ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, July 4, 2022

ಒಗಟುಗಳು : ಜುಲೈ 2022

 ಒಗಟುಗಳು 


೧. ನಾನೊಂದು ಜೀವ ಕೋಶ

 ಆದರೆ ನನ್ನೊಳಿಲ್ಲ ನ್ಯೂಕ್ಲಿಯಸ್ 

ನನಗೂ ಕಬ್ಬಿಣದ ಮೇಲೆ ವ್ಯಾಮೋಹ 

ನನ್ನೊಳಿಲ್ಲ ಶಕ್ತಿ ಉತ್ಪಾದನಾ ಕೇಂದ್ರ 

ಆಕ್ಸಿಜನ್ ಹೊತ್ತೊಯ್ಯುವೆ  ನಾ 

 ಆದರೆ ನಾ ಅದನು ಬಳಸಲಾರೆ 

 ನನ್ನ ಸುಳಿವು ಸಿಕ್ಕಿತೆ ?



೨.  ನನ್ನಲೂ ಏಳು ಬಣ್ಣಗಳಿವೆ ಆದರೆ ನಾನು ಕಾಮನಬಿಲ್ಲಲ್ಲ

 ಕಾಮನಬಿಲ್ಲಿನ ಏಳು ಬಣ್ಣಗಳು ವಿರುದ್ಧ ಜೋಡಣೆಯಲ್ಲಿವೆ 

ವಸ್ತುಗಳ ವಿಶಿಷ್ಟ ಗುಣ ಸ್ವಭಾವವನ್ನು ತಿಳಿಸಬಲ್ಲೆ 

ಅವುಗಳ ಪ್ರಬಲ  ದುರ್ಬಲತೆಯ ಹೋಲಿಸಿ ತಿಳಿಸಿ ಹೇಳಬಲ್ಲೆ 

14ರೊಳಗಿನ ಅಂಕಿಗಳಲೆ ನನ್ನ ಆಟ 

ಆಮ್ಲ ಪ್ರತ್ಯಾಮ್ಲಗಳ ನಡುವೆ ನೀರಿರಲು

 ಗುರುತಿಸಿ ಹೇಳಬಲ್ಲಿರೇ ನೀವು?


 ೩. ಇವು ಬೇರುಗಳೇ ಆದರೂ ಭೂಮಿಯ ಒಳಹೋಗಲಾರವು 

ಧನ ಪ್ರಕಾಶಾನುವರ್ತನೆ ತೋರುವವು 

ಆದರೆ ಕಾಂಡಗಳಲ್ಲದ ಕಾಂಡ್ಲಗಳಿವು!

 ಅಳಿವೆಯಲಿ ಅಳಿಯದಂತೆ ಉಸಿರೆಳೆಯಲು ಇವುಗಳಿರಬೇಕು!!

ಸುಳಿವ ಬಿಡಿಸಿದರೆ ಸಿಕ್ಕೀತು ನಿಸರ್ಗದೊಡಲ ಈ ರಹಸ್ಯ



****

ರಚನೆ: ರಾಮಚಂದ್ರ ಭಟ್‌ ಬಿ.ಜಿ.
ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ, ಬ್ಯಾಟರಾಯನಪುರ,
ಮೈಸೂರು  ರಸ್ತೆ, ಬೆಂಗಳೂರು 



ಜೂನ್‌ ೨೦೨೨ರ ಒಗಟುಗಳ ಉತ್ತರ 

 1.      ಐನ್ಸ್ಟೀನರೊಡಗೂಡಿ ದ್ರವ್ಯದ 5ನೇ ಸ್ಥಿತಿಯ ಜಗಕ್ಕರುಹಿದ

ಈತನ ಹೆಸರಲ್ಲೇ ಕಣ ಒಂದಿದೆ ದೇವಕಣದಲ್ಲೂ ಈತನ ಕರಾಮತ್ತಿದೆ

ಕ್ವಾಂಟಂ ಸಿದ್ಧಾಂತಕ್ಕೆ ಹೊಸಭಾಷ್ಯ ಬರೆದವನೀತ

 ಭಾರತೀಯ ಗಣಿತಜ್ಞಭೌತವಿಜ್ಞಾನಿ

ಓ ಸ್ನೇಹಿತರೇ ಗುರುತಿಸಿ ಹೆಸರಿಸಬಲ್ಲಿರೆ ಈ ನಮ್ಮ ಹೆಮ್ಮೆಯ?

