ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ

ಇದು ‘ಸವಿಜ್ಞಾನ’ ಇ-ಪತ್ರಿಕೆಯ ಎರಡನೆಯ ವರ್ಷದ ಮೊದಲ ಸಂಚಿಕೆ. ಕಳೆದ ಒಂದು ವರ್ಷದ ಅವಧಿಯಲ್ಲಿ ನಮ್ಮ ಓದುಗರ ಸಂಖ್ಯೆ ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಾ ಬಂದಿರುವುದು ಮತ್ತು ನಮ್ಮ ಲೇಖಕರ ಬಳಗವೂ ವಿಸ್ತಾರವಾಗುತ್ತಿರುವುದು ಹರ್ಷತಂದಿದೆ. ಎರಡನೆಯ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಈ ಒಂದು ಬೆಳವಣಿಗೆಗೆ ಕಾರಣರಾದ ನಮ್ಮ ಎಲ್ಲ ಓದುಗ ವಿಜ್ಞಾನ ಶಿಕ್ಷಕರಿಗೆ ಮತ್ತು ವಿಜ್ಞಾನಾಸಕ್ತರಿಗೆ ಹಾಗೂ ಲೇಖಕ  ಬಂಧುಗಳಿಗೆ ನನ್ನ ಅನಂತ ವಂದನೆಗಳು. ಜೊತೆಗೆ, ಹೊಸ ಆಂಗ್ಲ ವರ್ಷದ ಶುಭಾಶಯಗಳು.

ಜನವರಿ, 2022ರ ಈ ತಿಂಗಳ ಸಂಚಿಕೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ಎಸ್. ಐಯ್ಯಪ್ಪನ್ ಅವರ ಶುಭ ಹಾರೈಕೆಯೊಂದಿಗೆ ಹೊರ ಬಂದಿದೆ. ಎಂದಿನಂತೆ, ಹಲವು ಉಪಯುಕ್ತ ಹಾಗೂ ಮಾಹಿತಿಪೂರ್ಣ ಲೇಖನಗಳನ್ನು ನಿಮಗಾಗಿ ಹೊತ್ತು ತಂದಿದೆ. ನಮ್ಮ ಮೊದಲ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿದ ಜನಪ್ರಿಯ ವಿಜ್ಞಾನ ಲೇಖಕ ಸುಧೀಂದ್ರ ಹಾಲ್ದೊಡ್ಡೇರಿ ಅವರು ಬರೆದ ಒಂದು ಲೇಖನ, ಅವರ ನೆನಪಿನಲ್ಲಿ ಪ್ರಕಟವಾಗಿದೆ. ಸೆರೆಂಡಿಪಿಟಿಯ ಸರಣಿಯ ಮುಂದುವರೆದ ಭಾಗವಾಗಿ, ಜೋಸೆಫ್ ಲಿಸ್ಟರ್ ಅವರ ಸಂಶೋಧನೆಯ ಹಿಂದಿನ ರೋಮಾಂಚಕ ಕತೆಯನ್ನು ನಿರೂಪಿಸುವ ಡಾ, ಎಂ.ಜೆ ಸುಂದರರಾಮ್ ಅವರ ಲೇಖನವಿದೆ. ಹುಲಿಗಳ ಜೀವನ ಕ್ರಮದ ಬಗ್ಗೆ ಬೆಳಕು ಚೆಲ್ಲುವ ಲೇಖನವೊಂದನ್ನು ಪ್ರಸ್ತುತ ಪಡಿಸಿದ್ದಾರೆ, ಶಿಕ್ಷಕ ಹಾಗೂ ವನ್ಯಜೀವಿ ತಜ್ಞರಾದ ಕೃಷ್ಣ ಚೈತನ್ಯ. ನಮ್ಮ ಲೇಖಕ ಬಳಗಕ್ಕೆ ಹೊಸದಾಗಿ ಸೇರಿರುವ ರಾಮಕೃಷ್ಣ ಎಸ್.ಕೆ. ಅವರು ಕಾಲನಿರ್ಣಯದ ಬಗ್ಗೆ ಬರೆದ ಲೇಖನ ಹಾಗೂ ಶ್ರೀ ಸುರೇಶ್ ಅವರು ಕುಟ್ರ ಹಕ್ಕಿಯ ಬಗ್ಗೆ ಬರೆದ ಲೇಖನಗಳಿವೆ. ಶಿಕ್ಷಕ ಸಿದ್ದು ಬಿರಾದಾರ್ ಅವರು ಈ ಬಾರಿ ಕೈಗವಸು ಬೊಂಬೆಗಳನ್ನು ತಯಾರಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಿಮ್ಮ ಮೆಚ್ಚುಗೆಗೆ ಕಾರಣವಾಗಿರುವ ವಿಜ್ಞಾನದ ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳ ಜೊತೆಗೆ, ಈ ಬಾರಿ ವಿಜ್ಞಾನ ಪದಬಂಧವೊಂದನ್ನು ಪ್ರಾರಂಭಿಸಲಾಗಿದೆ. 

