ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, February 4, 2022

ಒಗಟುಗಳು - ಫೆಬ್ರವರಿ 2022

 ಒಗಟುಗಳು -  ಫೆಬ್ರವರಿ  2022

ವಿಶ್ವಗಣಿತ ಲೋಕದ ವಿಸ್ಮಯ

ಜಿ ಹೆಚ್ ಹಾರ್ಡಿಯ ಸಾಹಚರ್ಯ

ನಾಮಗಿರಿಯ ಜಗನ್ಮಾತೆಯ ಆವಿಷ್ಕಾರ

ರಾಷ್ಟ್ರೀಯ ಗಣಿತದಿನಕ್ಕೆ ಕಾರಣನೀತ

ಯಾರೀ ಮಹಾಮಹಿಮ ಅಮೃತಪುತ್ರ ?

 

ನಾನೊಂದು ನಾಲ್ಕು ಅಂಕಿಗಳ ಸಂಖ್ಯೆ

ಈ ಅಂಕಿಗಳ ಮೊತ್ತ 2 ಅಂಕಿಗಳ ಸಂಖ್ಯೆ

ಈ ಎರಡು ಅಂಕಿಗಳ ತಿರುಗುಮುರುಗಾಗಿಸಿ ಗುಣಿಸಿ

ಮತ್ತೆ ನನ್ನದೇ ದರ್ಶನ!!!

ಗಣಿತ ದಿನಕ್ಕೂ ನನಗೂ ಇದೆ ಐತಿಹಾಸಿಕ ಅನುಬಂಧ

ಜಾಣ ಜಾಣೆಯರೇ  ಅಂಕಿ-ಸಂಖ್ಯೆಗಳ ಸಿಕ್ಕು ಬಿಡಿಸಿ 

ಕಂಡುಹಿಡಿಯಿರಿ ಈಗ ನನ್ನ!!!

 

ಕಲಿವ ಮಗುವನ್ನು ಕಾಡುವೆ ನಾ

ಕಲಿಕಾ ದೋಷವಿದು ಎಚ್ಚರ

ಕೆಲವು ಅಕ್ಷರ, ಸಂಖ್ಯೆಗಳ ತಿರುಗುಮುರುಗಾಗಿಸುವೆ ನಾ

ನ್ಯೂರಾಲಜಿಗೆ ಸಂಬಂಧಿಸಿದ ಸಮಸ್ಯೆನಾ

ಅಂತಃಚಕ್ಷುವ ತೆರೆದು ಮಗುವನ್ನು ಈ ಸುಳಿಯಿಂದ ಹೊರಗೆಳೆಯಿರಿ

ಕಲಿಕೆಯ ಸುಗಮಕಾರರಾಗಿ

ಮಗುವಿನ ಬಾಳ ಬೆಳಗಿ ಗುರುದೇವಾ

                                           

ಗಾಳಿ ತುಂಬಿದೆ ನನ್ನೊಡಲ ತುಂಬಾ ಆದರೆ ನಾ ಖಾಲಿ ಕೋಣೆಯಲ್ಲ

ದೇಹದ ತುಂಬೆಲ್ಲಾ ರಂಧ್ರಗಳು ಆದರೂ ನೀರ ಹಿಡಿದಿಡಬಲ್ಲೆ!!!

ಒತ್ತಡ ಹಾಕಿ ಸಂಪೀಡಿಸಬಲ್ಲಿರಿ ನೀವು ಆದರೆ ನಾ ಅನಿಲವಲ್ಲ

ಜಾಣ ಜಾಣರೇ ನೀವೀ ಒಗಟ ಬಿಡಿಸಿ ಹೇಳುವಿರೇ?

 

ಮಾಹಿತಿ ತಂತ್ರಜ್ಞಾನ ಯುಗದ ಬೆನ್ನೆಲುಬಿನಂತಿರುವ ಧಾತು ನಾ

MOSFET ನ ಮೂಲದ್ರವ್ಯ ನಾ 

ಡಯಾಟಮ್ ಗಳ ಅಂದದ ಭಿತ್ತಿಗಳಲ್ಲೂ ಇರುವೆ

ಆಧುನಿಕ ಜಗತ್ತಿನಲ್ಲಿ ಬರ್ಜೀಲಿಯಸ್ ನ ಶೋಧ ನಾ

ಅತಿ ಕಠಿಣ ಕೃತಕ ವಸ್ತುವಿನಲೂ, ಉಸುಕಿನಲೂ ನಾನಿರುವೆ

ಚತುರಮತಿಗಳೇ ವಿವರಿಸಿ ಗುರುತಿಸಬಲ್ಲಿರೆ ನನ್ನ?                                  

 

ಗಾಜಿನ ದೇಹದೊಳು ಆರ್ಗಾನೇ  ಉಸಿರು

ಲೋಹದ ಸುರುಳಿ ದಹಿಸಿದರೂ ಕರಗದೆ ಬೆಳಕು ಚೆಲ್ಲುವುದು

ಉಷ್ಣ ಶಕ್ತಿಯ ನಷ್ಟ ಹೆಚ್ಚಿದ್ದರೂ ಕೃತಜ್ಞರಾಗಿರಬೇಕು ಎಡಿಸನ್ ಗೆ

ಸುಳಿವ ಹಿಡಿದು ವಿವರಿಸಿ ಹೇಳೀ ಒಗಟ

                                   

ಕೀಲ್ಗಾಲುಗಳ ದೇಹದಲಿ

ಬೆಳಕು ಚೆಲ್ಲುವ ಲ್ಯುಸಿಫೆರಿನ್ ರಾಸಾಯನಿಕ

ಕಗ್ಗತ್ತಲ ಕಾರ್ಗಾಲದ ರಾತ್ರಿಯಲ್ಲಿ ವಿಸ್ಮಯದ ಬೆಳಕು ಚೆಲ್ಲುವ

ಈ ಜೀವಿಯ ವಂಶ ವರ್ಗಗಳ ಗುಟ್ಟು ರಟ್ಟು ‌ ಮಾಡುವಿರೇ?. 

Ramachandra Bhat B G
Assistant Master
GHS, Byatarayanapura
Bengaluru

2 comments: