ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, March 4, 2022

ಕಾಡಿನ ಸಂರಕ್ಷಣೆ ಯಾರ ಕೈಯಲ್ಲಿದೆ?

ಕಾಡಿನ ಸಂರಕ್ಷಣೆ ಯಾರ ಕೈಯಲ್ಲಿದೆ?                          ಲೇಖನ: ಡಿ. ಕೃಷ್ಣಚೈತನ್ಯ

ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

ವನ್ಯಜೀವಿ ತಜ್ಞರಾದ ಶಿಕ್ಷಕ ಕೃಷ್ಣ ಚೈತನ್ಯ ಅವರ ಸರಣಿ ಲೇಖನಗಳನ್ನು ‘ಸವಿಜ್ಞಾನ’ದಲ್ಲಿ ನೀವೆಲ್ಲರೂ ಓದಿ ಬಹುವಾಗಿ ಮೆಚ್ಚಿಕೊಂಡಿದ್ದೀರಿ. ಕಳೆದ ಬಾರಿ ಹುಲಿಗಳ ಜೀವನ ಕ್ರಮದ ಪರಿಚಯವನ್ನು ಸೊಗಸಾಗಿ ಮಾಡಿಕೊಟ್ಟಿದ್ದ ಕೃಷ್ಣ ಚೈತನ್ಯ ಅವರು, ಈ ಬಾರಿಯ ಮಾಹಿತಿಪೂರ್ಣ ಮತ್ತು ಚಿಂತನೆಗೆ ಒರೆ ಹಚ್ಚುವ ಲೇಖನದಲ್ಲಿ ಕಾಡಿನ ಸಂರಕ್ಷಣೆಯ ಅಗತ್ಯತೆ ಹಾಗೂ ಮಾರ್ಗಗಳ ಬಗ್ಗೆ  ಬೆಳಕು ಚೆಲ್ಲಿದ್ದಾರೆ. 

ಸ್ನೇಹಿತರೆ, ಕಳೆದೊಂದು ಸಂಚಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಲೇಖನದಲ್ಲಿ ಹುಲಿಗಳ ಜೀವನ ಕ್ರಮದ ಬಗ್ಗೆ ಓದಿದ್ದೀರಿ ಕಾಡಿನ ರಾಜ ಎಂದು ಕ್‍ರೆಸಿಕೊಳ್ಳುವ ಪ್ರಾಣಿಯೂ ಸಹ ಕಾಡಿನಲ್ಲಿ ಸಹಜವಾಗಿ ಬದುಕಲು ಎಷ್ಟು ದುಸ್ತರ ಪಡಬೇಕು ಎಂದು ತಮಗೆ ಅನ್ನಿಸಿರಬಹುದು. ನಮ್ಮ ಅರಣ್ಯ ಸಚಿವರು ಎಲ್ಲಾ ಜಿಲ್ಲೆಗಳಲ್ಲಿಯೂ ಶೇ.30ರಷ್ಟು ಅರಣ್ಯವನ್ನು ಬೆಳೆಸಲು ಆದೇಶವೊಂದನ್ನು ಇತ್ತೀಚೆಗೆ ತಾವು ವೃತ್ತ ಪತ್ರಿಕೆಗಳಲ್ಲಿ ಓದಿ ಸಂತೋಷ ಪಟ್ಟಿರಬಹುದು. ನನಗಂತೂ ಬಿಸಿಲುಗುದುರೆ ಏರಿದಷ್ಟು ಸಂತಸವಾಯಿತು. ನಿಜವಾಗಿಯೂ ಅರಣ್ಯ ಪ್ರದೇಶ ಹೆಚ್ಚಾದರೆ, ಕಾಡಿನಲ್ಲಿ ಪ್ರಾಣಿಗಳ ಸಂಖ್ಯೆ ಹೆಚ್ಚುತ್ತದೆಯೇ? ಅದನ್ನು ನಮ್ಮ ಜನರು ಸಹಿಸಿ, ಅವುಗಳ ಜೊತೆಗೆ ಸಹಬಾಳ್ವೆ ನಡೆಸುವರೆ? ಮನುಷ್ಯನ ಸಂತತಿಯ ಉಳಿವು ಹುಲಿಯ ಉಳಿವಿನಲ್ಲಿ ಅಡಗಿದೆಯೇ? ಈ ಎಲ್ಲ ಪ್ರಶ್ನೆಗಳ ಜೊತೆಗೆ, ಕಾಡನ್ನು ನಿಜವಾಗಿಯೂ ಯಾರು ಉಳಿಸಬೇಕು? ಎಂಬ ಜಿಜ್ಞಾಸೆಗೆ ಉತ್ತರವನ್ನು ಹುಡುಕುವ ಪ್ರಯತ್ನವೇ ಈ ಲೇಖನ. 

