ಮಕ್ಕಳ ಪಾಲಿನ ಜ್ಞಾನಸಿಂಧು ಈ ಶಾರದೆ
ಈಗ ನೀವೆಲ್ಲರೂ ನಿಷ್ಠಾ ಕೋರ್ಸ್ಗಳಲ್ಲಿ ವ್ಯಸ್ತರಾಗಿದ್ದೀರಿ. ನಮ್ಮ ವೃತ್ತಿಪರ ಅಭಿವೃದ್ಧಿಗಾಗಿ ರಾಷ್ಟ್ರಮಟ್ಟದಲ್ಲೇ ವಿನ್ಯಾಸಗೊಳಿಸಲಾದ, ನಮ್ಮ ವೃತ್ತಿಜೀವನಕ್ಕೆ ಅತ್ಯಂತ ಅವಶ್ಯಕವಾದ ಕೋರ್ಸ್ ಇದು. ಹಾಗಾಗಿ ನೀವೆಲ್ಲರೂ ಅತ್ಯಂತ ಕ್ರಿಯಾಶೀಲ, ಪಾದರಸದಂತಹ ವ್ಯಕ್ತಿತ್ವದ ಸ್ಪಷ್ಟ ಉಚ್ಚಾರಣೆಯ ಹಾಗೂ ನಿರರ್ಗಳ ಮಾತಿನ ಇವರ ವಿಡಿಯೋಗಳನ್ನು ನೋಡಿಯೇ ಇರುತ್ತೀರಿ. ಅವರೇ ಮೈಸೂರು ಜಿಲ್ಲೆಯ ಈ ಬಾರಿಯ ಸವಿಜ್ಞಾನದ ಸಾಧಕ ಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ, ಎಂ.ಸಿ. ತಳಲು, ಸರಗೂರು ತಾಲ್ಲೂಕು, ಮೈಸೂರು ಜಿಲ್ಲೆಯ ಗಣಿತ ಶಿಕ್ಷಕಿ ಶ್ರೀಮತಿ ಶಾರದಾ ಎಚ್. ಎಸ್. ಎಂದು ನಿಮಗೆ ಪರಿಚಯಿಸಲು ಸಂತೋಷವಾಗುತ್ತದೆ.
2002ರಲ್ಲಿ ಗಣಿತ ಮತ್ತು ಭೌತಶಾಸ್ತ್ರ ಶಿಕ್ಷಕಿಯಾಗಿ ಸರ್ಕಾರಿ
ಪ್ರೌಢಶಾಲೆ ಯರಗನಹಳ್ಳಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಹಲವು ಕನಸುಗಳೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟ ಶಾರದರವರು ಸಹೋದ್ಯೋಗಿಗಳು, ಮುಖ್ಯಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು
ಹಾಗೂ ಇಲಾಖಾ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಮ್ಮ ಕನಸುಗಳನ್ನು ನನಸು ಮಾಡುತ್ತಾ ಶಿಕ್ಷಣ ಇಲಾಖೆಯ
ಆಸ್ತಿಯಾಗಿ ಹೊರಹೊಮ್ಮಿದ್ದು ಅಚ್ಚರಿಯೇನಲ್ಲ. ಜ್ಞಾನಾರ್ಜನೆಯೊಂದಿಗೆ ತಾವೂ ಪಕ್ವಗೊಳ್ಳುತ್ತಾ, ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ
ಸೂಕ್ತ ಮಾರ್ಗದರ್ಶನ ನೀಡುತ್ತಾ ಅವರ ಜ್ಞಾನ ತೃಷೆ ಹಿಂಗಿಸುತ್ತಾ ಮಕ್ಕಳ ಪಾಲಿಗೆ ಜ್ಞಾನಸಿಂಧುವಾಗಿದ್ದಾರೆ.