‘ಸವಿಜ್ಞಾನ’ವನ್ನು ಇನ್ನಷ್ಟು ಸವಿಯಾಗಿ ಉಣಬಡಿಸುವ ಸಂಕಲ್ಪ ನಮ್ಮದು. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವೇ ಸ್ಫೂರ್ತಿ. ಸಂಚಿಕೆಯ ಬಗ್ಗೆ ನಿಮ್ಮ ವಿದ್ಯಾರ್ಥಿಗಳಿಗೂ, ಸಹೋದ್ಯೋಗಿಗಳಿಗೂ, ಬಂಧು, ಮಿತ್ರರಿಗೂ ತಿಳಿಸಿ. ಅವರೂ ಓದುವಂತೆ ಪ್ರೇರೇಪಿಸಿ. 

ಡಾ. ಟಿ. ಎ. ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು

ಮೊದಲ ವಾರ್ಷಿಕ ಸಂಚಿಕೆಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಅಧ್ಯಕ್ಷರ ಶುಭ ಹಾರೈಕೆ

ಮೊದಲ ವಾರ್ಷಿಕ ಸಂಚಿಕೆಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಅಧ್ಯಕ್ಷರ ಶುಭ ಹಾರೈಕೆ 




ಗುರುತ್ವ ಬಲ ಇಲ್ಲದೆಡೆಯಲ್ಲಿಯೂ ಬಲೆ ಹೆಣೆಯಬಲ್ಲ ಜೇಡಗಳು

ಗುರುತ್ವ ಬಲ ಇಲ್ಲದೆಡೆಯಲ್ಲಿಯೂ ಬಲೆ ಹೆಣೆಯಬಲ್ಲ ಜೇಡಗಳು

ಹಾಲ್ದೊಡ್ಡೇರಿ ಸುಧೀಂದ್ರ

ವಿಜ್ಞಾನಿ ಹಾಗೂ ಕನ್ನಡ ವಿಜ್ಞಾನ ಬರಹಗಾರರು


೨೦೨೧ ರ ಜನವರಿ ೪ ರಂದು ‘ಸವಿಜ್ಞಾನ’ ಇ-ಪತ್ರಿಕೆಯ ಮೊದಲ ಸಂಚಿಕೆಯನ್ನು ಲೋಕಾರ್ಪಣೆ ಮಾಡಿದವರು ಖ್ಯಾತ ವಿಜ್ಞಾನಿ ಹಾಗು ಕನ್ನಡ ವಿಜ್ಞಾನ ಬರಹಗಾರ, ಸುಧೀಂದ್ರ ಹಾಲ್ದೊಡ್ಡೇರಿ. ಅಂದು ಪತ್ರಿಕೆಯ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ ಅವರು ತಾವೂ ಈ ಪತ್ರಿಕೆಗೆ ಲೇಖನಗಳನ್ನು ಬರೆಯುವುದಾಗಿ ಭರವಸೆ ನೀಡಿದ್ದರು. ದುರದೃಷ್ಟವಶಾತ್ ಅದನ್ನು ಈಡೇರಿಸುವ ಮುನ್ನವೇ ಅವರು ನಮ್ಮನ್ನಗಲಿದರು.  