ನಿಜವಾಗಿ ಗಮನಿಸಿದರೆ, ಕಾಡು ಎನ್ನುವುದು ಬರೀ ಮರ,ಗಿಡಗಳ ತೋಪಲ್ಲ ಅಲ್ಲವೇ? ಅಲ್ಲಿ ಅಣು, ರೇಣು, ತೃಣಕಾಷ್ಟದಿಂದ  ಪ್ರಾರಂಭಿಸಿ ಆನೆ ಹುಲಿಗಳಂಥ ದೊಡ್ಡ ಪ್ರಾಣಿಗಳವರೆಗೆ ವಾಸಿಸುವ ಜೀವವೈವಿಧ್ಯತೆಯ ತಾಣ. ಹುಲಿ ಒಂದು ಸುಂದರವಾದ, ಸೌಮ್ಯವಾದ, ನಾಚಿಕೆ ಸ್ವಭಾವದ ಪ್ರಾಣಿ. ಆದರೆ, ಅದರ ಸಂತತಿ ಕ್ಷೀಣಿಸಲು ನಾವು ಹೇಗೆ ಕಾರಣವಾಗುತ್ತಿದ್ದೇವೆ ಎಂದು ನೋಡಿದಾಗ ಗೋಚರಿಸುವ ಮೊದಲ ಕಾರಣ, ಕಾಡಿನ ನೆಲ್ಲಿಕಾಯಿಯನ್ನು ನಾವು ಸೇವಿಸುತ್ತಿರುವುದು. ಇದೇನಪ್ಪಾ ? ಕಾಡು ನೆಲ್ಲಿಕಾಯಿಗೂ, ಹುಲಿಗೂ ಏನು ಸಂಬಂಧ ಎಂದು ಅಚ್ಚರಿಯಾಗುತ್ತಿದೆಯೇ? ಬೇಸಿಗೆಯಲ್ಲಿ ಕಾಡಿನಲ್ಲಿರುವ ನೆಲ್ಲಿಕಾಯಿ ಮರಗಳು ನೆಲ್ಲಿಕಾಯಿ ಬಿಡುತ್ತವೆ. ಅದೇ ಸಮಯದಲ್ಲಿ ಜಿಂಕೆಗಳು ಮರಿಗಳಿಗೆ ಜನ್ಮ ನೀಡುತ್ತವೆ. ನೆಲದ ಮೇಲಿನ ಸಸ್ಯರಾಶಿ ಒಣಗಿ ಖಾಲಿಯಾಗಿರುವ ಸಮಯ. ಹಾಗಾಗಿ, ಕಾಡಿನಲ್ಲಿರುವ ಜಿಂಕೆಗಳಿಗೆ ಮರದ ಮೇಲಿರುವ ಹಣ್ಣುಗಳೇ ಆಧಾರ! ನೆಲ್ಲಿಕಾಯಿ, ಅಂಬಟೆ, ಹೆಬ್ಬೇವು ಮುಂತಾದ ಮರಗಳು ಬಿಡುವ ಹಣ್ಣುಗಳನ್ನು ಆಶ್ರಯಿಸಿ ಜಿಂಕೆಗಳು ಬೇಸಿಗೆಯನ್ನು ಕಳೆಯುತ್ತವೆ. ಮುಸುವಗಳು ಕೀಳುವಾಗಲೋ ಅಥವಾ ಅರ್ಧಂಬರ್ಧ ತಿಂದು ಉದುರಿಸಿದ, ಅಥವಾ ಹಣ್ಣಾಗಿ ಉದುರುವ ನೆಲ್ಲಿ, ಅಂಬಟೆ ಮತ್ತು ಹೆಬ್ಬೇವು ಕಾಯಿಗಳನ್ನು ತಿಂದು ಜಿಂಕೆಗಳು ತಮ್ಮ ಮರಿಗಳಿಗೆ ಒಂದಿಷ್ಟು ಹಾಲನ್ನು ಉಣಿಸಿ, ಪೋಷಿಸುತ್ತವೆ. ಸುಮಾರಾಗಿ, ಇದೇಸಮಯದಲ್ಲಿ ಹುಲಿಗಳು ಮರಿ ಹಾಕಿ, ಅವುಗಳ ಮೇಲೆ ಕಣ್ಣಿಟ್ಟುಕೊಂಡೇ ಜಿಂಕೆ ಮರಿಗಳನ್ನು ಸುಲಭವಾಗಿ ಬೇಟೆಯಾಡಿ, ತಮ್ಮ ಮರಿಗಳನ್ನು ಕಾಪಾಡಿಕೊಳ್ಳುತ್ತವೆ. ಅಂಥ ಕಾಡಿನಿಂದ ಆರಿಸಿ ತಂದ ನೆಲ್ಲಿಕಾಯಿಗಳನ್ನು ಖರೀದಿಸಿ ತಿಂದಾಗ, ಜಿಂಕೆಗಳಿಗೆ ಪೋಷಕಾಂಶಯುಕ್ತ ಆಹಾರದ ಕೊರತೆಯುಂಟಾಗುತ್ತದೆ. ಜಿಂಕೆಗಳ ಪಾಲಿನ ಹಣ್ಣುಗಳಿಗೆ ಮನುಷ್ಯ ಕೈ ಹಾಕಿದರೆ, ಅವುಗಳಿಗೆ ಉಪವಾಸವೇ ಗತಿ.ಒಣಹುಲ್ಲಿನಿಂದ ಹಾಲು ಉತ್ಪತ್ತಿ ಸಾಧ್ಯವೇ? ಮರಿಗಳಿಗೆ ಸಾಕಷ್ಟು ಹಾಲು ಸಿಗದೆ ಅವು ಸಾಯತೊಡಗುತ್ತವೆ. 