ಪ್ರೇರಣಾ, ಚೈತನ್ಯ, ಕ್ರಿಯಾ
ಸಂಶೋಧನೆ, ನಿರಂತರ
ಮತ್ತು ವ್ಯಾಪಕ ಮೌಲ್ಯಮಾಪನ, ವಿಜ್ಞಾನ ಮತ್ತು ಗಣಿತ ರಚನಾ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಒಂದು ದಶಕದಿಂದ
ಕಾರ್ಯನಿರ್ವಹಿಸುತ್ತಿದ್ದಾರೆ.
ತಮ್ಮ ಶಾಲೆಯಲ್ಲಿ ಅಗಸ್ತ್ಯ ಫೌಂಡೇಶನ್ ಸಹಕಾರದೊಂದಿಗೆ ಸೈನ್ಸ್ ಆನ್ ವೀಲ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಹತ್ತನೆ ತರಗತಿಯ
ವಿದ್ಯಾರ್ಥಿಗಳಿಗಾಗಿ ಗಣಿತ, ವಿಜ್ಞಾನ ವಿಷಯದಲ್ಲಿ ಪ್ರಶ್ನೆ ಕೋಠಿ ತಯಾರಿಕೆ, ಪಠ್ಯಪುಸ್ತಕ ರಚನಾ ಕಾರ್ಯಗಳಲ್ಲಿ
ಪಾಲ್ಗೊಂಡಿದ್ದಾರೆ. ರಾಜ್ಯಮಟ್ಟದ ಮತ್ತು ಜಿಲ್ಲಾಮಟ್ಟದ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಗಳಲ್ಲಿ ಕೆಲವು ವರ್ಷಗಳಿಂದ
ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ವಿದ್ಯಾರ್ಥಿಗಳು ಕೂಡ ಅನೇಕ ಜಿಲ್ಲಾ
ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಗಣಿತ ಮತ್ತು ವಿಜ್ಞಾನಕ್ಕೆ
ಸಂಬಂಧಪಟ್ಟಂತೆ ಹಲವಾರು ಸರಳ ಕಲಿಕೋಪಕರಣಗಳನ್ನು ತಯಾರು ಮಾಡಿರುತ್ತಾರೆ.
ಪ್ರಾಥಮಿಕ ಹಾಗೂ
ಪ್ರೌಢಶಾಲಾ ಶಿಕ್ಷಕರಿಗೆ ಅನೇಕ ಸೆಮಿನಾರುಗಳನ್ನು, ತರಬೇತಿಗಳನ್ನು ನಡೆಸಿಕೊಟ್ಟಿದ್ದಾರೆ.
ಸಮುದಾಯದೊಂದಿಗಿನ ಉತ್ತಮ ಬಾಂಧವ್ಯದಿಂದಾಗಿ ತಮ್ಮ ಶಾಲೆಗೆ
ಅಗತ್ಯವಿರುವಂತಹ ಮೂಲ ಸೌಕರ್ಯಗಳನ್ನು ಒದಗಿಸಿರುತ್ತಾರೆ. ಎಲ್ & ಟಿ ಸಂಸ್ಥೆ ರೋಟರಿ ಇನ್ನರ್ ವೀಲ್, ಆರ್ಷ ಜ್ಞಾನ ಸಂಸ್ಥೆಗಳಂತಹ NGO ಸಂಸ್ಥೆಗಳ ಸಹಕಾರದೊಂದಿಗೆ ಶಾಲಾ ಪ್ರಯೋಗಾಲಯ ಮತ್ತು ಲೈಬ್ರರಿ
ನಿರ್ಮಾಣ, ಮೈದಾನಕ್ಕೆ
ಇಂಟರ್ ಲಾಕಿಂಗ್ ಬ್ರಿಕ್ಸ್, ತರಗತಿಗಳಿಗೆ ಗ್ರೀನ್ ಬೋರ್ಡ್ ಅಳವಡಿಸಿರುವುದು, ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ಒದಗಿಸಿರುವುದು, ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಪ್ರಾಯೋಜಕರನ್ನು ಸಂಪರ್ಕಿಸಿರುವುದು, SSLC ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ
ಗಳಿಸಿದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪ್ರತಿಭಾ
ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿರುವುದಲ್ಲದೇ
ಮುಂದಿನ ವಿದ್ಯಾಭ್ಯಾಸಕ್ಕೆ ದಾನಿಗಳ ನೆರವು ಪಡೆದು ವಿಜ್ಞಾನವನ್ನು ಆಯ್ಕೆ ಮಾಡಿಕೊಳ್ಳಲು ಪ್ರೋತ್ಸಾಹ ನೀಡಿರುತ್ತಾರೆ.
