Monday, October 4, 2021

ಅಕ್ಟೋಬರ್ ತಿಂಗಳ ಲೇಖನಗಳು :

 ಅಕ್ಟೋಬರ್ ತಿಂಗಳ ಲೇಖನಗಳು :

ಸಂಪಾದಕರ ಡೈರಿಯಿಂದ - ಡಾ. ಬಾಲಕೃಷ್ಣ ಅಡಿಗ

1. ಜೀವ ಹೇಗೆ ಹುಟ್ಟಿದರೇ ನಂತೆ ಭಾಗ-1 : ಡಾ.ಎಂ.ಜೆ ಸುಂದರ್ ರಾಮ್

2. ಬಾನಾಡಿಗಳ ಬೆನ್ನತ್ತಿ : ಕೃಷ್ಣ ಚೈತನ್ಯ

3. ಸುವರ್ಣ ಅನುಪಾತದ ಲೆಕ್ಕಾಚಾರ ಹೇಗೆ? ಅನಿಲ್ ಕುಮಾರ್ ಸಿ.ಎನ್

4. ವಿಶ್ವ ಆಹಾರ ದಿನ ಅಕ್ಟೋಬರ್ 16 ನಮ್ಮ ಕ್ರಿಯೆಗಳು ; ನಮ್ಮ ಭವಿಷ್ಯ - ತಾಂಡವಮೂರ್ತಿ

5. ಪುಸ್ತಕ ಪರಿಚಯ ತ್ರಿಮುಖಿ : ಜಿ. ವಿ. ಅರುಣ

6. ಒಲೆ ಹತ್ತಿ ಉರಿದರೆ ನಿಲ್ಲಬಹುದು ಧರೆ ಹತ್ತಿ ಉರಿದರೆ.....ಪರಮೇಶ್ವರ ಸೊಪ್ಪಿನಮಠ

7. ತೆರೆಮರೆಯ ಸಾಧಕರು ಶ್ರೀಮತಿ ಶಾರದಾ ಹೆಚ್.ಎಸ್. - ಗೋಪಾಲ ರಾವ್ ಸಿ.ಕೆ.

8. ಒಗಟುಗಳು : ವಿಜಯಕುಮಾರ್ ಹಾಗೂ ರೂಪ

9 ವ್ಯಂಗ್ಯಚಿತ್ರಗಳು : ಶ್ರೀಮತಿ ಜಯಶ್ರೀ ಶರ್ಮ ಹಾಗೂ ವಿಜಯ್ ಕುಮಾರ್ 

10. ಸವಿಜ್ಞಾನ ತಂಡದ ಸಾಧಕರಪರಿಚಯ - ಶ್ರೀನಿವಾಸ್ ಎ

ಜೀವ ಹೇಗೆ ಹುಟ್ಟಿದರೇನಂತೆ. . . . ?

ಜೀವ ಹೇಗೆ ಹುಟ್ಟಿದರೇನಂತೆ. . . . ?

ಡಾ. ಎಂ. ಜೆ. ಸುಂದರ್ ರಾಮ್ 

ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು ಮತ್ತು ವಿಜ್ಞಾನ ಸಂವಹನಕಾರರು 

 

ಒಂದು ನದಿಯಂತೆ. ಅದರ ದಡದಲ್ಲಿ ಬೆಳೆದು ನಿಂತಿರುವ ಮರಗಳಂತೆ. ಮರಗಳ ತುಂಬ ಎಲೆಗಳಂತೆ. ಕೆಲವು ಚಿಗುರೆಲೆಗಳಂತೆ, ಕೆಲವು ಹಣ್ಣೆಲೆಗಳಂತೆ. ದಿಢೀರನೆ ಗಾಳಿ ಬೀಸತೊಡಗುತ್ತದೆ. ಅನೇಕ ಹಣ್ಣೆಲೆಗಳು ಉದುರಿ ಗಾಳಿಯಲ್ಲಿ ತೂರಾಡುತ್ತ ಕೆಳಗೆ ಬೀಳುತ್ತವೆ.ಕೆಲವು ಎಲೆಗಳು ನದಿ ನೀರಿನಲ್ಲಿ ಬಿದ್ದರೆ ಅವು ಕೂಡಲೇ ಮೀನುಗಳಾಗಿ, ಕಪ್ಪೆಗಳಾಗಿ, ಇತರ ಜಲಚರಗಳಾಗಿ ರೂಪಗೊಂಡು ಈಜುವುವಂತೆ! ನೆಲದ ಮೇಲೇನಾದರೂ ಬಿದ್ದರೆ, ಕಾಲು, ಬಾಲಗಳನ್ನು ಬೆಳೆಸಿಕೊಂಡು ಇಲಿ, ಬೆಕ್ಕು, ನಾಯಿ, ಮೊಲ ಮುಂತಾದ ಪ್ರಾಣಿಗಳಾಗಿ ಮಾರ್ಪಟ್ಟು ಓಡಿಹೋಗುವುವಂತೆ!

ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ  

ಸವಿಜ್ಞಾನ’ ಇ-ಪತ್ರಿಕೆಯ ಹತ್ತನೆಯ ಸಂಚಿಕೆಗೆ ವಿಜ್ಞಾನ ಶಿಕ್ಷಕರಿಗೆ ಮತ್ತು ವಿಜ್ಞಾನಾಸಕ್ತರಿಗೆ ಸ್ವಾಗತ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಪ್ರಕಟವಾದ ಕಳೆದ ಸೆಪ್ಟೆಂಬರ್ ತಿಂಗಳ ‘ಸವಿಜ್ಞಾನ’ ಸಂಚಿಕೆಯಲ್ಲಿ ಪ್ರಕಟವಾದ ಲೇಖನ ಹಾಗೂ ಸಂದರ್ಶನಗಳನ್ನು ನೀವೆಲ್ಲ ಮೆಚ್ಚಿಕೊಂಡಿರುವುದು ಸಂತಸದ ವಿಷಯ. ಅದರಲ್ಲಿಯೂ, ಕೆ.ಎನ್.ಗಣೇಶಯ್ಯನವರ ಜೊತೆಗೆ ನಮ್ಮ ಸಂಪಾದಕೀಯ ತಂಡದ ಸದಸ್ಯರು ನಡೆಸಿದ ಸಂದರ್ಶನ ಬಹು ಮಂದಿಗೆ ಮೆಚ್ಚುಗೆಯಾಗಿದೆ. ಸಂದರ್ಶನ ಓದಿದ ನಂತರ ಹಲವರು ಕೆ.ಎನ್. ಗಣೇಶಯ್ಯನವರ ಪುಸ್ತಕಗಳನ್ನು ಹುಡುಕಿ ತಂದು ಓದಿರುವುದಾಗಿ ತಿಳಿಸಿರುವುದು ಒಂದು ಸ್ವಾಗತಾರ್ಹ ಬೆಳವಣಿಗೆ. ನಿಮ್ಮ ಪ್ರೋತ್ಸಾಹಕ್ಕೆ ನಾವು ಆಭಾರಿ. ಇನ್ನು ಮುಂದಿನ ಸಂಚಿಕೆಗಳಲ್ಲಿ ಇಂಥ ಹಲವಾರು ಗಣ್ಯ ವಿಜ್ಞಾನಿಗಳನ್ನು ಹಾಗೂ ವಿಜ್ಞಾನ ಸಾಹಿತಿಗಳನ್ನು ಪರಿಚಯಿಸುವ ಹಂಬಲ ನಮ್ಮದು.

ಈ ಬಾರಿಯ ಅಕ್ಟೋಬರ್ ತಿಂಗಳ ಸಂಚಿಕೆಯೂ ಹಲವು ಕುತೂಹಲಕಾರಿ ಹಾಗೂ ಮಾಹಿತಿಪೂರ್ಣ ಲೇಖನಗಳನ್ನು ನಿಮಗಾಗಿ ಹೊತ್ತು ತಂದಿದೆ. ಭೂಮಿಯ ಮೇಲೆ ಜೀವದ ಉಗಮದ ಬಗ್ಗೆ ಹಿಂದೆ ಇದ್ದ ಕಲ್ಪನೆಗಳನ್ನು ಹಾಗೂ ವಾಸ್ತವವನ್ನು ಸೊಗಸಾಗಿ ನಿರೂಪಿಸುವ ‘ಜೀವ ಹೇಗೆ ಹುಟ್ಟಿದರೇನಂತೆ?ಎಂಬ ಲೇಖನವಿದೆ. ಡಾ. ಎಂ.ಜೆ. ಸುಂದರರಾಂ ಬರೆದಿರುವ ಈ ಲೇಖನದ ಮೊದಲ ಕಂತು ಈ ತಿಂಗಳು ಪ್ರಕಟವಾಗಿದೆ. ನಿಸರ್ಗದಲ್ಲಿ ಎಲ್ಲೆಡೆ ಕಾಣಬಹುದಾದ ಸುವರ್ಣ ಅನುಪಾತದ ಬಗ್ಗೆ ಸರಣಿ ಲೇಖನಗಳನ್ನು ಹಿಂದಿನ ಸಂಚಿಕೆಗಳಲ್ಲಿ ಓದಿದ ನಿಮಗೆ ಅದರ ಲೆಕ್ಕಾಚಾರ ಮಾಡುವುದು ಹೇಗೆ? ಎಂಬುದನ್ನು ಗಣಿತ ಶಿಕ್ಷಕ ಅನಿಲ್ ಕುಮಾರ್ ಈ ತಿಂಗಳ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ. ಕೃಷ್ಣ ಚೈತನ್ಯ ಅವರ ಲೇಖನ ‘ಬಾನಾಡಿಗಳ ಬೆನ್ನತ್ತಿ’ ಹಕ್ಕಿಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿಮಗೆ ನೀಡಲಿದೆ. ಪರಿಸರಕ್ಕೆ ಸಂಬಂಧಿಸಿದ ಎರಡು ಸಾಂದರ್ಭಿಕ ಲೇಖನಗಳಿವೆ. ತೆರೆ ಮರೆಯ ಸಾಧಕಿ ಶಿಕ್ಷಕಿ ಶ್ರೀಮತಿ ಶಾರದಾ ಹೆಚ್.ಎಸ್. ಅವರ ಪರಿಚಯವಿದೆ. ನಿಮ್ಮ ಮೆಚ್ಚುಗೆಗೆ ಪಾತ್ರವಾಗಿರುವ ವಿಜ್ಞಾನದ ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳೂ ಇವೆ.

