ಕಿರೀಟ ಗೊಂಬೆಗಳು
ಲೇಖನ: ಸಿದ್ದು ಬಿರಾದಾರ,
ವಿಜ್ಞಾನ ಶಿಕ್ಷಕ
ಸರಕಾರಿ ಪ್ರೌಢ ಶಾಲೆ ಚಿಬ್ಬಲಗೇರಿ
ತಾ: ಹಳಿಯಾಳ, ಶಿರಸಿ ಶೈಕ್ಷಣಿಕ ಜಿಲ್ಲೆ, ಉತ್ತರ ಕನ್ನಡ
ಗೊಂಬೆಗಳನ್ನು ವಿಜ್ಞಾನ ಬೋಧನೆಯಲ್ಲಿ ಪರಿಣಾಮಕಾರಿಯಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಮ್ಮ ಸರಣಿ ಲೇಖನಗಳ ಮೂಲಕ ನಿರೂಪಿಸುತ್ತಿರುವ ಶಿಕ್ಷಕ ಸಿದ್ದು ಬಿರಾದಾರ್ ಈ ಬಾರಿ ಕಿರೀಟ ಗೊಂಬೆಗಳನ್ನು ತಯಾರಿಸಿ ಬೋಧನೆಯಲ್ಲಿ ಬಳಸಿಕೊಳ್ಳುವ ಬಗ್ಗೆ ಪ್ರಸ್ತುತ ಪಡಿಸಿದ್ದಾರೆ.
ಕಿರೀಟ ಗೊಂಬೆಗಳು ಮಕ್ಕಳಿಗೆ ವಿಶೇಷವಾಗಿ ತುಂಬಾ ಆಕರ್ಷಕವಾಗಿರುತ್ತವೆ. ಮಕ್ಕಳ ಮನಸ್ಸಿನ ಮೇಲೆ ಪರಿಣಾಮಕಾರಿ ಪ್ರಭಾವ ಬಿರುತ್ತವೆ. ಈ ಗೊಂಬೆಗಳನ್ನು ಸುಲಭವಾಗಿ ತಯಾರಿಸಬಹುದು. ಕಾರ್ಡ್‍ಶೀಟ್‍ನಿಂದ, ಪ್ಲಾಸ್ಟಿಕ್‍ನಿಂದ, ಥರ್ಮಾಕೋಲ್‍ನಿಂದ ಮತ್ತು ರಟ್ಟಿನಿಂದ ಕೂಡಾ ತಯಾರಿಸಬಹುದಾಗಿದೆ. ಕಿರೀಟದಲ್ಲಿ ವಿವಿಧ ಆಕೃತಿಗಳನ್ನು ಬಿಡಿಸಬಹುದು. ಪಕ್ಷಿಗಳ ಮತ್ತು ಪ್ರಾಣಿಗಳ ಕಿರಿಟಗೊಂಬೆಗಳನ್ನು, ಜೊತೆಗೆ ಮನುಷ್ಯರ ಗೊಂಬೆಗಳನ್ನು ಕೂಡಾ ತಯಾರಿಸಬಹುದು. ಈ ಗೊಂಬೆಯಲ್ಲಿ ಕೇವಲ ಮುಖಗಳನ್ನು ಮಾತ್ರ ಬಿಡಿಸುತ್ತೇವೆ. ಇವುಗಳನ್ನು ಬಳಸಿ ಭಾಷಾ ವಿಷಯಗಳ ಜೊತೆಗೆ ವಿಜ್ಞಾನ, ಸಮಾಜ, ಮತ್ತು ಗಣಿತ ಹೀಗೆ ಎಲ್ಲ ವಿಷಯಗಳನ್ನು ಕೂಡಾ ಬೋಧನೆ ಮಾಡಬಹುದು, ಮಕ್ಕಳಿಗೆ ಸಂಭಾಷಣೆಗಳನ್ನು ರಚಿಸುವುದರ ಮೂಲಕ ಮಕ್ಕಳಲ್ಲಿ ನಿರರ್ಗಳವಾಗಿ ಮಾತನಾಡುವ ಕೌಶಲ್ಯ ಬೆಳಸಬಹುದು. ಇದರಲ್ಲಿ, ತರಗತಿಯ ಎಲ್ಲಾ ಮಕ್ಕಳನ್ನು ಚಟುವಟಿಕೆಗೆ ಒಳಪಡಿಸಬಹುದು. ಪ್ರತಿ ಮಗು ವಿಶೇಷವಾಗಿ ಇತರರೊಂದಿಗೆ ವಿಶೇಷವಾಗಿ ಸಂಭಾಷಣೆಯಲ್ಲಿ ಪಾಲ್ಗೊಳ್ಳುವುದರಿಂದ, ಅವರಲ್ಲಿ ಆತ್ಮಸ್ಥೈರ್ಯ ಬೆಳೆಸಬಹುದು.
ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ವಿವಿಧ ಪಾತ್ರಗಳ ಕಿರೀಟವನ್ನು ಹಾಕಿ ಪಾಲ್ಗೊಳ್ಳುವಂತೆ ಮಾಡಿದಾಗ, ಅವರಲ್ಲಿ ಅವರ ಅರಿವಿಗೆ ಬಾರದೇ ಆಸಕ್ತಿಯ ಸೆಲೆಯೊಂದು ಮೂಡುತ್ತದೆ. ಆ ಮಕ್ಕಳು ಕಲಿಕೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳಲಾರಂಭಿಸುತ್ತಾರೆ. ತರಗತಿಯಲ್ಲಿನ ಸಾಧಾರಣ ಮಕ್ಕಳಿಗೆ ಕಿರೀಟಗಳ ಮೇಲೆ ಬರೆದ ಅಕ್ಷರಗಳನ್ನು, ಅಂಕೆಗಳನ್ನು ಅಥವಾ ಚಿತ್ರವನ್ನು ನೋಡಿ ಬರೆಯಲು ತಿಳಿಸಬಹುದು. ಜಾಣ ವಿದ್ಯಾರ್ಥಿಗಳಿಗೆ ಅವುಗಳನ್ನು ಓದಲು ಹೇಳಬಹುದು. ಇದರಿಂದ, ತರಗತಿ ಕೊಠಡಿಯಲ್ಲಿರುವ ಎಲ್ಲ ಮಕ್ಕಳನ್ನು ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯ.
ಕಿರೀಟಗೊಂಬೆ ತಯಾರಿಸುವ ವಿಧಾನ : ಕಾರ್ಡ್‍ಶೀಟ್, (ರಟ್ಟು ಅಥವಾ ಪ್ಲಾಸ್ಟಿಕ್ ಥರ್ಮಾಕೋಲ್ ಕೂಡಾ ಬಳಸಬಹುದು) ಪೆವಿಕಾಲ್, ಬಣ್ಣ, ಕತ್ತರಿ, ಬಣ್ಣದ ಬ್ರಶ್ ಮತ್ತು ದಾರ.