ಶೈಕ್ಷಣಿಕ ಕಾರ್ಯವಲ್ಲದೆ ವಿದ್ಯಾರ್ಥಿಗಳಲ್ಲಿ ಕಥೆ ಹೇಳೋಣ ಬನ್ನಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ
ವಿಭಿನ್ನ ರೀತಿಯಾಗಿ ಕಥೆ ಹೇಳುವಂತಹ ಕಾರ್ಯಕ್ರಮವನ್ನು ಏರ್ಪಡಿಸಿರುವುದಷ್ಟೇ ಅಲ್ಲದೇ ಎರಡು ವರ್ಷಗಳ ಕಾಲ ಮಕ್ಕಳರಂಗ ಹಬ್ಬವನ್ನು ಆಯೋಜಿಸಿರುತ್ತಾರೆ. 2021 ಮಾರ್ಚ್ ನಲ್ಲಿ ಸಂಚಲನ ರಂಗತಂಡದ ವತಿಯಿಂದ ನಡೆದ ಮಕ್ಕಳ ನಾಟಕೋತ್ಸವ ಕುಣಿಯೋಣು ಬಾರಾ ಕಾರ್ಯಕ್ರಮದಲ್ಲಿ ತಮ್ಮಶಾಲಾ ಮಕ್ಕಳನ್ನು ಪಾಪು-ಬಾಪು ನಾಟಕವನ್ನು ಅಭಿನಯಿಸಲು ಮಾರ್ಗದರ್ಶನ ನೀಡಿರುತ್ತಾರೆ.
ಹಲವಾರು ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮ ನಿರೂಪಕರಾಗಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಾರೆ. ಲಹರಿ ಎಂಬ ತಮ್ಮದೇ ಬ್ಲಾಗಿನ (https://sharumysuru.blogspot.com/) ಮೂಲಕ ಅನುಭವ ಕಥನಗಳ ಬ್ಲಾಗ್
ಬರಹಗಳನ್ನು ಬರೆಯುತ್ತಿರುವುದು ಇವರ ವೈವಿಧ್ಯಮಯ ಬಹುಮುಖ
ಪ್ರತಿಭೆಗೆ ಸಾಕ್ಷಿಯಾಗಿದೆ.
ಶಿಕ್ಷಕರ ಸ್ಪರ್ಧೆಗಳಲ್ಲಿ ಪ್ರಬಂಧ, ಭಾಷಣ ಸ್ಪರ್ಧೆಗಳಲ್ಲಿ ಜಿಲ್ಲಾ
ಮತ್ತು ರಾಜ್ಯ ಮಟ್ಟಗಳಲ್ಲಿ ಹಲವಾರು ಬಹುಮಾನಗಳನ್ನು ಪಡೆದುಕೊಳ್ಳುತ್ತಾ ವಿದ್ಯಾರ್ಥಿಗಳಿಗೆ ತಾವೇ ಸ್ವತಃ ರೋಲ್ಮಾಡೆಲ್ ಆಗಿದ್ದಾರೆ.