ಕಳೆದ ತಿಂಗಳ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಸರ್ಕಾರವೂ ಸೇರಿ, ವಿವಿಧ ಸಂಘ ಸಂಸ್ಥೆಗಳಿಂದ  ತಮ್ಮ ನಿಸ್ವಾರ್ಥ ಸೇವೆಗಾಗಿ ಗುರುತಿಸಲ್ಪಟ್ಟು ಪುರಸ್ಕೃತರಾಗಿರುವವರಲ್ಲಿ ನಮ್ಮ ‘ಸವಿಜ್ಞಾನ’ ತಂಡದ ಅನೇಕ ಶಿಕ್ಷಕರಿರುವುದು ನಮಗೆ ಹೆಮ್ಮೆಯ ಸಂಗತಿ. ಶಿಕ್ಷಕ ಸಮೂಹಕ್ಕೆ ಸ್ಫೂರ್ತಿಯಾಗಬಲ್ಲ ಆ ಎಲ್ಲ ಶಿಕ್ಷಕರ ಕಿರು ಪರಿಚಯವನ್ನೂ ತಿಂಗಳ ಸಂಚಿಕೆಯಲ್ಲಿ ನೋಡಬಹುದು.

ಡಾ. ಟಿ. ಎ. ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು

ಸುವರ್ಣ ಅನುಪಾತದ ಲೆಕ್ಕಾಚಾರ ಹೇಗೆ?

ಸುವರ್ಣ ಅನುಪಾತದ ಲೆಕ್ಕಾಚಾರ ಹೇಗೆ

ಲೇಖಕರು:   ಅನಿಲ್ ಕುಮಾರ್ ಸಿ.ಎನ್. 
ಸರ್ಕಾರಿ ಪ್ರೌಢಶಾಲೆ  ಅರಳಾಳುಸಂದ್ರ,
ರಾಮನಗರ ತಾ|| 
ರಾಮನಗರ ಜಿಲ್ಲೆ

ಹಿಂದಿನ ಸಂಚಿಕೆಗಳಲ್ಲಿ ನಮ್ಮ ಸವಿಜ್ಞಾನ ಪತ್ರಿಕೆಯ ಪ್ರಧಾನ ಸಂಪಾದಕರು, ನಮ್ಮೆಲ್ಲರ ಮಾರ್ಗದರ್ಶಕರೂ ಆದ ಶ್ರೀ ಬಾಲಕೃಷ್ಣ ಅಡಿಗರು ನಿಸರ್ಗದಲ್ಲಿ, ಸಸ್ಯಗಳಲ್ಲಿ, ಪ್ರಾಣಿಗಳಲ್ಲಿ ಹಾಗೂ ಮಾನವರಲ್ಲಿ ಸುವರ್ಣ ಅನುಪಾತದ ಕುರಿತು ವಿಷದವಾಗಿ ವಿವರಿಸಿದ್ದರು. ತಾವೆಲ್ಲರೂ ಆ ಎಲ್ಲಾ ಲೇಖನಗಳನ್ನು ಆಸ್ವಾದಿಸಿದ್ದೀರೆಂದು ಭಾವಿಸಿದ್ದೇನೆ.

ಸುವರ್ಣ ಅನುಪಾತದ ಬಗ್ಗೆ ಇಷ್ಟೆಲ್ಲ ತಿಳಿದ ಮೇಲೆ ಅದನ್ನು ಲೆಕ್ಕಿಸುವುದು ಹೇಗೆ ? ಎಂದು ತಿಳಿಯುವ ಕುತೂಹಲ ಮೂಡದೇ ಇರದು, ಅಲ್ಲವೇ? ಬನ್ನಿ, ಈ ಲೇಖನದಲ್ಲಿ ಸುವರ್ಣ ಅನುಪಾತದ ಬಗ್ಗೆ ಇನ್ನಷ್ಟು ತಿಳಿಯೋಣ.

ವಿಶ್ವ ಆಹಾರ ದಿನ : ಅಕ್ಟೋಬರ್-16-2021 - “ನಮ್ಮ ಕ್ರಿಯೆಗಳು - ನಮ್ಮ ಭವಿಷ್ಯ”

ವಿಶ್ವ ಆಹಾರ ದಿನ :  ಅಕ್ಟೋಬರ್-16-2021
ನಮ್ಮ ಕ್ರಿಯೆಗಳು - ನಮ್ಮ ಭವಿಷ್ಯ

ಲೇಖಕರು: ತಾಂಡವಮೂರ್ತಿ..ಎನ್

ಸಹಶಿಕ್ಷಕರು,

ಸರ್ಕಾರಿ ಪ್ರೌಢಶಾಲೆಕಾರಮಂಗಲ,

ಬಂಗಾರಪೇಟೆ(ತಾ.), ಕೋಲಾರ ಜಿಲ್ಲೆ

ಹಬ್ಬಕ್ಕೆ ತಂದ ಹರಕೆಯ

ಕುರಿ ತೋರಣಕ್ಕೆ ತಂದ

ತಳಿರ ಮೇಯಿತ್ತು!

