ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. ಆಗಾಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ

Tuesday, May 4, 2021

ಹಾಲು: ಪೋಷಕಾಂಶಗಳ ಸಾಗರ

 

ಹಾಲು: ಪೋಷಕಾಂಶಗಳ ಸಾಗರ

ಲಕ್ಷ್ಮೀ ಪ್ರಸಾದ್ ನಾಯಕ್ 

ಸರ್ಕಾರಿ ಪ್ರೌಢಶಾಲೆ (ಆರ್ ಎಂಎಸ್ ಎ ಕನ್ನಡ ),

ಕೆಂಗೇರಿ,  ಬೆಂಗಳೂರು .

ಹಾಲು.. 

ಪರಿಶುದ್ಧತೆಯ ಸಂಕೇತ

ಪ್ರಾಮಾಣಿಕತೆಯ ಸೂಚಕ

ನ್ಯಾಯಾನ್ಯಾಯ ನಿರ್ಣಯಿಸುವ ದ್ಯೋತಕವಾಗಿ ಬಹು ಹಿಂದಿನಿಂದಲೂ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಹಾಲಿನಂತಹ ಮನಸ್ಸು, ಎಲ್ಲಿ ಹಾಲು ಮುಟ್ಟಿ ಪ್ರಮಾಣ ಮಾಡು, ಹಂಸಕ್ಷೀರ ನ್ಯಾಯ ಮುಂತಾದ ಮಾತುಗಳಲ್ಲಿ ಹಾಲಿಗೆ ಆರೋಪಿಸಿರುವ ಮೇಲಿನ ಎಲ್ಲಾ ಗುಣಗಳನ್ನು ನಾವು ಗಮನಿಸಬಹುದು. ವೇದಗಳ ಕಾಲದಲ್ಲಿ ಪಶುಸಂಪತ್ತಿಗೆ ವಿಶೇಷ ಮನ್ನಣೆ ನೀಡಲಾಗಿತ್ತು. ವ್ಯಕ್ತಿಯೊಬ್ಬ ಹೊಂದಿರುವ ಗೋವುಗಳ ಸಂಖ್ಯೆಯ ಆಧಾರದ ಮೇಲೆ ಅವನ ಶ್ರೀಮಂತಿಕೆಯನ್ನು ಲೆಕ್ಕ ಹಾಕಲಾಗುತ್ತಿತ್ತು .

ಯಾಜ್ಞವಲ್ಕ್ಯ ಮಹಾಮುನಿಯ ದಿವ್ಯ ಚರಿತ್ರೆಯನ್ನು ಹೇಳುವ ದೇವುಡುರವರ “ಮಹಾದರ್ಶನ” ಕಾದಂಬರಿಯಲ್ಲಿ ನಮ್ಮ ಗಮನ ಸೆಳೆಯುವುದು ಅಲ್ಲಿ ಬರುವ ಗೋಸಂಪತ್ತು, ಧಾರೆಯಾಗಿ ಹರಿವ ಹಾಲು ತುಪ್ಪಗಳ ವಿಚಾರವೇಈ ವಿಚಾರ ಇಷ್ಟಕ್ಕೇ ಇರಲಿ. ಹಾಲು ಮತ್ತು ಹಾಲಿನ ಉತ್ಪನ್ನಗಳು ದೇಹದ ಪೋಷಣೆಯಲ್ಲಿ ಮಹತ್ತರ ಪಾತ್ರವಹಿಸುವುದು ನಮ್ಮ ಆಯುರ್ವೇದದಲ್ಲಿ ಸೂಚಿತವಾಗಿದೆ.ಪ್ರತಿ ದಿನವೂ ಊಟ ಪ್ರಾರಂಭಿಸುವಾಗ ತುಪ್ಪ ಮತ್ತು ಅನ್ನ ಕಲೆಸಿ ಸೇವಿಸಿ ಊಟ ಮುಂದುವರೆಸಿ. ರಾತ್ರಿ ಊಟದ ನಂತರ ಒಂದು ಲೋಟ ಹಾಲು ಕುಡಿದು ಮಲಗಿ ಎಂದು ಮನೆಯಲ್ಲಿ ಹಿರಿಯರು ಪ್ರೀತಿಪೂರ್ವಕವಾಗಿ ಒತ್ತಾಯ ಮಾಡುವುದು ಎಲ್ಲರ ಮನೆಯಲ್ಲೂ ವಾಡಿಕೆಯಾಗಿರುವ ಸಂಗತಿ.  ಹಾಗಾದರೆ ಈ ಹಾಲಿನಲ್ಲಿ ಏನಿದೆ ಬನ್ನಿ ಕೊಂಚ ವೈಜ್ಞಾನಿಕವಾಗಿ ಚಿಂತಿಸೋಣ. 