ಅತ್ಯುತ್ತಮ ಶಿಕ್ಷಕಿಯಾದ ಇವರ ಸಾಮರ್ಥ್ಯವನ್ನು ಶಿಕ್ಷಣ ಇಲಾಖೆ ಹಾಗೂ ಹಲವು ಸಂಘ ಸಂಸ್ಥೆಗಳು ಗುರುತಿಸಿ
ಗೌರವಿಸಿವೆ. ೨೦೧೨ರಲ್ಲಿ ಕರ್ನಾಟಕ ಕಾವಲುಪಡೆಯ ವತಿಯಿಂದ ಆದರ್ಶ ಶಿಕ್ಷಕ
ಪ್ರಶಸ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2013ರಲ್ಲಿ ಮೈಸೂರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 2013 ರಲ್ಲಿ ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ವತಿಯಿಂದ ಶಿಷ್ಯ ಮೆಚ್ಚಿದ ಗುರು ಪ್ರಶಸ್ತಿ. 2014 ರಲ್ಲಿ ಇನ್ನರ್ ವ್ಹೀಲ್ ವತಿಯಿಂದ ಆದರ್ಶ ಶಿಕ್ಷಕಿ ಪ್ರಶಸ್ತಿ, 2015
ರಲ್ಲಿ ಮೈಸೂರು ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಮೈಸೂರು ಸಾಹಿತ್ಯ ವೇದಿಕೆ ವತಿಯಿಂದ ಶಿಕ್ಷಣ ರತ್ನ ಪ್ರಶಸ್ತಿ.
2016 ರಲ್ಲಿ ಎನ್.ಎಂ.ಪಿ ಅಕಾಡೆಮಿ ವತಿಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ ಮತ್ತು ಇನ್ನರ್ ವ್ಹೀಲ್ ವತಿಯಿಂದ Nation Builder as a Teacher ಪ್ರಶಸ್ತಿ, ಹಾಗೂ 2020 ರಲ್ಲಿ ರೋಟರಿ ಸಂಸ್ಥೆ ಹೆಚ್.ಡಿ.ಕೋಟೆ ವತಿಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿಗಳು ಲಭಿಸಿವೆ. ಪ್ರಶಸ್ತಿಗಳಿಂದ ಬೀಗದೇ
ಇನ್ನಷ್ಟು ಹುರುಪಿನಿಂದ, ವಿನೀತ ಭಾವದಿಂದ ದೇಶದ ಭವಿಷ್ಯವನ್ನು ರೂಪಿಸುವ ಕೈಂಕರ್ಯದಲ್ಲಿ ನಿರತರಾಗಿರುವ ಶ್ರೀಮತಿ ಶಾರದರವರು
ಶಿಕ್ಷಕರಿಗೆ ಮಾದರಿಯಾಗಿದ್ದಾರೆ.
ಕಲಿಕಾ ಚಟುವಟಿಕೆಗಳು
GHS ಕುಕ್ಕರಹಳ್ಳಿಯಲ್ಲಿ ಶಾಲಾ ಗ್ರಂಥಾಲಯ
ಪ್ರಶಸ್ತಿಯ ಸನ್ಮಾನ ಸಮಾರಂಭಗಳು
ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿರುವುದು
NISHTHA ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿರುವುದು
ಅನುಕರಣೀಯ ಆದರ್ಶಗಳು....
ReplyDeleteExample for working beyond the boundary even being a Government High School Teacher
ReplyDeleteEducation Department authorities should recognize this kind of work and recommend for State Award
ReplyDeleteDown to earth personality🌷
ReplyDeleteStudents are blessed to have u,Good luck for ur future venture dear maam👍🌷
ಅಗಣಿತ ಜ್ಞಾನ ಸಂಪನ್ನೆಯಾದ ಶಾರದಾ ಮೇಡಮ್, ನಿಮ್ಮ
ReplyDelete*ಸವಿ ಜ್ಞಾನ* ವನ್ನು ಶಿಕ್ಷಕರಿಗೂ ಮತ್ತು ಮಕ್ಕಳಿಗೂ ಹೀಗೇ ಉಣಬಡಿಸುತ್ತಿರಿ.ಹಲವು ಕ್ಷೇತ್ರಗಳಲ್ಲಿ ವಿಶಾರದೆ ನೀವು.