ಜೇಡಗಳ ಸಾಮರ್ಥ್ಯದ ಬಗ್ಗೆ ‘ನಾಸಾ’ ದಲ್ಲಿ ನಡೆದ ಪ್ರಯೋಗಗಳ ಬಗ್ಗೆ ಸುಧೀಂದ್ರ ಅವರು ಬರೆದ ಈ ಲೇಖನ ಈ ವಾರ್ಷಿಕ ಸಂಚಿಕೆಯಲ್ಲಿ ಅವರ ನೆನಪಿನಲ್ಲಿ ಪ್ರಕಟವಾಗಿದೆ. ಅವರ ಮರಣಾನಂತರ ಕಳೆದ ೨೦೨೧ರ ನವೆಂಬರ್‌ನಲ್ಲಿ ಪ್ರಕಟವಾದ ‘ನೆಟ್ ನೋಟ’ ಪುಸ್ತಕದಿಂದ ಈ ಲೇಖನವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅನುಮತಿ ನೀಡಿದ ಸುಧೀಂದ್ರ ಅವರ ಮಗಳು, ಜಯನಗರದ ಹುಡುಗಿ, ಮೇಘನಾ ಅವರಿಗೂ ಪ್ರಕಾಶಕರಾದ ಸಾವಣ್ಣ ಎಂಟರ್‌ ಪ್ರೈಸಸ್‌ ನ ಜಮೀಲ್ ಅವರಿಗೂ ‘ಸವಿಜ್ಞಾನ’ದ ಸಂಪಾದಕ ಮಂಡಳಿ ಆಭಾರಿಯಾಗಿದೆ. 

ಆಸ್ಪತ್ರೆ ನಂಜು

ಆಸ್ಪತ್ರೆ ನಂಜು

ಡಾ.ಎಂ.ಜೆ. ಸುಂದರರಾಮ್

ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು,

ವಿಜ್ಞಾನ ಸಂವಹನಕಾರರು

ವಿಜ್ಞಾನದ ಇತಿಹಾಸವನ್ನು ಸರಳ ಭಾಷೆಯಲ್ಲಿ ಕಥೆಯ ರೂಪದಲ್ಲಿ ಪ್ರಸ್ತುತ ಪಡಿಸುವುದರಲ್ಲಿ ನಿಷ್ಣಾತರಾದ ಡಾ.ಎಂ.ಜೆ.ಸುಂದರರಾಮ್ ಅವರ ಕಳೆದ ಸಂಚಿಕೆಯಲ್ಲಿ ಪ್ರಕಟವಾಗಿದ್ದ  ‘ವಿಜ್ಞಾನ ಸಂಶೋಧನೆಯಲ್ಲಿ ಆಕಸ್ಮಿಕಗಳು’ (ಸೆರೆಂಡಿಪಿಟಿ) ಎಂಬ ಲೇಖನದ ಮುಂದುವರೆದ ಲೇಖನ ಇದು. ಶಸ್ತ್ರ ಚಿಕಿತ್ಸೆಯಲ್ಲಿ ನಂಜು ನಿರೋಧಕಗಳ ಬಳಕೆಗೆ ಕಾರಣವಾದ ಜೋಸೆಫ್ ಲಿಸ್ಟರ್ ಅವರ ಸಂಶೋಧನೆಯ ರೋಚಕ ಕಥೆ ಇಲ್ಲಿದೆ.

ಯಾರು ಕ್ರೂರಿ? ಹುಲಿಗಳೋ? ಮಾನವರೋ?

ಯಾರು ಕ್ರೂರಿ? ಹುಲಿಗಳೋ? ಮಾನವರೋ?

ಡಿ. ಕೃಷ್ಣಚೈತನ್ಯ 
ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.
ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.
ಕೊಡಗು ಜಿಲ್ಲೆ.