ಚಿತ್ರ : ಮರಿಗೆ ಹಾಲು ಉಣಿಸುತ್ತಿರುವ ತಾಯಿ ಜಿಂಕೆ 

ಚಿತ್ರ: ಮರಿಜಿಂಕೆ 

ಜಿಂಕೆ ಮರಿಗಳು ಸಂಖ್ಯೆ ಕ್ಷೀಣಿಸಿದರೆ, ಹುಲಿ ತನ್ನ ಬೇಟೆಗೆ ಪ್ರೌಢ ಜಿಂಕೆಗಳನ್ನೇ ಹುಡುಕಿಕೊಂಡು ದೂರ, ದೂರಕ್ಕೆ ಅಲೆಯಬೇಕಾಗುತ್ತದೆ. ಇದನ್ನೇ ಕಾಯುತ್ತಿರುವ ಕಾಡುನಾಯಿ, ನರಿ, ಚಿgಚಿve ಮುಂತಾದ ಪ್ರಾಣಿಗಳು ಹುಲಿ ಮರಿಗಳನ್ನು ತಿಂದುಹಾಕುತ್ತವೆ. ಹೀಗೆ, ಹುಲಿಯ ಸಂತತಿಯ ನಾಶಕಕೆ ನಾವೇ ಪರೋಕ್ಷವಾಗಿ ಕಾರಣರಾಗುತ್ತೇವೆ. ಕಾಡಿನಿಂದ ನೆಲ್ಲಿಕಾಯಿಯನ್ನು ತರುವ ನಮ್ಮ ವ್ಯಾಪಾರೀ ಮನೋಭಾವವು ಕಾಡಿನ ಬೆಂಕಿಗೂ ಕಾರಣವಾಗುತ್ತದೆ. ಮರದಿಂದ ಕಾಯಿಯನ್ನು ಬಡಿಯುವಾಗ ಅವುಗಳನ್ನು ಆಯ್ಕೆ ಮಾಡಲು ಸುಲಭವಾಗಲಿ ಎಂದು ಕೆಳಗಿನ ಹುಲ್ಲು ಗಿಡಗಂಟೆಗಳಿಗೆ ಹಿಂದಿನ ದಿನವೇ ಬೆಂಕಿಕೊಟ್ಟು ನೆಲವನ್ನು ಹಸನು ಮಾಡಿಕೊಳ್ಳುತ್ತಾರೆ. ಅವರು ಅಜಾಗರೂಕತೆಯಿಂದ ಕೊಡುವ ಬೆಂಕಿ ಕೆಲವೊಮ್ಮೆ ವಿಸ್ತರಿಸಿ, ಕಾಡನ್ನೇ ಸುಟ್ಟು ಹಾಕುತ್ತದೆ. ಇದರಿಂದಲೂ ಹುಲಿಮರಿಗಳು  ಬೆಂಕಿಯ ಕೆನ್ನಾಲಿಗೆಗೆ ಸಿಲಕಿ ಸಾಯುತ್ತವೆ. 