Proud of you dear Madam🙏
ಶಿಕ್ಷಕರ ಹೆಮ್ಮೆ, ಶಾರದಾ ಮೇಡಂ ಗೆ ಅಭಿನಂದನೆಗಳು.
ReplyDeleteGot excitement!!! I met u but not knowing anything about ur works and awards in depth, I m so so surprised because u r SHARADA, and ever been blessed with GODDESS SHARADE I hope. Keep achieving all dreams madam. Congratulations for ur every achievement that u earned due to hardwork.
ReplyDeleteCongratulations and very happy to know the achievements and laurels of Sharada madam. Ele mare kayiyantiruva ivara baudika jnana sampathina sadbalike innashtu prachalitha aguvudu athyavashyakavagide 🙏🙏
ReplyDelete🙏 ಇದೇ ರೀತಿ ತಮ್ಮ ಸಾಧನೆ ಮುಂದುವರೆಯಲಿ ಎಂದು ಆಶಿಸುತ್ತೇನೆ
ReplyDeleteCongratulations Sharada Madam may you be blessed with more 🌹🌹🌹🌹🌹🌹🌹🌹
ReplyDeleteಬಹಳ ಇತ್ತೀಚೆಗೆ ಆದರೆ ಬಹು ಹತ್ತಿರದಿಂದ ಶಾರದರನ್ನು ನಾನು ಬಲ್ಲೆ. ಬಹಳ ವಿಶೇಷ ವ್ಯಕ್ತಿತ್ವ ಅವರದು. ಕರ್ತವ್ಯಪರತೆ, ವಿದ್ಯಾರ್ಥಿಗಳ ಬಗೆಗಿನ ಕಾಳಜಿ, ಕೆಲಸದಲ್ಲಿನ ಅಚ್ಚುಕಟ್ಟುತನ, ಇತರರಿಗೆ ನೋವಾಗದ ಅವರ ನಡೆ, ಹಿರಿಯರನ್ನು ಗೌರವಿಸುವುದು,ಸದಾ ನಗು ಮೊಗ, ಜವಾಬ್ದಾರಿ ಹೊರಡುವುದು, ತನ್ನದಲ್ಲದ ಕಾರ್ಯವನ್ನು ಸಹ ನಿರ್ವಹಿಸಿ ಇತರರಿಗೆ ಮಾರ್ಗದರ್ಶನ ನೀಡುವುದು ಇವು ನಾನು ಅವರಲ್ಲಿ ಕಂಡ ಗುಣಗಳು. ನನ್ನ ವೃತ್ತಿಬದುಕಿನ ಕಡೆಯ ಅವಧಿಯಲ್ಲಿ ಇಂತಹ ಅಪರೂಪದ ವ್ಯಕ್ತಿ ನನ್ನ ಸ್ನೇಹಿತರಾಗಿದ್ದು ನನ್ನ ಭಾಗ್ಯ. ಇನ್ನೂ ನೂರಾರು ಪ್ರಶಸ್ತಿ ಅವರನ್ನು ಅರಸಿ ಬರಲಿ.
ReplyDelete🙏 ಹೆಸರಿಗೆ ತಕ್ಕಂತೆ ಶಾರದೆಯೆ. ಎಲ್ಲರ ಅಚ್ಚುಮೆಚ್ಚಿನ ವ್ಯಕ್ತಿತ್ವ.