 


ಉ : ಸತ್ಯೇಂದ್ರನಾಥ ಬೋಸ್‌ 









2.     ದ್ರವ್ಯ ಸಂಯೋಜನೆಯ ಕಲಿಯಬಹುದಿಲ್ಲಿ

 ದ್ರವ್ಯದ ಸ್ಥಿತಿಗಳ ಆಡುಂಬೊಲವಿಲ್ಲಿ

ಹೊಸ ವಸ್ತುವಿನ ಉತ್ಪತ್ತಿಯಲೂ ರಾಶಿ ಸಂರಕ್ಷಣೆಯ ತತ್ವವಿದೆ

ವಿಜ್ಞಾನದ ಮುಖ್ಯಶಾಖೆಯೇ  ಇದು

ಇದಕೆ ಅಸ್ಥಿಭಾರ ಹಾಕಿದಾತ ದುರ್ದೈವಿ

ಗಿಲೆಟಿನ್ ಗೆ ಬಲಿಯಾಗಿ ಫ್ರಾನ್ಸಿನ ಕ್ರಾಂತಿಯಲ್ಲಿ ಕರಗಿಹೋದ

ಹೇಳಿರಿ ಜಾಣ ಜಾಣೆಯರೇ ಈ ವಿಜ್ಞಾನದ ಶಾಖೆಯೊಂದಿಗೆ ವಿಜ್ಞಾನಿಯ ಹೆಸರ



ಉ : ಲೆವೋಸಿಯೇ  (
Antoine-Laurent Lavoisier)

 

3.     ಸ್ವೀಡನ್ನಿನ ಗುರುವಿಗೆ ಜರ್ಮನಿಯ ಶಿಷ್ಯ

 ಗುರುವಿನದೋ ಜೀವಬಲ ಸಿದ್ದಾಂತ

 ಶಿಷ್ಯನೋ ಗುರು ಸಿದ್ಧಾಂತ ಭಂಜಕ

 ಮೊದಲ ಸಾವಯವ ಸಂಯುಕ್ತದ ಜನಕನೀತ

ಗುರುತಿಸಿ ಹೇಳಬಲ್ಲಿರೇ ಈ ಗುರು-ಶಿಷ್ಯರ?


J J Berzelius




 







Friedrich Wöhler

4.    ಚಾಲ್ಕೋಪೈರೇಟ್ಗೆಲೆನಾ ಜಿಪ್ಸಂಗಳಲ್ಲಿದೆ ಈ ಅಲೋಹ

ಗ್ರೀಕರ ಅಗ್ನಿ ಅಸ್ತ್ರಗಳ  ರಹಸ್ಯವಿದು

ಫ್ರಾಶ್ಚ್ ನ ಉದ್ಧರಣ ವಿಧಾನವಿಹುದು

ಕುರ್ಚಿ ಕ್ರೌನ್ ಗಳು ಇದರ ಇಷ್ಟದಾಕಾರ

 ಇದಿಲ್ಲದೇ  ವಲ್ಕನೀಕರಣ ದೂರ 

 ಜಾಣ ಜಾಣೆಯರ ಸುಳಿವ ಹಿಡಿದು ಹೊರಗೆಡಹಬಲ್ಲಿರೇ

 ಈ ಶೋಡಶಿಯ ರಹಸ್ಯ


         ಗಂಧಕ 


1 comment: