ರಾಜ್ಯ ಮಟ್ಟದ ಬಾಲ ವಿಜ್ಞಾನಿ ಆಯ್ಕೆ ಸಮಿತಿಯಲ್ಲಿ ಜ್ಯೂರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 

ಜೊತೆಗೆ, ತಾವೇ ಸ್ವತಃ ಹಲವು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನ ಪಡೆದು ಶಿಕ್ಷಕರಿಗೆ ಮಾದರಿಯಾಗಿರುತ್ತಾರೆ. ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಸಹ-ಶಿಕ್ಷಕರಿಗಾಗಿ ಮತ್ತು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ಭಾಗಿಯಾಗಿ, ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಗಸ್ತ್ಯ ಫೌಂಡೇಷನ್ ನಡೆಸಿದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಶಿಕ್ಷಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿ.  

ಇವರ ಪ್ರಾಂಜಲ ಸೇವಾ ಮನೋಭಾವವನ್ನು ಗುರುತಿಸಿದ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿ, ಗೌರವಿಸಿವೆ, ಇವುಗಳಲ್ಲಿ ಪ್ರಮುಖವಾದವುಗಳೆಂದರೆ,

* "ಉತ್ತಮ ವಿಜ್ಞಾನ ಶಿಕ್ಷಕ - 2016" ಕರ್ನಾಟಕ ರಾಜ್ಯ ಸಹ ಶಿಕ್ಷಕರ ಸಂಘ. ಬಾಗಲಕೋಟೆ ಜಿಲ್ಲಾ ಘಟಕ, ಬಾಗಲಕೋಟೆ.

* "ಶಿಕ್ಷಕ ರತ್ನ-2017" ಪ್ರಶಸ್ತಿ  ಕರ್ನಾಟಕ ಕಾಲೇಜು, ಧಾರವಾಡ.

* "ಆದರ್ಶಶಿಕ್ಷಕ-2019" ಜಾಗರವ್ಯಾಲಿ ರೋಟರಿ ಕ್ಲಬ್, ಮಹಾಲಿಂಗಪೂರ, ಜಮಖಂಡಿ ತಾ.

* "ಆಚಾರ್ಯ ಶ್ರೇಷ್ಠ ಪ್ರಶಸ್ತಿ -2018" ದಿ. ಕಾಶಿಬಾಯಿ ತಿಮ್ಮಸಾಣಿ ವಸತಿ ಪ್ರೌಢಶಾಲೆ ಬೆಳುಬ್ಬಿ. ಕೋಲಾರ ತಾ. ವಿಜಯಪುರ ಜಿಲ್ಲೆ.

* "ಗುರು ಶ್ರೇಷ್ಠ ಪ್ರಶಸ್ತಿ-2020" ಸದ್ಗುರು ಶ್ರೀ ಬಸವಾನಂದ ಶಿಕ್ಷಣ ಸಂಸ್ಥೆ. ಮಹಾಲಿಂಗಪೂರ.

* "ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ-2020" ರಾಜ್ಯ ಸಹ ಶಿಕ್ಷಕರ ಸಂಘ, ಬೆಂಗಳೂರು(ರಿ), ಜಿಲ್ಲಾಘಟಕ ಮತ್ತು ಮಾನ್ಯ ಉಪನಿರ್ದೇಶಕರ ಕಾರ್ಯಾಲಯ, ಬಾಗಲಕೋಟೆ. 

* "ಜ್ಞಾನಸಂಪನ್ನ ಪ್ರಶಸ್ತಿ-2020" ಶ್ರೀಲಕ್ಷ್ಮಿ ಶಿಕ್ಷಣ ಸಂಸ್ಥೆಗಳ ಸಮೂಹ. ಪ್ರೌಢಶಾಲೆ ವಿಭಾಗ. ಗೋಕಾಕ. ಬೆಳಗಾವಿ ಜಿಲ್ಲೆ


ಹೀಗೆ, ಹಲವು ಪ್ರಶಸ್ತಿ- ಗೌರವಗಳ ಸರದಾರರಾದ  ಡಾ. ಶಶಿಧರ ಬಸಪ್ಪ ಕುಂಬಾರ ಅವರ ವೃತ್ತಿ ಜೀವನಕ್ಕೆ ಇನ್ನಷ್ಟು ಮೆರುಗು ದೊರೆಯಲಿ, ಇನ್ನಷ್ಟು ಶಿಷ್ಯಕೋಟಿಗೆ ಅವರು ಮಾರ್ಗದರ್ಶನ ನೀಡಲಿ, ಶಿಕ್ಷಕರಿಗೆ ಸ್ಫೂರ್ತಿ ತುಂಬಲಿ ಎಂದು ‘ಸವಿಜ್ಞಾನ’ ತಂಡ ಹಾರೈಸುತ್ತದೆ.

15 comments:

  1. ಮಾದರಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ತಮ್ಮ ಸೇವೆ ಅನನ್ಯ ಸರ್

    ReplyDelete
  2. ತಮ್ಮ ಸೇವೆ ,ಮಾರ್ಗದರ್ಶಿ ಹಾಗೂ ಸ್ಪೂರ್ತಿದಾಯಕವಾಗಿದೆ

    ReplyDelete
  3. you are a modle,ideal n inspirational teacher.good going keep it up sir 💐💐💐

    ReplyDelete
  4. ತಮ್ಮ ಈ ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ಅದ್ಭುತವಾಗಿದೆ.

    ReplyDelete
  5. ನಮ್ಮ ಗುರುಗಳು ನಮ್ಮ ಹೆಮ್ಮೆ

    ReplyDelete
  6. It's very useful sir.. Great job.. 👌💐🙏

    ReplyDelete
  7. ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪರಿ ಇತರರಿಗೆ ಮಾದರಿ. ತಮ್ಮ ಯಶಸ್ಸಿನ ಪಯಣ ಹೀಗೆಯೇ ಮುಂದುವರಿಯಲಿ ಸರ್.

    ReplyDelete

  8. ‌ಇವರ ಶಿಕ್ಷಣ ದಾಸೋಹದಿಂದ ಎಲ್ಲಾ ವಿದ್ಯಾಥಿ೯ಗಳ ಜೀವನಕ್ಕೆ ಪ್ರೇರಣೆಯಾಗಿದೆ.

    ReplyDelete
  9. ಕೇವಲ ಸ್ವಂತ ಮಕ್ಕಳ ಶಿಕ್ಷಣ, ಆಸ್ತಿ ಗಳಿಕೆ, ಮನೆ ನಿರ್ಮಾಣ ಮುಂತಾದವುಗಳ ಭರದಲ್ಲಿ ಶಾಲೆಯ ಬಡ ಮಕ್ಕಳನ್ನು ಮರೆತು ಸಂಬಳಕ್ಕಾಗಿ ಶಾಲೆಗೆ ಬರುವ ಶಿಕ್ಷಕರೇ ಹೆಚ್ಚಾಗಿರುವ ಕಾಲದಲ್ಲಿ ನಿಮ್ಮ ಸೇವೆ ಅನನ್ಯ ಹಾಗೂ ಮಾದರಿ ಸರ್.

    ReplyDelete
  10. ಅಭಿನಂದನೆಗಳು ಸರ್...

    ReplyDelete
  11. thanks for introducing such an inspiring and dedicated teacher.

    ReplyDelete