ReplyDeleteಶ್ರೀಮತಿ ಶಾರದಾ ಮೇಡಂ ರವರಿಗೆ ಅಭಿನಂದನೆಗಳು. ನಿಮ್ಮ ಪ್ರಾಮಾಣಿಕ ಸೇವೆ, ನಾವೀನ್ಯಯುತ ಚಟುವಟಿಕೆಗಳು, ಶಿಕ್ಷಣ ಕ್ಷೇತ್ರದಲ್ಲಿ ನಿಮ್ಮ ನಿರಂತರ ಭಾಗವಹಿಸುವಿಕೆ...ನಿಮ್ಮ ಮಾತನಾಡುವ ಶೈಲಿ ...ನಿಮ್ಮಲ್ಲಿರುವ ಸಂಪನ್ಮೂಲ ಅನೇಕ ವಿಜ್ಞಾನ ಶಿಕ್ಷಕರಿಗೆ ಮಾದರಿ. ಈ ಲೇಖನ ತಮ್ಮ ಕಾರ್ಯತತ್ಪರತೆಗೆ ಹಿಡಿದ ಕೈಗನ್ನಡಿ.ಲೇಖನದ ಶೀರ್ಷೀಕೆಯು ಕೂಡ ತಾವು ಮಾಡುತ್ತಿರುವ ವಿಶೇಷ ಕೆಲಸಗಳಿಗೆ ಸರಿಹೊಂದುವಂತಿದೆ...ತಮ್ಮ ಕಾರ್ಯ ಸಾಧನೆ ,ಯಶಸ್ಸು ಹಾಗೂ ಸಾಧನೆಯ ಪಥ ಹೀಗೆಯೇ ಮುಂದುವರಿಯಲಿ ಎಂಬುದೇ ನಮ್ಮ ಅಭಿಲಾಷೆ.... ಲೇಖಕರಾದ ಗೋಪಾಲ್ ರಾವ್ ಸರ್ ಗೆ ಅಭಿನಂದನೆಗಳು...ಅತ್ಯುತ್ತಮ ಶಿಕ್ಷಕರನ್ನು ನಿಮ್ಮ ಪದಗಳಿಂದ ನಮ್ಮನ್ನೆಲ್ಲಾ ಮೂಕವಿಸ್ಮಿತರನ್ನಾಗಿ ಮಾಡಿದ್ದಕ್ಕೆ
ReplyDeleteCongratulations sharada madam...,
ReplyDeletecongratulations sharada madam.👌👏
ReplyDeleteCongrats madam. A very good dynamic asset to our physical science faculty
ReplyDelete100% true
ReplyDelete. . Let your achievements continue in this same way
ಶಾರದಾ ಮೇಡಂ ಪ್ರತಿಭಾವಂತೆ ಎಂದು ತಿಳಿದಿತ್ತು, ಆದರೆ ಈ ಪರಿಯ ಬಹುಮುಖ ಪ್ರತಿಭೆ ಅವರಲ್ಲಿ ಅಡಕವಾಗಿರುವುದು ತಿಳಿದಿರಲಿಲ್ಲ. ತುಂಬಿದ ಕೊಡ ತುಳುಕುವುದಿಲ್ಲವಂತೆ, ಹಾಗೆ ಶಾರದಾ ರವರು ಎಂದಿಗೂ ತಾವು ಇಷ್ಟೊಂದು"ಜ್ಞಾನ ಭಂಡಾರ"ದ "ಸಂಪತ್ತಿನ" ಒಡತಿ ಎಂದು ಇಂದು ತಿಳಿಯಿತು.
ReplyDeleteವಿದ್ಯಾರ್ಥಿಗಳ ಶ್ರೇಯೋಭಿಲಾಶಿಯಾಗಿ ಮತ್ತಷ್ಟು, ಬಾನೆತ್ತರಕ್ಕೆ ಬೆಳೆಯಲೆಂದು ನನ್ನ ಹಾರೈಕೆ
Great madam, proud of u
ReplyDeleteಅಭಿನಂದನೆಗಳು ಮೇಡಂ , ತಮ್ಮ ಕಾರ್ಯ ಶ್ಲಾಘನೀಯವಾದದ್ದು.
ReplyDeleteVery nice mam proud of your achievements u r really an role model to us
ReplyDeleteVery lucky the students who have the teacher like Sharada madam. Keep spreading the knowledge madam
ReplyDeleteರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳೂ ಕೂಡಾ ಸಿಗಲಿ ನಿಮ್ಮ ಈ ಸಾಧನೆಗೆ... ಚೈತನ್ಯ ಹೀಗೆ ಇರಲಿ ಮೇಡಮ್.