ಕೊಂದಹರೆಂಬುದನರಿಯದೆ

ಬೆಂದೊಡಲ ಹೊರೆಯ

ಹೋಯಿತ್ತು! ಅಂದಂದೆ

ಹುಟ್ಟಿತ್ತು,ಅಂದಂದೆ ಹೊಂದಿತ್ತು.

ಕೊಂದವರುಳಿದರೆ?

ಕೂಡಲ ಸಂಗಮದೇವ.

-ಬಸವಣ್ಣ

ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ ಪ್ರತಿ ವರ್ಷ ಅಕ್ಟೋಬರ್-16 ರಂದು ಆಚರಿಸುವ ವಿಶ್ವ ಆಹಾರ ದಿನದ ಈ ವರ್ಷದ ಘೋಷ ವಾಕ್ಯ (theme)-’ನಮ್ಮ ಕ್ರಿಯೆಗಳುನಮ್ಮ ಭವಿಷ್ಯ ಉತ್ತಮ ಇಳುವರಿಉತ್ತಮ ಪೋಷಣೆಉತ್ತಮ ಪರಿಸರ ಮತ್ತು ಜೀವನಕ್ಕಾಗಿ (“Our actions are our future-Better production, better nutrition, a better environment and a better life”). ಬಸವಣ್ಣನ ಈ ವಚನ ಈ ವರ್ಷದ ಧ್ಯೇಯ ವಾಕ್ಯಕ್ಕೆ ಅತ್ಯಂತ ಸೂಕ್ತ ಎಂದು ಪರಿಗಣಿಸಿ ಮೇಲಿನ ವಚನವನ್ನು ಸಾಂದರ್ಭಿಕವಾಗಿ ಉಲ್ಲೇಖಿಸಿದ್ದೇನೆ. ಅದರಲ್ಲೂ ಕೋವಿಡ್-19 ಬಿಕ್ಕಟ್ಟಿನ ಪ್ರಸ್ತುತ ಸಂದರ್ಭದಲ್ಲಿ ನಮ್ಮೆಲ್ಲರ ಕ್ರಿಯೆಗಳು ಹರಕೆಯ ಕುರಿ ಮತ್ತು ಕುರಿಯನ್ನು ವಧಿಸುವ ವ್ಯಕ್ತಿಯ ಕ್ರಿಯೆಯೊಂದಿಗೆ ಬೆಸೆದುಕೊಂಡಿವೆಒಟ್ಟಾರೆ ವ್ಯವಸ್ಥೆಯಲ್ಲಿ ಬಹುತೇಕರು ಹರಕೆಯ ಕುರಿಗಳಾಗಿದ್ದರೆ ಕೆಲವರು ಕುರಿಗಳನ್ನು ಶೋಷಿಸಿ ಒಡಲ ಹೊರೆಯುವ ಶೋಷಕರುಈ ಸಂಕೀರ್ಣ ವ್ಯವಸ್ಥೆಯಲ್ಲಿ ಶೋಷಿಸಿ ಕೊಂದವರೂ ಉಳಿಯಲಿಲ್ಲ ಎಂಬ ಸಾರ್ವಕಾಲಿಕ ಸತ್ಯ. ಸಾಕ್ಷಾತ್ಕರಿಸದಿದ್ದರೆ ಧರೆಯ ಪಾಲಿಗೆ ಮುಂದಿನ ದಿನಗಳು ಅವನತಿಯ ಅಂತಿಮ ಚರಣವೇ ಸೈ.

ಬಾನಾಡಿಗಳ ಬೆನ್ನುಹತ್ತಿ

ಬಾನಾಡಿಗಳ ಬೆನ್ನುಹತ್ತಿ

 ಡಿ. ಕೃಷ್ಣಚೈತನ್ಯ 

ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

ಹಾಯ್ ಸ್ನೇಹಿತರೆ, ಹಿಂದಿನ, ಸಂಚಿಕೆಗಳಲ್ಲಿ ಪಕ್ಷಿಗಳಿಗೆ ಸಂಬಂಧಿಸಿದಂತೆ ಎರಡು ಲೇಖನಗಳನ್ನು ಓದಿರುತ್ತೀರಿ. ಆ ಎರಡೂ ಲೇಖನಗಳಲ್ಲಿ, ಪಕ್ಷಿಗಳನ್ನು ಹೇಗೆ ವೀಕ್ಷಣೆ ಮಾಡಬೇಕು ಮತ್ತು ಹಕ್ಕಿಗಳ ಬಗ್ಗೆ ಒಂದು ಕಿರು ಪರಿಚಯವನ್ನೂ ಮಾಡಿಕೊಂಡಿದ್ದೀರಿ. ಇಂದಿನಿಂದ ಪಕ್ಷಿಗಳ ಬಗ್ಗೆ ಇನ್ನಷ್ಟು ಮಾಹಿತಿ ನೀಡುವ ಸರಣಿಯನ್ನು ಪ್ರಾರಂಭಿಸುತ್ತಿದ್ದೇನೆ. ಅದನ್ನು ತಾವೆಲ್ಲರೂ ಪರಾಮರ್ಶಿಸಿ, ತಮ್ಮ ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ತಲುಪಿಸಿ, ಅವುಗಳ ಉಳಿವಿಗೆ ಸಹಕರಿಸುತ್ತೀರಿ ಎನ್ನುವ ಆಶಯ ಮತ್ತು ಭರವಸೆ ನನ್ನದು. ಬನ್ನಿ, ಪಕ್ಷಿಗಳ ಪ್ರಪಂಚಕ್ಕೆ ಹೋಗೋಣ.

