ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, January 4, 2022

ಒಗಟುಗಳು

 ಜನವರಿ 2022ರ ಒಗಟುಗಳು 

1. ಎಂಟು ನಿಮಿಷದಿ ಭಾನಿಂದ ತಿರೆಗಿಳಿದಿರುವೆ

ನಾನಿಲ್ಲದೆ ನಿಮಗೇನು ಕಂಡೀತು ? ನೀವೇನು ಉಣ್ಣುವಿರಿ ?

ಆದರೆ ಯಕಶ್ಚಿತ್ ನೀರ ಹನಿಗಳು ನನ್ನ ಸೀಳಿ ಬಿಟ್ಟವಲ್ಲ!!!!

ಗುರುತು ಹತ್ತಿತೇ?

ತಿಳಿದವರು ಬಿಡಿಸಿರೀ ಒಗಟ

 

2. ಹಸಿರಿಲ್ಲದೆ ನಾನಿರಲಾರೆ

ಜೀವಮಂಡಲದಿ ನನ್ನ ನಡುವಿನ ಸಿಕ್ಕುಗಳ ಸಂಕೀರ್ಣಜಾಲ

ಪ್ರತಿ ಸ್ತರದಲಿ ಮುಂದೆ ಚಲಿಸಿದಂತೆ ಶಕ್ತಿಯ ಹ್ರಾಸ

ಆದರೆ ವಿಷವೇರುವುದು ಕ್ರಮೇಣ

ಈ ಅರಿವು ಇಲ್ಲದಿದ್ದರೆ ವಸುಂಧರೆಯೊಡಲೇ ಬರಿದು

ಜಾಣ ಜಾಣೆಯರೇ ಗುರುತು ಹತ್ತಿತೇ ಈಗ?

 

3. ನನ್ನ ತಯಾರಿಕೆಗೆ ಗಾಜು ಬಿಟ್ಟು ಬೇರೆ ಉಪಕರಣಗಳು ಸಲ್ಲ

ಪ್ರಬಲ ಉತ್ಕರ್ಷಕ ಗುಣವಿದೆ 

ಹಲವು ಸ್ಫೋ ಟಕಗಳ ಹಿಂದಿರುವೆ ನಾ

ರಾಜ ದ್ರವದಲೂ ನನ್ನ ಪಾಲುಂಟು

ಸತುವಿನೊಂದಿಗೆ ವರ್ತಿಸಿ ನಗೆಗಡಲಲ್ಲಿ ಮುಳುಗಿಸುವೆ ನಿಮ್ಮ

ತಿಳಿದವರು ಹೇಳಿ ಎಳೆಎಳೆಯಾಗಿ ನನ್ನ ಕಥೆಯ

 

4. ಏಳು ಮಜಲುಗಳಂತೆ ನನ್ನಲೂ 7 ಮೆಟ್ಟಿಲುಗಳು

18 ಕಂಬಗಳ ಆಸರೆ ನನಗೆ

ನನ್ನ ಅರಿತಿರೋ ದಿವ್ಯ ರಸಾಯನ ಭೋಜ್ಯ

118 ಧಾತುಗಳಿಂದ ಆಗಿರುವೆ ನಾ

ಪರಮಾಣು ರಚನೆ ಅಡಗಿದೆ ನನ್ನಲಿ

ಜಾಣ ಜಾಣೆಯರೇ ಈ ಒಗಟ ಬಿಡಿಸಿ ಗುರುತಿಸುವಿರೇ ನನ್ನ?‌ 


5. ಘರ್ಷಣೆಯ ತಡೆದು ಚಲನೆಯ ಸರಾಗಗೊಳಿಸುವೆ

ಹರಿಯುವುದು ನನ್ನ ಸಹಜ ಧರ್ಮ

ಅನಿಲ ದ್ರವಗಳಲಿ ನಾ ಸರ್ವೇ ಸಾಮಾನ್ಯ

ತರಲೆ ಮಾಡದೇ ಸುಳಿವ ಹಿಡಿದು ಹೇಳಿ ಓ ತರಳರೇ 


ಉತ್ತರಗಳು : ಮುಂದಿನ ಸಂಚಿಕೆಯಲ್ಲಿ

****
ರಚನೆ: ರಾಮಚಂದ್ರ ಭಟ್‌ ಬಿ.ಜಿ.
ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ, ಬ್ಯಾಟರಾಯನಪುರ,
ಮೈಸೂರು  ರಸ್ತೆ, ಬೆಂಗಳೂರು

2 comments:

  1. 1 ಬೆಳಕು 2 ಆಹಾರ 3 ಹೈಡೊಜನ್ 4 ಆಧುನಿಕ ಆವತ೯ಕ ಕೋಷ್ಟಕ 5 ಚಲನಶಕ್ತಿ

    ReplyDelete
    Replies
    1. ಧನ್ಯವಾದಗಳು.
      ನಿಮ್ಮ ಉತ್ತರಕ್ಕೆ ಕಾರಣವನ್ನು ವಿವರಿಸಲು ಪ್ರಯತ್ನಿಸಿ ಇದರಿಂದ ಉತ್ತಮ ವಿಶ್ಲೇಷಣೆ ಸಾಧ್ಯವಾಗುತ್ತದೆ ಇದು ಬೇರೆಯವರಿಗೂ ಅನುಕೂಲವಾದೀತು

      Delete