ಈ ಹಿಂದಿನ ಸಂಚಿಕೆಗಳಲ್ಲಿ ಪಕ್ಷಿ ವೀಕ್ಷಣೆಯ ಬಗ್ಗೆ ಹಾಗೂ ಕೆಲವು ವಿಶಿಷ್ಟ ಹಕ್ಕಿಗಳ ಬಗ್ಗೆ ಮಾಹಿತಿ ನೀಡುವ ಲೇಖನಗಳನ್ನು ಬರೆದಿದ್ದ, ವಿಜ್ಞಾನ ಶಿಕ್ಷಕ ಡಿ.ಕೃಷ್ಣ ಚೈತನ್ಯ ಅವರು ಈ ಬಾರಿ ನಮ್ಮ ರಾಷ್ಟಿçÃಯ ಪ್ರಾಣಿಯಾದ ಹುಲಿಗಳ ಜೀವನ ಕ್ರಮದ ಬಗ್ಗೆ ಬೆಳಕು ಚೆಲ್ಲುವ ಲೇಖನ ಬರೆದಿದ್ದಾರೆ. ಈ ಲೇಖನ ಓದಿದ ಮೇಲೆ ಬಹುಷ: ನಾವೆಲ್ಲರೂ ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕಿದೆ-ಯಾರು ಕ್ರೂರಿ, ಹುಲಿಗಳೋ, ಮಾನವರೋ? ಎಂದು !

ಕುಟ್ರ ಹಕ್ಕಿ (ಬಾರ್ಬೆಟ್)

ಕುಟ್ರ ಹಕ್ಕಿ (ಬಾರ್ಬೆಟ್)

ಕೆ. ಸುರೇಶ

ಕಾಲೇಜು ರಸ್ತೆ, ಹೊಸಕೋಟೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ

 

ಕುಟ್ರ ಹಕ್ಕಿ ಎಂದೇ ಸಾಮಾನ್ಯವಾಗಿ ಕರೆಯಾಗುವ ಬಾರ್ಬೆಟ್ ಪಕ್ಷಿ ವೀಕ್ಷಕರಿಗೆ ಒಂದು ಚಿರ ಪರಿಚಿತ ಹಕ್ಕಿ. ಹವ್ಯಾಸಿ ಲೇಖಕರಾದ ಶ್ರೀ ಸುರೇಶ ಅವರು ಈ ಲೇಖನದಲ್ಲಿ ಕುಟ್ರ ಹಕ್ಕಿಯ ಜೀವನ ಕ್ರಮವನ್ನು ಸುಂದರವಾಗಿ ಚಿತ್ರಿಸಿಕೊಟ್ಟಿದ್ದಾರೆ. 

ಕಾಲಾಯ ತಸ್ಮೈ ನಮಃ

ಕಾಲಾಯ ತಸ್ಮೈ ನಮಃ 

ರಾಮಕೃಷ್ಣ ಎಸ್.ಕೆ.
ವಿಜ್ಞಾನ ಶಿಕ್ಷಕರು, ಸ.ಪ್ರೌ.ಶಾ. ಬದನಾಜೆ
ಉಜಿರೆ ಅಂಚೆ, ಬೆಳ್ತಂಗಡಿ ತಾಲೂಕು.
ದಕ್ಷಿಣ ಕನ್ನಡ. 574240.


ನಾವು ನಿತ್ಯದ ವ್ಯವಹಾರಗಳಲ್ಲಿ ಬಳಸುವ ಕಾಲದ ವಿವಿಧ ಘಟಕಗಳಾದ ತಿಥಿ, ನಕ್ಷತ್ರ, ಮಾಸ, ಮುಂತಾದ ಪರಿಮಾಣಗಳ ಹಿನ್ನೆಲೆ  ಹಾಗೂ ಅವುಗಳ ಹಿಂದಿರುವ ನಿರ್ದಿಷ್ಟ ಕಾರಣಗಳನ್ನು ತಿಳಿಸುವ ಮಾಹಿತಿಪೂರ್ಣ ಲೇಖನ ಇದು. ಜನ ಸಾಮಾನ್ಯರಿಗಷ್ಟೇ ಅಲ್ಲ, ಶಿಕ್ಷಕರಿಗೂ ಅಧ್ಯಾಪನ ದೃಷ್ಟಿಯಿಂದ ಉಪಯುಕ್ತ ಮಾಹಿತಿ ಈ ಲೇಖನದಲ್ಲಿದೆ. ಈ ಲೇಖನದ ಮೂಲಕ ಶಿಕ್ಷಕ ರಾಮಕೃಷ್ಣ ಅವರು ‘ಸವಿಜ್ಞಾನ’ದ ಲೇಖಕರ ಬಳಗಕ್ಕೆ ಸೇರುತ್ತಿದ್ದಾರೆ.