ನಿಮಗೆಲ್ಲಾ ತಿಳಿದಿರುವಂತೆ ಸ್ತನಿಗಳು ಕಶೇರುಕಗಳಲ್ಲೆಲ್ಲ ಅತ್ಯಂತ ವಿಕಸಿತ ಪ್ರಾಣಿಗಳು. ಇವು ತಮ್ಮ ಮರಿಗಳಿಗೆ ಹಾಲುಣಿಸಪೋಷಣೆ ನೀಡಲು ಸ್ತನ್ಯ ಗ್ರಂಥಿಗಳನ್ನು ಹೊಂದಿವೆಈ ಗುಂಪಿನ ಪ್ರಾಣಿಗಳು ಸೇವಿಸುವ ಮೊದಲ ಆಹಾರವೇ ಹಾಲು. ವೈದ್ಯರು ಹುಟ್ಟದ ಮಗುವಿಗೆ  ಎದೆಹಾಲನ್ನು ಸುಮಾರು 2 ವರ್ಷಗಳ ಕಾಲ ಕುಡಿಸಿ ಎಂದು ಸಲಹೆ ನೀಡುತ್ತಾರೆ. ಹಾಲಿನಲ್ಲಿ ಅಂತಹ ಏನು ವಿಶೇಷತೆ ಇದೆ ಎಂದು ನಾವೆಲ್ಲರೂ ತಿಳಿದುಕೊಳ್ಳೋಣವೇ.