ಕಾಡಿನ ಸಂರಕ್ಷಣೆಯನ್ನು ಮಾಡ ಹೊರಟರೆ, ಕಾಡು ಮಾತ್ರ ಬೇಕೋ? ಅಥವಾ ಕಾಡಿನ ಪ್ರಾಣಿಗಳನ್ನೂ ಸಂರಕ್ಷಣೆ ಮಾಡಬೇಕೋ? ಯಾವುದನ್ನು ಸಂರಕ್ಷಣೆ ಮಾಡಿದರೆ ಹೆಚ್ಚು ಅನುಕೂಲ? ಕಾಡಿನಲ್ಲಿ ಸಸ್ಯಗಳು ಮಾತ್ರ ಉಳಿದರೆ, ಜೀವವೈವಿಧ್ಯತೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಕೇವಲ ಸಸ್ಯಗಳೇ ಉಳಿದರೆ, ಮನುಷ್ಯ ಪ್ರಾಣಿಗೆ ಭಯ ಎನ್ನುವುದೇ ಇಲ್ಲವಾಗಿ, ಕಾಡಿನ ಅತಿಕ್ರಮಣ ಹೆಚ್ಚಾಗಿ, ಕಾಡುಗಳು ಅವಸಾನವಾಗುತ್ತವೆ. ಜಾನುವಾರುಗಳ ಪ್ರವೇ±ಕ್ಕೆ ಕೆಂಪು ಹಾಸು ಹಾಕಿದಂತಾಗಿ, ಹುಲ್ಲು, ಗಿಡಗಂಟಿಗಳು ನಾಶವಾಗಿ, ಭೂಮಿ ಮಳೆಯ ಬಿರುಸು ಹನಿಗಳಿಗೆ ತೆರೆದುಕೊಂಡು ಮಣ್ಣಿನ ಸವಕಳಿಗೆ ಅನುವು ಮಾಡಿಕೊಟ್ಟಂತಾಗುತ್ತದೆ.

ಅರಣ್ಯದಲ್ಲಿ ಆನೆ, ಹುಲಿ, ಚಿರತೆ ಮುಂತಾದ ಪ್ರಾಣಿಗಳಿದ್ದರೆ, ಮನುಷ್ಯ ಅಂಥ ಕಾಡುಗಳಿಗೆ ಪ್ರವೇಶಮಾಡಲು ಹಿಂಜರಿಯುತ್ತಾನೆ. ಸಾಕಿದ ಪ್ರಾಣಿಗಳನ್ನು ಮೇವಿಗೆ ಕಾಡಿಗೆ ಅಟ್ಟುವ ಪ್ರಕ್ರಿಯೆಯೂ ನಿಯಂತ್ರಣದಲ್ಲಿರುತ್ತದೆ. ಇದರಿಂದಾಗಿ ಅರಣ್ಯದ ಸಸ್ಯ ಸಂಪತ್ತಿನ ಸಂರಕ್ಷಣೆ ತನ್ನಷ್ಟಕ್ಕೇ ತಾನೇ ಆಗುತ್ತದೆ. ಹಲವು ಬಗೆಯ ಹಣ್ಣಿನ ಬೀಜಗಳು ಸಸ್ಯಾಹಾರಿ ಪ್ರಾಣಿಗಳ ಜೀರ್ಣಾಂಗವ್ಯೂಹದಲ್ಲಿ ಸಾಗಿ ಹೊರಬರುವುದರಿಂದ, ಮೊಳೆತು, ಸಸ್ಯ ಚಿಗುರಲು ಸಿದ್ಧವಾಗಿರುತ್ತವೆ. 

