ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, October 4, 2021

ವಿಶ್ವ ಆಹಾರ ದಿನ : ಅಕ್ಟೋಬರ್-16-2021 - “ನಮ್ಮ ಕ್ರಿಯೆಗಳು - ನಮ್ಮ ಭವಿಷ್ಯ”

ವಿಶ್ವ ಆಹಾರ ದಿನ :  ಅಕ್ಟೋಬರ್-16-2021
ನಮ್ಮ ಕ್ರಿಯೆಗಳು - ನಮ್ಮ ಭವಿಷ್ಯ

ಲೇಖಕರು: ತಾಂಡವಮೂರ್ತಿ..ಎನ್

ಸಹಶಿಕ್ಷಕರು,

ಸರ್ಕಾರಿ ಪ್ರೌಢಶಾಲೆಕಾರಮಂಗಲ,

ಬಂಗಾರಪೇಟೆ(ತಾ.), ಕೋಲಾರ ಜಿಲ್ಲೆ

ಹಬ್ಬಕ್ಕೆ ತಂದ ಹರಕೆಯ

ಕುರಿ ತೋರಣಕ್ಕೆ ತಂದ

ತಳಿರ ಮೇಯಿತ್ತು!

ಕೊಂದಹರೆಂಬುದನರಿಯದೆ

ಬೆಂದೊಡಲ ಹೊರೆಯ

ಹೋಯಿತ್ತು! ಅಂದಂದೆ

ಹುಟ್ಟಿತ್ತು,ಅಂದಂದೆ ಹೊಂದಿತ್ತು.

ಕೊಂದವರುಳಿದರೆ?

ಕೂಡಲ ಸಂಗಮದೇವ.

-ಬಸವಣ್ಣ

ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ ಪ್ರತಿ ವರ್ಷ ಅಕ್ಟೋಬರ್-16 ರಂದು ಆಚರಿಸುವ ವಿಶ್ವ ಆಹಾರ ದಿನದ ಈ ವರ್ಷದ ಘೋಷ ವಾಕ್ಯ (theme)-’ನಮ್ಮ ಕ್ರಿಯೆಗಳುನಮ್ಮ ಭವಿಷ್ಯ ಉತ್ತಮ ಇಳುವರಿಉತ್ತಮ ಪೋಷಣೆಉತ್ತಮ ಪರಿಸರ ಮತ್ತು ಜೀವನಕ್ಕಾಗಿ (“Our actions are our future-Better production, better nutrition, a better environment and a better life”). ಬಸವಣ್ಣನ ಈ ವಚನ ಈ ವರ್ಷದ ಧ್ಯೇಯ ವಾಕ್ಯಕ್ಕೆ ಅತ್ಯಂತ ಸೂಕ್ತ ಎಂದು ಪರಿಗಣಿಸಿ ಮೇಲಿನ ವಚನವನ್ನು ಸಾಂದರ್ಭಿಕವಾಗಿ ಉಲ್ಲೇಖಿಸಿದ್ದೇನೆ. ಅದರಲ್ಲೂ ಕೋವಿಡ್-19 ಬಿಕ್ಕಟ್ಟಿನ ಪ್ರಸ್ತುತ ಸಂದರ್ಭದಲ್ಲಿ ನಮ್ಮೆಲ್ಲರ ಕ್ರಿಯೆಗಳು ಹರಕೆಯ ಕುರಿ ಮತ್ತು ಕುರಿಯನ್ನು ವಧಿಸುವ ವ್ಯಕ್ತಿಯ ಕ್ರಿಯೆಯೊಂದಿಗೆ ಬೆಸೆದುಕೊಂಡಿವೆಒಟ್ಟಾರೆ ವ್ಯವಸ್ಥೆಯಲ್ಲಿ ಬಹುತೇಕರು ಹರಕೆಯ ಕುರಿಗಳಾಗಿದ್ದರೆ ಕೆಲವರು ಕುರಿಗಳನ್ನು ಶೋಷಿಸಿ ಒಡಲ ಹೊರೆಯುವ ಶೋಷಕರುಈ ಸಂಕೀರ್ಣ ವ್ಯವಸ್ಥೆಯಲ್ಲಿ ಶೋಷಿಸಿ ಕೊಂದವರೂ ಉಳಿಯಲಿಲ್ಲ ಎಂಬ ಸಾರ್ವಕಾಲಿಕ ಸತ್ಯ. ಸಾಕ್ಷಾತ್ಕರಿಸದಿದ್ದರೆ ಧರೆಯ ಪಾಲಿಗೆ ಮುಂದಿನ ದಿನಗಳು ಅವನತಿಯ ಅಂತಿಮ ಚರಣವೇ ಸೈ.

ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ ಪ್ರಪಂಚದ 3 ಬಿಲಿಯನ್. ಅಂದರೆ ಪ್ರಪಂಚದ ಒಟ್ಟು ಜನಸಂಖ್ಯೆಯ  40% ಜನರು ಆರೋಗ್ಯಕರ ಪೋಷಣೆಯಿಂದ  ವಂಚಿತರಾಗಿದ್ದಾರೆ. ಈ ದ್ವೈತ ಜಗತ್ತಿನಲ್ಲಿ  ಅತಿಯಾದ ಆಹಾರ ಸೇವನೆಯಿಂದ  ಬೊಜ್ಜು ಮತ್ತು  ತೂಕದಿಂದ ಬಳಲುವವರು ಒಂದು ಕಡೆಯಾದರೆ, ಸಮತೋಲಿತ ಆಹಾರದ ಕೊರತೆಯ ಕಾರಣ ಅಪೌಷ್ಟಿಕತೆಯಿಂದ ನರಳುವ ಜನರು ಮತ್ತೊಂದು ಕಡೆ.

ನಮ್ಮ ಕೈಯಲ್ಲಿ ಆಹಾರದ ಭವಿಷ್ಯ-ಸುಸ್ಥಿರ ಕೃಷಿ-ಆಹಾರ ವ್ಯವಸ್ಥೆ

ಕೃಷಿ ಆಹಾರ ವ್ಯವಸ್ಥೆ (Agri-food system) ನಾವು ಗ್ರಹಿಸಿರುವುದಕ್ಕಿಂತ  ವಾಸ್ತವವಾಗಿ ಸಂಕೀರ್ಣವಾಗಿದೆ.ನಮ್ಮ ಜೀವನ ಈ ವ್ಯವಸ್ಥೆಯ ಮೇಲೆ ಅವಲಂಬಿಸಿದೆ ಎಂಬ ಅರಿವು ನಮಗಿದಿಯೇ? ಪ್ರತಿಸಾರಿ ನಾವು ಆಹಾರ ಸೇವಿಸಿದಾಗ ಈ ವ್ಯವಸ್ಥೆಯಲ್ಲಿ ಭಾಗಿಯಾಗುತ್ತೇವೆ.

ಸುಸ್ಥಿರ ಕೃಷಿ ಆಹಾರ ವ್ಯವಸ್ಥೆ (Sustainable agri-food system)ಯೆಂದರೆ,ಅಲ್ಲಿ ಸಾಕಷ್ಟು ವೈವಿಧ್ಯಮಯ,ಪೌಷ್ಟಿಕ ಮತ್ತು ಸುರಕ್ಷಿತ ಆಹಾರ ಕೈಗೆಟಕುವ ದರದಲ್ಲಿ ಎಲ್ಲರಿಗೂ ಲಭ್ಯವಾಗಬೇಕು,ಯಾರೊಬ್ಬರೂ ಹಸಿವು ಮತ್ತು ಅಪೌಷ್ಟಿಕತೆಯಿಂದ ನರಳಬಾರದು.ಅತ್ಯಂತ ಕನಿಷ್ಟ ಪ್ರಮಾಣದ ಆಹಾರ ನಷ್ಟವಾಗುವಂತೆ ನಿರ್ವಹಿಸಿ,ಆಹಾರ ಪೂರೈಕೆ ಸರಪಳಿಯು ಹವಾಮಾನ ವೈಪರಿತ್ಯ (ಬರನೆರೆ), ಬೆಲೆ ಏರಿಕೆ ಸಮಸ್ಯೆಗಳನ್ನು ಮೀರಿ ದಕ್ಷವಾಗಿ ಎಲ್ಲರಿಗೂ ಆಹಾರ ಕೈಗೆಟುಕುವಂತಾಗಬೇಕು.

ಸುಸ್ಥಿರ ಕೃಷಿ-ಆಹಾರ ವ್ಯವಸ್ಥೆಯು ಎಲ್ಲರಿಗೂ ಆರ್ಥಿಕ, ಸಾಮಾಜಿಕ ಮತ್ತು ಪಾರಿಸರಿಕ ನೆಲೆಗಟ್ಟುಗಳನ್ನು ಮೀರಿ ಪೌಷ್ಟಿಕ ಮತ್ತು ಸುರಕ್ಷಿತ ಆಹಾರವನ್ನು ಖಾತ್ರಿ ಪಡಿಸುತ್ತದೆ. ಸುಸ್ಥಿರ ಕೃಷಿ-ಆಹಾರ ವ್ಯವಸ್ಥೆಯು ಉತ್ತಮ ಇಳುವರಿಉತ್ತಮ ಪೋಷಣೆಉತ್ತಮ ಪರಿಸರ ಮತ್ತು ಉತ್ತಮ ಜೀವನಕ್ಕೆ ರಹದಾರಿಯಾಗಿದೆ.