ಹಾಲು ಸ್ತನ್ಯ ಗ್ರಂಥಿಗಳಿಂದ ಉತ್ಪತ್ತಿಯಾಗುವ ಪೋಷಕಾಂಶಗಳಿಂದ ಕೂಡಿದ ದ್ರವ ಆಹಾರವಾಗಿದೆ. ಶಿಶುಗಳಿಗೆ ಘನ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಕಾರಣ ಎದೆಹಾಲು ಮಾನವ ಶಿಶುಗಳು ಸೇರಿದಂತೆ ಎಲ್ಲಾ ಸ್ತನಿಗಳಲ್ಲಿ ಪೌಷ್ಠಿಕಾಂಶದ ಪ್ರಾಥಮಿಕ ಮೂಲವಾಗಿದೆ. ಆರಂಭಿಕ-ಹಾಲುಣಿಸುವ ಹಾಲನ್ನು ಕೊಲೊಸ್ಟ್ರಮ್ ಎಂದು ಕರೆಯಲಾಗುತ್ತದೆ, ಇದು ಪ್ರತಿಕಾಯಗಳನ್ನು ಒಳಗೊಂಡಿರುತ್ತದೆ, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಇದರಿಂದಾಗಿ ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಲು ಸುಮಾರು 87 ಪ್ರತಿಶತ ನೀರು ಮತ್ತು 13 ಪ್ರತಿಶತ ಘನವಸ್ತುಗಳನ್ನು ಹೊಂದಿರುತ್ತದೆ. ಹಾಲಿನ ಕೊಬ್ಬಿನ ಭಾಗವು ಕೊಬ್ಬಿನಲ್ಲಿ ಕರಗುವ ಜೀವಸತ್ವಗಳನ್ನು ಹೊಂದಿರುತ್ತದೆ ಅಲ್ಲದೆ, ಇದು ಕೇಸಿನ್ ಎಂಬ ಪ್ರೋಟೀನ್ ಮತ್ತು ಲ್ಯಾಕ್ಟೋಸ್ ಎಂಬ ಶರ್ಕರ ಸೇರಿದಂತೆ ಅನೇಕ ಇತರ ಪೋಷಕಾಂಶಗಳನ್ನು ಹೊಂದಿದೆ. ಅವುಗಳೆಂದರೆ ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್. ಹಾಲಿನಲ್ಲಿ ಕಂಡುಬರುವ ಕ್ಯಾಲ್ಸಿಯಂ ದೇಹದಲ್ಲಿ ಸುಲಭವಾಗಿ ಹೀರಲ್ಪಡುತ್ತದೆ. ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಮತ್ತು ಬಳಕೆಯಲ್ಲಿ ರಂಜಕವು ಒಂದು ಪಾತ್ರವನ್ನು ವಹಿಸುತ್ತದೆ. ಮೂಳೆ ರೂಪಿಸಲು ಕ್ಯಾಲ್ಸಿಯಂಗೆ ಸರಿಯಾದ ಅನುಪಾತದಲ್ಲಿ ರಂಜಕ ಅಗತ್ಯವಿದೆ. ಹಾಲು ಈ ಎರಡು ಖನಿಜಗಳನ್ನು ಮೂಳೆಯಲ್ಲಿ ಕಂಡುಬರುವ ಸರಿಸುಮಾರು ಒಂದೇ ಅನುಪಾತದಲ್ಲಿ ಒದಗಿಸುತ್ತದೆ. ಹಾಲು ಸಹ ರೈಬೋಫ್ಲಾವಿನ್ (ವಿಟಮಿನ್ ಬಿ 2) , ವಿಟಮಿನ್ ಎ ಮತ್ತು ಡಿ ನ ಗಮನಾರ್ಹ ಮೂಲವಾಗಿದೆ, ಇದು ಆರೋಗ್ಯಕರ ಚರ್ಮ ಮತ್ತು ಕಣ್ಣುಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಹಾಲೆಂದರೆ ಹೆಚ್ಚಿನವರಿಗೆ ತಿಳಿದಿರುವುದು ಹಸುವಿನ ಹಾಲುಹಸುವಿನ ಹಾಲು ವಿಶ್ವದ ಹೆಚ್ಚಿನ ಜನರು ಸೇವಿಸಲ್ಪಡುವ ಹಾಲು. ಆದರೆ ವಿಶ್ವದ ಕೆಲವೊಂದು ಕಡೆಗಳಲ್ಲಿ ಅಲ್ಲಿ ಹವಾಮಾನವನ್ನು ಅನುಸರಿಸಿಕೊಂಡು ಆಡುಕುರಿಒಂಟೆ ಮತ್ತು ಎಮ್ಮೆಯ ಹಾಲನ್ನು ಸೇವನೆ ಮಾಡುವರು

ಕೋಷ್ಠಕ 1.ವಿವಿಧ ಸ್ತನಿ ಪ್ರಭೇದಗಳ ಹಾಲಿನಲ್ಲಿರುವ ಪೋಷಕಾಂಶಗಳು

ಪ್ರಭೇಧಗಳು

ನೀರು

ಕೊಬ್ಬು

ಪ್ರೋಟೀನ್

ಲ್ಯಾಕ್ಟೋಸ್

ಲವಣಗಳು

ಶೇಕಡಾವಾರು ಪ್ರಮಾಣ

ಮಾನವರು

87.7

3.6

1.8

6.8

0.1

ಹಸು

86.6

4.6

3.4

4.9

0.7

ಎಮ್ಮೆ

84.2

6.6

3.9

5.2

0.8

ಮೇಕೆ

86.5

4.5

3.5

4.7

0.8

ಕುರಿ

79.4

8.6

6.7

4.3

1.0

ಹೆಚ್ಚಾಗಿ ವೈದ್ಯರು ಮಕ್ಕಳಿಗೆ ದಿನಕ್ಕೊಂದು ಲೋಟ ಹಸುವಿನ ಹಾಲು ನೀಡಿ ಎಂದು ಸೂಚಿಸುತ್ತಾರೆಹಸುವಿನ ಹಾಲಿನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶ ಹಾಗೂ ವಿಟಮಿನ್ ಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದುಇದು ದೇಹವನ್ನು ಕೆಲವೊಂದು ಕಾಯಿಲೆಗಳು ಬರದಂತೆ ಕಾಪಾಡುವುದುಹಸುವಿನ ಹಾಲನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳ ಬಗ್ಗೆ  ಲೇಖನದಲ್ಲಿ ತಿಳಿದುಕೊಳ್ಳುವ.