ಕೈಗೊಂಬೆಗಳು ಅಥವಾ ಕೈಗವಸು ಗೊಂಬೆಗಳು

ಕೈಗೊಂಬೆಗಳು ಅಥವಾ ಕೈಗವಸು ಗೊಂಬೆಗಳು

ಸಿದ್ದು ಬಿರಾದಾರ, ವಿಜ್ಞಾನ ಶಿಕ್ಷಕ

ಸರಕಾರಿ ಪ್ರೌಢ ಶಾಲೆ ಚಿಬ್ಬಲಗೇರಿ

ತಾ: ಹಳಿಯಾಳ, ಶಿರಿಸಿ ಶೈಕ್ಷಣಿಕ ಜಿಲ್ಲೆ

ಉತ್ತರ ಕನ್ನಡ 

ಕಳೆದ ಕೆಲವು ಸಂಚಿಕೆಗಳಿಂದ ವಿಜ್ಞಾನ ಪಾಠಗಳ ಬೋಧನೆಯಲ್ಲಿ ಗೊಂಬೆಗಳನ್ನು ಬಳಸುವುದಕ್ಕೆ ಸಂಬಂಧಿಸಿದಂತೆ ಹಾಗೂ ಗೊಂಬೆಗಳನ್ನು ತಯಾರಿಸುವ ವಿಧಾನದ ಬಗ್ಗೆ ಲೇಖನಗಳನ್ನು ಓದುತ್ತಿದ್ದೀರಿ. ಈ ಬಾರಿ ಸಿದ್ದು ಬಿರಾದಾರ್ ಅವರು ಕೈಗವಸು ಗೊಂಬೆಗಳನ್ನು ತಯಾರಿಸುವ  ವಿಧಾನದ ಬಗ್ಗೆ ವಿವರಿಸಿದ್ದಾರೆ.

ಸವಿಜ್ಞಾನ ಪದಬಂಧ - 1

ಸವಿಜ್ಞಾನ ಪದಬಂಧ  - 1

ಪದಗಳು ಹಿಂದಿನ “ಸವಿಜ್ಞಾನ” ಲೇಖನಗಳಿಂದ ಆಯ್ದವುಗಳು

ಎಡದಿಂದ ಬಲಕ್ಕೆ

1. ಪಿಸ್ಟಿಯಾ ಈ ಬಗೆಯ ಸಸ್ಯ.    (4)

2. ಆಲ್ಬರ್ಟ್‌ ಐನ್ ಸ್ಟೈನ್‌ ಪ್ರತಿಪಾದಿಸಿದ ಸಿದ್ಧಾಂತ.     (7)

3. ಕೂಡುಜೀವನಕ್ಕೆ ಹೆಸರಾದ ಇದು ಪರಿಸರ ಮಾಲಿನ್ಯ ಸೂಚಕ.     (4)

4. ಚುರುಕಾದ ವ್ಯಕ್ತಿಯನ್ನು ಈ ವಿಶಿಷ್ಟ ಲೋಹಕ್ಕೆ ಹೋಲಿಸುವರು.     (4)

5. ರಾಜಾನಿಲಗಳೊಂದಿಗೂ ವರ್ತಿಸುವ ಫ್ಲೋರಿನ್‌ ಗೆ ಈ ವಿಶೇಷಣ.     (5)

6. ರಾಮಾನುಜನ್‌ ಈ ಬಗೆಯ ಸಂಖ್ಯೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದಾರೆ.     (6)

ಮೇಲಿನಿಂದ ಕೆಳಕ್ಕೆ

1. ಕಾರ್ಮರೆಂಟ್‌ ಈ ಬಗೆಯ ಪಕ್ಷಿ.     (6)

2. ಪ್ರಭೇದದಿಂದ ಪ್ರಾರಂಭಿಸಿ ಕೆಳಗಿನಿಂದ ಮೇಲೆ ಹೋದರೆ ಸಿಗುವ ಮೊದಲ ಮಜಲು.     (3)

3. ಆಕಾಶ ನೋಡಿಕೊಂಡು ಸುಮ್ಮನಿರುವುದಲ್ಲ ಅದೊಂದು ಹವ್ಯಾಸ.     (6)