ಪುಸ್ತಕ ಪರಿಚಯ - ‘ತ್ರಿಮುಖಿ’

ಪುಸ್ತಕ ಪರಿಚಯ - ‘ತ್ರಿಮುಖಿ’

- ಜಿ. ವಿ. ಅರುಣ 



ಈಚೆಗೆ ಬಿಡುಗಡೆಯಾದ ಒಂದು ಪುಸ್ತಕದ  ಪರಿಚಯವನ್ನು ಇಂದು ನಾನು  ಮಾಡಿ  ಕೊಡುತ್ತಿದ್ದೇನೆ.  ಇದು ಪುಸ್ತಕ  ಪರಿಚಯ ಮಾತ್ರ.  ಇಂಗ್ಲೀಷಿನಲ್ಲಿ ಬುಕ್ ಚೆಕ್ ಅನ್ನುತ್ತಾರಲ್ಲ ಹಾಗೆ.  ಇದು ವಿಮರ್ಶೆಯಲ್ಲ.

ನಾನು ಪರಿಚಯಿಸುತ್ತಿರುವ ಪುಸ್ತಕ  ‘ತ್ರಿಮುಖಿ’; ಇದರಲ್ಲಿ ತಮ್ಮ ನೆನಪಿನ ಹಾದಿಯನ್ನು ಬಿಚ್ಚಿಟ್ಟಿರುವ ಲೇಖಕರು  ಡಾ ಸಿ. ಆರ್. ಸತ್ಯ ಅವರು. ಅತ್ಯುತ್ತಮ ವಿಜ್ಞಾನಿಯಾಗಿ, ಕನ್ನಡ ಹಾಗೂ ಇಂಗ್ಲಿಷ್ ಲೇಖಕರಾಗಿ, ಹಾಸ್ಯಬರಹಗಾರರಾಗಿ ಕನ್ನಡಿಗರಿಗೆ ಶ್ರೀ ಸತ್ಯ ಅವರ ಪರಿಚಯ ಇದ್ದೇ ಇದೆ. ಡಾ|| ವಿಕ್ರಂ ಸಾರಾಭಾಯ್, ಡಾ|| ಅಬ್ದುಲ್ ಕಲಾಂ,  ಪ್ರೊ|| ಎಸ್. ಆರ್.  ರಾವ್ ಮುಂತಾದ ಶ್ರೇಷ್ಠ ವಿಜ್ಞಾನಿಗಳ ಜೊತೆ ಕೆಲಸ ಮಾಡಿದ ಮೇಧಾವಿ.

ಒಲೆ ಹತ್ತಿ ಉರಿದರೆ ನಿಲ್ಲಬಹುದು, ಧರೆ ಹತ್ತಿ ಉರಿದರೆ ......

ಒಲೆ ಹತ್ತಿ ಉರಿದರೆ ನಿಲ್ಲಬಹುದು, ಧರೆ ಹತ್ತಿ ಉರಿದರೆ ...... 

ಪರಮೇಶ್ವರಯ್ಯ ಸೊಪ್ಪಿನಮಠ

ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು

ಹಗರಿಬೊಮ್ಮನಹಳ್ಳಿ

ಬಳ್ಳಾರಿ(ಜಿ)-583212


ಸೆಪ್ಟೆಂಬರ್ ಮೊದಲ ವಾರದಲ್ಲಿ, ಭೂಮಿ ಮರಳುಗಾಡು ಆಗುವುದನ್ನು ತಡೆಯುವ ಕುರಿತಂತೆ ವಿಶ್ವಸಂಸ್ಥೆಯ ಒಪ್ಪಂದಕ್ಕೆ ಸಹಿ ಹಾಕಿರುವ ರಾಷ್ಟ್ರಗಳ 14ನೇ  ಶೃಂಗಸಭೆಯ (conference of parties) ಆಯೋಜಿಸುವ ಭಾಗ್ಯ ಭಾರತಕ್ಕೆ ಒಲಿದು ಬಂದಿತ್ತು.  ಈ ಶೃಂಗಸಭೆಯಲ್ಲಿ ಅತಿಹೆಚ್ಚು ದೇಶಗಳು ಭಾಗವಹಿಸಿದ್ದವು. ಭೂ ಸವಕಳಿಯನ್ನು ತಡೆಯುವ ಅಥವಾ ಅದನ್ನು ಪೂರ್ವ ಸ್ಥಿತಿಗೆ ಮರಳಿಸುವ ಜಾಗತಿಕ ಬದ್ಧತೆಯ ಕುರಿತು ಇನ್ನಾದರೂ ಎಲ್ಲರೂ ಗಂಭೀರವಾಗಿ ಯೋಚಿಸಬೇಕು ಎನ್ನುವ ಆಶಯವನ್ನು ಈ ಸಭೆ ಪ್ರತಿಧ್ವನಿಸಿತು.

ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ನಮ್ಮ ಪ್ರಧಾನಮಂತ್ರಿಗಳು, ಭಾರತದ ಸಂಸ್ಕೃತಿಯಲ್ಲಿ ಭೂಮಿಗೆ ಅತ್ಯಂತ ಪವಿತ್ರ ಸ್ಥಾನವಿದೆ ಮತ್ತು ಅದನ್ನು ನಾವು ತಾಯಿಯ ರೂಪದಲ್ಲಿ ಗೌರವಿಸುತ್ತೇವೆ ಎಂದು ನುಡಿದರು. ಹವಾಮಾನ ಮತ್ತು ಪರಿಸರ ಎರಡೂ ನಮ್ಮ ಜೈವಿಕ ವೈವಿಧ್ಯತೆ ಮತ್ತು ಭೂಮಿಯ ಮೇಲೆ ಬೀರುತ್ತಿರುವ ಪರಿಣಾಮ, ಅದರಿಂದಾಗುವ ಅನಾಹುತಗಳತ್ತ ಅವರು ತಮ್ಮ ಮಾತಿನಲ್ಲಿ ಹೆಚ್ಚು ಗಮನ ಸೆಳೆದರು. ಭೂಮಿ ಮತ್ತು ಗಿಡಮರಗಳು ಹಾಗೂ ಪ್ರಾಣಿಗಳು ಅಳಿವಿನ ಅಂಚಿಗೆ ತಲುಪಿರುವುದು, ಪ್ರಕೃತಿಯ ಅಸಮತೋಲ, ಇವು ಭೂಮಿಗೂ ಸಂಕಟ ತಂದಿದೆ. ಸಮುದ್ರದಲ್ಲಿ ನೀರಿನ ಮಟ್ಟದ ವ್ಯತ್ಯಾಸ, ಬಿರುಗಾಳಿಯಿಂದ ಕೂಡಿದ ಭಾರಿ ಮಳೆ, ಬಿಸಿ ಉಷ್ಣಾಂಶದಿಂದ ಉಂಟಾಗುವ ಮರಳಿನ ಬಿರುಗಾಳಿ, ಹಾಗೂ ಜಗತ್ತಿನ 23 ರಾಷ್ಟ್ರಗಳ ಭೂಮಿ ಮರುಭೂಮಿಯಾಗುತ್ತಿರುವ ಕುರಿತಾದ ಕಳವಳವನ್ನು ಅವರು ತಮ್ಮ ಭಾಷಣದಲ್ಲಿ ತೋರಿದರು. 

ಸವಿಜ್ಞಾನ ತಂಡದ ಸಾಧಕ ಶಿಕ್ಷಕರ ಪರಿಚಯ

ಞಸವಿಜ್ಞಾನ ತಂಡದ ಸಾಧಕ ಶಿಕ್ಷಕರ ಪರಿಚಯ

ಸವಿಜ್ಞಾನ  ತಂಡದ ಸದಸ್ಯರ, ಲೇಖಕರ ಶೈಕ್ಷಣಿಕ, ಸಾಮಾಜಿಕ ಬದ್ಧತೆ ಸೇವೆಗಳನ್ನು ಗುರುತಿಸಿ ಸರ್ಕಾರ ಹಾಗೂ ಹಲವಾರು ಸಂಘ ಸಂಸ್ಥೆಗಳು ಜಿಲ್ಲಾ, ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿವೆ.

ವಿವಿಧ ಪ್ರಶಸ್ತಿ ವಿಜೇತ ಶಿಕ್ಷಕರು   

  • ರಾಜ್ಯಮಟ್ಟದ ಅತ್ಯುತ್ತಮ ಪ್ರಶಸ್ತಿ ವಿಜೇತ ಪರಮೇಶ್ವರಯ್ಯ ಸೊಪ್ಪಿನಮಠ.
  •  2021ನೇ ಸಾಲಿನ ರಾಜ್ಯಮಟ್ಟದ ISBR ಗುರು ಶ್ರೇಷ್ಠ ಪ್ರಶಸ್ತಿ ವಿಜೇತ ಲಕ್ಷ್ಮೀಪ್ರಸಾದ್ ನಾಯಕ್
  •  ಜಿಲ್ಲಾ ಮಟ್ಟದ ಶಿಕ್ಷಕ  ಪ್ರಶಸ್ತಿ ವಿಜೇತ ವಿಜಯಕುಮಾರ್‌- ಚಂದ್ರಕಲಾ ದಂಪತಿಗಳು
  •  ನೇಷನ್ಬಿಲ್ಡರ್ಪ್ರಶಸ್ತಿ ವಿಜೇತ ಶಿವಕುಮಾರ್ಕೆ.ಟಿ.
  • ನೇಷನ್ಬಿಲ್ಡರ್ಪ್ರಶಸ್ತಿ ವಿಜೇತ ಅನಿಲ್ಕುಮಾರ್ಸಿ. ಎನ್‌.
  •  ಚಿಣ್ಣರ ಪಾಲಿನ  ಪಾಲಿನ ಚಿನ್ಮಯ ಜ್ಞಾನಿ ಈ ಶ್ರೀಧರ ಮಯ್ಯ