ಮೂಳೆಗಳನ್ನು ಮತ್ತು ಹಲ್ಲುಗಳನ್ನು ಬಲಗೊಳಿಸುವುದು: ಹಾಲಿನಲ್ಲಿ ಕ್ಯಾಲ್ಸಿಯಂ, ಪೋಸ್ಪರಸ್ ಮತ್ತು ಇತರ ಕೆಲವೊಂದು ಪ್ರಮುಖ ಪೋಷಕಾಂಶಗಳು ಇವೆ. ಹಾಲು ಸೇವಿಸಿದರೆ ಮೂಳೆ ಮತ್ತು ಹಲ್ಲುಗಳು ಆರೋಗ್ಯಕರ ಮತ್ತು ಬಲಿಷ್ಠವಾಗಿರುವುದು.

ಪ್ರೋಟೀನ್ ನಿಧಿ: ಹಾಲಿನಲ್ಲಿ ಸಾಕಷ್ಟು ಪ್ರೋಟೀನ್ ಲಭ್ಯವಿದೆ. ಆಧಾರದ ಮೇಲೆ ಪ್ರತಿದಿನ ಹಾಲನ್ನು ಕುಡಿಯಲು ಸೂಚಿಸಲಾಗುತ್ತದೆ. ಒಂದು ಲೋಟ ಬೆಚ್ಚಗಿನ ಹಾಲಿನೊಂದಿಗೆ ದಿನವನ್ನು ಪ್ರಾರಂಭಿಸಿ ದಿನವಿಡೀ ದೇಹವನ್ನು ಶಕ್ತಿಯುತವಾಗಿರಿಸುತ್ತದೆ. ಇದರೊಂದಿಗೆ ಸ್ನಾಯುಗಳ ಬೆಳವಣಿಗೆಗೆ ಸಹ ಇದು ಬಹಳ ಮುಖ್ಯವಾಗಿದೆ.

ಹೃದಯಕ್ಕೆ ತುಂಬಾ ಒಳ್ಳೆಯದು: ಹಾಲಿನಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ಹೃದಯವನ್ನು ದೀರ್ಘಕಾಲ ತನಕ ಆರೋಗ್ಯವಾಗಿಡುವುದು.

ಮಲಬದ್ಧತೆ ಸಮಸ್ಯೆ ನಿವಾರಣೆಗೆ ಪ್ರಯೋಜನಕಾರಿಆಹಾರವನ್ನು ಪಚನಗೊಳಿಸಲು ಮತ್ತು ಸುಲಭವಿಸರ್ಜನೆಗೆ ಹಾಲು ಸಹಕಾರಿಯಾಗಿದೆಮಲಬದ್ಧತೆಯ ತೊಂದರೆ ಇರುವವರು ಹಾಲನ್ನು ತಮ್ಮ ದಿನದ ಕಟ್ಟಕಡೆಯ ಆಹಾರವಾಗಿ ಸೇವಿಸುವುದರಿಂದ ಬೆಳಗಿನ ವಿಧಿಗಳು ಸುಲಭವಾಗಿ ನೆರವೇರುತ್ತವೆ.

ದೇಹದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸುತ್ತದೆವ್ಯಾಯಾಮ ಹಾಗೂ ಸೆಖೆಯಿಂದಾಗಿ ದೇಹ ಕಳೆದುಕೊಳ್ಳುವ ನೀರನ್ನು ಮರುತುಂಬಿಸಲು ಹಾಲು ಉತ್ತಮ ದ್ರವವಾಗಿದೆನೀರು ಕುಡಿಯುವುದರಿಂದಲೂ  ಕೊರತೆಯನ್ನು ತುಂಬಬಹುದು ಆದರೆ ಕಳೆದುಕೊಂಡ ಶಕ್ತಿಯನ್ನು ನೀರು ನೀಡುವುದಿಲ್ಲಆದರೆ ಹಾಲು ಕುಡಿಯುವುದರಿಂದ ಕಳೆದುಕೊಂಡಿದ್ದ ಶಕ್ತಿ ಮತ್ತು ತ್ರಾಣ ಮತ್ತೆ ಹಿಂದಿರುಗುತ್ತದೆ.