4. ಇದನ್ನು ವಿಂಗಡಿಸಿ ಸಾವಯವ ಗೊಬ್ಬರ ಮಾಡುವ ಮೂಲಕ ಪರಿಸರ ಸಂರಕ್ಷಣೆ.     (4)

5. ದಿಕ್ಕು ಮತ್ತು ಪರಿಮಾಣ ಎರಡೂ ಇರುವ ಭೌತಿಕ ಪರಿಮಾಣ.     (3)

6. ಬಂಗಾರದಂತಹ ಭಾಗಾಕಾರ ರೀತಿಯ ಹೋಲಿಕೆ ಕೆಳಗಿನಿಂದ ಮೇಲೆ ಅಲ್ಲದೆ ಎಲ್ಲೆಲ್ಲೂ ಇರುವುದೊಂದು ಅದ್ಭುತ ವಿದ್ಯಮಾನ.     (7)

7. ಕೆಳಗಿನಿಂದ ಮೇಲೆ ಆಕಾಶಕ್ಕೇರಿದ ವಸ್ತುಗಳು ಅಲ್ಲೇ ತ್ಯಕ್ತವಾದರೆ ಅದು.     (4)

ಉತ್ತರಗಳು: 

 

 

 

 

 

1ಜ

 

 

 

 

 

 

 

 

 

ಜ್ಯ

 

 

1ಜ

ಸ್ಯ

 

 

4ಹ

 

 

 

 

ಮ್ರಾ

 

3ನ

 

ವಾ

 

 

 

 

ಸಿ

 

 

 

 

2ಸಾ

ಪೇ

ಕ್ಷ

ತಾ

ಸಿ

ದ್ಧಾಂ

 

 

3ಕ

ಲ್ಲು

ಹೂ

ವು

 

 

 

ತ್ರ

 

 

4ಪಾ

 

 

 

 

 

 

ವೀ

 

ಕ್ಕಿ

 

ನು

 

 

 

 

 

 

5ಸ

ರ್ವ

ಕ್ಷ

 

 

6ಅ

ವಿ

ಭಾ

ಜ್ಯ

ಸಂ

ಖ್ಯೆ

 

ದಿ

 

 

ಣೆ

 

 

 

ರ್ಣ

 

 

ತ್ಯಾ

 

 

 

 

 

 

 

 

 

 

 

 

 

 

 

 

 

 

 

 

 

7ಸು

 

 

7ವ್ಯೋ

 

 

 

 

 

 

 

 

1ಜ

 

 

 

 

 

 

 

 

 

ಜ್ಯ

 

 

1ಜ

ಸ್ಯ

 

 

4ಹ

 

 

 

 

ಮ್ರಾ

 

3ನ

 

ವಾ

 

 

 

 

ಸಿ

 

 

 

 

2ಸಾ

ಪೇ

ಕ್ಷ

ತಾ

ಸಿ

ದ್ಧಾಂ

 

 

3ಕ

ಲ್ಲು

ಹೂ

ವು

 

 

 

ತ್ರ

 

 

4ಪಾ

 

 

 

 

 

 

ವೀ

 

ಕ್ಕಿ

 

ನು

 

 

 

 

 

 

5ಸ

ರ್ವ

ಕ್ಷ

 

 

6ಅ

ವಿ

ಭಾ

ಜ್ಯ

ಸಂ

ಖ್ಯೆ

 

ದಿ

 

 

ಣೆ

 

 

 

ರ್ಣ

 

 

ತ್ಯಾ

 

 

 

 

 

 

 

 

 

 

 

 

 

 

 

 

 

 

 

 

 

7ಸು

 

 

7ವ್ಯೋ

 

 

 

ರಚನೆ:

ವಿಜಯಕುಮಾರ್.‌ ಹೆಚ್.ಜಿ

ಸಹ ಶಿಕ್ಷಕ

ಸರ್ಕಾರಿ ಪ್ರೌಢಶಾಲೆ

ಕಾವಲ್‌ ಭೈರಸಂದ್ರ,

ಬೆಂಗಳೂರು ಉತ್ತರ ವಲಯ 03.