ಮಕ್ಕಳ ಪಾಲಿನ ಜ್ಞಾನಸಿಂಧು ಈ ಶಾರದೆ

ಮಕ್ಕಳ ಪಾಲಿನ ಜ್ಞಾನಸಿಂಧು ಶಾರದೆ

ಈಗ ನೀವೆಲ್ಲರೂ ನಿಷ್ಠಾ ಕೋರ್ಸ್ಗಳಲ್ಲಿ ವ್ಯಸ್ತರಾಗಿದ್ದೀರಿ. ನಮ್ಮ ವೃತ್ತಿಪರ ಅಭಿವೃದ್ಧಿಗಾಗಿ ರಾಷ್ಟ್ರಮಟ್ಟದಲ್ಲೇ ವಿನ್ಯಾಸಗೊಳಿಸಲಾದ, ನಮ್ಮ ವೃತ್ತಿಜೀವನಕ್ಕೆ ಅತ್ಯಂತ ಅವಶ್ಯಕವಾದ ಕೋರ್ಸ್ಇದು.  ಹಾಗಾಗಿ ನೀವೆಲ್ಲರೂ ಅತ್ಯಂತ ಕ್ರಿಯಾಶೀಲ, ಪಾದರಸದಂತಹ ವ್ಯಕ್ತಿತ್ವದ ಸ್ಪಷ್ಟ ಉಚ್ಚಾರಣೆಯ ಹಾಗೂ ನಿರರ್ಗಳ ಮಾತಿನ ಇವರ ವಿಡಿಯೋಗಳನ್ನು ನೋಡಿಯೇ ಇರುತ್ತೀರಿ. ಅವರೇ ಮೈಸೂರು ಜಿಲ್ಲೆಯ ಈ ಬಾರಿಯ ಸವಿಜ್ಞಾನದ  ಸಾಧಕ ಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ, ಎಂ.ಸಿ. ತಳಲು, ಸರಗೂರು ತಾಲ್ಲೂಕು, ಮೈಸೂರು ಜಿಲ್ಲೆಯ ಗಣಿತ ಶಿಕ್ಷಕಿ ಶ್ರೀಮತಿ ಶಾರದಾ ಎಚ್. ಎಸ್. ಎಂದು ನಿಮಗೆ ಪರಿಚಯಿಸಲು ಸಂತೋಷವಾಗುತ್ತದೆ.

ವಿಜ್ಞಾನದ ಒಗಟುಗಳು - ಅಕ್ಟೋಬರ್ 2021

 ವಿಜ್ಞಾನದ ಒಗಟುಗಳು : ಅಕ್ಟೋಬರ್‌ 2021

                                         -1-

ಒಂದೇ ನಾಣ್ಯದ ಎರಡು ಮುಖಗಳು ನಾವು

ದಿಕ್ಕೇನಿಲ್ಲ , ಕೇವಲ ಪರಿಮಾಣವಾಗಿಹೆವು

ಉಷ್ಣದ ಲಕ್ಷಣಗಳ ತಿಳಿಸಿದಾತನ ನಾಮವು

ಆಗಿದೆ ನಮ್ಮಯ ( S.I ) ಅಂತಾರಾಷ್ಟ್ರೀಯ ಏಕಮಾನವು

ನಮ್ಮನು ಹೆಸರಿಸುವಿರಾ ಜಾಣರು ನೀವು.   ಉತ್ತರ: ಶಕ್ತಿ ಮತ್ತು ಕೆಲಸ, S.I ಏಕಮಾನ ಜೂಲ್                

                                         -2-

ಉದ್ದವಿಲ್ಲ, ಅಗಲವಿಲ್ಲ, ತೂಕವೂ ಇಲ್ಲ

ಆದರೂ ನನ್ನನು ಅಳೆಯಬಲ್ಲರು ಎಲ್ಲಾ

ನಾನು ಮೇಲೆ ಮೇಲೆ ಏರಲು ಬಲ್ಲೆ

ಹಾಗೇ ಕೆಳಗಿಳಿದು ತಣ್ಣಗಿರಲು ಬಲ್ಲೆ

ನಾ ಬಲ್ಲೆ ನೀ ನನ್ನ ಹೆಸರ ಹೇಳಬಲ್ಲೆ.              ಉತ್ತರ : ತಾಪ (Temperature)

                                  -3-

ನನ್ನನು ಅಳೆಯಲು ಮೂರು ಅಳತೆ ಕೋಲುಗಳು

ಒಂದು ವೈದ್ಯರ ಕೈಯಲ್ಲಿ

ಇನ್ನೊಂದು ಪ್ರಯೋಗಾಲಯದಲ್ಲಿ

ಮತ್ತೊಂದು ಜಗತ್ತಿನೆಲ್ಲೆಡೆ ಏಕರೂಪದಲ್ಲಿ

ಹಾಗಾದರೆ ನಾನು ಯಾರು ?

ಅಳತೆಕೋಲುಗಳಾವವು ಮೂರು ?   