ತೂಕ ಕಳೆದುಕೊಳ್ಳಲು ಸಹಕಾರಿ: ಇದು ನಿಜಹಸುವಿನ ಹಾಲನ್ನು ಬೆಳಗ್ಗೆ ಸೇವನೆ ಮಾಡುವವರು ದಿನದ ಇತರ ಸಮಯದಲ್ಲಿ ಕ್ಯಾಲರಿ ಕಡಿಮೆ ತೆಗೆದುಕೊಳ್ಳುವರುಇದರಲ್ಲಿ ಇರುವಂತಹ ಉನ್ನತ ಮಟ್ಟದ ಪ್ರೋಟೀನ್ ದೀರ್ಘಕಾ ತನಕ ಹೊಟ್ಟೆ ತುಂಬಿರುವಂತೆ ಮಾಡುವುದು.

ಮಧುಮೇಹ ತಡೆಯುವುದು: ನಿಯಮಿತವಾಗಿ ಹಸುವಿನ ಹಾಲು ಸೇವನೆ ಮಾಡುವುದರಿಂದ ಮಧುಮೇಹದಿಂದ ರಕ್ಷಣೆ ನೀಡುವುದುಹಸುವಿನ ಹಾಲಿನಲ್ಲಿ ಹಲವಾರು ರೀತಿಯ ಪೋಷಕಾಂಶ ಹಾಗೂ ಖನಿಜಾಂಶಗಳು ಇವೆಇದು ಜೀರ್ಣಕ್ರಿಯೆ ಸುಧಾರಿಸಿ ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿಡುವುದು.

ಒತ್ತಡವನ್ನು ನಿವಾರಿಸಲುದಿನವಿಡೀ ಕೆಲಸ ಮಾಡಿದ ಬಳಿಕ ತುಂಬಾ ಆಯಾಸವಾಗಿದ್ದರೆ ರಾತ್ರಿ ವೇಳೆ ಹಾಲು ಕುಡಿಯಿರಿಇದರಲ್ಲಿ ಟ್ರಿಪ್ಟೊಫಾನ್ ಎನ್ನುವ ಅಮಿನೋ ಆಮ್ಲವಿದೆಇದು ಮೆದುಳು ನಿದ್ರೆ, ಭಾವನೆ ಮತ್ತು ಹಸಿವು ಹೆಚ್ಚಿಸುವ ಹಾರ್ಮೋನಾದ ಸೆರೊಟೊನಿನ್ ಬಿಡುಗಡೆ ಮಾಡಲು ನೆರವಾಗುತ್ತದೆ ಮತ್ತು ಆರಾಮವನ್ನು ಒದಗಿಸುತ್ತದೆ.

ನಿದ್ರೆಯ ಸಮಸ್ಯೆರಾತ್ರಿಯಲ್ಲಿ ಹಾಲು ಕುಡಿಯುವುದರಿಂದ ಇದು ದೊಡ್ಡ ಲಾಭ ನೀಡುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆಕೆಲವು ಅಧ್ಯಯನಗಳ ಪ್ರಕಾರರಾತ್ರಿ ಮಲಗುವ ಮೊದಲು ತಿಳಿ ಬೆಚ್ಚಗಿನ ಹಾಲು ಕುಡಿಯುವುದು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.