ಕಾಳಜಿ ಏಕೆ?

ಕೃಷಿ-ಆಹಾರ ವ್ಯವಸ್ಥೆಯು ಒಂದು ಬಿಲಿಯನ್ ಗಿಂತಲೂ ಅಧಿಕ ಜನರಿಗೆ ಉದ್ಯೋಗ ನೀಡಿದೆಇತರ ಯಾವುದೇ ಆರ್ಥಿಕ ವಲಯಕ್ಕಿಂತಲೂ ಹೆಚ್ಚು ಜನರು ಈ ವ್ಯವಸ್ಥೆಯ ಭಾಗವಾಗಿದ್ದಾರೆಆದರೆ ನಾವು ಆಹಾರ ಉತ್ಪಾದಿಸುವ, ಸೇವಿಸುವ ಮತ್ತು ವ್ಯರ್ಥ ಮಾಡುವ ಪ್ರಕ್ರಿಯೆಯು ನೈಸರ್ಗಿಕ ಸಂಪನ್ಮೂಲಗಳು, ಪರಿಸರ ಮತ್ತು ಹವಾಗುಣದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತಿದೆಆಹಾರ ಉತ್ಪಾದನೆಯು ನೈಸರ್ಗಿಕ ಆವಾಸಗಳನ್ನು ನಾಶಗೊಳಿಸಿ, ಪ್ರಭೇದಗಳ ಅಳಿವಿಗೆ ತನ್ನದೇ ಕೊಡುಗೆ ನೀಡುತ್ತಿದೆಇಂತಹ ಅದಕ್ಷತೆಯು ಟ್ರಲಿಯನ್ ಗಟ್ಟಲೆ ಡಾಲರ್ ಗಳನ್ನು ನುಂಗಿ ನೀರು ಕುಡಿಯುತ್ತಿರುವುದಲ್ಲದೇ, ಪ್ರಸ್ತುತ ಕೃಷಿ-ಆಹಾರ ವ್ಯವಸ್ಥೆಯು ಜಾಗತಿಕ ಅಸಮಾನತೆ ಮತ್ತು ತಾರತಮ್ಯವನ್ನು ಅನಾವರಣಗೊಳಿಸಿದೆಇದರಿಂದಾಗಿ 3 ಬಿಲಿಯನ್ ಜನರು ಹಸಿವು ಮತ್ತು ಅಪೌಷ್ಟಿಕತೆಯಿಂದ ನರಳುತ್ತಿದ್ದರೆ, ಬೊಜ್ಜು ಮತ್ತು ಅತಿ ತೂಕದಿಂದ ಬಳಲುವವರ ಸಂಖ್ಯೆಯೂ ಜಾಗತಿಕವಾಗಿ ಹೆಚ್ಚಾಗುತ್ತಿದೆ.

ಪ್ರಸ್ತುತ ಕೃಷಿ-ಆಹಾರ ವ್ಯವಸ್ಥೆಯ ಮರುಪರಿಶೀಲನೆಗೆ ಕೋವಿಡ್-19 ರಂತಹ ಜಾಗತಿಕ ಬಿಕ್ಕಟ್ಟು ಅನಿವಾರ್ಯ ಒತ್ತಡವನ್ನು ಸೃಷ್ಟಿಸಿದೆ. ಕೋವಿಡ್-19 ಕಾಲಘಟ್ಟದಲ್ಲಿ ಸಂಭವಿಸಿದ ಕೃಷಿ ಸಂಕಷ್ಟ,ಉದ್ಯೋಗ ನಷ್ಟ,ಹೆಚ್ಚಿದ ಬಡತನ, ಆಹಾರ ಪದಾರ್ಥಗಳ ಹೆಚ್ಚಿದ ಬೇಡಿಕೆಯಿಂದಾಗಿ ಸುಸ್ಥಿರ ಕೃಷಿ-ಆಹಾರ ವ್ಯವಸ್ಥೆಯನ್ನು ರೂಪಿಸಬೇಕಾದ ಅನಿವಾರ್ಯತೆಗೆ ಜಾಗತಿಕ ಸಮುದಾಯ ತೆರೆದುಕೊಂಡಿದೆ. 2050 ರ ವೇಳೆಗೆ 10 ಬಿಲಿಯನ್ ಜನಸಂಖ್ಯೆಗೆ ಪೋಷಣೆ ಒದಗಿಸುವಂತಹ ಸುಸ್ಥಿರ ಕೃಷಿ-ಆಹಾರ ವ್ಯವಸ್ಥೆ ರೂಪುಗೊಳ್ಳಬೇಕಾದ ಸವಾಲು ನಮ್ಮ ಮುಂದಿದೆ.