ಉತ್ತರ : ತಾಪ, ಡಿಗ್ರಿ ಸೆಲಿಷಿಯಸ್‌, ಡಿಗ್ರಿ ಫ್ಯಾರನ್‌ ಹೀಟ್‌ ಮತ್ತು ಕೆಲ್ವಿನ್.

                                 ವಿಜಯಕುಮಾರ್‌ ಹುತ್ತನಹಳ್ಳಿ

                                              ಪ್ರೌಢಶಾಲಾ ಸಹಶಿಕ್ಷಕ

                         ಸರ್ಕಾರಿ ಪ್ರೌಢಶಾಲೆ, ಕಾವಲ್‌ ಭೈರಸಂದ್ರ

                                ಬೆಂಗಳೂರು ಉತ್ತರ ವಲಯ 3


1) ನಾನು ಜೀವಿ ನಿರ್ಜೀವಿಗಳ ನಡುವಿನ ಕೊಂಡಿ,

    ಜೀವಿಯ ದೇಹದ ಹೊರಗೆ ನಾನು  ಕಣ ,

    ಆತಿಥೇಯ  ಜೀವಿಯ ದೇಹದ ಒಳಗೆ ನನ್ನ ಹವಾ,

    ಹಾಗಿದ್ದಲ್ಲಿ ನಾನು ಯಾರು?                        ಉತ್ತರ : ವೈರಸ್

 

2) ಮಾನವನ ದೇಹದ ನಿರ್ನಾಳ ಗ್ರಂಥಿಗಳ ವ್ಯೂಹದ ವಾದ್ಯಘೋಷಕ,

    ಮೂರ್ತಿ ಚಿಕ್ಕದು ಎಂದು ಹೀಗಳೆಯಬೇಡಿ,

    ಆದರೆ ನನ್ನ ಕೀರ್ತಿ ದೊಡ್ಡದು, ಹಾಗಾದರೆ ನಾನು ಯಾರು ?    ಉತ್ತರ : ಪಿಟ್ಯೂಟರಿ ಗ್ರಂಥಿ

 

3)  ನಾನು ಸಸ್ಯ ಹಾರ್ಮೋನ್ ಗಳಲ್ಲಿ ಒಬ್ಬ

     ನನ್ನ ಸಂಕೇತ ಸಸ್ಯಗಳ  ಬೆಳವಣಿಗೆ  ನಿಲ್ಲಿಸಲು ಅಗತ್ಯ

     ನನ್ನ ಹೆಸರು ಆಮ್ಲದಿಂದ ಕೊನೆಗೊಳ್ಳುತ್ತದೆ

     ನಾನು ಬೆಳವಣಿಗೆಯನ್ನು ಪ್ರತಿಬಂಧಿಸುತ್ತೇನೆ

     ಹಾಗಿದ್ದಲ್ಲಿ ನಾನು…….                                ಉತ್ತರ : ಅಬ್ಸಿಸಿಕ್ ಆಮ್ಲ

 

4) ತಟ್ಟೆಯಾದರೂ ಉಣಲಾಗದು

    ಕಿರಿದಾದರೂ  ಕಾರ್ಯ ಹಿರಿದು

    ಗಾಯವಾದ ಪ್ರದೇಶದಲಿ ಕಾರ್ಯ ನನದು

    ನನ್ನ ಹೆಸರ ಹೇಳುವ ಕೆಲಸ ನಿಮ್ಮದು.            ಉತ್ತರ : ಕಿರುತಟ್ಟೆಗಳು / ಪ್ಲೇಟ್‌ಲೆಟ್ಸ್

 

5)  ಅಂಬರದ ಛತ್ರಿ ನಾನು,

     ಸ್ತರಗೋಳದಲಿ ಹಾಜರಿರುವವನು,

     ನೇರಳಾತೀತ ಕಿರಣಗಳ ಶೋಧಕನು,

     ವಸುಂದರೆಯ ಒಡಲಿನ ಸಕಲ ಜೀವಿಗಳ ರಕ್ಷಕನು ,

     ಹೇಳಿ ಯಾರು ನಾನು……………………….        ಉತ್ತರ : ಓಜ಼ೋನ್ ಪದರ

                                                            

ಲೇಖಕರು :

ಬಿ. ಎನ್. ರೂಪ ,

ಸಹಶಿಕ್ಷಕರು ,

ಸರ್ಕಾರಿ ಉರ್ದು ಮತ್ತು ಆಂಗ್ಲ ಪ್ರೌಢ ಶಾಲೆ ಗೋರಿಪಾಳ್ಯ,

ಬೆಂಗಳೂರು ದಕ್ಷಿಣ ವಲಯ 2.                                               


ವ್ಯಂಗ್ಯಚಿತ್ರಗಳು - ಅಕ್ಟೋಬರ್ 2021

 ವ್ಯಂಗ್ಯಚಿತ್ರಗಳು :



ರಚನೆ : ಶ್ರೀಮತಿ ಜಯಶ್ರೀ ಶರ್ಮ


ರಚನೆ : ಶ್ರೀ ವಿಜಯ್ ಕುಮಾರ್ ಹುತ್ತನಹಳ್ಳಿ