ಚಿತ್ರ : ಅರಣ್ಯದ ಆರೋಗ್ಯ ಕಾಪಾಡುವ ದೊಡ್ಡ ಬೆಕ್ಕು : ಹುಲಿ

ಒಂದು ಹುಲಿಯನ್ನು ಸಂರಕ್ಷಣೆ ಮಾಡಲು ಹೊರಟರೆ, ಅದಕ್ಕೆ ಬೇಕಾದ ಸುಮಾರು 500 ಬಲಿ ಪ್ರಾಣಿಗಳನ್ನು ಸಂgಕ್ಷಿಸಬೇಕಾಗುತ್ತದೆ. ಅಲ್ಲದೆ, ಅವುಗಳಿಗೆ ಅಗತ್ಯವಿರುವ ಸಸ್ಯ ಸಂಪತ್ತು ಸಂರಕ್ಷಿಸಬೇಕಾಗುತ್ತದೆ. ಅಂದರೆ, ಒಂದು ಹುಲಿಯನ್ನು ಸಂರಕ್ಷಣೆಗೆ ಒಳಪಡಿಸುವುದರಿಂದ ಅದಕ್ಕೆ ಬೇಕಾದ 10ರಿಂದ 20 ಕಿ.ಮೀ.ಜಾಗ, ಬಲಿ ಪ್ರಾಣಿಗಳು, ಸಸ್ಯ ಸಂಪತ್ತು, ಇವೆಲ್ಲವೂ, ಸಂರಕ್ಷಿತವಾಗುತ್ತವೆ. ಒಂದು ವೇಳೆ, 50ರಿಂದ 75 ಹುಲಿಗಳನ್ನು ಸಂರಕ್ಷಣೆಗೆ ಒಳಪಡಿಸಿದರೆ, ಸುಮಾರು 1000 ಚ.ಕಿ.ಮೀ. ಅರಣ್ಯ ತನ್ನಷ್ಟಕ್ಕೆ ತಾನೇ  ಸಂರಕ್ಷಿಸಿಕೊಳ್ಳುತ್ತದೆ. ಇದರಿಂದ ಒಂದು ಅರಣ್ಯವೇ ಉಳಿದುಕೊಳ್ಳುತ್ತದೆ. ಹೀಗಾಗಿ, ಹುಲಿಗಳನ್ನು ಸಂರಕ್ಷಿಸಿದರೆ ಸಾಕು, ಅರಣ್ಯವನ್ನು ಸಂರಕ್ಷಿಸಿದಂತೆ. ಜೊತೆಗೆ, ಬಲಿ ಪ್ರಾಣಿಗಳು  ಹಾಗೂ ಅವುಗಳನ್ನು ಅವಲಂಬಿಸಿರುವ ಇತರ ಜೀವಿಗಳೂ ಉಳಿದು, ಆ ಸ್ಥಳದ ಜೀವಿವೈವಿಧ್ಯವೂ ಕಾಪಾಡಿಕೊಳ್ಳುತ್ತದೆ.