ವಿಧಾನ : ಒಂದು ಕಾರ್ಡ್‍ಶೀಟ್‍ನಲ್ಲಿ ಒಟ್ಟು ನಾಲ್ಕು ಸಮಾನವಾದ ಭಾಗಗಳನ್ನು ಮಾಡುವುದು (ರಟ್ಟು ಅಥವಾ ಪ್ಲಾಸ್ಟಿಕ್ ಥರ್ಮಾಕೋಲ್ ಕೂಡಾ ಇದಕ್ಕೆ ಬಳಸಬಹುದು). ಪ್ರತಿ ಭಾಗವನ್ನು ಆಕೃತಿಗೆ ತಕ್ಕಂತೆ ಅಡ್ಡವಾಗಿ ಚಿತ್ರದಲ್ಲಿ ತೋರಿಸಿರುವಂತೆ ಮಡಚುವುದು. ಅದರ ಮೇಲೆ ಪ್ರಾಣಿ, ಪಕ್ಷಿ ಅಥವಾ ಮನುಷ್ಯರ ಸಮಮಿತಿ ಆಕೃತಿಯಂತೆ ದೇಹದ ಒಂದು ಭಾಗ ಮಾತ್ರ ಒಂದು ಕಡೆಗೆ ಮತ್ತು ಮುಖದ ರೇಖಾಚಿತ್ರವನ್ನು ಬಿಡಿಸುವುದು. ಆ ರೇಖಾಚಿತ್ರದ ಮೇಲೆ ಕತ್ತರಿಯಿಂದ ಕಾರ್ಡ್‍ಶೀಟ್‍ನ ಎರಡು ಭಾಗ ಮಡಿಚಿ ಕತ್ತರಿಸುವುದು. ಮಡಚಿದ ಭಾಗವನ್ನು ಬಿಚ್ಚಿದಾಗ ಅದರ ಆಕೃತಿ ಎರಡೂ ಕಡೆ ಮೂಡಿರುತ್ತದೆ. ಚಿತ್ರದಲ್ಲಿರುವಂತೆ ತಲೆಯ ಅಳತೆಗೆ ತಕ್ಕಂತೆ ಅದನ್ನು ಫೆವಿಕಾಲ್‍ನಿಂದ ದಾರದೊಂದಿಗೆ ಅಂಟಿಸಬೇಕು. ಕಿರಿಟದ ಮುಂಬಾಗದಲ್ಲಿ ಭಾಷಾ ವಿಷಯಗಳಿಗೆ ಸಂಬಂಧಿಸಿದ ಅಕ್ಷರಗಳನ್ನು ಅಥವಾ ಶಬ್ದಗಳನ್ನು ಬರೆಯಬಹುದು. ಗಣಿತ ವಿಷಯಕ್ಕೆ ಸಂಬಂಧಿಸಿದ ಅಂಕೆಗಳನ್ನು ಮತ್ತು ಸಂಖೆಗಳನ್ನು ಅಥವಾ ಗಣಿತದ ಚಿನ್ಹೆಗಳನ್ನು ಬರೆಯುಬಹುದು. ವಿಜ್ಞಾನಕ್ಕೆ ಸಂಬಂಧಿಸಿದಂತೆ ಪರಿಸರ ಮಾಲಿನ್ಯ, ಪಕ್ಷಿ, ಪ್ರಾಣಿಗಳ ಪರಿಚಯ, ಗಿಡ ಮರಗಳ ಮತ್ತು ಪರಿಸರದ ಪರಿಚಯ, ಹೀಗೆ ಹಲವಾರು ವಿಷಯಗಳನ್ನು ತಿಳಿಸಬಹುದು. ಸಮಾಜ ವಿಜ್ಞಾನ ವಿಷಯದಲ್ಲಿ ರಾಜರ ಕಿರೀಟಗಳನ್ನು ಬಳಸಿ, ಐತಿಹಾಸಿಕ ನಾಟಕಗಳನ್ನು ಮಾಡಿಸಬಹುದು. ನಿಮ್ಮ ವಿವೇಚನೆಗೆ ತಕ್ಕಂತೆ ವಿಭಿನ್ನವಾಗಿ ಕಿರೀಟಗೊಂಬೆಗಳನ್ನು ತಯಾರಿಸಬಹುದು.
******
ತುಂಬಾ ಚೆನ್ನಾಗಿದೆ ಸರ್
ReplyDeleteeasy and useful, teachers can use depending on their creativity and necessity.
ReplyDeleteಕಿರೀಟ ಗೊಂಬೆ ತಯಾರಿಸುವ video ನೋಡಿ
ReplyDeletehttps://youtu.be/G6zXh9AQQLQ
ತುಂಬಾ ಚೆನ್ನಾಗಿ ಇದೆ ಸರ್
ReplyDeleteVery nice
ReplyDeletevery Nice sir ಗಣಿತದ ಸಮಿತಿ ಅಕ್ಷದ ಪರಿಕಲ್ಪನೆಗೆ ಅತ್ಯಂತ ಸೂಕ್ತವಾಗಿದೆ .
ReplyDeleteSuper sir
ReplyDeleteಚೆನ್ನಾಗಿದೆ sir
ReplyDelete