ಒಟ್ಟಿನಲ್ಲಿ ಹಾಲು ಪೋಷಕಾಂಶಗಳ ಸಾಗರ, ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಹಾಲಿನ ಪಾತ್ರ ಮಹತ್ವದ್ದಾಗಿದೆ. ಮಕ್ಕಳಿಗಂತೂ ಹಾಲು ಅತ್ಯಂತ ಅಗತ್ಯವಾದ ಆಹಾರವಾಗಿದೆ. ವಿಶೇಷವಾಗಿ ಮೂಳೆಗಳ ಬೆಳವಣಿಗೆ ಮತ್ತು ದೃಢತೆಗಾಗಿ ಹಾಲು ಅಗತ್ಯವಾಗಿದೆ. ಆದರೆ ಹಸಿ ಹಾಲನ್ನು ಕುಡಿಯುವುದರಿಂದ ಕೆಲವು ಬ್ಯಾಕ್ಟೀರಿಯಗಳೂ ಇದರ ಜೊತೆ ನಮ್ಮ ದೇಹಕ್ಕೆ ಸೇರಬಹುದುಹಾಗಾಗಿ ಬಿಸಿಬಿಸಿಯಾದ ಹಾಲನ್ನು ಕುಡಿಯುವುದು ಉತ್ತಮಈ ಎಲ್ಲಾ ಕಾರಣಗಳಿಂದ ಹಾಲನ್ನು ಒಂದು ಪರಿಪೂರ್ಣ ಮತ್ತು ಸಮತೋಲಿತ ಆಹಾರವೆಂದು ಕರೆದರೆ ತಪ್ಪಾಗಲಾರದು. ಬೆಳೆಯುವ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಪ್ರತಿಯೊಬ್ಬರಿಗೂ ಬೇಕಾಗುವ ಪೋಷಕಾಂಶಗಳು ಇದರಲ್ಲಿದೆ.

ಜೂನ್‌ 1,  ದಿನವನ್ನು ವಿಶ್ವ ಹಾಲಿನ ದಿನವನ್ನಾಗಿ ಆಚರಿಸಲಾಗುವುದು. ದಿನಕ್ಕೆ 150-200 ಮಿ.ಲೀ. ಹಾಲು ಕುಡಿದರೆ ತುಂಬಾ ಒಳ್ಳೆಯದು ಯಾವ ಸಮಯವಾಗಿದ್ದರೂ ಸರಿ. ನಿಮಗೆ ಹಾಲು ಕುಡಿಯಬೇಕು ಎಂದು ಅನಿಸಿದರೆ ಬಿಸಿ ಹಾಲು ಕುಡಿಯಿರಿ. ಬಿಸಿ ಹಾಲು ಜೀರ್ಣಕ್ರಿಯೆಗೆ ಸಹಕಾರಿ. ಅತಿಯಾಗಿ ಹಾಲು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ದಿನಕ್ಕೆ 150-200   ಮಿ.ಲೀ.   ಹಾಲು ಕುಡಿದರೆ ತುಂಬಾ ಒಳ್ಳೆಯದು. ಒಂದು ಸಂಶೋಧನೆಯ ಪ್ರಕಾರ ಪ್ರತಿದಿನ ಒಂದು ಲೋಟ ಬಿಸಿಹಾಲನ್ನು ಕುಡಿಯುವುದರಿಂದ ಆರೋಗ್ಯ ವೃದ್ಧಿಗೊಂಡಿರುವುದು ಸಾಬೀತಾಗಿದೆ. ಆದರೆ ಕೆಲವರಿಗೆ ಹಾಲಿನಲ್ಲಿರುವ ಲ್ಯಾಕ್ಟೋಸ್ ಎಂಬ ಸಕ್ಕರೆ ಅಲರ್ಜಿಯಾಗಿರುತ್ತದೆ. ಇವರು ತಮ್ಮ ವೈದ್ಯರ ಸಲಹೆಯ ಮೇರೆಗೆ ಹಾಲಿನ ಬದಲು ಇತರ ಪೇಯಗಳನ್ನು ಕುಡಿಯುವುದು ಉತ್ತಮ. 

ಈ ಲೇಖನದ ಪಿ.ಡಿ.ಎಫ಼್. ಫೈಲ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಲು 

ಇಲ್ಲಿ ಕ್ಲಿಕ್ ಮಾಡಿ 👉 ಹಾಲು - ಪೋಷಕಾಂಶಗಳ ಸಾಗರ4 comments:

 1. ಉತ್ತಮ ಮಾಹಿತಿ ಸರ್
  ಧನ್ಯವಾದಗಳು

  ReplyDelete
 2. Very useful and interesting article sir.

  ReplyDelete
 3. Very good information.. thank you lakshmiprasad

  ReplyDelete
 4. It is useful & essential food for all

  ReplyDelete