ಪ್ರಸ್ತುತ ಪರಿಹಾರವೇನು?

ಜಾಗತಿಕವಾಗಿ ಎಲ್ಲಾ ದೇಶಗಳಲ್ಲೂ ಕೃಷಿ-ಆಹಾರ ವ್ಯವಸ್ಥೆ ಮರು ಪರಿಶಿಲನೆಗೆ ಒಳಪಟ್ಟು ಆಮೂಲಾಗ್ರವಾಗಿ ಬದಲಾಗಬೇಕಿದೆಎಲ್ಲರನ್ನೂ ಮತ್ತು ಎಲ್ಲಾ ವಲಯಗಳನ್ನೂ ಒಳಗೊಳ್ಳುವ ಸಮಗ್ರ ಸುಸ್ಥಿರ ಕೃಷಿ-ಆಹಾರ ವ್ಯವಸ್ಥೆ ರೂಪುಗೊಳ್ಳಬೇಕಾದ ಅನಿವಾರ್ಯತೆಯನ್ನು ಕೋವಿಡ್-19 ಬಿಕ್ಕಟ್ಟು ಸೃಷ್ಟಿಸಿದೆ. ಈ ದಿಶೆಯಲ್ಲಿ ವಿಶ್ವಸಂಸ್ಥೆಯು 'ಜಾಗತಿಕ ಆಹಾರ ವ್ಯವಸ್ಥೆ ಶೃಂಗ ಸಭೆ'ಯನ್ನು ಸೆಪ್ಟಂಬರ್ ನಲ್ಲಿ ಆಯೋಜಿಸಿದೆ. ಈ ಶೃಂಗ ಸಭೆ ಸುಸ್ಥಿರವಾದ, ಹಿತಾಸಕ್ತಿರಹಿತವಾದ 2ನೇ ಜಾಗತೀಕರಣಕ್ಕೆ ಮುನ್ನುಡಿಯಾಗಲಿ ಎಂದು ಆಶಿಸೋಣ.

10 comments:

 1. Good information, sir and helpful

  ReplyDelete
 2. ಭವಿಷ್ಯದ ಆಹಾರದ ಉತ್ಪಾದನೆಯಲ್ಲಿ ಯಾರ ಪಾತ್ರವೂ ಮುಖ್ಯ ಎಂಬುದನ್ನು.. ಹಾಗೂ ರೈತರ ಸದ್ಯದ ಪರಿಸ್ಥಿತಿಯಲ್ಲಿ ಯಾವ ರೀತಿಯಲ್ಲೂ ಸರಿ ಇರುವುದಿಲ್ಲ... ಆದರೂ ರೈತರು ಅನಿವಾರ್ಯವಾಗಿ ಕೃಷಿಯನ್ನು ಎದುರಿಸುವಂತಹ ಸ್ಥಿತಿ ಸಾಮಾಜಿಕವಾಗಿ
  ಕನಿಷ್ಠ ವೃತ್ತಿ ಎಂಬಂತೆ ಬಿಂಬಿತವಾಗುತ್ತಿದೆ ಹಾಗಾದರೆ ಕೃಷಿ ಮಾಡುವವರು ಯಾರು..??? ಉತ್ತಮ ಸಾಂದರ್ಭಿಕ ಲೇಖನ 👏

  ReplyDelete
 3. ಕೃಷಿತೋ ನಾಸ್ತಿ ದುರ್ಭಿಕ್ಷಮ್ ಎಂದು ನಮ್ಮ ಹಿರಿಯರು ಹೇಳಿರುವುದು ಸತ್ಯವಾಗುವ ತನಕ ಈ ತೊಳಲಾಟ ಅಂತ್ಯವಾಗುವುದಿಲ್ಲ. ಸ್ವಾರ್ತಕ್ಕಾಗಿ ಏನೆಲ್ಲಾ ಮಾಡುವ ಮಂದಿ ಇರುವವರೆಗೂ ಈ ಸಮಸ್ಯೆಗೆ ಪರಿಹಾರವಿಲ್ಲ. ಸರ್ಕಾರ & ದೂರದೃಷ್ಟಿ ಇರುವ ನಾಯಕರು ಬರುವವರೆಗೂ ಈ ತಾಕಲಾಟ ಇದ್ದೆ ಇರುತ್ತೆ.
  ದೂರದರ್ಶಿತ್ವ ಇರುವ ಲೇಖನ, ರೈತರ ಪರ ಕಾಳಜಿ ವಹಿಸೋಣ ಎಂದು ವಿನಂತಿಸುತ್ತ ಧನ್ಯವಾದಗಳನ್ನು ತಿಳಿಸುತ್ತೇನೆ.

  ReplyDelete