ReplyDeleteFeeling proud of you Sharada. Super. ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ👏👏👏
ReplyDeleteಅಭಿನಂದನೆಗಳು, ಇನ್ನಷ್ಟು ಸಾಧನ ಗರಿಗಳು ನಿಮ್ಮ ಮುಡಿಗೆ ಏರಲಿ ಸದಾ ಒಳಿತಾಗಲಿ ಶುಭವಾಗಲಿ ಯಶಸ್ಸು ನಿಮ್ಮದಾಗಲಿ
ReplyDeleteಅಭಿನಂದನೆಗಳು ಶಾರದಾ. ನಮ್ಮ ಊರಿನ ಹುಡುಗಿ ಹಾಗೂ ಬಾಲ್ಯದ ಗೆಳತಿ ಈ ರೀತಿ ಸಾಧನೆ ಮಾಡುತ್ತಿರುವುದು ಖುಷಿಯಾದ ವಿಷಯ. ಕೀರ್ತಿಪತಾಕೆ ಹೀಗೆ ಹಾರುತ್ತಿರಲಿ.
ReplyDeleteTeachers pride
ReplyDeleteಮಾಡಿರುವ ಅತ್ಯಲ್ಪ ಸಾಧನೆಯನ್ನು ಗುರುತಿಸಿದ ಗುರುಗಳಿಗೆ
ReplyDeleteಅದನ್ನು ಅತ್ಯಂತ ಸುಂದರವಾಗಿ ಸಹೃದಯರಿಗೆ ಮುಟ್ಟುವಂತೆ ಅಕ್ಷರರೂಪಕ್ಕೆ ಇಳಿಸಿದ ಲೇಖಕರಿಗೆ
ಇಂತಹ ಪ್ರತಿಷ್ಠಿತ ಇ-ಪತ್ರಿಕೆಯಲ್ಲಿ ಈ ಲೇಖನವನ್ನು ಪ್ರಕಟಿಸಲು ಅನುವು ಮಾಡಿಕೊಟ್ಟ ಪೂಜ್ಯರಿಗೆ
ಎಲ್ಲಕ್ಕಿಂತ ಮುಖ್ಯವಾಗಿ ಲೇಖನವನ್ನು ಓದಿ ನನ್ನನ್ನು ಹರಸಿ,ಹಾರೈಸಿ,ಪ್ರೋತ್ಸಾಹಿಸಿ, ನಾನು ಇನ್ನಷ್ಟು ಕೆಲಸ ಮಾಡಲು ಹುರುಪು ತುಂಬಿದ ಎಲ್ಲ ಬಂಧುಭಗಿನಿಯರಿಗೆ ಹೃದಯಪೂರ್ವಕ ವಂದನೆಗಳು
Life is there to grind ourselves for the welfare of the society.The more you grind the aroma diffuses encompassing the greater radii.More than any thing I appreciate the creativity,ability to accept criticism and the deviant nature in you.I always used to say that it is the deviants who can bring about the reforms in any field.You are not the mouth piece of any body.You are original.Feeling proud about ourselves is not egocentric.congratulations.I wish you all the success in your.future endeavour.The expressions are not flattery.They are sincere Simply wonderfull
ReplyDeleteThank you very much for your wonderful wishes sir. You are always my inspiration. Thank you once again sir🙏🙏
Deletemadam nanu sumalatha from yaraganahalli ನಿಮ್ಮ ಈ ಸಾಧನೆಯನ್ನು
ReplyDeleteನೋಡಿ ಸಂತೋಷವಾಯಿತು ನೀವು ನಮ್ಮ ಗುರುವಾಗಿದು ನನ್ನ ಪುಣ್ಯ ಶುಭಾಶಯಗಳು ನಿಮಗೆ
Thanks ಸುಮಲತಾ
Delete