ಚಿತ್ರ : ಕಾದಾಟದಲ್ಲಿ ಆದ ಗಾಯ 

ಸಂಗಾತಿಗಾಗಿ ಹುಲಿಗಳ ನಡುವೆ ನಡೆಯುವ ಕಾಳಗ, ಘನಘೋರ. ನಮ್ಮ ರಾಜ್ಯÀದÀಲ್ಲಿ ಸರ್ಕಾರವು ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೆಚ್ಚಿಸುತ್ತಿರುವುದು ಸಂತಸದ ವಿಷಯ. ನಮ್ಮಲ್ಲಿ ಈಗಿರುವ 5 ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ, ಬಂಡೀಪುರ, 

ಬಿಳಿಗಿರಿರಂಗ, ಭದ್ರ ಮತ್ತು ಅಣಶಿ, ಇವುಗಳ ಜೊತೆಗೆ ಕಾವೇರಿ (ಮಲೆ ಮಹದೇಶ್ವರ) ಪ್ರದೇಶವನ್ನು ಸೇರಿಸಲೂ ಸಿದ್ಧತೆ ನಡೆದಿದೆ. ಆದರೆ, ಇನ್ನೊಂದು ಕಡೆ, ಮೇಕೆದಾಟು ಯೋಜನೆಯನ್ನು ರಾಜಕೀಯ ಹಿತಾಸಕ್ತಿಯಿಂದ ಜಾರಿಗೊಳಿಸಲು ಹೊರಟಿರುವುದು ದುರದೃಷ್ಟಕರ. ಬೆಂಗಳೂರು ನಗರದಲ್ಲಿ ಸಧ್ಯ ಪೋಲಾಗುತ್ತಿರುವ ನೀರನ್ನು ಸಂರಕ್ಷಿಸಿದರೆ, ನೀರಿನ ಸಮಸ್ಯೆಯ ಬಹು ಪಾಲು ನಿವಾರಣೆಯಾಗುತ್ತದೆ. ಅದರ ಜೊತೆಗೆ, ಭೂ ಒತ್ತುವರಿ ತೆರವುಗೊಳಿಸಿವುದು ಪ್ರಮುಖವಾಗಿ ಆಗಬೇಕಾದ ಕೆಲಸ. ಯಾವುದೇ ಅರಣ್ಯ ಪ್ರದೇಶದ ಇಂತಿಷ್ಟು ಗಡಿಯೊಳಗೆ ಗಣಿಗಾರಿಕೆ, ಅನಧಿಕೃತ  resortಗಳ ನಿರ್ಮಾಣ, ಹಾಗೂ ಕೈಗಾರಿಕೆಗಳ ಸ್ಥಾಪನೆಯನ್ನು ತಡೆಯಬೇಕಿದೆ. ಅರಣ್ಯ ಪ್ರದೇಶಗಳ ಸುತ್ತಲೂ 10ಕಿ.ಮೀ.ಗಳಷ್ಟು ಬಫರ್ ಝೋನ್ ಅರಣ್ಯದ ನಿರ್ಮಾಣ ಆಗಬೇಕಿದೆ. ಆ ಪ್ರದೇಶದ ಒಳಗಿರುವ ಜನವಸತಿ ಮತ್ತು ಜಲಾಶಯಗಳನ್ನು ತೆರವುಗೊಳಿಸಿ ಸುಸ್ಥಿರ ಅಭಿವೃದ್ಧಿ ಮಾಡಬೇಕಿದೆ. ಆನರ ಅಭಿವೃದ್ಧಿಗೆ ಅಗತ್ಯವಾದ ರಾಜಕೀಯ ಇಚ್ಛಾಶಕ್ತಿ ಇಲ್ಲದಿರುವುದು, ಗಾಡ್ಗೀಳ್ ಮತ್ತು ಕಸ್ತೂರಿರಂಗನ್ ವರದಿಗಳನ್ನು ಜಾರಿಗೊಳಿಸಿ, ಉಳಿದಿರುವ ಪಶ್ಚಿಮ ಘಟ್ಟ ಪ್ರದೇ±ವನ್ನು ಸಂರಕ್ಷಿಸಲು ಸರಕಾರ ಹಿಂಜರಿಯುತ್ತಿರುವುದು, ಮುಂದಿನ ಜನಾಂಗಕ್ಕೆ ಜೀವವೈವಿಧ್ಯ ಮತ್ತು ಕುಡಿಯುವ ನೀರು ಸಿಗದಂತೆ ಮಾಡುವುದರಲ್ಲಿ ಸಂಶಯವೇನಿಲ್ಲ. 

9 comments: